ಚೆಲುವ ಕನ್ನಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚೆಲುವ ಕನ್ನಡ
ಲೇಖಕರುಪ್ರೊ. ಸಿ.ವಿ ಕೆರಿಮನಿ
ಮುಖಪುಟ ಕಲಾವಿದಶ್ರೀಪಾದ, ಬೆಂಗಳೂರು
ದೇಶಭಾರತ
ಭಾಷೆಕನ್ನಡ
ವಿಷಯಕರ್ನಾಟಕದ ಇತಿಹಾಸ, ಕನ್ನಡ ನಾಡು, ನುಡಿ ಎದುರಿಸುತ್ತಿರುವ ಸಮಸ್ಯೆಗಳು, ಕರ್ನಾಟಕದ ಜನಪರ ಚಳವಳಿಗಳು, ಆರೋಗ್ಯ, ಉದ್ಯೋಗ, ಬ್ಯಾಂಕಿಂಗ್, ಕನ್ನಡ ಮತ್ತು ವಿಜ್ಞಾನ, ತಂತ್ರಜ್ಞಾನ, ಕನ್ನಡ ಪುಸ್ತಕೋದ್ಯಮ, ಶಿಕ್ಷಣ, ಗಡಿನಾಡು, ಹೊರನಾಡು
ಪ್ರಕಾರಸಂಪಾದಿತ ಕೃತಿ
ಪ್ರಕಾಶಕರುಸಪ್ನ ಬುಕ್ ಹೌಸ್
ಪ್ರಕಟವಾದ ದಿನಾಂಕ
ನವೆಂಬರ್ ೨೦೧೨
ಪುಟಗಳು೩೭೪
ಐಎಸ್‍ಬಿಎನ್978-81-280-2034-6

ಪ್ರೊ. ಸಿ.ವಿ ಕೆರಿಮನಿಯವರ ಸಂಪಾದಿತ ಕೃತಿ ಚೆಲುವ ಕನ್ನಡ . ಕನ್ನಡ ನಾಡು, ಕನ್ನಡ ನುಡಿ-ಸಂಸ್ಕೃತಿ ಎಂಬ ಶೀರ್ಷಿಕೆಯಡಿ ೩೫ ವೈವಿಧ್ಯಮಯ ಲೇಖನಗಳನ್ನು ಈ ಕೃತಿ ಒಳಗೊಂಡಿದೆ. ಕರ್ನಾಟಕದ ಇತಿಹಾಸದಿಂದ ಪ್ರಾರಂಭವಾಗಿ, ಕನ್ನಡ ನಾಡು, ನುಡಿ ಎದುರಿಸುತ್ತಿರುವ ಸಮಸ್ಯೆಗಳು, ಕರ್ನಾಟಕದ ಜನಪರ ಚಳವಳಿಗಳು, ಆರೋಗ್ಯ, ಉದ್ಯೋಗ, ಬ್ಯಾಂಕಿಂಗ್, ಕನ್ನಡ ಮತ್ತು ವಿಜ್ಞಾನ, ತಂತ್ರಜ್ಞಾನ, ಕನ್ನಡ ಪುಸ್ತಕೋದ್ಯಮ, ಶಿಕ್ಷಣ, ಗಡಿನಾಡು, ಹೊರನಾಡು ಈ ಎಲ್ಲ ವಿಷಯಗಳ ಬಗ್ಗೆ ಬೇರೆ ಬೇರೆ ವಿದ್ವಾಂಸರು, ಬೇರೆ ಬೇರೆ ಸಂದರ್ಭದಲ್ಲಿ ಬರೆದ ಲೇಖನಗಳನ್ನು ಸಂಪಾದಿಸಿದ್ದಾರೆ.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಸಿದ್ದಲಿಂಗಯ್ಯ ಇದಕ್ಕೆ ಮುನ್ನುಡಿ ಬರೆದಿದ್ದಾರೆ. ಈ ಕೃತಿಯನ್ನು ನಾಡೋಜ ಪಾಟೀಲ ಪುಟ್ಟಪ್ಪನವರಿಗೆ ಅರ್ಪಿಸಲಾಗಿದೆ.