ಬೆಂಕಿ ನಂದಿಸುವ ವಿದಾನಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡ್ರೈ ಪೌಡರ್ ವಿಧಾನ ಪರಿಕರ
ಕಾರ್ಬನ್ ಡೈ ಅಕ್ಸೈಡ್ ವಿಧಾನ ಪರಿಕರ
ನೀರಿನ ರಕ

ಬೆಂಕಿ ನಂದಿಸುವ ವಿದಾನಗಳು:

ಕಾರ್ಲ್ಟನ್ ಟವರ್ಸ್ ಒಂದು ಬಹು ಅಂತಸ್ತಿನ ವಾಣಿಜ್ಯ ಸಂಕೀರ್ಣ ಕಟ್ಟಡ. ಇದು ೮ ಮಹಡಿಯ ಕಟ್ಟಡ, ಈ ಕಟ್ಟಡ ಬೆಂಗಳೂರಿನ ಏರ್ ಪೋರ್ಟ್ ರಸ್ತೆಯಲ್ಲಿದೆ. ಫೆಬ್ರವರಿ ೨೩,೨೦೧೦ ರಲ್ಲಿ ಕಾರ್ಲ್ಟನ್ ಟವರ್ ಬೆಂಕಿ ಅನಾಹುತಕ್ಕೆ ಸಿಲುಕಿ ೯ ಜನರು ಮರಣ ಹೊಂದಿದ್ದು ೭೦ ಜನರು ಗಾಯಗೊಂಡಿದ್ದರು.

ಬೆಂಕಿ ಬೀಳದಂತೆ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳು:

  • ಹೊಗೆ ಅಲರಾಮ್ ಮತ್ತು ಕಾರ್ಬನ್ ಮೊನಾಸಯ್ಡ್ ನಿಯಂತ್ರಕಗಳನ್ನು ಅಳವಡಿಸಬೆಕು.
  • ಹೊಗೆ ಅಲರಾಮ್ ಯಂತ್ರಗಳನ್ನು ಕೆಲಸ ಮಾಡುತ್ತದೆ ಅಥಾವಾ ಇಲ್ಲವ ಎಂದು ಪರಿಶೀಲಿಸಬೆಕು.
  • ನಿಮ್ಮ ಮನೆಯ/ಕಟ್ಟಡ ಹಾಗು ಪ್ರತಿ ಮಟ್ಟದಲ್ಲೂ ಹೊಗೆ ಅಲರಾಮ್ ಗಳನ್ನು ಅಳವಡಿಸಬೆಕು.
  • ಅಳವಡಿಸಿದ ಯಂತ್ರಗಳ ಬಗ್ಗೆ ಪ್ರತಿ ವರ್ಷಕೊಮ್ಮೆ ಎಚ್ಚರವಹಿಸಬೆಕು,ಬ್ಯಾಟರಿ ಮತ್ತು ಎಣ್ಣೆಯನ್ನು ಹಾಗಾಗ ಬದಾಲಾಯಿಸುತ್ತಿರಬೆಕು.
  • ಬೆಂಕಿ ಬಿದ್ದಂತಹ ಸಮಯದಲ್ಲಿ ಏನು ಮಾಡಬೆಕೆಂಬ ಸುರಕ್ಷತ ಕ್ರಮಗಳ ಬಗ್ಗೆ ಶಿಬಿರ ನಡೆಸಬೇಕು.
  • ಮನೆಯ/ಕಟ್ಟಡದ ನಕ್ಷೆಯನ್ನು ಸುರಕ್ಷಿತ ಜಾಗದಲ್ಲಿಟ್ಟಿರಬೇಕು.
  • ಮನೆಯ/ಕಟ್ಟಡ ಹೊರಡುವ ವೇಳೆ ಎಲ್ಲಾ ದೀಪಗಳನ್ನು ಆರಿಸಬೇಕು,ಹಾಗು ವಿದ್ಯುತ್ ತಂತಿಗಳನ್ನು ಆಗಾಗ ಪರೀಕ್ಷಿಸಬೇಕು.
  • ಬೆಂಕಿ ಬಿದ್ದಂತಹ ವೇಳೆ ಬೆಂಕಿ ನಂದಿಸುವ ಸಾಧನಗಳನ್ನು ಹೇಗೆ ಉಪಯೋಗಿಸಬೇಕೆಂಬ ಮಾಹಿತಿ ನೀಡುವಂತಹ ತರಬೇತಿಗಳನ್ನು ನಡೆಸಬೇಕು.

ಬೆಂಕಿ ಬಿದ್ದ ಸಮಯದಲ್ಲಿ ಅನುಸರಿಸಬೇಕಾದ ಕ್ರಮಗಳು:

  • ಬೆಂಕಿ ಬಿದ್ದ ಸಮಯದಲ್ಲಿ ತಕ್ಷಣ ಹೋರಬಂದು ಹತ್ತಿರದ ಅಗ್ನಿಶಾಮಕ ಸಿಬ್ಬಂದಿಗೆ ೧೦೧ ಕರೆ ಮಾಡಿ ವಿಷಯ ತಿಳಿಸಿ ಬೆಂಕಿ ಬಿದ್ದ ಸ್ಥಳದ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ಅಗ್ನಿಶಾಮಕ ಸಿಬ್ಬಂದಿ ನೀಡಬೇಕು.
  • ಅಗ್ನಿಶಾಮಕ ಸಿಬ್ಬಂದಿಯವರು ಬರುವ ಮುನ್ನ ಮನೆಯಲ್ಲಿ/ಕಟ್ಟಡದಲ್ಲಿ ಇರುವಂತಹ ಬೆಂಕಿ ನಂದಿಸುವ ಸಾಧನಗಳನ್ನು ಉಪಯೋಗಿಸಬೇಕು.
  • ನೀವು ಬೆಂಕಿಬಿದ್ದ ಸ್ಥಳದಲ್ಲಿ ಇದ್ದು ನಿಮ್ಮ ಬಳಿ ಫೋನ್ ಇದ್ದರೆ ಅಗ್ನಿಶಾಮಕ ಸಿಬ್ಬಂದಿಯವರಿಗೆ ಕರೆ ಮಾಡಿ ನೀವು ಇರುವ ಸ್ಥಳದ ಹೆಸರನ್ನು ನಿಖರವಾಗಿ ಹೇಳಿ.
  • ಬಾಗಿಲನ್ನು ತೆರೆಯುವ ಮುನ್ನ ಬಾಗಿಲನ್ನು ಮುಟ್ಟಿ ಶಾಖ ಇದೆ ಅಥಾವ ಇಲ್ಲ ಎಂದು ಖಾತ್ರಿ ಮಾಡಿಕೊಳ್ಳಿ, ಶಾಖ ಅಧಿಕವಾಗಿದ್ದರೆ ಆ ಬಾಗಿಲನ್ನು ಹೊರತುಪಡಿಸಿ ಪರ್ಯಾಯ ಮಾರ್ಗವನ್ನು ಉಪಯೋಗಿಸಿ ಹೊರಬರಲು ಪ್ರಯತ್ನ ಮಾಡಿ. ಶಾಖ ಕಡಿಮೆ ಇದ್ದರೆ ಆ ಬಾಗಿಲಿನಿಂದ ಹೊರಬಂದು ನೀವು ಬಂದಂತಹ ಬಾಗಿಲನ್ನು ಮುಚ್ಚಿ.
  • ಒಂದು ವೇಳೆ ನಿಮಗೆ ಯಾವ ಮಾರ್ಗವು ಸಿಗದೇ ಹೋದಲ್ಲಿ ಕಿಟಕಿಯಿಂದ ಹೊರಬರಲು ಪ್ರಯತ್ನಿಸುವ ಮುನ್ನ ಅಗ್ನಿಶಾಮಕ ಸಿಬ್ಬಂದಿ ವರ್ಗದವರಿಗೆ ಸೂಚನೆ ನೀಡಿ ಹೊರಗೆ ಬನ್ನಿ.

ಬೆಂಕಿ ಬಿದ್ದ ನಂತರ ವಹಿಸುವ ಕ್ರಮಗಳು:

  • ಕಟ್ಟಡಕ್ಕೆ ಬೆಂಕಿ ಬಿದ್ದ ಸಂದರ್ಭದಲ್ಲಿ ಹತ್ತಿರದ ತುರ್ತು ನಿರ್ಗಮನ ದಾರಿಯಿಂದ ಹೊರಗೆ ಬರತಕ್ಕದ್ದು,ಆತುರಕ್ಕೆ ಒಳಗಾಗಿ ಕಿಟಕಿಯಿಂದ ಜಿಗಿಯುವುದು ತುಂಬಾ ಅಪಾಯಕಾರಿ,ಹಾಗು ಲಿಪ್ಟ್ ಗಳನ್ನು ಉಪಯೋಗಿಸದೆ ಮೆಟ್ಟಿಲುಗಳನ್ನು ಬಳಸಬೇಕು.
  • ಬೆಂಕಿ ಬಿದ್ದ ಜಾಗದಲ್ಲಿ ಸಂಚಾರ ಅಸ್ತ ವ್ಯಸ್ತವಾಗದಂತೆ ನೋಡಿಕೊಂಡು ಆ ರಸ್ತೆಗಳಲ್ಲಿ ಬೆಂಕಿ ನಂದಿಸುವ ವಾಹನಗಳನ್ನು ಬರುವಂತೆ ಸಂದೇಶ ನೀಡಬೇಕು,ಮತ್ತು ಬೆಂಕಿ ಬಿದ್ದಂತಹ ಆ ಸ್ಥಳ ಜನರಿಂದ ಮುಕ್ಥವಾಗಿರಬೇಕು.
  • ಸಾರಿಗೆ ನಿಯಮಕ್ಕೆ ಬೆಂಕಿ ಬಿದ್ದ ವಿಶಯವನ್ನು ತಿಳಿಸಿ ಬೆಂಕಿ ಬಿದ್ದಂತಹ ರಸ್ತೆಯಲ್ಲಿ ವಾಹನಗಳು ಬರದಂತೆ ಎಛ್ಚರವಹಿಸಬೇಕು.
  • ಅಗ್ನಿಶಾಮಕ ಸಿಬ್ಬಂದಿಯವರಿಗೆ ವಿವರವಾಗಿ ಸರಿಯಾದ ರೀತಿಯಲ್ಲಿ ಅಂದರೆ ಬೆಂಕಿ ಯಾವ ಜಾಗದಲ್ಲಿ ಸಂಭವಿಸಿದೆ,ಕಟ್ಟಡದ ಒಳಗಡೆ ಇರುವಂತಹ ತುರ್ತು ನಿರ್ಗಮನ ಮತ್ತು ಮೆಟ್ಟಿಲುಗಳ ಬಗ್ಗೆ ಮಾಹಿತಿ ನೀಡಬೇಕು.
  • ಬೆಂಕಿ ಬಿದ್ದ ಸ್ಥಳದಿಂದ ನೀವು ಹೊರಬಂದ ನಂತರ ಮತ್ತೆ ಯಾವುದೇ ಕಾರಣಕ್ಕು ಮತ್ತೆ ಒಳಗೆ ಹೋಗದಿರಿ.
  • ಅಗ್ನಿಶಾಮಕ ಸಿಬ್ಬಂದಿಯವರ ಸೂಚನೆಗಳನ್ನು ನೀವು ಅನುಸರಿಸತಕ್ಕದ್ದು.
  • ಆ ಸಂಧರ್ಭದಲ್ಲಿ ಅಗ್ನಿಶಾಮಕ ಸಿಬ್ಬಂದಿಯವರು ಬೆಂಕಿ ಬಿದ್ದ ಸ್ಥಳದಲ್ಲಿ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಲು ಸಹಾಯಕಾರಿ ಆಗುತ್ತದೆ.
  • ಅನಾಹುತಕ್ಕೆ ಒಳಪಟ್ಟವರನ್ನ ರಕ್ಷಿಸಿದ ನಂತರ ಅವರಿಂದ ಕಟ್ಟಡದ ಒಳಗಡೆಯ ಪರಿಸ್ತಿತಿಯನ್ನು ವಿಚಾರಿಸತಕ್ಕದ್ದು, ಹಾಗು ಗಂಬೀರವಾಗಿ ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ಆಂಬುಲೆನ್ಸ್ ಸಹಾಯದಿಂದ ಕರೆದುಕೊಂಡು ಹೊಗಬೇಕು. ಸಾರ್ವಜನಿಕರಿಗೆ ಬೆಂಕಿ ಬಿದ್ದ ಸ್ಥಳದ ಬಗ್ಗೆ ಮಾದ್ಯಮದ ಮುಖಾಂತರ ವಿಷಯ ತಿಳಿಸಬೇಕು.

ಬೆಂಕಿ ಸುರಕ್ಷತೆ ನಿಮ್ಮ ವೈಯಕ್ತಿಕ ಜವಾಬ್ದಾರಿ ...ಅದರ ಕ್ರಮಗಳನ್ನು ಅನುಸರಿಸುವುದು ಸೂಕ್ತ.