ಜೂಹಿ ಪರ್ಮಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೂಹಿ ಪರ್ಮಾರ್ ಶ್ರಾಫ್
Juhi Parmar at Vikas Kalantri's wedding sangeet ceremony
Born
ಜೂಹಿ ಪರ್ಮಾರ್

(1980-12-14) ೧೪ ಡಿಸೆಂಬರ್ ೧೯೮೦ (ವಯಸ್ಸು ೪೩)
Occupation(s)Entertainment - ನಟಿ, ನಿರೂಪಕಿ, ನೃತ್ಯಗಾತಿ, ಕಿರುತೆರೆ ನಿರೂಪಕಿ
Spouseಸಚಿನ್ ಶ್ರಾಫ್

ಕುಂಕುಮ್’ ಎಂಬ ಹಿಂದಿ ಧಾರವಾಹಿಯಲ್ಲಿ ಅಭಿನಯಿಸಿ ಹಿಂದಿ ಪ್ರೇಕ್ಷಕರನ್ನು ರಂಜಿಸಿದ 'ಜೂಹಿ ಪರ್ಮಾರ್' ರವರು, ಕಲರ್ಸ್ ಚಾನೆಲ್ರಿಯಾಲಿಟಿ ಶೋ ನಲ್ಲಿ ಬಿಗ್ ಬಾಸ್ ಐದನೆಯ ಅವತರಣಿಕೆ ಯಲ್ಲಿ ಫೈನಲ್ ನಲ್ಲಿ ಗೆದ್ದು ಒಂದು ಕೋಟಿ ಬಹುಮಾನವನ್ನು ಗಳಿಸಿದಳು. 'ಬಿಗ್ ಬಾಸ್ ರಿಯಾಲಿಟಿ ಶೋ' ವಿವಾದಗಳ ಆಗರವಾಯಿತು.ಒಟ್ಟು ೧೩ ಜನ ಅಭ್ಯರ್ಥಿಗಳಲ್ಲಿ ಅಂತಿಮ ದಲ್ಲಿ ಅವರ ಜೊತೆ ಇದ್ದವರು, ಆಕಾಶ್ ದೀಪ್ ಸೈಗಾಲ್, ಅಮರ್ ಉಪಾಧ್ಯಾಯ್, ಸಿದ್ಧಾರ್ಥ್ ಭಾರದ್ವಾಜ್, ಮೆಹೆಕ್ ಚಾಹಲ್, ೩೧ ರ ಹರೆಯದ ಗಳಿಸಿದ ಎರಡನೆಯ ಮಹಿಳೆ. ಕಿರುತೆರೆ ನಟಿ,ನಿರೂಪಕಿ, ಗಾಯಕಿ, ನೃತ್ಯಗಾತಿ, ಬಹುಮುಖ ಪ್ರತಿಭೆ,

ಜನನ,ಬಾಲ್ಯ[ಬದಲಾಯಿಸಿ]

ಉಜ್ಜಯನಿ ಯಲ್ಲಿ ಜನನ, ಬೆಳೆದದ್ದು ರಾಜಾಸ್ತಾನದ ಜೈಪುರದಲ್ಲಿ. ತಮ್ಮ ಚಿಕ್ಕಪ್ಪನವರು ನಾಟಕಗಳಲ್ಲಿ ಅಭಿನಯಿಸುತ್ತಿದ್ದನ್ನು ಗಮನಿಸಿ, ನಟನೆ, 'ಫ್ಯಾಶನ್ ಶೋ'ಗಳಲ್ಲಿ ಭಾಗವಹಿಸುತ್ತಾಬಂದರು. ತಮ್ಮ ೧೯ ರ ಹರೆಯದಲ್ಲೇ ಮಿಸ್ ರಾಜಾಸ್ತಾನಿ ಬಿರುದು ಅವರಿಗೆ ಲಭ್ಯವಾಯಿತು. ಟೆಲಿವಿಶನ್ ಧಾರಾವಾಹಿಗಳಲ್ಲಿ ಅವಕಾಶಗಳು 'ಕುಂಕುಮ್ ಧಾರಾವಾಹಿ' ಅವರಿಗೆ ಅಪಾರ ಯಶಸ್ಸನ್ನು ತಂದುಕೊಟ್ಟಿತು. ಧಾರಾವಾಹಿಯಲ್ಲಿ ಎಲ್ಲರೊಂದಿಗೆ ಹೊಂದಿಕೊಂಡು ಜೀವನವನ್ನು ನಿರ್ವಹಿಸುವ ಪಾತ್ರ ಸೊಸೆಯ ಪಾತ್ರ. ಪ್ರಶಸ್ತಿಗಳನ್ನೂ ಗೆದ್ದಿದ್ದಾರೆ.

ಪಾಕೀಸ್ತಾನಿ ಧಾರಾವಾಹಿಗಳು[ಬದಲಾಯಿಸಿ]

  • ಪೆಹೆಚಾನ್
  • ತೇರೇ ಇಷ್ಕ್ ಮೇ,

'ಜೂಹಿ ಪರ್ಮಾರ್,' ರವರು ಅಭಿನಯಿಸಿದ ಪಾಕೀಸ್ತಾನಿ ಧಾರಾವಾಹಿಗಳು. ಪತಿ ಪತ್ನಿ ಔರ್ ಓ, ಮಾ ಎಕ್ಸ್ ಚೇಂಜ್ ರಿಯಾಲಿಟಿ ಶೊಗಳಲ್ಲಿ ಮಿಂಚಿದ್ದಾಳೆ. ಲವಲವಿಕೆ ಯ ನಟನೆ. ಕೆಲವು ವೇಳೆ ಆಕಾರದಲ್ಲಿ ಕೆಲವು ಅವಕಾಶಗಳು ಕೈತಪ್ಪಿಹೋದವು.

'ಬಿಗ್ ಬಾಸ್ ಟೆಲಿವಿಶನ್ ಶೋ', ಒಂದು ಅವಿಸ್ಮರಣೀಯ ವೇದಿಕೆ[ಬದಲಾಯಿಸಿ]

'ಬಿಗ್ ಬಾಸ್' ಆಕಸ್ಮಿಕ. ಎರಡನೆಯದಾಗಿ ತಮ್ಮ ಮೈಭಾರವನ್ನು ಕಡಿಮೆಮಾಡಬೇಕಾಗಿಬಂತು. ವೃತ್ತಿಜೀವನದಲ್ಲಿ 'ಮೈಕಟ್ಟೂ' ಬಹಳ ಮಹತ್ವವನ್ನು ಹೊಂದಿದೆ. ಅದನ್ನು ಚೆನ್ನಾಗಿ ಅರಿತ ರವರು, ಅದರ ಬಗ್ಗೆ ಹೆಚ್ಚು ಕಾಳಜಿವಹಿಸುತ್ತಿದ್ದರು. ಆದರೆ, ಆರೋಗ್ಯದ ಕೆಲವು ಸಮಸ್ಯೆಗಳಿಂದಾಗಿ ಮೈತೂಕ ಹೆಚ್ಚಾಗುವುದನ್ನು ನಿಯಂತ್ರಿಸಲು ಕಷ್ಟವಾಗುತ್ತಿತ್ತು.'ಬಿಗ್ ಬಾಸ್' ನಲ್ಲಿ 'ಸ್ಕೈ' ಮತ್ತು 'ಸನ್ನಿಲಿಯೊನ್' ನ ಸ್ನೇಹದ ಹೊರತು ಬೇರೆಯವರ ನೆರವು ಹೆಚ್ಚಾಗಿರಲಿಲ್ಲ. ಪೂಜಾಕಿ ಚಮ್ಚಿ ಎಂಬ ಹಣೆಪಟ್ಟಿಯೂ ಸೇರಿತ್ತು. ಪೂಜಾ ಬೇಡಿ ಯ ಹತ್ತಿರ ಹೆಚ್ಚು ಸ್ನೇಹದ ಫಲದಿಂದ, ತಾಳ್ಮೆ, ಸಹನೆಯ ನೆಲೆಯಿಂದಾಗಿ ಆಕೆ ಎಲ್ಲವನ್ನೂ ಮೆಟ್ಟಿನಿಂತು ಮುಂದುವರೆಯಲು ಸಾಧ್ಯವಾಯಿತು. ಗ್ರಾಂಡ್ ಫಿನಾಲೆ ಗೆ ಮುನ್ನಾದಿನ ಟೆಲೆವಿಶನ್ ನಲ್ಲಿ ಮತ ಯಾಚಿಸುವುದು ಸ್ವಾಭಾವಿಕವಾದ ಒಂದು ಪ್ರಕ್ರಿಯೆ. ಆ ಸಮಯದಲ್ಲಿ ಅವರ ಮಾತಿನ ಎಳೆಗಳು ಹೀಗಿದ್ದವು ’ಈ ಹಂತದವರೆಗೆ ತಲುಪಲು ಕಾರಣವಾದ ಒಂದೊಂದು ಮತದ ಅರಿವು ನನಗಿದೆ. ನನ್ನ ಸ್ವಭಾವ ತಮಗೆ ಇಷ್ಟವಾದಲ್ಲಿ ನನಗೆ ಬಿಗ್ ಬಾಸ್ ಟ್ರೋಫಿ ದಕ್ಕುವಂತೆ ಮಾಡಿ. ಜನ ಆ ಮಾತುಗಳಿಂದ ಪ್ರಭಾವಿತರಾದರು, ಮತ್ತು ಮತನೀಡಿದರು. "ಪ್ರತಿಮಹಿಳೆಯ ಯಶಸ್ಸಿನ ಹಿಂದೆ ಒಬ್ಬ ಪುರುಷ ಇರುತ್ತಾನೆ". ನನ್ನ ಹಿಂದೆ ನನ್ನ ಗಂಡನಿದ್ದ. ಇಂದು ಟಿವಿ ನಟ ಹಾಗೂ ವಾಣಿಜ್ಯೋದ್ಯಮಿ ಆಗಿರುವ ಗಂಡ, ಸಚಿನ್ ಶ್ರಾಫ್ ರವರನ್ನು ಅವರು ಸ್ಮರಿಸುತ್ತಾರೆ.

ಸಿನಿಮಾದಲ್ಲಿ ನಟಿಸುವಾಸೆ[ಬದಲಾಯಿಸಿ]

ನೆಗೆಟೀವ್ ಪಾತ್ರವಾದರೂ ಸರಿ. ಉತ್ತಮ ಪಾತ್ರವಿದ್ದರೆ ಸಿನಿಮಾಗಳಲ್ಲಿ ಅಭಿನಯಿಸಲು ಸದಾ ಸಿದ್ಧ. ಆಕೆಯ ಮೊದಲ ಪ್ರೀತಿ ಸಲ್ಮಾನ್ ಖಾನ್. ರವರು, ಕಲರ್ಸ್ ಚಾನೆಲ್ ನ ರಿಯಾಲಿಟಿ ಶೋನಲ್ಲಿ ಬಿಗ್ ಬಾಸ್ ಐದನೆಯ ಅವತರಣಿಕೆಯಲ್ಲಿ ಫೈನಲ್ ನಲ್ಲಿ ಗೆದ್ದು ಒಂದು ಕೋಟಿ ಬಹುಮಾನವನ್ನು ಗಳಿಸಿದಳು.