ಬೇವಿನಹಳ್ಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತುಮಕೂರು ಜಿಲ್ಲೆ ಸಿರಾ ತಾಲ್ಲೂಕಿನ ಒಂದು ಇತಿಹಾಸ ಪ್ರಸಿದ್ಧ ಹಳ್ಳಿ.. ಈ ಗ್ರಾಮ ದಲ್ಲಿ ನೆಲೆಸಿರುವ ಪುರಾಣ ಪ್ರಸಿದ್ಧ ಶ್ರೀ ಜುಂಜಪ್ಪವ ದೇವಸ್ಥಾನದಲ್ಲಿ ಪ್ರತೀ ವರ್ಷ ದೀಪಾವಳಿಯ ನಂತರದ ಮೊದಲ ಸೋಮವಾರದಂದು ಬೃಹತ್ ಜಾತ್ರಾ ಮಹೋತ್ಸವ ನಡೆಯುತ್ತದೆ ಹಾಗೂ ಈ ದಿನ ಸಂಜೆ ಈ ಗ್ರಾಮದಲ್ಲಿ ಅನೇಕ ಜಾನಪದ ಕಲಾ ಪ್ರದರ್ಶನಗಳು ನಡೆಯುತ್ತವೆ ಅಂತಹ ಜಾನಪದ ಕಲೆಗಳಲ್ಲಿ ಪ್ರಮುಖವಾಗಿ ಸೋಮನಕುಣಿತ, ಅರೆವಾದ್ಯ, ಕೋಲಾಟ, ಸೋಬಾನೆ ಪದಗಳು, ಪಟಕುಣಿತ, ಮಣೇವು ಕುಣಿತ, ಮುತ್ತಿನ ಪಲ್ಲಕ್ಕಿ ಉತ್ಸವ, ಇತ್ಯಾದಿ ಕಲಾ ಪ್ರದರ್ಶನಗಳು ನೋಡುಗನ ಮನಸೂರೆಗೊಳ್ಳುವುದಂತೂ ನಿಜ.