ವಿಷಯಕ್ಕೆ ಹೋಗು

ಎಂ.ಜಿ ಈಶ್ವರಪ್ಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಾ| ಎಂ.ಜಿ. ಈಶ್ವರಪ್ಪ

ಡಾ| ಎಂ.ಜಿ. ಈಶ್ವರಪ್ಪನವರು ದಾವಣಗೆರೆಯ ಡಿ.ಆರ್.ಎಂ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದರು. ಈಶ್ವರಪ್ಪನವರು ತಮ್ಮ ನಿರರ್ಗಳ ಮಾತುಗಾರಿಕೆಗೆ ಹೆಸರಾದವರು. ಗದ್ಯ ಮತ್ತು ಪದ್ಯಗಳ ಬೋಧನೆಯನ್ನ ರಸವತ್ತಾಗಿ ಕಣ್ಣಿಗೆ ಕಟ್ಟುವಂತೆ ವರ್ಣಿಸಬಲ್ಲವರು. ದಾವಣಗೆರೆಯ ಸಾಹಿತ್ಯವಲಯದಲ್ಲಿ ತಮ್ಮದೇ ಆದ ಛಾಪನ್ನೊತ್ತಿದವರು. ಇವರು ಡಿ.ಆರ್.ಎಮ್. ವಿಜ್ಞಾನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದಾಗ ಇವರ ರಸವತ್ತಾದ ಕಥೆಗಾರಿಕೆಗೆ, ಮಾತುಗಾರಿಕೆಗೆ ಮನಸೋತು ತಮಗೆ ತರಗತಿ ಇಲ್ಲದ ವಿದ್ಯಾರ್ಥಿಗಳೂ ಕೂಡಾ ಇವರ ತರಗತಿಯಲ್ಲಿ ಹಾಜರಿರುತ್ತಿದ್ದರು. ಇದು ಅವರ ಅಗ್ಗಳಿಕೆ. ಈಶ್ವರಪ್ಪನವರು ವಿಮರ್ಶಕರಾಗಿಯೂ ಕೆಲಸ ಮಾಡಿದ್ದಾರೆ. ಸಮಕಾಲೀನ ಸಾಹಿತ್ಯದ ಒಬ್ಬ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಇವರೂ ಒಬ್ಬರು. ತಮ್ಮ ನಿವೃತ್ತಿಯ ಅಂಚಿನಲ್ಲಿ ಎಂ.ಎಸ್.ಬಿ ಡಿಗ್ರಿ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಈಗ ದಾವಣಗೆರೆಯಲ್ಲಿ ವಾಸ್ತವ್ಯ.

ಪ್ರಶಸ್ತಿಗಳು 2020 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಡಾ. ಎಂ. ಜಿ. ಈಶ್ವರಪ್ಪ ಆಯ್ಕೆಯಾಗಿದ್ದಾರೆ.[]

  1. https://suddivani.com/%E0%B2%B0%E0%B2%BE%E0%B2%9C%E0%B3%8D%E0%B2%AF%E0%B3%8B%E0%B2%A4%E0%B3%8D%E0%B2%B8%E0%B2%B5-rajyothsava-award/. {{cite web}}: |access-date= requires |url= (help); Check date values in: |accessdate= (help); External link in |website= (help); Missing or empty |title= (help); Missing or empty |url= (help)

ನಾನು ಬಿ ಎಸ್ ಸಿ ಪದವಿ ಓದುತ್ತಿರುವಾಗ ನನ್ನ ಅಚ್ಚುಮೆಚ್ಚಿನ ಕನ್ನಡ ಮೇಷ್ಟ್ರು ಡಾಕ್ಟರ್ ಎಂ ಜಿ ಈಶ್ವರಪ್ಪನವರು.ದಾವಣಗೆರೆ ಸಾಂಸ್ಕೃತಿಕ ವಲಯದಲ್ಲಿ ಬಹುಮುಖ್ಯ ಹೆಸರು ಡಾ. ಎಂ ಜಿ  ಈಶ್ವರಪ್ಪ. ಜಾನಪದ , ರಂಗಭೂಮಿ, ಸಾಹಿತ್ಯ, ಸಂಘಟನೆ, ಅಧ್ಯಾಪನ, ಆಡಳಿತ ಹೀಗೆ ಹತ್ತಾರು ಕ್ಷೇತ್ರಗಳಲ್ಲಿ ಅವರ ಸಾಧನೆ ಅಪೂರ್ವ. ಅವರ ಅಗಲಿಕೆ ದಾವಣಗೆರೆ ಸಾಂಸ್ಕೃತಿಕ ನಕ್ಷತ್ರವೊಂದು ಕಳಚಿದಂತಾಗಿದೆ.

(01-06-24ರ ಶನಿವಾರ ಸಂಜೆ 4-15ಕ್ಕೆ ಬೆಂಗಳೂರಿನ ಪೋರ್ಟಿಸ ಆಸ್ಪತ್ರೆಯಲ್ಲಿ ನಿಧನರಾದರು) ಶ್ರೀಯುತರು ಕನ್ನಡ ಭಾಷಾ ತಜ್ಞರಾಗಿದ್ದರು ಹಾಗೂ ತರಗತಿ ಕೋಣೆಯಲ್ಲಿ ಪಾಠಗಳನ್ನು ಮನಮುಟ್ಟುವಂತೆ ಪ್ರಸ್ತುತಪಡಿಸುತ್ತಿದ್ದರು.  ನನಗೆ ಇಂದಿಗೂ ಅವರು ಬೋಧಿಸುತ್ತಿದ್ದ ಶೈಲಿ ನೆನಪಿದೆ. ಭಗವಂತ ಅವರ ಆತ್ಮಕ್ಕೆ ಹಾಗೂ ಶ್ರೀಯುತರ ಕುಟುಂಬಕ್ಕೆ ಶಾಂತಿಯನ್ನು ನೀಡಲಿ.