ಅಪ್‌ಲೋಡಿಂಗ್ ಮತ್ತು ಡೌನ್‌ಲೋಡಿಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಂಪ್ಯೂಟರ್ ಜಾಲಗಳಲ್ಲಿ, ಡೌನ್‌ಲೋಡ್ ಅಂದರೆ ಸ್ಥಳೀಯ ಸಿಸ್ಟಮ್‌ಗೆ ದೂರದ ಸಿಸ್ಟಮ್‌ನಿಂದ ದತ್ತಾಂಶವನ್ನು ಪಡೆಯುವುದು ಅಥವಾ ಅಂತಹ ದತ್ತಾಂಶ ವರ್ಗಾವಣೆಯನ್ನು ಪ್ರವರ್ತನಗೊಳಿಸುವುದು ಎಂದರ್ಥ. ಡೌನ್‌ಲೋಡ್ ಮಾಡಬಹುದಾದ ದೂರದ ಸಿಸ್ಟಮ್‌ಗೆ ಉದಾಹರಣೆಗಳೆಂದರೆ - ವೆಬ್‌ಸರ್ವರ್, FTP ಸರ್ವರ್, ಇಮೇಲ್ ಸರ್ವರ್ ಅಥವಾ ಅಂತಹುದೇ ಇತರ ಸಿಸ್ಟಮ್‌ಗಳು. ಡೌನ್‌ಲೋಡ್ ಅಂದರೆ ಡೌನ್‍‌ಲೋಡ್ ಮಾಡಲು ಒದಗಿಸಿದ ಅಥವಾ ಡೌನ್‌ಲೋಡ್ ಮಾಡಿದ ಫೈಲ್ ಅಥವಾ ಅಂತಹ ಫೈಲ್ಅನ್ನು ಪಡೆಯುವ ಕ್ರಿಯೆ ಎಂದರ್ಥ. ಡೌನ್‌ಲೋಡಿಂಗ್ ಮತ್ತು ಇನ್‌ಸ್ಟಾಲಿಂಗ್‌ನ ಅರ್ಥವನ್ನು ತಪ್ಪಾಗಿ ಗ್ರಹಿಸುವುದು ಅಥವಾ ಅವನ್ನು ಒಟ್ಟಿಗೆ ತಪ್ಪಾಗಿ ಸೇರಿಸುವುದು ಸಾಮಾನ್ಯವಾಗಿದೆ. ಇದಕ್ಕೆ ವಿರುದ್ಧವಾದ ಕ್ರಿಯೆ ಅಪ್‌ಲೋಡಿಂಗ್ ಎಂದರೆ ವರ್ಗಾವಣೆ ಮಾಡಲಾಗುತ್ತಿರುವ ದತ್ತಾಂಶದ ಒಂದು ನಕಲನ್ನು ದೂರದ ಸಿಸ್ಟಮ್ ಸಂಗ್ರಹಿಸಬೇಕೆಂಬ ಉದ್ದೇಶದೊಂದಿಗೆ ಸ್ಥಳೀಯ ಸಿಸ್ಟಮ್‌ನಿಂದ ಸರ್ವರ್ ಅಥವಾ ಮತ್ತೊಂದು ಕ್ಲೈಂಟ್‌ನಂತಹ ದೂರದ ಸಿಸ್ಟಮ್‌ಗೆ ದತ್ತಾಂಶವನ್ನು ಕಳುಹಿಸುವುದು ಅಥವಾ ಅಂತಹ ಕ್ರಿಯೆಯನ್ನು ಪ್ರವರ್ತನಗೊಳಿಸುವುದು ಎಂದರ್ಥ. ಬುಲ್ಲೆಟಿನ್ ಬೋರ್ಡ್ ಸಿಸ್ಟಮ್‌ಗಳು (BBS) ಹೆಚ್ಚು ಪ್ರಸಿದ್ಧವಾದುದರಿಂದ ಕಂಪ್ಯೂಟರ್ ಬಳಕೆದಾರರಲ್ಲಿ ಈ ಪದಗಳು ಮೊದಲು ಜನಪ್ರಿಯವಾಗಿ ಬಳಕೆಗೆ ಬಂದವು, ಇವು ೧೯೭೦ರಲ್ಲಿ ಡಯಲ್-ಅಪ್ ಪ್ರವೇಶದ ವ್ಯಾಪಕ ಹರಡಿಕೆ ಮತ್ತು ಕಾರ್ಯಗತಗೊಳಿಸುವಿಕೆಯಿಂದ ಅನುಕೂಲ ಪಡೆಯಿತು.

ಡೌನ್‌ಲೋಡ್[ಬದಲಾಯಿಸಿ]

ಹಾರ್ಡ್ ಡ್ರೈವ್‌ ಡೌನ್‌ಲೋಡ್ ಮಾಡುವ ಒಂದು ಸಂಕೇತ.

ಅಪ್‌ಲೋಡಿಂಗ್ ಮತ್ತು ಡೌನ್‌ಲೋಡಿಂಗ್ ಪದಗಳ ಬಳಕೆಯು ಹೆಚ್ಚಾಗಿ ಕಳುಹಿಸಿದ ಅಥವಾ ಪಡೆದ ದತ್ತಾಂಶವನ್ನು ಶಾಶ್ವತವಾಗಿ ಸಂಗ್ರಹಿಸಬೇಕು ಅಥವಾ ಕನಿಷ್ಠ ಪಕ್ಷ ತಾತ್ಕಾಲಿಕಕ್ಕಿಂತ ಹೆಚ್ಚು ಕಾಲ ಸಂಗ್ರಹಿಬೇಕು ಎಂಬುದನ್ನು ಸೂಚಿಸುತ್ತದೆ. ಇದಕ್ಕೆ ವಿರುದ್ಧವಾಗಿ, ಡೌನ್‌ಲೋಡಿಂಗ್ ಪದವನ್ನು ಅದಕ್ಕೆ ಸಂಬಂಧಿಸಿದ ಅಂಶ ಸ್ಟ್ರೀಮಿಂಗ್ ‌‌ಗಿಂತ ಭಿನ್ನವಾದುದೆಂದು ಹೇಳಲಾಗುತ್ತದೆ, ಇದು ವರ್ಗಾವಣೆಯು ಪ್ರಗತಿಯಲ್ಲಿರುವಾಗಲೇ ಸ್ವೀಕರಿಸಿದ ದತ್ತಾಂಶವನ್ನು ಬಳಸುವುದನ್ನು ಸೂಚಿಸುತ್ತದೆ ಮತ್ತು ಅದನ್ನು ದೀರ್ಘಕಾಲದವರೆಗೆ ಸಂಗ್ರಹಿಸಲಾಗುವುದಿಲ್ಲ. ಅದೇ ಡೌನ್‌ಲೋಡಿಂಗ್ ಪದವನ್ನು ಬಳಸಿಕೊಂಡು ವಿವರಿಸುವ ಕ್ರಿಯೆಯಲ್ಲಿ, ದತ್ತಾಂಶವನ್ನು ಪೂರ್ಣವಾಗಿ ಸ್ವೀಕರಿಸಿದಾಗ ಮಾತ್ರ ಆ ದತ್ತಾಂಶವು ಬಳಕೆಯಾಗುತ್ತದೆ. ಯು ಟ್ಯೂಬ್ ಮೊದಲಾದ ಬ್ರೌಸರ್‌ನಲ್ಲಿ ಪ್ರಕಟವಾಗುವ ಮಾಧ್ಯಮವನ್ನು ಅಥವಾ ಸ್ಟ್ರೀಮಿಂಗ್ ಮಾಧ್ಯಮವನ್ನು ಒದಗಿಸುವ ಮತ್ತು ಬಳಕೆದಾರರು ಈ ಅಂಶಗಳನ್ನು ಪಡೆದ ನಂತರ ತಮ್ಮ ಕಂಪ್ಯೂಟರ್‌ಗಳಲ್ಲಿ ಉಳಿಸಿಕೊಳ್ಳದಂತೆ ನಿರ್ಬಂಧಿಸುವ ವೆಬ್‌ಸೈಟ್‌ಗಳು ಡೌನ್‌ಲೋಡಿಂಗ್ ‌ಗೆ ಅವಕಾಶವಿಲ್ಲವೆಂದು ಸೂಚಿಸುತ್ತವೆ.[೧] ಈ ಸಂದರ್ಭದಲ್ಲಿ, 'ಡೌನ್‌ಲೋಡ್' ಕೇವಲ 'ಪಡೆಯುವುದರ' ಬದಲಿಗೆ ನಿರ್ದಿಷ್ಟವಾಗಿ 'ಪಡೆಯುವುದು ಮತ್ತು ಉಳಿಸುವುದನ್ನು' ಸೂಚಿಸುತ್ತದೆ. ಆದರೆ, "ಡೌನ್‌ಲೋಡಿಂಗ್" ಅಂದರೆ 'ವರ್ಗಾವಣೆ' ಮಾಡುವುದು ಎಂದಲ್ಲವೆಂಬುದನ್ನು ಗಮನಿಸುವುದೂ ಮುಖ್ಯವಾಗಿದೆ (ಅಂದರೆ, ಎರಡು ಸಂಗ್ರಹ ಸಾಧನಗಳ ನಡುವೆ ದತ್ತಾಂಶವನ್ನು ಕಳುಹಿಸುವುದು/ಪಡೆಯುವುದು ದತ್ತಾಂಶದ ವರ್ಗಾವಣೆಯಾಗಿರಬಹುದು, ಆದರೆ ಅಂತರಜಾಲದಿಂದ ದತ್ತಾಂಶವನ್ನು ಪಡೆಯುವುದನ್ನು ದತ್ತಾಂಶದ ಡೌನ್‌ಲೋಡ್ ಎಂದು ಪರಿಗಣಿಸಲಾಗುತ್ತದೆ).

ಸೈಡ್‌ಲೋಡ್[ಬದಲಾಯಿಸಿ]

ಸ್ಥಳೀಯ ವರ್ಗಾವಣೆಗಳನ್ನು (ಒಂದು ಸ್ಥಳೀಯ ಸಿಸ್ಟಮ್‌ನಿಂದ ಮತ್ತೊಂದು ಸ್ಥಳೀಯ ಸಿಸ್ಟಮ್‌ಗೆ ದತ್ತಾಂಶವನ್ನು ಕಳುಹಿಸುವುದು) ಗಮನಿಸಿದರೆ, ಅಪ್‌ಲೋಡ್ ಮಾಡಲಾಗುತ್ತಿದೆಯೇ ಅಥವಾ ಡೌನ್‌ಲೋಡ್ ಮಾಡಲಾಗುತ್ತಿದೆಯೇ ಎಂಬುದನನ್ನು ನಿರ್ಧರಿಸಲು ಕಷ್ಟವಾಗಿರುತ್ತದೆ ಏಕೆಂದರೆ ಮೂಲ ಮತ್ತು ಉದ್ದೇಶಿತ ಸಿಸ್ಟಮ್‌ಗಳೆರಡೂ ಸ್ಥಳೀಯ ಬಳಕೆದಾರರ ನಿಯಂತ್ರಣದಲ್ಲಿರುತ್ತವೆ. ತಾಂತ್ರಿಕವಾಗಿ ಬಳಕೆದಾರರು ವರ್ಗಾವಣೆಯನ್ನು ಆರಂಭಿಸಲು ಪಡೆಯುವ ಸಾಧನವನ್ನು ಬಳಸಿದರೆ, ಅದು ಡೌನ್‌ಲೋಡ್ ಆಗಿರುತ್ತದೆ ಹಾಗೂ ಅವರು ಆರಂಭಿಸಲು ಕಳುಹಿಸುವ ಸಾಧನವನ್ನು ಬಳಸಿದರೆ ಅದು ಅಪ್‌ಲೋಡ್ ಆಗಿರುತ್ತದೆ. ಆದರೆ, ತಾಂತ್ರಿಕವಾಗಿ ಕುಶಲರಲ್ಲದ ಹೆಚ್ಚಿನ ಬಳಕೆದಾರರು ಯಾವುದೇ ರೀತಿಯ ದತ್ತಾಂಶ ವರ್ಗಾವಣೆಗೆ ಡೌನ್‌ಲೋಡ್ ಪದವನ್ನು ಬಳಸುವುದರಿಂದ, ಈ ಗೊಂದಲವನ್ನು ಕೊನೆಗೊಳಿಸಲು ಎಲ್ಲಾ ಸ್ಥಳೀಯ ಸಿಸ್ಟಮ್‌ನಿಂದ ಸ್ಥಳೀಯ ಸಿಸ್ಟಮ್‌ಗಳಿಗೆ ಮಾಡುವ ವರ್ಗಾವಣೆಗಳಲ್ಲಿ ಸೈಡ್‌ಲೋಡ್ ಪದವನ್ನು ಕೆಲವೊಮ್ಮೆ ಬಳಸಲಾಗುತ್ತದೆ.

ದೂರ-ಅಪ್‌ಲೋಡ್[ಬದಲಾಯಿಸಿ]

ಒಂದು ದೂರದ ಸಿಸ್ಟಮ್‌ನಿಂದ ಮತ್ತೊಂದು ದೂರದ ಸಿಸ್ಟಮ್‌ಗೆ ದತ್ತಾಂಶವನ್ನು ಕಳುಹಿಸವ ಕ್ರಿಯೆಯನ್ನು 'ದೂರ-ಅಪ್‌ಲೋಡಿಂಗ್' ಎಂದು ಕರೆಯಲಾಗುತ್ತದೆ. ಇದನ್ನು ಕೆಲವು ಆನ್‌ಲೈನ್ ಫೈಲ್ ಹೋಸ್ಟಿಂಗ್ ಸೇವೆಗಳು ಬಳಸುತ್ತವೆ. ದತ್ತಾಂಶವನ್ನು ಹಂಚಬೇಕಾದ ಕಂಪ್ಯೂಟರ್‌ಗಳು ದೂರದ ಹೆಚ್ಚು ವೇಗದ ಸ್ಥಳೀಯ ಪ್ರದೇಶ ಜಾಲದಲ್ಲಿದ್ದರೆ ಮತ್ತು ದೂರ-ನಿಯಂತ್ರಣವನ್ನು ಹೆಚ್ಚುಕಡಿಮೆ ನಿಧಾನವಾದ ಡಯಲ್-ಅಪ್ ಮಾಡೆಮ್ ಸಂಪರ್ಕವನ್ನು ಬಳಸಿಕೊಂಡು ನಿರ್ವಹಿಸಲಾಗುತ್ತಿದ್ದರೆ ದೂರ-ಅಪ್‌ಲೋಡಿಂಗ್ಅನ್ನು ಬಳಸಲಾಗುತ್ತದೆ. ಉದಾಹರಣೆಗಾಗಿ:

  • ಬಳಕೆದಾರರು MyRemoteHost ನಲ್ಲಿ ಫೈಲ್ ಹೋಸ್ಟಿಂಗ್ ಸೇವೆಯನ್ನು ಪ್ರವೇಶಿಸುತ್ತಾರೆ.
  • ಬಳಕೆದಾರರು PublicRemoteHost ನಲ್ಲಿ ಒಂದು ಸಾರ್ವಜನಿಕ ಫೈಲ್ಅನ್ನು ಕಂಡು, ಅದರ ಒಂದು ನಕಲನ್ನು ತಮ್ಮ MyRemoteHost ನಲ್ಲಿರಿಸಲು ಬಯಸುತ್ತಾರೆ.
  • ಅದನ್ನು ಮಾಡಲು ಅವರು ಫೈಲ್ಅನ್ನು PublicRemoteHost ನಿಂದ MyRemoteHost ಗೆ ದೂರ-ಅಪ್‌ಲೋಡ್ ಮಾಡುತ್ತಾರೆ.
  • ಯಾವುದೇ ಹೋಸ್ಟ್‌ಗಳು ಬಳಕೆದಾರರ ಸ್ಥಳೀಯ ಜಾಲದಲ್ಲಿಲ್ಲ.

ದೂರ-ಅಪ್‌ಲೋಡಿಂಗ್ ಕ್ರಿಯೆಯಿಲ್ಲದೆ, ಬಳಕೆದಾರರು ಫೈಲ್ಅನ್ನು ಮೊದಲು ತಮ್ಮ ಸ್ಥಳೀಯ ಹೋಸ್ಟ್‌ಗೆ ಡೌನ್‌ಲೋಡ್ ಮಾಡಿ, ನಂತರ ಅದನ್ನು ದೂರದ ಫೈಲ್ ಹೋಸ್ಟಿಂಗ್ ಸರ್ವರ್‌ಗೆ ಪುನಃ-ಅಪ್‌ಲೋಡ್ ಮಾಡಬೇಕಾಗುತ್ತದೆ. ದೂರದ ಕಂಪ್ಯೂಟರ್‌ಗಳ ಸಂಪರ್ಕವು ಒಂದು ಡಯಲ್-ಅಪ್ ಸಂಪರ್ಕವಾಗಿದ್ದರೆ, ಸ್ಥಳೀಯವಾಗಿ ಡೌನ್‌ಲೋಡ್ ಮಾಡಿ ನಂತರ ಪುನಃ-ಅಪ್‌ಲೋಡ್ ಮಾಡಲು ಬೇಕಾದ ವರ್ಗಾವಣೆ ಸಮಯವು ಕೆಲವು ಸೆಕೆಂಡುಗಳಿಂದ ಹಿಡಿದು ಕೆಲವು ಗಂಟೆಗಳು ಅಥವಾ ದಿನಗಳವರೆಗೆ ಹೆಚ್ಚಾಗಬಹುದು.

ಇವನ್ನೂ ಗಮನಿಸಿ‌[ಬದಲಾಯಿಸಿ]

  • BitTorrent (ಪ್ರೋಟೋಕಾಲ್)
  • ಬೆಲ್ಲೆಟಿನ್ ಬೋರ್ಡ್ ಸಿಸ್ಟಮ್
  • ಡಿಜಿಟಲ್ ಪ್ಯಾಕ್ ರ‌್ಯಾಟ್
  • ಡೌನ್‌ಲೋಡ್ ನಿರ್ವಾಹಕ
  • ಫೈಲ್ ಹಂಚಿಕೆ
  • ಫೈಲ್ ವರ್ಗಾವಣೆ ಪ್ರೋಟೋಕಾಲ್
  • MediaFire
  • ಮೆಟಾಲಿಂಕ್
  • ಸಂಗೀತ ಡೌನ್‌ಲೋಡ್
  • ಪೀರ್-ಟು-ಪೀರ್

ಉಲ್ಲೇಖಗಳು‌‌[ಬದಲಾಯಿಸಿ]

  1. "YouTube - Terms of Use". YouTube, LLC. 2007. Retrieved 2007-10-25.

ಮೂವೀಸ್ ಡೌನ್‌ಲೋಡ್ Archived 2011-05-01 ವೇಬ್ಯಾಕ್ ಮೆಷಿನ್ ನಲ್ಲಿ.