ಗಂಧರ್ವ ತ್ರಯರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಹಿಂದೂಸ್ತಾನೀ ಸಂಗೀತ ವಲಯ'ದಲ್ಲಿ ದೈತ್ಯ ಪ್ರತಿಭೆಯಿಂದ 'ಮರಾಠಿ-ಕನ್ನಡ ರಂಗಮಂಚ'ಗಳನ್ನು ವಿಜೃಂಭಿಸಿದ್ದಲ್ಲದೆ, ತಮ್ಮ ಅನುಪಮ ಸಂಗೀತದಿಂದ ಅತ್ಯಂತ ಜನಪ್ರಿಯತೆಯನ್ನು ಪಡೆದ ಮೂರು ಗಂಧರ್ವರು. ಅವರ 'ಧ್ವನಿಸುರಳಿ'ಗಳು ದೇಶದಾದ್ಯಂತ ಹೆಸರುಮಾಡಿದವು.

'ಸವಾಯ್ ಗಂಧರ್ವ'[ಬದಲಾಯಿಸಿ]

'ರಾಮ್ ಭಾವು ಕುಂದ್ ಗೋಳ್ ಕರ್', (ರಾಮಚಂದ್ರ ಗನೇಶ ಸೌನ್ಷಿ) (ಜನವರಿ ೧೯, ೧೮೮೬ ಸೆಪ್ಟೆಂಬರ್ ೧೨, ೧೯೫೨), 'ಪಂ.ಸವಾಯ್ ಗಂಧರ್ವ'ರೆಂದು ಅವರ ಪ್ರೀತಿಯ ಶ್ರೋತೃಗಳು ಕರೆದರು. ಮರಾಠಿ ರಂಗಭೂಮಿಯಲ್ಲಿ ನಾಯಕನಟ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಕಗಾರ, ಕಿರಾಣಘರಾನದ 'ಉಸ್ತಾದ್.ಆಬ್ದುಲ್ ಕರೀಮ್ ಖಾನ್ ಸಾಹೇಬ್' ರವರ ಶಿಷ್ಯರಾಗಿದ್ದರು. 'ಪಂ. ಸವಾಯ್ ಗಂಧರ್ವರ' ಶಿಷ್ಯರಲ್ಲಿ ಪ್ರಮುಖರಾದವರು :

  • ಪಂ. ಭೀಮಸೇನ್ ಜೋಷಿ.
  • ಡಾ. ಗಂಗೂಬಾಯಿ ಹಾನಗಲ್,
  • ಫಿರೋಝ್ ದಸ್ತೂರ್,
  • ಪಂ. ಬಸವರಾಜ್ ರಾಜ್ ಗುರು.

ಬಾಲಗಂಧರ್ವ[ಬದಲಾಯಿಸಿ]

(ನಾರಾಯಣ್ ಶ್ರೀಪಾದ್ ರಾಜ್ ಹಂಸ್) (ಮರಾಠಿ: नारायण श्रीपाद राजहंस), ಬಾಲಗಂಧರ್ವರೆಂದು ಹೆಸರಾದರು.(೧೮೮೮ - ೧೯೬೭)

ಕುಮಾರ ಗಂಧರ್ವ[ಬದಲಾಯಿಸಿ]

(ಜ :ಏಪ್ರಿಲ್ ೮, ೧೯೨೪ (೧೯೨೪-೦೪-೦೮, ಮ, ಜನವರಿ ೧೨, ೧೯೯೨ (೧೯೯೨-೦೧-೧೨) (ವರ್ಷ ವಯಸ್ಸಾಗಿತ್ತು ೬೭) ಜನನ : ಸೂಳೆಭಾವಿ, (ಆಗಿನ ಬಾಂಬೆ ಪ್ರೆಸಿಡೆನ್ಸಿಯಲ್ಲಿತ್ತು).'ಶಿವಪುತ್ರ ಸಿದ್ಧರಾಮಯ್ಯ ಕೋಮಕಾಳಿ ಮಠ್,' ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಕಾರ. ಅವರದೇ ಆದ ವಿಶಿಷ್ಠ ಶೈಲಿಗೆ ಹೆಸರಾದವರು. ಯಾವಘರಾನಕ್ಕೂ ಸೇರದೆ ತಮ್ಮದೇ ಆದ ಸುಧಾರಿತ ಶೈಲಿಯಲ್ಲಿ ಹಾಡುಗಾರಿಕೆಯನ್ನು ಆರಂಭಿಸಿ, ಹೆಸರುಗಳಿಸಿದ ಶ್ರೇಯಸ್ಸನ್ನು ಹೊಂದಿದರು. ಅವರಿಗೆ ಬಾಲ್ಯದಲ್ಲೇ 'ಕುಮಾರ ಗಂಧರ್ವ'ರೆಂಬ 'ಉಪಾಧಿ'ಯನ್ನು ಕೊಡಲಾಯಿತು.