ದೃಷ್ಟಾಂತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೆಸ್ಸಿ ವಿಲ್‌ಕಾಕ್ಸ್ ಸ್ಮಿತ್‌ರಿಂದ ರಚಿತವಾದ ದ್ರಷ್ಟಾಂತ

ದ್ರಷ್ಟಾಂತ (illustration) ಇದು ಒಂದು ದೃಶ್ಯೀಕರಣದ ವಿಧಾನವಾಗಿದ್ದು ಇದನ್ನು ರೇಖಾಚಿತ್ರ, ವರ್ಣಚಿತ್ರ, ಛಾಯಾಚಿತ್ರ ಅಥವಾ ಇನ್ನೀತರ ಕಲೆಯನ್ನು ಬಳಸಿಕೊಂಡು ತಿಳಿವಳಿಕೆಮೂಡಿಸುವುದು ಅಥವಾ ಅಗತ್ಯವಿರುವ ಸೂಕ್ಷ್ಮವಿಚಾರಗಳಿಗೆ (ಉದಾಹರಣೆಗೆ ಕಥೆ, ಕವನ ಅಥವಾ ಪತ್ರಿಕಾ ಲೇಖನಗಳಲ್ಲಿಯ ವಿಷಯಗಳನ್ನು ತಿಳಿಯಪಡಿಸಲು) ದೃಶ್ಯೀಕರಣವನ್ನು ನೀಡುವ ವಿಧಾನವಾಗಿದೆ.

ಇತಿಹಾಸ[ಬದಲಾಯಿಸಿ]

ಆರಂಭಿಕ ಇತಿಹಾಸ[ಬದಲಾಯಿಸಿ]

ಪ್ರಾಥಮಿಕ ಹಂತದ ದ್ರಷ್ಟಾಂತಗಳಿಗೆ ಉದಾಹರಣೆಯಾಗಿ ಇತಿಹಾಸಪೂರ್ವ ಗುಹಾಂತರ ವರ್ಣಚಿತ್ರಗಳನ್ನು ಹೆಸರಿಸಹುದಾಗಿದೆ. ಮುದ್ರಣಾ ಯಂತ್ರಗಳು ಅಸ್ತಿತ್ವಕ್ಕೆ ಬರುವ ಮೊದಲು ಪುಸ್ತಕಗಳಿಗೆ ಕೈಯಲ್ಲಿ ದ್ರಷ್ಟಾಂತವನ್ನು ರಚಿಸಲಾಗುತ್ತಿತ್ತು. ದ್ರಷ್ಟಾಂತಗಳನ್ನು ಚೀನಾ ಮತ್ತು ಜಪಾನ್‌ನಲ್ಲಿ ಸುಮಾರು ೮ನೇ ಶತಮಾನದಿಂದಲೂ ಬಳಸಲಾಗುತ್ತಿದೆ. ಸಾಂಪ್ರದಾಯಿಕವಾಗಿ ಅವರು ಬರಹಕ್ಕೆ ಪೂರಕವಾಗಿ ಮರದ ಹಲಗೆಯ ಮೇಲೆ ದ್ರಷ್ಟಾಂತಗಳನ್ನು ಬರೆಯುತ್ತಿದ್ದರು.[ಸಾಕ್ಷ್ಯಾಧಾರ ಬೇಕಾಗಿದೆ]

೧೫ನೇ ಶತಮಾದನದಿಂದ ೧೮ನೇ ಶತಮಾನದವರೆಗೆ[ಬದಲಾಯಿಸಿ]

೧೫ನೇ ಶತಮಾನದಲ್ಲಿ ಮರದ ಹಲಗೆಯ ಮೇಲೆ ದ್ರಷ್ಟಾಂತಗಳನ್ನು ರಚಿಸಿರುವ ಪುಸ್ತಕಗಳು ದೊರಕುವುದಕ್ಕೆ ಪ್ರಾರಂಭವಾದವು. ೧೬ನೇ ಮತ್ತು ೧೭ನೇ ಶತಮಾನದಲ್ಲಿ ದ್ರಷ್ಟಾಂತವನ್ನು ರಚಿಸಲು ಬಳಸಲಾಗುತ್ತಿದ್ದ ಮುಖ್ಯ ವಿಧಾನವಾಗಿ ಕೆತ್ತನೆ ಮತ್ತು ಎಚ್ಚಣೆಯನ್ನು ಬಳಸಲಾಗುತ್ತಿತ್ತು. ೧೮ನೇ ಶತಮಾನದ ಕೊನೆಯಲ್ಲಿ ಕಲ್ಲಚ್ಚು ಕಲೆಯು ಇನ್ನೂ ಉತ್ತಮವಾದ ದ್ರಷ್ಟಾಂತ ರಚನೆಗೆ ಸಹಕಾರಿಯಾದವು. ಈ ಸಮಯದ ದ್ರಷ್ಟಾಂತ ಕಲೆಗೆ ಉತ್ತಮ ಉದಾಹರಣೆ ಎಂದರೆ ವಿಲಿಯಮ್‌ ಬ್ಲೇಕ್‌‍ನದ್ದು. ಈತ ತನ್ನ ದ್ರಷ್ಟಾಂತಗಳನ್ನು ಎಚ್ಚಣದ ವಿಧಾನದಲ್ಲಿ ತಯಾರಿಸುತ್ತಿದ್ದ.

ಸ್ಯಾಂಟಿಯಾಗೊ ಮಾರ್ಟಿನೆಜ್ ಡೆಲ್ಗಾಡೊ ರಚಿತವಾದ ದ್ರಷ್ಟಾಂತ.

೧೯ನೇ ಶತಮಾನದ ಪ್ರಾರಂಭದಿಂದ ಮಧ್ಯ ಭಾಗದವರೆಗೆ[ಬದಲಾಯಿಸಿ]

ಶತಮಾನದ ಪ್ರಾರಂಭದ ಸಮಯದಲ್ಲಿ ಜಾನ್‌ ಲೀಚ್, ಜಾರ್ಜ್ ಕ್ರುಕ್ ಶಾಂಕ್, ಡಿಕನ್ಸ್‌ನ ಪುಸ್ತಕಗಳ ದ್ರಷ್ಟಾಂತ ಕಲೆಗಾರ ಹ್ಯಾಬ್ಲೊ ನೈಟ್‌ ಬ್ರೌನ್ ಮತ್ತು ಫ್ರಾನ್ಸ್‌ನಲ್ಲಿ ಹೊನೊರ್ ಡೌಮೀರ್‌ ಪ್ರಸಿದ್ಧ ವ್ಯಕ್ತಿಗಳಾಗಿದ್ದರು. ಇದೇ ಕಲಾವಿದರು ವಿಡಂಬನಾತ್ಮಕ ಮತ್ತು ನೇರ ಸಾಹಿತ್ಯಿಕ ಪತ್ರಿಕೆಗಳಿಗೆ ಕೂಡ ದ್ರಷ್ಟಾಂತವನ್ನು ರಚನೆ ಮಾಡುತ್ತಿದ್ದರು. ಆದರೆ ಎರಡೂ ಪ್ರಕರಣಗಳಲ್ಲಿ ಹೆಚ್ಚಿನ ಬೇಡಿಕೆಯು ಪಾತ್ರಗಳ ರೇಖಾ ಚಿತ್ರ ಬರೆಯುವಲ್ಲಿ ಇರುತ್ತಿತ್ತು. ಅಥವಾ ಸಾಮಾಜಿಕ ಪ್ರಕಾರಗಳ ಅಥವಾ ವರ್ಗಗಳನ್ನು ಬಿಂಬಿಸುವಂತಹ ವ್ಯಂಗ್ಯಭಾವಚಿತ್ರಗಳ ರಚನೆಗೆ ಹೆಚ್ಚಿನ ಬೇಡಿಕೆ ಇತ್ತು.

ಬ್ರಿಟನ್‌ನ ವಿಡಂಬನಾತ್ಮಕ ಮ್ಯಾಗಜಿನ್ ಪಂಚ್‌ ೧೮೪೧ರಲ್ಲಿ ಪ್ರಾರಂಭವಾಗಿದ್ದು ಮೊದಲು ಕ್ರಕ್‌ಶಾಂಕ್‌ನ ಕಾಮಿಕ್ ಅಲ್ಮನಾಕ್‌ನಿಂದ (೧೮೨೭-೧೮೪೦) ಹೆಚ್ಚಿನ ಬೇಡಿಕೆಯನ್ನು ಗಳಿಸಿಕೊಂಡಿತು. ನಂತರದಲ್ಲಿ ಇದು ಉತ್ತಮ ದರ್ಜೆಯ ಕಾಮಿಕ್ ದ್ರಷ್ಟಾಂತಗಾರರಾದ ಸರ್ ಜಾನ್ ಟೆನಿಯಲ್, ದಾಲ್‌ಜೈಲ್ ಸಹೋದರರು ಮತ್ತು ಜಾರ್ಜಸ್ ಡ್ಯೂ ಮೌರಿಯರ್‌ರನ್ನು ಇಪ್ಪತ್ತನೆ ಶತಮಾನದಲ್ಲಿ ಹೊಂದಿತ್ತು. ಇದು ಜನಪ್ರಿಯ ದ್ರಷ್ಟಾಂತವು ವ್ಯಂಗ್ಯಭಾವಚಿತ್ರಗಳ ಅವಲಂಬನೆಯಿಂದ ಉನ್ನತ ಮಟ್ಟದಲ್ಲಿ ವಿಷಯಕ್ಕೆ ತಕ್ಕುದಾದ ವಿವರಣೆಗೆ ಬದಲಾವಣೆ ಹೊಂದಿದ್ದನ್ನು ಉತ್ತಮವಾಗಿ ತೋರ್ಪಡಿಸುವಲ್ಲಿ ಸಹಾಯಕವಾಗುತ್ತದೆ. ಈ ಎಲ್ಲ ಕಲಾವಿದರು ತರಬೇತಿ ಪಡೆದ ಫೈನ್-ಆರ್ಟಿಸ್ಟ್‌ಗಳಾಗಿದ್ದು ಆದರೆ ಪ್ರಾಥಮಿಕವಾಗಿ ದ್ರಂಷ್ಟಾಂತ ಕಲೆಗಾರರಾಗಿ ಪ್ರಸಿದ್ಧಿಯನ್ನು ಗಳಿಸಿಕೊಂಡವರಾಗಿದ್ದರು. ಪಂಚ್‌ ಮತ್ತು ಅದೇ ರೀತಿಯ ಇತರ ಮ್ಯಾಗಜಿನ್‌ಗಳು ಉದಾಹರಣೆಗೆ ಪಾರ್ಸಿ ಭಾಷೆಯ ಲೆ ವೊಲ್ಯೂರ್ ಮುಂತಾದವು ಉತ್ತಮವಾದ ದ್ರಷ್ಟಾಂತವು ಉತ್ತಮವಾದ ಬರಹದಷ್ಟೇ ಮಾರಾಟ ಕಾಣುತ್ತವೆ ಎಂಬುದನ್ನು ಕಂಡುಕೊಂಡವು.


ದ್ರಷ್ಟಾಂತ ಕಲೆಯ ಸುವರ್ಣ ಯುಗ[ಬದಲಾಯಿಸಿ]

ಅಮೇರಿಕಾದ "ದ್ರಷ್ಟಾಂತ ಕಲೆಯ ಸುವರ್ಣ ಯುಗ"ವು ೧೮೮೦ರಿಂದ ಮೊದಲ ವಿಶ್ವಯುದ್ಧ ಮುಗಿಯುವವರೆಗೆ ಮುಂದುವರೆದಿತ್ತು. (ಆದರೂ ಸುವರ್ಣ ಯುಗದ ದ್ರಷ್ಟಾಂತ ಕಲೆಗಾರರು ಮುಂದಿನ ಕೆಲವು ದಶಕಗಳವರೆಗೆ ಮುಂದುವರೆದರು.) ಕೆಲವು ದಶಕಗಳ ಹಿಂದಿನವರೆಗೆ ಯುರೋಫ್‌ನಲ್ಲಿ ಇದ್ದಂತೆ ವೃತ್ತಪತ್ರಿಕೆಗಳು, ಉತ್ತಮ ಪ್ರಸಾರದ ಮ್ಯಾಗಜಿನ್ ಮತ್ತು ದ್ರಷ್ಟಾಂತ ಪುಸ್ತಕಗಳು ಸಾರ್ವಜನಿಕರು ಬಳಸುವ ಪ್ರಖರ ಮಾಧ್ಯಮವಾಗಿ ಬೆಳವಣಿಗೆ ಹೊಂದಿದವು. ಮುದ್ರಣ ತಂತ್ರಜ್ಞಾನದಲ್ಲಿಯ ಬೆಳವಣಿಗೆಯು ದ್ರಷ್ಟಾಂತ ಕಲೆಗಾರರು ಬಣ್ಣ ಮತ್ತು ಹೊಸ ರೀತಿಯ ವಿಧಾನಗಳನ್ನು ಬಳಸುವ ಮೂಲಕ ಉತ್ತಮ ಬೆಳವಣಿಗೆ ಹೊಂದುವಲ್ಲಿ ಸಹಾಯಕವಾದವು. ಈ ಸಮಯದಲ್ಲಿಯ ಒಂದು ಸಣ್ಣ ದ್ರಷ್ಟಾಂತಗಾರರ ಗುಂಪು ಶ್ರೀಮಂತ ಮತ್ತು ಪ್ರಸಿದ್ಧಿಯಾಗಿ ಬೆಳೆಯಿತು. ಅವರು ತಮ್ಮ ಕಲೆಯಲ್ಲಿ ರಚಿಸಿದ ಪ್ರತಿಮೆಗಳು ಅಮೇರಿಕಾದ ಆ ಸಮಯದ ಸ್ಪೂರ್ತಿಯಾಗಿದ್ದವು.

ತಾಂತ್ರಿಕ ದ್ರಂಷ್ಟಾಂತಗಳು[ಬದಲಾಯಿಸಿ]

ಡ್ರಮ್‌ ಸೆಟ್‌ನ ದ್ರಷ್ಟಾಂತ.

ತಾಂತ್ರಿಕ ದ್ರಷ್ಟಾಂತ ಇದನ್ನು ತಾಂತ್ರಿಕ ವಿಷಯವನ್ನು ದೃಶ್ಯೀಕರಿಸುವಮೂಲಕ ಹೇಳಲು ಬಳಸಲಾಗುತ್ತದೆ. ತಾಂತ್ರಿಕ ದ್ರಷ್ಟಾಂತಗಳು ತಾಂತ್ರಿಕ ರೇಖಾಚಿತ್ರದ ಒಂದು ಭಾಗವಾಗಿರಬಹುದು ಅಥವಾ ಚಿತ್ರವಾಗಿರಬಹುದು. ತಾಂತ್ರಿಕ ದ್ರಷ್ಟಾಂತವನ್ನು ಸಾಮಾನ್ಯವಾಗಿ "ಒಂದು ವಿಷಯ ಅಥವಾ ಮಾಹಿತಿಯನ್ನು ಪ್ರಭಾವಯುತವಾಗಿ ದೃಶ್ಯೀಕರಣದ ಮೂಲಕ ಮಾಹಿತಿಯನ್ನು ಪಡೆಯುವವರಿಗೆ ವರ್ಗಾಯಿಸುವುದಾಗಿದೆ" ಎಂದು ಹೇಳಲಾಗುತ್ತದೆ.[೧]

ತಾಂತ್ರಿಕ ದ್ರಷ್ಟಾಂತವು ಸಾಮಾನ್ಯವಾಗಿ ಮಾಹಿತಿ ನೀಡಬೇಕಾದ ವಿಷಯವನ್ನು ತಾಂತ್ರಿಕೇತರ ವರ್ಗದವರಿಗೆ ಅಂದರೆ ಜನಸಾಮಾನ್ಯರಿಗೆ ತಿಳಿಯಪಡಿಸುತ್ತದೆ. ಆದ್ದರಿಂದ ದೃಶ್ಯೀಕರಣ ಚಿತ್ರವು ಆಯಾಮಗಳು ಮತ್ತು ವಿಭಾಗದ ದೃಷ್ಟಿಯಿಂದ ಸಮನಾಗಿರಬೇಕು ಮತ್ತು ಇದು "ಒಂದು ಯಂತ್ರ, ವಸ್ತು ಏನು ಮಾಡುತ್ತದೆ ಎಂಬುದನ್ನು ತಿಳಿಯಪಡಿಸಬೇಕು ಮತ್ತು ನೋಡುಗರ ಆಸಕ್ತಿಯನ್ನು ಮತ್ತು ಅರ್ಥೈಸಿಕೊಳ್ಳುವಿಕೆಯನ್ನು ಇದು ಹೆಚ್ಚಿಸಬೇಕು.[೨]

ದ್ರಷ್ಟಾಂತ ಕಲೆ[ಬದಲಾಯಿಸಿ]

ಇವತ್ತು ಪುಸ್ತಕ ಮತ್ತು ಮ್ಯಾಗಜಿನ್‌ ಮತ್ತು ಪೋಸ್ಟರ್‌ಗಳಲ್ಲಿ ಬಳಸಲಾದ ದ್ರಷ್ಟಾಂತಗಳ ಮೂಲ ಪ್ರತಿಯನ್ನು ಕಲೆಹಾಕುವುದು ಮತ್ತು ಅದನ್ನು ಒಪ್ಪಿಕೊಳ್ಳುವ ಸಂಸ್ಕೃತಿ ಬೆಳೆದಿದೆ. ಹಲವಾರು ಮ್ಯೂಸಿಯಮ್ ಪ್ರದರ್ಶನಗಳು, ಮ್ಯಾಗಜಿನ್ ಮತ್ತು ಆರ್ಟ್ ಗ್ಯಾಲರಿಗಳು ಇತಿಹಾಸದ ದ್ರಷ್ಟಾಂತ ಕಲೆಗಾರರಿಗೆ ಮತ್ತು ಕಲೆಗಾಗಿಯೇ ಮೀಸಲಾದವುಗಳು ಇವೆ.

ದೃಶ್ಯೀಕರಣ ಕಲೆಯ ಪ್ರಪಂಚದಲ್ಲಿ ಕೆಲವು ಸಮಯದವರೆಗೆ ದ್ರಷ್ಟಾಂತ ಕಲೆಗಾರರನ್ನು ಕಲಾವಿದರು ಮತ್ತು ಗ್ರಾಫಿಕ್ ಡಿಸೈನರ್‌ಗಳಿಗೆ ಹೋಲಿಸಿದರೆ ಕಡಿಮೆ ದರ್ಜೆಯಲ್ಲಿ ನೋಡಲಾಗುತ್ತಿತ್ತು. ಆದರೆ ಕಂಪ್ಯೂಟರ್ ಗೇಮ್‌ ಮತ್ತು ಕಾಮಿಕ್ಸ್ ಉದ್ಯಮದಲ್ಲಿಯ ಬೆಳವಣಿಗೆಯಿಂದಾಗಿ, ಉಳಿದ ಎರಡು ಕಲೆಗಳಿಗಿಂತ ಹೆಚ್ಚಾದ ಮಾರುಕಟ್ಟೆ ಹಾಗೂ ಕಲಾಕೃತಿಗಿಂತ ಹೆಚ್ಚಿನ ಬೆಲೆಯನ್ನು ತಂದುಕೊಡುವಂತವಾಗಿ ಬೆಳವಣಿಗೆ ಹೊಂದಿದವು. ಅದರಲ್ಲೂ ಕೋರಿಯಾ, ಜಪಾನ್, ಹಾಂಕ್‌ಕಾಂಗ್‌ ಮತ್ತು ಯುಎಸ್‌ಎ‌ಯಲ್ಲಿ ಹೆಚ್ಚಿನ ಮಾರುಕಟ್ಟೆಯನ್ನು ಇವು ಪಡೆದುಕೊಂಡವು. ಉತ್ತಮ ಮಾರುಕಟ್ಟೆ ಹೊಂದಿರುವ ಮ್ಯಾಗಜಿನ್‌ಗಳ ಮೂಲ ದ್ರಷ್ಟಾಂತ ಕಲೆಯ ಕಲಾಕೃತಿಗಳು ಹರಾಜಿನಲ್ಲಿ ಸಾವಿರಾರು ಯುಎಸ್ ಡಾಲರ್‌ಗಳನ್ನು ತಂದುಕೊಡುವಂತವಾದವು. ನಾರ್ಮನ್‌ ರಾಕ್‌ವೆಲ್‌ನ ಕಲಾಕೃತಿಯು ಈ ಎಲ್ಲ ದಾಖಲೆಗಳನ್ನು ಮೀರಿ ಒಂದು ಹೆಜ್ಜೆ ಮುಂದೆ ಸಾಗುತ್ತದೆ. 2006ರಲ್ಲಿ ಈತನ ಬ್ರೆಕಿಂಗ್‌ ಹೋಮ್‌ ಟೈಸ್‌ ಎಂಬ್ ದ್ರಷ್ಟಾಂತ ಕಲಾಕೃತಿಯು ಸೋದ್‌ಬೀ ಹರಾಜಿನಲ್ಲಿ 15.4 ಮಿಲಿಯನ್ ಯುಎಸ್‌ಡಾಲರ್‌ಗೆ ಮಾರಾಟವಾಗುತ್ತದೆ.[೩] ಪ್ರಸಿದ್ದ ಕಲಾವಿದರಾದ ಗಿಲ್‌ ಎಲಿಗ್ರೆನ್ ಮತ್ತು ಅಲ್ಬರ್ಟೊ ವರ್ಗಾಸ್ ಕೂಡ ಹರಾಜಿನಲ್ಲಿ ಉತ್ತಮ ಬೆಲೆ ಪಡೆದ ಕಲಾವಿದರಾಗಿದ್ದಾರೆ. ಎಲೆಗ್ರಿನ್‌ನ ಹಲವಾರು ಕಲಾಕೃತಿಗಳು ಹೆರಿಟೇಜ್‌ ಹರಾಜಿನಲ್ಲಿ 100,000 ಯುಎಸ್‌ ಡಾಲರ್‌ಗೆ ಮಾರಾಟವಾದ ನಿದರ್ಶನಗಳಿವೆ.[೪]

ಇವನ್ನೂ ಗಮನಿಸಿ‌[ಬದಲಾಯಿಸಿ]

  • ಪ್ರಾಕ್ತನ ಶಾಸ್ತ್ರದ ದ್ರಷ್ಟಾಂತಗಳು
  • ಆರ್ಟ್ ಗ್ಯಾಲರಿ
  • ಪುಸ್ತಕ ದ್ರಷ್ಟಾಂತಗಳು
  • ಪರಿಕಲ್ಪನಾ ಕಲೆ
  • ಸಂವಹನ ವಿನ್ಯಾಸ
  • ಗ್ರಾಫಿಕ್ ಡಿಸೈನ್
  • ದ್ರಷ್ಟಾಂತ ಕಲಾವಿದರು
  • ಚಿತ್ರ ಬೆಳವಣಿಗೆ
  • ಮಾಹಿತಿ ಗ್ರಾಫಿಕ್ಸ್
  • ಪೋಸ್ಟರ್‌ಗಳು
  • ತಾಂತ್ರಿಕ ದ್ರಷ್ಟಾಂತ
  • ಟಾಪ್‌-ಲೆಫ್ಟ್ ಬೆಳಕು

ಉಲ್ಲೇಖಗಳು‌[ಬದಲಾಯಿಸಿ]

  1. ಇವಾನ್‌ ವೈಯೋಲಾ ಮತ್ತು ಮೈಸ್ಟರ್ ಇ. ಗ್ರಾಲರ್‌ (2005). "ಸ್ಮಾರ್ಟ್ ವಿಸಿಬಿಲಿಟಿ ಇನ್ ವಿಷ್ಯೂವಲೈಸೇಷನ್". : ಕಾಂಪ್ಯೂಟೇಷನಲ್ ಈಸ್ತೆಟಿಕ್ಸ್ ಇನ್ ಗ್ರಾಫಿಕ್ಸ್, ವಿಷ್ಯೂವಲೈಸೇಶನ್ ಆಂಡ್ ಇಮೇಜಿಂಗ್ . ಎಲ್‌.ನ್ಯೂಮನ್ et al. ಸಂಪಾದಕರು).
  2. Industriegrafik.com ಅಂತರ್ಜಾಲ ತಾಣ, ಕೊನೆಯದಾಗಿ ಬದಲಾವಣೆಗೊಂಡಿದ್ದು: ಜೂನ್ 15, 2002. ಪಡೆದುಕೊಂಡಿದ್ದು ಫೆಬ್ರುವರಿ 25, 2009.
  3. ನಾರ್ಮನ್ ರಾಕ್‌ವೆಲ್ಸ್ ರೈಸಿಂಗ್‌ ವ್ಯಾಲ್ಯೂ ಪ್ರೈಸಸ್ ಔಟ್ ಹಿಸ್ ಮ್ಯೂಸಿಯಮ್ ಜಾಕ್ ಬಿಸೊನೆಟ್‌, AOL ಡೈಲಿ ಫೈನಾನ್ಸ್, 2-22-10
  4. 7, 5