ಚರ್ಚೆಪುಟ:ಶ್ರೀಕಾಳಹಸ್ತಿ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀಕಾಳಹಸ್ತಿ ಎಂಬುದು ಪವಿತ್ರವಾದ ಪಟ್ಟಣವಾಗಿದ್ದು, ಭಾರತಆಂಧ್ರಪ್ರದೇಶ ರಾಜ್ಯದಲ್ಲಿರುವ ತಿರುಪತಿಯ ಹತ್ತಿರವಿರುವಂತಹ ಪುರಸಭೆಯಾಗಿದೆ. ಇದು ಸ್ವರ್ಣಮುಖಿ ನದಿತೀರದಲ್ಲಿದೆ. ಅಲ್ಲದೇ ಇದನ್ನು ಅನೌಪಚಾರಿಕವಾಗಿ ಮತ್ತು ತಪ್ಪಾಗಿ ಕಾಳಹಸ್ತಿ ಎಂದು ಕೂಡ ಕರೆಯಲಾಗುತ್ತದೆ.ಇತ್ತೀಚೆಗಷ್ಟೇ ಇದನ್ನು TUDA ( ತಿರುಪತಿ ನಗರಾಭಿವೃದ್ಧಿ ಪ್ರಾಧಿಕಾರ) ಪ್ರದೇಶಕ್ಕೆ ಸೇರಿಸಲಾಗಿದೆ. ದಕ್ಷಿಣ ಭಾರತದಲ್ಲಿರುವಂತಹ ಪ್ರಾಚೀನ ಶಿವನ ಕ್ಷೇತ್ರಗಳಲ್ಲಿ (ಶಿವನ ದೇವಾಲಯಗಳಲ್ಲಿ) ಇದು ಕೂಡ ಒಂದು ಪ್ರಮುಖ ಕ್ಷೇತ್ರವಾಗಿದೆ. ಶ್ರೀಕಾಳಹಸ್ತಿ ದೇವಾಲಯವು ನದಿ ತೀರದಿಂದ ಬೆಟ್ಟದ ತಳದ ವರೆಗೆ ಹರಡಿದೆ.ಅಲ್ಲದೇ ಇದು ದಕ್ಷಿಣ ಕೈಲಾಸವೆಂದು ಪ್ರಸಿದ್ಧವಾಗಿದೆ. ದೇವಾಲಯದಲ್ಲಿರುವ ಮೂರು ಎತ್ತರದ ಗೋಪುರಗಳು ಅವುಗಳ ವಾಸ್ತುಶಿಲ್ಪಕ್ಕಾಗಿ ಗಮನಾರ್ಹವಾಗಿವೆ. ಈ ದೇವಾಲಯವನ್ನು ವಿಜಯನಗರದ ಕೃಷ್ಣದೇವರಾಯ ರಾಜರ ಕಾಲದಲ್ಲಿ ಕಟ್ಟಲಾಗಿದೆ. ನೂರು ಕಂಬಗಳ ಬಹುದೊಡ್ಡ ಮಂಟಪವು ಈ ದೇವಾಲಯದ ಮತ್ತೊಂದು ಪ್ರಮುಖ ಗುಣಲಕ್ಷಣವಾಗಿದೆ.

ಇದು ಕೂಡ ಹಿಂದೂ ತೀರ್ಥಯಾತ್ರೆಗಳ ಸಾಲಿನಲ್ಲಿ ಸೇರಿಸಲಾದ ಒಂದು ಪ್ರಾಚೀನ ದೇವಾಲಯವಾಗಿದ್ದು , ಭವ್ಯವಾದ ಗೋಪುರಗಳನ್ನೊಳಗೊಂಡ ಪ್ರಸಿದ್ಧ ಶಿವನ ದೇವಾವಯವಿರುವ ಸ್ಥಳವಾಗಿದೆ. ಅಲ್ಲದೇ ಇದು ತಿರುಪತಿಯಲ್ಲಿರುವ ಅತ್ಯಂತ ಪ್ರಸಿದ್ಧವಾದ ಬೆಟ್ಟದ ಮೇಲಿನ ವೆಂಕಟೇಶ್ವರನ ದೇವಾಲಯಕ್ಕೆ ಅತ್ಯಂತ ಹತ್ತಿರವಿದೆ. ಪ್ರಪಂಚದ ಅತ್ಯಂತ ಶ್ರೀಮಂತ ಮತ್ತು ಪ್ರಸಿದ್ಧವಾದ ದೇವಾಲಯಗಳಿರುವ ನಗರಗಲಲ್ಲಿ ಇದು ಕೂಡ ಒಂದಾಗಿದೆ. ಅಷ್ಟೇ ಅಲ್ಲದೇ ಇದು ಕಲಂಕಾರಿ ಎಂದು ಕರೆಯಲಾಗುವ ಅತ್ಯಂತ ಪ್ರಸಿದ್ಧವಾದ ಜವಳಿ ಚಿತ್ರಕಲೆಯ ತವರೂರಾಗಿದೆ. ಆಂಧ್ರಪ್ರದೇಶದ ಚಿತ್ತೂರ್ ಜಿಲ್ಲೆಯಲ್ಲಿರುವ 500 ವರ್ಷ ಹಿಂದಿನ ಶ್ರೀಕಾಳಹಸ್ತಿ ದೇವಾಲಯದ 'ರಾಜಗೋಪುರ' ಅಥವಾ ಮುಖ್ಯಧ್ವಾರವು 2010 ರ ಮೇ 26 ರಂದು ಕುಸಿದು ಬಿತ್ತು. ಶ್ರೀಕಾಳಹಸ್ತಿಯನ್ನು ಹೆಚ್ಚಾಗಿ "ದಕ್ಷಿಣಕಾಶಿ" ಎಂದು ಕರೆಯಲಾಗುತ್ತದೆ.