ಮಾರಾಟ ತಂಡಗಳ ನಿರ್ವಹಣಾ ವ್ಯವಸ್ಥೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾರಾಟ ತಂಡಗಳ ನಿರ್ವಹಣಾ ವ್ಯವಸ್ಥೆಗಳು ಮಾರುಕಟ್ಟೆ ಮತ್ತು ನಿರ್ವಹಣೆಯಲ್ಲಿ ಬಳಸಿಕೊಳ್ಳಲ್ಪಡುವ ಮಾಹಿತಿ ವ್ಯವಸ್ಥೆಗಳಾಗಿವೆ. ಅವುಗಳು ಕೆಲವು ಮಾರಾಟಗಳು ಮತ್ತು ಮಾರಾಟ ತಂಡಗಳ ನಿರ್ವಹಣಾ ಕಾರ್ಯಗಳನ್ನು ಚಾಲ್ತಿಗೊಳಿಸಲು ಸಹಾಯಕವಾಗಿರುತ್ತವೆ. ಅವುಗಳು ಅನೇಕ ವೇಳೆ ಒಂದು ಮಾರುಕಟ್ಟೆ ಮಾಹಿತಿ ವ್ಯವಸ್ಥೆಯ ಜೊತೆಗೆ ಸಂಯೋಜಿಸಲ್ಪಡುತ್ತವೆ, ಅಂತಹ ಸಂದರ್ಭದಲ್ಲಿ ಅವುಗಳು ಅನೇಕ ವೇಳೆ ಗ್ರಾಹಕ ಸಂಬಂಧ ನಿರ್ವಹಣಾ (ಸಿಆರ್‌ಎಮ್) ವ್ಯವಸ್ಥೆಗಳು ಎಂದು ಕರೆಯಲ್ಪಡುತ್ತವೆ.

ಒಂದು ಮಾರಾಟ ತಂಡಗಳ ಯಾಂತ್ರೀಕೃತ ವ್ಯವಸ್ಥೆಯು (ಎಸ್‌ಎಫ್‌ಎ) , ವಿಶಿಷ್ಟವಾಗಿ ಒಂದು ಕಂಪನಿಯ ಗ್ರಾಹಕ ಸಂಬಂಧ ನಿರ್ವಹಣಾ ವ್ಯವಸ್ಥೆಯ ಒಂದು ಭಾಗವಾಗಿರುತ್ತದೆ. ಗ್ರಾಹಕ ಸಂಬಂಧ ನಿರ್ವಹಣಾ ವ್ಯವಸ್ಥೆಯು ಒಂದು ಮಾರಾಟ ಪ್ರಕ್ರಿಯೆಯಲ್ಲಿನ ಎಲ್ಲಾ ಹಂತಗಳನ್ನು ಸ್ವಯಂಚಾಲಿತವಾಗಿ (ಯಾಂತ್ರಿಕವಾಗಿ) ದಾಖಲು ಮಾಡುವ ಒಂದು ವ್ಯವಸ್ಥೆಯಾಗಿದೆ. ಎಸ್‌ಎಫ್‌ಎಯು ಒಂದು ಉದ್ದೇಶಿತ ಗ್ರಾಹಕನ ಜೊತೆಗೆ ಮಾಡಲ್ಪಟ್ಟ ಎಲ್ಲಾ ಸಂಪರ್ಕಗಳು, ಸಂಪರ್ಕದ ಉದ್ದೇಶ, ಮತ್ತು ಅವಶ್ಯಕವಾಗಿರುವ ಯಾವುದೇ ಅನುಸರಣೆಗಳನ್ನು ಗುರುತಿಸುವ ಒಂದು ಸಂಪರ್ಕ ನಿರ್ವಹಣಾ ವ್ಯವಸ್ಥೆಯನ್ನು ಒಳಗೊಳ್ಳುತ್ತದೆ. ಇದು ಮಾರಾಟ ಪ್ರಯತ್ನಗಳು ಪುನರಾವರ್ತನೆಯಾಗಿಲ್ಲ ಎಂಬುದನ್ನು ಖಾತ್ರಿಪಡಿಸುತ್ತದೆ ಮತ್ತು ಗ್ರಾಹಕರಿಗೆ ಕಿರಿಕಿರಿಯನ್ನುಂಟುಮಾಡುವ ಸಮಸ್ಯೆಯನ್ನು ಕಡಿಮೆಗೊಳಿಸುತ್ತದೆ. ಎಸ್‌ಎಫ್‌ಎ ಯು ಒಂದು ಮಾರಾಟ ನಿರ್ವಹಿತ ಪತ್ತೆಹಚ್ಚುವ ವ್ಯವಸ್ಥೆಯನ್ನೂ ಕೂಡ ಒಳಗೊಳ್ಳುತ್ತದೆ. ಈ ವ್ಯವಸ್ಥೆಯು ಪಾವತಿ ಮಾಡಿದ ಫೋನ್ ಯಾದಿಗಳು, ಅಥವಾ ಸಂಬಂಧಿತ ಉತ್ಪನ್ನಗಳ ಗ್ರಾಹಕರುಗಳ ಮೂಲಕ ಸಂಭವನೀಯ ಗ್ರಾಹಕರನ್ನು ಪಟ್ಟಿಮಾಡುತ್ತದೆ. ಒಂದು ಎಸ್‌ಎಫ್‌ಎ ವ್ಯವಸ್ಥೆಯ ಇತರ ಘಟಕಗಳು ಮಾರಾಟ ಮುಂದಾಲೋಚನೆ (ಅಂದಾಜು ಮಾಡುವಿಕೆ), ಆದೇಶಗಳ ನಿರ್ವಹಣೆ ಮತ್ತು ಉತ್ಪನ್ನಗಳ ಬಗ್ಗೆ ಜ್ಞಾನ ಮುಂತಾದವುಗಳನ್ನೂ ಒಳಗೊಳ್ಳುತ್ತದೆ. ಹೆಚ್ಚು ಸುಧಾರಿತ ಎಸ್‌ಎಫ್‌ಎ ವ್ಯವಸ್ಥೆಗಳು ಆನ್‍ಲೈನ್ ಉತ್ಪನ್ನ ನಿರ್ಮಾಣ ವ್ಯವಸ್ಥೆಗಳ ಮೂಲಕ ಗ್ರಾಹಕರು ತಮ್ಮ ಅವಶ್ಯಕತೆಗಳನ್ನು ಸಾಧಿಸುವುದಕ್ಕೆ ಉತ್ಪನ್ನಗಳ ಮಾದರಿಗಳನ್ನು ವಿವರಿಸುವ ಲಕ್ಷಣಗಳನ್ನು ಹೊಂದಿರುತ್ತವೆ. ಇದು ಆಟೋಮೊಬೈಲ್ ಉದ್ದಿಮೆಗಳಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತಿದೆ. ಅಲ್ಲಿ ಗ್ರಾಹಕರು ತಮ್ಮ ನೆಚ್ಚಿನ ವಾಹನಕ್ಕೆ ತಮ್ಮ ಇಷ್ಟಕ್ಕೆ ತಕ್ಕಂತೆ ಒಳಾವರಣವನ್ನು ಬದಲಾಯಿಸಿಕೊಳ್ಳಬಹುದಾಗಿದೆ. ಅಂದರೆ ಒಳಾವರಣದಲ್ಲಿಯ ಸೀಟ್‌ಗೆ ತಮ್ಮ ಇಷ್ಟದ ಬಣ್ಣದ ಲೆದರ್ ಸೀಟ್ ಕವರ್‌ಗಳನ್ನು ಹಾಕಿಸಿಕೊಳ್ಳಬಹುದಾಗಿದೆ.

ವಿಭಿನ್ನ ವಿಭಾಗಗಳ ನಡುವಣ ಏಕತೆಯನ್ನು ಸಾಧಿಸಲು ಸಹಾಯಕವಾಗುವುದು ಎಸ್‌ಎಫ್‌ಎ ವ್ಯವಸ್ಥೆಯ ಒಂದು ಮುಖ್ಯ ಭಾಗವಾಗಿರುತ್ತದೆ. ಎಸ್‌ಎಫ್‌ಎ ವ್ಯವಸ್ಥೆಗಳು ಅಳವಡಿಸಿಕೊಳ್ಳಲ್ಪಟ್ಟಿರದಿದ್ದರೆ ಮತ್ತು ಎಲ್ಲಾ ವಿಭಾಗಗಳಲ್ಲಿ ಸರಿಯಾಗಿ ಏಕೀಕರಣಗೊಳ್ಳಲ್ಪಟ್ಟಿರದಿದ್ದರೆ, ಅಲ್ಲಿ ಸಂವಹನ ಕೊರತೆಯುಂಟಾಗುತ್ತದೆ. ಅದು ವಿವಿಧ ವಿಭಾಗಗಳು ಒಬ್ಬನೇ ಗ್ರಾಹಕನನ್ನು ಒಂದೇ ಉದ್ದೇಶಕ್ಕಾಗಿ ಸಂಪರ್ಕಿಸುವ ಸಮಸ್ಯೆಗೆ ಕಾರಣವಾಗುತ್ತದೆ. ಈ ಸಮಸ್ಯೆಯನ್ನು ಮಿತಗೊಳಿಸುವುದಕ್ಕೆ ಗ್ರಾಹಕ ಸೇವಾ ನಿರ್ವಹಣೆಯ ಕಾರ್ಯದಲ್ಲಿ ತೊಡಗಿರುವ ಎಲ್ಲಾ ವಿಭಾಗಗಳಲ್ಲಿ ಎಸ್‌ಎಫ್‌ಎ ಪೂರ್ತಿಯಾಗಿ ಏಕೀಕರಣಗೊಳ್ಳಬೇಕು.

ಒಂದು ಸಕ್ರಿಯ ಮಾರಾಟ ತಂಡಗಳ ಸಂಪರ್ಕ ತಂತ್ರಗಾರಿಕೆಯನ್ನು ಮತ್ತು ಕಾರ್ಯಕಾರಿ ಕ್ರಿಯೆಗಳನ್ನು ಮಾಡುವುದು ಒಂದು ವಿಭಾಗದೊಳಗೆ ನಡೆಸಲ್ಪಡುತ್ತದೆ. ಎಸ್‌ಎಫ್‌ಎ ನಿರ್ಧಿಷ್ಟ ಸಂದರ್ಭಗಳಲ್ಲಿ ಉದ್ದೇಶ, ಯೋಜನೆ, ಬಜೆಟ್ ಮತ್ತು ನಿಯಂತ್ರಣಗಳ ಮೇಲೆ ಅವಲಂಬಿತವಾಗಿರುತ್ತದೆ. ಉದ್ದೇಶಗಳನ್ನು ಸರಿಯಾಗಿ ನಿರ್ವಹಿಸುವುದಕ್ಕೆ ನಿರ್ಧಿಷ್ಟ ಕಾರ್ಯವಿಧಾನಗಳು ಅನ್ವಯಿಸಲ್ಪಡಬೇಕು:

ಮಾರಾಟ ತಂಡಗಳ ನಿರ್ವಹಣಾ ಪ್ರಕ್ರಿಯೆಯ ವಿಭಾಗಗಳು[ಬದಲಾಯಿಸಿ]

  • ಮುಖ್ಯಸ್ಥನಾದವನು (ಮಾರಾಟ ನಿರ್ವಹಣಾಧಿಕಾರಿ) ಕಾರ್ಯಾಚರಣೆಯ ಉದ್ದೇಶಗಳನ್ನು ಸಾಧಿಸುವ ಹೊಣೆಗಾರಿಕೆಯನ್ನು ಹೊಂದಿರುತ್ತಾನೆ.
  • ಕಾರ್ಯಗಳು ಒಂದು ನೀಡಲ್ಪಟ್ಟ ಅವಧಿಯ ಒಳಗೆ ಸಾಧಿಸಲ್ಪಟ್ಟಿವೆ ಎಂಬುದನ್ನು ಖಾತ್ರಿಪಡಿಸುವುದಕ್ಕೆ ಮಾರಾಟ ತಂಡಗಳ ನಿಯಂತ್ರಣಾ ಪ್ರಕ್ರಿಯೆಗಳು.
  • ಕಾರ್ಯಾಚರಣೆಯು ಒಂದು ನೀಡಲ್ಪಟ್ಟ ನಿರ್ಬಂಧಿತ ಮಿತಿಯ ಒಳಗೆ (ಗ್ರಾಹಕರು ಮತ್ತು/ಅಥವಾ ಮಾರುಕಟ್ಟೆಗಳು) ಪೂರ್ಣಗೊಳ್ಳಬೇಕು.
  • ಅನಿರ್ಧಿಷ್ಟ ಸಂದರ್ಭಗಳಲ್ಲಿ ಕಾರ್ಯಾಚರಣೆಯನ್ನು ಪೂರ್ಣಗೊಳಿಸುವುದಕ್ಕೆ ವ್ಯವಸ್ಥೆಯು ಸರಿಯಾಗಿ ನಿರ್ವಹಿಸಲ್ಪಡಬೇಕು
  • ಮಾರಾಟ ತಂಡಗಳ ಆದೇಶ ಕೇಂದ್ರ

ಈ ಪ್ರಕ್ರಿಯೆಯು ಒಂದು ನಿರ್ಧಿಷ್ಟ ಮಾರಾಟ ಉದ್ದೇಶವನ್ನು ಸಾಧಿಸುವುದರ ಕಾರ್ಯಾಚರಣೆಯ ಜೊತೆಗಿನಿಂದ ಪ್ರಾರಂಭವಾಗಲ್ಪಡುತ್ತದೆ. ಆದೇಶ ಕೇಂದ್ರವು ನೇರವಾಗಿ ನಿಯಂತ್ರಣಾ ಪ್ರಕ್ರಿಯೆಯಿಂದ ಮತ್ತು ಮಾರಾಟ ತಂಡಗಳಿಂದ ಸ್ಥಾಪಿತವಾಗಲ್ಪಟ್ಟ ಮೂಲವಸ್ತುಗಳು ಮತ್ತು ಉತ್ಪನ್ನಗಳನ್ನು ವಿಶ್ಲೇಷಣೆ ಮಾಡುವುದರ ಮೂಲಕ ನೇರವಾಗಿ ಸಂಪರ್ಕ ಕಲ್ಪಿಸಲ್ಪಡುತ್ತದೆ. ನಿಯಂತ್ರಣಾ ಪ್ರಕ್ರಿಯೆಯು ಕಾರ್ಯನಿರ್ವಹಣೆಯ ಮಾನದಂಡಗಳು, ವಾಸ್ತವಿಕ ಕಾರ್ಯಾಚರಣೆಯನ್ನು ಮಾಪನ ಮಾಡುವುದು ಮುಂತಾದವುಗಳನ್ನು ಸ್ಥಾಪಿಸುವುದಕ್ಕೆ ಅನುವು ಮಾಡಿಕೊಡುತ್ತದೆ. ಅದು ಮಾಪನ ಮಾಡಲ್ಪಟ್ಟ ಕಾರ್ಯನಿರ್ವಹಣೆಯನ್ನು ಈ ಮುಂಚಿತವಾಗಿಯೇ ಸ್ಥಾಪಿತಗೊಳ್ಳಲ್ಪಟ್ಟ ಮಾನದಂಡಗಳ ಜೊತೆಗೆ ತುಲನೆ ಮಾಡಿ ನೋಡುತ್ತದೆ ಮತ್ತು ಅವಶ್ಯವಾದಲ್ಲಿ ಸರಿಪಡಿಸುವ ಕಾರ್ಯಗಳನ್ನು ಕೈಗೊಳ್ಳುತ್ತದೆ. ಮಾರಾಟ ನಿರ್ವಹಣಾಧಿಕಾರಿಗಳು ಎಲ್ಲಾ ಪ್ರಕ್ರಿಯೆಗಳ ಮೇಲೆ ಆಧಾರಿತವಾಗಿ ತಮ್ಮ ಕಾರ್ಯಗಳನ್ನು ಸರಿಹೊಂದಿಸಿಕೊಳ್ಳುತ್ತಾರೆ. ಪ್ರಕ್ರಿಯೆಗಳು ದೋಷಪೂರಿತವಾಗಿ ಅನ್ವಯಿಸಲ್ಪಟ್ಟರೆ ಅವುಗಳು ನಿರ್ಲಕ್ಷಿಸಲ್ಪಡುತ್ತವೆ ಮತ್ತು ಸೀನಿಯರ್ ನಿರ್ವಹಣೆಗೆ ಪ್ರಕ್ರಿಯೆಯನ್ನು ಪುನಃಚಾಲನೆಗೆ ತರುವುದಕ್ಕೆ ಹೆಚ್ಚಿನ ಸಮಯವನ್ನು ನೀಡಲಾಗುತ್ತದೆ. ಮಾರಾಟ ಅಧಿಕಾರಿಗಳು ಪ್ರಕ್ರಿಯೆಯನ್ನು ಸರಿಯಾಗಿ ನಿರ್ವಹಿಸಿದರೆ ಕಾರ್ಯನಿರ್ವಹಣೆಯು ಕಾರ್ಯಾಚರಣೆಯ ಒಟ್ಟಾರೆ ಉದ್ದೇಶಗಳನ್ನು ಸಾಧಿಸುತ್ತದೆ.

ನಿಯಂತ್ರಣಾ ಪ್ರಕ್ರಿಯೆಯ ಹೊರತಾಗಿ, ಈ ಕೆಳಗಿನ ವಿಧಾನಗಳು ಅನ್ವಯಿಸಲ್ಪಡುತ್ತವೆ:

  • ಸಮಯದ ನಿರ್ವಹಣೆ - ಇದು ಕಾರ್ಯಗಳು ಮತ್ತು ಪ್ರತಿ ಕಾರ್ಯದ ಪೂರ್ಣಗೊಳಿಸುವಿಕೆಗೆ ತೆಗೆದುಕೊಳ್ಳಲ್ಪಟ್ಟ ಸಮಯವನ್ನು ನಿರ್ದಿಷ್ಟವಾಗಿ ಮಾಪನ ಮಾಡುತ್ತದೆ.
  • ಕರೆಯ ನಿರ್ವಹಣೆ - ಗ್ರಾಹಕರ ಜೊತೆಗಿನ ಸಂಪರ್ಕದ ಯೋಜನೆಯು ಆದೇಶ ಕೇಂದ್ರಗಳ ಪುನರಾವರ್ತನೆಯ ಪ್ರತಿಶತಗಳನ್ನು ಗಣನೆಗೆ ತೆಗೆದುಕೊಳ್ಳುತ್ತವೆ, ಅದು ಪ್ರಕ್ರಿಯೆಯ ಜೊತೆಗೆ ಅನುವರ್ತಿಸುತ್ತದೆ ಮತ್ತು ಯಶಸ್ವಿ ಕರೆಗಳಿಗೆ ಕಾರಣವಾಗುತ್ತದೆ.
  • ಸಂಭವನೀಯತೆಯ ನಿರ್ವಹಣೆ - ಪ್ರಕ್ರಿಯೆಯು ಸರಿಯಾಗಿ ನಿರ್ವಹಿಸಲ್ಪಟ್ಟರೆ ನಂತರದಲ್ಲಿ ನೀವು ಒಂದು ಮಾರಾಟದ ಸಂಭವನೀಯತೆಯನ್ನು ಹೊಂದಬಹುದಾಗಿದೆ. ಆದೇಶ ಕೇಂದ್ರಗಳ ಪುನರಾವರ್ತನೆಗಳ ಪ್ರತಿಶತವು ಸಾಧನಗಳ ಬಳಕೆ, ಪ್ರಕ್ರಿಯೆಯ ಜೊತೆಗೆ ಅನುವರ್ತನೆ, ಮತ್ತು ಉದ್ದೇಶಗಳ ಸಾಧನೆ ಈ ಎಲ್ಲವನ್ನು ಮಾಪನ ಮಾಡುತ್ತದೆ.
  • ಅಕೌಂಟ್ ನಿರ್ವಹಣೆ - ಒಬ್ಬ ಗ್ರಾಹಕನ ಜೊತೆಗಿನ ಬಹುವಿಧದ ಅವಕಾಶಗಳಿಗಾಗಿ ಅಕೌಂಟ್ ಸಾಧನಗಳು, ಪ್ರಕ್ರಿಯೆಗಳು, ಮತ್ತು ಉದ್ದೇಶಗಳ ಮೂಲಕ ಮಾಪನ ಮಾಡಲ್ಪಡುತ್ತದೆ.
  • ವಾಣಿಜ್ಯಕ್ಷೆತ್ರ ನಿರ್ವಹಣೆ- ಅಕೌಂಟ್ ಅನ್ನು ನಿರ್ವಹಿಸುವುದಕ್ಕೆ ವಾಣಿಜ್ಯಕ್ಷೇತ್ರವು ಸದಸ್ಯತ್ವ ಸಂಖ್ಯೆಗಳ ಪುನರಾವರ್ತನೆ ಮತ್ತು ಕ್ರಿಯಾಶೀಲ ಗ್ರಾಹಕರ ವಿರುದ್ಧ ಸಂಭವನೀಯ ಗ್ರಾಹಕರ ಸಂಖ್ಯೆಗಳನ್ನು ಮಾಪನ ಮಾಡುತ್ತದೆ.
  • ಮಾರಾಟ ತಂಡಗಳ ನಿರ್ವಹಣೆ- ಪ್ರಕ್ರಿಯೆಯು ಹಲವಾರು ಜನರು ಮತ್ತು ವಿಭಾಗಗಳ ನಡುವೆ ಹಂಚಿಕೊಳ್ಳಲ್ಪಡುತ್ತದೆ. ಪ್ರಕ್ರಿಯೆಯು ತರಬೇತಿ, ಐಟಿ (ಇನ್‌ಫಾರ್ಮೆಷನ್ ಟೆಕ್ನಲೊಜಿ, ಮಾಹಿತಿ ತಂತ್ರಜ್ಞಾನ) ವ್ಯವಸ್ಥೆಗಳು, ನಿಯಂತ್ರಣ, ಮತ್ತು ಸಜ್ಜುಗೊಳಿಸುವಿಕೆಯನ್ನು ಒಳಗೊಳ್ಳುತ್ತದೆ.

ಮಾರಾಟ ತಂಡಗಳ ಯಾಂತ್ರೀಕರಣ ವ್ಯವಸ್ಥೆಯ ಘಟಕಗಳು[ಬದಲಾಯಿಸಿ]

ಮಾರಾಟ ತಂಡಗಳ ಯಾಂತ್ರೀಕರಣ ವ್ಯವಸ್ಥೆಯನ್ನು ಗಮನಿಸಿದಾಗ ಎಲ್ಲವೂ ಸಮನಾಗಿ ಸೃಷ್ಟಿಯಾಗಿಲ್ಲ ಎಂಬುದು ಕಂಡುಬರುತ್ತದೆ. ಇದೊಂದು ರೀತಿಯಾಗಿ ಹೊಸ ಕಾರನ್ನು ಆಯ್ಕೆ ಮಾಡಿದಂತೆ. ಸಂಸ್ಥೆಯು ಯಾವ ಮಾಹಿತಿಯನ್ನು ಎದುರು ನೋಡುತ್ತಿದೆ ಎಂಬುದನ್ನು ಅವಲಂಬಿಸಿ ವ್ಯವಸ್ಥೆಯು ಭಿನ್ನವಾಗಿರಬಹುದು. ಸೂಚನೆಯು ಈ ಅಪ್ಲಿಕೇಶನ್ ಮೇಲೆ ಆಧಾರಿತವಾಗಿದೆ. ಅದರ ಗಾತ್ರ, ಸಂಸ್ಥೆಯ ರೋಲ್‌ಅಪ್, ಹೊಸದಾದ ವ್ಯವಸ್ಥೆಗೆ ಬೇಡಿಕೆ, ಮಾರಾಟ ಪ್ರಕ್ರಿಯೆ, ಮತ್ತು ಬಳಕೆದಾರರ ಸಂಖ್ಯೆ.

ನೀವು ಏನನ್ನು ಬಯಸುತ್ತಿರಿ ಎಂಬುದರ ಮೇಲೆ ಇದು ಅವಲಂಬಿಸಿರುತ್ತದೆ.ಸೇವೆಗಳು ಎರಡು ಪ್ರಕಾರಗಳಲ್ಲಿ ಬರುತ್ತವೆ: ಆನ್ ಪ್ರಿಮೈಸ್ ಸಾಫ್ಟ್‌ವೇರ್ ಮತ್ತು ಆನ್ ಡಿಮಾಂಡ್ ಸಾಫ್ಟ್‌ವೇರ್. ಆನ್ ಪ್ರಿಮೈಸ್ ಸಾಫ್ಟ್‌ವೇರ್‌ನೊಂದಿಗೆ, ಗ್ರಾಹಕರ ನಿರ್ವಹಣೆ ಮತ್ತು ಅಪ್ಲಿಕೇಶನ್‌ನ ಖರೀದಿ . ಗ್ರಾಹಕರು ಏನನ್ನು ಅಪೇಕ್ಷಿಸುತ್ತಿದ್ದಾರೆ ಎಂಬುದನ್ನು ಅವಲಂಬಿಸಿ ಆನ್ ಪ್ರಿಮೈಸ್‌ ಸಾಫ್ಟ್‌ವೇರ್ ಕೆಲವೊಂದು ಅನುಕೂಲತೆಗಳನ್ನು ಮತ್ತು ಅನಾನುಕೂಲತೆಗಳನ್ನು ಹೊಂದಿದೆ. ಆನ್ ಪ್ರಿಮೈಸ್‌ನ ಅನಾನುಕೂಲತೆ ಯಾವುದೆಂದರೆ ಸಾಫ್ಟ್‌ವೇ‍ರ್‌ನ ದುಬಾರಿ ವೆಚ್ಚದ ಜೊತೆಗೆ ಅದರ ನಿರ್ವಹಣೆ. ನಿರ್ಧಿಷ್ಟ ಪರಿಹಾರದ ಹೊರತಾಗಿ ಕೆಲವೊಬ್ಬರು ಹೆಚ್ಚುವರಿ ಕಾರ್ಯವಿಧಾನವನ್ನು ಬಳಸಿಕೊಂಡು ಗ್ರಾಹಕೀಯಗೊಳಿಸುವುದು ಕೂಡ ಅವಶ್ಯಕವಾಗಿದೆ. ಸಮಯ ಕೂಡ ಒಂದು ಅಂಶವಾಗಿದೆ. ಹಲವಾರು ಆನ್ ಪ್ರಿಮೈಸ್ ಸಾಫ್ಟ್‌ವೇರ್‌ಗಳನ್ನು ಅಳವಡಿಕೆಯಾಗಲು ತುಂಬಾ ದೀರ್ಘಕಾಲ ತೆಗೆದುಕೊಳ್ಳುವುದರ ಜೊತೆಗೆ ಹಲವಾರು ಪರೀಕ್ಷಾತ್ಮಕ ಮತ್ತು ತರಬೇತಿ ಕಾಲವನ್ನು ತೆಗೆದುಕೊಳ್ಳುತ್ತವೆ. ಒಟ್ಟಾರೆಯಾಗಿ ಆನ್ ಪ್ರಿಮೈಸ್ ಸಾಫ್ಟ್‌ವೇರ್ ಅನುಕೂಲತೆಗಳು ಹೂಡಿದ ಬಂಡವಾಳ ಹಿಂದಿರುಗಿ ಬರುವುದನ್ನು ನಿರೀಕ್ಷಿಸುತ್ತದೆ. ಮೂರರಿಂದ ನಾಲ್ಕು ವರ್ಷಗಳ ಕಾಲ ಈ ಅಪ್ಲಿಕೇಶನ್ ಅನ್ನು ಬಳಸುವ ಉದ್ದೇಶವಿದ್ದರೆ ಇದರ ದರ ಕಡಿಮೆ ಆಗಬಹುದಾಗಿದೆ. ಮಾಹಿತಿಯ ಮೊತ್ತ ಅವಲಂಬಿಸಿ ಇನ್ನೊಂದು ರೀತಿಯ ಅನುಕೂಲತೆ ಉಂಟಾಗಬಹುದು. ಬೇಡಿಕೆಯ ಮೇಲೆ ನೀವು ಕೆಲವೊಂದು ಪರಿಮಾಣದ ನಿರ್ಬಂಧ ಹೇರಬಹುದು, ಆದರೆ ನಿಮ್ಮ ಸ್ಥಳೀಯ ಹಾರ್ಡ್‌ವೇರ್ ಮಾಹಿತಿ ಸಂಗ್ರಹಿಸಿಡುವ ಗಾತ್ರವನ್ನವಲಂಬಿಸಿ ಆನ್ ಪ್ರಿಮೈಸ್‌ನೊಂದಿಗೆ ನಿಮ್ಮ ಮಾಹಿತಿ ನಿರ್ಬಂಧವಿರುತ್ತದೆ. ಇನ್ನೊಂದು ಪ್ರಕಾರದಲ್ಲಿ ಆನ್ ಡಿಮಾಂಡ್ ಅಳವಡಿಸಲು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ, ಕಡಿಮೆ ವೆಚ್ಚವಾಗುತ್ತದೆ ಮತ್ತು ಗ್ರಾಹಕರ ಅವಶ್ಯಕತೆಗೆ ತಕ್ಕಂತೆ ಮಾರ್ಪಡಿಸಬಹುದು.

ಮಾರಾಟ ತಂಡಗಳ ಯಾಂತ್ರೀಕರಣ ವ್ಯವಸ್ಥೆ ಒಳಗೊಂಡಿರುವ ಪ್ರಮುಖ ಸ್ಪರ್ಧಿಗಳು: 1. ಒರಾಕಲ್ ಸಿಬೆಲ್ 2. ಸೇಲ್ಸ್‌ಪೋರ್ಸ್.ಕಾಮ್ 3. ಮೈಕ್ರೋಸಾಫ್ಟ್ ಡೈನಾಮಿಕ್ಸ್ 4. ಒರಾಕಲ್ ಇಬಿಎಸ್(ಇ-ಬಿಜಿನೆಸ್ ಸೂಟ್) 5. ಪೀಪಲ್‌ಸಾಫ್ಟ್

ಮುಕ್ತ ಮೂಲದ ಮಾರಾಟ ತಂಡಗಳ ನಿರ್ವಹಣಾ ವ್ಯವಸ್ಥೆ[ಬದಲಾಯಿಸಿ]

ಮಾರುಕಟ್ಟೆಯ ಹೊರಗೆ ಹಲವಾರು ಎಸ್‍ಎಫ್‌‍ಎ ತಂತ್ರಾಂಶಗಳು ದೊರೆಯುತ್ತವೆ. ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯಾಪಾರ ಮಾಡುವವರು ಮತ್ತು ವೈಯಕ್ತಿಕವಾಗಿ ಬಳಕೆದಾರರು ಎಸ್‌ಎಫ್‌ಎ ಮುಕ್ತ ಮಾಹಿತಿ, ಆನ್‌ಲೈನ್ ಅಥವಾ ಕ್ಲೌಡ್ ಎಸ್‌ಎಫ್‌ಎ ತಂತ್ರಾಂಶಗಳನ್ನು ಮತ್ತು ಪರವಾನಿಗೆ ಹೊಂದಿದ ಎಸ್‌ಎಫ್‌ಎ ಸಾಫ್ಟ್‌ವೇರ್ ಪರಿಹಾರವನ್ನು ಆಯ್ಕೆಮಾಡಿ ಬಳಸಿಕೊಳ್ಳಬಹುದು. ಅನ್ವಯಿಕಗಳಿಗೆ ಗಮನ ನೀಡದೆ ಮುಕ್ತ ಮಾಹಿತಿ ಪರಿಹಾರವು ವರ್ಷಗಳಿಂದಿಚೆಗೆ ತುಂಬಾ ಪ್ರಸಿದ್ಧವಾಗಿದೆ. ಈ ಕೆಳಗೆ ಮಾರಾಟ ತಂಡಗಳ ಯಾಂತ್ರೀಕರಣ ವ್ಯವಸ್ಥೆಗೆ ಲಭ್ಯವಿರುವ ಮುಕ್ತ ಮಾಹಿತಿ ಪರಿಹಾರಗಳ ಪಟ್ಟಿ ನೀಡಲಾಗಿದೆ.

SugarCRM Inc. [೧] Archived 2010-11-16 ವೇಬ್ಯಾಕ್ ಮೆಷಿನ್ ನಲ್ಲಿ.2004ರಲ್ಲಿ ಜಾನ್ ರಾಬರ್ಟ್ಸ್ Archived 2010-11-16 ವೇಬ್ಯಾಕ್ ಮೆಷಿನ್ ನಲ್ಲಿ.‌ ಕ್ಲೈಂಟ್ ಆರಮ್ ಮತ್ತು ಜಾಕೊಬ್ ಟೇಲರ್‌ರಿಂದ ಸ್ಥಾಪಿಸಲ್ಪಟ್ಟಿತು, ಶುಗರ್ ಮುಕ್ತ ಮಾಹಿತಿ ಕೋಡ್‌ನ್ನು ಮೂರು ಮಿಲಿಯನ್‌ಗಿಂತ ಹೆಚ್ಚು ಬಾರಿ ಡೌನ್‌ಲೋಡ್ ಮಾಡಲಾಗಿದೆ. ಕಂಪನಿಯು $26 ಮಿಲಿಯನ್ ಬಂಡವಾಳ Archived 2010-11-16 ವೇಬ್ಯಾಕ್ ಮೆಷಿನ್ ನಲ್ಲಿ. ವನ್ನು ಪಡೆದುಕೊಂಡಿತು ಮತ್ತು ನೂರಕ್ಕಿಂತ ಹೆಚ್ಚಿನ ಜನ ಉದ್ಯೋಗಿಗಳನ್ನು ಹೊಂದಿದೆ. ಪ್ರಮುಖ ಕಂಪನಿಗಳಾದ ಹನಿವೆಲ್, ಸ್ಟಾರ್‌ಬಕ್ಸ್ ಮುಂತಾದವುಗಳು SugarCrm ಅಪ್ಲಿಕೇಶನ್ ಬಳಸಿಕೊಳ್ಳುತ್ತಿವೆ. ಸೆಂಟ್ರಿಕ್‌ಸಿಆರ್‌ಎಂ Archived 2010-11-08 ವೇಬ್ಯಾಕ್ ಮೆಷಿನ್ ನಲ್ಲಿ.(ಕಾನ್‌ಕರ್ಸಿವ್) ತುಂಬಾ ಸಮಯದಿಂದ ಮಾರುಕಟ್ಟೆಯಲ್ಲಿದ್ದು ಸ್ಥಿರತೆಯನ್ನು ಕಾಯ್ದುಕೊಂಡಿದೆ. ಕಂಪನಿಯು ಇಂಟೆಲ್ ಕಾರ್ಪೋರೇಶನ್‌ನ ಇಂಟೆಲ್ ಕ್ಯಾಪಿಟಲ್‌ನಿಂದ ಬಂಡವಾಳವನ್ನು ಪಡೆದುಕೊಂಡಿದೆ. ಸೆಂಟ್ರಿಕ್‌ಸಿಆರ್‌ಎಂನ ಹೆಚ್ಚು ಕಡಿಮೆ ಎಲ್ಲಾ ಮುಕ್ತ ಮೂಲ ಸಾಫ್ಟ್‌ವೇರ್‌ಗಳು ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳನ್ನು ಗುರಿಯಾಗಿರಿಸಿಕೊಂಡಿವೆ. ಈ ಪಟ್ಟಿಯಲ್ಲಿ ಒಳಗೊಂಡಿರುವ ಮುಕ್ತ ಮೂಲ ಪರಿಹಾರಗಳು : ಸ್ಪ್ಲೆಂಡಿಡ್‌ಸಿಆರ್‌ಎಂ Archived 2021-08-16 ವೇಬ್ಯಾಕ್ ಮೆಷಿನ್ ನಲ್ಲಿ. ಸಾಫ್ಟ್‌ವೇರ್ ಇನ್‌ಕಾರ್ಪೊರೇಶನ್ಸ್, ಹೈಪರ್‌ಗೇಟ್, ಕಂಪಾಯರ್ ಇನ್‌ಕಾರ್ಪೊರೇಶನ್, ವಿಟೈಗರ್ ಸಿಆರ್‌ಎಂ, ಸೆಂಟ್ರಾವ್ಯೂ ಇನ್‌ಕಾರ್ಪೊರೇಶನ್, ಎಕ್ಸ್‌ಆರ್‌ಎಂಎಸ್ ಸಿಆರ್‌ಎಂ, ಕ್ರೀಮ್ ಸಿಆರ್‌ಎಂ, ಟಸ್ಟೆನಾ Archived 2008-11-21 ವೇಬ್ಯಾಕ್ ಮೆಷಿನ್ ನಲ್ಲಿ. ಸಿಆರ್‌ಎಂ, ಇತ್ಯಾದಿ.

ಮೊಬೈಲ್ ಮಾರಾಟ ತಂಡಗಳ ಸ್ವಯಂಚಾಲನತ್ವದ (ಯಾಂತ್ರೀಕರಣದ) ಅನ್ವಯಿಕೆ[ಬದಲಾಯಿಸಿ]

ಹಲವಾರು ಸಂಖ್ಯೆಯ ಮಾರಾಟ ನಿರ್ವಾಹಕರು ಯಾವಾಗಲೂ ಕೂಡ ಚಾಲ್ತಿಯಲ್ಲಿರುತ್ತಾರೆ. ಸ್ಮಾರ್ಟ್‌ಫೋನ್‌ಗಳ ವಿಸ್ತರಣೆಯು ಮೊಬೈಲ್ ಮಾರಾಟ ತಂಡಗಳ ಸ್ವಯಂಚಾಲನತ್ವ ವ್ಯವಸ್ಥೆಗಳ ನಿರ್ಮಾಣವನ್ನು ಪುನಃಪ್ರಾರಂಭಿಸಿತು. ಹೊಸ ಸಾಮರ್ಥ್ಯಗಳನ್ನು ಅಳವಡಿಸಿಕೊಳ್ಳುವುದಕ್ಕೆ ವ್ಯಾಪಕವಾದ ಪರೀಕ್ಷೆಗಳು ಅವಶ್ಯಕವಾಗಿರುತ್ತವೆ ಎಂಬುದನ್ನು ಹೆಚ್ಚಿನ ಕಂಪನಿಗಳ ಐಟಿ (ಇನ್‌ಕಮ್ ಟ್ಯಾಕ್ಸ್, ಆಯಕರ ವಿಭಾಗ) ವಿಭಾಗಗಳು ಅರಿತುಕೊಂಡಿವೆ. ಅಂತಹ ಒಂದು ಹೊಸ ಉತ್ಪನ್ನವನ್ನು ಪರೀಕ್ಷಿಸುವುದಕ್ಕೆ ಬೇಕಾದ ಸಮಯದ ಹೊರತಾಗಿಯೂ, ಇದು ಮಾರಾಟ (ಕ್ರಯ) ವಿಭಾಗಕ್ಕೆ ಭವಿಷ್ಯದಲ್ಲಿ ಉತ್ತಮ ವ್ಯವಸ್ಥೆಯನ್ನು ಒದಗಿಸುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಸ್ಮಾರ್ಟ್‌ಫೋನ್ ಇದು ಮಾರಾಟ ವಿಭಾಗ (ಸೇಲ್ಸ್‌ಪೀಪಲ್) ಮನವಿ ಮಾಡುತ್ತದೆ, ಮಾರಾಟ ವಿಭಾಗ ಇದು ಹೊಸ ತಾಂತ್ರಿಕತೆಯ ಅಳವಡಿಕೆಗೆ ತೀವ್ರವಾಗಿ ಪ್ರತಿರೋಧಕವಾಗಿರುವ ಕಂಪನಿಯ ಒಂದು ವಿಭಾಗವಾಗಿದೆ. ಸ್ಮಾರ್ಟ್‌ಫೋನ್‌ಗಳು ಸಾಗಿಸಲು ಸುಲಭವಾಗಿರುತ್ತವೆ ಮತ್ತು ಬಳಸಲು ಸುಲಭವಾಗಿರುತ್ತವೆ, ಅತ್ಯುತ್ತಮ ಇಂಟರ್‌ಫೇಸ್ ವಿನ್ಯಾಸ, 4ಜಿ ಮತ್ತು 3ಜಿ ಫೋನ್‌ಗಳಂತೆ ಟಚ್‌ಸ್ಕ್ರೀನ್‌ಗಳನ್ನು ಮತ್ತು ವೇಗವಾದ ವೈರ್‌ಲೆಸ್ ನೆಟ್‌ವರ್ಕ್ (ಸಂಪರ್ಕಜಾಲ) ಸಾಮರ್ಥ್ಯಗಳನ್ನು ಹೊಂದಿರುತ್ತವೆ. 55% ಕ್ಕೂ ಹೆಚ್ಚಿನ ಜಾಗತಿಕ 2000 ಸಂಸ್ಥೆಗಳು[ಶಾಶ್ವತವಾಗಿ ಮಡಿದ ಕೊಂಡಿ] 2011 ರ ವೇಳೆಗೆ ಮೊಬೈಲ್ ಎಸ್‌ಎಫ್‌ಎ ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತವೆ ಮತ್ತು ಹೊಸತಾದ ಸ್ಮಾರ್ಟ್‌ಫೋನ್ ಪ್ಲ್ಯಾಟ್‌ಫಾರ್ಮ್‌ಗಳು, ಅಂದರೆ ಆಪಲ್‌ನ ಒಎಸ್‌ಎಕ್ಸ್ ಮತ್ತು ಗೂಗಲ್‌ನ ಆಂಡ್ರೊಯ್ಡ್‌ಗಳು, ಸಾಧನಗಳ ಆಯ್ಕೆ ಮಾಡಿಕೊಳ್ಳುವಿಕೆ ಮತ್ತು ಮಾರಾಟ ತಂಡಗಳ ಬೆಂಬಲದಲ್ಲಿ ಹೆಚ್ಚುತ್ತಿರುವ ಬಹುರೂಪತೆಯ ಒಂದು ಭವಿಷ್ಯವನ್ನು ತೋರಿಸುತ್ತವೆ. ಮೊಬೈಲ್ ಮಾರಾಟ ತಂಡಗಳ ಸ್ವಯಂಚಾಲನತ್ವದ ಅನ್ವಯಿಕೆಯನ್ನು ಆಚರಣೆಗೆ ತರುವಾಗ ಅಥವಾ ಸಿಸ್ಟಮ್‌ಗಳ ಬೆಳವಣಿಗೆಯ ಚಕ್ರದ ಮೊದಲ ಹಂತದ ಸಮಯದಲ್ಲಿ, ಯೋಜನೆಗಳ ತಂಡಗಳು ಸ್ಮಾರ್ಟ್‌ಫೋನ್‌ಗಳ ಸಾಧನಗಳು, ಸಾಫ್ಟ್‌ವೇರ್ ಮತ್ತು ಬೆಂಬಲ ಸೌಕರ್ಯಗಳನ್ನು ಒಳಗೊಂಡ ಸೊಲ್ಯುಷನ್‌ಗಳು ಎಷ್ಟು ನಿರೀಕ್ಷಿತವಾಗಿವೆ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ ಮತ್ತು ಅತ್ಯುತ್ತಮ ಸಿಸ್ಟಮ್ ಬಳಕೆ, ನಿರ್ವಹಣೆ ಮತ್ತು ಇಂಟಿಗ್ರೇಟಿವ್ ಸಾಮರ್ಥ್ಯಗಳು, ಹಾಗೆಯೇ ಹೆಚ್ಚಿನ ಆರೋಹ್ಯತೆ, ವಿಶ್ವಸಾರ್ಹತೆ ಮತ್ತು ಕಾರ್ಯನಿರ್ವಹಣೆಯನ್ನು ನಿರ್ವಹಿಸುವುದಕ್ಕೆ ಕ್ಯಾರಿಯರ್ ಸೇವೆಗಳು ಅವಶ್ಯಕವಾಗಿರುತ್ತವೆ. ಯಾವುದೇ ಹೊಸ ತಂತ್ರಗಾರಿಕೆಯಂತೆ, ಯಶಸ್ಸು ಬಳಕೆಯ ಜೊತೆಗೆ ಬರುತ್ತದೆ ಎಂಬುದನ್ನು ತಿಳಿದಿರುವುದು ಯಾವತ್ತಿಗೂ ಕೂಡ ಒಳ್ಳೆಯದು.

ಸೇಲ್ಸ್‌ಫೋರ್ಸ್.ಕಾಮ್ ಮೊಬೈಲ್ ಸಿಆರ್‌ಎಮ್[ಬದಲಾಯಿಸಿ]

ಸೇಲ್ಸ್‌ಫೋರ್ಸ್.ಕಾಮ್ ಮೊಬೈಲ್ ಎಸ್‌ಎಫ್‌ಎ ಜೊತೆಗೆ ಮಾರಾಟಗಾರರು ಒಂದು ಲಾಗಿನ್ ಐಡಿ, ಒಂದು ವೈರ್‌ಲೆಸ್ ಸಂಪರ್ಕ, ಇಂಟರ್‌ನೆಟ್ ಬ್ರೌಸರ್ ಮತ್ತು ಸೇಲ್ಸ್‌ಫೋರ್ಸ್.ಕಾಮ್ ಮೇಲಿನ ಎಸ್‌ಎಫ್‍ಎ‌ಗೆ ಸಂಪರ್ಕಿಸುವುದಕ್ಕೆ ಯಾವುದೇ ಮೊಬೈಲ್ ಸಾಧನ ಇವು ಅವಶ್ಯಕವಾಗಿರುತ್ತವೆ. ಇದು ತುಂಬಾ ಸುಲಭವಾಗಿರುತ್ತದೆ ಏಕೆಂದರೆ ಗುಂಪಿನಲ್ಲಿ ಸೇವೆಗಳು ಸೇಲ್ಸ್‌ಫೋರ್ಸ್.ಕಾಮ್ ಮೂಲಕ ಪೂರೈಸಲ್ಪಡುತ್ತವೆ. ಅಪ್ಲಿಕೇಷನ್ ಮಾರಾಟಗಾರರಿಗೆ ಎಲ್ಲಿಯಾದರೂ ಕೂಡ ಕೇಸ್ ನಿರ್ವಹಣೆ, ಅವರ ಗ್ರಾಹಕರ ಸುರಕ್ಷೆ, ಮೊಬೈಲ್ ಸೇವಾ ವಿಶ್ಲೇಷಣಾ ಸಾಧನಗಳ ಬಳಕೆ, ಈಮೇಲ್‌ಗಳನ್ನು ಕಳಿಸುವುದು ಮತ್ತು ಗ್ರಾಹಕರ ಜೊತೆಗೆ ಮಾತುಕತೆ ಮುಂತಾದವುಗಳನ್ನು ಒದಗಿಸುತ್ತದೆ.

ಮಾರುಕಟ್ಟೆ ನಿರ್ವಾಹಕರಿ‌ಗೆ ದೊರಕುವ ಉಪಯೋಗಗಳು[ಬದಲಾಯಿಸಿ]

  • ನಿಮ್ಮ ಉದ್ದಿಮೆಯ ಆರ್ಥಿಕ ವಿನ್ಯಾಸವನ್ನು ಅರಿತುಕೊಳ್ಳುವುದು
  • ನಿಮ್ಮ ಮಾರುಕಟ್ಟೆಯ ಒಳಗಿನ ವಿಭಾಗಗಳನ್ನು ಗುರುತಿಸುವುದು
  • ನಿಮ್ಮ ಉದ್ದೇಶ ಮಾರುಕಟ್ಟೆಯನ್ನು ಗುರುತಿಸುವುದು
  • ಆ ಸ್ಥಳದಲ್ಲಿನ ನಿಮ್ಮ ಅತ್ಯುತ್ತಮ ಗ್ರಾಹಕರನ್ನು ಗುರುತಿಸುವುದು
  • ನಿಮ್ಮ ಪ್ರಮುಖ ಗ್ರಾಹಕರ ವ್ಯಕ್ತಿಚಿತ್ರವನ್ನು (ಜನಸಂಖ್ಯಾಶಾಸ್ತ್ರದ, ಸೈಕೊಗ್ರಾಫಿಕ್ ಮತ್ತು ನಡುವಳಿಕೆಯ) ಬೆಳೆಸುವುದಕ್ಕೆ ಮಾರುಕಟ್ಟೆ ಸಂಶೋಧನೆಯನ್ನು ಮಾಡುವುದು
  • ನಿಮ್ಮ ಪ್ರತಿಸ್ಪರ್ಧಿಗಳನ್ನು ಮತ್ತು ಅವರ ಉತ್ಪನ್ನಗಳನ್ನು ಅರಿತುಕೊಳ್ಳುವುದು
  • ಹೊಸ ಉತ್ಪನ್ನಗಳನ್ನು ಅಭಿವೃದ್ಧಿಗೊಳಿಸುವುದು
  • ಅವಕಾಶಗಳನ್ನು ಮತ್ತು ಸಮಸ್ಯೆಗಳನ್ನು ಕಂಡುಹಿಡಿಯುವುದಕ್ಕೆ ವಾತಾವರಣದ ಸಂಶೋಧನಾ ತಂತ್ರಗಾರಿಕೆಯನ್ನು ಸ್ಥಾಪಿಸುವುದು
  • ನಿಮ್ಮ ಕಂಪನಿಯ ಶಕ್ತಿ ಮತ್ತು ಬಲಹೀನತೆಗಳನ್ನು ಅರಿತುಕೊಳ್ಳುವುದು
  • ನಿಮ್ಮ ಬ್ರ್ಯಾಂಡ್‌ನಲ್ಲಿ ನಿಮ್ಮ ಗ್ರಾಹಕರ ಅನುಭವಗಳನ್ನು ಪರಿಶೋಧಿಸುವುದು
  • ಬೆಲೆ, ಉತ್ಪನ್ನ, ವಿತರಣೆ, ಮತ್ತು ಪ್ರಚಾರಗಳ ಮಾರ್ಕೆಟಿಂಗ್ ಮಿಕ್ಸ್ (ಮಾರುಕಟ್ಟೆ ಮಿಶ್ರಣ) ವೇರಿಯೇಬಲ್ ಅನ್ನು ಬಳಸಿಕೊಂಡು ನಿಮ್ಮ ಪ್ರತಿ ಉತ್ಪನ್ನಗಳಿಗೆ ಮಾರುಕಟ್ಟೆ ತಂತ್ರಗಾರಿಕೆಗಳನ್ನು ಅಭಿವೃದ್ಧಿಗೊಳಿಸುವುದು
  • ಪ್ರಮೋಷನಲ್ ಮಿಕ್ಸ್‌ನ (ಪ್ರಚಾರ ಮಿಶ್ರಣ) (ಅಂದರೆ ಜಾಹೀರಾತು ನೀಡುವಿಕೆ, ಮಾರಾಟ ಪ್ರಚಾರ, ಸಾರ್ವಜನಿಕ ಸೌಹಾರ್ದತೆ, ಮತ್ತು ಪ್ರಚಾರ ಕಾರ್ಯ) ಇತರ ಭಾಗಗಳ ಜೊತೆಗೆ ಸಂಬಂಧವನ್ನು ಕಲ್ಪಿಸುವುದು
  • ಒಂದು ಸಮರ್ಥ ಸ್ಪರ್ಧಾತ್ಮಕ ಲಾಭವನ್ನು ಸೃಷ್ಟಿಸುವುದು
  • ನೀವು ಭವಿಷ್ಯದಲ್ಲಿ ನಿಮ್ಮ ಬ್ರ್ಯಾಂಡ್‌ಗಳು ಎಲ್ಲಿರಬೇಕೆಂದು ಬಯಸುತ್ತೀರಿ ಎಂಬುದನ್ನು ಅರಿತುಕೊಳ್ಳುವುದು, ಮತ್ತು ಆ ಸ್ಥಾನವನ್ನು ತಲುಪುವುದಕ್ಕೆ ಸಹಾಯ ಮಾಡುವುದಕ್ಕೆ ನಿಯಮಿತ ಆಧಾರದಲ್ಲಿ ಮಾರುಕಟ್ಟೆ ಯೋಜನೆಗಳನ್ನು ಬರೆಯುವುದಕ್ಕೆ ಪ್ರಾಯೋಗಿಕ ಆಧಾರಗಳನ್ನು ದೊರಕಿಸುವುದು
  • ಫೀಡ್‌ಬ್ಯಾಕ್ ವ್ಯವಸ್ಥೆಗಳಿಗೆ ಕಾರ್ಯವಿಧಾನಗಳನ್ನು ನಿರ್ವಹಣೆ ಮಾಡುವುದಕ್ಕೆ ಮತ್ತು ಸರಿಹೊಂದಿಸುವುದಕ್ಕೆ ಸಹಾಯ ಮಾಡುವುದಕ್ಕೆ ಬೇಕಾದ ಸಾಮಗ್ರಿಗಳನ್ನು ಒದಗಿಸುವುದು

ತಂತ್ರಕೌಶಲ್ಯ ಉಪಯೋಗಗಳು[ಬದಲಾಯಿಸಿ]

ಮಾರಾಟ ತಂಡಗಳ ಸ್ವಯಂಚಾಲನತ್ವ ವ್ಯವಸ್ಥೆಗಳು ಸ್ಪರ್ಧಾತ್ಮಕ ಉಪಯೋಗಗಳನ್ನು ಸೃಷ್ಟಿಸುತ್ತವೆ:

  • ಮೇಲೆ ಉಲ್ಲೇಖಿಸಿದಂತೆ ಉತ್ಪಾದಕತೆಯು ಹೆಚ್ಚುತ್ತದೆ. ಮಾರಾಟ ಸಿಬ್ಬಂದಿ ಅವರ ಸಮಯವನ್ನು ಹೆಚ್ಚು ಸಮರ್ಥವಾಗಿ ಮತ್ತು ಹೆಚ್ಚು ಸಮರ್ಪಕವಾಗಿ ಬಳಸಿಕೊಳ್ಳುತ್ತಾರೆ. ಮಾರಾಟ ನಿರ್ವಾಹಕನೂ ಸಮರ್ಥ ಮತ್ತು ಹೆಚ್ಚು ಸಮರ್ಪಕವಾಗುತ್ತಾನೆ.(ಮೇಲೆ ನೋಡಿ) ಹೆಚ್ಚಿದ ಉತ್ಪಾದಕತೆಯ ಸ್ಪರ್ಧಾತ್ಮಕ ಉಪಯೋಗಗಳನ್ನು ಮೂರು ರೀತಿಯಲ್ಲಿ ಸೃಷ್ಠಿಸುತ್ತದೆ: ಇದು ಬೆಲೆಯನ್ನು ಕಡಿಮೆಗೊಳಿಸಬಹುದು, ಇದು ಮಾರಾಟದ ಆದಾಯವನ್ನು ಹೆಚ್ಚಿಸಬಹುದಾಗಿದೆ, ಮತ್ತು ಮಾರುಕಟ್ಟೆಯ ಷೇರನ್ನು ಹೆಚ್ಚಿಸಬಹುದಾಗಿದೆ.
  • ಕ್ಷೇತ್ರದಲ್ಲಿ ಮಾರಾಟ ಮಾಡುವ ಸಿಬ್ಬಂದಿ ತಮ್ಮ ಮಾಹಿತಿಯನ್ನು ಹೆಚ್ಚು ಕಳುಹಿಸಬಹುದು. ಪ್ರತಿಯೊಂದು ಮಾರಾಟದ ಕರೆಯ ನಂತರ ಮಾಹಿತಿಯನ್ನು ನಿರ್ವಹಣಾ ಮಂಡಳಿ ಕಳುಹಿಸಲು ಸಾಧ್ಯವಾಗುತ್ತದೆ (ವಾರಕ್ಕೊಮ್ಮೆ ಕಳುಹಿಸುವ ಬದಲು). ಇದು ಪ್ರಸ್ತುತ ಮಾಹಿತಿಯನ್ನು ನಿರ್ವಹಣಾ ಮಂಡಳಿಗೆ ನೀಡುತ್ತದೆ, ಮತ್ತು ಮಾಹಿತಿಯನ್ನು ಸಕಾಲದಲ್ಲಿ ಬಳಸಲು ಸಹಾಯಕವಾಗುತ್ತದೆ. ಮಂಡಳಿಯ ಪ್ರತಿಕ್ರಿಯಾ ಸಮಯವು ಕಡಿಮೆಯಾಗುತ್ತದೆ. ಕಂಪನಿಯು ಹೆಚ್ಚು ಎಚ್ಚರದಿಂದಿರುತ್ತದೆ ಮತ್ತು ವೇಗವಾಗಿರುತ್ತದೆ.
  • ಹೆಚ್ಚಿನ ತಿಳಿವಳಿಕೆಯಿಂದ ಬಳಸಿದರೆ ಈ ವ್ಯವಸ್ಥೆಗಳು ಗ್ರಾಹಕರ ತೃಪ್ತಿಯನ್ನು ಹೆಚ್ಚಿಸುತ್ತದೆ. ಮಹಿತಿಯನ್ನು ಪಡೆದರೆ ಮತ್ತು ವ್ಯವಸ್ಥೆಯೊಂದಿಗೆ ವಿಶ್ಲೇಷಿಸಿದಾಗ ಗ್ರಾಹಕನ ನಿರೀಕ್ಷೆಗೆ ಸಮನಾದ ಅಥವಾ ಮೀರಿದ ಉತ್ಪನ್ನವನ್ನು ನೀಡಲು ಸಾಧ್ಯವಾಗುತ್ತದೆ, ಮತ್ತು ಮಾರಾಟ ಸಿಬ್ಬಂದಿ ವ್ಯವಸ್ಥೆಯನ್ನು ಗ್ರಾಹಕರಿಗೆ ಹೆಚ್ಚು ಪರಿಣಿತರಾಗಿ ಮತ್ತು ದೃಢಪ್ರಯತ್ನದಿಂದ ಸೇವೆಯನ್ನೊದಗಿಸಲು ಸಹಾಯಕವಾಗುತ್ತದೆ, ಗ್ರಾಹಕರು ಕಂಪನಿಯೊಂದಿಗೆ ತೃಪ್ತಿಯಿಂದಿರಬೇಕಾಗುತ್ತದೆ. ಇದು ಸ್ಪರ್ಧಾತ್ಮಕ ಉಪಯೋಗಗಳನ್ನೊದಗಿಸಬಲ್ಲುದಾಗಿದೆ, ಏಕೆಂದರೆ ಗ್ರಾಹಕರ ತೃಪ್ತಿಯು ಗ್ರಾಹಕರ ನಂಬಿಕೆಯನ್ನು ಹೆಚ್ಚಿಸುತ್ತದೆ, ಹೊಸ ಗ್ರಾಹಕರ ಗಳಿಕೆಯ ಬೆಲೆಯನ್ನು ಕಡಿಮೆ ಮಾಡುತ್ತದೆ, ಉತ್ಪನ್ನದ ಬೆಲೆಯನ್ನು ಕಡಿಮೆ ಮಾಡುವ ಒತ್ತಡವು ಕಡಿಮಯಾಗುತ್ತದೆ, ಲಾಭದ ಮಿತಿಯನ್ನು ಹೆಚ್ಚಿಸುತ್ತದೆ.

ಅನಾನುಕೂಲಗಳು[ಬದಲಾಯಿಸಿ]

ಲಾಘವಕಾರಿಗಳ ಪ್ರಕಾರ ನಿರ್ವಹಣಾ ವ್ಯವಸ್ಥೆಯೆಂದರೆ:

  • ಅದರೊಂದಿಗೆ ಕಲಸ ಮಾಡಲು ಕಷ್ಟಕರವಾದುದು
  • ದತ್ತಾಂಶಗಳೊಂದಿಗೆ ಹೆಚ್ಚಿನ ಕೆಲಸವನ್ನು ಬಯಸುವಂತಹುದು
  • ಮಾನವ ಮಾಡಬೇಕಾದ ಕೆಲಸವನ್ನು ಯಾಂತ್ರೀಕರಿಸುತ್ತದೆ
  • ನಿರಂತರವಾದ ನಿರ್ವಹಣೆ, ಮಾಹಿತಿಯನ್ನು ನವೀಕರಿಸುವುದು ಮತ್ತು ವ್ಯವಸ್ಥೆಯನ್ನು ನವೀಕರಿಸುವುದನ್ನು ಬಯಸುತ್ತದೆ
  • ದುಬಾರಿ
  • ಇತರ ನಿರ್ವಹಣಾ ಮಾಹಿತಿ ವ್ಯವಸ್ಥೆಗಳೊಂದಿಗೆ ಒಗ್ಗೂಡಲು ಕಷ್ಟಕರವಾಗಿರುತ್ತದೆ

ಉತ್ತೇಜಪೂರ್ವಕ ಬಳಕೆ[ಬದಲಾಯಿಸಿ]

ಮೇಲೆ ಹೇಳಿದ ಎಲ್ಲಾ ಕಾರಣಗಳಿಗಾಗಿ ಅನೇಕ ಸಂಸ್ಥೆಗಳು ಮಾಹಿತಿಯನ್ನು ಒದಗಿಸುವಂತೆ ಮಾರಾಟಗಾರರ ಮನವೊಲಿಸುವುದು ಕಷ್ಟಕರವೆಂದು ಭಾವಿಸುತ್ತವೆ. ಈ ಕಾರಣಕ್ಕಾಗಿ ಅನೇಕರು ಬಂಡವಾಳದ ಮೌಲ್ಯದ ಬಗ್ಗೆ ಪ್ರಶ್ನಿಸುತ್ತಾರೆ. ಆಧುನಿಕ ಬೆಳವಣಿಗೆಗಳು ಮಾರಾಟ ಪ್ರಕ್ರಿಯೆಯನ್ನೊಳಗೊಂಡಿರುತ್ತದೆ, ಸಿಆರ್‌ಎಮ್‌ ಪರದೆಯೊಳಗೆ ಮಾರಾಟಗಾರನಿಗೆ ಒಂದಿಷ್ಟನ್ನು ಹಿಂದಿರುಗಿಸುತ್ತದೆ. ಏಕೆಂದರೆ ಈ ವ್ಯವಸ್ಥೆಯು ಸಿಆರ್‌ಎಮ್‌ನ್ನು ಬಳಸಲು ಕಾರಣವನ್ನು ನೀಡಲು ಮಾರಾಟಗಾರನ ಯೋಜನೆಗೆ ಮತ್ತು ಮರಾಟವನ್ನು ಅತ್ಯಂತ ಪರಿಣಾಮಕಾರಿಯಾಗಿ ರಚಿಸಲು ಸಹಕರಿಸುತ್ತದೆ.

ಇವನ್ನೂ ಗಮನಿಸಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  • Jordan, Jason (2009). Sales Management Best Practices: Six Essential Processes. Manage Smart.
  • A Framework for Evaluating Sales Force Automation Functionality. Gartner. 2008. G00158560.
  • Commonly Deployed CRM Applications by Large Consultants and System Integrators in 2009. Gartner. 2010. G00206045.
  • Darmon, Rene 'Y (2007). Introduction to the Dynamic Sales Force Management Process. Cambridge University Press. ISBN 9780521848343.
  • Haag, Stephen (2006). Management Information Systems for the Information Age (Third Canadian Edition ed.). Canada: McGraw-Hill Ryerson. pp. 50 & 176–177. ISBN 0-07-095569-7. {{cite book}}: |edition= has extra text (help); Unknown parameter |coauthors= ignored (|author= suggested) (help)