ವ್ಯಾಪಾರ ಪ್ರಕ್ರಿಯೆ
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (September 2010) |
ಒಂದು ವ್ಯಾಪಾರ ಪ್ರಕ್ರಿಯೆ ಅಥವಾ ವ್ಯಾಪಾರ ವಿಧಾನ ವು ಸಂಬಂಧಿಸಿದ ರಚನೆಯುಳ್ಳ ಚಟುವಟಿಕೆಗಳು ಅಥವಾ ಕಾರ್ಯಗಳ ಸಂಗ್ರಹವಾಗಿದೆ. ನಿರ್ದಿಷ್ಟ ಸೇವೆ ಅಥವಾ ಉತ್ಪನ್ನವನ್ನು (ನಿರ್ದಿಷ್ಟ ಉದ್ದೇಶವನ್ನು ಪೂರೈಸುತ್ತವೆ) ಒಬ್ಬ ನಿರ್ದಿಷ್ಟ ಗ್ರಾಹಕ ಅಥವಾ ಗ್ರಾಹಕರಿಗೆ ಅದು ಉತ್ಪಾದಿಸಿಕೊಡುತ್ತದೆ. ಇದನ್ನು ಸಾಮಾನ್ಯವಾಗಿ ಚಟುವಟಿಕೆಗಳ ಒಂದು ಅನುಕ್ರಮ ಗತಿನಕ್ಷೆಯ ಮೂಲಕ ವೀಕ್ಷಿಸಬಹುದು.
ಸ್ಥೂಲ ಸಮೀಕ್ಷೆ
[ಬದಲಾಯಿಸಿ]ವ್ಯಾಪಾರ ಪ್ರಕ್ರಿಯೆಗಳಲ್ಲಿ ಮೂರು ಮಾದರಿಗಳಿವೆ:
- ನಿರ್ವಹಣಾ ಪ್ರಕ್ರಿಯೆಗಳು, ಈ ಪ್ರಕ್ರಿಯೆಯು ಒಂದು ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ನಿಯಂತ್ರಿಸುತ್ತದೆ. ಒಂದು ಮಾದರಿಯ ನಿರ್ವಹಣಾ ಪ್ರಕ್ರಿಯೆಗಳು "ಸಂಸ್ಥೆಯ ಆಡಳಿತ " ಹಾಗು "ವ್ಯವಹಾರ ಕೌಶಲದ ನಿರ್ವಹಣೆ"ಯನ್ನು ಒಳಗೊಂಡಿರುತ್ತದೆ.
- ಕಾರ್ಯನಿರ್ವಹಣೆ ಪ್ರಕ್ರಿಯೆಗಳು, ಈ ಪ್ರಕ್ರಿಯೆಯು ಮುಖ್ಯ ವ್ಯಾಪಾರವನ್ನು ಒಳಗೊಂಡಿರುವುದರ ಜೊತೆಗೆ ಪ್ರಾಥಮಿಕ ಮೌಲ್ಯ ಧಾರೆಯನ್ನು ಸೃಷ್ಟಿಸುತ್ತದೆ. ಒಂದು ಮಾದರಿಯ ಕಾರ್ಯನಿರ್ವಹಣೆ ಪ್ರಕ್ರಿಯೆಗಳೆಂದರೆ ಖರೀದಿ, ಉತ್ಪಾದನೆ, ಮಾರಾಟಗಾರಿಕೆ ಹಾಗು ವ್ಯಾಪಾರ.
- ಸಹಾಯಕ ಪ್ರಕ್ರಿಯೆಗಳು, ಇದು ವ್ಯಾಪಾರದ ಮುಖ್ಯ ಪ್ರಕ್ರಿಯೆಗಳಿಗೆ ಸಹಾಯಕವಾಗಿದೆ. ಉದಾಹರಣೆಗೆ ಲೆಕ್ಕಪತ್ರ, ಸಿಬ್ಬಂದಿ ನೇಮಕ, ತಾಂತ್ರಿಕ ನೆರವು.
ಒಂದು ವ್ಯಾಪಾರ ಪ್ರಕ್ರಿಯೆಯು ಒಂದು ಕಾರ್ಯಭಾರದ ಉದ್ದೇಶದೊಂದಿಗೆ ಆರಂಭಗೊಂಡು ವ್ಯಾಪಾರ ಉದ್ದೇಶದ ಸಾಧನೆಯೊಂದಿಗೆ ಕೊನೆಗೊಳ್ಳುತ್ತದೆ. ಪ್ರಕ್ರಿಯೆ-ಆಧಾರಿತ ಸಂಸ್ಥೆಗಳು ವ್ಯವಸ್ಥಿತ ವಿಭಾಗಗಳ ನಿರ್ಬಂಧಗಳನ್ನು ಉಪೇಕ್ಷಿಸುವುದರ ಜೊತೆಗೆ ಕ್ರಿಯಾತ್ಮಕ ಸಿಲೋಗಳನ್ನು ತಡೆಗಟ್ಟಲು ಪ್ರಯತ್ನಿಸುತ್ತವೆ.
ಒಂದು ವ್ಯಾಪಾರ ಪ್ರಕ್ರಿಯೆಯನ್ನು ಹಲವಾರು ಉಪ ಪ್ರಕ್ರಿಯೆಗಳಾಗಿ ಪ್ರತ್ಯೇಕಿಸಬಹುದು, ಇವುಗಳು ತಮ್ಮದೇ ಆದ ವೈಶಿಷ್ಟ್ಯತೆಗಳನ್ನು ಹೊಂದಿರುತ್ತವೆ, ಆದರೆ ಉತ್ತಮ ಪ್ರಕ್ರಿಯೆಯ ಉದ್ದೇಶವನ್ನು ಸಾಧಿಸುವಲ್ಲಿಯೂ ಸಹ ಕೊಡುಗೆಯನ್ನು ನೀಡುತ್ತವೆ. ವ್ಯಾಪಾರ ಪ್ರಕ್ರಿಯೆಗಳ ಒಂದು ಮಾದರಿಯ ವಿಶ್ಲೇಷಣೆಯು ಪ್ರಕ್ರಿಯೆಗಳ ಮಾಪನ ಹಾಗು ಚಟುವಟಿಕೆಗಳ ಮಟ್ಟದವರೆಗಿನ ಉಪ ಪ್ರಕ್ರಿಯೆಗಳನ್ನು ಒಳಗೊಂಡಿರುತ್ತವೆ.
ವ್ಯಾಪಾರ ಪ್ರಕ್ರಿಯೆಗಳನ್ನು ಗ್ರಾಹಕರಿಗೆ ಮೌಲ್ಯವರ್ಧನೆ ನೀಡಲು ರೂಪಿಸಲಾಗಿರುತ್ತದೆ ಜೊತೆಗೆ ಇದು ಅನವಶ್ಯಕ ಚಟುವಟಿಕೆಗಳನ್ನು ಒಳಗೊಂಡಿರಬಾರದು. ಉತ್ತಮವಾಗಿ ರೂಪಿತವಾದ ಒಂದು ವ್ಯಾಪಾರ ಪ್ರಕ್ರಿಯೆಯ ಪರಿಣಾಮವೆಂದರೆ ಹೆಚ್ಚಿನ ಪರಿಣಾಮಕಾರಿತ್ವ (ಗ್ರಾಹಕರಿಗೆ ಹೆಚ್ಚಿನ ಮೌಲ್ಯ) ಹಾಗು ಹೆಚ್ಚಿನ ಕಾರ್ಯದಕ್ಷತೆ (ಸಂಸ್ಥೆಗೆ ತಗಲುವ ಕಡಿಮೆ ವೆಚ್ಚ).
ವ್ಯಾಪಾರ ಪ್ರಕ್ರಿಯೆಗಳನ್ನು ಒಂದು ದೊಡ್ಡ ಸಂಖ್ಯೆಯ ವಿಧಾನಗಳು ಹಾಗು ಕೌಶಲಗಳ ಮೂಲಕ ನಿರೂಪಿಸಬಹುದಾಗಿದೆ. ಉದಾಹರಣೆಗೆ, ವ್ಯಾಪಾರ ಪ್ರಕ್ರಿಯೆ ಮಾದರಿ ತಯಾರಿಕೆ ಅಂಕನ ಪದ್ಧತಿ(ಬಿಸಿನೆಸ್ ಪ್ರೋಸೆಸ್ ಮಾಡೆಲಿಂಗ್ ನೊಟೇಷನ್)ಎಂಬುದು ಒಂದು ವ್ಯಾಪಾರ ಪ್ರಕ್ರಿಯೆ ಮಾದರಿ ತಯಾರಿಕೆ ತಂತ್ರವಾಗಿದೆ. ಇದನ್ನು ಒಂದು ಕೆಲಸದಗತಿಯಲ್ಲಿ ವ್ಯಾಪಾರ ಪ್ರಕ್ರಿಯೆಗಳನ್ನು ಚಿತ್ರಿಸಲು ಬಳಸಲಾಗುತ್ತದೆ.
ಇತಿಹಾಸ
[ಬದಲಾಯಿಸಿ]ಆಡಮ್ ಸ್ಮಿತ್
[ಬದಲಾಯಿಸಿ]ಪ್ರಕ್ರಿಯೆಗಳ ಬಗ್ಗೆ ವಿವರಣೆ ನೀಡಿದ ವ್ಯಕ್ತಿಗಳಲ್ಲಿ ಆಡಮ್ ಸ್ಮಿತ್ ಮೊದಲಿಗರು. ಇವರು ತಮ್ಮ ಪ್ರಸಿದ್ಧ (1776) ಪಿನ್ ಕಾರ್ಖಾನೆಯ ಉದಾಹರಣೆ ನೀಡುತ್ತಾರೆ. ಡಿಡೆರೋಟ್ ರ ಎನ್ಸೈಕ್ಲೋಪೆಡಿಯೇ ನಲ್ಲಿ ಪ್ರಕಟಗೊಂಡ ಒಂದು ಲೇಖನದಿಂದ ಉತ್ತೇಜಿತರಾದ ಸ್ಮಿತ್, ಪಿನ್ ನ ಉತ್ಪಾದನೆಯನ್ನು ಈ ರೀತಿಯಾಗಿ ವಿವರಿಸುತ್ತಾರೆ:
"ಒಬ್ಬ ವ್ಯಕ್ತಿಯು ತಂತಿಯನ್ನು ಎಳೆಯುತ್ತಾನೆ, ಮತ್ತೊಬ್ಬ ಅದನ್ನು ನೇರ ಮಾಡುತ್ತಾನೆ, ಮೂರನೆಯವನು ಅದನ್ನು ತುಂಡರಿಸಿದರೆ, ನಾಲ್ಕನೆಯವನ್ನು ತುದಿಯನ್ನು ಬಲಪಡಿಸುತ್ತಾನೆ, ಐದನೆಯವನು ಅದಕ್ಕೆ ಮೇಲ್ಭಾಗದಲ್ಲಿ ತಲೆ ನೀಡುವುದಕ್ಕಾಗಿ ಉಜ್ಜಿ ನಯಮಾಡುತ್ತಾನೆ: ಪಿನ್ ನ ತಲೆ ಭಾಗವನ್ನು ರೂಪಿಸಲು ಎರಡು ಅಥವಾ ಮೂರು ವಿಶಿಷ್ಟ ಕ್ರಿಯೆಗಳ ಅಗತ್ಯವಿರುತ್ತದೆ: ಅದಕ್ಕೆ ಆಕಾರ ನೀಡುವುದು ಒಂದು ನಿರ್ದಿಷ್ಟವಾದ ವ್ಯಾಪಾರ, ಪಿನ್ ನ್ನು ಬಿಳಿದಾಗಿಸುವುದು ಮತ್ತೊಂದು ಪ್ರಕ್ರಿಯೆ...ಈ ರೀತಿಯಾಗಿ ಪಿನ್ ತಯಾರಿಕೆಯ ಪ್ರಮುಖ ವ್ಯಾಪಾರವು ಸುಮಾರು ಹದಿನೆಂಟು ವಿಶಿಷ್ಟ ಕ್ರಿಯೆಗಳಾಗಿ ವಿಭಜನೆಯಾಗಿರುತ್ತದೆ. ಈ ಎಲ್ಲ ತಯಾರಿಕಾ ವಿಧಾನಗಳನ್ನು ಕೆಲವು ಕಾರ್ಖಾನೆಗಳಲ್ಲಿ ಭಿನ್ನ ಕೈಗಳಲ್ಲಿ ನಿರ್ವಹಿಸಲಾಗುತ್ತದೆ. ಆದಾಗ್ಯೂ ಕೆಲವು ಕಾರ್ಖಾನೆಗಳಲ್ಲಿ ಒಬ್ಬನೇ ವ್ಯಕ್ತಿ ಕೆಲವೊಂದು ಬಾರಿ ಈ ಪ್ರಕ್ರಿಯೆಯ ಎರಡು ಅಥವಾ ಮೂರು ಕ್ರಿಯೆಗಳನ್ನು ನಿರ್ವಹಿಸುತ್ತಾನೆ."
ಶ್ರಮ ವಿಭಜನೆ ಮೂಲಕ ಹೇಗೆ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳಬಹುದೆಂದೂ ಸಹ ಸ್ಮಿತ್ ಮೊದಲ ಬಾರಿಗೆ ಗುರುತಿಸಿದರು. ಹಿಂದೆಲ್ಲ,ಉತ್ಪಾದನೆಯು ಕರಕುಶಲ ವಸ್ತುಗಳಿಂದ ಪ್ರಾಬಲ್ಯ ಪಡೆಯುತ್ತಿದ್ದವು. ಉತ್ಪಾದನಾ ಪ್ರಕ್ರಿಯೆಯಲ್ಲಿ ಒಬ್ಬನೇ ವ್ಯಕ್ತಿಯು ಅಗತ್ಯವಾದ ಎಲ್ಲ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದ. ಸ್ಮಿತ್, ಈ ಕ್ರಿಯೆಗಳನ್ನು ಸರಳ ಕೆಲಸಗಳಾಗಿ ಹೇಗೆ ವಿಭಜನೆ ಮಾಡಿಕೊಳ್ಳಬಹುದೆಂದು ವಿವರಿಸುತ್ತಾರೆ. ಆಯಾ ವಿಭಾಗದಲ್ಲಿ ನುರಿತ ಕೆಲಸಗಾರರು ಇದನ್ನು ಕೈಗೊಳ್ಳಬಹುದು. ಸ್ಮಿತ್ ನೀಡಿದ ಶ್ರಮ ವಿಭಜನಾ ಉದಾಹರಣೆಯ ಫಲವಾಗಿ ಶೇಕಡಾ 24,000ದಷ್ಟು(ಉಲ್ಲೇಖಿತ) ಉತ್ಪಾದನೆ ಹೆಚ್ಚಳ ಕಂಡುಬಂತು. ಶ್ರಮ ವಿಭಜನೆ ಪರಿಚಯಕ್ಕೆ ಮುಂಚೆ ಉತ್ಪಾದಿಸುತ್ತಿದ್ದ ಪಿನ್ಗಳಿಗಿಂತ 240 ಪಟ್ಟು ಅಧಿಕ ಪಿನ್ಗಳನ್ನು ಅಷ್ಟೇ ಸಂಖ್ಯೆಯ ನೌಕರರು ಉತ್ಪಾದಿಸಿದರು.
ಯಾವುದೇ ಬೆಲೆಗೆ ಹಾಗು ಸ್ವತಃ (ಪರ್ ಸೆ) ಶ್ರಮ ವಿಭಜನೆಯನ್ನು ಮಾಡಬೇಕೆಂದು ಸ್ಮಿತ್ ಸಲಹೆ ಮಾಡಿರಲಿಲ್ಲವೆಂದು ಇಲ್ಲಿ ಗಮನಿಸಬೇಕು. ಕೆಲಸದ ವಿಭಜನೆಯ ಸೂಕ್ತ ಮಟ್ಟವನ್ನು ಉತ್ಪಾದನಾ ಪ್ರಕ್ರಿಯೆಯ ಪ್ರಾಯೋಗಿಕ ವಿನ್ಯಾಸದ ಮೂಲಕ ನಿರೂಪಿಸಲಾಗಿದೆ. ತಯಾರಿಕೆ ಪ್ರಕ್ರಿಯೆಯಲ್ಲಿ ನೇರ ಅನುಕ್ರಮ ಒಳಗೊಂಡ ಚಟುವಟಿಕೆಗಳು ಹಾಗೂ ಒಂದೇ ರೀತಿಯಾದ ಕ್ರಿಯಾತ್ಮಕ ವ್ಯಾಪ್ತಿಗೆ ಸೀಮಿತವಾದ ಸ್ಮಿತ್ ದೃಷ್ಟಿಕೋನಕ್ಕೆ ವಿರುದ್ಧವಾಗಿ, ಇಂದಿನ ಪ್ರಕ್ರಿಯಾ ಕಲ್ಪನೆ ಮಿಶ್ರ-ಕ್ರಿಯಾತ್ಮಕತೆಯನ್ನು ಒಂದು ಪ್ರಮುಖ ಲಕ್ಷಣವಾಗಿ ಒಳಗೊಂಡಿದೆ. ಅವರ ಕಲ್ಪನೆಗಳನ್ನು ಅನುಸರಿಸಿ ಶ್ರಮ ವಿಭಜನೆಯನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳಲಾಯಿತು. ಕೆಲಸಗಳ ಸಂಯೋಜನೆಯು ಕ್ರಿಯಾತ್ಮಕ ಅಥವಾ ಮಿಶ್ರ-ಕ್ರಿಯಾತ್ಮಕವಾಗಿದ್ದರೂ, ಬಹಳ ಸಮಯದವರೆಗೂ ಪ್ರಕ್ರಿಯೆಯನ್ನು ಒಂದು ಪರ್ಯಾಯ ಆಯ್ಕೆಯಾಗಿ ಪರಿಗಣಿಸಿರಲಿಲ್ಲ.
ಇತರ ವ್ಯಾಖ್ಯಾನಗಳು
[ಬದಲಾಯಿಸಿ]1990ರ ಆರಂಭದಲ್ಲಿ, US ಸಂಸ್ಥೆಗಳು, ಹಾಗು ನಂತರದಲ್ಲಿ ವಿಶ್ವದ ಎಲ್ಲ ಸಂಸ್ಥೆಗಳು, ಹಿಂದಿನ ದಶಕದಲ್ಲಿ ತಾವು ಕಳೆದುಕೊಂಡಂತಹ ಸ್ಪರ್ಧಾತ್ಮಕತೆಯನ್ನು ಮತ್ತೆ ಸಾಧಿಸುವ ಪ್ರಯತ್ನದಲ್ಲಿ ರಿಇಂಜಿನಿಯರಿಂಗ್ ಕಲ್ಪನೆಯನ್ನು ಅಳವಡಿಸಿಕೊಳ್ಳಲು ಆರಂಭಿಸಿದವು. ಬಿಸ್ನೆಸ್ ಪ್ರೋಸೆಸ್ ರೀಇಂಜಿನಿಯರಿಂಗ್ (BPR)ನ ಒಂದು ಪ್ರಮುಖ ಲಕ್ಷಣವೆಂದರೆ ವ್ಯಾಪಾರ ಪ್ರಕ್ರಿಯೆಗಳ ಮೇಲೆ ಕೇಂದ್ರೀಕರಿಸುವುದು. ದಾವೆನ್ಪೋರ್ಟ್ (1993)[೧] (ವ್ಯಾಪಾರ) ಪ್ರಕ್ರಿಯೆಯನ್ನು ಈ ರೀತಿಯಾಗಿ ವ್ಯಾಖ್ಯಾನಿಸುತ್ತಾರೆ.
"ಒಂದು ರಚನಾತ್ಮಕ, ಪ್ರಮಾಣಕ ಚಟುವಟಿಕೆಗಳ ಗುಂಪನ್ನು, ಒಂದು ನಿರ್ದಿಷ್ಟ ಉತ್ಪನ್ನವನ್ನು ನಿರ್ದಿಷ್ಟ ಗ್ರಾಹಕ ಅಥವಾ ಮಾರುಕಟ್ಟೆಗೆ ತಯಾರಿಸುವಂತೆ ವಿನ್ಯಾಸಗೊಳಿಸಲಾಗಿರುತ್ತದೆ. ಉತ್ಪನ್ನದ ಗಮನವು ಯಾವುದಕ್ಕೆ ಮಹತ್ವ ನೀಡುತ್ತದೆ ಎನ್ನುವುದಕ್ಕೆ ವಿರುದ್ಧವಾಗಿ ಸಂಸ್ಥೆಯೊಳಗೆ ಕೆಲಸ ಹೇಗೆ ನಿರ್ವಹಿಸಲಾಗುತ್ತದೆ ಎನ್ನುವುದಕ್ಕೆ ಹೆಚ್ಚು ಮಹತ್ವ ನೀಡುವುದನ್ನು ಅದು ಸೂಚಿಸುತ್ತದೆ. ಈ ರೀತಿಯಾಗಿ ಒಂದು ಪ್ರಕ್ರಿಯೆಯೆಂದರೆ ಸಮಯ ಹಾಗು ಅಂತರದಲ್ಲಿ ಕಾರ್ಯ ಚಟುವಟಿಕೆಗಳನ್ನು ಅದರ ಆದಿಯಿಂದ ಅಂತ್ಯದವರೆಗೂ ನಿರ್ದಿಷ್ಟವಾಗಿ ಆದೇಶಿಸುವುದು, ಜೊತೆಗೆ ಇದು ಇನ್ಪುಟ್(ಕಚ್ಚಾವಸ್ತುಗಳು) ಹಾಗು ಔಟ್ಪುಟ್(ಉತ್ಪನ್ನ) ಗಳನ್ನು ಸ್ಪಷ್ಟವಾಗಿ ನಿರೂಪಿಸುತ್ತದೆ: ಕ್ರಿಯೆಗೆ ಒಂದು ರಚನೆ... ಒಂದು ಪ್ರಕ್ರಿಯೆಯ ಮಾರ್ಗವನ್ನು ತೆಗೆದುಕೊಂಡರೆ ಅದು ಗ್ರಾಹಕರ ದೃಷ್ಟಿಕೋನದ ಅಳವಡಿಕೆಯನ್ನು ಸೂಚಿಸುತ್ತದೆ. ಪ್ರಕ್ರಿಯೆಗಳು ರಚನೆಯಾಗಿದ್ದು, ಈ ಮೂಲಕ ಗ್ರಾಹಕರಿಗೆ ಮೌಲ್ಯಯುತ ವಸ್ತು ಉತ್ಪಾದಿಸಲು ಅವಶ್ಯಕವಾದ ಕ್ರಮಗಳನ್ನು ಸಂಸ್ಥೆ ಕೈಗೊಳ್ಳುತ್ತದೆ."
ಒಂದು ಪ್ರಕ್ರಿಯೆಯು ಒಳಗೊಳ್ಳಬೇಕಾದಂತಹ ನಿರ್ದಿಷ್ಟ ಲಕ್ಷಣಗಳನ್ನು ಈ ವ್ಯಾಖ್ಯಾನವು ಒಳಗೊಂಡಿದೆ. ಉತ್ಪನ್ನದ ಮೇಲಿನ ದೃಷ್ಟಿಕೋನಕ್ಕೆ(ಯಾವ ಕೆಲಸಗಳು ನಡೆದಿವೆ) ಬದಲಾಗಿ ಪ್ರಕ್ರಿಯೆಯ ವ್ಯಾಪಾರ ತರ್ಕದ ಮೇಲೆ ಗಮನಹರಿಸುವ ಮೂಲಕ ಈ ಲಕ್ಷಣಗಳನ್ನು ಸಾಧಿಸಬಹುದಾಗಿದೆ (ಕೆಲಸಗಳು ಹೇಗೆ ನಡೆದಿವೆ). ಪ್ರಕ್ರಿಯೆಯ ಬಗ್ಗೆ ದಾವೆನ್ಪೋರ್ಟ್ರ ವ್ಯಾಖ್ಯಾನವನ್ನು ಅನುಸರಿಸಿ, ಒಂದು ಪ್ರಕ್ರಿಯೆಯು ಸ್ಪಷ್ಟವಾಗಿ ನಿರೂಪಿಸಲಾದ ಪರಿಮಿತಿಗಳು, ಇನ್ಪುಟ್ ಹಾಗು ಔಟ್ಪುಟ್, ಸಣ್ಣ ಭಾಗಗಳು, ಚಟುವಟಿಕೆಗಳ ಒಳಗೊಳ್ಳುವಿಕೆ, ಇವುಗಳನ್ನು ಸಮಯ ಹಾಗು ಅವಧಿಯಲ್ಲಿ ಆದೇಶಿಸಲಾಗುತ್ತದೆ, ಪ್ರಕ್ರಿಯೆಯ ಉತ್ಪನ್ನವನ್ನು ಸ್ವೀಕರಿಸಲು ಸ್ವೀಕರ್ತನಿರಬೇಕು - ಒಬ್ಬ ಗ್ರಾಹಕ - ಜೊತೆಗೆ ಪ್ರಕ್ರಿಯೆಯೊಳಗೆ ನಡೆಯುವ ಪರಿವರ್ತನೆಗಳು ಗ್ರಾಹಕ ಮೌಲ್ಯವನ್ನು ಒದಗಿಸುವಂತಿರಬೇಕು ಎಂಬ ತೀರ್ಮಾನಕ್ಕೆ ನಾವು ಬರಬಹುದು.
ಹಮ್ಮೆರ್ & ಚಂಪಿಯ (1993)[೨] ವ್ಯಾಖ್ಯಾನವನ್ನು ದಾವೆನ್ಪೋರ್ಟ್ ರ ವ್ಯಾಖ್ಯಾನದ ಉಪ-ಅಂಶವೆಂದು ಪರಿಗಣಿಸಬಹುದು. ಅವರು ಪ್ರಕ್ರಿಯೆಯನ್ನು ಈ ರೀತಿಯಾಗಿ ನಿರೂಪಿಸುತ್ತಾರೆ
"ಒಂದು ಅಥವಾ ಅದಕ್ಕಿಂತ ಹೆಚ್ಚಿನ ಇನ್ಪುಟ್ (ಕಚ್ಚಾ ವಸ್ತುಗಳು)ಹೊಂದಿರುವ ಚಟುವಟಿಕೆಗಳ ಸಂಗ್ರಹವಾಗಿದ್ದು, ಗ್ರಾಹಕರಿಗೆ ಮೌಲ್ಯಯುತವಾದ ಉತ್ಪನ್ನ(ಔಟ್ಪುಟ್)ವನ್ನು ಸೃಷ್ಟಿಸುತ್ತದೆ."
ಹಮ್ಮೆರ್ & ಚಂಪಿ ಅಧಿಕ ಪರಿವರ್ತನಾ ಆಧಾರಿತ ಪರಿಕಲ್ಪನೆಯನ್ನು ಹೊಂದಿರುವುದರ ಜೊತೆಗೆ ರಚನಾತ್ಮಕ ಭಾಗ- ಪ್ರಕ್ರಿಯೆ ಪರಿಮಿತಿಗಳು ಮತ್ತು ಕಾಲ ಮತ್ತು ಅಂತರದಲ್ಲಿ ಚಟುವಟಿಕೆಗಳ ಆದೇಶಕ್ಕೆ ಕಡಿಮೆ ಮಹತ್ವ ನೀಡಿದರೆಂಬುದನ್ನು ಗಮನಿಸಬಹುದು.
ರುಮ್ಮ್ಲರ್ & ಬ್ರಾಚೆ (1995)[೩] ಸಂಸ್ಥೆಯ ಬಾಹ್ಯ ಗ್ರಾಹಕರ ಮೇಲೆ ಸ್ಪಷ್ಟವಾಗಿ ಸುತ್ತುವರೆಯುವ ವ್ಯಾಖ್ಯಾನವನ್ನು ಬಳಸುತ್ತಾರೆ, ಅವರು ಈ ಕೆಳಕಂಡಂತೆ ನಿರೂಪಿಸುತ್ತಾರೆ
"ಒಂದು ವ್ಯಾಪಾರ ಪ್ರಕ್ರಿಯೆಯು ಒಂದು ಉತ್ಪನ್ನ ಅಥವಾ ಸೇವೆಯನ್ನು ತಯಾರಿಸಲು ರೂಪಿಸಲಾದ ಕ್ರಮಗಳ ಒಂದು ಸರಣಿ. ಹೆಚ್ಚಿನ ಪ್ರಕ್ರಿಯೆಗಳು (...) ಮಿಶ್ರ ಕ್ರಿಯಾತ್ಮಕವಾಗಿರುತ್ತದೆ. ಸಂಸ್ಥೆಯ ನಕ್ಷೆಯಲ್ಲಿ ಪೆಟ್ಟಿಗೆಗಳ ನಡುವೆ 'ಬಿಳಿಯ ಜಾಗವನ್ನು' ಆವರಿಸಿರುತ್ತದೆ. ಸಂಸ್ಥೆಯ ಬಾಹ್ಯ ಗ್ರಾಹಕರಿಂದ ಸ್ವೀಕೃತವಾದ ಉತ್ಪನ್ನ ಅಥವಾ ಸೇವೆಯಲ್ಲಿ ಕೆಲವು ಪ್ರಕ್ರಿಯೆಗಳು ಫಲಿತಾಂಶ ನೀಡುತ್ತದೆ. ಇದನ್ನು ನಾವು ಪ್ರಾಥಮಿಕ ಪ್ರಕ್ರಿಯೆಗಳೆಂದು ಕರೆಯುತ್ತೇವೆ. ಇತರ ಪ್ರಕ್ರಿಯೆಗಳು ಬಾಹ್ಯ ಗ್ರಾಹಕನಿಗೆ ಅದೃಶ್ಯವಾದ ಉತ್ಪನ್ನಗಳನ್ನು ತಯಾರಿಸುತ್ತವೆ ಆದರೆ ಇವುಗಳು ವ್ಯಾಪಾರದ ಪರಿಣಾಮಕಾರಿ ನಿರ್ವಹಣೆಗೆ ಅತ್ಯಗತ್ಯವಾಗಿರುತ್ತವೆ. ಇದನ್ನು ನಾವು ಸಹಾಯಕ ಪ್ರಕ್ರಿಯೆಗಳೆಂದು ಕರೆಯುತ್ತವೆ."
ಮೇಲಿನ ವ್ಯಾಖ್ಯಾನವು ಪ್ರಕ್ರಿಯೆಗಳ ಎರಡು ವಿಧಗಳಲ್ಲಿ ವ್ಯತ್ಯಾಸ ಕಲ್ಪಿಸುತ್ತದೆ. ಪ್ರಾಥಮಿಕ ಹಾಗು ಸಹಾಯಕ ಪ್ರಕ್ರಿಯೆಗಳು, ಇದು ಗ್ರಾಹಕ ಮೌಲ್ಯದ ಸೃಷ್ಟಿಯಲ್ಲಿ ಪ್ರಕ್ರಿಯೆ ನೇರವಾಗಿ ಪಾಲ್ಗೊಂಡಿದೆಯೇ ಅಥವಾ ಸಂಸ್ಥೆಯ ಆಂತರಿಕ ಚಟುವಟಿಕೆಗಳಿಗೆ ಸಂಬಂಧಿಸಿದೆಯೇ ಎಂಬುದರ ಮೇಲೆ ಅವಲಂಬಿಸಿದೆ. ಈ ರೀತಿಯಾಗಿ, ರುಮ್ಲರ್ ಹಾಗು ಬ್ರಾಚೆಯ ವ್ಯಾಖ್ಯಾನವು ಪೋರ್ಟರ್ ರ ಮೌಲ್ಯ ಸರಪಳಿ ಮಾದರಿಯನ್ನು ಅನುಸರಿಸುತ್ತದೆ, ಇದು ಸಹ ಪ್ರಾಥಮಿಕ ಹಾಗು ದ್ವಿತಿಯಕ ಚಟುವಟಿಕೆಗಳ ನಡುವೆ ವಿಭಜನೆಯನ್ನು ನಿರ್ಮಿಸುತ್ತದೆ. ರುಮ್ಲರ್ ಹಾಗು ಬ್ರಾಚೆಯ ಪ್ರಕಾರ, ಒಂದು ಯಶಸ್ವಿ ಪ್ರಕ್ರಿಯೆ-ಆಧಾರಿತ ಸಂಸ್ಥೆಯ ಮಾದರಿ ಲಕ್ಷಣವೆಂದರೆ ಗ್ರಾಹಕ ಆಧಾರಿತ ಪ್ರಾಥಮಿಕ ಪ್ರಕ್ರಿಯೆಗಳಲ್ಲಿ ಸೃಷ್ಟಿಯಾದ ಪ್ರಾಥಮಿಕ ಮೌಲ್ಯ ಗತಿಯಲ್ಲಿ ದ್ವಿತೀಯಕ ಚಟುವಟಿಕೆಗಳ ಅನುಪಸ್ಥಿತಿ. ಸಂಸ್ಥೆಯ ನಕ್ಷೆಯಲ್ಲಿ ಬಿಳಿ ಜಾಗವನ್ನು ಆಕ್ರಮಿಸಿಕೊಂಡಿರುವ ಪ್ರಕ್ರಿಯೆಗಳ ಲಕ್ಷಣವು, ಪ್ರಕ್ರಿಯೆಗಳು ಕೆಲವು ಪ್ರಕಾರದ ಸಾಂಸ್ಥಿಕ ವ್ಯವಸ್ಥೆಯಲ್ಲಿ ಹುದುಗಿದೆ ಎಂಬುದನ್ನು ಸೂಚಿಸುತ್ತದೆ. ಅಲ್ಲದೆ, ಒಂದು ಪ್ರಕ್ರಿಯೆಯು ಮಿಶ್ರ-ಕ್ರಿಯಾತ್ಮಕವಾಗಿರಬಹುದು, ಅದೆಂದರೆ, ಇದು ಹಲವಾರು ವ್ಯಾಪಾರ ಕ್ರಿಯೆಗಳ ವ್ಯಾಪ್ತಿಯನ್ನು ಹೊಂದಿರಬಹುದು.
ಅಂತಿಮವಾಗಿ, ಜೋಹನ್ಸನ್ ಮತ್ತಿತರರ ಪ್ರಕ್ರಿಯಾ ವ್ಯಾಖ್ಯಾನವನ್ನು ಪರಿಗಣಿಸೋಣ. (1993)[೪]. ಅವರು ಪ್ರಕ್ರಿಯೆಯನ್ನು ಈ ರೀತಿಯಾಗಿ ವ್ಯಾಖ್ಯಾನಿಸುತ್ತಾರೆ
"ಇನ್ಪುಟ್ ನ್ನು ಒಳಗೊಳ್ಳುವ ಸಂಬಂಧಿತ ಚಟುವಟಿಕೆಗಳ ಒಂದು ವರ್ಗ ಹಾಗು ಅದನ್ನು ಉತ್ಪನ್ನದ ಸೃಷ್ಟಿಗೆ ಪರಿವರ್ತಿಸುತ್ತದೆ. ಸೈದ್ಧಾಂತಿಕವಾಗಿ, ಪ್ರಕ್ರಿಯೆಯಲ್ಲಿ ಒದಗುವ ಪರಿವರ್ತನೆಯು ಇನ್ಪುಟ್(ಕಚ್ಚಾವಸ್ತು)ನ ಮೌಲ್ಯವನ್ನು ವರ್ಧಿಸಬೇಕು ಜೊತೆಗೆ ಗ್ರಾಹಕರಿಗೆ ಉಪಯೋಗವಾಗುವ ಹಾಗು ಪರಿಣಾಮಕಾರಿ ಉತ್ಪನ್ನವನ್ನು ಮೇಲುಹಂತಕ್ಕೆ(ಉತ್ಪನ್ನದ ತಯಾರಿಕೆ ಹಂತಕ್ಕೆ ಹತ್ತಿರವಾಗಿ) ಅಥವಾ ಕೆಳಹಂತಕ್ಕೆ(ಮಾರಾಟದ ಅಂಶಕ್ಕೆ) ಹತ್ತಿರವಾಗಿ ಸೃಷ್ಟಿಸಬೇಕು.
ಈ ವ್ಯಾಖ್ಯಾನವು ಚಟುವಟಿಕೆಗಳ ನಡುವೆ ಸಂಪರ್ಕ ರಚನೆಗೆ ಹಾಗೂ ಪ್ರಕ್ರಿಯೆಯೊಳಗೆ ನಡೆಯುವ ಪರಿವರ್ತನೆಗೆ ಮಹತ್ವ ನೀಡುತ್ತದೆ. ಜೋಹಾನ್ಸನ್ ಮತ್ತಿತರರು ಮೌಲ್ಯ ಸರಪಳಿಯ ಉತ್ಪನ್ನದ ತಯಾರಿಕೆಯ ಹಂತದ ಭಾಗವು ಉತ್ಪನ್ನ ಪ್ರಕ್ರಿಯೆಯ ಸಂಭವನೀಯ ಗ್ರಾಹಿ ಎಂದೂ ಸಹ ಸೇರಿಸುತ್ತಾರೆ. ಮೇಲೆ ಹೇಳಲಾದಂತಹ ನಾಲ್ಕೂ ವ್ಯಾಖ್ಯಾನಗಳನ್ನು ಸಂಕ್ಷಿಪ್ತಗೊಳಿಸಿ, ಈ ರೀತಿಯಾಗಿ ಒಂದು ವ್ಯಾಪಾರ ಪ್ರಕ್ರಿಯೆಯ ಲಕ್ಷಣಗಳನ್ನು ಪಟ್ಟಿ ಮಾಡಬಹುದು.
- ನಿರೂಪಣೆ ಸಾಮರ್ಥ್ಯ : ಇದು ಸ್ಪಷ್ಟವಾಗಿ ನಿರೂಪಿತವಾಗುವ ಪರಿಮಿತಿಗಳನ್ನು ಹೊಂದಿರಬೇಕು, ಇನ್ಪುಟ್ ಹಾಗು ಉತ್ಪನ್ನ.
- ಆದೇಶ : ಸಮಯ ಹಾಗು ಅಂತರದಲ್ಲಿ ಅವುಗಳ ಸ್ಥಾನಕ್ಕೆ ಅನುಸಾರವಾಗಿ ಆದೇಶಿಸಲಾದ ಚಟುವಟಿಕೆಗಳನ್ನು ಒಳಗೊಂಡಿರಬೇಕು.
- ಗ್ರಾಹಕ : ಪ್ರಕ್ರಿಯೆಯಿಂದ ಹೊರಬಿದ್ದ ಉತ್ಪನ್ನವನ್ನು ಸ್ವೀಕರಿಸಲು ಒಬ್ಬ ಗ್ರಾಹಕನಿರಬೇಕು.
- ಮೌಲ್ಯ ವರ್ಧನೆ : ಪ್ರಕ್ರಿಯೆಯೊಳಗೆ ನಡೆಯುವ ಪರಿವರ್ತನೆಗಳು ಗ್ರಾಹಕನಿಗೆ ಉತ್ಪನ್ನದ ತಯಾರಿಕೆಯ ಹಂತದಲ್ಲಿ ಅಥವಾ ಮಾರಾಟದ ಅಂಶಕ್ಕೆ ಹತ್ತಿರವಾಗಿ ಮೌಲ್ಯವನ್ನು ಹೆಚ್ಚಿಸಬೇಕು.
- ಹುದುಗುವಿಕೆ : ಒಂದು ಪ್ರಕ್ರಿಯೆಯು ತನ್ನಷ್ಟಕ್ಕೆ ತಾನೇ ಅಸ್ತಿತ್ವದಲ್ಲಿರುವುದಿಲ್ಲ. ಅದು ಒಂದು ಸಾಂಸ್ಥಿಕ ವ್ಯವಸ್ಥೆಯಲ್ಲಿ ಹುದುಗಿರಬೇಕು.
- ಮಿಶ್ರ-ಕ್ರಿಯಾತ್ಮಕತೆ : ಒಂದು ಪ್ರಕ್ರಿಯೆಯು ನಿಯಮಿತವಾಗಿ, ಆದರೆ ಅವಶ್ಯಕವಿಲ್ಲದೇ ಹಲವಾರು ಕಾರ್ಯಗಳನ್ನು ವ್ಯಾಪಿಸಬಹುದು.
ಸಾಧಾರಣವಾಗಿ, ಒಂದು ಪ್ರಕ್ರಿಯೆಯ ಮಾಲೀಕ, ಅಂದರೆ ಪ್ರಕ್ರಿಯೆಯ ಕಾರ್ಯನಿರ್ವಹಣೆ ಮತ್ತು ಸತತ ಸುಧಾರಣೆಗೆ ಜವಾಬ್ದಾರಿಯಾದ ವ್ಯಕ್ತಿಯನ್ನು ಅವಶ್ಯಕ ಎಂದು ಪರಿಗಣಿಸಲಾಗುತ್ತದೆ.
ಪ್ರಕ್ರಿಯೆ ಸರಪಳಿಯ ಪ್ರಾಮುಖ್ಯತೆ
[ಬದಲಾಯಿಸಿ]ವ್ಯಾಪಾರ ಪ್ರಕ್ರಿಯೆಗಳು ಅನುಕ್ರಮವಾದ ಉಪ-ಪ್ರಕ್ರಿಯೆಗಳು ಅಥವಾ ಕೆಲಸಗಳ ಒಂದು ವರ್ಗವನ್ನು ಒಳಗೊಂಡಿರುತ್ತದೆ, ಜೊತೆಗೆ ಪರ್ಯಾಯ ಮಾರ್ಗಗಳು ಅನ್ವಯವಾಗುವ ಕೆಲವು ನಿರ್ದಿಷ್ಟ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿರುತ್ತವೆ, ಇವುಗಳು ಒಂದು ನಿರ್ದಿಷ್ಟ ಉದ್ದೇಶ ಅಥವಾ ನಿರ್ದಿಷ್ಟ ಉತ್ಪನ್ನಗಳ ತಯಾರಿಕೆಯನ್ನು ಪೂರೈಸಲು ಕಾರ್ಯ ನಿರ್ವಹಿಸುತ್ತದೆ. ಪ್ರತಿ ಪ್ರಕ್ರಿಯೆಯು ಒಂದು ಅಥವಾ ಅದಕ್ಕೂ ಹೆಚ್ಚಿನ ಅವಶ್ಯಕ ಇನ್ಪುಟ್ ನ್ನು ಒಳಗೊಂಡಿರುತ್ತದೆ. ಇನ್ಪುಟ್ಗಳು ಹಾಗು ಉತ್ಪನ್ನವನ್ನು ಇತರ ವ್ಯಾಪಾರ ಪ್ರಕ್ರಿಯೆಗಳಿಂದ, ಇತರ ಸಾಂಸ್ಥಿಕ ಘಟಕಗಳಿಂದ, ಅಥವಾ ಆಂತರಿಕ ಅಥವಾ ಬಾಹ್ಯ ಮಧ್ಯಸ್ಥಗಾರರಿಂದ ಪಡೆದುಕೊಳ್ಳಬಹುದು ಅಥವಾ ಅವರಿಗೆ ನೀಡಬಹುದು.
ವ್ಯಾಪಾರ ಪ್ರಕ್ರಿಯೆಗಳನ್ನು ಒಂದು ಅಥವಾ ಅದಕ್ಕೂ ಹೆಚ್ಚಿನ ವ್ಯಾಪಾರ ಕ್ರಿಯಾತ್ಮಕ ಘಟಕಗಳು ನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿರುತ್ತದೆ, ಜೊತೆಗೆ ಇವುಗಳು ಪ್ರತ್ಯೇಕ ಘಟಕಗಳಿಗಿಂತ ಹೆಚ್ಚಾಗಿ "ಪ್ರಕ್ರಿಯಾ ಸರಪಳಿ"ಯ ಪ್ರಾಮುಖ್ಯತೆಗೆ ಒತ್ತು ನೀಡುತ್ತದೆ.
ಸಾಮಾನ್ಯವಾಗಿ ಹೇಳುವುದಾದರೆ, ವ್ಯಾಪಾರ ಪ್ರಕ್ರಿಯೆಯ ಹಲವಾರು ಕೆಲಸಗಳನ್ನು ಎರಡು ವಿಧಾನಗಳಲ್ಲಿ ಒಂದು ವಿಧಾನದ ಮೂಲಕ ಕೈಗೊಳ್ಳಬಹುದಾಗಿದೆ - 1) ಕೈಯಿಂದ ಹಾಗು 2) ERP ವ್ಯವಸ್ಥೆಗಳು ಮುಂತಾದ ವ್ಯಾಪಾರ ದತ್ತಾಂಶ ಪ್ರಕ್ರಿಯಾ ವ್ಯವಸ್ಥೆಗಳ ಮೂಲಕ. ವಿಶಿಷ್ಟವಾಗಿ, ಕೆಲವು ಪ್ರಕ್ರಿಯಾ ಕೆಲಸಗಳನ್ನು ಕೈಯಿಂದ ಮಾಡಲಾಗುತ್ತದೆ, ಮತ್ತೆ ಕೆಲವು ಕಂಪ್ಯೂಟರ್ ನ್ನು ಆಧರಿಸಿರುತ್ತವೆ, ಹಾಗು ಈ ಕೆಲಸಗಳನ್ನು ಹಲವರು ರೀತಿಯಲ್ಲಿ ಅನುಕ್ರಮಗೊಳಿಸಬಹುದಾಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಪ್ರಕ್ರಿಯೆಯುದ್ದಕ್ಕೂ ನಿಭಾಯಿಸುವ ದತ್ತಾಂಶ ಹಾಗು ಮಾಹಿತಿಯು ಕೈಯಿಂದಾಗಲಿ ಅಥವಾ ಕಂಪ್ಯೂಟರ್ ಕಾರ್ಯಗಳ ಮೂಲಕ ಯಾವುದೇ ನಿರ್ದಿಷ್ಟ ಕ್ರಮಾಂಕದಲ್ಲಿ ಹಾದು ಹೋಗಬಹುದು.
ನಾಲ್ಕು ಪ್ರಮುಖ ಪ್ರಕ್ರಿಯೆ ಸುಧಾರಣಾ ಕ್ಷೇತ್ರಗಳು
[ಬದಲಾಯಿಸಿ]ಕೆಲಸದ ದರ್ಜೆಯನ್ನು ಪರಿಗಣಿಸದೆ-ಕೈಯಿಂದಾಗಲಿ ಅಥವಾ ಕಂಪ್ಯೂಟರ್ ಮೂಲಕವಾಗಲಿ-ಪ್ರತಿ ಕೆಲಸ ಹಾಗು ಒಟ್ಟಾರೆಯಾಗಿ ಪ್ರಕ್ರಿಯೆಯು ಪ್ರಮುಖವಾಗಿರುತ್ತದೆ - ಇದನ್ನು ವಿನ್ಯಾಸಗೊಳಿಸುವುದರ ಜೊತೆಗೆ ಕಾಲಾನುಕಾಲಕ್ಕೆ ಪುನರ್ವಿಮರ್ಶಿಸಿ, ಸುಧಾರಣೆ ಮಾಡಿ, ಅಥವಾ ಬದಲಿಯಾಗಿ ಇನ್ನೊಂದು ಕೆಲಸವನ್ನು ತರುವ ಮೂಲಕ ನಾಲ್ಕು ಕ್ಷೇತ್ರಗಳಲ್ಲಿ ಸತತ ಸುಧಾರಣೆಯನ್ನು ತರುವ ದೃಷ್ಟಿಕೋನ ಹೊಂದಿರಬೇಕು.
1. ಪರಿಣಾಮಕಾರಿತ್ವ
2. ದಕ್ಷತೆ
3. ಆಂತರಿಕ ನಿಯಂತ್ರಣ
4. ಹಲವಾರು ಕಾನೂನುಗಳು ಹಾಗು ನೀತಿಗಳ ಅನುಸರಣೆ
ಈ ಕ್ಷೇತ್ರಗಳನ್ನು ಅವುಗಳಲ್ಲಿ ಒಂದು ಮಾದರಿಯ ಕೊರತೆಗಳನ್ನು ಎತ್ತಿ ಹಿಡಿಯುವ ಮೂಲಕ ಈ ಕೆಳ ಕಂಡಂತೆ ವಿವರಿಸಲಾಗಿದೆ:
ಪರಿಣಾಮಕಾರಿತ್ವ
ಒಂದು ಪ್ರಕ್ರಿಯೆಯ ಒಟ್ಟಾರೆ ಪರಿಣಾಮಕಾರಿತ್ವವು, ನಿರೀಕ್ಷಿತ ಪ್ರಕ್ರಿಯೆಯಿಂದ ಉತ್ಪನ್ನಗಳು ಎಷ್ಟರ ಮಟ್ಟಿಗೆ ಒದಗಿದೆ ಎಂಬ ಅಂಶವನ್ನು ಒಳಗೊಂಡಿರಬೇಕು, ಆದ್ದರಿಂದ ಪ್ರಕ್ರಿಯೆಯ ಮೂಲಭೂತ ಪರ್ಯಾಪ್ತಿಯ ಮೊದಲ ಮಾಪನವಾಗಿದೆ ಹಾಗೂ ಪ್ರಕ್ರಿಯೆ ಬಳಕೆಗಳು ಮತ್ತು ನಿರ್ವಾಹಕರ ತಾರ್ಕಿಕ ಮತ್ತು ಸಮಂಜಸ ನಿರೀಕ್ಷೆಗಳನ್ನು ಪೂರೈಸುವ ಅದರ ಸಾಮರ್ಥ್ಯವನ್ನು ಒಳಗೊಂಡಿದೆ.
ಉದಾಹರಣೆಗೆ, ವಸ್ತುವಿನ ಸಂಗ್ರಹಣಾ ಪ್ರಕ್ರಿಯೆಯನ್ನು ಪರಿಗಣಿಸೋಣ. ಇದರ ಒಂದು ಪ್ರಮುಖ ಕೆಲಸವೆಂದರೆ ಉತ್ಪನ್ನಗಳ ಸಕಾಲಿಕ ವಿತರಣೆಯ ಖಾತರಿ ಬಗ್ಗೆ ಸರಬರಾಜುದಾರನ ಅನುಸರಣೆಗಾಗಿ ಉಪ ಪ್ರಕ್ರಿಯೆ. ಅನುಸರಣೆಗೆ ಜವಾಬ್ದಾರಿಯಾದ ಖರೀದಿ ಇಲಾಖೆಯ ಸಿಬ್ಬಂದಿಯ ಬಳಕೆಗೆ ನಿಖರ ಮತ್ತು ಸಕಾಲಿಕ ಖರೀದಿ ಆದೇಶ ಸ್ಥಿತಿಗತಿಯ ವರದಿಗಳನ್ನು ಒದಗಿಸದಿದ್ದರೆ ಅಂತಹ ಕಾರ್ಯವು ಕಡಿಮೆ ಪರಿಣಾಮಕಾರಿ ಆಗಿರುತ್ತದೆ.
ಸಾಮರ್ಥ್ಯ
ಅಂತಿಮ ಬಳಕೆದಾರನಿಂದ ಸೂಕ್ತವಾಗಿ ಸಿದ್ಧಪಡಿಸಿದ ಇಂಡೆಂಟ್ ಸ್ವೀಕರಿಸಿದ ನಂತರ ಖರೀದಿ ಆದೇಶವನ್ನು ಸಿದ್ಧಪಡಿಸಿ, ಕಳಿಸಲು ತೆಗೆದುಕೊಳ್ಳುವ ಸರಾಸರಿ ಸಮಯವು ಹೆಚ್ಚಾಗಿರುವುದು ಒಂದು ವೇಳೆ ಗಮನಕ್ಕೆ ಬಂದರೆ, ವಿಳಂಬಿತ ಗ್ರಾಹಕ ಸರಬರಾಜುಗಳು ಮತ್ತು ತರುವಾಯ ಗ್ರಾಹಕ ದೂರುಗಳಿಗೆ ದಾರಿಕಲ್ಪಿಸಬಹುದು.
ಅಂತಿಮ ಬಳಕೆದಾರನ ಇಂಡೆಂಟನ್ನು ಖರೀದಿ ಆದೇಶಕ್ಕೆ "ಪರಿವರ್ತಿಸುವ" ಪ್ರಕ್ರಿಯೆಯು ಪರಿಣಾಮಕಾರಿಯಾಗಿರುತ್ತದೆ ಏಕೆಂದರೆ ಖರೀದಿ ಆದೇಶವನ್ನು ಹೇಗಾದರೂ ಉತ್ಪಾದಿಸಲಾಗುತ್ತದೆ, ಆದರೆ ಅದರ ಕಾರ್ಯಸಾಮರ್ಥ್ಯವು ಬಹಳ ಕಡಿಮೆಯಿರುತ್ತದೆ. ಏಕೆಂದರೆ ಇದು ವಿಪರೀತ ಸಮಯವನ್ನು ತೆಗೆದುಕೊಂಡಿರುತ್ತದೆ ಹಾಗು ಸಿಬ್ಬಂದಿಯ ವೇತನಗಳನ್ನು ಒಳಗೊಂಡಂತೆ ಕಂಪೆನಿಯ ವೆಚ್ಚವು ಗಣನೀಯವಾಗಿ ಹೆಚ್ಚಾಗಿರುತ್ತದೆ.
ಆಂತರಿಕ ನಿಯಂತ್ರಣ
ಪ್ರಮುಖ ಕಚ್ಚಾ ವಸ್ತುಗಳ ಪ್ರಮಾಣಕ್ಕೆ ನಿಯಮಿತವಾಗಿ ಆದೇಶ ದೊರೆತು ಬಳಕೆ ಮಾಡುವ ಪರಿಸ್ಥಿತಿಗಳಲ್ಲಿ, ಆಯ್ಕೆ ಮಾಡಲಾದ, ವಿಶ್ವಾಸಾರ್ಹ, ಅನುಮತಿ ದೊರೆತ ಮಾರಾಟಗಾರರಿಗೆ ಒಂದು ವಿಸ್ತರಿಸಿದ ಅವಧಿಗೆ ಬೆಲೆಯನ್ನು ನಿಗದಿ ಮಾಡಲಾಗಿರುತ್ತದೆ - ಸಾಮಾನ್ಯವಾಗಿ ಒಂದು ವರ್ಷ. ಇದೆಲ್ಲಕ್ಕಿಂತ ಹೆಚ್ಚಾಗಿ, ಬೆಲೆಯ ಒಪ್ಪಂದವು ಬೆಲೆ ಏರಿಕೆಯ ಒಂದು ಅಂಶವನ್ನು ಒಳಗೊಂಡಿರುವುದಿಲ್ಲ. ಇದು ಆ ಅವಧಿಯಲ್ಲಿ ಅನಿರೀಕ್ಷಿತವಾಗಿ ಏರಿಕೆಯಾಗುವ ಬೆಲೆಯಿಂದ ವ್ಯಾಪಾರ ಸಂಸ್ಥೆಯನ್ನು ರಕ್ಷಿಸುತ್ತದೆ. ಬೆಲೆ ಒಪ್ಪಂದದ ದತ್ತಾಂಶವನ್ನು ERP ವ್ಯವಸ್ಥೆಯ ದತ್ತಾಂಶ ಸಂಗ್ರಹದಲ್ಲಿ ಶೇಖರಿಸಲಾಗಿರುತ್ತದೆ. ವಸ್ತುಗಳಿಗೆ ಆದೇಶ ನೀಡಬೇಕಾದಾಗ(ನಿಗದಿತ ವಿತರಣಾ ವೇಳಾಪಟ್ಟಿ ಜತೆಗೆ ಅಥವಾ ಇಲ್ಲದೆಯೇ), ಖರೀದಿ ಆದೇಶಗಳನ್ನು, ಬೆಲೆ ಒಪ್ಪಂದದಲ್ಲಿ ನಿಗದಿ ಪಡಿಸಿರುವಂತಹ ಬೆಲೆಯನ್ನು ಪ್ರಸ್ತಾಪಿಸಿ ಖರೀದಿ ಆದೇಶವನ್ನು ಸೃಷ್ಟಿಸಲಾಗುತ್ತದೆ. ವರ್ಷ ಪೂರ್ತಿಯಾಗಿ ಖರೀದಿ ಬೆಲೆಯು ಸ್ಥಿರವಾಗಿರುವಂತೆ ಒಂದು ಆಂತರಿಕ ನಿಯಂತ್ರಣವು ಅಸ್ತಿತ್ವದಲ್ಲಿರುತ್ತದೆ.
ಆದಾಗ್ಯೂ, ಒಂದು ಪಕ್ಷ, ಪ್ರಸಕ್ತ ಬೆಲೆ ಒಪ್ಪಂದವನ್ನು ಆಧರಿಸಿದ ಖರೀದಿ ಆದೇಶದ ಬೆಲೆಯು ಭಿನ್ನ ಮೌಲ್ಯಕ್ಕೆ ಬದಲಾಗಿದ್ದು ಕಂಡು ಬಂದರೆ, ಖರೀದಿ ಆದೇಶವನ್ನು ನಂತರದಲ್ಲಿ ಸರಬರಾಜುದಾರನಿಗೆ ಕಳಿಸಲಾಯಿತು ಎಂದುಕೊಳ್ಳೋಣ. ಇದು ಆಂತರಿಕ ನಿಯಂತ್ರಣದಲ್ಲಿ ಉಂಟಾಗುವ ಒಂದು ಗಂಭೀರ ದೋಷ, ಏಕೆಂದರೆ ಅಧಿಕ ಬೆಲೆಗೆ ಬದಲಾವಣೆ ಮಾಡಿದರೆ ಅದು ಸಂಸ್ಥೆಯನ್ನು ಅಧಿಕ ಹಣಕಾಸಿನ ಬಾಧ್ಯತೆಗಳಿಗೆ ಗುರಿಮಾಡುತ್ತದೆ. ಆದಾಗ್ಯೂ, ಇಂತಹ ಖರೀದಿ ಆದೇಶದ ದರದ ಬದಲಾಯಿಸುವ ಸಾಮರ್ಥ್ಯವು ಮೊದಲ ಸ್ಥಾನದಲ್ಲಿ ದರ ಒಪ್ಪಂದಕ್ಕೆ ಅವಕಾಶವಿದ್ದರೆ ಹಾಗೂ ಅದರಲ್ಲಿ ಬೆಲೆ ಏರಿಸದಿರುವ ನಿಯಮ ಒಳಗೊಂಡಿದ್ದಲ್ಲಿ, ಸಂಪೂರ್ಣವಾಗಿ ಆಂತರಿಕ ನಿಯಂತ್ರಣವನ್ನು ನಿರರ್ಥಕಗೊಳಿಸುತ್ತದೆ. ಖರೀದಿ ಆದೇಶವನ್ನು ಸರಬರಾಜುದಾರನಿಗೆ ನೀಡುವ ಮುಂಚೆ ಇಂತಹ PO ತಿದ್ದುಪಡಿಯು ವಾಸ್ತವವಾಗಿ ಪ್ರಮಾಣಿತವಾಗಿದ್ದರೆ ಅಂತಹ ಸಂದರ್ಭದಲ್ಲಿ ಆಂತರಿಕ ನಿಯಂತ್ರಣದಲ್ಲಿ ಮತ್ತಷ್ಟು ಉಲ್ಲಂಘನೆಯು ಉಂಟಾಗುತ್ತದೆ.
ಕಾನೂನುಸಮ್ಮತ ಹಾಗು ನೀತಿಯ ಅನುಸರಣೆ
ಕೆಲವೊಂದು ಪರಿಸ್ಥಿತಿಗಳಲ್ಲಿ ಹಣಕಾಸಿನ ಸಂದಾಯವನ್ನು ಸಲಹಾಕಾರರಿಗೆ ಅಥವಾ ಸೇವೆಯನ್ನು ಒದಗಿಸುವ ಗುತ್ತಿಗೆದಾರರಿಗೆ ಮೂಲದ ತೆರಿಗೆಯನ್ನು (T.D.S.)ನ್ನು ಕಳೆದು ಕಾನೂನುಸಮ್ಮತವಾಗಿ ಮಾಡಬೇಕಾಗುತ್ತದೆ ಜೊತೆಗೆ ಅಂತಹ T.D.S. ಮೊತ್ತಗಳನ್ನು ಬ್ಯಾಂಕುಗಳ ಸರ್ಕಾರಿ ಖಜಾನೆ ಖಾತೆಗಳಲ್ಲಿ ಹಣ ಪಾವತಿ ಮಾಡಿದ ತಿಂಗಳನ್ನು ಅನುಸರಿಸಿ ನಿಗದಿತ ದಿನಾಂಕದಂದು ಅಥವಾ ಅದಕ್ಕಿಂತ ಮುಂಚೆ ಇರಿಸಬೇಕು.
ಇಂತಹ ಪರಿಸ್ಥಿತಿಗಳಲ್ಲಿ, ವ್ಯಾಪಾರ ಪ್ರಕ್ರಿಯೆಯು T.D.S. ಕಳೆಯಲು ಅನುಕೂಲವನ್ನು ಒದಗಿಸದಿದ್ದರೆ ಹಾಗು/ಅಥವಾ ನಿಗದಿತ ದಿನಾಂಕದೊಳಗೆ ಸರ್ಕಾರಿ ಖಾತೆಗಳಲ್ಲಿ ಹಣವನ್ನು ಇರಿಸುವುದನ್ನು ಖಾತರಿಪಡಿಸುವಲ್ಲಿ ವಿಫಲವಾದರೆ, ಇದು ಕಾನೂನು ಸಮ್ಮತ ಅನುಸರಣೆಯ ವಿಷಯವಾಗಿದ್ದು, ಇದಕ್ಕೆ ಸಂಬಂಧಿಸಿದ ಕಾರ್ಯ ನಿರ್ವಾಹಕರು ಸಿವಿಲ್/ಕ್ರಿಮಿನಲ್ ಮೊಕದ್ದಮೆಗೆ ಬಾಧ್ಯರಾಗಬೇಕಾಗುತ್ತದೆ.
ಯೋಜನೆಗಳು, ಪ್ರಕ್ರಿಯೆಗಳು ಹಾಗು ವಿಧಾನಗಳು
[ಬದಲಾಯಿಸಿ]ಮೇಲೆ ಹೇಳಲಾಗಿರುವ ಸುಧಾರಣಾ ಕ್ಷೇತ್ರಗಳು ಯೋಜನೆಗಳು, ಪ್ರಕ್ರಿಯೆಗಳು ಹಾಗು ವಿಸ್ತೃತವಾದ ವಿಧಾನಗಳಿಗೆ(ಉಪ-ಪ್ರಕ್ರಿಯೆಗಳು/ಕೆಲಸಗಳು) ಸಮಾನವಾಗಿ ಅನ್ವಯವಾಗುತ್ತದೆ. ಮೇಲ್ಮಟ್ಟದಲ್ಲಿ ಮಾಡಲಾದಂತಹ ಸುಧಾರಣೆಗಳು ಕೆಳಮಟ್ಟದ ಸುಧಾರಣೆಗಳ ಮೇಲೆ ದೊಡ್ಡ ಪ್ರಮಾಣದ ಪರಿಣಾಮವನ್ನು ಬೀರುತ್ತದೆ.
ಉದಾಹರಣೆಗೆ, ಸೂಕ್ತ ಸಮರ್ಥನೆ ಮತ್ತು ವ್ಯಾಪಾರಿ ಪ್ರಕ್ರಿಯೆ ಮಾಲೀಕರಿಂದ ತಾತ್ವಿಕ ಒಪ್ಪಿಗೆಯೊಂದಿಗೆ ಗೊತ್ತಾದ ನೀತಿಯನ್ನು ಉತ್ತಮ ನೀತಿಯಿಂದ ಬದಲಾಯಿಸಲು ಶಿಫಾರಸು ಮಾಡಿದರೆ, ನೀತಿ ಬದಲಾವಣೆಗಳ ಅನುಷ್ಠಾನಕ್ಕಾಗಿ ತರುವಾಯದ ಪ್ರಕ್ರಿಯೆಗಳು ಮತ್ತು ವಿಧಾನಗಳಲ್ಲಿ ಸಂಬಂಧಿಸಿದ ಬದಲಾವಣೆಗಳು ಸ್ವಾಭಾವಿಕವಾಗಿ ಅನುಸರಿಸಲಾಗುತ್ತದೆ.
ಕೈಯಿಂದ ಮಾಡುವ/ಆಡಳಿತಾತ್ಮಕ vs. ಕಂಪ್ಯೂಟರ್ ವ್ಯವಸ್ಥೆ ಆಧಾರಿತ ಆಂತರಿಕ ನಿಯಂತ್ರಣಗಳು
[ಬದಲಾಯಿಸಿ]ಆಂತರಿಕ ನಿಯಂತ್ರಣಗಳನ್ನು ಕೈಯಿಂದ/ಆಡಳಿತಾತ್ಮಕ ಪ್ರಕ್ರಿಯಾ ಕ್ರಮಗಳು ಹಾಗು/ಅಥವಾ ಕಂಪ್ಯೂಟರ್ ವ್ಯವಸ್ಥೆಯ ವಿಧಾನಗಳಿಂದ ರೂಪಿಸಬಹುದಾಗಿದೆ.
ಎಷ್ಟು ಸಾಧ್ಯವೋ ಅಷ್ಟು ವ್ಯವಸ್ಥೆಯ ನಿಯಂತ್ರಣಗಳನ್ನು ರೂಪಿಸಲು ಸಲಹೆ ನೀಡಲಾಗುತ್ತದೆ, ಏಕೆಂದರೆ ಸ್ವಯಂಚಾಲಿತವಾಗಿರುವ ಈ ನಿಯಂತ್ರಣಗಳನ್ನು ಯಾವಾಗಲೂ ಬಳಕೆ ಮಾಡಲಾಗುತ್ತದೆ ಏಕೆಂದರೆ ಇವುಗಳನ್ನು ವ್ಯಾಪಾರ ವ್ಯವಸ್ಥೆಯ ಸಾಫ್ಟ್ವೇರ್ಗೆ ಅನುಗುಣವಾಗಿ ರೂಪಿಸಲಾಗಿರುತ್ತದೆ. ಉದಾಹರಣೆಗೆ, ಸ್ವೀಕರಿಸಿದ ಕಚ್ಚಾಪದಾರ್ಥದ ಪ್ರಮಾಣವು ಸ್ವೀಕಾರಾರ್ಹ ಸಹನೀಯ ಶೇಕಡಾವಾರುಗಿಂತ ಹೆಚ್ಚಿರುವ ಖರೀದಿ ಆದೇಶದ ಪ್ರಮಾಣವನ್ನು ಮೀರಿದ್ದರೆ, ಅದರ ದಾಖಲಾತಿಯನ್ನು ತಪ್ಪಿಸಲು ದೋಷದ ಸಂದೇಶವು ಪ್ರದರ್ಶನವಾಗುತ್ತದೆ ಹಾಗೂ ವ್ಯವಸ್ಥೆ ಬಳಕೆದಾರ, ಅಂತಹ ಮೊತ್ತವನ್ನು ದಾಖಲು ಮಾಡದಂತೆ ತಡೆಯುತ್ತದೆ.
ಆದಾಗ್ಯೂ, ವ್ಯಾವಹಾರಿಕದೃಷ್ಟಿ ಮುಂತಾದ ವಿವಿಧ ಕಾರಣಗಳಿಂದ, ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳುವ ಅವಶ್ಯಕತೆ(ಏನನ್ನು ಸೂಚಿಸುತ್ತದೋ ಅದು), ವ್ಯಾಪಾರ ಕ್ಷೇತ್ರದಲ್ಲಿ ಜ್ಞಾನ ಹಾಗು ಅನುಭವದ ಕೊರತೆ, ಸಾಫ್ಟ್ವೇರ್ ವಿನ್ಯಾಸ/ಬರವಣಿಗೆಯಲ್ಲಿ ಉಂಟಾಗುವ ಅಡಚಣೆಗಳು, ಸಾಫ್ಟ್ವೇರ್ ಅಭಿವೃದ್ಧಿ/ಮಾರ್ಪಾಟಿಗೆ ತಗಲುವ ವೆಚ್ಚ, ನಿಯಂತ್ರಣಗಳನ್ನು ಒದಗಿಸುವಲ್ಲಿ ಗಣಕೀಕೃತ ವ್ಯವಸ್ಥೆಯ ಅಸಮರ್ಥತೆ, ಮುಂತಾದವು, ಅವಶ್ಯಕವೆಂದು ಪರಿಗಣಿಸಲಾದ ಎಲ್ಲ ಆಂತರಿಕ ನಿಯಂತ್ರಣಗಳನ್ನು ಸಾಮಾನ್ಯವಾಗಿ ವ್ಯಾಪಾರ ವ್ಯವಸ್ಥೆಗಳು ಹಾಗು ಸಾಫ್ಟ್ವೇರ್ ನಲ್ಲಿ ರೂಪಿಸಲಾಗಿರುವುದಿಲ್ಲ.
ಇಂತಹ ಸನ್ನಿವೇಶದಲ್ಲಿ, ಕೈಯಿಂದ ಮಾಡಲಾಗುವ , ಕಂಪ್ಯೂಟರ್ ವ್ಯವಸ್ಥೆಯಾಚೆಗಿನ ಆಡಳಿತಾತ್ಮಕ ಪ್ರಕ್ರಿಯಾ ನಿಯಂತ್ರಣವನ್ನು ಸ್ಪಷ್ಟವಾಗಿ ದಾಖಲಿಸಿ, ಜಾರಿಮಾಡುವುದರ ಜೊತೆಗೆ ನಿಯಮಿತವಾಗಿ ಬಳಕೆ ಮಾಡಬೇಕಾಗುತ್ತದೆ. ಉದಾಹರಣೆಗೆ, ಒಂದು ಸ್ಥೂಲ ವ್ಯವಸ್ಥೆಯ ದತ್ತಾಂಶ ಸಂಗ್ರಹದ ವಸ್ತುವಿನ ಮುಖ್ಯ ಕೋಷ್ಠಕದಲ್ಲಿ ದತ್ತಾಂಶವನ್ನು ದಾಖಲು ಮಾಡುವಾಗ, ಪದಾರ್ಥದ ವಿವರಣೆ ಕ್ಷೇತ್ರ ಕುರಿತು ವ್ಯವಸ್ಥೆ ಒದಗಿಸುವ ಒಂದೇ ಒಂದು ಆಂತರಿಕ ನಿಯಂತ್ರಣವೆಂದರೆ ಬಳಕೆದಾರನಿಗೆ ಪದಾರ್ಥದ ವಿವರಣಾ ಭಾಗವನ್ನು ಖಾಲಿಯಾಗಿ ಬಿಡಲು ಅವಕಾಶ ನೀಡದಿರುವುದು - ಬೇರೆ ಅರ್ಥದಲ್ಲಿ ಹೇಳುವುದಾದರೆ, ಪದಾರ್ಥದ ವಿವರಣಾ ಭಾಗವನ್ನು ಕಡ್ಡಾಯ ಭಾಗವಾಗಿ ರಚನೆ ಮಾಡುವುದು. ವ್ಯವಸ್ಥೆಯು ಸ್ಪಷ್ಟವಾಗಿ ಬಳಕೆದಾರರಿಗೆ ವಿವರಣೆಯ ತಪ್ಪಾದ ಉಚ್ಚಾರಣೆ, ಅಸಮಂಜಸ, ಅಸಂಬದ್ಧತೆ, ಮುಂತಾದವುಗಳ ಬಗ್ಗೆ ಎಚ್ಚರಿಕೆ ನೀಡಲು ಸಾಧ್ಯವಾಗುವುದಿಲ್ಲ.
ಇಂತಹ ವ್ಯವಸ್ಥೆ ಆಧಾರಿತ ಆಂತರಿಕ ನಿಯಂತ್ರಣದ ಅನುಪಸ್ಥಿತಿಯಲ್ಲಿ, ಪದಾರ್ಥದ ಸೃಷ್ಟಿ ಪ್ರಕ್ರಿಯೆಯು ವಿಸ್ತೃತವಾದ ಪರಿಶೀಲನೆಯ ಮೂಲಕ ಒಂದು ಯೋಗ್ಯ ಆಡಳಿತಾತ್ಮಕ ನಿಯಂತ್ರಣವನ್ನು ಎಲ್ಲ ಕ್ಷೇತ್ರಗಳಲ್ಲಿ ಹೊಸ ಪದಾರ್ಥಕ್ಕಾಗಿ ದಾಖಲಾದ ಒಬ್ಬ ಜವಾಬ್ದಾರಿಯುತ ಅಧಿಕಾರಿಯಿಂದ ಒಳಗೊಂಡಿರಬೇಕು. ವ್ಯವಸ್ಥೆಯಿಂದ ತೆಗೆದುಕೊಳ್ಳಲಾದಂತಹ ಪ್ರಿಂಟ್ಔಟ್(ಮುದ್ರಿತ ಪ್ರತಿ) ನ್ನು ಪದಾರ್ಥದ ದತ್ತಾಂಶ ಎಂಟ್ರಿ ಪುಟದೊಂದಿಗೆ ಹೋಲಿಕೆ ಮಾಡುವ ಮೂಲಕ ಈ ಪರಿಶೀಲನೆ ನಡೆಸಬಹುದು. ಜೊತೆಗೆ ಪದಾರ್ಥ ವಿವರಣೆಯಲ್ಲಿ ಯಾವುದೇ ತಿದ್ದುಪಡಿಗಳಿದ್ದರೆ, ಅದನ್ನು ಸರಿಪಡಿಸುವ ಬಗ್ಗೆ ಖಾತರಿಮಾಡಬೇಕು(ಜೊತೆಗೆ ಸದೃಶವಾದ ಇತರ ಭಾಗಗಳಲ್ಲಿ ವ್ಯವಸ್ಥೆ ನಿಯಂತ್ರಣವು ಸಾಧ್ಯವಿರುವುದಿಲ್ಲ).
ಕಡೆಯದಾಗಿ, ಪರಿಣಾಮಕಾರಿ ಕೈಪಿಡಿಯ ಪರಿಚಯ, ಆಡಳಿತಾತ್ಮಕ ನಿಯಂತ್ರಣಗಳಿಗೆ ಸಾಧಾರಣವಾಗಿ ಉನ್ನತ ಅಧಿಕಾರಿಗಳಿಂದ ಕಾಲಾನುಕಾಲಕ್ಕೆ ಪರಿಶೀಲನೆಯ ಅಗತ್ಯವಿರುತ್ತದೆ. ಇಂತಹ ನಿಯಂತ್ರಣಗಳು ಮೊದಲಿಗೆ ಜಾರಿಯಾಗುವುದನ್ನು ಖಾತರಿಪಡಿಸಿಕೊಳ್ಳಬೇಕು.
ವ್ಯಾಪಾರ ಪ್ರಕ್ರಿಯೆಗಳನ್ನು ಕಾರ್ಯಗತಗೊಳಿಸಲು ಅವಶ್ಯಕ ಆಧಾರವಾಗಿ ಮಾಹಿತಿ ವರದಿಗಳು
[ಬದಲಾಯಿಸಿ]ವ್ಯಾಪಾರ ಪ್ರಕ್ರಿಯೆಗಳು, ಪರಿಣಾಮಕಾರಿ ಕಾರ್ಯಗಳ ಬಗ್ಗೆ ದೃಢಪಡಿಸಲು ಇತ್ತೀಚಿನ ಹಾಗು ಕರಾರುವಾಕ್ಕಾದ ಮಾಹಿತಿಯನ್ನು ಒಳಗೊಳ್ಳಬೇಕು. ಇದಕ್ಕೆ ಒಂದು ಉದಾಹರಣೆಯೆಂದರೆ, ಸರಬರಾಜುದಾರನ ವಿತರಣೆ ನಂತರದ ಖರೀದಿ ಆದೇಶ ಸ್ಥಿತಿಗತಿ ವರದಿಗಳ ಲಭ್ಯತೆ. ಇದನ್ನು ಮೇಲಿನ ಪರಿಣಾಮಕಾರಿತ್ವ ವಿಭಾಗದಲ್ಲಿ ವಿವರಿಸಲಾಗಿದೆ. ಪ್ರತಿಯೊಂದು ಸಂಭವನೀಯ ವ್ಯಾಪಾರ ಪ್ರಕ್ರಿಯೆಯಲ್ಲಿ ಇದರ ಬಗ್ಗೆ ಹಲವಾರು ಉದಾಹರಣೆಗಳಿವೆ.
ಉತ್ಪಾದನೆಯಲ್ಲಿ ಬರುವ ಮತ್ತೊಂದು ಉದಾಹರಣೆಯೆಂದರೆ, ಅಂಗಡಿಗಳಲ್ಲಿ ಸಂಭವಿಸುವ ಉತ್ಪನ್ನಗಳ ನಿರಾಕರಣ ಸರಣಿಯ ವಿಶ್ಲೇಷಣಾ ಪ್ರಕ್ರಿಯೆ. ಈ ಪ್ರಕ್ರಿಯೆಯು, ನಿರಾಕರಣೆಗೆ ಕಾರಣಗಳನ್ನು ವ್ಯವಸ್ಥಿತ ಕಾಲಾನುಕ್ರಮದಲ್ಲಿ ಒಳಗೊಳ್ಳಬೇಕು, ಜೊತೆಗೆ ಪ್ರಮುಖ ಕಾರಣಗಳನ್ನು ಬೊಟ್ಟು ಮಾಡುವ ಯೋಗ್ಯ ಮಾಹಿತಿ ವರದಿಯಲ್ಲಿ ಫಲಿತಾಂಶಗಳನ್ನು ಹಾಗೂ ಕಾರಣಗಳಲ್ಲಿ ಪ್ರವೃತ್ತಿಗಳನ್ನು ಪ್ರಸ್ತುತಪಡಿಸಬೇಕು. ಇದರಿಂದ ಆಡಳಿತವರ್ಗವು ಈ ನಿರಾಕರಣೆಗಳನ್ನು ನಿಯಂತ್ರಿಸಿ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಹಾಗು ಸ್ವೀಕಾರಯೋಗ್ಯ ಪರಿಮಿತಿಯೊಳಗೆ ಅವುಗಳನ್ನು ಇಡಬೇಕು. ಇಂತಹ ವಿಶ್ಲೇಷಣಾ ಪ್ರಕ್ರಿಯೆ ಹಾಗು ಉತ್ಪನ್ನದ ನಿರಾಕರಣ ಸರಣಿಯ ಸನ್ನಿವೇಶಗಳ ಸಾರಾಂಶವು, ಪ್ರತಿ ವೈಯಕ್ತಿಕ ನಿರಾಕರಣೆ ಬಗ್ಗೆ ಕೇವಲ ತನಿಖೆ ನಡೆಸುವ ಪ್ರಕ್ರಿಯೆಗಿಂತ ಸ್ಪಷ್ಟವಾಗಿ ಮೇಲ್ಮಟ್ಟದಲ್ಲಿರುತ್ತದೆ.
ವ್ಯಾಪಾರ ಪ್ರಕ್ರಿಯೆಯ ಮಾಲಿಕರು ಹಾಗು ನಿರ್ವಾಹಕರು ಪ್ರಕ್ರಿಯೆಯ ಸುಧಾರಣೆಯು ಸಾಮಾನ್ಯವಾಗಿ ಸೂಕ್ತವಾದ ವ್ಯವಹಾರದ ಪರಿಚಯ, ಕಾರ್ಯಾತ್ಮಕ, ವಿಶಿಷ್ಟ ಅಂಶ, ವಿನಾಯಿತಿ ಅಥವಾ M.I.S. ವರದಿಗಳೊಂದಿಗೆ ಸಂಭವಿಸುತ್ತದೆಂದು ಮನಗಾಣಬೇಕು. ಇದನ್ನು ದಿನ ನಿತ್ಯದ ಅಥವಾ ಕಾಲಾನುಕಾಲದ ನಿರ್ಧಾರ ತೆಗೆದುಕೊಳ್ಳಲು ಪ್ರಜ್ಞಾಪೂರ್ವಕವಾಗಿ ಬಳಸುವಂತಿರಬೇಕು. ಈ ಗ್ರಹಿಕೆಯೊಂದಿಗೆ, ಉಪಯುಕ್ತವಾದ ಹಾಗು ಸಮಂಜಸವಾದ ವರದಿಗಳ ವ್ಯವಸ್ಥೆಯ ಪರಿಚಯದೊಂದಿಗೆ ವ್ಯಾಪಾರ ಪ್ರಕ್ರಿಯೆಯ ಸುಧಾರಣೆಯಲ್ಲಿ ಸಮಯ ಹಾಗು ಇತರ ಸಂಪನ್ಮೂಲಗಳನ್ನು ವಿನಿಯೋಗಿಸುವ ಬಗ್ಗೆ ಇಚ್ಛೆಯು ಆಶಾದಾಯಕವಾಗಿ ಬರುತ್ತದೆ.
ಆಧಾರ ಸಿದ್ಧಾಂತಗಳು ಹಾಗು ಕಲ್ಪನೆಗಳು
[ಬದಲಾಯಿಸಿ]ಫ್ರೆಡ್ರಿಕ್ ವಿನ್ಸ್ಲೋ ಟೆಯ್ಲರ್ ವೈಜ್ಞಾನಿಕ ನಿರ್ವಹಣೆ ಎಂಬ ಕಲ್ಪನೆಯನ್ನು ಅಭಿವೃದ್ಧಿಪಡಿಸಿದರು. ವ್ಯಾಪಾರ ಪ್ರಕ್ರಿಯೆಗಳ ಸುತ್ತ ಸಿದ್ಧಾಂತ ಮತ್ತು ಆಚರಣೆಗೆ ಪ್ರಸ್ತುತವಾದ ಶ್ರಮ ವಿಭಜನೆ ಕುರಿತ ಅಂಶಗಳನ್ನು ಈ ಪರಿಕಲ್ಪನೆ ಹೊಂದಿದೆ. ಟೆಯ್ಲರ್ ಅವರ ವೈಜ್ಞಾನಿಕ ನಿರ್ವಹಣಾ ಕಲ್ಪನೆಗೆ ಸಂಬಂಧಿಸಿದ ವ್ಯಾಪಾರ ಪ್ರಕ್ರಿಯೆ ಅಂಶಗಳನ್ನು ವ್ಯಾಪಾರ ಪ್ರಕ್ರಿಯೆ ರಿಇಂಜಿನಿಯರಿಂಗ್ ಲೇಖನದಲ್ಲಿ ಚರ್ಚಿಸಲಾಗಿದೆ.
ನಿಯಂತ್ರಣ ವ್ಯಾಪ್ತಿ
[ಬದಲಾಯಿಸಿ]ನಿಯಂತ್ರಣ ವ್ಯಾಪ್ತಿ(ಸ್ಪ್ಯಾನ್ ಆಫ್ ಕಂಟ್ರೋಲ್) ಎಂಬುದು ಒಂದು ರಾಚನಿಕ ಸಂಸ್ಥೆಯೊಳಗೆ ಒಬ್ಬ ಮೇಲ್ವಿಚಾರಕನು ನಿರ್ವಹಿಸುವ ಅಧೀನ ನೌಕರರ ಸಂಖ್ಯೆಯನ್ನು ಒಳಗೊಂಡಿದೆ. ಒಂದು ವ್ಯಾಪಾರ ಪ್ರಕ್ರಿಯಾ ಕಲ್ಪನೆಯ ಪರಿಚಯವು ಸಂಸ್ಥೆಯ ರಾಚನಿಕ ಅಂಶಗಳ ಮೇಲೆ ಗಮನಾರ್ಹ ಪ್ರಭಾವವನ್ನು ಬೀರುವುದರ ಜೊತೆಗೆ ನಿಯಂತ್ರಣ ವ್ಯಾಪ್ತಿಯ ಮೇಲೂ ಸಹ ಪರಿಣಾಮವನ್ನು ಬೀರುತ್ತದೆ.
ಮಾರುಕಟ್ಟೆಯ ರೂಪದಲ್ಲಿ ವ್ಯವಸ್ಥೆಯನ್ನು ಹೊಂದಿರದ ದೊಡ್ಡ ಸಂಸ್ಥೆಗಳು, ಸಣ್ಣ ಘಟಕಗಳಾಗಿ ವ್ಯಸ್ಥೆಯನ್ನು ಹೊಂದುವ ಅಗತ್ಯವಿರುತ್ತದೆ - ವಿಭಾಗಗಳು - ಇದನ್ನು ವಿವಿಧ ಆಧಾರ ತತ್ತ್ವಗಳ ಪ್ರಕಾರವಾಗಿ ನಿರೂಪಿಸಬಹುದಾಗಿದೆ.
ಮಾಹಿತಿ ನಿರ್ವಹಣಾ ಕಲ್ಪನೆಗಳು
[ಬದಲಾಯಿಸಿ]ಮಾಹಿತಿ ನಿರ್ವಹಣೆ ಹಾಗು ಅದಕ್ಕೆ ಸಂಬಂಧಿಸಿದ ಸಂಸ್ಥೆಯ ವಿನ್ಯಾಸ ಕಾರ್ಯವಿಧಾನಗಳು ವ್ಯಾಪಾರ ಪ್ರಕ್ರಿಯೆ ಕಲ್ಪನೆಯ ಒಂದು ಸೈದ್ಧಾಂತಿಕ ಮೂಲಾಧಾರವಾಗಿದೆ.
ಇವನ್ನೂ ಗಮನಿಸಿ
[ಬದಲಾಯಿಸಿ]- ವ್ಯಾಪಾರ ವಿಶ್ಲೇಷಣೆ
- ವ್ಯಾಪಾರ ಪ್ರಕ್ರಿಯೆ ವ್ಯಾಖ್ಯಾನದ ಉನ್ನತ ಮಾದರಿ
- ವ್ಯಾಪಾರ ಪ್ರಕ್ರಿಯೆ ವಿವರಣೆ
- ವ್ಯವಹಾರ ಪ್ರಕ್ರಿಯೆ ಸುಧಾರಣೆ
- ವ್ಯಾಪಾರ ಪ್ರಕ್ರಿಯೆ ನಿರ್ವಹಣೆ
- ವ್ಯಾಪಾರ ಪ್ರಕ್ರಿಯೆಗಳ ನಕ್ಷೆ ತಯಾರಿಕೆ
- ವ್ಯವಹಾರ ಪ್ರಕ್ರಿಯೆ ಮಾದರಿ ತಯಾರಿಕೆ
- ವ್ಯಾಪಾರ ಪ್ರಕ್ರಿಯೆ ಮಾದರಿ ತಯಾರಿಕೆ ಅಂಕನ ಪದ್ಧತಿ
- ವ್ಯಾಪಾರ ಪ್ರಕ್ರಿಯೆಯ ಹೊರಗುತ್ತಿಗೆ
- ವ್ಯಾಪಾರ ಪ್ರಕ್ರಿಯೆಯ ರೀಇಂಜಿನಿಯರಿಂಗ್
ಉಲ್ಲೇಖಗಳು
[ಬದಲಾಯಿಸಿ]- ↑ ಥಾಮಸ್ ದಾವೆನ್ಪೋರ್ಟ್ (1993). ಪ್ರೋಸೆಸ್ ಇನ್ನೋವೇಶನ್: ರೀಇಂಜಿನಿಯರಿಂಗ್ ವರ್ಕ್ ಥ್ರೂ ಇನ್ಫಾರ್ಮೇಶನ್ ಟೆಕ್ನಾಲಜಿ . ಹಾರ್ವರ್ಡ್ ಬಿಸ್ನೆಸ್ ಸ್ಕೂಲ್ ಪ್ರೆಸ್, ಬಾಸ್ಟನ್
- ↑ ಮೈಕಲ್ ಹ್ಯಾಮರ್ ಹಾಗು ಜೇಮ್ಸ್ ಚಂಪಿ (1993). ರೀಇಂಜಿನಿಯರಿಂಗ್ ದಿ ಕಾರ್ಪೋರೇಶನ್: ಏ ಮ್ಯಾನಿಫೆಸ್ಟೋ ಫಾರ್ ಬಿಸ್ನೆಸ್ ರೆವಲ್ಯೂಶನ್ , ಹಾರ್ಪರ್ ಬಿಸ್ನೆಸ್
- ↑ ರಮ್ಮ್ಲರ್ & ಬ್ರಾಚೆ (1995). ಇಮ್ಪ್ರೂವಿಂಗ್ ಪರ್ಫಾರ್ಮೆನ್ಸ್: ಹೌ ಟು ಮ್ಯಾನೇಜ್ ದಿ ವೈಟ್ ಸ್ಪೇಸ್ ಆನ್ ದಿ ಆರ್ಗನೈಸೆಶನಲ್ ಚಾರ್ಟ್ . ಜೋಸ್ಸೇಯ್-ಬಾಸ್ಸ್, ಸ್ಯಾನ್ ಫ್ರಾನ್ಸಿಸ್ಕೋ
- ↑ ಹೆನ್ರಿ J. ಜೋಹನ್ಸ್ಸನ್ ಎಟ್ ಆಲ್. (1993). ಬಿಸ್ನೆಸ್ ಪ್ರೋಸೆಸ್ ರೀಇಂಜಿನಿಯರಿಂಗ್: ಬ್ರೇಕ್ ಪಾಯಿಂಟ್ ಸ್ಟ್ರ್ಯಾಟಜೀಸ್ ಫಾರ್ ಮಾರ್ಕೆಟ್ ಡಾಮಿನೆನ್ಸ್ . ಜಾನ್ ವಿಲೆಯ್ & ಸನ್ಸ್
ಹೆಚ್ಚಿನ ಓದಿಗಾಗಿ
[ಬದಲಾಯಿಸಿ]- ಹಾಲ್, J.M. ಹಾಗು ಜ್ಹಾನ್ಸನ್, M.E. (2009, ಮಾರ್ಚ್), “ವೆನ್ ಶುಡ್ ಪ್ರೋಸಸ್ ಬಿ ಆರ್ಟ್, ನಾಟ್ ಸೈನ್ಸ್“, ಹಾರ್ವರ್ಡ್ ಬಿಸ್ನೆಸ್ ರಿವ್ಯೂ, 58 – 65
- ಪಾಲ್ ಹಾರ್ಮನ್, (2007). ಬಿಸ್ನೆಸ್ ಪ್ರೋಸೆಸ್ ಚೇಂಜ್: 2nd Ed, ಏ ಗೈಡ್ ಫಾರ್ ಬಿಸ್ನೆಸ್ ಮ್ಯಾನೆಜರ್ಸ್ ಅಂಡ್ BPM ಅಂಡ್ ಸಿಕ್ಸ್ ಸಿಗ್ಮಾ ಪ್ರೊಫೆಶನಲ್ಸ್ . ಮೋರ್ಗನ್ ಕೌಫ್ಮನ್
- E. ಒಬೆಂಗ್ ಹಾಗು S. ಕ್ರಯಿನರ್ (1993).
ಮೇಕಿಂಗ್ ರಿ-ಇಂಜಿನಿಯರಿಂಗ್ ಹ್ಯಾಪನ್ . ಫೈನಾನ್ಷಿಯಲ್ ಟೈಮ್ಸ್ ಪ್ರೆನ್ಟಿಸ್ ಹಾಲ್
- ಹೊವರ್ಡ್ ಸ್ಮಿತ್ ಹಾಗು ಪೀಟರ್ ಫಿಂಗರ್ (2003). ಬಿಸ್ನೆಸ್ ಪ್ರೋಸೆಸ್ಸ್ ಮ್ಯಾನೇಜ್ಮೆಂಟ್ . ದಿ ಥರ್ಡ್ ವೇವ್, MK ಪ್ರೆಸ್
- ಸ್ಲಾಕ್ ಎಟ್ ಆಲ್., ಡೇವಿಡ್ ಬರ್ನೆಸ್ ರ ಸಂಪಾದನೆ (2000) ದಿ ಓಪನ್ ಯೂನಿವರ್ಸಿಟಿ, ಅಂಡರ್ಸ್ಟ್ಯಾಂಡಿಂಗ್ ಬಿಸಿನೆಸ್ ಪ್ರೋಸೆಸಸ್
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ದಿ ಪ್ರೋಸಸ್ ವಿಕಿ Archived 2020-02-04 ವೇಬ್ಯಾಕ್ ಮೆಷಿನ್ ನಲ್ಲಿ. ಎಲ್ಲ ವಿಧದ ವ್ಯಾಪಾರ ಪ್ರಕ್ರಿಯೆಗಳ ಒಂದು ಭಂಡಾರ (ವಿಕಿ)
- BPಟ್ರೆಂಡ್ಸ್ ವೆಬ್ಸೈಟ್ ವ್ಯಾಪಾರ ಪ್ರಕ್ರಿಯೆಯ ಎಲ್ಲ ಅಂಶಗಳನ್ನು ಒಳಗೊಳ್ಳುವ ಲೇಖನಗಳನ್ನು ಪ್ರಕಟಿಸುವ ಒಂದು ಮುಕ್ತ ಅಂತರಜಾಲ ಮ್ಯಾಗಜಿನ್