ಸದಸ್ಯರ ಚರ್ಚೆಪುಟ:Haldodderi
ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.
ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):
- ಸಹಾಯ ಪುಟ
- ಉತ್ತಮ ಲೇಖನದ ಲಕ್ಷಣಗಳು
- Font help (read this if Kannada is not getting
rendered on your system properly) - ನೇರವಾಗಿ ಕನ್ನಡದಲ್ಲಿ ಬರೆಯುವುದು ಹೇಗೆ?.
- ಆಂಡ್ರಾಯ್ಡ್ ಕನ್ನಡ ಕೀಲಿಮಣೆ ಅಪ್ಲಿಕೇಶನ್,
ಕನ್ನಡ ಇನ್ಪುಟ್ ಪರಿಕರ - ವಿಕಿಪೀಡಿಯ:ದಿಕ್ಸೂಚಿ
- ಸಂಪಾದನೆ ಮಾಡುವುದು ಹೇಗೆ?
- ವಿಕಿಪೀಡಿಯ ಟುಟೋರಿಯಲ್ (ವೀಡಿಯೋ)
- ಚಿತ್ರಗಳನ್ನುಪಯೋಗಿಸಿವುದು ಹೇಗೆ?
- ಹೊಸ ಲೇಖನವನ್ನು ಪ್ರಾರಂಭಿಸುವುದು ಹೇಗೆ?
- ದೊಡ್ಡ ಲೇಖನವೊಂದನ್ನು ಬರೆಯುವುದು ಹೇಗೆ?
- ಹೆಸರಿಡುವುದರ ಬಗ್ಗೆ
- ಶೈಲಿ ಕೈಪಿಡಿ
- ವಿಕಿಪೀಡಿಯ:ಕೋರಿಕೆಯ ಲೇಖನಗಳು
- ವಿಕಿಪೀಡಿಯ ಸದಸ್ಯರೊಂದಿಗೆ ಸೌಜನ್ಯಯುತ ಚರ್ಚೆ
ಕನ್ನಡದಲ್ಲೇ ಬರೆಯಿರಿ
ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.
ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.
ಲೇಖನ ಸೇರಿಸುವ ಮುನ್ನ...
ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.
ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.
ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.
ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~
-- ಹರಿ ಪ್ರಸಾದ್ ನಾಡಿಗ್ \ಚರ್ಚೆ \ಕಾಣಿಕೆಗಳು ೧೪:೧೯, ೨೫ ಆಗಸ್ಟ್ ೨೦೧೦ (UTC)
ವೈ.ಎನ್.ಕೃಷ್ಣಮೂರ್ತಿ ಅವರ ಲೇಖನದ ಬಗ್ಗೆ
[ಬದಲಾಯಿಸಿ]ನಮಸ್ತೆ, ವೈ.ಎನ್.ಕೃಷ್ಣಮೂರ್ತಿ ಎಂಬ ಲೇಖನವನ್ನು ಈಗಾಗಲೇ ಪ್ರಾರಂಭಿಸಿರುವಿರಿ, ಜೊತೆಗೆ ವೈಯೆನ್ಕೆ ಎಂಬ ಹೊಸ ಪುಟವನ್ನು ಸೇರಿಸಿದ್ದನ್ನು ನೋಡಿದೆ, ಎರಡೂ ಪುಟವನ್ನು ಒಂದು ಗೂಡಿಸಿ ರೀಡೈರೆಕ್ಟ್ ಮಾಡಿದರೆ ಉತ್ತಮ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೨೦:೧೯, ೪ ಮಾರ್ಚ್ ೨೦೧೩ (UTC)
ಒಂದುಗೂಡಿಸಿ ರೀಡೈರೆಕ್ಟ್ ಮಾಡುವುದು ಹೇಗೆಂದು ನನಗೆ ತಿಳಿಯುತ್ತಿಲ್ಲ, ತಾವೇ ಈ ಕೆಲಸ ಮಾಡಿದರೆ ಉತ್ತಮ. Haldodderi ೧೨:೪೮, ೧೧ ಏಪ್ರಿಲ್ ೨೦೧೩ (UTC)haldodderi
ಪುಸ್ತಕ ವಿಮರ್ಶೆ
[ಬದಲಾಯಿಸಿ]ಪುಸ್ತಕ ವಿಮರ್ಶೆ ಪುಟದಲ್ಲಿ ಮೂಲ ವಿಷಯದ ಬದಲು ಹೆಚ್.ಆರ್.ನಾಗೇಶರಾವ್ ಅವರ ಅಂಕಿತನಾಮದ ಪ್ರಸ್ತಾಪವಾಗಿದೆ. ಇದನ್ನು ಬದಲಿಸಲು ಸಾಧ್ಯವೇ? ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೬:೫೨, ೧೯ ಮಾರ್ಚ್ ೨೦೧೩ (UTC)
ಅಳಿಸಲಾಗಿದೆ Haldodderi ೧೨:೪೭, ೧೧ ಏಪ್ರಿಲ್ ೨೦೧೩ (UTC) haldodderi
'ಚಂದವಳ್ಳಿಯ ತೋಟ'
[ಬದಲಾಯಿಸಿ]ಈ ಪುಟವನ್ನು ಚಂದವಳ್ಳಿಯ ತೋಟ (ಪುಸ್ತಕ) ಎಂದು ಬದಲಾಯಿಸಲಾಗಿದೆ. ಜೊತೆಗೆ ವಿಕಿಪೀಡಿಯದಲ್ಲಿ ಯಾವುದೇ ಬ್ಲಾಗ್, ಪತ್ರಿಕೆ, ಪುಸ್ತಕದಲ್ಲಿರುವಂತಹ ವಿಷಯಗಳನ್ನು ನೇರವಾಗಿ ಸೇರಿಸುವಂತಿಲ್ಲ. ಕೈ ಹೊತ್ತಿಗೆಗಳ ಬಗ್ಗೆ ನೀವು ನೀಡಿರುವ ಮಾಹಿತಿಯ ಬಗ್ಗೆ ಉಲ್ಲೇಖವನ್ನು ಸೂಚಿಸಬಲ್ಲ ಕೊಂಡಿ ನೀಡಲು ಸಾಧ್ಯವೇ? ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೬:೫೫, ೧೯ ಮಾರ್ಚ್ ೨೦೧೩ (UTC)
ಅಳಿಸಲಾಗಿದೆ Haldodderi ೧೨:೪೬, ೧೧ ಏಪ್ರಿಲ್ ೨೦೧೩ (UTC) haldodderi
ಬಾಳಸಂಜೆ ಮತ್ತು ನೀಲಿ ಕಾಗದ
[ಬದಲಾಯಿಸಿ]'ಚಂದವಳ್ಳಿಯ ತೋಟ' ದ ಬಗ್ಗೆ ನಮೂದಿಸಿದ ಕಾರಣ ಈ ಲೇಖನಕ್ಕೂ ಅನ್ವಯಿಸುತ್ತದೆ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೭:೦೩, ೧೯ ಮಾರ್ಚ್ ೨೦೧೩ (UTC)
ಅಳಿಸಲಾಗಿದೆ Haldodderi ೧೨:೪೯, ೧೧ ಏಪ್ರಿಲ್ ೨೦೧೩ (UTC) haldodderi
ಎಲ್ಲ ಅಳಿಸುತ್ತಿದ್ದೀರಲ್ಲ?
[ಬದಲಾಯಿಸಿ]ನೀವು ಹಲವು ಲೇಖನಗಳನ್ನು ಒಂದಾದ ನಂತರ ಒಂದರಂತೆ ಅಳಿಸುತ್ತಿದ್ದೀರಲ್ಲ? ಏನು ಕಾರಣ? ಓಂಶಿವಪ್ರಕಾಶ ಅವರು ಲೇಖನ ಅಳಿಸಿ ಎಂದು ಸೂಚಿಸಿಲ್ಲ. ಬದಲಾಯಿಸಿ ಎಂದಿದ್ದಾರೆ ಅಷ್ಟೆ :-) --Pavanaja (talk) ೧೦:೧೬, ೧೧ ಏಪ್ರಿಲ್ ೨೦೧೩ (UTC)
ಅಳಿಸಲೇಬೇಕಾದ ತುರ್ತು
[ಬದಲಾಯಿಸಿ]ಓಂಪ್ರಕಾಶ್ ಅವರು ತಿಳಿಸಿರುವಂತೆ ವಿಕಿಪೀಡಿಯದಲ್ಲಿ ಯಾವುದೇ ಬ್ಲಾಗ್, ಪತ್ರಿಕೆ, ಪುಸ್ತಕದಲ್ಲಿರುವಂತಹ ವಿಷಯಗಳನ್ನು ನೇರವಾಗಿ ಸೇರಿಸುವಂತಿಲ್ಲ.
ಕನ್ನಡ ಪುಸ್ತಕಗಳ ಬಗ್ಗೆ ಕಳೆದ ಶತಮಾನದಅರವತ್ತರ ದಶಕದಲ್ಲಿ ನನ್ನ ತಂದೆ ಹೆಚ್.ಆರ್.ನಾಗೇಶರಾವ್ ಅವರು ಪುಸ್ತಕಪ್ರಿಯ ಅಂಕಿತ ನಾಮದಲ್ಲಿ ತಾಯಿನಾಡು ಪತ್ರಿಕೆಗೆ ಬರೆಯುತ್ತಿದ್ದ ವಿಮರ್ಶೆಯನ್ನು ನಾನು ವಿಕಿಪೀಡಿಯಾಗೆ ಸೇರಿಸುತ್ತಿದ್ದೆ. ಕನ್ನಡದಲ್ಲಿ ಪ್ರಕಟವಾದ ಅಪರೂಪದ ಕೃತಿಗಳ ಬಗ್ಗೆ ಆ ವಿಮರ್ಶೆಯ ಮೂಲಕವಾದರೂ ಪರಿಚಯವಾಗಲಿ ಎಂಬುದು ನನ್ನ ಉದ್ದಿಶ್ಯವಾಗಿತ್ತು. ಆದರೆ ಯಾವುದೇ ಪತ್ರಿಕೆಯಲ್ಲಿರುವಂತಹ (ಪ್ರಕಟವಾದಂತಹ) ವಿಷಯವನ್ನು ನೇರವಾಗಿ ಸೇರಿಸುವಂತಿಲ್ಲ ಎಂಬ ನಿಯಮ ಇರುವ ಕಾರಣ, ನನ್ನೆಲ್ಲ ನಮೂದುಗಳೂ ನಿಯಮ ಬಾಹಿರವಾಗುತ್ತದೆ. ಹೀಗಾಗಿ ನನ್ನ ನಮೂದುಗಳನ್ನು ಅಳಿಸುತ್ತಿದ್ದೇನೆ. Haldodderi ೧೨:೫೦, ೧೧ ಏಪ್ರಿಲ್ ೨೦೧೩ (UTC) haldodderi
ಕೈ ಹೊತ್ತಿಗೆಗಳ ಬಗ್ಗೆ ನೀವು ನೀಡಿರುವ ಮಾಹಿತಿಯ ಬಗ್ಗೆ ಉಲ್ಲೇಖವನ್ನು ಸೂಚಿಸಬಲ್ಲ ಕೊಂಡಿ ನೀಡಲು ಸಾಧ್ಯವೇ?
ಕಳೆದ ಶತಮಾನದ ಅರವತ್ತರ ದಶಕದಲ್ಲಿ ಇಂಗ್ಲಿಷಿನ ಪಾಕೆಟ್ ಬುಕ್‍ಗಳಿಗೆ ಸಮವಾದ ಕೈಹೊತ್ತಿಗೆ/ಕೈಹೊತ್ತಗೆಗಳು ಕನ್ನಡದಲ್ಲಿ ಪ್ರಕಟವಾಗುತ್ತಿದ್ದವು. ಅಂಥ ಅನೇಕ ಪುಸ್ತಕಗಳು ನನ್ನ ತಂದೆಯವರ ಸಂಗ್ರಹದಲ್ಲಿವೆ. ಸ್ವತಃ ಪುಸ್ತಕ ಪ್ರಕಾಶಕರಾಗಿದ್ದ ಅವರೊಂದಿಗಿನ ಮಾತುಕತೆಯೊಂದಿಗೆ ತಿಳಿದ ವಿಷಯವನ್ನಷ್ಟೇ ಸಂಕ್ಷಿಪ್ತವಾಗಿ ವಿಕಿಪೀಡಿಯಾದಲ್ಲಿ ಪರಿಚಯಿಸಿದ್ದೆ. ಈ ಮಾಹಿತಿಯ ’ಖಚಿತತೆಯ’ ಬಗ್ಗೆ ಉಲ್ಲೇಖವನ್ನು ಸೂಚಿಸಬಲ್ಲ ಕೊಂಡಿ ನನ್ನಲಿಲ್ಲ. ನನ್ನ ಉದ್ದಿಶ್ಯ ಆ ಪುಟವನ್ನು ಕಾಲಕ್ರಮೇಣ ವಿಸ್ತರಿಸುವುದಾಗಿತ್ತು. ಸೂಕ್ತ ಉಲ್ಲೇಖಗಳ ಕೊಂಡಿಗಳು ಲಭ್ಯವಾದ ನಂತರ ಆ ಬಗ್ಗೆ ಬರೆಯುತ್ತೇನೆ. ಅಲ್ಲಿಯವರೆಗೆ ನಮೂದನ್ನು ಅಳಿಸುವುದೇ ಕ್ಷೇಮ, ಅಲ್ಲವೇ?
Haldodderi ೧೨:೫೦, ೧೧ ಏಪ್ರಿಲ್ ೨೦೧೩ (UTC) haldodderi
2021 Wikimedia Foundation Board elections: Eligibility requirements for voters
[ಬದಲಾಯಿಸಿ]Greetings,
The eligibility requirements for voters to participate in the 2021 Board of Trustees elections have been published. You can check the requirements on this page.
You can also verify your eligibility using the AccountEligiblity tool.
MediaWiki message delivery (ಚರ್ಚೆ) ೧೬:೩೩, ೩೦ ಜೂನ್ ೨೦೨೧ (UTC)
Note: You are receiving this message as part of outreach efforts to create awareness among the voters.