ಬಾಕ್ಸಿಂಗ್
This article includes a list of references, but its sources remain unclear because it has insufficient inline citations. (November 2009) |
ಈ ಲೇಖನವನ್ನು ಪ್ರಬಂಧ ಮಾದರಿಯಲ್ಲಿ ಬರೆಯಲಾಗಿದೆ.(April 2010) |
This article contains instructions, advice, or how-to content. (April 2010) |
ಹೀಗೂ ಕರೆಯಲ್ಪಡುತ್ತದೆ | Pugilism, English boxing, Western Boxing |
---|---|
ಗಮನ | Striking (Punching) |
ಮೂಲ ದೇಶ | Greece (Ancient Boxing) United Kingdom (Modern Boxing) |
ನಿರ್ಮಾತೃ | Various fighters |
ಮೂಲತನ | Unknown |
ಒಲಂಪಿಕ್ ಆಟಗಳು | Since 688 B.C. |
ಬಾಕ್ಸಿಂಗ್ ಒಂದು ಕಾಳಗದ ಕ್ರೀಡೆ ಮತ್ತು ಕದನ ಕಲೆಯಾಗಿದೆ. ಇದರಲ್ಲಿ ಇಬ್ಬರು ಅವರ ಮುಷ್ಟಿಯನ್ನು ಬಳಸಿಕೊಂಡು ಹೋರಾಡುತ್ತಾರೆ. ಬಾಕ್ಸಿಂಗ್ ವೈಶಿಷ್ಟ್ಯವಾಗಿ ಒಬ್ಬ ರೆಫರಿ(ನಿರ್ಣಯಕಾರ)ಯಿಂದ ಮೇಲ್ವಿಚಾರಣೆ ಮಾಡಲ್ಪಡುತ್ತದೆ. ಆತನು ಸುತ್ತುಗಳೆಂದು ಕರೆಯುವ ಒಂದರಿಂದ ಮೂರು ನಿಮಿಷಗಳ ಅನೇಕ ವಿರಾಮಮಾವಧಿಗಳ ನಂತರ ಮತ್ತೆ ಕಾಳಗವನ್ನು ಆರಂಭಿಸುತ್ತಾನೆ. ಬಾಕ್ಸರ್ಗಳು ಸಾಮಾನ್ಯವಾಗಿ ಒಂದೇ ರೀತಿಯ ತೂಕವನ್ನು ಹೊಂದಿರುತ್ತಾರೆ. ಜಯಗಳಿಸಲು ಮೂರು ಮಾರ್ಗಗಳಿರುತ್ತವೆ; ವಿರೋಧಿಯನ್ನು ಹೊಡೆದುರುಳಿಸಿದಾಗ ಆತನು ರೆಫರಿಯು ಹತ್ತು ಸೆಕೆಂಡುಗಳವರೆಗೆ ಎಣಿಸುವುದಕ್ಕಿಂತ ಮೊದಲು ಎದ್ದೇಳಲು ಅಸಮರ್ಥವಾದರೆ (ನಾಕ್ಔಟ್ ಅಥವಾ KO) ಅಥವಾ ವಿರೋಧಿಯು ಮುಂದುವರಿಸಲಾಗದಷ್ಟು ಅತಿಯಾಗಿ ಪೆಟ್ಟುಗೊಂಡರೆ (ಟೆಕ್ನಿಕಲ್ ನಾಕ್ಔಟ್ ಅಥವಾ TKO). ಒಪ್ಪಿದ ಸಂಖ್ಯೆಯಷ್ಟು ಸುತ್ತುಗಳಿಗಿಂತ ಮೊದಲು ಹೋರಾಟವು ನಿಲ್ಲದಿದ್ದರೆ, ಜಯಶಾಲಿಯನ್ನು ರೆಫರಿಯ ನಿರ್ಧಾರ ಅಥವಾ ತೀರ್ಪುಗಾರನ ಅಂಕಪಟ್ಟಿಯಿಂದ ನಿರ್ಣಯಿಸಲಾಗುತ್ತದೆ.
ಪೂರ್ವ ಇತಿಹಾಸ
[ಬದಲಾಯಿಸಿ]ಮೊದಲ ಕಾಳಗವನ್ನು ಸುಮೇರಿಯನ್ ಉಬ್ಬು ಶಿಲ್ಪದ ಕೆತ್ತನೆಯಲ್ಲಿ ಕ್ರಿ.ಪೂ. 3ನೇ ಸಹಸ್ರವರ್ಷದಲ್ಲಿ ಚಿತ್ರಿಸಲಾಗಿದೆ. ಕ್ರಿ.ಪೂ. 2ನೇ ಸಹಸ್ರವರ್ಷದ ಪ್ರಾಚೀನ ಈಜಿಪ್ಟ್ನ ಉಬ್ಬು ಶಿಲ್ಪವು ಮೊದಲ-ಕಾದಾಳಿಗಳ ಮತ್ತು ಪ್ರೇಕ್ಷಕರಿಬ್ಬರ ಬಗ್ಗೆಯೂ ಚಿತ್ರಿಸುತ್ತದೆ.[೧] ಎರಡೂ ಚಿತ್ರಣಗಳು ರಕ್ಷಣೆಯಿಲ್ಲದ-ಮುಷ್ಟಿಗಳ(ಬರಿಗೈಯ) ಪಂದ್ಯಗಳನ್ನು ತೋರಿಸುತ್ತವೆ.[೧] 1927ರಲ್ಲಿ ಪುರಾತತ್ವಜ್ಞ ಡಾ. E. A. ಸ್ಪೈಸರ್ ಇರಾಕ್ನ ಬಾಗ್ದಾದ್ನಲ್ಲಿ ಮೆಸಪೊಟಮಿಯನ್ ಶಿಲಾ ಫಲಕವೊಂದನ್ನು ಕಂಡುಹಿಡಿದನು. ಅದರಲ್ಲಿ ಇಬ್ಬರು ಬಹುಮಾನದ-ಧನಕ್ಕಾಗಿ-ಮಾಡುವ ಕಾಳಗ ಕ್ಕಾಗಿ ತಯಾರಿ ನಡೆಸುವುದನ್ನು ಚಿತ್ರಿಸಲಾಗಿತ್ತು. ಆ ಫಲಕವು 7,000 ವರ್ಷಗಳಷ್ಟು ಹಿಂದಿನದೆಂದು ನಂಬಲಾಗಿದೆ.[೨] ಯಾವುದೇ ರೀತಿಯ ಕೈಗವಸುಗಳನ್ನು ಧರಿಸಿಕೊಂಡು ನಡೆದ ಮೊದಲ ಕಾಳಗದ ಆರಂಭಿಕ ಆಧಾರವು ಮಿನನೋನ ಕ್ರೆಟೆ (ಸುಮಾರು ಕ್ರಿ.ಪೂ. 1500–900) ಮತ್ತು ಸಾರ್ಡಿನಿಯಾದಲ್ಲಿ ಕಂಡುಬರುತ್ತದೆ. ಇದು ಪ್ರ್ಯಾಮ ಪರ್ವತಗಳ ಬಾಕ್ಸಿಂಗ್ ಪ್ರತಿಮೆಗಳನ್ನು (ಸುಮಾರು ಕ್ರಿ.ಪೂ. 2000–1000) ಕಂಡಾಗ ಗೋಚರಿಸುತ್ತದೆ.[೧]
ಪುರಾತನ ಗ್ರೀಕ್ ಬಾಕ್ಸಿಂಗ್
[ಬದಲಾಯಿಸಿ]ಹೋಮರ್ನ ಇಲಿಯಡ್ (ಸುಮಾರು ಕ್ರಿ.ಪೂ. 675) ಮೊದಲ ಬಾಕ್ಸಿಂಗ್ ಕಾಳಗದ ಬಗೆಗಿನ ಸವಿವರ ನಿರೂಪಣೆಯನ್ನು ಹೊಂದಿದೆ (ಬುಕ್ XXIII).[೩] ಇಲಿಯಡ್ ನ ಪ್ರಕಾರ, ಮೈಸೆನಿಯನ್ ಕಾದಾಳುಗಳು ಅವರ ಸ್ಪರ್ಧೆಗಳಲ್ಲಿ ಬಾಕ್ಸಿಂಗ್ಅನ್ನೂ ಒಳಗೊಂಡಿದ್ದರು. ಉರುಳಿಬೀಳಿಸುವವರನ್ನು ಅದ್ಧೂರಿ ಕಾರ್ಯಕ್ರಮಗಳ (ಸುಮಾರು ಕ್ರಿ.ಪೂ. 1200) ಮೂಲಕ ಗೌರವಿಸುತ್ತಿದ್ದರು. ಹೋಮರಿಕ್ ಮಹಾಕಾವ್ಯವು ನಂತರದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಕ್ರಿ.ಪೂ. 9ನೇ ಶತಮಾನದಲ್ಲಿ ಜೀವಿಸುತ್ತಿದ್ದನೆಂದು ಹೇಳಲಾಗುವ ವೀರನಂಥ ರಾಜ ಥೆಸಿಯಸ್ ಒಂದು ರೀತಿಯ ಬಾಕ್ಸಿಂಗ್ಅನ್ನು ಸೃಷ್ಟಿಸಿದನೆಂದು ಮತ್ತೊಂದು ಪುರಾಣಕಥೆಯು ತಿಳಿಸುತ್ತದೆ. ಆ ಬಾಕ್ಸಿಂಗ್ನಲ್ಲಿ ಇಬ್ಬರು ಪ್ರತಿಸ್ಫರ್ಧಿಗಳು ಮುಖಾಮುಖಿಯಾಗಿ ಕುಳಿತುಕೊಂಡು, ಅವರ ಮುಷ್ಟಿಗಳಿಂದ ಪರಸ್ಪರ ಗುದ್ದಾಡಲು ಆರಂಭಿಸುತ್ತಾರೆ. ಅವರಲ್ಲಿ ಒಬ್ಬರು ಸಾಯಿಸಲ್ಪಡುವವರೆಗೆ ಗುದ್ದಾಡುವುದನ್ನು ಹಾಗೆಯೇ ಮುಂದುವರಿಸುತ್ತಾರೆ. ಅದೇ ಕಾಲದಲ್ಲಿ ಬಾಕ್ಸರ್ಗಳು ನಿಂತುಕೊಂಡು ಹಾಗೂ ಕೈಗವಸುಗಳು (ಸ್ಪೈಕ್ಗಳೊಂದಿಗೆ) ಮತ್ತು ಮೊಣಕೈಯಿಂದ ಕೆಳಗಿನವರೆಗೆ ಕೈಗಳಿಗೆ ಹೊದಿಕೆಗಳನ್ನು ಧರಿಸಿಕೊಂಡು ಕಾದಾಡಲು ಆರಂಭಿಸಿದರು. ಕೆಲವೊಮ್ಮೆ ಸಂಪೂರ್ಣವಾಗಿ ನಗ್ನವಾಗಿಯೂ ಹೋರಾಡುತ್ತಿದ್ದರು.
ಬಾಕ್ಸಿಂಗ್ಅನ್ನು ಕ್ರಿ.ಪೂ. 688ರಲ್ಲಿ ಪೈಗ್ಮೆ ಅಥವಾ ಪೈಗ್ಮೇಚಿಯಾ ಎಂದು ಹೆಸರಿನೊಂದಿಗೆ ಒಲಿಂಪಿಕ್ ಕ್ರೀಡೆಯಾಗಿ ಸ್ವೀಕರಿಸಲಾಯಿತು. ಸ್ಪರ್ಧಾಳುಗಳಿಗೆ ಮುಷ್ಟಿಯೇಟು ನೀಡುವ ಚೀಲಗಳಿಂದ (ಕೋರಿಕೋಸ್ ಎಂದು ಕರೆಯಲಾಗುತ್ತಿತ್ತು) ತರಬೇತಿ ನೀಡಲಾಗುತ್ತಿತ್ತು. ಕಾದಾಳುಗಳು ಕೈಗಳಿಗೆ, ಮಣಿಕಟ್ಟುಗಳಿಗೆ ಮತ್ತು ಕೆಲವೊಮ್ಮೆ ಎದೆಗೆ ಪೆಟ್ಟು ಬೀಳದಂತೆ ರಕ್ಷಿಸಲು ಚರ್ಮದ ಪಟ್ಟಿಗಳನ್ನು (ಹಿಮ್ಯಾಂಟೆಸ್ಗಳೆಂದು ಕರೆಯಲಾಗುತ್ತಿತ್ತು) ಧರಿಸುತ್ತಿದ್ದರು. ಆ ಪಟ್ಟಿಗಳು ಅವರ ಬೆರಳುಗಳನ್ನು ಆವರಿಸಿಕೊಳ್ಳದೆ, ಸ್ವತಂತ್ರವಾಗಿ ಬಿಡುತ್ತಿದ್ದವು. ಸ್ಪಾರ್ಟನ್ಗಳು ಬಾಕ್ಸಿಂಗ್ಅನ್ನು ಕತ್ತಿ ಮತ್ತು ಗುರಾಣಿಯ ಹೋರಾಟಕ್ಕೆ ತಯಾರಿ ನಡೆಸುವ ಒಂದು ವಿಧಾನವಾಗಿ ಬಳಸಿದವರಲ್ಲಿ ಮೊದಲಿಗರಾಗಿದ್ದಾರೆ ಎಂದು ಪುರಾಣ ಕಥೆಗಳು ಹೇಳುತ್ತವೆ.
ಪುರಾತನ ರೋಮನ್ ಬಾಕ್ಸಿಂಗ್
[ಬದಲಾಯಿಸಿ]ಪುರಾತನ ರೋಮ್ನಲ್ಲಿ ಎರಡು ರೀತಿಯ ಬಾಕ್ಸಿಂಗ್ಗಳಿದ್ದವು. ಎರಡೂ ಎಟ್ರುಸ್ಕ್ಯಾನ್ ಬಾಕ್ಸಿಂಗ್ನಿಂದ ಬಂದವಾಗಿದ್ದವು. ಅಂಗಸಾಧನೆಯ ರೀತಿಯ ಬಾಕ್ಸಿಂಗ್ ರೋಮನ್ ಸಾಮ್ರಾಜ್ಯದಾದ್ಯಂತ ಹೆಚ್ಚು ಜನಪ್ರಿಯವಾಗಿತ್ತು. ಮತ್ತೊಂದು ರೀತಿಯ ಬಾಕ್ಸಿಂಗ್ ಎಂದರೆ ಕತ್ತಿಮಲ್ಲನ ಬಾಕ್ಸಿಂಗ್. ಕಾದಾಳುಗಳು ಸಾಮಾನ್ಯವಾಗಿ ಅಪರಾಧಿಗಳು ಮತ್ತು ಜೀತದಾಳುಗಳಾಗಿರುತ್ತಿದ್ದರು. ಅವರು ಚಾಂಪಿಯನ್ಗಳಾಗಿ, ತಮ್ಮ ಸ್ವತಂತ್ರವನ್ನು ಪಡೆಯಬೇಕೆಂದು ಬಯಸುತ್ತಿದ್ದರು; ಆದರೂ ಸ್ವತಂತ್ರ ಪುರುಷರು, ಮಹಿಳೆಯರು ಮತ್ತು ಶ್ರೀಮಂತ ವರ್ಗಕ್ಕೆ ಸೇರಿದವರೂ ಕಾದಾಡುತ್ತಿದ್ದರು. ಗ್ಲ್ಯಾಡಿಯೇಟರ್ಗಳು ಅವರ ಬೆರಳಿನ ಗೆಣ್ಣುಗಳಿಗೆ "ಕೆಸ್ಟೆ"ಯನ್ನು ಮತ್ತು ಮುಂದೋಳುಗಳಿಗೆ ಚರ್ಮದ ಪಟ್ಟಿಗಳನ್ನು ಏಟಿನ ವಿರುದ್ಧ ರಕ್ಷಣೆಗಾಗಿ ಧರಿಸುತ್ತಿದ್ದರು. ಗಾಢವಾದ ಗಾಯದ ಗುರುತಿರುವ ಮತ್ತು ಹೂಕೋಸು ಕಿವಿಗಳಂತೆ ಚಾಚಿದ ಚಿತ್ರ ಬಾಕ್ಸರ್ ಆಫ್ ಕ್ವಿರಿನಲ್, ಇದು ಎಷ್ಟೊಂದು ಕ್ರೂರವಾದ ಕ್ರೀಡೆಯಾಗಿತ್ತು ಎಂಬುದನ್ನು ತೋರಿಸುತ್ತದೆ (ಪಂದ್ಯಗಳು ಹೆಚ್ಚಾಗಿ ವಿರೋಧಿಯ ಸಾವಿನಲ್ಲಿ ಅಥವಾ ಊನಗೊಳಿಸುವುದರಲ್ಲಿ ಕೊನೆಗೊಳ್ಳುತ್ತಿದ್ದವು).
ಅಂತಿಮವಾಗಿ, ಮೊದಲ ಕಾದಾಟವು ಹೆಚ್ಚು ಜನಪ್ರಿಯವಾಯಿತು. ಚಕ್ರವರ್ತಿಗಳೂ ಸಹ ಕಾದಾಡಲು ಆರಂಭಿಸಿದರು. ಈ ಅಭ್ಯಾಸವು ಕೇಸರ್ ನೆರೋನಿಸ್ನಿಂದ ಪ್ರೇರೇಪಿಸಲ್ಪಟ್ಟಿತು. ಚುರುಕುಬುದ್ಧಿಯ ಡೇರ್ಸ್ ಮತ್ತು ಪ್ರಚಂಡ ಎಂಟೆಲ್ಲಸ್ನ ನಡುವಿನ ಕಾದಾಟವನ್ನು ರೋಮನ್ ರಾಷ್ಟ್ರೀಯ ಮಹಾಕಾವ್ಯ ಏನೈಡ್ನಲ್ಲಿ (ಕ್ರಿ.ಪೂ. 1ನೇ ಶತಮಾನ) ಸುದೀರ್ಘವಾಗಿ ವಿವರಿಸಲಾಗಿದೆ.[೪]
ಕ್ರಿ.ಶ. 393ರಲ್ಲಿ ಒಲಿಂಪಿಕ್ಗಳನ್ನು ಕ್ರಿಶ್ಚಿಯನ್ ಚಕ್ರವರ್ತಿ ಥಿಯೊಡೋಸಿಯಸ್ ನಿಷೇಧಿಸಿದನು. ಕ್ರಿ.ಶ. 400ರಲ್ಲಿ ಥಿಯೊಡೋರಿಕ್ ದಿ ಗ್ರೇಟ್ ಬಾಕ್ಸಿಂಗ್ ದೇವರ ಪ್ರತಿರೂಪವಾದ ಮುಖವನ್ನು ವಿಕಾರಗೊಳಿಸುವುದರಿಂದ ದೇವರಿಗೆ ಅವಮಾನ ಮಾಡುತ್ತದೆಂದು ಬಾಕ್ಸಿಂಗ್ಅನ್ನು ನಿಷೇಧಿಸಿದನು. ಆದರೂ ಈ ಆಜ್ಞೆಯು ಪೌರಾತ್ಯ ಸಾಮ್ರಾಜ್ಯದ ಪ್ರಮುಖ ನಗರಗಳ ಹೊರಗೆ ಅಷ್ಟೊಂದು ಪ್ರಭಾವವನ್ನು ಹೊಂದಿರಲಿಲ್ಲ.[೫] ಆ ಸಂದರ್ಭದಲ್ಲಿ ಪಾಶ್ಚಿಮಾತ್ಯ ಯುರೋಪ್, ರೋಮನ್ ಸಾಮ್ರಾಜ್ಯದ ಭಾಗವಾಗಿರಲಿಲ್ಲ. ಬಾಕ್ಸಿಂಗ್ ಯುರೋಪಿನಲ್ಲಿ ಮಧ್ಯಯುಗದಾದ್ಯಂತ ಮತ್ತು ಅನಂತರ ಜನಪ್ರಿಯವಾಗಿ ಉಳಿದಿತ್ತು. ಮಲ್ಲಯುದ್ಧ, ಕತ್ತಿವರಿಸೆ ಮತ್ತು ಓಟದ ಪಂದ್ಯಗಳು (ಸಾರೋಟು ಮತ್ತು ಕಾಲ್ನಡಿಗೆ ಎರಡೂ) ಯಾವುದೇ ರೀತಿಯ ವಿರೂಪವನ್ನು ಉಂಟುಮಾಡದಿರುವುದರಿಂದ ಹಿಂದಿನ ರೋಮನ್ನರಿಂದ ನಿಷೇಧಿಸಲ್ಪಟ್ಟಿರಲಿಲ್ಲ.
ಆಧುನಿಕ ಬಾಕ್ಸಿಂಗ್
[ಬದಲಾಯಿಸಿ]ಬ್ರೋಟನ್ನ ನಿಯಮಗಳು (1743)
[ಬದಲಾಯಿಸಿ]ಪ್ರಾಚೀನ ಬಾಕ್ಸಿಂಗ್ ಚಟುವಟಿಕೆಗಳ ದಾಖಲೆಗಳು ರೋಮನ್ ಸಾಮ್ರಾಜ್ಯದ ಪತನದ ನಂತರದ ಕಣ್ಮರೆಯಾದವು. ಆದರೂ ಇಟಲಿಯ ವಿವಿಧ ನಗರಗಳು ಮತ್ತು ಪ್ರಾಂತಗಳಲ್ಲಿ 12ನೇ ಮತ್ತು 17ನೇ ಶತಮಾನಗಳಲ್ಲಿ ನಡೆಸಲ್ಪಟ್ಟ ವಿವಿಧ ಮುಷ್ಟಿ-ಕಾಳಗದ ಕ್ರೀಡೆಗಳ ಬಗೆಗಿನ ವಿವರಾತ್ಮಕ ದಾಖಲೆಗಳಿವೆ. ಪುರಾತನ ರಸ್ನಲ್ಲಿ ಮುಷ್ಟಿಕಾಳಗವೆಂದು ಕರೆಯುವ ಒಂದು ಕ್ರೀಡೆಯೂ ಸಹ ಅಸ್ತಿತ್ವದಲ್ಲಿತ್ತು. ಆ ಕ್ರೀಡೆಯು ನಂತರ ಆರಂಭಿಕ 18ನೇ ಶತಮಾನದಲ್ಲಿ ಇಂಗ್ಲೆಂಡ್ನಲ್ಲಿ ರಕ್ಷಣೆಯಿಲ್ಲದ-ಬೆರಳಿನ ಗೆಣ್ಣು(ಬೇರ್-ನಕಲ್) ಬಾಕ್ಸಿಂಗ್ ಎಂಬ ರೂಪದಲ್ಲಿ ಮತ್ತೆ ಹುಟ್ಟಿಕೊಂಡಿತು. ಇದನ್ನು ಕೆಲವೊಮ್ಮೆ ಬಹುಮಾನದ-ಕಾಳಗ ವೆಂದೂ ಕರೆಯಲಾಗುತ್ತಿತ್ತು. ರಕ್ಷಣೆಯಿಲ್ಲದ-ಬೆರಳಿನ-ಗೆಣ್ಣು ಕಾಳಗದ ಮೊದಲ ದಾಖಲೆಯು ಇಂಗ್ಲೆಂಡ್ನಲ್ಲಿ 1681ರಲ್ಲಿ ಲಂಡನ್ ಪ್ರೊಟೆಸ್ಟೆಂಟ್ ಮರ್ಕ್ಯುರಿ ಯಲ್ಲಿ ಕಂಡುಬಂದಿದೆ. ಮೊದಲ ಇಂಗ್ಲಿಷ್ ರಕ್ಷಣೆಯಿಲ್ಲದ-ಬೆರಳಿನ-ಗೆಣ್ಣು ಬಾಕ್ಸಿಂಗ್ ಚಾಂಪಿಯನ್ ಎಂದರೆ ಜೇಮ್ಸ್ ಫಿಗ್, 1719.[೬] ಈ ಕಾಲದಲ್ಲೇ "ಬಾಕ್ಸಿಂಗ್" ಪದವು ಮೊದಲು ಬಳಕೆಗೆ ಬಂದಿತು. ಆಧುನಿಕ ಬಾಕ್ಸಿಂಗ್ನ ಈ ಆರಂಭಿಕ ರೂಪವು ತೀರಾ ಭಿನ್ನವಾಗಿತ್ತು ಎಂಬುದನ್ನು ಗಮನಿಸಬೇಕು. ಮಿಸ್ಟರ್ ಫಿಗ್ನ ಕಾಲದ ಸ್ಪರ್ಧೆಗಳು ಮುಷ್ಟಿಕಾಳಗದೊಂದಿಗೆ ಕತ್ತಿವರಿಸೆ ಮತ್ತು ದೊಣ್ಣೆಕಾಳಗಗಳನ್ನೂ ಒಳಗೊಂಡಿದ್ದವು.
ಆರಂಭಿಕ ಕಾಳಗಗಳು ಯಾವುದೇ ಬರೆದ ನಿಮಯಗಳನ್ನು ಹೊಂದಿರಲಿಲ್ಲ. ಆಗ ಯಾವುದೇ ತೂಕದ ವಿಭಾಗಗಳು ಅಥವಾ ಸುತ್ತಿನ ಮಿತಿಗಳಿರಲಿಲ್ಲ ಹಾಗೂ ರೆಫರಿಯೂ ಸಹ ಇರಲಿಲ್ಲ. ಸಾಮಾನ್ಯವಾಗಿ ಇದು ಹೆಚ್ಚುಕಡಿಮೆ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿತ್ತು. ಬ್ರೋಟನ್ನ ನಿಯಮಗಳೆಂದು ಕರೆಯಲ್ಪಡುವ ಮೊದಲ ಬಾಕ್ಸಿಂಗ್ ನಿಯಮಗಳನ್ನು ಅಧಿಕ-ಭಾರದ ಚಾಂಪಿಯನ್ ಜ್ಯಾಕ್ ಬ್ರೋಟನ್ 1743ರಲ್ಲಿ, ಕೆಲವೊಮ್ಮೆ ಸಾವುಗಳು ಸಂಭವಿಸುತ್ತಿದ್ದ ಕಾಳಗ-ರಂಗದಲ್ಲಿ ಕಾದಾಳಿಗಳನ್ನು ರಕ್ಷಿಸಲು ಬಳಕೆಗೆ ತಂದನು.[೭] ಈ ನಿಯಮಗಳಡಿಯಲ್ಲಿ, ಒಬ್ಬ ಕಾದಾಳಿಯು ಕೆಳಗೆ ಉರುಳಿಬಿದ್ದು, 30 ಸಕೆಂಡುಗಳ ಎಣಿಕೆಯ ನಂತರವೂ ಕಾದಾಟವನ್ನು ಮುಂದುವರಿಸಲು ಅಸಮರ್ಥನಾದರೆ, ಆ ಕಾಳಗವು ಮುಕ್ತಾಯವಾಗುತ್ತಿತ್ತು. ಉರುಳಿಬಿದ್ದ ಕಾದಾಳಿಯನ್ನು ಹೊಡೆಯುವುದು ಮತ್ತು ನಡುವಿನ ಕೆಳಗೆ ಭದ್ರವಾಗಿ ಹಿಡಿದುಕೊಳ್ಳುವುದು ನಿಷೇಧಿಸಲ್ಪಟ್ಟಿದ್ದವು. ಬ್ರೋಟನ್ "ಮಫ್ಲರ್"ಗಳ ಬಳಕೆಯನ್ನೂ ಚಾಲ್ತಿಗೆ ತಂದನು ಮತ್ತು ಪ್ರೋತ್ಸಾಹಿಸಿದನು. ಇವು ಒಂದು ರೀತಿಯ ಮೆತ್ತೆಯೊದಗಿಸುವ ಕೈಗವಸುಗಳು. ಇವನ್ನು ತರಬೇತಿ ಮತ್ತು ಪ್ರದರ್ಶನಗಳಲ್ಲಿ ಬಳಸಲಾಗುತ್ತಿತ್ತು. ಬಾಕ್ಸಿಂಗ್ ಬಗೆಗಿನ ಮೊದಲ ಪತ್ರಿಕೆಯನ್ನು 18ನೇ ಶತಮಾನದ ಉತ್ತರಾರ್ಧದಲ್ಲಿ ಯಶಸ್ವಿ ಬರ್ಮಿಂಗ್ಹ್ಯಾಮ್ ಬಾಕ್ಸರ್ 'ವಿಲಿಯಮ್ ಫುಟ್ರೆಲ್' ಪ್ರಕಟಿಸಿದನು. ಆತನು 1788ರ ಜುಲೈ 9ರಂದು ಕ್ರೋಯ್ಡನ್ನ ಸ್ಮಿಥ್ಯಾಮ್ ಬಾಟಮ್ನಲ್ಲಿ ಕಿರಿಯ "ಜಂಟಲ್ಮ್ಯಾನ್" ಜಾನ್ ಜ್ಯಾಕ್ಸನ್ ವಿರುದ್ಧ ನಡೆದ ಒಂದು ಗಂಟೆ ಮತ್ತು ಹದಿನೇಳು ನಿಮಿಷಗಳ ಕಾಳಗದವರೆಗೆ ಯಾರಿಂದಲೂ ಸೋಲನ್ನು ಕಾಣದೆ ಜಯಶಾಲಿಯಾಗಿದ್ದನು. ಈ ಕಾಳಗದಲ್ಲಿ ಪ್ರಿನ್ಸ್ ಆಫ್ ವೇಲ್ಸ್ ಉಪಸ್ಥಿತರಿದ್ದರು.
ಈ ನಿಯಮಗಳು ಕಾದಾಳಿಗಳಿಗೆ ಇಂದಿನ ಬಾಕ್ಸರ್ಗಳು ಹೊಂದಿಲ್ಲದ ಒಂದು ಪ್ರಯೋಜನವನ್ನು ನೀಡುತ್ತಿದ್ದವು: ಅವು ಕಾದಾಳಿಗೆ ಯಾವುದೇ ಸಮಯದಲ್ಲಿ ಒಂದು ಮಂಡಿಗೆ ಕುಸಿದಾಗಿ 30-ಸೆಕೆಂಡುಗಳ ಎಣಿಕೆಯನ್ನು ಆರಂಭಿಸಲು ಅನುವು ಮಾಡಿಕೊಡುತ್ತಿದ್ದವು. ಆದ್ದರಿಂದ ಕಾದಾಳಿಯು ತಾನು ಅಪಾಯದಲ್ಲಿರುವುದನ್ನು ಮತ್ತು ಪುನಃಚೇತರಿಸಿಕೊಳ್ಳಲು ಅವಕಾಶವಿರುವುದನ್ನು ಕಂಡುಕೊಳ್ಳುತ್ತಾನೆ. ಆದರೂ ಇದನ್ನು "ಪೌರುಷಹೀನ"[೮] ವೆಂದು ಪರಿಗಣಿಸಲಾಗುತ್ತಿತ್ತು ಹಾಗೂ ಇದನ್ನು ಸಹಾಯಕ ಬಾಕ್ಸರ್ಗಳು ಉಂಟುಮಾಡಿದ ಹೆಚ್ಚುವರಿ ನಿಮಯಗಳು ರದ್ದುಗೊಳಿಸಿದವು.[೯] ಆಧುನಿಕ ಬಾಕ್ಸಿಂಗ್ನಲ್ಲಿ ಉದ್ದೇಶಪೂರ್ವಕವಾಗಿ ಹಿಂಜರಿಯುವುದು ಪುನಃಚೇತರಿಸಿಕೊಳ್ಳುವ ಕಾದಾಳಿಗೆ ಅಂಕವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಸ್ಪರ್ಧಿಗಳು ಅವರ ಕೈಗಳನ್ನು ರಕ್ಷಿಸಿಕೊಳ್ಳಲು ಭಾರಿ ಚರ್ಮದ ಕೈಗವಸುಗಳು ಮತ್ತು ಮಣಿಕಟ್ಟು-ಹೊದಿಕೆಗಳನ್ನು ಹೊಂದಿಲ್ಲದಿದ್ದುದರಿಂದ, ತಲೆಗೆ ಪೆಟ್ಟು ನೀಡುವಾಗ ಕೆಲವು ನಿರ್ಬಂಧಗಳು ಅವಶ್ಯಕವಾಗಿದ್ದವು.
ಲಂಡನ್ ಪ್ರೈಜ್ ರಿಂಗ್ ನಿಯಮಗಳು (1838)
[ಬದಲಾಯಿಸಿ]1838ರಲ್ಲಿ ಲಂಡನ್ ಪ್ರೈಜ್ ರಿಂಗ್ ನಿಯಮಗಳನ್ನು ಕ್ರೋಡೀಕರಿಸಲಾಯಿತು. ನಂತರ 1853ರಲ್ಲಿ ಪರಿಷ್ಕರಿಸಲಾದ ಆ ನಿಯಮಗಳು ಈ ಕೆಳಗಿನಂತಿವೆ:[೧೦]
- ಕಾಳಗಗಳು ಹಗ್ಗಗಳಿಂದ ಆವೃತವಾದ 24 feet (7.3 m)-ಚದರ ವಿಸ್ತೀರ್ಣದ ರಂಗದಲ್ಲಿ ನಡೆಯಬೇಕಿತ್ತು.
- ಕಾದಾಳಿಯು ಉರುಳಿಬಿದ್ದರೆ, ಹೋರಾಟವನ್ನು ಮುಂದುವರಿಸಲು ಆವನ ಸ್ವಂತ ಸಾಮರ್ಥ್ಯದಿಂದ 30 ಸೆಕೆಂಡುಗಳೊಳಗೆ ಎದ್ದೇಳಬೇಕಿತ್ತು.
- ಕಚ್ಚುವುದು, ತಲೆಯಿಂದ ಢಿಕ್ಕಿ ಹೊಡೆಯುವುದು ಮತ್ತು ನಡುಪಟ್ಟಿಯಿಂದ ಕೆಳಭಾಗಕ್ಕೆ ಹೊಡೆಯುವುದು ಮೊದಲಾದವನ್ನು ಫೌಲ್ಗಳೆಂದು ಘೋಷಿಸಲಾಗುತ್ತಿತ್ತು.
ಹತ್ತೊಂಭತ್ತನೇ ಶತಮಾನದ ಉತ್ತರಾರ್ಧದಲ್ಲಿ ಬಾಕ್ಸಿಂಗ್ ಅಥವಾ ಬಹುಮಾನದ-ಕಾಳಗವು ಪ್ರಾಥಮಿಕವಾಗಿ ಅಸ್ಪಷ್ಟ ಕಾನೂನು-ಸಮ್ಮತಿಯ ಕ್ರೀಡೆಯಾಗಿತ್ತು. ಇಂಗ್ಲೆಂಡ್ನಲ್ಲಿ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನದ ಹೆಚ್ಚಿನ ಭಾಗಗಳಲ್ಲಿ ಬಹುಮಾನದ-ಕಾಳಗಗಳನ್ನು ಹೆಚ್ಚಾಗಿ ಜೂಜಿನ ಪ್ರದೇಶಗಳಲ್ಲಿ ನಡೆಸಲಾಗುತ್ತಿತ್ತು ಹಾಗೂ ಅನೇಕ ಸಂದರ್ಭಗಳಲ್ಲಿ ಇವನ್ನು ಪೋಲೀಸರು ನಿಗ್ರಹಿಸುತ್ತಿದ್ದರು. ಕಾದಾಟ ಮತ್ತು ಮಲ್ಲಯುದ್ಧಗಳ ತಂತ್ರಗಳು ಮುಂದುವರಿಯುತ್ತಿದ್ದವು. ಅಲ್ಲದೆ ಬಹುಮಾನದ-ಕಾಳಗಗಳಲ್ಲಿ ದಂಗೆಗಳು ಸಾಮಾನ್ಯವಾಗಿ ಕಂಡುಬರುತ್ತಿದ್ದವು. ಆದರೂ ಈ ಅವಧಿಯಲ್ಲಿ ಕೆಲವು ಪ್ರಮುಖ ರಕ್ಷಣೆಯಿಲ್ಲದ-ಬೆರಳಿನ ಗೆಣ್ಣು ಚಾಂಪಿಯನ್ಗಳು ಕಂಡುಬಂದಿದ್ದಾರೆ. ಅವರು ಅತ್ಯಾಧುನಿಕ ಮತ್ತು ಸಂಕೀರ್ಣವಾದ ಕಾಳಗದ ತಂತ್ರಗಳನ್ನು ಅಭಿವೃದ್ಧಿಪಡಿಸಿದರು.
ಮಾರ್ಕ್ವೆಸ್ ಆಫ್ ಕ್ವೀನ್ಸ್ಬೆರಿ ನಿಯಮಗಳು (1867)
[ಬದಲಾಯಿಸಿ]1867ರಲ್ಲಿ ಮಾರ್ಕ್ವೆಸ್ ಆಫ್ ಕ್ವೀನ್ಸ್ಬೆರಿ ನಿಯಮಗಳನ್ನು ಜಾನ್ ಚೇಂಬರ್ಸ್ ಲಂಡನ್ನ ಲಿಲ್ಲಿ ಬ್ರಿಡ್ಜ್ನಲ್ಲಿ ಕಡಿಮೆ-ತೂಕದವರಿಗಾಗಿ, ಮಧ್ಯಮ-ತೂಕದವರಿಗಾಗಿ ಮತ್ತು ಭಾರಿ-ತೂಕದವರಿಗಾಗಿ ನಡೆಸಿದ ಹವ್ಯಾಸಿ-ಚಾಂಪಿಯನ್ಪಟ್ಟಕ್ಕಾಗಿ ಸಿದ್ಧಮಾಡಿದನು. ಈ ನಿಯಮಗಳನ್ನು ಮಾರ್ಕ್ವೆಸ್ ಆಫ್ ಕ್ವೀನ್ಸ್ಬೆರಿಯ ಪ್ರೋತ್ಸಾಹದಲ್ಲಿ ಪ್ರಕಟಿಸಲಾಯಿತು. ಆತನ ಹೆಸರು ಯಾವಾಗಲೂ ಆ ನಿಯಮಗಳೊಂದಿಗೆ ಸಂಬಂಧಿಸಿದೆ.
ಒಟ್ಟಿಗೆ ಹನ್ನೆರಡು ನಿಯಮಗಳಿದ್ದವು ಹಾಗೂ ಅವು ಕಾಳಗಗಳು 24-ಅಡಿ-ಚದರ ವಿಸ್ತೀರ್ಣದ ಅಥವಾ ಅಂತಹುದೇ ರಂಗದಲ್ಲಿ "ಒಂದು ಉಗ್ರವಾದ ಬಾಕ್ಸಿಂಗ್ ಪಂದ್ಯ"ವಾಗಿರಬೇಕೆಂದು ನಿರ್ದಿಷ್ಟಪಡಿಸುತ್ತಿದ್ದವು. ಸುತ್ತುಗಳು ಮೂರು ನಿಮಿಷದಷ್ಟು ದೀರ್ಘವಾಗಿರುತ್ತಿದ್ದವು ಹಾಗೂ ಸುತ್ತುಗಳ ಮಧ್ಯೆ ಒಂದು ನಿಮಿಷ ವಿರಾಮಾವಧಿಗಳಿರುತ್ತಿದ್ದವು. ಕಾದಾಳಿಯು ಕೆಳಗುರುಳಿ ಬಿದ್ದಾಗ ಹತ್ತು ಸೆಕೆಂಡುಗಳ ಎಣಿಕೆಯನ್ನು ನೀಡಲಾಗುತ್ತಿತ್ತು ಹಾಗೂ ಕಾಳಗವನ್ನು ನಿಷೇಧಿಸಲಾಗುತ್ತಿತ್ತು.
"ಸಾಧಾರಣ-ಗಾತ್ರ"ದ ಕೈಗವಸುಗಳ ಬಳಕೆಯೂ ಪಂದ್ಯದ ರೀತಿಯನ್ನು ಬದಲಾಯಿಸಿತು. ಒಂದು ಸರಾಸರಿ ಜೊತೆ ಬಾಕ್ಸಿಂಗ್ ಕೈಗವಸುಗಳು ಉಬ್ಬಿದ ಜೊತೆ ಕೈಗವಸುಗಳನ್ನು ಹೋಲುತ್ತವೆ ಹಾಗೂ ಅವು ಮಣಿಕಟ್ಟುಗಳ ಸುತ್ತ ಕೂಡಿಸಿ ಬಿಗಿಯುತ್ತವೆ.[೧೨] ಈ ಕೈಗವಸುಗಳನ್ನು ವಿರೋಧಿಯ ಹೊಡೆತವನ್ನು ತಡೆಯಲು ಬಳಸಲಾಗುತ್ತದೆ. ಅವುಗಳ ಬಳಕೆಯ ಪರಿಣಾಮವಾಗಿ, ಪಂದ್ಯಗಳು ಹೆಚ್ಚು ದೀರ್ಘವಾದವು ಮತ್ತು ಯುದ್ಧತಂತ್ರದಿಂದ ಕೂಡಿದವು. ಈ ಕೈಗವಸುಗಳು ಜಾರಿಕೊಳ್ಳುವುದು, ಎಗರುವುದು, ಎದುರೇಟು ಕೊಡುವುದು ಮತ್ತು ವಶಪಡಿಸಿಕೊಳ್ಳುವುದು ಮೊದಲಾದ ರಕ್ಷಣಾ ಕುಶಲಚಲನೆಗಳಿಗೆ ಸಂಬಂಧಿಸಿದಂತೆ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದವು. ಮುಂದೋಳುಗಳ ಬಳಕೆಯಿಂದ ಕಡಿಮೆ ರಕ್ಷಣೆಯಿದ್ದು, ಅದೇ ಕೈಗವಸುಗಳ ಬಳಸಿದರೆ ಹೆಚ್ಚು ಸುರಕ್ಷಿತವಾಗಿರುತ್ತದೆ. ಆದ್ದರಿಂದ ರಕ್ಷಣೆಯಿಲ್ಲದ-ಬೆರಳಿನ ಗೆಣ್ಣು ಬಾಕ್ಸರ್ನ ಮುಂಡಭಾಗವನ್ನು ಹಿಂದಕ್ಕೆ ಬಗ್ಗಿಸುವ ಹೊಡೆತದ ಭಂಗಿಯು ಹೆಚ್ಚು ಆಧುನಿಕ ಶೈಲಿಗೆ ಮಾರ್ಪಡಿಸಲಾಯಿತು. ಅದರಲ್ಲಿ ಮುಂಡಭಾಗವನ್ನು ಮುಂದಕ್ಕೆ ಬಗ್ಗಿಸಲಾಗುತ್ತದೆ ಹಾಗೂ ಕೈಗಳನ್ನು ಮುಖಕ್ಕೆ ಹತ್ತಿರವಾಗಿ ಹಿಡಿಯಲಾಗುತ್ತದೆ.
ಇಂಗ್ಲಿಷ್ ಕೇಸ್ R v. ಕಾನಿ ಯು 1882ರಲ್ಲಿ ಸ್ಪರ್ಧಿಗಳ ಒಪ್ಪಿಗೆಯ ಹೊರತಾಗಿ ರಕ್ಷಣೆಯಿಲ್ಲದ-ಬೆರಳಿನ ಗೆಣ್ಣು ಕಾಳಗವು ಶರೀರಕ್ಕೆ ಹಾನಿಯನ್ನುಂಟುಮಾಡುವ ಒಂದು ಹಲ್ಲೆಯಾಗಿದೆಯೆಂದು ಹೇಳಿತು. ಇದು ಇಂಗ್ಲೆಂಡ್ನಲ್ಲಿ ಸಾರ್ವಜನಿಕವಾಗಿ ವ್ಯಾಪಕವಾಗಿ ಹರಡಿದ್ದ ರಕ್ಷಣೆಯಿಲ್ಲದ-ಬೆರಳಿನ ಗೆಣ್ಣು ಸ್ಪರ್ಧೆಗಳನ್ನು ಕೊನೆಗೊಳಿಸುವಂತೆ ಸೂಚಿಸಿತು.
ಕ್ವೀನ್ಸ್ಬೆರಿ ನಿಯಮಗಳಡಿಯಲ್ಲಿ ಪ್ರಪಂಚದಲ್ಲಿ ಮೊದಲ ಬಾರಿಗೆ ಭಾರಿ-ತೂಕದ ಚಾಂಪಿಯನ್ ಆದವನೆಂದರೆ "ಜಂಟಲ್ಮ್ಯಾನ್ ಜಿಮ್" ಕಾರ್ಬೆಟ್ಟ್. ಆತನು ನ್ಯೂ ಆರ್ಲಿಯನ್ಸ್ನ ಪೆಲಿಕನ್ ಅಥ್ಲೆಟಿಕ್ ಕ್ಲಬ್ನಲ್ಲಿ 1892ರಲ್ಲಿ ನಡೆದ ಪಂದ್ಯದಲ್ಲಿ ಜಾನ್ L. ಸುಲ್ಲಿವ್ಯಾನ್ನನ್ನು ಸೋಲಿಸಿದನು.[೧೩]
ಆರಂಭಿಕ ಇಪ್ಪತ್ತನೇ ಶತಮಾನದಾದ್ಯಂತ ಬಾಕ್ಸರ್ಗಳು, ಟೆಕ್ಸ್ ರಿಕಾರ್ಡ್ನಂತಹ ಪ್ರೋತ್ಸಾಹಕರ ಪ್ರಭಾವದ ಹಾಗೂ ಜಾನ್ L. ಸುಲ್ಲಿವ್ಯಾನ್ರಿಂದ ಹಿಡಿದು ಜ್ಯಾಕ್ ಡೆಂಪ್ಸೆರವರೆಗಿನ ಶ್ರೇಷ್ಠ ಚಾಂಪಿಯನ್ಗಳ ಜನಪ್ರಿಯತೆಯ ನೆರವಿನೊಂದಿಗೆ ಕಾನೂನು-ಸಮ್ಮತಿಯನ್ನು ಪಡೆಯಲು ತುಂಬಾ ಕಷ್ಟಪಟ್ಟರು. ಈ ಅವಧಿಯ ನಂತರ ಸ್ವಲ್ಪದರಲ್ಲಿ, ಈ ಕ್ರೀಡೆಯನ್ನು ನಿಯಂತ್ರಿಸಲು ಮತ್ತು ವಿಶ್ವವ್ಯಾಪಕವಾಗಿ ಜನಪ್ರಿಯವಾದ ಚಾಂಪಿಯನ್ಗಳನ್ನು ದೃಢಪಡಿಸಲು ಬಾಕ್ಸಿಂಗ್ ನಿಯೋಗಗಳು ಮತ್ತು ಇತರ ಅನುಮೋದಿಸುವ-ಸಂಸ್ಥೆಗಳು ಸ್ಥಾಪನೆಯಾದವು.
ನಿಯಮಗಳು
[ಬದಲಾಯಿಸಿ]ಮಾರ್ಕ್ವೆಸ್ ಆಫ್ ಕ್ವೀನ್ಸ್ಬೆರಿ ನಿಯಮಗಳು 1867ರಲ್ಲಿ ಪ್ರಕಟವಾದಾಗಿನಿಂದ ಆಧುನಿಕ ಬಾಕ್ಸಿಂಗ್ಅನ್ನು ನಿರ್ದೇಶಿಸುತ್ತಿರುವ ಸಾರ್ವತ್ರಿಕ ನಿಯಮಗಳಾಗಿವೆ.
ಬಾಕ್ಸಿಂಗ್ ಪಂದ್ಯವು ವೈಶಿಷ್ಟ್ಯವಾಗಿ ನಿರ್ದಿಷ್ಟ ಸಂಖ್ಯೆಯ ಮೂರು-ನಿಮಿಷದ ಸುತ್ತುಗಳನ್ನು ಹೊಂದಿರುತ್ತದೆ, ಗರಿಷ್ಠವೆಂದರೆ 12 ಸುತ್ತುಗಳವರೆಗಿರುತ್ತದೆ (ಹಿಂದಿನ ಕಾಲದಲ್ಲಿ 15). ಪ್ರತಿ ಸುತ್ತಿನ ಮಧ್ಯದಲ್ಲಿ ಒಂದು ನಿಮಿಷ ಕಾಲ ಕಾದಾಳಿಗಳು ಅವರಿಗೆ ಗೊತ್ತುಪಡಿಸಿದ ವಿಶ್ರಾಂತಿ-ಮೂಲೆಗಳಲ್ಲಿ ಅವರ ತರಬೇತುದಾರರಿಂದ ಮತ್ತು ಸಿಬ್ಬಂದಿಗಳಿಂದ ಸಲಹೆ ಮತ್ತು ಎಚ್ಚರಿಕೆಗಳನ್ನು ಪಡೆಯುತ್ತಾರೆ. ಕಾದಾಟವು ಒಬ್ಬ ರೆಫರಿಯಿಂದ ನಿಯಂತ್ರಿಸಲ್ಪಡುತ್ತದೆ. ಆತನು ಕಾದಾಳಿಗಳ ನಿರ್ವಹಣೆಯನ್ನು ನಿರ್ಣಯಿಸಲು ಮತ್ತು ನಿಯಂತ್ರಿಸಲು, ಸುರಕ್ಷಿತವಾಗಿ ಕಾದಾಡಲು ಅವರ ಸಾಮರ್ಥ್ಯದ ಬಗ್ಗೆ ನಿರ್ಧರಿಸಲು, ಕೆಳಗೆ ಉರುಳಿದ ಕಾದಾಳಿಗಳಿಗೆ ಸಮಯವನ್ನು ಎಣಿಸಲು ಹಾಗೂ ಫೌಲ್ಗಳನ್ನು ನಿರ್ಣಯಿಸಲು ಕಾಳಗ-ರಂಗದೊಳಗೆ ಕಾರ್ಯನಿರ್ವಹಿಸುತ್ತಾನೆ. ಸುಮಾರು ಮೂರು ತೀರ್ಪುಗಾರರು ರಂಗದ ಹತ್ತಿರದಲ್ಲಿರುತ್ತಾರೆ. ಅವರು ತಗಲುವ, ರಕ್ಷಿಸುವ, ನಾಕ್ಡೌನ್ ಮಾಡುವ ಮುಷ್ಟಿಯೇಟುಗಳ ಮತ್ತು ಇತರ ಪರಿಮಾಣಗಳ ಆಧಾರದಲ್ಲಿ ಸುತ್ತನ್ನು ಲೆಕ್ಕಹಾಕುತ್ತಾರೆ ಮತ್ತು ಬಾಕ್ಸರ್ಗಳಿಗೆ ಅಂಕಗಳನ್ನು ನೀಡುತ್ತಾರೆ. ಬಾಕ್ಸಿಂಗ್ ತೀರ್ಪಿನ ಪೂರ್ವ-ನಿರ್ಧಾರಿತವಾದ ಎಲ್ಲೆ ಇರದ ಶೈಲಿಯಿಂದಾಗಿ, ಹೆಚ್ಚಿನ ಕಾದಾಟಗಳು ವಿವಾದಾತ್ಮಕ ಫಲಿತಾಂಶಗಳನ್ನು ಹೊಂದುತ್ತವೆ. ಒಬ್ಬ ಅಥವಾ ಇಬ್ಬರೂ ಕಾದಾಳಿಗಳು ತಾವು ಮೋಸಹೋಗಿದ್ದೇವೆಂದು ಅಥವಾ ಪಕ್ಷಪಾತದಿಂದ ಗೆಲುವನ್ನು ಕಳೆದುಕೊಂಡೆವೆಂದು ಭಾವಿಸುತ್ತಾರೆ. ಪ್ರತಿಯೊಬ್ಬ ಕಾದಾಳಿಯು ಕಾಳಗದ-ರಂಗದಲ್ಲಿ ಒಂದು ಗೊತ್ತುಪಡಿಸಿದ ವಿಶ್ರಾಂತಿ-ಮೂಲೆಯನ್ನು ಹೊಂದಿರುತ್ತಾನೆ. ಅಲ್ಲಿ ಅವನ ಅಥವಾ ಅವಳ ತರಬೇತುದಾರರು ಮತ್ತು ಒಬ್ಬ ಅಥವಾ ಅದಕ್ಕಿಂತ ಹೆಚ್ಚಿನ "ಸಹಾಯಕ"ರು ಕಾದಾಟದ ಆರಂಭದಲ್ಲಿ ಮತ್ತು ಸುತ್ತುಗಳ ಮಧ್ಯದಲ್ಲಿ ಕಾದಾಳಿಗೆ ಸಲಹೆಸೂಚನೆಗಳನ್ನು ನೀಡುತ್ತಾರೆ. ಪ್ರತಿಯೊಬ್ಬ ಬಾಕ್ಸರ್ಗಳೂ ಪ್ರತಿ ಸುತ್ತಿನ ಆರಂಭದಲ್ಲಿ ರಂಗಕ್ಕೆ ಅವರಿಗೆ ಗೊತ್ತುಪಡಿಸಿದ ವಿಶ್ರಾಂತಿ-ಮೂಲೆಗಳಿಂದ ಪ್ರವೇಶಿಸುತ್ತಾರೆ ಹಾಗೂ ಪ್ರತಿ ಸುತ್ತಿನ ಕೊನೆಯಲ್ಲಿ ಸಂಕೇತದ ಮೂಲಕ ಆದೇಶಿಸಿದಾಗ ಕಾದಾಟವನ್ನು ಮುಗಿಸಿ, ಅವರ ಮೂಲೆಗಳಿಗೆ ಹಿಂದಿರುಗಬೇಕು.
ಮೊದಲೇ ನಿರ್ದಿಷ್ಟಪಡಿಸಿದ ಸಂಖ್ಯೆಯ ಸುತ್ತುಗಳಿರುವ ಸ್ಪರ್ಧೆಗೆ ಅಂತಿಮ ನಿರ್ಧಾರವನ್ನು ತೀರ್ಪುಗಾರರು ನೀಡುತ್ತಾರೆ ಹಾಗೂ ಅಂತಹ ಸ್ಪರ್ಧೆಗಳನ್ನು "ಪೂರ್ತಿ ಕಾಲ ಸೆಣಸು(ಗೋ ದಿ ಡಿಸ್ಟ್ಯಾನ್ಸ್)" ಎಂದು ಹೇಳಲಾಗುತ್ತದೆ. ಕಾದಾಟದ ಕೊನೆಯಲ್ಲಿ ಅತಿ ಹೆಚ್ಚು ಅಂಕಗಳಿಸುವ ಕಾದಾಳಿಯನ್ನು ಜಯಶಾಲಿಯೆಂದು ಘೋಷಿಸಲಾಗುತ್ತದೆ. ಮೂವರು ತೀರ್ಪುಗಾರರ ಮಧ್ಯೆ ಏಕಾಭಿಪ್ರಾಯದ ಮತ್ತು ಭಿನ್ನವಾದ ನಿರ್ಣಯಗಳು ಸಂಭವಿಸುತ್ತದೆ. ಒಬ್ಬ ಬಾಕ್ಸರ್, ಸೋಲಿಸುವ ಹೊಡೆತದ ಮೂಲಕ ಅಂತಿಮ ನಿರ್ಣಯವನ್ನು ನೀಡುವುದಕ್ಕಿಂತ ಮೊದಲು ಸ್ಪರ್ಧೆಯನ್ನು ಗೆಲ್ಲಬಹುದು; ಅಂತಹ ಸ್ಪರ್ಧೆಗಳನ್ನು "ಪೂರ್ತಿಕಾಲದೊಳಗೆ" ಕೊನೆಗೊಂಡವೆಂದು ಹೇಳಲಾಗುತ್ತದೆ. ಹೋರಾಟದ ಸಂದರ್ಭದಲ್ಲಿ ಕಾದಾಳಿಯು ಹೊಡೆದುರುಳಲ್ಪಟ್ಟರೆ, ಅವನಾಗಿಯೇ ಜಾರಿ ಅಲ್ಲದೆ ವಿರೋಧಿಯ ಹೊಡೆತದ ಪರಿಣಾಮದಿಂದಾಗಿ ಪಾದವನ್ನು ಹೊರತುಪಡಿಸಿ ಬಾಕ್ಸರ್ನ ದೇಹದ ಯಾವುದೇ ಇತರ ಭಾಗವು ಕಾಳಗ-ರಂಗದ ನೆಲವನ್ನು ಸೋಕಿದೆಯೇ ಎಂಬುದನ್ನು ರೆಫರಿಯು ನಿರ್ಣಯಿಸುತ್ತಾನೆ. ನಂತರ ರೆಫರಿಯು ಕಾದಾಳಿಯು ತನ್ನ ಕಾಲಮೇಲೆ ತಾನು ನಿಂತು ಕಾದಾಟವನ್ನು ಮುಂದುವರಿಸುವವರೆಗೆ ಎಣಿಸುತ್ತಾನೆ. ರೆಫರಿಯು ಹತ್ತರವರೆಗೆ ಎಣಿಸಬೇಕು. ನಂತರ ಹೊಡೆದುರುಳಿಸಲ್ಪಟ್ಟ ಬಾಕ್ಸರ್ನನ್ನು "ಹೊಡೆದು ಕೆಡವಲ್ಪಟ್ಟವೆಂದು(ನಾಕ್ಡ್ ಔಟ್)" (ಪ್ರಜ್ಞೆತಪ್ಪಿದ್ದರೂ ಅಥವಾ ತಪ್ಪಿಲ್ಲದಿದ್ದರೂ) ಹಾಗೂ ಮತ್ತೊಬ್ಬ ಬಾಕ್ಸರ್ನನ್ನು ಹೊಡೆದುರುಳಿಸಿದ(ನಾಕ್ಔಟ್) (KO) ಜಯಶಾಲಿಯೆಂದು ಘೋಷಿಸಲಾಗುತ್ತದೆ. ಪೆಟ್ಟುಗಳ ಅಥವಾ ತಮ್ಮನ್ನು ತಾವು ಪರಿಣಾಮಕಾರಿಯಾಗಿ ರಕ್ಷಿಸಿಕೊಳ್ಳಲು ಅಸಮರ್ಥರೆಂಬ ನಿರ್ಣಯದ ಆಧಾರದಲ್ಲಿ ಕಾದಾಳಿಯು ಕಾದಾಟವನ್ನು ಸುರಕ್ಷಿತವಾಗಿ ಮುಂದುವರಿಸಲು ಅಸಮರ್ಥನಾದರೆ ರೆಫರಿ, ಕಾದಾಟದ ವೈದ್ಯರು ಅಥವಾ ಕಾದಾಳಿಯ ವಿಶ್ರಾಂತಿ-ಮೂಲೆಯಲ್ಲಿ ಇರುವವರಿಂದ "ಟೆಕ್ನಿಕಲ್ ನಾಕ್ಔಟ್" (TKO) ಸಾಧ್ಯವಾಗುತ್ತದೆ ಮತ್ತು ಘೋಷಿಸಲ್ಪಡುತ್ತದೆ. ಹೆಚ್ಚಿನ ಕಾನೂನಿನ ಅಧಿಕಾರಗಳು ಮತ್ತು ಅನುಮೋದಿಸುವ-ಏಜೆನ್ಸಿಗಳು "ಮೂರು-ಹೊಡೆದುರುಳಿಸುವ ನಿಯಮ"ವೊಂದನ್ನೂ ಹೊಂದಿವೆ. ಆ ನಿಯಮದ ಪ್ರಕಾರ ಒಂದು ನೀಡಿದ ಸುತ್ತಿನಲ್ಲಿ ಮೂರು ಬಾರಿ ಹೊಡೆದುರುಳಿಸಿದರೆ TKOಅನ್ನು ಘೋಷಿಸಲಾಗುತ್ತದೆ. ಒಂದು TKOಅನ್ನು ಕಾದಾಳಿಯ ಕಾಳಗದ-ದಾಖಲೆಯಲ್ಲಿ ನಾಕ್ಔಟ್ ಎಂದು ಪರಿಗಣಿಸಲಾಗುತ್ತದೆ. "ನಿಲ್ಲಿಸುವ ಎಂಟು" ಎಣಿಸುವ ನಿಯಮವೂ ಸಹ ಬಳಕೆಯಲ್ಲಿದೆ. ಒಂದು ಬಾರಿಯೂ ಹೊಡೆದುರುಳಿಸಿಲ್ಲದಿದ್ದರೂ ಕಾದಾಳಿಯು ಅಪಾಯದಲ್ಲಿದ್ದಾನೆಂದು ಭಾವಿಸಿದಾಗ ರೆಫರಿಯು ಆತನಿಗಾಗಿ ಎಂಟರವರೆಗೆ ಎಣಿಸಲು ಆರಂಭಿಸುವಂತೆ ಈ ನಿಯಮವು ಅನುಮತಿ ನೀಡುತ್ತದೆ. ಎಣಿಸಿದ ನಂತರ ರೆಫರಿಯು ಕಾದಾಳಿಯನ್ನು ಗಮನಿಸಿ ಆತನು ಯುದ್ಧವನನ್ನು ಮುಂದುವರಿಸಲು ತಯಾರಾಗಿದ್ದಾನೆಯೇ ಎಂಬುದನ್ನು ನಿರ್ಧರಿಸುತ್ತಾನೆ. ಅಂಕಗಳಿಸುವ ಉದ್ದೇಶದಿಂದ, 'ನಿಲ್ಲಿಸುವ ಎಂಟು' ಎಣಿಸುವಿಕೆಯನ್ನು ಹೊಡೆದುರುಳಿಸುವುದೆಂದು ಪರಿಗಣಿಸಲಾಗುತ್ತದೆ.
ಸಾಮಾನ್ಯವಾಗಿ ಬಾಕ್ಸರ್ಗಳು ನಡುಪಟ್ಟಿಯಿಂದ ಕೆಳಗೆ ಹೊಡೆಯುವುದು, ಬಿಗಿಯಾಗಿ ಹಿಡಿಯುವುದು, ಕಾಲುಕೊಟ್ಟು ಮುಗ್ಗರಿಸುವಂತೆ ಮಾಡುವುದು, ತಳ್ಳುವುದು, ಕಚ್ಚುವುದು, ಉಗುಳುವುದು ಅಥವಾ ಗುದ್ದಾಡುವುದು ಮೊದಲಾದವನ್ನು ಮಾಡದಂತೆ ನಿಷೇಧಿಸಲಾಗುತ್ತದೆ. ಬಾಕ್ಸರ್ನ ಚಡ್ಡಿಯು ಮೇಲಕ್ಕೆ ಹೋದರೆ, ವಿರೋಧಿಯು ಆತನ ತೊಡೆಸಂದು ಭಾಗಕ್ಕೆ ಹೊಡೆಯುವಂತಿಲ್ಲ. ಒದೆಯುವುದು, ತಲೆಯಿಂದ ಗುದ್ದುವುದು ಅಥವಾ ಮುಚ್ಚಿದ ಮುಷ್ಟಿಯ ಬೆರಳಿನ-ಗೆಣ್ಣುವಿನ ಹೊರತು ಕೈಯ ಯಾವುದೇ ಭಾಗದಿಂದ ಹೊಡೆಯುವುದನ್ನೂ (ಮೊಣಕೈ, ಹೆಗಲು ಅಥವಾ ಮುಂದೋಳಿನಿಂದ ಮಾತ್ರವಲ್ಲದೆ ತೆರೆದ ಕೈಗವಸುಗಳು, ಮಣಿಕಟ್ಟು, ಕೈಯ ಹಿಂಭಾಗ ಅಥವಾ ಬದಿಯಿಂದ ಹೊಡೆಯುವುದನ್ನೂ ಒಳಗೊಂಡು) ನಿರ್ಬಂಧಿಸಲಾಗುತ್ತದೆ. ಅವರು ಬೆನ್ನಿಗೆ, ಕತ್ತಿನ ಅಥವಾ ತಲೆಯ ಹಿಂಭಾಗಕ್ಕೆ ("ರಾಬಿಟ್-ಹೊಡೆತ"ವೆಂದು ಕರೆಯಲಾಗುತ್ತದೆ) ಅಥವಾ ಮೂತ್ರಜನಕಾಂಗಕ್ಕೆ ಹೊಡೆಯುವುದನ್ನೂ ತಡೆಯಲಾಗುತ್ತದೆ. ಬಾಕ್ಸರ್ಗಳು ಹೊಡೆಯುವಾಗ ಹಗ್ಗಗಳನ್ನು ಹಿಡಿದುಕೊಳ್ಳುವುದು, ಹೊಡೆತ ನೀಡುವಾಗ ವಿರೋಧಿಯನ್ನು ಹಿಡಿದುಕೊಳ್ಳುವುದು ಅಥವಾ ವಿರೋಧಿಯ ನಡುಪಟ್ಟಿಯ ಕೆಳಗೆ ಸರಕ್ಕನೆ ತಲೆ ಬಗ್ಗಿಸುವುದು (ಮಧ್ಯದ ದೂರವನ್ನು ಪರಿಗಣಿಸದೆ ವಿರೋಧಿಯ ನಡುವಿನ ಕೆಳಗೆ ಹಿಡಿದು ಉರುಳಿಸುವುದು) ಮೊದಲಾದವನ್ನು ಮಾಡುವುದನ್ನು ನಿಷೇಧಿಸಲಾಗುತ್ತದೆ. ಒಂದು "ಕ್ಲಿಂಚ್" –ಒಂದು ರಕ್ಷಣಾತ್ಮಕ ಚಲನೆ, ಇದರಲ್ಲಿ ಬಾಕ್ಸರ್ ನಿಲುಗಡೆಯನ್ನುಂಟುಮಾಡಲು ವಿರೋಧಿಯ ಕೈಗಳನ್ನು ಆವರಿಸಿ ಹಿಡಿದುಕೊಳ್ಳುತ್ತಾನೆ- ರೆಫರಿಯ ಗಮನಕ್ಕೆ ಬಂದರೆ, ಪ್ರತಿಯೊಬ್ಬ ಕಾದಾಳಿಯು ಮತ್ತೊಮ್ಮೆ ಹೊಡೆಯುವುದಕ್ಕಿಂತ ಮೊದಲು ಒಂದು ಹೆಜ್ಜೆ ಹಿಂದಕ್ಕೆ ಸರಿಯಬೇಕು (ಪರ್ಯಾಯವಾಗಿ, ರೆಫರಿಯು ಕಾದಾಳಿಗಳಿಗೆ ಕ್ಲಿಂಚ್ಅನ್ನು ಹೊಡೆಯುವಂತೆ ನಿರ್ದೇಶಿಸಬಹುದು). ಬಾಕ್ಸರ್ ಹೊಡೆದುರುಳಿಸಲ್ಪಟ್ಟಾಗ, ಮತ್ತೊಬ್ಬ ಬಾಕ್ಸರ್ ಕಾದಾಟವನ್ನು ತಕ್ಷಣವೇ ನಿಲ್ಲಿಸಬೇಕು ಹಾಗೂ ದೂರದ ಕಾಳಗ-ರಂಗದ ವಿಶ್ರಾಂತಿ-ಮೂಲೆಗೆ ಹೋಗಬೇಕು. ರೆಫರಿಯು ನಾಕ್ಔಟ್ಅನ್ನು ಘೋಷಿಸುವವರೆಗೆ ಅಥವಾ ಹೋರಾಟವನ್ನು ಮುಂದುವರಿಸಲು ಕರೆಯುವವರೆಗೆ ಆತನು ಅಲ್ಲಿ ವಿಶ್ರಾಂತಿ ತೆಗೆದುಕೊಳ್ಳಬೇಕು.
ಈ ನಿಯಮಗಳ ಉಲ್ಲಂಘನೆಯನ್ನು ರೆಫರಿಯು "ಫೌಲ್"ಗಳೆಂದು ಸಾರಬಹುದು. ಇದು ಫೌಲ್ನ ಗಂಭೀರತೆ ಮತ್ತು ಉದ್ದೇಶದ ಆಧಾರದಲ್ಲಿ ಒಂದು ನಷ್ಟಕ್ಕೆ ಕಾರಣವಾಗುತ್ತದೆ. ರೆಫರಿಯು ಎಚ್ಚರಿಕೆಗಳನ್ನು ನೀಡುವ, ಅಂಕಗಳನ್ನು ಕಡಿತಗೊಳಿಸುವ ಅಥವಾ ತಪ್ಪೆಸಗುವ ಬಾಕ್ಸರ್ನನ್ನು ಅನರ್ಹಗೊಳಿಸುವ ಅಧಿಕಾರವನ್ನು ಹೊಂದಿರುತ್ತಾನೆ. ನಷ್ಟವನ್ನುಂಟುಮಾಡುವ ಉದ್ದೇಶಪೂರ್ವಕ ಫೌಲ್ ಕಾದಾಟವು ಮುಂದುವರಿಯದಂತೆ ತಡೆಯುತ್ತದೆ. ಅದನ್ನು ಮಾಡಿದ ಬಾಕ್ಸರ್ನನ್ನು ಅನರ್ಹನೆಂದು ಘೋಷಿಸಲಾಗುತ್ತದೆ. ಕಾದಾಳಿಯು ಅನಿರೀಕ್ಷಿತವಾದ ಒಂದು ಕಡಿಮೆ-ಪ್ರಮಾಣದ ಹೊಡೆತಕ್ಕೆ ಒಳಗಾದರೆ, ಆತನಿಗೆ ಪುನಃಚೇತರಿಸಿಕೊಳ್ಳಲು ಐದು ನಿಮಿಷಗಳ ಕಾಲಾವಧಿಯನ್ನು ನೀಡಲಾಗುತ್ತದೆ. ಅನಂತರ ಆತನು ಕಾದಾಟವನ್ನು ಮುಂದುವರಿಸಲು ಅಸಮರ್ಥನಾದರೆ, ಆತನನ್ನು ನಾಕ್ಡ್ಔಟ್ ಎಂದು ಸಾರಲಾಗುತ್ತದೆ. ನಷ್ಟವನ್ನುಂಟುಮಾಡುವ ಅನಿರೀಕ್ಷಿತ ಫೌಲ್ಗಳು ಸ್ಪರ್ಧೆಯನ್ನು ಕೊನೆಗೊಳಿಸಿ ಫಲಿತಾಂಶವಿಲ್ಲದಂತೆ ಮಾಡುತ್ತವೆ ಅಥವಾ ಸಾಕಷ್ಟು ಸುತ್ತುಗಳು ಮುಗಿದಿದ್ದರೆ (ವೈಶಿಷ್ಟ್ಯವಾಗಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು, ಅಥವಾ ನಾಲ್ಕು-ಸುತ್ತಿನ ಕಾದಾಟದಲ್ಲಿ ಕನಿಷ್ಠ ಮೂರು) ಕಾದಾಟವನ್ನು ನಿರ್ಧಾರ ಹಂತಕ್ಕೆ ತಲುಪುವಂತೆ ಮಾಡುತ್ತವೆ.
ವೃತ್ತಿಪರ ಮತ್ತು ಹವ್ಯಾಸಿ ಬಾಕ್ಸಿಂಗ್
[ಬದಲಾಯಿಸಿ]17ರಿಂದ 19ನೇ ಶತಮಾನಗಳವರೆಗೆ, ಬಾಕ್ಸಿಂಗ್ ಸ್ಪರ್ಧೆಗಳು ಹಣದಿಂದ ಪ್ರಚೋದಿಸಲ್ಪಟ್ಟಿದ್ದವು. ಕಾದಾಳಿಗಳು ಬಹುಮಾನದ ಹಣಕ್ಕಾಗಿ ಸ್ಪರ್ಧಿಸುತ್ತಿದ್ದರು, ಪ್ರಚೋದಕರು ವಸೂಲಿ ಹಣವನ್ನು ನಿಯಂತ್ರಿಸುತ್ತಿದ್ದರು ಹಾಗೂ ಪ್ರೇಕ್ಷಕರು ಫಲಿತಾಂಶದ ಮೇಲೆ ಪಂಥ ಕಟ್ಟುತ್ತಿದ್ದರು. ಆಧುನಿಕ ಒಲಿಂಪಿಕ್ ಕಾರ್ಯಾಚರಣೆಯು ಹವ್ಯಾಸಿ ಕ್ರೀಡೆಗಳಲ್ಲಿ ಆಸಕ್ತಿ ತೋರಿಸಿತು ಹಾಗೂ ಹವ್ಯಾಸಿ ಬಾಕ್ಸಿಂಗ್ 1908ರಲ್ಲಿ ಒಲಿಂಪಿಕ್ ಕ್ರೀಡೆಯಾಯಿತು. ಪ್ರಸ್ತುತ ಒಲಿಂಪಿಕ್ ಮತ್ತು ಇತರ ಹವ್ಯಾಸಿ ಸ್ಪರ್ಧೆಗಳು ವೈಶಿಷ್ಟ್ಯವಾಗಿ ಮೂರು ಅಥವಾ ನಾಲ್ಕು ಸುತ್ತುಗಳಿಗೆ ಸೀಮಿತವಾಗಿವೆ. ಪರಿಣಾಮದ ಬಗ್ಗೆ ಗಮನಿಸದೆ, ಸ್ಪಷ್ಟ ಹೊಡೆತಗಳ ಆಧಾರದಲ್ಲಿ ಅಂಕಗಳನ್ನು ನೀಡಲಾಗುತ್ತದೆ. ಕಾದಾಳಿಗಳು ರಕ್ಷಕ-ತಲೆಕವಚಗಳನ್ನು ಧರಿಸುತ್ತಾರೆ. ಇದು ಗಾಯಗಳಾಗುವ ಸಂಭವವನ್ನು, ಹೊಡೆದುರುಳಿಸುವಿಕೆಯ ಪ್ರಮಾಣವನ್ನು ಮತ್ತು ನಾಕ್ಔಟ್ಗಳನ್ನು ಕಡಿಮೆ ಮಾಡುತ್ತದೆ. ಪ್ರಸ್ತುತ ಹವ್ಯಾಸಿ ಬಾಕ್ಸಿಂಗ್ನಲ್ಲಿ ಅಂಕನೀಡುವ ಹೊಡೆತಗಳನ್ನು ಕಾಳಗ-ರಂಗದ ಬದಿಯ ತೀರ್ಪುಗಾರರು ನಿರ್ಣಯಿಸುತ್ತಾರೆ. ಆದರೆ ಆಸ್ಟ್ರೇಲಿಯನ್ ಇನ್ಸ್ಟಿಟ್ಯೂಟ್ ಫಾರ್ ಸ್ಪೋರ್ಟ್, ಆಟೊಮೇಟೆಡ್ ಬಾಕ್ಸಿಂಗ್ ಸ್ಕೋರಿಂಗ್ ಸಿಸ್ಟಮ್ನ ಒಂದು ಪ್ರಯೋಗಮಾದರಿಯನ್ನು ಕಂಡುಹಿಡಿದೆ. ಅದು ಅಂಕದ ವಾಸ್ತವಿಕತೆಯನ್ನು ತೋರಿಸುತ್ತದೆ, ಸುರಕ್ಷತೆಯನ್ನು ಸುಧಾರಿಸುತ್ತದೆ ಹಾಗೂ ವೀಕ್ಷಕರಿಗೆ ಈ ಕ್ರೀಡೆಯನ್ನು ಹೆಚ್ಚು ಆಸಕ್ತಿದಾಯಕವಾಗಿ ಮಾಡುತ್ತದೆ. ವೃತ್ತಿಪರ ಬಾಕ್ಸಿಂಗ್ ಜಾಗತಿಕವಾಗಿ ಅತಿ ಹೆಚ್ಚು ಜನಪ್ರಿಯ ಕ್ರೀಡೆಯಾಗಿ ಉಳಿದಿದೆ. ಆದರೂ ಹವ್ಯಾಸಿ ಬಾಕ್ಸಿಂಗ್, ಕ್ಯೂಬಾ ಮತ್ತು ಕೆಲವು ಹಳೆಯ ಸೋವಿಯತ್ ಗಣರಾಜ್ಯಗಳಲ್ಲಿ ಪ್ರಧಾನವಾಗಿ ಕಂಡುಬರುತ್ತದೆ. ಹೆಚ್ಚಿನ ಕಾದಾಳಿಗಳಿಗೆ ಹವ್ಯಾಸಿ ಜೀವನವು ವಿಶೇಷವಾಗಿ ಒಲಿಂಪಿಕ್ಸ್ನಲ್ಲಿ ಕೌಶಲಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ ಹಾಗೂ ವೃತ್ತಿಪರ ಜೀವನಕ್ಕೆ ತಯಾರಿ ನಡೆಸಲು ಅನುಭವವನ್ನು ನೀಡುತ್ತದೆ.
ಹವ್ಯಾಸಿ ಬಾಕ್ಸಿಂಗ್
[ಬದಲಾಯಿಸಿ]ಹವ್ಯಾಸಿ ಬಾಕ್ಸಿಂಗ್ ಕಾಲೇಜು ಮಟ್ಟದಲ್ಲಿ, ಒಲಿಂಪಿಕ್ ಕ್ರೀಡೆಗಳು ಮತ್ತು ಕಾಮನ್ವೆಲ್ತ್ ಕ್ರೀಡೆಗಳಲ್ಲಿ ಹಾಗೂ ಹವ್ಯಾಸಿ ಬಾಕ್ಸಿಂಗ್ ಸಂಸ್ಥೆಗಳಿಂದ ಅನುಮೋದಿಸಲ್ಪಟ್ಟ ಅನೇಕ ಇತರ ಜಾಗಗಳಲ್ಲಿ ಕಂಡುಬರುತ್ತದೆ. ಹವ್ಯಾಸಿ ಬಾಕ್ಸಿಂಗ್ ಅಂಕ ಲೆಕ್ಕಮಾಡುವ ವ್ಯವಸ್ಥೆಯೊಂದನ್ನು ಹೊಂದಿರುತ್ತದೆ. ಅದು ದೈಹಿಕ ಹಾನಿಯನ್ನು ಗಮನಿಸದೆ ಸ್ಪಷ್ಟ ಹೊಡೆತಗಳನ್ನು ಲೆಕ್ಕ ಮಾಡುತ್ತದೆ. ಒಲಿಂಪಿಕ್ ಮತ್ತು ಕಾಮನ್ವೆಲ್ತ್ ಕ್ರೀಡೆಗಳಲ್ಲಿ ಸ್ಪರ್ಧೆಗಳು ಮೂರು ನಿಮಿಷಗಳ ಮೂರು ಸುತ್ತುಗಳನ್ನು ಹಾಗೂ ರಾಷ್ಟ್ರೀಯ ABA (ಅಮ್ಯಾಚ್ಯುಯೆರ್ ಬಾಕ್ಸಿಂಗ್ ಅಸೋಸಿಯೇಶನ್) ಸ್ಪರ್ಧೆಯಲ್ಲಿ ಮೂರು ನಿಮಿಷಗಳ ಮೂರು ಸುತ್ತುಗಳನ್ನು ಹೊಂದಿರುತ್ತವೆ. ಇವುಗಳಲ್ಲಿ ಪ್ರತಿಯೊಂದು ಸುತ್ತುಗಳ ಮಧ್ಯೆ ಒಂದು-ನಿಮಿಷದ ವಿರಾಮಾವಧಿಯಿರುತ್ತದೆ.
ಸ್ಪರ್ಧಿಗಳು ರಕ್ಷಕ ತಲೆ-ಕವಚಗಳನ್ನು ಮತ್ತು ಬೆರಳಿನ ಗೆಣ್ಣುವಿನಾದ್ಯಂತ ಬಿಳಿ ಪಟ್ಟಿಯ ಕೈಗವಸುಗಳನ್ನು ಧರಿಸುತ್ತಾರೆ. ಹೊಡೆತವನ್ನು ಅಂಕಗಳಿಸುವ ಹೊಡೆತವೆಂದು ಪರಿಗಣಿಸಬೇಕೆಂದರೆ ಬಾಕ್ಸರ್ಗಳು ಕೈಗವಸುಗಳ ಬಿಳಿ ಭಾಗಕ್ಕೆ ಗುದ್ದಬೇಕು. ಸಾಕಷ್ಟು ಬಲದೊಂದಿಗೆ ಸ್ಪಷ್ಟವಾಗಿ ತಲೆ ಅಥವಾ ಮುಂಡಭಾಗಕ್ಕೆ ನೀಡಲಾಗುವ ಪ್ರತಿ ಹೊಡೆತವು ಅಂಕವನ್ನು ಗಳಿಸುತ್ತದೆ. ರೆಫರಿಯು ಕಾದಾಟದ ಮೇಲ್ವಿಚಾರಣೆ ನಡೆಸುತ್ತಾನೆ, ಸ್ಪರ್ಧಿಗಳು ಕೇವಲ ನಿಮಯ-ಬದ್ಧ ಹೊಡೆತಗಳನ್ನು ಮಾತ್ರ ನೀಡುವಂತೆ ನೋಡಿಕೊಳ್ಳುತ್ತಾನೆ. ದೇಹದ ಮುಂಡಭಾಗದ ಮೇಲೆ ಧರಿಸಿದ ಪಟ್ಟಿಯು ಹೊಡೆತಗಳ ಕೆಳ ಮಿತಿಯನ್ನು ಸೂಚಿಸುತ್ತದೆ. ನಿರಂತರವಾಗಿ ಕೆಳಗೆ ಹೊಡೆತವನ್ನು (ನಡುಪಟ್ಟಿಯ ಕೆಳಗೆ) ನೀಡುವ ಯಾವುದೇ ಬಾಕ್ಸರ್ ಅನರ್ಹನಾಗುತ್ತಾನೆ. ಬಾಕ್ಸರ್ಗಳು ವಿರೋಧಿಯು ತೂಗಾಡುವುದನ್ನು ತಡೆಗಟ್ಟಲು ಭದ್ರವಾಗಿ ಹಿಡಿದುಕೊಳ್ಳುವ ತಂತ್ರಗಳನ್ನು ಬಳಸದಂತೆ ರೆಫರಿಗಳು ನೋಡಿಕೊಳ್ಳುತ್ತಾರೆ. ಇದು ಕಂಡುಬಂದರೆ ರೆಫರಿಯು ಕಾದಾಳಿಗಳನ್ನು ಬೇರ್ಪಡಿಸಿ, ನಂತರ ಅವರಿಗೆ ಬಾಕ್ಸಿಂಗ್ಅನ್ನು ಮುಂದುವರಿಸುವಂತೆ ಆದೇಶಿಸುತ್ತಾನೆ. ವಿರೋಧಿಯನ್ನು ಮತ್ತೆ ಮತ್ತೆ ಭದ್ರವಾಗಿ ಹಿಡಿದುಕೊಂಡರೆ ಬಾಕ್ಸರ್ಗೆ ದಂಡ ವಿಧಿಸಲಾಗುತ್ತದೆ ಅಥವಾ ಅಂತಿಮವಾಗಿ ಆತನನ್ನು ಅನರ್ಹಗೊಳಿಸಲಾಗುತ್ತದೆ. ಬಾಕ್ಸರ್ ಗಂಭೀರವಾಗಿ ಗಾಯಗೊಂಡರೆ, ಬಾಕ್ಸರ್ ವಿರೋಧಿಯ ಮೇಲೆ ಗಮನಾರ್ಹವಾಗಿ ಮೇಲುಕೈ ಸಾಧಿಸಿದಾಗ ಅಥವಾ ಅಂಕದಲ್ಲಿ ಅತಿ ಹೆಚ್ಚಿನ ಪ್ರಮಾಣದ ವ್ಯತ್ಯಾಸ ಕಂಡುಬಂದಾಗ ರೆಫರಿಗಳು ಸ್ಪರ್ಧೆಯನ್ನು ನಿಲ್ಲಿಸುತ್ತಾರೆ.[೧೪] ಈ ರೀತಿಯಲ್ಲಿ ಕೊನೆಗೊಳ್ಳುವ ಹವ್ಯಾಸಿ ಸ್ಪರ್ಧೆಗಳನ್ನು "RSC" (ರೆಫರಿ ಸ್ಟಾಪ್ಡ್ ಕಾಂಟೆಸ್ಟ್(ರೆಫರಿ ನಿಲ್ಲಿಸಿದ ಸ್ಪರ್ಧೆ)) ಎಂದು ಹೇಳಲಾಗುತ್ತದೆ. ಸೋಲಿಸಿದ ವಿರೋಧಿ (RSCO), ಜಯಗಳಿಸಿದ ವಿರೋಧಿ (RSCOS), ಗಾಯ (RSCI) ಅಥವಾ ತಲೆ-ಪೆಟ್ಟು (RSCH) ಮೊದಲಾದವುಗಳಿಗೂ ಸೂಚನೆಗಳಿರುತ್ತವೆ.
ವೃತ್ತಿಪರ ಬಾಕ್ಸಿಂಗ್
[ಬದಲಾಯಿಸಿ]ವೃತ್ತಿಪರ ಸ್ಪರ್ಧೆಗಳು ಸಾಮಾನ್ಯವಾಗಿ ಹವ್ಯಾಸಿ ಸ್ಪರ್ಧೆಗಳಿಗಿಂತ ಹೆಚ್ಚು ದೀರ್ಘಕಾಲವಿರುತ್ತವೆ. ಅವು ವೈಶಿಷ್ಟ್ಯವಾಗಿ ಹತ್ತರಿಂದ ಹನ್ನೆರಡು ಸುತ್ತುಗಳನ್ನು ಹೊಂದಿರುತ್ತವೆ. ಆದರೂ ಕಡಿಮೆ ಅನುಭವದ ಕಾದಾಳಿಗಳಿಗೆ ಮತ್ತು ಕ್ಲಬ್ ಕಾದಾಳಿಗಳಿಗೆ ನಾಲ್ಕು ಸುತ್ತಿನ ಕಾದಾಟಗಳು ಸಾಮಾನ್ಯವಾಗಿರುತ್ತವೆ. ಕೆಲವು ಎರಡು-[೧೫] ಮತ್ತು ಮೂರು-ಸುತ್ತಿನ ವೃತ್ತಿಪರ ಸ್ಪರ್ಧೆಗಳೂ[೧೬] ಕಂಡುಬರುತ್ತವೆ, ವಿಶೇಷವಾಗಿ ಆಸ್ಟ್ರೇಲಿಯಾದಲ್ಲಿ. ಆರಂಭಿಕ ಇಪ್ಪತ್ತನೇ ಶತಮಾನದಲ್ಲಿ, ಕಾದಾಟಗಳಲ್ಲಿ ಮಿತಿಯಿಲ್ಲದ ಸುತ್ತುಗಳಿರುವುದು ಸಾಮಾನ್ಯವಾಗಿತ್ತು. ಈ ಕಾದಾಟಗಳು ಒಬ್ಬ ಕಾದಾಳಿಯು ಅಗಲಿದಾಗ ಮಾತ್ರ ಕೊನೆಗೊಳ್ಳುತ್ತಿದ್ದವು. ಇವು ಜ್ಯಾಕ್ ಡೆಂಪ್ಸೆಯಂತಹ ಹೆಚ್ಚು-ಸಾಮಾರ್ಥ್ಯದ ಕಾದಾಳಿಗಳಿಗೆ ಉಪಯುಕ್ತವಾಗಿದ್ದವು. ಚಾಂಪಿಯನ್ಪಟ್ಟದ ಕಾದಾಟಗಳಿಗೆ ಹದಿನೈದು ಸುತ್ತುಗಳು ಹೆಚ್ಚಿನ ಇಪ್ಪತ್ತನೇ ಶತಮಾನದಲ್ಲಿ 1980ರ ಆರಂಭದವರೆಗೆ ಅಂತಾರಾಷ್ಟ್ರೀಯವಾಗಿ ಅಂಗೀಕಾರವಾದ ಮಿತಿಯಾಗಿ ಉಳಿದವು. ಬಾಕ್ಸರ್ ಡಕ್ ಕೂ ಕಿಮ್ನ ಮರಣದ ನಂತರ ಮಿತಿಯು ಹನ್ನೆರಡಕ್ಕೆ ಇಳಿಯಿತು.
ತಲೆ-ರಕ್ಷಣಾ ಕವಚಗಳಿಗೆ ವೃತ್ತಿಪರ ಸ್ಪರ್ಧೆಗಳಲ್ಲಿ ಅನುಮತಿ ಇರುವುದಿಲ್ಲ. ಬಾಕ್ಸರ್ಗಳು ಸಾಮಾನ್ಯವಾಗಿ ಕಾದಾಟವು ನಿಲ್ಲುವವರೆಗೆ ಭಾರಿ ಹೊಡೆತಗಳಿಗೆ ತುತ್ತಾಗುತ್ತಾರೆ. ರೆಫರಿಯು ಒಬ್ಬ ಸ್ಪರ್ಧಿಯು ಗಾಯದಿಂದಾಗಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಅಸಮರ್ಥನಾಗಿದ್ದಾನೆಂದು ಭಾವಿಸಿದರೆ ಯಾವುದೇ ಸಂದರ್ಭದಲ್ಲಿ ಸ್ಪರ್ಧೆಯನ್ನು ನಿಲ್ಲಿಸಬಹುದು. ಈ ಸಂದರ್ಭದಲ್ಲಿ ಮತ್ತೊಬ್ಬ ಸ್ಪರ್ಧಿಯು ಟೆಕ್ನಿಕಲ್ ನಾಕ್ಔಟ್ ಗೆಲುವನ್ನು ಗಳಿಸುತ್ತಾನೆ. ಕಾದಾಳಿಯು ನೀಡಿದ ಹೊಡೆತಕ್ಕೆ ವಿರೋಧಿಯಲ್ಲಿ ಗಾಯವಾಗಿ, ನಂತರ ವಿರೋಧಿಯು ಕಾದಾಟವನ್ನು ಮುಂದುವರಿಸಲು ಅಸಾಧ್ಯವೆಂದು ವೈದ್ಯರಿಂದ ಖಚಿತವಾದಾಗಲೂ ಟೆಕ್ನಿಕಲ್ ನಾಕ್ಔಟ್ಅನ್ನು ನೀಡಲಾಗುತ್ತದೆ. ಈ ಕಾರಣಕ್ಕಾಗಿ ಕಾದಾಳಿಗಳು ಹೆಚ್ಚಾಗಿ ಕಟ್ಮೆನ್ರನ್ನು ನೇಮಿಸಿಕೊಂಡಿರುತ್ತಾರೆ. ಅವರು ಬಾಕ್ಸರ್ಗಳಿಗೆ ಗಾಯವಾದಾಗ, ಸುತ್ತುಗಳ ಮಧ್ಯದ ವಿರಾಮದಲ್ಲಿ ಆ ಗಾಯಗಳಿಗೆ ಉತ್ತಮ ಚಿಕಿತ್ಸೆಯನ್ನು ನೀಡುತ್ತಾರೆ. ಆ ಮೂಲಕ ಬಾಕ್ಸರ್ಗಳು ಗಾಯಗಳಿದ್ದರೂ ಕಾದಾಟವನ್ನು ಮುಂದುವರಿಸಲು ಸಮರ್ಥರಾಗುತ್ತಾರೆ. ಬಾಕ್ಸರ್ ವಿನಾಕಾರಣ ಕಾದಾಟವನ್ನು ಬಿಟ್ಟು ಹೋದರೆ ಅಥವಾ ಅವನ ವಿಶ್ರಾಂತಿ-ಮೂಲೆಯಲ್ಲಿರುವವರು ಕಾದಾಟವನ್ನು ನಿಲ್ಲಿಸಿದರೆ, ಜಯಗಳಿಸುವ ಬಾಕ್ಸರ್ಗೂ ಟೆಕ್ನಿಕಲ್ ನಾಕ್ಔಟ್ ಗೆಲುವನ್ನು ನೀಡಲಾಗುತ್ತದೆ. ಹವ್ಯಾಸಿ ಬಾಕ್ಸಿಂಗ್ಗೆ ವಿರುದ್ಧವಾಗಿ, ವೃತ್ತಿಪರ ಪುರುಷ ಬಾಕ್ಸರ್ಗಳು ಖಾಲಿ(ರಕ್ಷಣಾ-ಕವಚವಿಲ್ಲದೆ) ಎದೆಯಲ್ಲಿರಬೇಕು.[೧೭]
ಉಡುಪು
[ಬದಲಾಯಿಸಿ]This section needs expansion. You can help by adding to it. (November 2009) |
ಎಲ್ಲಾ ಬಾಕ್ಸರ್ಗಳು, ಅವರ ತೂಕದ ವಿಭಾಗವನ್ನು ಲಕ್ಷಿಸದೆ, ಸ್ಪರ್ಧೆಗಳಿಗೆ ಅವಶ್ಯಕವಾದ ಕೆಲವು ರೀತಿಯ ಉಡುಪುಗಳನ್ನು ಹೊಂದಿರುತ್ತಾರೆ. ವೃತ್ತಿಪರ ಬಾಕ್ಸರ್ಗಳು ಹವ್ಯಾಸಿ ಬಾಕ್ಸರ್ಗಳಿಗಿಂತ ಭಿನ್ನವಾಗಿ ಉಡುಪುಗಳನ್ನು ಧರಿಸುತ್ತಾರೆ. ಆದರೆ ಅವರಲ್ಲಿ ಒಂದು ಮೂಲ ಯೋಚನೆ ಅಥವಾ ಪ್ರಜ್ಞೆಯಿರುತ್ತದೆ. ಅನುಮೋದಿತ ಕಾದಾಟಗಳ ಎಲ್ಲಾ ಬಾಕ್ಸರ್ಗಳು ಕೈಹೊದಿಕೆಗಳು, ಕೈಗವಸುಗಳು, ತೊಡೆಸಂದು ರಕ್ಷಕಗಳು, ಬಾಯಿ-ರಕ್ಷಕಗಳು ಮತ್ತು ಮೃದುವಾದ ಅಂಗಾಲು ಶೂಗಳು ಮೊದಲಾದವುಗಳನ್ನು ಹೊಂದಿರಬೇಕಾದ ಅಗತ್ಯವಿರುತ್ತದೆ.
ಮೊಣಕಾಲಿನವರೆಗೂ ಮುಟ್ಟುವ ಚಡ್ಡಿಗಳು
[ಬದಲಾಯಿಸಿ]ಹವ್ಯಾಸಿ ಬಾಕ್ಸಿಂಗ್ನಲ್ಲಿ ಪ್ರತಿಯೊಬ್ಬ ಬಾಕ್ಸರ್ಗಳು ಅವರ ವಿಶ್ರಾಂತಿ-ಮೂಲೆಯವರದೇ ಬಣ್ಣದ, ಅನುಮೋದಿಸುವ-ಸಂಸ್ಥೆಗಳಿಂದ ಅಂಗೀಕಾರವಾದ, ಮೊಣಕಾಲಿನವರೆಗೂ ಮುಟ್ಟುವ ಚಡ್ಡಿಗಳನ್ನು ಧರಿಸುತ್ತಾರೆ. ವೃತ್ತಿಪರ ಬಾಕ್ಸಿಂಗ್ನಲ್ಲಿ, ಈ ಚಡ್ಡಿಗಳ ಬಣ್ಣ ಮತ್ತು ವಿನ್ಯಾಸವು ಪ್ರತಿಯೊಬ್ಬ ಬಾಕ್ಸರ್ಗೆ ಬಿಟ್ಟಿದ್ದು ಮತ್ತು ಅದರಲ್ಲಿ ನಿರ್ಬಂಧವಿರುವುದಿಲ್ಲ. ಹೆಚ್ಚಿನ ರೀತಿಯ ಚಡ್ಡಿಗಳು ಗಾಢ ಬಣ್ಣಗಳ ಪಟ್ಟೆಗಳನ್ನು ಹೊಂದಿರುತ್ತವೆ. ಹೆಚ್ಚಿನ ಬಾಕ್ಸರ್ಗಳು ಈ ಚಡ್ಡಿಗಳ ನಡುಪಟ್ಟಿಯ ಮೇಲೆ ಅವರ ಹೆಸರು ಅಥವಾ ಉಪನಾಮಗಳನ್ನು ಹೊಂದಿರುತ್ತಾರೆ. ಅದರೊಂದಿಗೆ ಜಾಹಿರಾತುದಾರರ ಲೋಗೊಗಳನ್ನು ಮತ್ತು ಅವರಿಗೆ ನಡುಪಟ್ಟಿಗಳನ್ನು ನೀಡಿದ ಅನುಮೋದಿಸುವ-ಸಂಸ್ಥೆಗಳ ಹೆಸರುಗಳನ್ನು ಹೊಂದಿರುತ್ತಾರೆ. ಪ್ರಿನ್ಸ್ ನಸೀಮ್ ಹ್ಯಾಮೆದ್ನಂತಹ ಕೆಲವು ಬಾಕ್ಸರ್ಗಳು ಹೆಚ್ಚು ಎಚ್ಚರಿಕೆಯಿಂದ ತಯಾರಿಸಿದ ಚಡ್ಡಿಗಳನ್ನು ಹೊಂದಿರುತ್ತಾರೆ. ಮೈಕ್ ಟೈಸನ್ನಂತಹ ಮತ್ತೆಕೆಲವರು ಸರಳ ಚಡ್ಡಿಗಳನ್ನು ಹೆಚ್ಚಾಗಿ ಆರಿಸುತ್ತಾರೆ. ಆಧುನಿಕ ಕಾಲದ ಚಡ್ಡಿಗಳು ಸುಧಾರಿತ ಚಲನೆಗಾಗಿ, ಅನುಕೂಲಕ್ಕಾಗಿ ಮತ್ತು ಸ್ಟೈಲ್ಗಾಗಿ ಹಿಂದಿನ ಕಾಲದವುಗಳಿಗಿಂತ ಹೆಚ್ಚು ಸಡಿಲವಾಗಿರುತ್ತವೆ.
ತೋಳಿಲ್ಲದ, ಬಿಗಿಯಾದ ದುಂಡುಕತ್ತಿನ ಗಿಡ್ಡನೆಯ ಮೇಲುಡುಗೆ
[ಬದಲಾಯಿಸಿ]ವೃತ್ತಿಪರ ಮಹಿಳಾ ಬಾಕ್ಸರ್ಗಳಂತೆ ಹವ್ಯಾಸಿ ಬಾಕ್ಸರ್ಗಳು ತೋಳಿಲ್ಲದ, ಬಿಗಿಯಾದ ಗಿಡ್ಡನೆಯ ಮೇಲುಡುಗೆಯನ್ನು ಧರಿಸುತ್ತಾರೆ. ಕೆಲವು ಮಹಿಳಾ ಬಾಕ್ಸರ್ಗಳು ಈ ತೋಳಿಲ್ಲದ ಮೇಲುಡುಗೆಯನ್ನು ಧರಿಸುವ ಬದಲಿಗೆ ಕ್ರೀಡಾ-ಬ್ರಾಗಳನ್ನು ಧರಿಸಲು ಇಷ್ಟಪಡುತ್ತಾರೆ. ದೇಹದ ಮೇಲಿನ-ಭಾಗದ ರಕ್ಷಾಕವಚಗಳು ಬಾಕ್ಸರ್ಗಳಿಂದ ಬಾಕ್ಸರ್ಗಳಿಗೆ ಆದ್ಯತೆಯ ಮೇರೆಗೆ ವ್ಯತ್ಯಾಸಗೊಳ್ಳುತ್ತವೆ. ವೃತ್ತಿಪರ ಪುರುಷ ಬಾಕ್ಸರ್ಗಳು ಯಾವಾಗಲೂ ದೇಹಲ ಮೇಲಿನ-ಭಾಗದ ಉಡುಪನ್ನು ಧರಿಸದೆ ಸ್ಪರ್ಧಿಸುತ್ತಾರೆ.
ರಕ್ಷಕ ಸಾಧನ
[ಬದಲಾಯಿಸಿ]ಹವ್ಯಾಸಿ ಬಾಕ್ಸರ್ಗಳು ತಲೆಯ-ರಕ್ಷಾಕವಚಗಳನ್ನು ಮತ್ತು ಅವರ ವಿಶ್ರಾಂತಿ-ಮೂಲೆಯವರದೇ ಬಣ್ಣದ ತೋಳಿಲ್ಲದ ಅಂಗಿಯನ್ನು ಧರಿಸುವುದು ಅವಶ್ಯಕವಾಗಿರುತ್ತದೆ. ಅದೇ ವೃತ್ತಿಪರ ಬಾಕ್ಸರ್ಗಳು ಖಾಲಿ(ರಕ್ಷಣಾಕವಚವಿಲ್ಲದ)-ಎದೆಯಲ್ಲಿ ಮತ್ತು ತಲೆಯ-ರಕ್ಷಾಕವಚಗಳಿಲ್ಲದೆ ಕಾದಾಡುತ್ತಾರೆ. ಹವ್ಯಾಸಿ ಮಹಿಳಾ ಬಾಕ್ಸರ್ಗಳು ತೋಳಿರುವ ಮೇಲುಡುಗೆಯನ್ನು ಧರಿಸಬೇಕಾಗಿರುತ್ತದೆ, ವೃತ್ತಿಪರರು ತೋಳಿಲ್ಲದ ಮೇಲುಡುಗೆಯನ್ನು ಧರಿಸುತ್ತಾರೆ. ಎಲ್ಲಾ ಮಹಿಳಾ ಬಾಕ್ಸರ್ಗಳು ಎದೆಯ-ರಕ್ಷಾಕವಚಗಳನ್ನು ಹೊಂದಿರುತ್ತಾರೆ. ಎಲ್ಲಾ ಬಾಕ್ಸರ್ಗಳು ಬಾಯಿಯಲ್ಲಿಟ್ಟುಕೊಳ್ಳುವ ಸಾಧನವನ್ನು ಹೊಂದಿರುತ್ತಾರೆ. ಇದರ ರಚನೆಯು ಅನುಮೋದಿಸುವ-ಸಂಸ್ಥೆಗಳು ಮತ್ತು ಕಾದಾಳುಗಳ ಆದ್ಯತೆಗೆ ಬಿಟ್ಟಿರುತ್ತದೆ. ಅನುಮೋದಿತ-ಸ್ಪರ್ಧೆಗಳ ಎಲ್ಲಾ ಬಾಕ್ಸರ್ಗಳು ಒಂದು ಫೌಲ್ ರಕ್ಷಕವನ್ನು ಹೊಂದಿರಬೇಕಾಗಿರುತ್ತದೆ. ಅದು ತೊಡೆಸಂದು ಮತ್ತು ಹೊಟ್ಟೆಯ ಕೆಳಭಾಗಕ್ಕೆ ರಕ್ಷಣೆಯನ್ನು ನೀಡುತ್ತದೆ. ಮಹಿಳೆಯರ ಫೌಲ್ ರಕ್ಷಕಗಳು ತೊಡೆಸಂದುವಿನಲ್ಲಿ ಕಡಿಮೆ ಮೆತ್ತೆಯನ್ನು ಹೊಂದಿರುತ್ತವೆ. ಆದರೂ ಅವು ಅನುಮೋದಿತ-ಸ್ಪರ್ಧೆಗಳಲ್ಲಿ ಅವಶ್ಯಕವಾಗಿರುತ್ತವೆ. ಎಲ್ಲಾ ಬಾಕ್ಸರ್ಗಳೂ ಕೈಗವಸುಗಳನ್ನು ಧರಿಸುತ್ತಾರೆ, ಅವು ಹವ್ಯಾಸಿ ಸ್ಪರ್ಧೆಗಳಲ್ಲಿ 8-16oz ತೂಕವನ್ನು ಹಾಗೂ ವೃತ್ತಿಪರ ಸ್ಪರ್ಧೆಗಳಲ್ಲಿ 6-12oz ತೂಕವನ್ನು ಹೊಂದಿರುತ್ತವೆ. ಹವ್ಯಾಸಿಗಳು ಅಂಗೀಕೃತ ಕೈಗವಸುಗಳ ಪರಿಮಿತಿಯನ್ನು ಹೊಂದಿರುತ್ತಾರೆ. ಅದೇ ವೃತ್ತಿಪರ ಬಾಕ್ಸರ್ಗಳು ಕನಿಷ್ಠ ಭಾರದ ಕೈಗವಸುಗಳನ್ನು ಮಾತ್ರ ಧರಿಸುತ್ತಾರೆ. ಅವುಗಳ ನಿಖರವಾದ ತೂಕ ಮತ್ತು ಬ್ರ್ಯಾಂಡ್ಅನ್ನು ಕಾದಾಟದ ಮೊದಲು ಮಾಡಲಾಗುವ ಒಪ್ಪಂದ-ಷರತ್ತುಗಳ ಚರ್ಚೆಯು ನಿರ್ಧರಿಸುತ್ತದೆ. ಕೈಗವಸುಗಳನ್ನು ಅನುಮೋದಿಸುವ ಸಂಸ್ಥೆಯ ಪ್ರತಿನಿಧಿಗಳು ಮತ್ತು ಸೆಣಸಾಡುವ-ಕಾದಾಳಿಗಳ ವಿಶ್ರಾಂತಿ-ಮೂಲೆಯಲ್ಲಿರುವವರು ಕಾದಾಟ ಆರಂಭವಾಗುವುದಕ್ಕಿಂತ ಮೊದಲು ಪರಿಶೀಲಿಸುತ್ತಾರೆ. ಅವುಗಳನ್ನು ನಂತರ ಸಡಿಲವಾಗದಂತೆ ತಡೆಯಲು ಪಟ್ಟಿ ಹಾಕಿ ಕಟ್ಟಲಾಗುತ್ತದೆ. ಯಾವುದೇ ಮಧ್ಯ-ಪ್ರವೇಶಿಸುವಿಕೆಯು ಕಂಡುಬರದಂತೆ ಖಾತ್ರಿಪಡಿಸಲು ಅವುಗಳ ಮೇಲೆ ಅನುಮೋದಿಸುವ-ಸಂಸ್ಥೆಗಳ ಪ್ರತಿನಿಧಿಗಳು ಸಹಿಹಾಕಿರುತ್ತಾರೆ. ಬಾಕ್ಸರ್ಗಳು ಕೈಹೊದಿಕೆಗಳನ್ನೂ ಹೊಂದಿರುವುದು ಅಗತ್ಯವಾಗಿರುತ್ತದೆ. USA ಬಾಕ್ಸಿಂಗ್ ಮರುಬಳಸುವ ಹತ್ತಿಯ ಕೈಹೊದಿಕೆಗಳನ್ನು ಅನುಮತಿಸುತ್ತದೆ. ಆ ಕೈಹೊದಿಕೆಗಳು ಒಂದು ಗುಂಡಿ ಮತ್ತು ಕುಣಿಕೆ-ಮುಚ್ಚುವಿಕೆಯನ್ನು ಹೊಂದಿರುತ್ತವೆ. ಹೆಚ್ಚಿನ ವೃತ್ತಿಪರ ಕಾದಾಟಗಳಲ್ಲಿ ಅಂಟಿಕೊಳ್ಳುವ, ಒಂದು ಬಾರಿ ಬಳಕೆಯ ಹೊದಿಕೆಗಳು ಅವಶ್ಯಕವಾಗಿರುತ್ತವೆ. ಹೊದಿಕೆಗಳನ್ನೂ ಸಹ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಒಂದು ಪ್ರಮುಖ ಉದಾಹರಣೆಯೆಂದರೆ, ಶಾನೆ ಮಾಸ್ಲಿ ಮತ್ತು ಆಂಟೋನಿಯೊ ಮಾರ್ಗರಿಟೊ ನಡುವಿನ ಕಾದಾಟ. ಈ ಕಾದಾಟದ ಸಂದರ್ಭದಲ್ಲಿ ಮಾರ್ಗರಿಟೊನ ಹೊದಿಕೆಗಳಲ್ಲಿ ಒಂದು ಪ್ಲಾಸ್ಟರ್ ರೀತಿಯ ವಸ್ತು ಕಂಡುಬಂದುದರಿಂದ, ಆತನನ್ನು "ಕನಿಷ್ಠ ಒಂದು ವರ್ಷ"ಕ್ಕೆ ಅಮಾನತುಗೊಳಿಸಲಾಯಿತು. ಆಧುನಿಕ ವೃತ್ತಿಪರ ಬಾಕ್ಸಿಂಗ್ನಲ್ಲಿ, ಪುರುಷರು ಅವರ ಮೇಲಿನ ತೊಡೆಗಳು ಮತ್ತು ಕೆಳ ನಡುವನ್ನು ಆವರಿಸುವ ನಡುಪಟ್ಟಿಯನ್ನು ಧರಿಸುವುದು ಕಡ್ಡಾಯವಾಗಿದೆ. ಈ ನಡುಪಟ್ಟಿಯು ಸಾಮಾನ್ಯವಾಗಿ ಕಪ್ಪು ಅಥವಾ ಕೆಂಪು ಬಣ್ಣದ್ದಾಗಿರುತ್ತದೆ ಹಾಗೂ ರಬ್ಬರ್ (ಕೆಲವೊಮ್ಮೆ ಚರ್ಮ)ನಿಂದ ತಯಾರಿಸಲಾಗಿರುತ್ತದೆ. ಪುರುಷರ ಹೆಚ್ಚು ಘಾಸಿಗೊಳಗಾಗುವ ಭಾಗ- ಶಿಶ್ನಕ್ಕೆ ಬೀಳಬಹುದಾದ ಮಾರಣಾಂತಿಕ ಪೆಟ್ಟುಗಳಿಂದ ದೇಹವನ್ನು ರಕ್ಷಿಸಲು ಇದನ್ನು ಬಳಸಲಾಗುತ್ತದೆ. ಆದರೂ ನಡುಪಟ್ಟಿಯನ್ನು ಧರಿಸಿದ ಹೊರತಾಗಿಯೂ ಶಿಶ್ನಕ್ಕೆ ಹೊಡೆತ ಬೀಳಸುವ ಸಾಧ್ಯತೆಗಳಿರುತ್ತವೆ; ಇದು ಹೊಡೆತದ ಪ್ರಬಲತೆಯನ್ನು ಆಧರಿಸಿರುತ್ತದೆ. ನಡುಪಟ್ಟಿಯು ಕಾದಾಟದ ಸಂದರ್ಭದಲ್ಲಿ ಬಾಗುತ್ತದೆ ಮತ್ತು ತಿರುಚಲ್ಪಡುತ್ತದೆ. ಕೆಲವೊಮ್ಮೆ ಇದು ಬಾಕ್ಸರ್ನ ಚಡ್ಡಿಯಿಂದ ಸಡಿಲಗೊಂಡು ಕಿತ್ತುಕೊಂಡು ಬರುತ್ತದೆ, ಅದರಿಂದ ಬಾಕ್ಸರ್ನ ಹೊಟ್ಟೆಯು ಸ್ವಲ್ಪಮಟ್ಟಿಗೆ ಹಿಸುಕಲ್ಪಡುತ್ತದೆ. 1980ಕ್ಕಿಂತ ಮೊದಲು ನಡುಪಟ್ಟಿಯು ತುಂಬಾ ಸಣ್ಣದಾಗಿತ್ತು. ಆದ್ದರಿಂದ ಬಾಕ್ಸರ್ನ ಶ್ರೋಣಿ-ಕುಹರ(ಪೆಲ್ವಿಸ್)ಕ್ಕೆ ಅತಿ ಹೆಚ್ಚಿನ ಹಾನಿಯಾಗುತ್ತದೆ.
ಪಾದರಕ್ಷೆ
[ಬದಲಾಯಿಸಿ]ಎಲ್ಲಾ ಬಾಕ್ಸರ್ಗಳು ಮೃದು ಅಟ್ಟೆಯ ಶೂಗಳನ್ನು ಹೊಂದಿರುವುದು ಅವಶ್ಯಕವಾಗಿರುತ್ತದೆ. ಅದು ಅನಿರೀಕ್ಷಿತವಾಗಿ ಅಥವಾ ಉದ್ದೇಶಪೂರ್ವಕವಾಗಿ ಪಾದದ ಮೇಲೆ ನಿಲ್ಲುವುದರಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡುತ್ತದೆ. ಶೂಗಳ ತಯಾರಿಕೆಯು ಕಾದಾಳಿಯ ಆದ್ಯತೆಗೆ ಬಿಟ್ಟಿದ್ದು. ಹೆಚ್ಚಿನ ಒಳಗಿನ-ಕಾದಾಳಿಗಳು ಅಧಿಕ ಸಂಕೋಚನಕ್ಕಾಗಿ ರಬ್ಬರ್ನಿಂದ ರಚಿಸಿದ ಶೂಗಳಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಅದೇ ಅನೇಕ ಹೊರಗಿನ-ಕಾದಾಳಿಗಳು ಘರ್ಷಣೆ ಕಡಿಮೆಯಿರುವ ಮತ್ತು ಸುಲಭ ಚಲನೆಗೆ ಅನುಕೂಲವಾದ ಮೃದುವಾದ ಶೂಗಳನ್ನು ಆರಿಸುತ್ತಾರೆ.
ಬಾಕ್ಸಿಂಗ್ ಶೈಲಿ ಪರಿಭಾಷಾ ಶಾಸ್ತ್ರ
[ಬದಲಾಯಿಸಿ]ಬಾಕ್ಸಿಂಗ್ನಲ್ಲಿ ಇಬ್ಬರು ಕಾದಾಳಿಗಳ ಶೈಲಿಗಳು ಒಂದೇ ರೀತಿಯಲ್ಲಿರುವುದಿಲ್ಲ. ಬಾಕ್ಸರ್ನ ಶೈಲಿಯು ಆತನು ಅಥವಾ ಆಕೆಯು ಅಭ್ಯಾಸದಲ್ಲಿ ಕಲಿತುಕೊಂಡಿರುವುದನ್ನು ಒಳಗೊಂಡಿರುತ್ತದೆ ಹಾಗೂ ಆತನಿಗೆ ಅಥವಾ ಆಕೆಗೆ ಸರಿಹೊಂದುವ ರೀತಿಯಲ್ಲಿ ಕಾದಾಟುತ್ತಾರೆ. ಅದೇನೇ ಇದ್ದರೂ, ಬಾಕ್ಸರ್ನ ಶೈಲಿಯ ಬಗ್ಗೆ ವಿಸ್ತಾರವಾಗಿ ವಿವರಿಸುವ ಅನೇಕ ಮಿತಿಗಳನ್ನು ಬಳಸಲಾಗುತ್ತದೆ[ಸೂಕ್ತ ಉಲ್ಲೇಖನ ಬೇಕು]. ಒಬ್ಬ ಬಾಕ್ಸರ್ ಈ ಮಿತಿಗಳಿಗೆ ಒಳಪಟ್ಟಿರಬೇಕೆಂಬ ಅಗತ್ಯವಿರುವುದಿಲ್ಲ ಎಂಬುದನ್ನು ಗಮನಿಸಬೇಕು. ಕಾದಾಳಿಯು ಇನ್-ಫೈಟಿಂಗ್ ಮತ್ತು ಔಟ್-ಫೈಟಿಂಗ್ ಎರಡರಲ್ಲೂ ನಿಪುಣನಾಗಿರಬಹುದು. ಇದಕ್ಕೆ ಉತ್ತಮ ಉದಾಹರಣೆಯೆಂದರೆ - ಮ್ಯಾನ್ನಿ ಪ್ಯಾಕ್ವಿಯೊ ಮತ್ತು ಬರ್ನಾರ್ಡ್ ಹಾಪ್ಕಿನ್ಸ್. ಕಾದಾಳಿಗಳು ಇತರರಿಗೆ ಸುಲಭವಾಗಿ ಸರಿಹೊಂದದ ಒಂದು ಭಿನ್ನ ಶೈಲಿಯನ್ನು ಹೊಂದಿರಬಹುದು, ಉದಾಹರಣೆಗಾಗಿ - ನಸೀಮ್ ಹ್ಯಾಮೆಡ್.
ಬಾಕ್ಸರ್/ಔಟ್-ಫೈಟರ್
[ಬದಲಾಯಿಸಿ]ಸಾಂಪ್ರದಾಯಿಕ "ಬಾಕ್ಸರ್" ಅಥವಾ ಸ್ಟೈಲಿಸ್ಟ್ ("ಔಟ್-ಫೈಟರ್" ಎಂದೂ ಕರೆಯುತ್ತಾರೆ) ಅವನ ಮತ್ತು ವಿರೋಧಿಯ ಮಧ್ಯೆ ಅಂತರವನ್ನು ಕಾಪಾಡಲು, ಪ್ರಯತ್ನಿಸುತ್ತಾನೆ, ವೇಗವಾಗಿ ಕಾದಾಡುತ್ತಾನೆ, ದೀರ್ಘ ಅಂತರದ ಹೊಡೆತಗಳನ್ನು ಹೆಚ್ಚಾಗಿ ಗುದ್ದನ್ನು ನೀಡುತ್ತಾನೆ ಹಾಗೂ ಕ್ರಮೇಣ ವಿರೋಧಿಯನ್ನು ಆಯಾಸಗೊಳಿಸಿ ಕೆಡುವುತ್ತಾನೆ. ಈ ದುರ್ಬಲ ಹೊಡೆತಗಳ ಮೇಲಿನ ಭರವಸೆಯಿಂದಾಗಿ ಔಟ್-ಫೈಟರ್ಗಳು ನಾಕ್ಔಟ್ನ ಬದಲಿಗೆ ಅಂಕದ ನಿರ್ಧಾರದಿಂದ ಜಯಗಳಿಸುತ್ತಾರೆ. ಆದರೂ ಕೆಲವು ಔಟ್-ಫೈಟರ್ಗಳು ಗಮನಾರ್ಹ ನಾಕ್ಔಟ್ ದಾಖಲೆಗಳನ್ನು ಹೊಂದಿದ್ದಾರೆ. ಕಾದಾಟದ ಗತಿಯನ್ನು ನಿಯಂತ್ರಿಸುವ ಮತ್ತು ವಿರೋಧಿಯನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುವುದರಿಂದ, ಅವರನ್ನು ಹೆಚ್ಚಾಗಿ ಅತ್ಯುತ್ತಮ ಬಾಕ್ಸಿಂಗ್ ತಂತ್ರ-ನಿಪುಣರೆಂದು ಪರಿಗಣಿಸಲಾಗುತ್ತದೆ. ವಿರೋಧಿಯನ್ನು ಕ್ರಮಬದ್ಧವಾಗಿ ಮಣಿಸುವಂತೆ ಮಾಡಿ ಆತನು ಬ್ರ್ಯಾವ್ಲರ್ಗಿಂತ ಹೆಚ್ಚು ಕೌಶಲವನ್ನು ಮತ್ತು ತಂತ್ರವನ್ನು ತೋರಿಸುತ್ತಾನೆ[ಸೂಕ್ತ ಉಲ್ಲೇಖನ ಬೇಕು]. ಔಟ್-ಫೈಟರ್ಗಳಿಗೆ ವ್ಯಾಪ್ತಿ, ಕೈಯ ವೇಗ, ಪ್ರತಿವರ್ತನ ಮತ್ತು ಚಾತುರ್ಯತೆ ಮೊದಲಾದವುಗಳು ಅವಶ್ಯಕವಾಗಿರುತ್ತದೆ.
ಪ್ರಮುಖ ಔಟ್-ಫೈಟರ್ಗಳೆಂದರೆ - ಮೊಹಮ್ಮದ್ ಆಲಿ, ಜೀನ್ ಟನ್ನಿ,[೧೮] ಎಜಾರ್ಡ್ ಚಾರ್ಲ್ಸ್,[೧೯] ವಿಲ್ಲಿ ಪೆಪ್,[೨೦] ಮೆಲ್ಡ್ರಿಕ್ ಟೈಲರ್, ಲ್ಯಾರಿ ಹೋಮ್ಸ್, ರಾಯ್ ಜೋನ್ಸ್ Jr., ಸುಗರ್ ರೇ ಲಿಯೊನಾರ್ಡ್, ಆಸ್ಕರ್ ಡಿ ಲಾ ಹೋಯ ಮತ್ತು ಜೋಯ್ ಕ್ಯಾಲ್ಜಘೆ.
ಬಾಕ್ಸರ್-ಗುದ್ದಾಳಿ(ಪಂಚರ್)
[ಬದಲಾಯಿಸಿ]ಬಾಕ್ಸರ್-ಗುದ್ದಾಳಿಯು ವೈವಿಧ್ಯಪೂರ್ಣ ಶಕ್ತಿ, ಸಾಮಾರ್ಥ್ಯಗಳಿಂದ ಕೂಡಿದ ಬಾಕ್ಸರ್ ಆಗಿರುತ್ತಾನೆ. ಆತನು ತಂತ್ರ ಮತ್ತು ಶಕ್ತಿಯ ಸಂಯೋಗದೊಂದಿಗೆ ಹತ್ತಿರದಲ್ಲಿ ಕಾದಾಡುವ ಸಾಮಾರ್ಥ್ಯವನ್ನು ಹೊಂದಿರುತ್ತಾನೆ. ಅವನು ಹೆಚ್ಚಾಗಿ ಅನೇಕ ಹೊಡೆತಗಳ ಸಂಯೋಗದಿಂದ ಮತ್ತು ಕೆಲವು ಸಂದರ್ಭಗಳಲ್ಲಿ ಒಂದೇ ಹೊಡೆತದಿಂದ ವಿರೋಧಿಯನ್ನು ಹೊಡೆದುರುಳಿಸಲು ಸಮರ್ಥನಾಗಿರುತ್ತಾನೆ. ಅವರ ಚಲನೆ ಮತ್ತು ತಂತ್ರಗಳು ಔಟ್-ಫೈಟರ್ನಂತೆಯೇ ಇರುತ್ತದೆ (ಆದರೂ ಅವರು ಸಾಮಾನ್ಯವಾಗಿ ಔಟ್-ಫೈಟರ್ಗಳಷ್ಟು ಚಲನಶೀಲರಾಗಿರುವುದಿಲ್ಲ). ಆದರೆ ನಿರ್ಣಯದಿಂದ ಜಯಗಳಿಸುವ ಬದಲಿಗೆ, ಅವರು ಹಲವಾರು ಹೊಡೆತಗಳ ಸಂಯೋಗಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹೊಡೆದುರುಳಿಸಿ, ಆನಂತರ ನೌಕ್ಔಟ್ಅನ್ನು ಗಳಿಸಲು ಬಯಸುತ್ತಾರೆ. ಬಾಕ್ಸರ್ ಈ ಶೈಲಿಯನ್ನು ಬಳಸಿಕೊಂಡು ಪರಿಣಾಮಕಾರಿಯಾಗಲು ವೈವಿಧ್ಯಪೂರ್ಣ ಶಕ್ತಿ, ಸಾಮಾರ್ಥ್ಯಗಳನ್ನು ಹೊಂದಿರಬೇಕು.
ಪ್ರಧಾನ ಗುದ್ದಾಳಿಗಳೆಂದರೆ - ಮ್ಯಾನಿ ಪ್ಯಾಕ್ವಿಯೊ, ಸ್ಯಾಮ್ ಲ್ಯಾಂಗ್ಫೋರ್ಡ್,[೨೧] ಹೆನ್ರಿ ಆರ್ಮ್ಸ್ಟ್ರಾಂಗ್,[೨೨] ಜೋಯ್ ಲೂಯಿಸ್,[೨೩] ಸುಗರ್ ರೇ ರಾಬಿನ್ಸನ್,[೨೪] ಟೋನಿ ಜಾಲೆ, ಆರ್ಕೀ ಮೂರ್, ಕಾರ್ಲೋಸ್ ಮಾಂಜಾನ್[೨೫] ಅಲೆಕ್ಸಿಸ್ ಆರ್ಗ್ಯುಯೆಲ್ಲೊ, ಎರಿಕ್ ಮೊರಾರ್ಲ್ಸ್, ಲೆನ್ನಕ್ಸ್ ಲೆವಿಸ್, ವ್ಲಾಡಿಮಿರ್ ಕ್ಲಿಟ್ಸ್ಕೊ, ಟೆರ್ರಿ ನಾರಿಸ್ ಮತ್ತು ಥಾಮಸ್ ಹರ್ನ್ಸ್.
ಬ್ರ್ಯಾವ್ಲರ್/ಸ್ಲಗ್ಗರ್
[ಬದಲಾಯಿಸಿ]ಬ್ರ್ಯಾವ್ಲರ್ ಸಾಮಾನ್ಯವಾಗಿ ಕಾದಾಟದ-ರಂಗದಲ್ಲಿ ತಂತ್ರ ಮತ್ತು ಚತುರತೆಯನ್ನು ಹೊಂದಿರದ ಕಾದಾಳಿಯಾಗಿದ್ದಾನೆ. ಆದರೆ ಅವನು ಅದರ ಮಟ್ಟಕ್ಕೆ ಕೇವಲ ಹೊಡೆತದ ಸಾಮಾರ್ಥ್ಯದಿಂದ ನಿರ್ವಹಿಸುತ್ತಾನೆ. ಹೆಚ್ಚಿನ ಬ್ರ್ಯಾವ್ಲರ್ಗಳು ಚಲನಶೀಲತೆಯನ್ನು ಹೊಂದಿರುವುದಿಲ್ಲ. ಅವರು ಕಡಿಮೆ ಚಲನೆ, ಹೆಚ್ಚು ಸ್ಥಿರವಾಗಿರುವ ಆಧಾರರಚನೆಯನ್ನು ಬಯಸುತ್ತಾರೆ ಹಾಗೂ ಹೆಚ್ಚು ವೇಗದ ಕಾಲಿನ ಚಲನೆಯನ್ನು ಹೊಂದಿರುವ ಕಾದಾಳಿಗಳೊಂದಿಗೆ ಅಧಿಕ ಶ್ರಮ ಪಡುತ್ತಾರೆ. ಒಂದು ಕೈಯ ನಿರಂತರವಾದ ಹೊಡೆತವು ಅದರ ಪ್ರಬಲತೆಯನ್ನು ಕಡಿಮೆ ಮಾಡುತ್ತದೆಂದು ಅವರು ಅನೇಕ ಹೊಡೆತಗಳ ಸಂಯೋಗವನ್ನು ನಿರಾಕರಿಸಿ, ನಿಧಾನವಾಗಿ, ಹೆಚ್ಚು ಪ್ರಬಲ ಏಕ ಹೊಡೆತಗಳನ್ನು (ಉದಾಹರಣೆಗಾಗಿ ಕೊಕ್ಕೆ ಹೊಡೆತ ಮತ್ತು ಮೇಲಿನ-ಅಡ್ಡಪೆಟ್ಟು) ನೀಡುವ ಶೈಲಿಯನ್ನು ಹೊಂದಿರುತ್ತಾರೆ. ಅವರ ನಿಧಾನಗತಿ ಮತ್ತು ನಿರೀಕ್ಷಿಸಬಹುದಾದ ಹೊಡೆತದ ಶೈಲಿಯು (ಪ್ರಬಲವಾದ ಏಕ ಹೊಡೆತಗಳು) ಹೆಚ್ಚಾಗಿ ಅವರು ವಿರೋಧಿಯ ಹೊಡೆತಗಳಿಗೆ ತುತ್ತಾಗುವಂತೆ ಮಾಡುತ್ತದೆ. ಆದ್ದರಿಂದ ಯಶಸ್ವಿ ಬ್ರ್ಯಾವ್ಲರ್ಗಳು ಗಣನೀಯ ಪ್ರಮಾಣದ ಉಗ್ರಪೆಟ್ಟುಗಳನ್ನು ಸಹಿಸಿಕೊಳ್ಳಲು ಸಮರ್ಥರಾಗಿರಬೇಕಾಗುತ್ತದೆ. ಬ್ರ್ಯಾವ್ಲರ್ನ ಮುಖ್ಯ ಆಸ್ತಿಗಳೆಂದರೆ ಶಕ್ತಿ ಮತ್ತು ಧೈರ್ಯ (ಎದುರಾಳಿಯು ಬಾಕ್ಸಿಂಗ್ಅನ್ನು ಮುಂದುವರಿಸಲು ಸಮರ್ಥನಾಗಿರುವಾಗ ಉಗ್ರ-ಪೆಟ್ಟು ತಡೆದುಕೊಳ್ಳುವ ಸಾಮಾರ್ಥ್ಯ).
ಪ್ರಮುಖ ಬ್ರ್ಯಾವ್ಲರ್ಗಳೆಂದರೆ - ಡೇವಿಡ್ ಟುವಾ, ರಿಕಿ ಹ್ಯಾಟನ್, ಸ್ಟ್ಯಾನ್ಲೆ ಕೆಟ್ಚೆಲ್,[೨೬] ಮ್ಯಾಕ್ಸ್ ಬೇರ್,[೨೭] ಜೇಕ್ ಲ್ಯಮೋಟ, ರೋಬರ್ಟೊ ಡರಾನ್, ರಾಕಿ ಗ್ರೇಜಿಯಾನೊ,[೨೮] ಸೋನಿ ಲಿಸ್ಟನ್[೨೯] ಮತ್ತು ಜಾರ್ಜ್ ಫೋರ್ಮ್ಯಾನ್, ಜ್ವಾನ್ ಉರಾಂಗೊ.
ಸ್ವ್ಯಾರ್ಮರ್/ಇನ್-ಫೈಟರ್
[ಬದಲಾಯಿಸಿ]ಇನ್-ಫೈಟರ್/ಸ್ವ್ಯಾರ್ಮರ್ಗಳು (ಕೆಲವೊಮ್ಮೆ "ಒತ್ತಡದ ಕಾದಾಳಿ"ಗಳೆಂದು ಕರೆಯಲಾಗುತ್ತದೆ) ವಿರೋಧಿಗೆ ಹತ್ತಿರದಲ್ಲಿರಲು ಪ್ರಯತ್ನಿಸುತ್ತಾರೆ, ಅವರು ತೀವ್ರವಾದ ಹೊಡೆತಗಳನ್ನು ಹಾಗೂ ಕೊಕ್ಕೆ ಹೊಡೆತಗಳು ಮತ್ತು ಮೇಲಿನ-ಅಡ್ಡಪೆಟ್ಟುಗಳನ್ನು ಒಟ್ಟುಗೂಡಿಸಿ ಕೊಡುತ್ತಾರೆ. ಒಬ್ಬ ಯಶಸ್ವಿ ಇನ್-ಫೈಟರ್ ಹೆಚ್ಚಾಗಿ ಅಧಿಕ "ಧೈರ್ಯ"ವನ್ನು ಹೊಂದಿರಬೇಕಾಗುತ್ತದೆ ಏಕೆಂದರೆ ಅವರು ಸಾಮಾನ್ಯವಾಗಿ ಹೆಚ್ಚು ಪರಿಣಾಮಕಾರಿಯಾಗಿರುವ ಒಳಭಾಗಕ್ಕೆ ಉಪಾಯವಾಗಿ ಚಲಿಸುವುದಕ್ಕಿಂತ ಮೊದಲು ಅನೇಕ ಗುದ್ದುಗಳ ದಾಳಿಗೆ ತುತ್ತುಗುತ್ತಾರೆ. ಇನ್-ಫೈಟರ್ಗಳು ಹತ್ತಿರದಲ್ಲಿ ಉತ್ತಮವಾಗಿ ಕಾದಾಟುತ್ತಾರೆ ಏಕೆಂದರೆ ಅವರು ಸಾಮಾನ್ಯವಾಗಿ ವಿರೋಧಿಗಿಂತ ಗಿಡ್ಡವಾಗಿರುತ್ತಾರೆ ಮತ್ತು ಕಡಿಮೆ ಅಳವನ್ನು ಹೊಂದಿರುತ್ತಾರೆ. ಆದ್ದರಿಂದ ಅವರು ವಿರೋಧಿಯ ಉದ್ದ ಕೈಗಳು ಹೊಡೆತದ ಅಪಾಯವನ್ನು ನೀಡುವ ಕಡಿಮೆ ಅಂತರದಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುತ್ತಾರೆ. ಆದರೂ ಅವರ ವಿಭಾಗಕ್ಕೆ ಉದ್ದವಾಗಿರುವ ಕೆಲವು ಕಾದಾಳಿಗಳು ಇನ್-ಫೈಟಿಂಗ್ ಮತ್ತು ಔಟ್-ಫೈಟಿಂಗ್ ಎರಡರಲ್ಲೂ ನಿಪುಣರಾಗಿರುತ್ತಾರೆ. ಸ್ವ್ಯಾರ್ಮರ್ನ ವೈಶಿಷ್ಟ್ಯವೆಂದರೆ ನಿಲ್ಲದ ನಿರಂತರ ಯುದ್ಧವಾಗಿದೆ. ಹೆಚ್ಚಿನ ಗಿಡ್ಡ ಇನ್-ಫೈಟರ್ಗಳು ಅವರ ಎತ್ತರವನ್ನು ಪ್ರಯೋಜನಕ್ಕಾಗಿ ಬಳಸುತ್ತಾರೆ. ಅವರು ಹೊಡೆತಗಳ ಕೆಳಗೆ ಅಥವಾ ಬದಿಯಲ್ಲಿ ಜಾರಿಕೊಳ್ಳಲು ನಡುವನ್ನು ಬಾಗಿಸುವ ಮೂಲಕ ಎಗರಿ-ನುಣುಚಿಕೊಳ್ಳುವ ರಕ್ಷಣಾ-ತಂತ್ರವನ್ನು ಉಪಯೋಗಿಸುತ್ತಾರೆ. ತಡೆಯುವುದಕ್ಕೆ ಭಿನ್ನವಾಗಿ, ವಿರೋಧಿಗೆ ಹೊಡೆತವನ್ನು ತಪ್ಪಿಸಿಕೊಳ್ಳುವಂತೆ ಮಾಡುವುದು ಅವನ ಸಮತೋಲನಕ್ಕೆ ಅಡ್ಡಿಯನ್ನುಂಟುಮಾಡಿ, ವಿರೋಧಿಯ ಹರಡಿಕೊಂಡ ಕೈಯನ್ನು ದಾಟಿ ಮುಂದೆ ಚಲಿಸುವಂತೆ ಮಾಡುತ್ತದೆ ಹಾಗೂ ವಿರೋಧಿಗೆ ಹೊಡೆತವನ್ನು ನೀಡಲು ಕೈಯನ್ನು ಸ್ವತಂತ್ರವಾಗಿಡುತ್ತದೆ. ಇನ್-ಫೈಟರ್ಗಳ ಹೊಂದಿರುವ ಒಂದು ಭಿನ್ನ ಪ್ರಯೋಜನವೆಂದರೆ ಮೇಲಿನ-ಅಡ್ಡಪೆಟ್ಟುಗಳನ್ನು ನೀಡುವಾಗ ಅವರು ದೇಹದ ಸಂಪೂರ್ಣ ಭಾರವನ್ನು ಹೊಡೆತದ ಮೇಲೆ ತೊಡಗಿಸಬಹುದು; ಮೈಕ್ ಟೈಸನ್ ವಿಪರೀತ ಹಾನಿಯ ಮೇಲಿನ-ಅಡ್ಡಪೆಟ್ಟನ್ನು ನೀಡುವಲ್ಲಿ ಬಹುಪ್ರಸಿದ್ಧನಾಗಿದ್ದನು. ಕೆಲವು ಇನ್-ಫೈಟರ್ಗಳು ಕುಪ್ರಸಿದ್ಧವಾದ ಹೊಡೆತವನ್ನು ನೀಡುವಲ್ಲಿ ಜನಪ್ರಿಯವಾಗಿದ್ದಾರೆ. ಸ್ವ್ಯಾರ್ಮರ್ನ ಪ್ರಮುಖ ವೈಶಿಷ್ಟ್ಯವೆಂದರೆ ಅಪ್ರಚೋದಿತ ಆಕ್ರಮಣ, ಹೊಡೆತ ತಡೆದುಕೊಳ್ಳುವ ಸಾಮಾರ್ಥ್ಯ, ಧೈರ್ಯ ಮತ್ತು ಎಗರಿ-ನುಣುಚಿಕೊಳ್ಳುವುದು.
ಗಮನಾರ್ಹ ಇನ್-ಫೈಟರ್ಗಳೆಂದರೆ - ಮೈಕ್ ಟೈಸನ್, ಹ್ಯಾರಿ ಗ್ರೆಬ್,[೩೦] ಜ್ಯಾಕ್ ಡೆಂಪ್ಸೆ,[೩೧] ರಾಕಿ ಮಾರ್ಸಿಯಾನೊ,[೩೨] ಜೋಯ್ ಫ್ರೇಜಿಯರ್, ಜೇಕ್ ಲಾಮೊಟ್ಟಾ ಮತ್ತು ಜೂಲಿಯೊ ಕೇಸರ್ ಚಾವೆಜ್.
ಎದುರೇಟು ಗುದ್ದಾಳಿ (ಕೌಂಟರ್ ಪಂಚರ್)
[ಬದಲಾಯಿಸಿ]ಎದುರೇಟು ಗುದ್ದಾಳಿಗಳು ತಪ್ಪಿಸಿಕೊಳ್ಳುವ, ಆಕ್ರಮಣಕಾರಿ ಶೈಲಿಯ ಕಾದಾಳಿಗಳಾಗಿದ್ದಾರೆ. ಅವರು ಹೆಚ್ಚಾಗಿ ಅಂಕ ಪಡೆಯುವ ಅಥವಾ ನೌಕ್ಔಟ್ ಆಗುವ ಪ್ರಯೋಜನಕ್ಕಾಗಿ ವಿರೋಧಿಯ ತಪ್ಪುಗಳನ್ನು ಅವಲಂಬಿಸಿರುತ್ತಾರೆ. ಅವರು ಹೊಡೆತಗಳನ್ನು ತಡೆಯಲು ಅಥವಾ ತಪ್ಪಿಸಿಕೊಳ್ಳಲು ವೈವಿಧ್ಯಪೂರ್ಣ ಶಕ್ತಿ, ಸಾಮಾರ್ಥ್ಯಗಳನ್ನು ಬಳಸುತ್ತಾರೆ. ನಂತರ ತಕ್ಷಣವೇ ವಿರೋಧಿಯನ್ನು ಉತ್ತಮ ಸ್ಥಾನದಲ್ಲಿ ಮತ್ತು ಸಮಯ-ಸಾಧಿತ ಹೊಡೆತದೊಂದಿಗೆ ಕೆಡವುತ್ತಾರೆ. ಆದ್ದರಿಂದ ಎದುರೇಟು ಗುದ್ದಾಳಿಗಳ ವಿರುದ್ಧ ಹೋರಾಡಲು ನಿರಂತರ ಹೊಡೆತಗಳ ಅಗತ್ಯವಿರುತ್ತದೆ ಹಾಗೂ ಎದುರೇಟು ಗುದ್ದಾಳಿಗೆ ಉತ್ತಮ ದಾಳಿಯನ್ನು ಮಾಡಲು ಮುಂಚಿತವಾಗಿ ಸೂಚನೆ ನೀಡಬಾರದು. ಈ ಶೈಲಿಯನ್ನು ಬಳಸಿಕೊಂಡು ಯಶಸ್ವಿಯಾಗಲು ಉತ್ತಮ ಪ್ರತಿವರ್ತನವನ್ನು ಹೊಂದಿರಬೇಕು, ಕುಶಾಗ್ರರಾಗಿರಬೇಕು, ಹೊಡತದಲ್ಲಿ ನಿಖರತೆಯಿರಬೇಕು ಮತ್ತು ಕೈಯಲ್ಲಿ ಉತ್ತಮ ವೇಗದ ಚಲನೆಯಿರಬೇಕು.
ಗಮನಾರ್ಹ ಎದುರೇಟು ಗುದ್ದಾಳಿಗಳೆಂದರೆ - ಫ್ಲಾಯ್ಡ್ ಮೇವೆದರ್, Jr., ಜೆರ್ರಿ ಕ್ವ್ಯಾರಿ, ರಿಕಾರ್ಡೊ ಲಾಪೆಜ್, ಬರ್ನಾರ್ಡ್ ಹಾಪ್ಕಿನ್ಸ್, ವಿಟಾಲಿ ಕ್ಲಿಟ್ಸ್ಕೊ, ಜೇಮ್ಸ್ ಟಾನಿ, ಮಾರ್ವಿನ್ ಹ್ಯಾಗ್ಲರ್, ಎವಂಡರ್ ಹಾಲಿಫೀಲ್ಡ್, ಜ್ವಾನ್ ಮ್ಯಾನ್ಯುಯೆಲ್ ಮಾರ್ಕ್ವೆಜ್ ಮತ್ತು ಪರ್ನೆಲ್ ವಿಟಾಕರ್.
ಶೈಲಿಯ ಹೋಲಿಕೆಗಳು
[ಬದಲಾಯಿಸಿ]ಈ ಪ್ರತಿಯೊಂದು ಬಾಕ್ಸಿಂಗ್ ಶೈಲಿಯಲ್ಲಿ ಯಶಸ್ಸಾಗುವ ಬಗ್ಗೆ ಸಾರ್ವತ್ರಿಕವಾಗಿ ಸ್ವೀಕೃತವಾದ ನಿಯಮಗಳಿವೆ. ಸಾಮಾನ್ಯವಾಗಿ, ಇನ್-ಫೈಟರ್ ಔಟ್-ಫೈಟರ್ಗಿಂತ ಹೆಚ್ಚಿನ ಪ್ರಯೋಜನವನ್ನು ಹೊಂದಿರುತ್ತಾನೆ, ಔಟ್-ಫೈಟರ್ ಗುದ್ದಾಳಿಗಿಂತ ಹೆಚ್ಚು ಸಾಮರ್ಥ್ಯವನ್ನು ಹೊಂದಿರುತ್ತಾನೆ ಹಾಗೂ ಒಬ್ಬ ಗುದ್ದಾಳಿಯು ಇನ್-ಫೈಟರ್ಗಿಂತ ಅಧಿಕ ಪ್ರಯೋಜನವನ್ನು ಹೊಂದಿರುತ್ತಾನೆ; ಇದು ಒಂದು ಚಕ್ರವನ್ನು ರೂಪಿಸುತ್ತದೆ. ಪ್ರತಿಯೊಂದು ಶೈಲಿಯು ಒಂದಕ್ಕೆ ಹೋಲಿಸಿದರೆ ಪ್ರಬಲವಾಗಿರುತ್ತದೆ ಮತ್ತು ಇನ್ನೊಂದಕ್ಕೆ ಹೋಲಿಸಿದರೆ ದುರ್ಬಲವಾಗಿರುತ್ತದೆ, ಕಲ್ಲು-ಕಾಗದ-ಕತ್ತರಿಯಲ್ಲಿರುವಂತೆ, ಯಾವುದೊಂದೂ ಪ್ರಬಲವಾಗಿರುವುದಿಲ್ಲ. ಸಹಜವಾಗಿ ಕಾದಾಳಿಗಳ ಕೌಶಲ ಮಟ್ಟ ಮತ್ತು ತರಬೇತಿಯಂತಹ ಅನೇಕ ಇತರ ವಿಷಯಗಳು ಕಾದಾಟದ ಫಲಿತಾಂಶವನ್ನು ನಿರ್ಣಯಿಸುತ್ತವೆ. ಆದರೆ ಈ ಶೈಲಿಗಳ ಬಗ್ಗೆ ಬಾಕ್ಸಿಂಗ್ ಅಭಿಮಾನಿಗಳು ಮತ್ತು ಬರಹಗಾರರಲ್ಲಿ ವ್ಯಾಪಕವಾಗಿರುವ ನಂಬಿಕೆಯೆಂದರೆ "ಶೈಲಿಗಳು ಕಾದಾಟಗಳನ್ನು ನಿರ್ಧರಿಸುತ್ತವೆ".
ಬ್ರ್ಯಾವ್ಲರ್ಗಳು ಸ್ವ್ಯಾರ್ಮರ್ ಅಥವಾ ಇನ್-ಫೈಟರ್ಗಳನ್ನು ಮೀರಿಸುತ್ತಾರೆ ಏಕೆಂದರೆ ಸ್ಲಗ್ಗರ್ಗಳ(ಬ್ರ್ಯಾವ್ಲರ್ಗಳ) ಹತ್ತಿರಕ್ಕೆ ಹೋಗಲು ಪ್ರಯತ್ನಿಸುವಾಗ, ಇನ್-ಫೈಟರ್ಗಳು ನೇರವಾಗಿ ಬಲವಾಗಿ-ಹೊಡೆಯುವ ಬ್ರ್ಯಾವ್ಲರ್ನ ಹೊಡೆತದ ಹತ್ತಿರಕ್ಕೆ ಸ್ಥಿರವಾಗಿ ಚಲಿಸಬೇಕಾಗುತ್ತದೆ. ಆದ್ದರಿಂದ ಇನ್-ಫೈಟರ್ಗಳು ಹೆಚ್ಚು ಧೈರ್ಯವನ್ನು ಹೊಂದಿಲ್ಲದಿರುವುದರಿಂದ ಮತ್ತು ಹೊಡೆತಗಳನ್ನು ತಡೆದುಕೊಳ್ಳುವ ಸಾಮರ್ಥ್ಯವು ಕಡಿಮೆಯಿರುವುದರಿಂದ, ಬ್ರ್ಯಾವ್ಲರ್ಗಳು ಕಾದಾಟವನ್ನು ಜಯಿಸುತ್ತಾರೆ. ಈ ರೀತಿಯ ಹೋಲಿಸುವ-ಪ್ರಯೋಜನದ ಒಂದು ಪ್ರಸಿದ್ಧ ಉದಾಹರಣೆಯೆಂದರೆ ಜೋಯ್ ಫ್ರೇಜಿಯರ್ನ ವಿರುದ್ಧದ ಜಾರ್ಜ್ ಫೋರ್ಮ್ಯಾನ್ನ ನೌಕ್ಔಟ್ ಜಯ.
ಭಾರಿ ಸ್ಲಗ್ಗರ್ಗಳ ವಿರುದ್ಧ ಇನ್-ಫೈಟರ್ಗಳು ಜಯಗಳಿಸಲು ಕಷ್ಟಪಟ್ಟರೂ, ಅವರು ವೈಶಿಷ್ಟ್ಯವಾಗಿ ಔಟ್-ಫೈಟರ್ಗಳು ಮತ್ತು ಬಾಕ್ಸರ್ಗಳ ವಿರುದ್ಧ ಹೆಚ್ಚು ಯಶಸ್ಸು ಗಳಿಸುತ್ತಾರೆ. ಔಟ್-ಫೈಟರ್ಗಳು ತಮ್ಮ ಮತ್ತು ವಿರೋಧಿಯ ಮಧ್ಯೆ ಸ್ವಲ್ಪ ಅಂತರದೊಂದಿಗೆ ನಿಧಾನಗತಿಯ ಕಾದಾಟಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಇನ್-ಫೈಟರ್ಗಳು ಆ ಅಂತರವನ್ನು ಮುಚ್ಚಲು ಮತ್ತು ಉಗ್ರ ಹೊಡೆತಗಳ ಹಿಡಿತ ಸಡಿಲಿಸಲು ಪ್ರಯತ್ನಿಸುತ್ತಾರೆ. ಒಳಗಡೆಯಲ್ಲಿ, ಔಟ್-ಫೈಟರ್ ಅವನ ಕಾದಾಟದ ಹೆಚ್ಚಿನ ಪರಿಣಾಮಕಾರಿತ್ವವನ್ನು ಕಳೆದುಕೊಳ್ಳುತ್ತಾನೆ ಏಕೆಂದರೆ ಅಲ್ಲಿ ಆತನು ಪ್ರಬಲ ಹೊಡೆತಗಳನ್ನು ಹೊಡೆಯಲು ಅಸಮರ್ಥನಾಗಿರುತ್ತಾನೆ. ಸಾಮಾನ್ಯವಾಗಿ ಈ ಸಂದರ್ಭದಲ್ಲಿ ಇನ್-ಫೈಟರ್ ಜಯಗಳಿಸುತ್ತಾನೆ, ಹೇಗೆಂದರೆ ವಿರೋಧಿಯನ್ನು ಎದುರಿಸುವ ಅವನ ತೀವ್ರತೆ ಮತ್ತು ಉತ್ತಮ ಕುಶಾಗ್ರತೆಯು ವಿರೋಧಿಗೆ ನುಣುಚಿಕೊಳ್ಳಲು ಕಷ್ಟವಾಗಿಸುತ್ತದೆ. ಉದಾಹರಣೆಗಾಗಿ, ಸ್ಲಗ್ಗರ್ ಜಾರ್ಜ್ ಫೋರ್ಮ್ಯಾನ್ನಿಂದ ಅತಿಸುಲಭವಾಗಿ ಪ್ರಭಾವಕ್ಕೆ ಒಳಗಾದರೂ ಸ್ವ್ಯಾರ್ಮರ್ ಜೋಯ್ ಫ್ರೇಜಿಯರ್, ಬಾಕ್ಸರ್ ಮಹಮ್ಮದ್ ಅಲಿಗೆ ಅವರ ಮೂರು ಕಾದಾಟಗಳಲ್ಲಿ ಹೆಚ್ಚು ಶ್ರಮಗಳನ್ನು ನೀಡಲು ಸಮರ್ಥನಾಗಿದ್ದನು. ನಿವೃತ್ತಿಯ ನಂತರ ಜೋಯ್ ಲೂಯಿಸ್ ಜನರಿಂದ ಆವರಿಸಲ್ಪಡುವುದನ್ನು ಇಷ್ಟಪಡುತ್ತಿರಲಿಲ್ಲವೆಂದು ಹಾಗೂ ಅಜೇಯ ಚಾಪಿಯನ್ ರಾಕಿ ಮಾರ್ಸಿಯಾನೊ ಮೊದಲಾದ ಸ್ವ್ಯಾರ್ಮರ್ಗಳು ಅವನ ಜೀವನದ ಅತ್ಯುತ್ತಮ ದೆಸೆಯಲ್ಲೂ ಅವನಿಗೆ ಶೈಲಿಯ ಸಮಸ್ಯೆಗಳನ್ನು ಉಂಟುಮಾಡಿದ್ದಾರೆಂದು ಹೇಳಿದನು.
ಬಾಕ್ಸರ್ ಅಥವಾ ಔಟ್-ಫೈಟರ್ ಬ್ರ್ಯಾವ್ಲರ್ನ ವಿರುದ್ಧ ಹೆಚ್ಚಾಗಿ ಯಶಸ್ಸು ಕಾಣುತ್ತಾರೆ. ಬ್ರ್ಯಾವ್ಲರ್ನ ಕಡಿಮೆ ವೇಗವು (ಕೈ ಮತ್ತು ಕಾಲುಗಳೆರಡೂ) ಮತ್ತು ಕಳಪೆ ಮಟ್ಟದ ತಂತ್ರವು ವೇಗದ ಔಟ್-ಫೈಟರ್ ಆತನನ್ನು ಸುಲಭವಾಗಿ ಹೊಡೆದುರುಳಿಸುವಂತೆ ಮಾಡುತ್ತವೆ. ಬ್ರ್ಯಾವ್ಲರ್ ಕಾದಾಟವನ್ನು ಮುಕ್ತಾಯಗೊಳಿಸಲು ಕೇವಲ ಒಂದು ಉತ್ತಮ ಹೊಡೆತವನ್ನು ನೀಡಬೇಕಾಗಿರುವುದರಿಂದ, ಔಟ್-ಫೈಟರ್ನ ಮುಖ್ಯ ಕೆಲಸವೆಂದರೆ ಎಚ್ಚರವಾಗಿರುವುದು. ಔಟ್-ಫೈಟರ್ ಅಂತಹ ಪ್ರಬಲ ಹೊಡೆತಗಳನ್ನು ತಪ್ಪಿಸಿಕೊಳ್ಳಲು ಸಮರ್ಥನಾದರೆ, ಅವನು ವೇಗವಾಗಿ ಗುದ್ದುಗಳನ್ನು ನೀಡಿ ಬ್ರ್ಯಾವ್ಲರ್ನನ್ನು ಹೊಡೆದುರುಳಿಸಬಹುದು. ಅವನು ಸಾಕಷ್ಟು ಯಶಸ್ಸಾಗಿದ್ದರೂ, ನಂತರದ ಸುತ್ತುಗಳಲ್ಲಿ ನೌಕ್ಔಟ್ಅನ್ನು ಸಾಧಿಸುವ ಪ್ರಯತ್ನದಲ್ಲಿ ಹೆಚ್ಚುವರಿ ಬಲವನ್ನು ಬಳಸಬೇಕಾಗಬಹುದು. ಮಹಮ್ಮದ್ ಅಲಿ ಮೊದಲಾದ ಹೆಚ್ಚಿನ ಪ್ರಾಚೀನ ಬಾಕ್ಸರ್ಗಳು ಸ್ಲಗ್ಗರ್ಗಳ ವಿರುದ್ಧ ಅತ್ಯುತ್ತಮ ಯಶಸ್ಸು ಗಳಿಸಿದ್ದಾರೆ.
ಶೈಲಿಯ ಹೋಲಿಕೆಗೆ ಒಂದು ಉದಾಹರಣೆಯೆಂದರೆ ಸ್ವ್ಯಾರ್ಮರ್ ಅಥವಾ ಇನ್-ಫೈಟರ್ ಜೂಲಿಯೊ ಕೇಸರ್ ಚಾವೆಜ್ ಮತ್ತು ಬಾಕ್ಸರ್ ಅಥವಾ ಔಟ್-ಫೈಟರ್ ಮೆಲ್ಡ್ರಿಕ್ ಟೈಲರ್ ನಡುವಿನ ಐತಿಹಾಸಿಕ ಕಾದಾಟ (ಚಾವೆಜ್ ಮತ್ತು ಟೈಲರ್ ಗಮನಿಸಿ). ಆ ಪಂದ್ಯಕ್ಕೆ "ಥಂಡರ್ ಮೀಟ್ಸ್ ಲೈಟ್ಲಿಂಗ್" ಎಂಬ ಅಡ್ಡಹೆಸರು ನೀಡಲಾಯಿತು. ಆ ಹೆಸರು ಚಾವೆಜ್ನ ಪ್ರಚಂಡ ಹೊಡೆತದ ಪ್ರಬಲತೆ ಮತ್ತು ಟೈಲರ್ನ ಭಾರಿ ವೇಗವನ್ನು ಸೂಚಿಸುತ್ತದೆ. ಚಾವೆಜ್ "ಮೆಕ್ಸಿಕನ್" ಶೈಲಿಯ ಬಾಕ್ಸಿಂಗ್ನ ಮೂರ್ತರೂಪವಾಗಿದ್ದನು. ಅವನು ಮತ್ತೊಬ್ಬ ಕಾದಾಳಿಯೆಡೆಗೆ ಉಗ್ರವಾದ ಹೆಜ್ಜೆಹಾಕಿ ಸಮೀಪಿಸಿದನು. ಹತ್ತಿರದಲ್ಲಿ ವಿರೋಧಿಯನ್ನು ಹೊಡೆದುರುಳಿಸುವಲ್ಲಿ ಎದುರಾದ ಯಾವುದೇ ಹೊಡೆತಗಳನ್ನು ಕಡೆಗಣಿಸಿದನು. ವಿಶೇಷವಾಗಿ ದೇಹವನ್ನು ಪುಡಿಪುಡಿಮಾಡುವ ದಾಳಿಯ ರೂಪದಲ್ಲಿ ಆಕ್ರಮಣ ಮಾಡಿದನು. ಆ ದಾಳಿಯು ಅವನ ವಿರೋಧಿಯನ್ನು ನೋವು ಮತ್ತು ಬಳಲಿಕೆಯಿಂದ ನಾಶಹೊಂದುವಂತೆ ಮಾಡಿ ಹೊಡೆದುರುಳಿಸಿತು. ವಿರೋಧಿಗೆ ತನ್ನನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗದೆ ಆಯಾಸಗೊಂಡನು, ಚಾವೆಜ್ ಆತನ ತಲೆಯ ಮೇಲೆ ದಾಳಿ ನಡೆಸಿ ನೌಕ್ಔಟ್ಗೆ ಹೋದನು. ಕಾದಾಟದ ಸಂದರ್ಭದಲ್ಲಿ ಟೈಲರ್ನ ಕುಶಾಗ್ರ ಕೈ ಮತ್ತು ಕಾಲುಗಳು ಹಾಗೂ ಬಾಕ್ಸಿಂಗ್ ಕೌಶಲಗಳು ಆರಂಭದಲ್ಲಿ ಅವನಿಗೆ ಉತ್ತಮ ಪ್ರಯೋಜನಗಳನ್ನು ನೀಡಿದವು, ಅಧಿಕ ಅಂಕಗಳನ್ನು ಗಳಿಸುವಂತೆ ಮಾಡಿದವು. ಆದರೆ ಕೊನೆಯಲ್ಲಿ ಚಾವೆಜ್ನ ಹೊಡೆತವು ಟೈಲರ್ನನ್ನು ಕುಗ್ಗುವಂತೆ ಮಾಡಿತು. ಅಂತಿಮ ಸುತ್ತಿನಲ್ಲಿ ಚಾವೆಜ್ ತನ್ನ ಭಾರಿ ಬಲಕೈಯಿಂದ ಆತನನ್ನು ಹೊಡೆದುರುಳಿಸಿದನು.
ಸಾಧನ
[ಬದಲಾಯಿಸಿ]ಬಾಕ್ಸಿಂಗ್ ಬಲಯುತವಾದ, ಪುನರಾವರ್ತನೆಯ ಹೊಡೆತಗಳನ್ನು ಒಳಗೊಳ್ಳುವುದರಿಂದ, ಕೈಯ ಮೂಳೆಗಳಿಗೆ ಹಾನಿಯಾಗದಂತೆ ತಡೆಯಲು ಎಚ್ಚರಿಕೆ ವಹಿಸಬೇಕು. ಹೆಚ್ಚಿನ ತರಬೇತುದಾರರು ಬಾಕ್ಸರ್ಗಳಿಗೆ ಕೈ/ಮಣಿಕಟ್ಟು ಹೊದಿಕೆಗಳು ಮತ್ತು ಬಾಕ್ಸಿಂಗ್ ಕೈಗವಸುಗಳನ್ನು ಬಳಸದೆ ತರಬೇತಿ ನೀಡಲು ಮತ್ತು ಪಂದ್ಯದಲ್ಲಿ ಭಾಗವಹಿಸಲು ಅನುಮತಿಸುವುದಿಲ್ಲ. ಕೈ-ಹೊದಿಕೆಗಳನ್ನು ಕೈಗಳ ಮೂಳೆಗಳನ್ನು ರಕ್ಷಿಸಲು ಬಳಸಲಾಗುತ್ತದೆ ಹಾಗೂ ಕೈಗವಸುಗಳನ್ನು ಕೈಗಳನ್ನು ಮೊಂಡಾಗಿಸುವ ಅಪಾಯದಿಂದ ರಕ್ಷಿಸಲು ಉಪಯೋಗಿಸಲಾಗುತ್ತದೆ. ಇವು ಬಾಕ್ಸರ್ಗಳಿಗೆ ಅವುಗಳನ್ನು ಬಳಸದೆ ನೀಡುವ ಹೊಡೆತಗಳಿಗಿಂತ ಹೆಚ್ಚು ಬಲಯುತವಾದ ಹೊಡೆತಗಳನ್ನು ನೀಡಲು ಅವಕಾಶ ಮಾಡಿಕೊಡುತ್ತವೆ. ಹತ್ತೊಂಭತ್ತನೇ ಶತಮಾನದ ಉತ್ತರಾರ್ಧದಿಂದ ಸ್ಪರ್ಧೆಯಲ್ಲಿ ಕೈಗವಸುಗಳನ್ನು ಬಳಸುವುದು ಅವಶ್ಯಕವಾಗಿದೆ. ಆಧುನಿಕ ಬಾಕ್ಸಿಂಗ್ ಕೈಗವಸುಗಳು ಆರಂಭಿಕ ಇಪ್ಪತ್ತನೇ-ಶತಮಾನದ ಕಾದಾಳಿಗಳು ಧರಿಸುತ್ತಿದ್ದವುಗಳಿಗಿಂತ ಹೆಚ್ಚು ಭಾರವನ್ನು ಹೊಂದಿವೆ. ಕಾದಾಟಕ್ಕಿಂತ ಮುಂಚೆ, ಕಡಿಮೆ ಭಾರದ ಕೈಗವಸುಗಳು ಭಾರಿ ಹೊಡೆತಗಳನ್ನು-ನೀಡುವವರು ಅಧಿಕ ಹಾನಿಯನ್ನುಂಟುಮಾಡಲು ಅವಕಾಶ ನೀಡುತ್ತದೆಂಬ ಅರಿವಿನೊಂದಿಗೆ ಕಾದಾಟದಲ್ಲಿ ಬಳಸುವ ಕೈಗವಸುಗಳ ತೂಕದ ಬಗ್ಗೆ ಇಬ್ಬರು ಬಾಕ್ಸರ್ಗಳ ಅನುಮತಿಯನ್ನೂ ಪಡೆಯಲಾಗುತ್ತದೆ. ಕೈಗವಸುಗಳ ಬ್ರ್ಯಾಂಡ್ ಸಹ ಹೊಡೆತಗಳ ಪರಿಣಾಮದ ಮೇಲೆ ಪ್ರಭಾವ ಬೀರಬಹುದು. ಆದ್ದರಿಂದ ಇದನ್ನೂ ಸಹ ಸಾಮಾನ್ಯವಾಗಿ ಕಾದಾಟಕ್ಕಿಂತ ಮೊದಲು ಪರೀಕ್ಷಿಸಲಾಗುತ್ತದೆ. ಹಲ್ಲು ಮತ್ತು ಒಸಡುಗಳಿಗೆ ಹಾನಿಯಾಗದಂತೆ ರಕ್ಷಿಸಲು ಮತ್ತು ದವಡೆಗೆ ಮತ್ತೆಯನ್ನು ಒದಗಿಸಲು ಬಾಯಿ-ರಕ್ಷಕವು ಅತಿ ಮುಖ್ಯವಾಗಿರುತ್ತದೆ. ಇದು ನೌಕ್ಔಟ್ನ ಸಂಭವವನ್ನು ಕಡಿಮೆ ಮಾಡುತ್ತದೆ.
ಬಾಕ್ಸರ್ಗಳು ಎರಡು ಮೂಲಭೂತ ಪ್ರಕಾರದ ಮುಷ್ಟಿಯೇಟು ಏಟು ನೀಡುವ ಚೀಲಗಳಲ್ಲಿ ಅವರ ಕೌಶಲಗಳನ್ನು ಅಭ್ಯಾಸ ಮಾಡುತ್ತಾರೆ. ಒಂದು ಸಣ್ಣ, ನೀರಿನ ಹನಿಯ-ಆಕಾರದ "ವೇಗದ ಚೀಲ"ವನ್ನು ಪ್ರತಿವರ್ತನಗಳನ್ನು ಮತ್ತು ಪುನರಾವರ್ತಿಸುವ ಮುಷ್ಟಿಯೇಟು ನೀಡುವ ಕೌಶಲಗಳನ್ನು ಅಭಿವೃದ್ಧಿಗೊಳಿಸಲು ಬಳಸಲಾಗುತ್ತದೆ. ಒಂದು ದೊಡ್ಡ ಸಿಲಿಂಡರಿನಾಕಾರದ, ಕೃತಕ ಬದಲಿ ಮರಳು ಅಥವಾ ನೀರು ತುಂಬಿಸಿದ "ಭಾರಿ ಚೀಲ"ವನ್ನು, ಬಲವಾದ ಮುಷ್ಟಿಯೇಟು ನೀಡುವುದನ್ನು ಮತ್ತು ದೇಹದ ಚಲನೆಗಳನ್ನು ಅಭ್ಯಾಸ ಮಾಡಲು ಬಳಸಲಾಗುತ್ತದೆ. ಈ ವಿಶಿಷ್ಠ ಸಾಧನಗಳೊಂದಿಗೆ, ಬಾಕ್ಸರ್ಗಳು ಬಲ, ವೇಗ ಮತ್ತು ಕುಶಾಗ್ರತೆಯನ್ನು ಬೆಳೆಸುವುದಕ್ಕಾಗಿ ಹೆಚ್ಚು ಸಾಮಾನ್ಯ ತರಬೇತಿ-ಸಾಧನವನ್ನೂ ಬಳಸುತ್ತಾರೆ. ಸಾಮಾನ್ಯ ತರಬೇತಿ-ಸಾಧನಗಳೆಂದರೆ ಫ್ರೀ ವೈಟ್ಗಳು, ರೋಯಿಂಗ್ ಮೇಷಿನ್ಗಳು(ಹುಟ್ಟುಹಾಕುವ-ಯಂತ್ರಗಳು), ಜಂಪ್ ರೋಪ್(ಹಾರುವ ಹಗ್ಗ) ಮತ್ತು ಮೆಡಿಸಿನ್ ಬಾಲ್ಗಳು.
ತಂತ್ರ
[ಬದಲಾಯಿಸಿ]ಹೊಡೆತದ ಭಂಗಿ
[ಬದಲಾಯಿಸಿ]ಆಧುನಿಕ ಬಾಕ್ಸಿಂಗ್ ಹೊಡೆತದ ಭಂಗಿಯು 19ನೇ ಮತ್ತು ಆರಂಭಿಕ 20ನೇ ಶತಮಾನಗಳ ವೈಶಿಷ್ಟ್ಯ ಬಾಕ್ಸಿಂಗ್ ಹೊಡೆತ ಭಂಗಿಗಗಳಿಗಿಂತ ಗಮನಾರ್ಹವಾಗಿ ಭಿನ್ನವಾಗಿದೆ. ಆಧುನಿಕ ಹೊಡೆತದ ಭಂಗಿಯು ಹೆಚ್ಚು ನೇರವಾದ ಲಂಬವಾಗಿ-ಕೈಯಿಂದ ಪಡೆಯುವ ರಕ್ಷಣೆಯನ್ನು ಹೊಂದಿದೆ. ಇದು ಜ್ಯಾಕ್ ಜಾನ್ಸನ್ ಮೊದಲಾದ 20ನೇ ಶತಮಾನದ ಕೊಕ್ಕೆ ಹೊಡೆತವನ್ನು ನೀಡುವ ಕಾದಾಳಿಗಳು ಬಳಸುತ್ತಿದ್ದ ಹೆಚ್ಚು ಸಮಾಂತರ, ಬೆರಳಿನ ಗೆಣ್ಣುಗಳನ್ನು-ಮುಂದಕ್ಕೆ-ಚಾಚಿ ರಕ್ಷಣೆ ಪಡೆಯುವುದಕ್ಕೆ ವಿರುದ್ಧವಾಗಿದೆ.
-
ನೆಟ್ಟನೆಯ ಹೊಡೆತದ ಭಂಗಿ
-
ಅರೆ-ಬಗ್ಗಿಸುವುದು
-
ಸಂಪೂರ್ಣ ಬಗ್ಗಿಸುವುದು
ಸಂಪೂರ್ಣವಾಗಿ ನೇರವಾದ ಹೊಡೆತದ ಭಂಗಿಯಲ್ಲಿ, ಬಾಕ್ಸರ್ ಭುಜಗಳ-ಅಗಲದಷ್ಟು ಅಂತರದಲ್ಲಿ ಕಾಲುಗಳನ್ನಿಟ್ಟುಕೊಂಡು ಹಾಗೂ ಒಂದು ಪಾದವನ್ನು ಮತ್ತೊಂದು ಪಾದಕ್ಕಿಂತ ಅರ್ಧ-ಅಡಿ ಹಿಂದಕ್ಕಿಟ್ಟುಕೊಂಡು ನಿಲ್ಲುತ್ತಾರೆ. ಬಲಕೈ-ಬಲದ ಅಥವಾ ಸಾಂಪ್ರದಾಯಿಕ ಬಾಕ್ಸರ್ಗಳು ಎಡ ಪಾದ ಮತ್ತು ಮುಷ್ಟಿಯನ್ನು ಮುಂದಿಟ್ಟುಕೊಂಡು ಹೊಡೆದಾಡುತ್ತಾರೆ. ಎರಡೂ ಪಾದಗಳು ಸಮಾಂತರವಾಗಿರುತ್ತದೆ ಮತ್ತು ಬಲ ಹಿಮ್ಮಡಿಯು ನೆಲದಿಂದ ಮೇಲಕ್ಕಿರುತ್ತದೆ. ಮುಂದಿನ (ಎಡ) ಮುಷ್ಟಿಯನ್ನು ಮುಖದಿಂದ ಸುಮಾರು ಆರು ಇಂಚುಗಳಷ್ಟು ಮುಂದಕ್ಕೆ ಕಣ್ಣಿನ ಎತ್ತರದಲ್ಲಿ ಲಂಬವಾಗಿ ಹಿಡಿದಿರುತ್ತಾರೆ. ಹಿಂದಿನ (ಬಲ) ಮುಷ್ಟಿಯನ್ನು ಗದ್ದದ ಹಿಂದಕ್ಕೆ ಹಿಡಿದುಕೊಂಡಿರುತ್ತಾರೆ ಮತ್ತು ಮೊಣಕೈಯನ್ನು ದೇಹವನ್ನು ರಕ್ಷಿಸುವುದಕ್ಕಾಗಿ ಎದೆಯ ಪಕ್ಕೆಲುಬುಗಳ ಗೂಡಿನ ಮುಂದೆ ಮಡಿಚಿಕೊಂಡಿರುತ್ತಾರೆ. ದವಡೆಗೆ ಹೊಡೆತಗಳು ಬೀಳದ ಹಾಗೆ ತಡೆಯಲು ಗದ್ದವನ್ನು ಎದೆಯ ಭಾಗಕ್ಕೆ ಹುದುಗಿಸುತ್ತಾರೆ ಹಾಗೂ ಹೆಚ್ಚಾಗಿ ಕೇಂದ್ರಗಮನಕ್ಕಿಂತ ದೂರವಿಡುತ್ತಾರೆ. ದವಡೆಗೆ ನೀಡುವ ಹೊಡೆತವು ನೌಕ್-ಔಟ್ಗಳಿಗೆ ಕಾರಣವಾಗುತ್ತದೆ. ಮುಷ್ಟಿಯೇಟು ನೀಡುವಾಗ ಹಾನಿಯಾಗದ ಹಾಗೆ ಮಣಿಕಟ್ಟುಗಳನ್ನು ಬಗ್ಗಿಸಿಕೊಂಡಿರುತ್ತಾರೆ ಹಾಗೂ ಪಕ್ಕೆಗೂಡನ್ನು ರಕ್ಷಿಸುವುದಕ್ಕಾಗಿ ಮೊಣಕೈಗಳನ್ನು ಮಡಿಚಿಕೊಂಡಿರುತ್ತಾರೆ. ಕೆಲವು ಬಾಕ್ಸರ್ಗಳು ಮುಂದಕ್ಕೆ ಬಾಗಿ, ಪಾದಗಳನ್ನು ಒಟ್ಟಿಗೆ ಜೋಡಿಸಿ, ಬಾಗಿ ನಿಂತುಕೊಂಡು ಕಾದಾಡುತ್ತಾರೆ. ವಿವರಿಸಿದ ಹೊಡೆತದ ಭಂಗಿಯನ್ನು "ಪಠ್ಯಪುಸ್ತಕ" ಹೊಡೆತದ ಭಂಗಿ ಎಂದು ಪರಿಗಣಿಸಲಾಗುತ್ತದೆ. ಕಾದಾಳಿಗಳು ಒಮ್ಮೆ ಅದರ ಮೇಲೆ ಹಿಡಿತವನ್ನು ಸಾಧಿಸಿದ ನಂತರ ಅದನ್ನು ಬದಲಾಯಿಸಲು ಪ್ರೇರೇಪಿಸಲ್ಪಡುತ್ತಾರೆ. ಹೆಚ್ಚಿನ ವೇಗದ ಕಾದಾಳಿಗಳು ಕೈಗಳನ್ನು ಕೆಳಗಿಟ್ಟುಕೊಂಡಿರುತ್ತಾರೆ ಹಾಗೂ ತೀಕ್ಷ್ಣವಾದ ಕಾಲ್ಚಳಕವನ್ನು ಹೊಂದಿರುತ್ತಾರೆ. ಬ್ರ್ಯಾವ್ಲರ್ಗಳು ಅಥವಾ ಬುಲ್ಲಿ ಕಾದಾಳಿಗಳು ಅವರ ವಿರೋಧಿಗಳನ್ನು ನಿಧಾನವಾಗಿ ಸುಳಿವುಕೊಡದೆ ಸಮೀಪಿಸುತ್ತಾರೆ.
ಎಡಕೈ-ಬಲದ ಅಥವಾ ಎಡಚ ಕಾದಾಳಿಗಳು ಸಾಂಪ್ರದಾಯಿಕ ಹೊಡೆತದ ಭಂಗಿಗೆ ವಿರುದ್ಧವಾದ ಭಂಗಿಯನ್ನು ಬಳಸುತ್ತಾರೆ. ಅದು ಸಾಂಪ್ರದಾಯಿಕ ಕಾದಾಳಿಗಳು ವಿರೋಧಿಯ ಕಡೆಯಿಂದ ಗುದ್ದು, ಕೊಕ್ಕೆ ಹೊಡೆತ ಅಥವಾ ಅಡ್ಡ-ಪೆಟ್ಟುಗಳನ್ನು ಪಡೆಯಲು ಪಳಗಿರದಿರುವುದರಿಂದ ಅವರಿಗೆ ತೊಂದರೆಯನ್ನುಂಟುಮಾಡಬಹುದು. ವಿರುದ್ಧವಾಗಿ, ಎಡಚ ಹೊಡೆತದ ಭಂಗಿಯು ನೇರ ಬಲಕೈ-ಕಾದಾಳಿಗೆ ಹೆಚ್ಚಿನ ಹಾನಿಯನ್ನುಂಟುಮಾಡುತ್ತದೆ.
ಉತ್ತರ ಅಮೆರಿಕಾದ ಕಾದಾಳಿಗಳು ಹೆಚ್ಚು ಸಮತೋಲಿತ ಹೊಡೆತದ ಭಂಗಿಯನ್ನು ಹೊಂದಿರುತ್ತಾರೆ. ಅವರು ವಿರೋಧಿಯನ್ನು ಹೆಚ್ಚುಕಡಿಮೆ ಪೂರ್ಣವಾಗಿ ಎದುರಿಸುತ್ತಾರೆ. ಅದೇ ಹೆಚ್ಚಿನ ಯುರೋಪಿಯನ್ ಕಾದಾಳಿಗಳು ಅವರ ದೇಹದ ಮುಂಡಭಾಗವನ್ನು ಒಂದು ಬದಿಗೆ ತಿರುಗಿಸಿ ನಿಂತುಕೊಂಡು ಕಾದಾಡುತ್ತಾರೆ. ಕೈಗಳನ್ನು ಹಿಡಿಕೊಳ್ಳುವ ಭಂಗಿಯೂ ಭಿನ್ನವಾಗಿರುತ್ತದೆ. ಕೆಲವು ಕಾದಾಳಿಗಳು ದೇಹಕ್ಕೆ ಹೊಡೆತಗಳು ಬೀಳುವ ಅಪಾಯವನ್ನು ತಪ್ಪಿಸುವುದಕ್ಕಾಗಿ ಎರಡೂ ಕೈಗಳನ್ನು ಮುಖದ ಮುಂಭಾಗದಲ್ಲಿ ಮೇಲಕ್ಕೆ ಹಿಡಿದುಕೊಂಡಿರುತ್ತಾರೆ.
ಆಧುನಿಕ ಬಾಕ್ಸರ್ಗಳು ಕೈಗಳನ್ನು ಮೇಲಕ್ಕೆ ಹಿಡಿದುಕೊಳ್ಳಬೇಕೆಂಬುದನ್ನು (ದೀರ್ಘಕಾಲದ ಕಾದಾಟದ ಸಂದರ್ಭದಲ್ಲಿ ಅದು ಕಷ್ಟವಾಗಿರುತ್ತದೆ) ನೆನಪಿಸಿಕೊಳ್ಳುವುದಕ್ಕಾಗಿ ಕೆಲವೊಮ್ಮೆ ಗಲ್ಲ ಅಥವಾ ಹಣೆಗಳನ್ನು ಅವರ ಮುಷ್ಟಿಗಳಿಂದ ಮೆಲ್ಲಗೆ ತಟ್ಟಿಕೊಳ್ಳುತ್ತಿರುತ್ತಾರೆ. ಬಾಕ್ಸರ್ಗಳಿಗೆ ಪರಿಣಾಮಕಾರಿಯಾಗಿ ಚಲಿಸಲು ಪಾದಗಳೊಂದಿಗೆ ತಳ್ಳಿ ಮುಂದಕ್ಕೆ ಹೋಗುವ ತರಬೇತಿ ನೀಡಲಾಗುತ್ತದೆ. ಮುಂದುವರಿಯುವ ಚಲನೆಯು ಮುಂದಿನ ಕಾಲನ್ನು ಎತ್ತಿ, ಹಿಂದಿನ ಕಾಲಿನೊಂದಿಗೆ ಮುಂದಕ್ಕೆ ಸರಿಯುವುದನ್ನು ಒಳಗೊಳ್ಳುತ್ತದೆ. ಹಿಮ್ಮುಖದ ಚಲನೆಯು ಹಿಂದಿನ ಕಾಲನ್ನು ಎತ್ತಿ, ಮುಂದಿನ ಕಾಲಿನೊಂದಿಗೆ ಸರಿಯುವುದನ್ನು ಒಳಗೊಳ್ಳುತ್ತದೆ. ಹಿಮ್ಮುಖದ ಚಲನೆಯ ಸಂದರ್ಭದಲ್ಲಿ ಚಲನೆಯ ದಿಕ್ಕಿನಲ್ಲಿರುವ ಕಾಲನ್ನು ಮೊದಲು ಚಲಿಸಲಾಗುತ್ತದೆ. ಮತ್ತೊಂದು ಕಾಲು ದೇಹವನ್ನು ಸರಿಸಲು ಬೇಕಾಗುವ ಶಕ್ತಿಯನ್ನು ಒದಗಿಸುತ್ತದೆ.
ಮುಷ್ಟಿಯೇಟುಗಳು
[ಬದಲಾಯಿಸಿ]ಬಾಕ್ಸಿಂಗ್ನಲ್ಲಿ ನಾಲ್ಕು ಪ್ರಮುಖ ಮುಷ್ಟಿಯೇಟುಗಳಿವೆ: ಗುದ್ದು, ನೇರ ಬಲ/ಎಡ ಕೈ, ಕೊಕ್ಕೆ ಹೊಡೆತ ಮತ್ತು ಮೇಲಿನ ಅಡ್ಡಹೊಡೆತ. ಬಾಕ್ಸರ್ಗೆ ಬಲಕೈ-ಬಲವಾಗಿದ್ದರೆ (ಸಾಂಪ್ರದಾಯಿಕ), ಅವನ ಎಡ ಕೈ ಮುಂದಿರುತ್ತದೆ ಮತ್ತು ಬಲ ಕೈ ಹಿಂದಿರುತ್ತದೆ. ಎಡಕೈ-ಬಲದ ಬಾಕ್ಸರ್ನ ಅಥವಾ ಎಡಚನ ಕೈಯ ಸ್ಥಾನಗಳು ಇದಕ್ಕೆ ವಿರುದ್ಧವಾಗಿರುತ್ತದೆ. ಸ್ಪಷ್ಟತೆಗಾಗಿ, ಕೆಳಗಿನ ವಿವರಣೆಯು ಬಲಕೈ-ಬಲದ ಬಾಕ್ಸರ್ನ ಉದಾಹರಣೆಯನ್ನು ಒಳಗೊಳ್ಳುತ್ತದೆ.
-
ಗುದ್ದು
-
ಅಡ್ಡಪೆಟ್ಟು - ಕುಣಿಕೆಯಂತೆ ಬಿಗಿಯುವುದರೊಂದಿಗೆ ವಿರುದ್ಧ-ಹೊಡೆತ
-
ಕೊಕ್ಕೆ ಹೊಡೆತ
-
ಮೇಲಿನ ಅಡ್ಡಪೆಟ್ಟು
-
ಸಣ್ಣ ನೇರವಾದ-ಮುಷ್ಟಿಯೇಟು - ಕಡಿಮೆ ಅಂತರ ಮತ್ತು ಹತ್ತಿರದಲ್ಲಿ
-
ಕ್ರಾಸ್-ಕೌಂಟರ್ (ವಿರುದ್ಧ ಹೊಡೆತ)
-
ಅರೆ ಮೇಲಿನ-ಅಡ್ಡಪೆಟ್ಟು - ವ್ಯಾಪಕ ಮೇಲಿನ-ಅಡ್ಡಪೆಟ್ಟು/ನೇರ ಹೊಡೆತದ ಸಂಯೋಗ
-
ಅರೆ ಕೊಕ್ಕೆ ಹೊಡೆತ - ವ್ಯಾಪಕ ಕೊಕ್ಕೆ ಹೊಡೆತ/ನೇರ ಹೊಡೆತದ ಸಂಯೋಗ
- ಗುದ್ದು – ರಕ್ಷಣೆಯ ಸ್ಥಾನದಿಂದ ಮುಂದಿನ ಕೈಯಿಂದ ನೀಡುವ ವೇಗದ, ನೇರ ಮುಷ್ಟಿಯೇಟು. ಗುದ್ದು ನೀಡುವಾಗ ಕಾದಾಳಿಗಳು ದೇಹದ ಮುಂಡಭಾಗ ಮತ್ತು ನಡುವನ್ನು ಪ್ರದಕ್ಷಿಣಾಕಾರದಲ್ಲಿ ಸುತ್ತುತ್ತಾರೆ, ಮುಷ್ಟಿಯನ್ನು 90 ಡಿಗ್ರಿಗಳಷ್ಟು ತಿರುಗಿಸುತ್ತಾರೆ, ಇದು ಪರಿಣಾಮದ ಮೇಲೆ ಸಮಾಂತರವಾಗಿರುತ್ತದೆ. ಮುಷ್ಟಿಯೇಟು ಸಂಪೂರ್ಣ ವ್ಯಾಪ್ತಿಯನ್ನು ತಲುಪುವುದರಿಂದ, ಮುಂದಿನ ಭುಜವನ್ನು ಗದ್ದದ ರಕ್ಷಣೆಗಾಗಿರಿಸಲಾಗುತ್ತದೆ. ಹಿಂದಿನ ಕೈಯು ದವಡೆಗೆ ರಕ್ಷಣೆ ನೀಡುವುದಕ್ಕಾಗಿ ಮುಖದ ಮುಂದೆ ಇರುತ್ತದೆ. ಗುರಿಯೊಂದಿಗೆ ಸಂಪರ್ಕಿಸಿದ ನಂತರ, ಮುಂದಿನ ಕೈಯನ್ನು ಮುಖದ ಮುಂಭಾಗದಲ್ಲಿ ರಕ್ಷಣೆಯನ್ನು ಒದಗಿಸುವ ಸ್ಥಾನಕ್ಕೆ ವೇಗವಾಗಿ ಹಿಂದಕ್ಕೆಳೆದುಕೊಳ್ಳಲಾಗುತ್ತದೆ. ಗುದ್ದನ್ನು ಬಾಕ್ಸರ್ನ ತಂತ್ರೋಪಾಯಗಳಲ್ಲಿ ಅತಿ ಮುಖ್ಯ ಮುಷ್ಟಿಯೇಟೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ಅದು ಉತ್ತಮ ಮಟ್ಟದ ರಕ್ಷಣೆಯನ್ನು ಒದಗಿಸುತ್ತದೆ ಮತ್ತು ವಿರೋಧಿಯ ಕಡೆಯ ಪ್ರತಿಕೂಲ ಹೊಡೆತಕ್ಕೆ ಅತಿ ಕಡಿಮೆ ಸಮಯಾವಕಾಶವನ್ನು ಉಳಿಸುತ್ತದೆ. ಇದು ಯಾವುದೇ ಮುಷ್ಟಿಯೇಟಿಗಿಂತ ದೀರ್ಘವಾದ ಅಳವನ್ನು ಹೊಂದಿರುತ್ತದೆ ಹಾಗೂ ಇದಕ್ಕೆ ಬದ್ಧತೆಯ ಅಥವಾ ಅತಿ ಹೆಚ್ಚಿನ ತೂಕದ ವರ್ಗಾವಣೆಯ ಅವಶ್ಯಕತೆ ಇರುವುದಿಲ್ಲ. ಕಡಿಮೆ ಪ್ರಬಲತೆಯಿಂದಾಗಿ ಗುದ್ದನ್ನು ಹೆಚ್ಚಾಗಿ ಅಂತರವನ್ನು ಅಳೆಯುವ ಸಾಧನವಾಗಿ ಬಳಸಲಾಗುತ್ತದೆ, ಇದು ವಿರೋಧಿಯ ರಕ್ಷಣೆಗಳನ್ನು ಪರೀಕ್ಷಿಸುತ್ತದೆ, ವಿರೋಧಿಯನ್ನು ಚೆನ್ನಾಗಿ ಪೀಡಿಸುತ್ತದೆ ಹಾಗೂ ಭಾರಿ, ಹೆಚ್ಚು ಪ್ರಬಲ ಮುಷ್ಟಿಯೇಟುಗಳು ಬೀಳುವಂತೆ ಮಾಡುತ್ತದೆ. ಹೆಚ್ಚುವರಿ ಸಾಮರ್ಥ್ಯಕ್ಕಾಗಿ ಅರ್ಧ-ಹೆಜ್ಜೆಯನ್ನು ಸೇರಿಸಿ, ಹೊಡೆತದೆಡೆಗೆ ಸಂಪೂರ್ಣ ದೇಹವನ್ನು ಸರಿಸಲಾಗುತ್ತದೆ. ಗುದ್ದುಗಳಲ್ಲಿ ಹೆಚ್ಚು ಸಾಮರ್ಥ್ಯವನ್ನು ತೋರಿಸಲು ಮತ್ತು ಅದನ್ನು ಬಳಸಿಕೊಂಡು ವಿರೋಧಿಯನ್ನು ಹೊಡೆದುರುಳಿಸಲು ಸಮರ್ಥರಾಗಿರುವ ಕೆಲವು ಪ್ರಮುಖ ಬಾಕ್ಸರ್ಗಳೆಂದರೆ ಲ್ಯಾರಿ ಹೋಮ್ಸ್ ಮತ್ತು ವ್ಲಾಡಿಮಿರ್ ಕ್ಲಿಟ್ಸ್ಚ್ಕೊ.
- ಅಡ್ಡ ಪೆಟ್ಟು(ಕ್ರಾಸ್) – ಹಿಂದಿನ ಕೈಯಿಂದ ನೀಡುವ ಒಂದು ಪ್ರಬಲ, ನೇರವಾದ ಮುಷ್ಟಿಯೇಟು. ರಕ್ಷಣೆಯ ಸ್ಥಾನದಿಂದ, ಹಿಂದಿನ ಕೈಯನ್ನು ಗದ್ದದಿಂದ ತೆಗೆದುಕೊಂಡು, ಗುರಿಯೆಡೆಗೆ ನೇರವಾಗಿ ಸರಿಸಲಾಗುತ್ತದೆ. ಹಿಂದಿನ ಭುಜವನ್ನು ಮುಂದಕ್ಕೆ ಚಾಚಿ, ಗದ್ದದ ಹೊರಭಾಗವನ್ನು ಮುಟ್ಟಲಾಗುತ್ತದೆ. ಅದೇ ಸಂದರ್ಭದಲ್ಲಿ, ಮುಂದಿನ ಕೈಯನ್ನು ಹಿಂತೆಗೆದುಕೊಂಡು, ಗದ್ದದ ಒಳಭಾಗವನ್ನು ರಕ್ಷಿಸುವುದಕ್ಕಾಗಿ ಮುಖದ ಮುಂಭಾಗದಲ್ಲಿ ಹಿಡಿಯಲಾಗುತ್ತದೆ. ಹೆಚ್ಚುವರಿ ಬಲಕ್ಕಾಗಿ, ಅಡ್ಡ-ಪೆಟ್ಟನ್ನು ಹೊಡೆಯುವಾಗ ದೇಹದ ಮುಂಡಭಾಗ ಮತ್ತು ನಡುವನ್ನು ಅಪ್ರದಕ್ಷಿಣಾಕಾರದಲ್ಲಿ ತಿರುಗಿಸಲಾಗುತ್ತದೆ. ಭಾರವನ್ನೂ ಸಹ ಹಿಂದಿನ ಪಾದದಿಂದ ಮುಂದಿನ ಪಾದಕ್ಕೆ ವರ್ಗಾಯಿಸಲಾಗುತ್ತದೆ. ಇದರಿಂದಾಗಿ ಹಿಂದಿನ ಹಿಮ್ಮಡಿಯು ಭಾರದ ವರ್ಗಾವಣೆಗೆ ಆಸರೆಯನ್ನು ನೀಡುವುದರಿಂದ ಅದು ಹೊರಕ್ಕೆ ತಿರುಗುತ್ತದೆ. ದೇಹದ ಚಲನೆ ಮತ್ತು ತಕ್ಷಣದ ಭಾರದ ವರ್ಗಾವಣೆಯು ಅಡ್ಡ-ಪೆಟ್ಟಿಗೆ ಬಲವನ್ನು ಕೊಡುತ್ತದೆ. ಗುದ್ದಿನಂತೆ, ಇದರಲ್ಲೂ ಅರ್ಧ-ಹೆಜ್ಜೆ ಮುಂದಕ್ಕೂ ಹೋಗಲಾಗುತ್ತದೆ. ಅಡ್ಡ-ಪೆಟ್ಟನ್ನು ನೀಡಿದ ನಂತರ, ಕೈಯನ್ನು ವೇಗವಾಗಿ ಹಿಂದೆತೆಗೆದುಕೊಂಡು, ರಕ್ಷಣಾ ಸ್ಥಾನವನ್ನು ಮತ್ತೆ ಸ್ವಾಧೀನಮಾಡಿಕೊಳ್ಳಲಾಗುತ್ತದೆ. ಇದನ್ನು ಗುದ್ದಿನ ವಿರುದ್ಧದ ಹೊಡೆತವಾಗಿ ಬಳಸಬಹುದು, ವಿರೋಧಿಯ ತಲೆಗೆ (ಅಥವಾ ದೇಹದಲ್ಲಿ ಅಡ್ಡ-ಪೆಟ್ಟಿಗೆ ಗುರಿಯಾಗಿರಿಸಿದ ಹೊಡೆತಕ್ಕೆ ವಿರುದ್ಧವಾಗಿ) ಗುರಿಯಾಗಿಡಬಹುದು ಅಥವಾ ಕೊಕ್ಕೆ ಹೊಡೆತವನ್ನು ನೀಡಲು ಬಳಸಬಹುದು. ಅಡ್ಡ-ಪೆಟ್ಟನ್ನು ಒಂದು ಗುದ್ದಿನ ನಂತರೂ ನೀಡಬಹುದು, ಇದು ಅತ್ಯುತ್ತಮವಾದ "ಒಂದು-ಎರಡು" ಸಂಯೋಜನೆಯನ್ನು ಉಂಟುಮಾಡುತ್ತದೆ. ಅಡ್ಡಪೆಟ್ಟನ್ನು ವಿಶೇಷವಾಗಿ ಅದು ವಿರೋಧಿಯು ನೀಡಿದ ಗುದ್ದನ್ನು ಮೀರಿಸದಿದ್ದರೆ "ನೇರ" ಅಥವಾ "ಸರಿಯಾದುದು" ಎಂದೂ ಕರೆಯಲಾಗುತ್ತದೆ.
- ಕೊಕ್ಕೆ ಹೊಡೆತ(ಹುಕ್) – ವಿರೋಧಿಯ ತಲೆಯ ಬದಿಗೆ ಮುಂದಿನ ಕೈಯಿಂದ ನೀಡಲಾಗುವ ಒಂದು ಅರೆ-ಸುತ್ತಿನ ಮುಷ್ಟಿಯೇಟು. ರಕ್ಷಣೆಯ ಸ್ಥಾನದಿಂದ, ಸಮಾಂತರ ಮುಷ್ಟಿಯೊಂದಿಗೆ (ಬೆರಳಿನ ಗೆಣ್ಣುಗಳು ಮುಂದಕ್ಕೆ ಚಾಚಿಕೊಂಡಿರುವಂತೆ) ಮೊಣಕೈಯನ್ನು ಹಿಂದಕ್ಕೆ ತೆಗೆದುಕೊಂಡು, ಮಡಿಚಲಾಗುತ್ತದೆ. ಹಿಂದಿನ ಕೈಯನ್ನು ಗದ್ದಕ್ಕೆ ರಕ್ಷಣೆ ನೀಡಲು ದವಡೆಯ ಮುಂಭಾಗದಲ್ಲಿ ಹಿಡಿದುಕೊಳ್ಳಲಾಗುತ್ತದೆ. ದೇಹದ ಮುಂಡಭಾಗ ಮತ್ತು ನಡುವನ್ನು ಪ್ರದಕ್ಷಿಣಾಕಾರದಲ್ಲಿ ತಿರುಗಿಸಿಕೊಂಡು, ಮುಷ್ಟಿಯನ್ನು ಬಿಗಿಯಾಗಿ ಹಿಡಿದುಕೊಂಡು, ಗುರಿಯನ್ನು ಸಂಪರ್ಕಿಸಲಾಗುತ್ತದೆ. ಅದೇ ಸಂದರ್ಭದಲ್ಲಿ, ಮುಂದಿನ ಪಾದವನ್ನು ಪ್ರದಕ್ಷಿಣಾಕಾರದಲ್ಲಿ ತಿರುಗಿಸಲಾಗುತ್ತದೆ. ಇದು ಎಡ ಹಿಮ್ಮಡಿಯನ್ನು ಹೊರಕ್ಕೆ ತಿರುಗಿಸುವಂತೆ ಮಾಡುತ್ತದೆ. ಹೊಡೆತವನ್ನು ನೀಡಿದ ನಂತರ, ಕೊಕ್ಕೆ ಹೊಡೆತದ ಸುತ್ತುವ ಕ್ರಮವು ಥಟ್ಟನೆ ಕೊನೆಗೊಳ್ಳುತ್ತದೆ ಹಾಗೂ ಮುಂದಿನ ಕೈಯನ್ನು ಅತಿಶೀಘ್ರದಲ್ಲಿ ರಕ್ಷಣೆಯ ಸ್ಥಾನಕ್ಕೆ ಹಿಂದೆಕ್ಕೆಳೆದುಕೊಳ್ಳಲಾಗುತ್ತದೆ. ಕೊಕ್ಕೆ ಹೊಡೆತವು ದೇಹದ ಕೆಳಭಾಗವನ್ನೂ ಗುರಿಯಾಗಿ ಹೊಂದಿರಬಹುದು. ಈ ತಂತ್ರವನ್ನು, ತಲೆಗೆ ನೀಡುವ ಸಾಂಪ್ರದಾಯಿಕ ಕೊಕ್ಕೆ ಹೊಡೆತದಿಂದ ಭಿನ್ನವಾಗಿಸಲು ಕೆಲವೊಮ್ಮೆ "ರಿಪ್" ಎಂದು ಕರೆಯಲಾಗುತ್ತದೆ. ಕೊಕ್ಕೆ ಹೊಡೆತವನ್ನು ಹಿಂದಿನ ಕೈಯಿಂದಲೂ ನೀಡಲಾಗುತ್ತದೆ.ಪ್ರಮುಖ ಎಡ ಕೊಕ್ಕೆ-ಹೊಡೆತಗಾರರರೆಂದರೆ:ಜಾಯ್ ಫ್ರೇಜರ್ ಮತ್ತು ಮೈಕ್ ಟೈಸನ್
- ಮೇಲಿನ-ಅಡ್ಡಪೆಟ್ಟು(ಅಪ್ಪರ್-ಕಟ್) – ಹಿಂದಿನ ಕೈಯಿಂದ ನೀಡಲಾಗುವ ಲಂಬವಾದ, ನೆಟ್ಟಗಿನ ಮುಷ್ಟಿಯೇಟು. ರಕ್ಷಣೆಯ ಸ್ಥಾನದಿಂದ, ದೇಹದ ಮುಂಡಭಾಗವನ್ನು ಸ್ವಲ್ಪ ಮಟ್ಟಿಗೆ ಬಲಕ್ಕೆ ತಿರುಗಿಸಿ, ಹಿಂದಿನ ಕೈಯನ್ನು ವಿರೋಧಿಯ ಎದೆಯ ಮಟ್ಟಕ್ಕಿಂತ ಕೆಳಗೆ ಹಿಡಿದುಕೊಂಡು, ಮಂಡಿಗಳನ್ನು ಸ್ವಲ್ಪ ಮಟ್ಟಿಗೆ ಬಾಗಿಸಲಾಗುತ್ತದೆ. ಈ ಸ್ಥಾನದಿಂದ, ಹಿಂದಿನ ಕೈಯನ್ನು ನೆಟ್ಟಗೆ ಮೇಲಕ್ಕೆತ್ತಿ, ವಿರೋಧಿಯ ಗದ್ದ ಅಥವಾ ಮುಂಡಭಾಗದ ಕಡೆಗೆ ತಿವಿಯಲಾಗುತ್ತದೆ. ಅದೇ ಸಮಯದಲ್ಲಿ, ಮಂಡಿಗಳನ್ನು ವೇಗವಾಗಿ ಮೇಲಕ್ಕೆ ಸರಿಸಲಾಗುತ್ತದೆ, ದೇಹದ ಮುಂಡಭಾಗ ಮತ್ತು ನಡುವನ್ನು ಅಪ್ರದಕ್ಷಿಣಾಕಾರದಲ್ಲಿ ತಿರುಗಿಸಲಾಗುತ್ತದೆ ಹಾಗೂ ಹಿಂದಿನ ಹಿಮ್ಮಡಿಯನ್ನು ಹೊರಕ್ಕೆ ತಿರುಗಿಸಲಾಗುತ್ತದೆ. ಇದು ಅಡ್ಡ-ಪೆಟ್ಟಿನ ದೇಹದ ಚಲನೆಗಳನ್ನು ಹೋಲುತ್ತದೆ. ಮೇಲಿನ-ಅಡ್ಡಪೆಟ್ಟಿನ ಭಾವಿ ಪರಿಣಾಮದ ಬಳಕೆಯು ವಿರೋಧಿಯ ದೇಹವನ್ನು ಎತ್ತರಿಸಿ, ಮುಂದಿನ ಅನುಕ್ರಮ ದಾಳಿಗಳಿಗೆ ಅಸಮತೋಲನಗೊಳಿಸುವ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ಬಲ ಮೇಲಿನ-ಅಡ್ಡಪೆಟ್ಟಿನ ನಂತರ ನೀಡಲಾಗುವ ಎಡ ಕೊಕ್ಕೆ ಹೊಡೆತವು ಒಂದು ಭಾರಿ ಮಾರಕ ಸಂಯೋಜನೆಯಾಗಿದೆ, ಇದು ವಿರೋಧಿಯ ಗದ್ದವನ್ನು ಘಾಸಿಗೊಳ್ಳುವ ಸ್ಥಾನಕ್ಕೆ ಎತ್ತರಿಸುವಂತೆ ಮಾಡುತ್ತದೆ. ನಂತರ ಕೊಕ್ಕೆ ಹೊಡೆತವು ವಿರೋಧಿಯನ್ನು ನೌಕ್ಔಟ್ ಮಾಡುತ್ತದೆ.
ಈ ವಿವಿಧ ರೀತಿಯ ಹೊಡೆತಗಳನ್ನು ಸಂಯೋಗ ಅಥವಾ "ಕೋಂಬೊ"ಗಳನ್ನು ಉಂಟುಮಾಡಲು ವೇಗವಾಗಿ ಅನುಕ್ರಮವಾಗಿ ನೀಡಲಾಗುತ್ತದೆ. ಹೆಚ್ಚು ಸಾಮಾನ್ಯವಾಗಿರುವವೆಂದರೆ ಗುದ್ದು ಮತ್ತು ಅಡ್ಡ-ಪೆಟ್ಟಿನ ಸಂಯೋಗ, ಇದನ್ನು "ಒನೇ-ಟು ಕೋಂಬೊ" ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಇದು ಸಾಮಾನ್ಯವಾಗಿ ಹೆಚ್ಚು ಪರಿಣಾಮಕಾರಿಯಾದ ಸಂಯೋಗವಾಗಿದೆ ಏಕೆಂದರೆ ಗುದ್ದು ವಿರೋಧಿಯ ಅಡ್ಡಪೆಟ್ಟನ್ನು ನಿರೀಕ್ಷಿಸುವುದನ್ನು ತಡೆಯುತ್ತದೆ, ಇದು ಹೊಡೆತವು ಸ್ಪಷ್ಟವಾಗಿ ಮತ್ತು ಬಲವಾಗಿ ಬೀಳುವಂತೆ ಮಾಡುತ್ತದೆ.
ಕೊಕ್ಕೆ ಹೊಡೆತಕ್ಕಿಂತ ಹೆಚ್ಚು ದೀರ್ಘ ಹರವಿನ ಕೈಗಳೊಂದಿಗೆ, ಓರೆಯ-ಸ್ಥಾನದಿಂದ ಕೊಡುವ ಸುತ್ತುವ ಹೊಡೆತವು ಕಾದಾಳಿಗಳ ಒಟ್ಟು ತೂಕವನ್ನು ಮೀರಿಸುತ್ತದೆ, ಇದನ್ನು ಕೆಲವೊಮ್ಮೆ "ರೌಂಡ್ಹೌಸ್", "ಹೇಮೇಕರ್" ಅಥವಾ ಸಕರ್-ಮುಷ್ಟಿಯೇಟು ಎಂದು ಕರೆಯಲಾಗುತ್ತದೆ. ದೇಹದ ತೂಕವನ್ನು ಮತ್ತು ವ್ಯಾಪಕ ಕಮಾನಿನೊಳಗೆ ಅಭಿಕೇಂದ್ರ-ಬಲವನ್ನು ಅವಲಂಬಿಸುವ ರೌಂಡ್ಹೌಸ್ ಒಂದು ಪ್ರಬಲ ಹೊಡೆತವಾಗಿರುತ್ತದೆ. ಆದರೆ ಇದು ಹೆಚ್ಚಾಗಿ ಗೊತ್ತುಗುರಿಯಿಲ್ಲದ ಮತ್ತು ಅನಿಯಂತ್ರಿತ ಹೊಡೆತವಾಗಿದ್ದು, ಅದನ್ನು ನೀಡುವ ಕಾದಾಳಿಯು ಸಮತೋಲನವನ್ನು ಕಳೆದುಕೊಳ್ಳುವಂತೆ ಮತ್ತು ರಕ್ಷಣೆಯಿಲ್ಲದಂತೆ ಮಾಡುತ್ತದೆ. ವ್ಯಾಪಕ, ಲೂಪಿಂಗ್ (ಕುಣಿಕೆಯೆಂತೆ ಬಿಗಿಯಾಗಿ ಹಿಡಿಯುವ) ಮುಷ್ಟಿಯೇಟುಗಳನ್ನು ನೀಡಲು ಹೆಚ್ಚು ಸಮಯ ಬೇಕಾಗುವುದರಿಂದ ಅವು ಅಷ್ಟೊಂದು ಪ್ರಯೋಜನಕಾರಿಯಾಗಿರುವುದಿಲ್ಲ. ಅವು ವಿರೋಧಿಗೆ ಪ್ರತಿಕ್ರಿಯಿಸಲು ಮತ್ತು ವಿರೋಧಿಸಲು ಹೆಚ್ಚಿನ ಎಚ್ಚರಿಕೆಗಳನ್ನು ನೀಡುತ್ತದೆ. ಈ ಕಾರಣಕ್ಕಾಗಿ, ಹೇಮೇಕರ್ ಅಥವಾ ರೌಂಡ್ಹೌಸ್ ಸಾಂದ್ರದಾಯಿಕ ಹೊಡೆತಗಳಲ್ಲಿ ಹಾಗೂ ಅವನ್ನು ತರಬೇತುದಾರರು ಕಳಪೆ ಮಟ್ಟದ ತಂತ್ರ ಅಥವಾ ಸಾಹಸವೆಂದು ಪರಿಗಣಿಸುತ್ತಾರೆ. ಭಾರಿ ಪ್ರಬಲವಾದ ಬಲದಿಂದಾಗಿ ಇದನ್ನು ಕೆಲವೊಮ್ಮೆ ಕಳಪೆ ಮಟ್ಟದ ಸ್ಥಾನದಲ್ಲಿ ಕಾದಾಡಲು ಅಸಮರ್ಥರಾಗಿರುವಂತೆ ಕಂಡುಬರುವ ಧೈರ್ಯಗೆಟ್ಟ ವಿರೋಧಿಗಳನ್ನು ಹಿಮ್ಮೆಟ್ಟಲು ಬಳಸಲಾಗುತ್ತದೆ.
ಮತ್ತೊಂದು ಅಸಾಂಪ್ರದಾಯಿಕ ಹೊಡೆತವೆಂದರೆ ವಿರಳವಾಗಿ ಬಳಸಲ್ಪಡುವ "ಬೋಲೊ ಮುಷ್ಟಿಯೇಟು". ಇದರಲ್ಲಿ ವಿರೋಧಿಯು ಒಂದು ಕೈಯನ್ನು, ಆ ಕೈಯಿಂದ ಅಥವಾ ಮತ್ತೊಂದರಿಂದ ಹೊಡೆತವನ್ನು ನೀಡುವುದಕ್ಕಿಂತ ಮೊದಲು, ಸಾಮಾನ್ಯವಾಗಿ ಉನ್ಮಾದದಿಂದಾಗಿ ವ್ಯಾಪಕ ಕಮಾನಿನಲ್ಲಿ ಅನೇಕ ಬಾರಿ ತಿರುಗಿಸುತ್ತಾನೆ.
ರಕ್ಷಣೆ
[ಬದಲಾಯಿಸಿ]ಬಾಕ್ಸರ್ಗೆ ಮುಷ್ಟಿಯೇಟುಗಳನ್ನು ತಪ್ಪಿಸಿಕೊಳ್ಳಲು ಅಥವಾ ತಡೆಯಲು ಅನೇಕ ಮೂಲಭೂತ ಕುಶಲತಂತ್ರಗಳಿವೆ, ಅವನ್ನು ಈ ಕೆಳಗೆ ಚಿತ್ರಿಸಲಾಗಿದೆ ಮತ್ತು ವಿವರಿಸಲಾಗಿದೆ.
-
ಜಾರುವುದು
-
ಬಾಬಿಂಗ್
-
ತಡೆಯುವುದು (ಕೈಗಳಿಂದ)
-
ಕವರ್-ಅಪ್ (ಕೈಗವಸುಗಳಿಂದ)
-
ಕ್ಲಿಂಚಿಂಗ್
-
ಕಾಲ್ಚಳಕ
-
ಹೊರಕ್ಕೆ ಎಳೆಯುವುದು
- ಜಾರುವುದು – ಜಾರಿಕೊಳ್ಳುವುದು ದೇಹವನ್ನು ಸ್ವಲ್ಪ ಪ್ರಮಾಣದಲ್ಲಿ ತಿರುಗಿಸುತ್ತದೆ, ಇದರಿಂದಾಗಿ ಬೀಳುವುದರಲ್ಲಿದ್ದ ಹೊಡೆತವು ಯಾವುದೇ ಹಾನಿಯನ್ನುಂಟುಮಾಡದೆ ಹೋಗುತ್ತದೆ. ವಿರೋಧಿಯು ಹೊಡೆತವನ್ನು ನೀಡಿದಾಗ, ಬಾಕ್ಸರ್ ಚುರುಕಾಗಿ ನಡು ಮತ್ತು ಭುಜಗಳನ್ನು ತಿರುಗಿಸುತ್ತಾನೆ. ಇದು ಗದ್ದವನ್ನು ಬದಿಗೆ ತಿರುಗಿಸುವಂತೆ ಮಾಡಿ, ಹೊಡೆತದಿಂದ "ಜಾರಿಕೊಳ್ಳುವಂತೆ" ಮಾಡುತ್ತದೆ. ಮೊಹಮ್ಮದ್ ಅಲಿಯು ಅತ್ಯಂತ ವೇಗವಾಗಿ ಮತ್ತು ಹತ್ತಿರದಿಂದ ಜಾರಿಕೊಳ್ಳುವುದಕ್ಕೆ ಜನಪ್ರಿಯವಾಗಿದ್ದನು, ಅವನಿಗಿಂತ ಮೊದಲು ಮೈಕ್ ಟೈಸನ್ ಪ್ರಸಿದ್ಧವಾಗಿದ್ದನು.
- ಓಲಾಡುವುದು ಅಥವಾ ಏರುಪೇರಾಗುವುದು – ಹೊಡೆತವನ್ನು ನಿರೀಕ್ಷಿಸಲು ಮತ್ತು ದೇಹದ ಮೇಲ್ಭಾಗ ಅಥವಾ ತಲೆಯನ್ನು ಹಿಂದಕ್ಕೆ ಸರಿಸಲು ಹೀಗೆ ಮಾಡಲಾಗುತ್ತದೆ. ಇದು ಹೊಡೆತವನ್ನು ತಪ್ಪಿಸುತ್ತದೆ ಅಥವಾ ಅದರ ಬಲವನ್ನು ಕಡಿಮೆ ಮಾಡುತ್ತದೆ. ಇದನ್ನು "ಹೊಡೆತದೊಂದಿಗೆ ಉರುಳುವುದು" ಅಥವಾ "ಹೊಡೆತದ ಮೇಲೆ ಸವಾರಿ ಮಾಡುವುದು" ಎಂದೂ ಕರೆಯಲಾಗುತ್ತದೆ.
- ತಲೆಯನ್ನು ಸರಕ್ಕನೆ ಬಗ್ಗಿಸುವುದು ಅಥವಾ ಕುಗ್ಗಿಸುವುದು – ಇದರಿಂದಾಗಿ ತಲೆಯನ್ನು ಗುರಿಯಾಗಿರಿಸಿದ ಹೊಡೆತವು ಸವರಿಕೊಂಡು ಹೋಗುತ್ತದೆ ಅಥವಾ ಸಂಪೂರ್ಣವಾಗಿ ತಪ್ಪಿಹೋಗುತ್ತದೆ.
- ಎಗರುವುದು ಮತ್ತು ಹಿಂದಿರುಗುವುದು – ಎಗರುವುದು ತಲೆಯನ್ನು ಬೀಳುವ-ಹೊಡೆತದ ಪಕ್ಕಕ್ಕೆ ಮತ್ತು ಕೆಳಗೆ ಚಲಿಸುವಂತೆ ಮಾಡುತ್ತದೆ. ವಿರೋಧಿಯನ್ನು ಹೊಡೆತವನ್ನು ನೀಡಿದಾಗ, ಬಾಕ್ಸರ್ ಕಾಲುಗಳನ್ನು ವೇಗವಾಗಿ ಬಾಗಿಸುತ್ತಾನೆ ಹಾಗೂ ಅದೇ ಸಮಯದಲ್ಲಿ ದೇಹವನ್ನು ಸ್ವಲ್ಪ ಮಟ್ಟಿಗೆ ಬಲಕ್ಕೆ ಅಥವಾ ಎಡಕ್ಕೆ ತಿರುಗಿಸುತ್ತಾನೆ. ಒಮ್ಮೆ ಹೊಡೆತದಿಂದ ತಪ್ಪಿಸಿಕೊಂಡ ನಂತರ ಬಾಕ್ಸರ್ ವಿರೋಧಿಯ ಚಾಚಿಕೊಂಡಿರುವ ಕೈಯ ಒಳಗೆ ಅಥವಾ ಹೊರಗಿರುವ ಹಿಂದಿನ ಸ್ಥಾನಕ್ಕೆ "ಹಿಂದಿರುಗುತ್ತಾನೆ". ವಿರೋಧಿಯ ಚಾಚಿಕೊಂಡಿರುವ ಕೈಯಿಂದ ಹೊರಗೆ ಚಲಿಸುವುದನ್ನು "ಹೊರಕ್ಕೆ ಎಗರುವುದು" ಎನ್ನುತ್ತಾರೆ. ವಿರೋಧಿಯ ಚಾಚಿಕೊಂಡಿರುವ ಕೈಯ ಒಳಗೆ ಸರಿಯುವುದನ್ನು "ಒಳಕ್ಕೆ ಎಗರುವುದು" ಎಂದು ಕರೆಯುತ್ತಾರೆ. ಜಾಯ್ ಫ್ರೇಜರ್, ಜ್ಯಾಕ್ ಡೆಂಪ್ಸೆ, ಮೈಕ್ ಟೈಸನ್ ಮತ್ತು ರಾಕಿ ಮಾರ್ಸಿಯಾನೊ ಮೊದಲಾದವರು 'ಎಗರುವುದು ಮತ್ತು ಹಿಂದಿರುಗುವುದರಲ್ಲಿ' ನಿಪುಣರಾಗಿದ್ದರು.
- ತಪ್ಪಿಸಿಕೊಳ್ಳುವುದು/ತಡೆಯುವುದು – ತಪ್ಪಿಸಿಕೊಳ್ಳುವುದು ಅಥವಾ ತಡೆಯುವುದು ಬಾಕ್ಸರ್ನ ಭುಜ, ಕೈಗಳು ಅಥವಾ ಬಾಹುಗಳನ್ನು ಬೀಳುವ-ಹೊಡೆತಗಳ ವಿರುದ್ಧ ರಕ್ಷಣೆ ಪಡೆಯುವ ರಕ್ಷಣಾತ್ಮಕ-ಸಾಧನಗಳಾಗಿ ಬಳಸಿಕೊಳ್ಳುತ್ತದೆ. ತಡೆಯುವುದು ಸಾಮಾನ್ಯವಾಗಿ ಹೊಡೆತವನ್ನು ಪಡೆಯುತ್ತದೆ, ತಪ್ಪಿಸಿಕೊಳ್ಳುವುದು ಅದನ್ನು ಪಕ್ಕಕ್ಕೆ ಬಾಗಿಸುವಂತೆ ಮಾಡುತ್ತದೆ. "ಅಂಗೈ" ಅಥವಾ "ಮುಂಗೈಪಟ್ಟಿ"ಯು ತಡೆಯಾಗಿರುತ್ತವೆ, ಅವು ಆ ಭಾಗದ ರಕ್ಷಕ-ಹೊದಿಕೆಗಳಿಂದ ಬೀಳುವ-ಹೊಡೆತವನ್ನು ಉದ್ದೇಶಪೂರ್ವಕವಾಗಿ ಪಡೆಯುತ್ತವೆ.
- ಮರೆಸುವುದು – ಮರೆಸುವುದು ರಕ್ಷಣೆಯಿಲ್ಲದ ಮುಖ ಅಥವಾ ದೇಹಕ್ಕೆ ಬೀಳುವ ಹೊಡೆತವನ್ನು ತಪ್ಪಿಸಲು ಇರುವ ಕೊನೆಯ ಅವಕಾಶವಾಗಿದೆ (ಹೊಡೆತದೊಂದಿಗೆ ಉರುಳುವುದನ್ನು ಹೊರತುಪಡಿಸಿ) . ಸಾಮಾನ್ಯವಾಗಿ ಕೈಗಳನ್ನು ತಲೆ ಮತ್ತು ಗದ್ದವನ್ನು ರಕ್ಷಿಸಲು ಮೇಲಕ್ಕೆತ್ತಿ ಹಿಡಿಯಲಾಗುತ್ತದೆ ಹಾಗೂ ಮುಂದೋಳುಗಳನ್ನು ದೇಹಕ್ಕೆ ಬೀಳುವ ಹೊಡೆತಗಳನ್ನು ನಿರೋಧಿಸಲು ಮುಂಡಭಾಗದ ಮುಂದೆ ಮಡಿಚಿಕೊಳ್ಳಲಾಗುತ್ತದೆ. ದೇಹವನ್ನು ರಕ್ಷಿಸುವಾಗ ಬಾಕ್ಸರ್ ನಡುವನ್ನು ತಿರುಗಿಸಿ, ಬೀಳುವ-ಹೊಡೆತಗಳನ್ನು ರಕ್ಷಣೆಯಿಂದ ಹೊರಕ್ಕೆ ಬೀಳುವಂತೆ ಮಾಡುತ್ತಾನೆ. ತಲೆಗೆ ರಕ್ಷಣೆಯನ್ನು ನೀಡುವಾಗ, ಬಾಕ್ಸರ್ ಎರಡೂ ಮುಷ್ಟಿಗಳನ್ನು ಮುಖದ ಮುಂಭಾಗದಲ್ಲಿ ಹಿಡಿಯುತ್ತಾನೆ ಹಾಗೂ ಮುಂದೋಳುಗಳನ್ನು ಸಮಾಂತರವಾಗಿ ಹೊರಕ್ಕೆ ಚಾಚಿರುವಂತೆ ಹಿಡಿದುಕೊಳ್ಳುತ್ತಾನೆ. ಈ ರೀತಿಯ ರಕ್ಷಣೆಯು ಕೆಳಗಿನಿಂದ ನೀಡುವ ದಾಳಿಗಳ ವಿರುದ್ಧ ದುರ್ಬಲವಾಗಿರುತ್ತದೆ.
- ಕ್ಲಿಂಚ್(ಎದುರಾಳಿ ಕೈಚಾಚಿ ಗುದ್ದಲಾಗದಷ್ಟು ಹತ್ತಿರ ಬರುವುದು) – ಕ್ಲಿಂಚಿಂಗ್ ಬಿಗಿಯಾಗಿ ಹಿಡಿದುಕೊಳ್ಳುವುದರ ಒಂದು ಉಗ್ರ ರೂಪವಾಗಿದೆ. ಇದು ಇಬ್ಬರು ಕಾದಾಳಿಗಳ ನಡುವಿನ ಅಂತರವು ಕಡಿಮೆಯಾದಾಗ ಮತ್ತು ನೇರವಾದ ಹೊಡೆತಗಳನ್ನು ನೀಡಲು ಸಾಧ್ಯವಾದಾಗ ಕಂಡುಬರುತ್ತದೆ. ಈ ಸ್ಥಿತಿಯಲ್ಲಿ, ಬಾಕ್ಸರ್ ವಿರೋಧಿಯ ಕೈಯನ್ನು ಹಿಡಿಯಲು ಅಥವಾ "ನಿರ್ಬಂಧಿಸಲು" ಪ್ರಯತ್ನಿಸುತ್ತಾನೆ. ಆದ್ದರಿಂದ ಅವನಿಗೆ ಕೊಕ್ಕೆ ಹೊಡೆತ ಅಥವಾ ಮೇಲಿನ-ಅಡ್ಡಪೆಟ್ಟನ್ನು ನೀಡಲು ಸಾಧ್ಯವಾಗುವುದಿಲ್ಲ. ಕ್ಲಿಂಚ್ಅನ್ನು ನಿರ್ವಹಿಸಲು, ಬಾಕ್ಸರ್ ಎರಡೂ ಕೈಗಳನ್ನು ವಿರೋಧಿಯ ಭುಜಗಳ ಹೊರಗೆ ಕುಣಿಕೆಯಂತೆ ಬಿಗಿದು, ವಿರೋಧಿಯ ಕೈಗಳನ್ನು ಅವನ ದೇಹಕ್ಕೆ ಬಿಗಿಯಾಗಿ ಹಿಡಿಯುವುದಕ್ಕಾಗಿ ಮುಂದೋಳುಗಳಡಿಯಲ್ಲಿ ಬಾಚಿಕೊಳ್ಳುತ್ತಾನೆ. ಈ ಸ್ಥಿತಿಯಲ್ಲಿ, ವಿರೋಧಿಯ ಕೈಗಳು ಬಿಗಿಯಾಗಿ ಹಿಡಿಯಲ್ಪಟ್ಟಿರುತ್ತವೆ, ಆದ್ದರಿಂದ ಅವನಿಗೆ ದಾಳಿ ನಡೆಸಲು ಬಳಸಲಾಗುವುದಿಲ್ಲ. ಕ್ಲಿಂಚಿಂಗ್ ಒಂದು ತಾತ್ಕಾಲಿಕ ಪಂದ್ಯ ಸ್ಥಿತಿಯಾಗಿದೆ ಹಾಗೂ ಇದು ರೆಫರಿಯಿಂದ ಅತಿ ಶೀಘ್ರದಲ್ಲಿ ಹಾಳುಮಾಡಲ್ಪಡುತ್ತದೆ. ಕ್ಲಿಂಚಿಂಗ್ ತಾಂತ್ರಿಕವಾಗಿ ನಿಯಮಗಳಿಗೆ ವಿರುದ್ಧವಾಗಿರುತ್ತದೆ ಮತ್ತು ಹವ್ಯಾಸಿ ಕಾದಾಟಗಳಲ್ಲಿ ಇದಕ್ಕಾಗಿ ಅಂಕಗಳನ್ನು ಕಡಿತಗೊಳಿಸಲಾಗುತ್ತದೆ. ಇದಕ್ಕೆ ವಿರುದ್ಧವಾಗಿ, ವೃತ್ತಿಪರ ಬಾಕ್ಸಿಂಗ್ನಲ್ಲಿ ಕ್ಲಿಂಚ್ಗಾಗಿ ಅಂಕವನ್ನು ಕಡಿತಗೊಳಿಸುವುದು ಅತಿ ವಿರಳವಾಗಿರುತ್ತದೆ.
ರಕ್ಷಣೆಗಳು
[ಬದಲಾಯಿಸಿ]ಬಾಕ್ಸಿಂಗ್ನಲ್ಲಿ ಅನೇಕ ರಕ್ಷಣಾತ್ಮಕ ಸ್ಥಿತಿಗಳನ್ನು (ರಕ್ಷಣೆಗಳು ಅಥವಾ ಶೈಲಿಗಳು) ಬಳಸಲಾಗುತ್ತದೆ. ಪ್ರತಿಯೊಂದು ಶೈಲಿಯಲ್ಲಿ, ಕಾದಾಳಿಗಳಲ್ಲಿ ಗಮನಾರ್ಹ ಭಿನ್ನತೆಗಳಿರುತ್ತವೆ. ಕೆಲವು ಕಾದಾಳಿಗಳು ಹೆಚ್ಚು ತಲೆಯನ್ನು ರಕ್ಷಿಸುವುದಕ್ಕಾಗಿ ಅವರ ರಕ್ಷಣೆಯನ್ನು ಹೊಂದಿರುತ್ತಾರೆ. ಇತರ ಕಾದಾಳಿಗಳು ದೇಹಕ್ಕೆ ಬೀಳುವ ಹೊಡೆತಗಳನ್ನು ತಪ್ಪಿಸುವುದಕ್ಕಾಗಿ ತಲೆಯಿಂದ ಕೆಳಗೆ ರಕ್ಷಣೆಯನ್ನು ಹೊಂದಿರುತ್ತಾರೆ. ಹೆಚ್ಚಿನ ಕಾದಾಳಿಗಳು ಆ ಕ್ಷಣದ ಸ್ಥಿತಿಗೆ ತಮ್ಮನ್ನು ರಕ್ಷಿಸಿಕೊಳ್ಳಲು ಸೂಕ್ತವಾಗುವ ಸ್ಥಿತಿಯನ್ನು ಆರಿಸುವ ಮೂಲಕ ಹೊಂದಿಕೊಳ್ಳುವುದಕ್ಕಾಗಿ ಸ್ಪರ್ಧೆಯಾದ್ಯಂತ ವಿವಿಧ ರಕ್ಷಣಾತ್ಮಕ ಶೈಲಿಯನ್ನು ಹೊಂದಿರುತ್ತಾರೆ.
ಬಾಕ್ಸರ್ಗಳು ಗದ್ದವನ್ನು ರಕ್ಷಿಸಲು ಹಿಂದಿನ ಕೈಯೊಂದಿಗೆ ಕಡಿಮೆ ಅಥವಾ ಮಿಶ್ರ ರಕ್ಷಣಾ ಶೈಲಿಗಳಲ್ಲಿ ಮೇಲಿನ ಹೊಡೆತದ ಭಂಗಿಯನ್ನು ಬಳಸುವುದನ್ನು ಈ ಕೆಳಗೆ ನಿರೂಪಿಸಲಾಗಿದೆ. ಬಗ್ಗಿಸುವ ಕಾದಾಳಿಗಳು "ಪೀಕ್-ಎ-ಬೂ" ಶೈಲಿಯನ್ನು ಬಳಸುವುದನ್ನು ಕೆಳಗೆ ಚರ್ಚಿಸಲಾಗಿದೆ.
-
ಕೆಳಗಿನ ರಕ್ಷಣೆ
-
ಮಿಶ್ರ ರಕ್ಷಣೆ
-
ಪೀಕ್-ಅ-ಬೂ
- ಪೀಕ್-ಎ-ಬೂ(ಇಣಿಕಾಟವಾಡುವುದು) – ಇದನ್ನು ಕೆಲವೊಮ್ಮೆ "ಇಯರ್ಮಫ್ಸ್" ಎಂದು ಕರೆಯಲಾಗುತ್ತದೆ. ಕೈಗಳನ್ನು ಮುಖದ ಮುಂದೆ ಪಕ್ಕಪಕ್ಕದಲ್ಲಿ ಇಡಲಾಗುತ್ತದೆ (ಈ ಸ್ಥಾನವು ಕಾದಾಳಿಗಳಲ್ಲಿ ಭಿನ್ನವಾಗಿರುತ್ತದೆ) ಹಾಗೂ ಮೊಣಕೈಗಳನ್ನು ದೇಹಕ್ಕೆ ಬಿಗಿಯಾಗಿ ಹಿಡಿದುಕೊಳ್ಳಲಾಗುತ್ತದೆ (ಈ ಸ್ಥಾನವನ್ನು ಹೆಚ್ಚು ಕಷ್ಟಪಡದೆ ಮೊಣಕೈಗಳನ್ನು ಪರಸ್ಪರ ಹತ್ತಿರಕ್ಕೆ ತರುವ ಮೂಲಕ ಸಾಧಿಸಲಾಗುತ್ತದೆ). ಈ ರಕ್ಷಣಾತ್ಮಕ ಶೈಲಿಯನ್ನು ಬಾಕ್ಸರ್ ಬಾಕ್ಸಿಂಗ್ಗೆ ಬರುವ ಆರಂಭದಲ್ಲಿ ಕಲಿಸಿಕೊಡಲಾಗುತ್ತದೆ. ಅನುಭವವನ್ನು ಪಡೆದ ನಂತರ ಆತನು ಈ ರಕ್ಷಣೆಯನ್ನು ಬದಲಾಯಿಸಲು ಅಥವಾ ವ್ಯತ್ಯಾಸಗೊಳಿಸಲು ನಿರ್ಧರಿಸಬಹುದು. ಈ ಶೈಲಿಯು ವಿರುದ್ಧ-ಹೊಡೆತವನ್ನು ನೀಡುವಲ್ಲಿ ಮತ್ತು ಹಾನಿಯನ್ನು ಕಡಿಮೆಗೊಳಿಸುವಲ್ಲಿ ಮಧ್ಯಸ್ಥವಾಗಿದೆ. ಬಾಕ್ಸರ್ ಈ ಹೊಡೆತದ ಭಂಗಿಯಿಂದ ಹೊಡೆತವನ್ನು ಎದುರಿಸಬಹುದು, ಆದರೆ ಇದು ಕಷ್ಟಕರವಾಗಿರುತ್ತದೆ. ಆದರೂ ಇದನ್ನು ಉತ್ತಮವಾಗಿ ನಿರ್ವಹಿಸುವ ಅನೇಕ ಬಾಕ್ಸರ್ಗಳಿದ್ದಾರೆ. ಈ ರಕ್ಷಣಾ ಶೈಲಿಯು ಕಾದಾಳಿಯನ್ನು ಉತ್ತಮ ರೀತಿಯಲ್ಲಿ ರಕ್ಷಿಸುತ್ತದೆ, ಆದರೆ ಅನೇಕ ಇಕ್ಕಟ್ಟಿನ ಸ್ಥಿತಿಗಳಿರುತ್ತವೆ. ಕೊಕ್ಕೆ ಹೊಡೆತವು ಕೈಗಳ ಸುತ್ತಲೂ ಮತ್ತು ಮೊಣಕೈಯ ಹಿಂಬದಿಗೆ ಹೊಡೆಯುವ ಮೂಲಕ ಹಾನಿಯನ್ನುಂಟುಮಾಡುತ್ತದೆ. ವಿಂಕಿ ವ್ರೈಟ್ ಈ ಶೈಲಿಯನ್ನು ಹಾನಿಯನ್ನು ಕಡಿಮೆ ಮಾಡುವ ಸ್ಥಿರ ಸ್ಥಿತಿಯಿಂದ ಉತ್ತಮ ರೀತಿಯಲ್ಲಿ ಬಳಸುತ್ತಾನೆ. ಮತ್ತೊಬ್ಬ ಪ್ರಸಿದ್ಧ ಉದಾಹರಣೆಯೆಂದರೆ ಮೈಕ್ ಟೈಸನ್, ಅವನು ಅವನ ಆರಂಭಿಕ ವೃತ್ತಿಜೀವನದಲ್ಲಿ ಪೀಕ್-ಎ-ಬೂವನ್ನು ಅತ್ಯಂತ ಹೆಚ್ಚಿನ ಯಶಸ್ವಿಯೊಂದಿಗೆ ಬಳಸಿದನು.
- ಕೈಗಳನ್ನು-ಅಡ್ಡವಾಗಿಡುವುದು(ಕ್ರಾಸ್-ಆರ್ಮ್ಡ್) – ಮುಂದೋಳುಗಳನ್ನು ಮುಖದ ಮುಂಭಾಗದಲ್ಲಿ ಸಮಾಂತರವಾಗಿ ಒಂದರ ಮೇಲೊಂದರಂತೆ, ಒಂದು ಕೈಯ ಹೊದಿಕೆಯು ಮತ್ತೊಂದು ಕೈಯ ಮೊಣಕೈಯ ಮೇಲಿರುವಂತೆ ಇಡಲಾಗುತ್ತದೆ. ಹಿಂದಿನ ಕೈಯನ್ನು ಲಂಬವಾಗಿ ಎತ್ತುವಾಗ ಈ ಶೈಲಿಯು ಬದಲಾಗುತ್ತದೆ. ತಲೆಗೆ ಪೆಟ್ಟು ಬೀಳುವುದನ್ನು ಕಡಿಮೆ ಮಾಡಲು ಈ ಶೈಲಿಯು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಕಾದಾಳಿಯು ಸುಲಭವಾಗಿ ಪ್ರಭಾವಕ್ಕೆ ಒಳಗಾಗುವ ಏಕೈಕ ತಲೆಯ ಹೊಡೆತವೆಂದರೆ ತಲೆಯ ಮೇಲೆ ನೀಡುವ ಗುದ್ದು. ದೇಹವು ತೆರೆದುಕೊಂಡಿರುತ್ತದೆ, ಆದರೆ ಈ ಶೈಲಿಯನ್ನು ಬಳಸುವ ಹೆಚ್ಚಿನ ಕಾದಾಳಿಗಳು ದೇಹವನ್ನು ರಕ್ಷಿಸಲು ಬಾಗಿಸುತ್ತಾರೆ ಮತ್ತು ಓರೆಯಾಗಿಸುತ್ತಾರೆ. ನೆಟ್ಟಗಿನ ಮತ್ತು ಓರೆಯಾಗಿಸದ ದೇಹವು ಹೊಡೆತವನ್ನು ಪಡೆಯುತ್ತದೆ. ಈ ಸ್ಥಿತಿಯಿಂದ ವಿರುದ್ಧ-ಹೊಡೆತವನ್ನು ನೀಡಲು ತುಂಬಾ ಕಷ್ಟವಾಗಿರುತ್ತದೆ, ಆದರೆ ವಾಸ್ತವವಾಗಿ ಎಲ್ಲಾ ತಲೆಯ ಹೊಡೆತವನ್ನು ತಪ್ಪಿಸುತ್ತದೆ.
- ಫಿಲ್ಲಿ ಶೆಲ್, ಹಿಟ್ಮ್ಯಾನ್ ಅಥವಾ ಕ್ರ್ಯಾಬ್ – ಮುಂದಿನ ಕೈಯನ್ನು ದೇಹದ ಮುಂಡಭಾಗದಾದ್ಯಂತ ಸಾಮಾನ್ಯವಾಗಿ ಹೊಕ್ಕಳು ಮತ್ತು ಎದೆಯ ಮಧ್ಯದಲ್ಲಿ ಇರಿಸಲಾಗುತ್ತದೆ. ಮುಂದಿನ ಕೈಯು ಕಾದಾಳಿಯ ಮುಂಡಭಾಗದ ವಿರುದ್ಧ ದಿಕ್ಕಿನಲ್ಲಿರುತ್ತದೆ. ಹಿಂದಿನ ಕೈಯನ್ನು ಮುಖದ ಬದಿಯಲ್ಲಿರಿಸಲಾಗುತ್ತದೆ. ಮುಂದಿನ ಭುಜವನ್ನು ಮುಖದ ಬದಿಯಲ್ಲಿ ಬಿಗಿಯಾಗಿ ಹಿಡಿದುಕೊಳ್ಳಲಾಗುತ್ತದೆ. ಈ ಶೈಲಿಯನ್ನು ವಿರುದ್ಧ-ಹೊಡೆತವನ್ನು ನೀಡಲು ಇಷ್ಟಪಡುವ ಕಾದಾಳಿಗಳು ಬಳಸುತ್ತಾರೆ. ಈ ರಕ್ಷಣೆಯನ್ನು ಬಳಸಲು ಕಾದಾಳಿಯು ಹೆಚ್ಚು ಬಲಶಾಲಿಯಾಗಿರಬೇಕು ಮತ್ತು ಅನುಭವಸ್ಥನಾಗಿರಬೇಕು. ಈ ಶೈಲಿಯು ವಿರುದ್ಧ-ಹೊಡೆತವನ್ನು ನೀಡಲು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಏಕೆಂದರೆ ಇದು ಕಾದಾಳಿಗಳಿಗೆ ಅವರ ದೇಹದ ಮೇಲಿನ ಭಾಗವನ್ನು ತಿರುಗಿಸುವ ಮತ್ತು ಬಾಗಿಸುವ ಮೂಲಕ ಹೊಡೆತಗಳಿಂದ ತಪ್ಪಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ ಹಾಗೂ ಹೊಡೆತಗಳು ಕಾದಾಳಿಯಿಂದ ಜಾರಿಹೋಗುವಂತೆ ಮಾಡುತ್ತದೆ. ಹೊಡೆತವು ತಪ್ಪಿಹೋದ ನಂತರ, ಕಾದಾಳಿಯ ಹಿಂದಿನ ಕೈಯು ಸಮತೋಲನ-ಸ್ಥಿತಿಯಲ್ಲಿರದ-ವಿರೋಧಿಗೆ ಹೊಡೆತವನ್ನು ನೀಡಲು ಸೂಕ್ತವಾದ ಸ್ಥಿತಿಯಲ್ಲಿರುತ್ತದೆ. ಈ ಹೊಡೆತದ ಭಂಗಿಯಲ್ಲಿ ಭುಜವನ್ನು ಓರೆಯಾಗಿಸಲಾಗುತ್ತದೆ. ವಿರೋಧಿಯ ಹೊಡೆತವು ಹತ್ತಿರಕ್ಕೆ ಬಂದಾಗ ಭುಜವನ್ನು ಓರೆಯಾಗಿಸಲು ಕಾದಾಳಿಯು ತಿರುಗುತ್ತಾನೆ ಮತ್ತು ತಲೆಯನ್ನು ಸರಕ್ಕನೆ ಬಗ್ಗಿಸುತ್ತಾನೆ. ನಂತರ ವಿರೋಧಿಯು ಅವನ ಕೈಯನ್ನು ಹಿಂದಕ್ಕೆ ತೆಗೆದುಕೊಂಡು ಹೋಗುವಾಗ ಹಿಂದಕ್ಕೆ ವಿರೋಧಿಯ ಕಡೆಗೆ ತಿರುಗುತ್ತಾನೆ. ರಕ್ಷಣೆಯಿಲ್ಲದ ವಿರೋಧಿಯ ಕಡೆಗೆ ತಿರುಗುತ್ತಿರುವಾಗ ಕಾದಾಳಿಯು ತನ್ನ ಹಿಂದಿನ ಕೈಯಿಂದ ಹೊಡೆತವನ್ನು ನೀಡುತ್ತಾನೆ. ಈ ಶೈಲಿಯ ದೋಷವೆಂದರೆ ಕಾದಾಳಿಯು ಸ್ಥಿರವಾಗಿದ್ದಾಗ ಮತ್ತು ತಿರುಗದೆ ಇದ್ದಾಗ, ಹೊಡೆತಕ್ಕೆ ಈಡಾಗುವ ಹೆಚ್ಚಿನ ಸಂಭವವನ್ನು ಹೊಂದಿರುತ್ತಾನೆ. ಆದ್ದರಿಂದ ಈ ಶೈಲಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಕಾದಾಳಿಯು ಬಲಶಾಲಿಯಾಗಿರಬೇಕು ಮತ್ತು ಉತ್ತಮ ಪರಿಣತಿಯನ್ನು ಪಡೆದಿರಬೇಕು. ಈ ಶೈಲಿಯನ್ನು ಮೀರಿಸಲು ಕಾದಾಳಿಗಳು ವಿರೋಧಿಯ ಭುಜಕ್ಕೆ ಗುದ್ದು ನೀಡಿ, ಭುಜ ಮತ್ತು ಕೈಗಳಿಗೆ ನೋವುಂಟುಮಾಡಲು ಮತ್ತು ಆ ಕೈಯನ್ನು ಸಂಪೂರ್ಣವಾಗಿ ನಾಶಮಾಡಲು ಇಷ್ಟಪಡುತ್ತಾರೆ.
ಬಾಕ್ಸರ್ಗಳು ಸಾಮಾನ್ಯವಾಗಿ ಹೆಚ್ಚು ವೇಗದ ಸಂಯೋಗ ಹೊಡೆತಗಳನ್ನು ನೀಡಲು ಹಾಗೂ ನಂತರ ವಿರೋಧಿಯಿಂದ ಬರಬಹುದಾದ ಪ್ರತಿಕ್ರಿಯೆಯನ್ನು ಎದುರಿಸುವುದಕ್ಕಾಗಿ ಅತಿ ಶೀಘ್ರವಾಗಿ ಸ್ಥಾನವನ್ನು ಬದಲಾಯಿಸಲು ಪ್ರಯತ್ನಿಸುತ್ತಾರೆ. ಯುದ್ಧತಂತ್ರದಿಂದ, ಕಾದಾಟದ-ರಂಗದ ಕೇಂದ್ರವು ಸಾಮಾನ್ಯವಾಗಿ ಅಪೇಕ್ಷಿತ ಸ್ಥಾನವಾಗಿರುತ್ತದೆ ಏಕೆಂದರೆ ಬಾಕ್ಸರ್ ವಿರೋಧಿಯನ್ನು ಸುತ್ತಲಿರುವ ವೃತ್ತಕ್ಕೆ ನುಗ್ಗಿಸುವ ಮೂಲಕ ಚಲನೆಯನ್ನು ನಿರ್ವಹಿಸಲು ಸಮರ್ಥನಾಗಿರುತ್ತಾನೆ. ಕೇಂದ್ರದಲ್ಲಿರುವಾಗ ಬಾಕ್ಸರ್ ಕಾದಾಟದ-ರಂಗದ ಸುತ್ತಲಿರುವ ಹಗ್ಗದೆಡೆಗೆ ಹಿಂದಕ್ಕೆ ಬೀಳುವ ಮತ್ತು ಮೂಲೆಗಟ್ಟಲ್ಪಡುವ ಸಂಭವವೂ ಕಡಿಮೆ ಇರುತ್ತದೆ. ಬಾಕ್ಸರ್ಗಳ ಶೈಲಿಯ ಆಧಾರದಲ್ಲಿ, ಕೇಂದ್ರವು ಅಪೇಕ್ಷಿತ ಸ್ಥಾನವಾಗಿರುತ್ತದೆ ಏಕೆಂದರೆ ವಿರೋಧಿಗಳನ್ನು ಮೂಲೆಗೆ ತಳ್ಳುವುದು ಒಂದು ಉತ್ತಮ ತಂತ್ರವಾಗಿದೆ. ಆದರೂ ಹೆಚ್ಚಿನ ಕಾದಾಳಿಗಳು ಕೇಂದ್ರದಲ್ಲಿ ಬಾಕ್ಸರ್ನ ಸುತ್ತ ಚಲಿಸುವುದಿಲ್ಲ ಏಕೆಂದರೆ ಹಾಗೆ ಮಾಡುವುದರಿಂದ ಅವರು ಉತ್ತಮ ಕೋನಗಳಲ್ಲಿ ನೀಡಿದ ಹೊಡೆತಗಳಿಗೆ ಈಡಾಗುವ ಸಂಭವವಿರುತ್ತದೆ. ಕಾದಾಟದ-ರಂಗದಲ್ಲಿ ಚಲನೆಯು ಅತಿ ಮುಖ್ಯ ಸಾಧನವಾಗಿರುತ್ತದೆ ಮತ್ತು ಇದು ಕಾದಾಳಿಗಳಿಗೆ ಮುಂಚಿತವಾಗಿ ಸೂಚನೆಯನ್ನು ನೀಡದ ಹೊಡೆತಗಳನ್ನು ತಪ್ಪಿಸಿಕೊಳ್ಳುವ ಅವಕಾಶವನ್ನು ನೀಡುತ್ತದೆ. ಬಾಕ್ಸರ್ ಸ್ಥಿರವಾಗಿದ್ದರೆ, ವಿರೋಧಿಯು ಅವನಿಗೆ ಹೊಡೆತವನ್ನು ನೀಡುವ ಉತ್ತಮ ಅವಕಾಶವನ್ನು ಹೊಂದಿರುತ್ತಾನೆ. ಸ್ಥಿರವಾಗಿರುವ ಕಾದಾಳಿಯು ನಿರೀಕ್ಷಿತ ಹೊಡೆತವನ್ನು ತಪ್ಪಿಸಿಕೊಳ್ಳುವ ಸಂಭವವು ಚಲನೆಯಲ್ಲಿರುವ ಕಾದಾಳಿಗಿಂತ ಕಡಿಮೆ ಇರುತ್ತದೆ.
ಕಡಿಮೆ ಸಾಮಾನ್ಯವಾಗಿರುವ ತಂತ್ರಗಳು
[ಬದಲಾಯಿಸಿ]- "ರೋಪ್-ಎ-ಡೋಪ್" ತಂತ್ರ : ಮೊಹಮ್ಮದ್ ಅಲಿ 1974ರ "ರಂಬಲ್ ಇನ್ ಜಂಗಲ್" ಕಾದಾಟದಲ್ಲಿ ಜಾರ್ಜ್ ಫೋರ್ಮ್ಯಾನ್ನ ವಿರುದ್ಧ ಬಳಸಿದನು. ಈ ವಿಧಾನದಲ್ಲಿ ಹಗ್ಗಕ್ಕೆ ವಿರುದ್ಧವಾಗಿ ಹಿಂದಕ್ಕೆ ನಿಂತುಕೊಂಡು, ಸಾಧ್ಯವಾದಷ್ಟು ರಕ್ಷಣಾತ್ಮಕವಾಗಿ ಆವರಿಸಿಕೊಂಡು, ವಿರೋಧಿಯು ಅನೇಕ ಹೊಡೆತಗಳ ದಾಳಿಗೆ ಒಳಗಾಗುವಂತೆ ಮಾಡಲಾಗುತ್ತದೆ. ಬಾಕ್ಸರ್ಗೆ ಸಾಮಾನ್ಯವಾಗಿ ಹಿಂದಕ್ಕೆ ಸರಿಯುವ ಚಲನೆಯಷ್ಟು ಅಸಮತೋಲನವನ್ನು ಉಂಟುಮಾಡದ, ಈ ಹಿಂದಕ್ಕೆ-ಬಾಗುವ ಭಂಗಿಯು ವಿರೋಧಿಯಿಂದ ಬಾಕ್ಸರ್ನ ತಲೆಯ ಅಂತರವನ್ನು ಹೆಚ್ಚಿಸುತ್ತದೆ. ಇದು ವಿರೋಧಿಯ ಹೊಡೆತಗಳು ಉದ್ದೇಶಿತ ಗುರಿಯನ್ನು ತಪ್ಪುವ ಸಂಭಾವ್ಯತೆಯನ್ನು ಹೆಚ್ಚಿಸುತ್ತದೆ. ಕಾದಾಳಿಯು ಹೊಡೆತಗಳ ಸುರಿಮಳೆಗೈಯ್ಯುವ ಮೂಲಕ, ವಿರೋಧಿಯು ತನ್ನನ್ನು ತಾನು ರಕ್ಷಿಸಿಕೊಳ್ಳುವುದಕ್ಕಾಗಿ ಹೆಚ್ಚು ಬಲವನ್ನು ಬಳಸಿಕೊಳ್ಳುವಂತೆ ಮಾಡುತ್ತಾನೆ. ಇದರಲ್ಲಿ ಕಾದಾಳಿಯು ಯಶಸ್ವಿಯಾದರೆ ವಿರೋಧಿಯು ಅಂತಿಮವಾಗಿ ಆಯಾಸಗೊಂಡು, ರಕ್ಷಣಾತ್ಮಕ ಹೊಡೆತಗಳನ್ನು ನೀಡುತ್ತಾನೆ. ಇದನ್ನು ಬಾಕ್ಸರ್ ಸ್ವಪ್ರಯೋಜನಕ್ಕಾಗಿ ಬಳಸಿಕೊಳ್ಳುತ್ತಾನೆ. ಆಧುನಿಕ ಬಾಕ್ಸಿಂಗ್ನಲ್ಲಿ ರೋಪ್-ಎ-ಡೋಪ್ಅನ್ನು ಸಾಮಾನ್ಯವಾಗಿ ಅನುಮೋದಿಸುವುದಿಲ್ಲ, ಏಕೆಂದರೆ ಹೆಚ್ಚಿನ ವಿರೋಧಿಗಳು ಇದರಿಂದ ವಂಚನೆಗೊಳಗಾಗುವುದಿಲ್ಲ ಹಾಗೂ ಕೆಲವು ಬಾಕ್ಸರ್ಗಳು ದೀರ್ಘಕಾಲದ, ಹಿಂತಿರುಗಿಸದ ದಾಳಿಯನ್ನು ತಡೆದುಕೊಳ್ಳುವ ದೈಹಿಕ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಆದರೂ ಇತ್ತೀಚೆಗೆ 2009ರ ನವೆಂಬರ್ನಲ್ಲಿ ಏಳು-ವಿಭಾಗದ ಪ್ರಪಂಚ ಚಾಂಪಿಯನ್ ಮ್ಯಾನಿ ಪ್ಯಾಕ್ವಿಯಾವೊ, ವೆಲ್ಟರ್ವೈಟ್ ಮಿಗ್ವೆಲ್ ಕೊಟ್ಟೊನ ಸಾಮರ್ಥ್ಯವನ್ನು ಅಳೆಯಲು ಈ ತಂತ್ರವನ್ನು ಕೌಶಲದಿಂದ ಬಳಸಿದನು. ಪ್ಯಾಕ್ವಿಯಾವೊ ಅಲಕ್ಷ್ಯದ ಹೊಡೆದುರುಳಿಸುವಿಕೆಯೊಂದಿಗೆ ರೋಪ್-ಎ-ಡೋಪ್ ತಂತ್ರವನ್ನು ಅನುಸರಿಸಿದನು.
- ಬೋಲೊ ಮುಷ್ಟಿಯೇಟು : ಸಾಂದರ್ಭಿಕವಾಗಿ ಒಲಿಂಪಿಕ್ ಬಾಕ್ಸಿಂಗ್ನಲ್ಲಿ ಕಂಡುಬರುವ ಬೋಲೊ ಒಂದು ಕೈಯ ಹೊಡೆತವಾಗಿದೆ. ಇದು ದೇಹದ ತೂಕದ ವರ್ಗಾವಣೆಯ ಬದಲಿಗೆ ಸುತ್ತುವ ಕಮಾನನ್ನು ಕಡಿಮೆಗೊಳಿಸುವಂತೆ ಮಾಡುತ್ತದೆ; ಇದು ಹೊಡೆತದಲ್ಲಿ ನಿಜವಾದ ಸಾಮರ್ಥ್ಯದ ಬದಲಿಗೆ ವಿಲಕ್ಷಣ ಕೋನವನ್ನು ಹೊಂದಿರುವುದರಿದಾಗಿ ಹೆಚ್ಚಿನ ಪ್ರಭಾವವನ್ನು ಒಳಗೊಂಡಿರುವ ಸಂಭವವಿರುತ್ತದೆ. ಇದು ತಾಂತ್ರಿಕ ಕುಶಲ ಚಲನೆಗಿಂತ ಹೆಚ್ಚಿನ ಚಾತುರ್ಯದಿಂದ ಕೂಡಿದೆ; ಈ ಹೊಡೆತವನ್ನು ಕಲಿಸಲಾಗಿಲ್ಲ, ಇದು ಅಲಿ ತಂತ್ರವಿರುವಂತಹ ಬಾಕ್ಸಿಂಗ್ನ ತಾಂತ್ರಿಕತೆಯ ಅದೇ ಸಮತಲದಲ್ಲಿದೆ. ಕೆಲವು ವೃತ್ತಿಪರ ಬಾಕ್ಸರ್ಗಳು ಬೋಲೊ-ಹೊಡೆತವನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿದ್ದಾರೆ, ಪ್ರಮುಖರೆದರೆ ಮಾಜಿ ವೆಲ್ಟರ್ವೈಟ್ ಚಾಂಪಿಯನ್ಗಳಾದ ಸ್ಯೂಗರ್ ರೇ ಲಿಯೊನಾರ್ಡ್ ಮತ್ತು ಕಿಡ್ ಗೇವಿಲನ್. ಮಿಡ್ಲ್ವೈಟ್ ಚಾಂಪಿಯನ್ ಸೆಫೆರಿನೊ ಗಾರ್ಶಿಯಾನನ್ನು ಬೋಲೊ-ಹೊಡೆತದ ಆವಿಷ್ಕಾರಕನೆಂದು ಪರಿಗಣಿಸಲಾಗುತ್ತದೆ.
-
ಬೋಲೊ ಹೊಡೆತ
-
ಓವರ್ಹ್ಯಾಂಡ್ (ಓವರ್ಕಟ್)
- ಓವರ್ಹ್ಯಾಂಡ್ ರೈಟ್(ಮೇಲ್ಗೈ ಬಲ) : ಇದು ಎಲ್ಲಾ ಬಾಕ್ಸರ್ನ ರಕ್ಷಣಾ ಸಾಧನೋಪಾಯಗಳಲ್ಲಿ ಕಂಡುಬರದ ಒಂದು ಹೊಡೆತವಾಗಿದೆ. ವಿಕ್ಷೇಪ ಪಥದಲ್ಲಿ ನೆಲಕ್ಕೆ ಸಮಾಂತರವಾಗಿರುವ ಬಲ ಅಡ್ಡಪೆಟ್ಟಿಗೆ ಭಿನ್ನವಾಗಿ, ಓವರ್ಹ್ಯಾಂಡ್ ರೈಟ್ ಕುಣಿಕೆಯಂತೆ ಸೇರಿಸುವ ವೃತ್ತಾಕಾರದ ಕಮಾನನ್ನು ಹೊಂದಿರುತ್ತದೆ. ಇದನ್ನು ಬಾಕ್ಸರ್ನಿಂದ ವಿರುದ್ಧ ದಿಕ್ಕಿಗೆ ಮುಖಮಾಡಿದ ಹಸ್ತದಿಂದ ಭುಜದ ಮೇಲೆ ನೀಡಲಾಗುತ್ತದೆ. ಇದು ವಿಶೇಷವಾಗಿ ಎತ್ತರದ ವಿರೋಧಿಯೊಂದಿಗೆ ಕಾದಾಡುವ ಗಿಡ್ಡ ಬಾಕ್ಸರ್ಗಳಲ್ಲಿ ಹೆಚ್ಚು ಪ್ರಸಿದ್ಧವಾಗಿರುತ್ತದೆ. ಈ ಹೊಡೆತವನ್ನು ಸುಸಂಗತವಾಗಿ ಮತ್ತು ಪರಿಣಾಮಕಾರಿಯಾಗಿ ಬಳಸಿದ ಬಾಕ್ಸರ್ಗಳೆದಂರೆ ಹಿಂದಿನ ಭಾರಿ-ಭಾರದ ಚಾಂಪಿಯನ್ಗಳಾದ ರಾಕಿ ಮಾರ್ಸಿಯಾನೊ ಮತ್ತು ಟಿಮ್ ವಿದರ್ಸ್ಪೂನ್. ಓವರ್ಹ್ಯಾಂಡ್ ರೈಟ್, ಮುಷ್ಟಿಯ ಹೊಡೆತಗಳನ್ನು ಒಳಗೊಂಡ ಇತರ ಪಂದ್ಯಗಳಲ್ಲಿ ಪ್ರಸಿದ್ಧ ಸಾಧನವಾಗಿದೆ.
- ತಡೆಯುವ ಕೊಕ್ಕೆ ಹೊಡೆತ : ತಡೆಯುವ ಕೊಕ್ಕೆ ಹೊಡೆತವನ್ನು ಆಕ್ರಮಣಶೀಲ ಬಾಕ್ಸರ್ಗಳು ಥಟ್ಟನೆ ಮುನ್ನುಗುವುದನ್ನು ತಡೆಯಲು ಬಳಸಲಾಗುತ್ತದೆ. ತಡೆಯುವ ಕೊಕ್ಕೆ ಹೊಡೆತದಲ್ಲಿ ಎರಡು ವಿಭಾಗಗಳಿವೆ. ಮೊದಲ ವಿಭಾಗವು ನಿಯತ ಕೊಕ್ಕೆ ಹೊಡೆತವನ್ನು ಹೊಂದಿರುತ್ತದೆ. ಎರಡನೇ ಚಾತುರ್ಯದ ವಿಭಾಗವು ಕಾಲ್ಚಳಕವನ್ನು ಒಳಗೊಳ್ಳುತ್ತದೆ. ವಿರೋಧಿಯು ಥಟ್ಟನೆ ಮುನ್ನುಗಿದಾಗ, ಬಾಕ್ಸರ್ ಕೊಕ್ಕೆ ಹೊಡೆತವನ್ನು ನೀಡಬೇಕು ಹಾಗೂ ಅವನ ಎಡ ಪಾದವನ್ನು ತಿರುಗಿಸಬೇಕು ಮತ್ತು ಬಲ ಪಾದವನ್ನು 180 ಡಿಗ್ರಿಯಲ್ಲಿ ಸುತ್ತ ಸುತ್ತಿಸಬೇಕು. ಸರಿಯಾಗಿ ನಿರ್ವಹಿಸಿದಾಗ ಆಕ್ರಮಣಶೀಲ ಬಾಕ್ಸರ್ ಥಟ್ಟನೆ ಮುನ್ನುಗ್ಗುತ್ತಾನೆ ಹಾಗೂ ಯಾವುದೇ ಹಾನಿಗೊಳಗಾಗುವುದಿಲ್ಲ, ಇದರಿಂದ ವಿರೋಧಿಯು ಮಲ್ಲನನ್ನು ಕಳೆದುಕೊಂಡ ಗೂಳಿಯಂತೆ ಚಡಪಡಿಸುವಂತೆ ಆಗುತ್ತದೆ. ಇದನ್ನು ನಿರ್ವಹಿಸಲು ಕೌಶಲ ಮಟ್ಟದಲ್ಲಿ ಅತಿ ಹೆಚ್ಚಿನ ವಿಭಿನ್ನತೆ ಇರಬೇಕಾದುದರಿಂದ, ಇದು ವೃತ್ತಿಪರ ಬಾಕ್ಸಿಂಗ್ನಲ್ಲಿ ಅತಿ ವಿರಳವಾಗಿ ಕಂಡುಬರುತ್ತದೆ. ತಾಂತ್ರಿಕವಾಗಿ ಹೇಳುವುದಾದರೆ, ತಡೆಯುವ ಕೊಕ್ಕೆ ಹೊಡೆತದಂತಹುದು ಯಾವುದೇ ಇಲ್ಲ, ಅದು ಕೇವಲ ಥಟ್ಟನೆ ಮುನ್ನುಗ್ಗಿ ಬರುವ ವಿರೋಧಿಯ ವಿರುದ್ಧ ನಿರ್ವಹಿಸಲಾಗುವ ಕೊಕ್ಕೆ ಹೊಡೆತವಾಗಿದೆ ಮತ್ತು ಕೊಕ್ಕೆ ಹೊಡೆತವನ್ನು ನೀಡುವ ವಿರೋಧಿಯನ್ನು ತಡೆಯುವ ಒಂದು ವಿಧಾನವಾಗಿದೆ. ತಡೆಯುವ ಕೊಕ್ಕೆ ಹೊಡೆತವು ಇದೆ, ಆದರೆ ಅದು ಕ್ರೀಡೆಯಲ್ಲಿ ನಿಯಮಸಮ್ಮತವಾಗಿರದ ತಿರುಗಿಸುವ ಹೊಡೆತವಾಗಿರುವುದರಿಂದ ಕಾನೂನು ವಿರುದ್ಧವಾದ ಹೊಡೆತವಾಗಿದೆ ಎಂದು ಕೆಲವರು ವಾದಿಸುತ್ತಾರೆ.
ಫ್ಲಾಯ್ಡ್ ಮೇವೆದರ್ ಜೂನಿಯರ್ ತಡೆಯುವ ಕೊಕ್ಕೆ ಹೊಡೆತವನ್ನು ರಿಕಿ ಹ್ಯಾಟನ್ನ ವಿರುದ್ಧ ಬಳಸಿದನು. ಅದು ಹ್ಯಾಟನ್ಗೆ ತಲೆ ಸುತ್ತಿಕೊಂಡು ಮೂಲೆಗೆ ಹೋಗಿ, ಬೀಳುವಂತೆ ಮಾಡಿತು. ಹ್ಯಾಟನ್ ಉರುಳಿ ಕೆಳಗೆ ಬಿದ್ದ ನಂತರ ಕಷ್ಟ ಪಟ್ಟು ಎದ್ದೇಳಲು ಪ್ರಯತ್ನಿಸಿದನು, ಮಂಕುಗವಿದಂತೆ ಆದರೂ ಎದ್ದು ನಿಂತುಕೊಂಡನು. ನಂತರದ ಮೇವೆದರ್ನ ಹೊಡೆತಗಳ ರಭಸವು ಹ್ಯಾಟನ್ಅನ್ನು ಸಂಪೂರ್ಣವಾಗಿ ದುರ್ಬಲಗೊಳಿಸಿತು. ಇದು ಮೇವೆದರ್ಗೆ 10ನೇ ಸುತ್ತಿನಲ್ಲಿ TKO ಗೆಲುವನ್ನು ತಂದುಕೊಟ್ಟಿತು ಹಾಗೂ ಅದು ಹ್ಯಾಟನ್ನ ಮೊದಲ ಸೋಲಾಗಿತ್ತು.
ವಿಶ್ರಾಂತಿ ಮೂಲೆ
[ಬದಲಾಯಿಸಿ]ಬಾಕ್ಸಿಂಗ್ನಲ್ಲಿ ಪ್ರತಿಯೊಬ್ಬ ಕಾದಾಳಿಗೂ ಕಾದಾಟದ-ರಂಗದಲ್ಲಿ ಒಂದು ವಿಶ್ರಾಂತಿ-ಮೂಲೆಯನ್ನು ನೀಡಲಾಗುತ್ತದೆ. ಅಲ್ಲಿ ಅವನು ಸುತ್ತುಗಳ ಮಧ್ಯದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಾನೆ ಮತ್ತು ಅವನ ತರಬೇತಿದಾರರು ಇರುತ್ತಾರೆ. ವೈಶಿಷ್ಟ್ಯವಾಗಿ, ವಿಶ್ರಾಂತಿ-ಮೂಲೆಯಲ್ಲಿ ಬಾಕ್ಸರ್ನನ್ನು ಹೊರತುಪಡಿಸಿ ಮೂವರಿರುತ್ತಾರೆ; ಅವರೆಂದರೆ ತರಬೇತುದಾರ, ಸಹಾಯಕ ತರಬೇತುದಾರ ಮತ್ತು ಕಟ್ಮ್ಯಾನ್. ತರಬೇತುದಾರ ಮತ್ತು ಸಹಾಯಕ ತರಬೇತುದಾರರು ವೈಶಿಷ್ಟ್ಯವಾಗಿ ಬಾಕ್ಸರ್ಗೆ ಅವನು ಮಾಡುತ್ತಿರುವ ತಪ್ಪುಗಳ ಬಗ್ಗೆ ಸಲಹೆ-ಸೂಚನೆಗಳನ್ನು ನೀಡುತ್ತಾರೆ ಮತ್ತು ಅವನು ಅಂಕಗಳನ್ನು ಕಳೆದುಕೊಂಡರೆ ಎದೆಗುಂದದಂತೆ ಉತ್ತೇಜನ ನೀಡುತ್ತಾರೆ. ಕಟ್ಮ್ಯಾನ್ ಅಂದರೆ ಚರ್ಮದ ವೈದ್ಯ, ಅವನು ಬಾಕ್ಸರ್ನ ಮುಖ ಮತ್ತು ಕಣ್ಣುಗಳು ಗಾಯ ಮತ್ತು ರಕ್ತದಿಂದ ಮುಕ್ತವಾಗಿರುವಂತೆ ನೋಡಿಕೊಳ್ಳುತ್ತಾನೆ. ಇದು ಅತಿ ಮುಖ್ಯವಾಗಿರುತ್ತದೆ ಏಕೆಂದರೆ ಹೆಚ್ಚಿನ ಕಾದಾಟಗಳು ಬಾಕ್ಸರ್ನ ಕಣ್ಣುಗಳಿಗೆ ಅಪಾಯವನ್ನುಂಟುಮಾಡುವ ಗಾಯಗಳಿಂದಾಗಿ ನಿಂತುಹೋಗುತ್ತವೆ.
ಇದಕ್ಕೆ ಹೆಚ್ಚುವರಿಯಾಗಿ, ಕಾದಾಟವು ಶಾಶ್ವತ ಘಾಸಿಯನ್ನುಂಟುಮಾಡಬಹುದೆಂಬ ಭಾರಿ ಅಪಾಯದಲ್ಲಿದೆಯೆಂದು ಭಾವಿಸಿದಾಗ ಕಾದಾಟವನ್ನು ನಿಲ್ಲಿಸಲೂ ಈ ವಿಶ್ರಾಂತಿ-ಮೂಲೆಯು ಜವಾಬ್ದಾರವಾಗಿರುತ್ತದೆ. ವಿಶ್ರಾಂತಿ-ಮೂಲೆಯಲ್ಲಿ ಕೆಲವೊಮ್ಮೆ ಬಾಕ್ಸರ್ನ ಸೋಲನ್ನು ಸೂಚಿಸಲು ಬಿಳಿ ವಸ್ತ್ರವನ್ನು ತೋರಿಲಾಗುತ್ತದೆ (ನುಡಿಗಟ್ಟು "ಟು ಥ್ರೊ ಇನ್ ದಿ ಟವೆಲ್", ಅಂದರೆ ಬಿಟ್ಟುಬಿಡುವುದು, ಈ ಅಭ್ಯಾಸದಿಂದ ಪಡೆಯಲಾಗಿದೆ).[೩೩] ಇದನ್ನು ಡಿಯಾಗೊ ಕೊರಾಲ್ಸ್ ಮತ್ತು ಫ್ಲಾಯ್ಡ್ ಮೇವೆದರ್ ನಡುವಿನ ಕಾದಾಟದಲ್ಲಿ ಕಾಣಬಹುದಾಗಿದೆ. ಆ ಕಾದಾಟದಲ್ಲಿ ಕಾರಾಲ್ಸ್ನ ಸ್ಥಿರ ನಿರಾಕರಣೆಯ ಹೊರತಾಗಿಯೂ ಕೊರಾಲ್ಸ್ನ ವಿಶ್ರಾಂತಿ-ಮೂಲೆಯು ಸೋಲನ್ನು ಘೋಷಿಸಿತು.
ವೈದ್ಯಕೀಯ ಹಿತಾಸಕ್ತಿಗಳು
[ಬದಲಾಯಿಸಿ]ಕಾದಾಳಿಗೆ ಮುಷ್ಟಿಯೇಟು ನೀಡುವುದು ಅವನನ್ನು ಪ್ರಜ್ಞಾಹೀನನನ್ನಾಗಿ ಮಾಡಬಹುದು ಅಥವಾ ಜೋರಾದ ಪೆಟ್ಟು ಶಾಶ್ವತ ಮಿದುಳಿನ ಹಾನಿಯನ್ನು ಉಂಟುಮಾಡಬಹುದು.[೩೪] ಕಾದಾಳಿಯನ್ನು ಹೊಡೆದುರುಳಿಸಲು ಬೇಕಾಗುವ ಬಲ ಮತ್ತು ಆತನ ಸಾವಿಗೆ ಕಾರಣವಾಗಬಹುದಾದ ಬಲದ ನಡುವೆ ಯಾವುದೇ ವ್ಯತ್ಯಾಸವಿಲ್ಲ. 1980ರಿಂದ, 200ಕ್ಕಿಂತಲೂ ಹೆಚ್ಚು ಹವ್ಯಾಸಿ ಮತ್ತು ವೃತ್ತಿಪರ ಬಾಕ್ಸರ್ಗಳು ಹಾಗೂ ಟಫ್ಮ್ಯಾನ್ ಕಾದಾಳಿಗಳು ಕಾದಾಟದ-ರಂಗದಲ್ಲಿ ಅಥವಾ ತರಬೇತಿಯ ಸಂದರ್ಭದಲ್ಲಿ ಉಂಟಾದ ಘಾಸಿಗಳಿಂದಾಗಿ ಸಾವನ್ನಪ್ಪಿದ್ದಾರೆ.[೩೫] ಆದ್ದರಿಂದ 1983ರಲ್ಲಿ ಜರ್ನಲ್ ಆಫ್ ದಿ ಅಮೆರಿಕನ್ ಮೆಡಿಕಲ್ ಅಸೋಸಿಯೇಶನ್ ಬಾಕ್ಸಿಂಗ್ಅನ್ನು ನಿಷೇಧಿಸಬೇಕೆಂದು ಸಾರಿತು. ಸಂಪಾದಕ ಡಾ. ಜಾರ್ಜ್ ಲಂಡ್ಬರ್ಗ್, ಬಾಕ್ಸಿಂಗ್ "ಅಶ್ಲೀವಾದುದದು" ಹಾಗೂ ಅದನ್ನು "ಸುಸಂಸ್ಕೃತ ಸಮಾಜವು ಒಪ್ಪಬಾರದು" ಎಂದು ಹೇಳಿದನು.[೩೬] ಅಂದಿನಿಂದ ಬ್ರಿಟಿಷ್,[೩೭] ಕೆನಡಿಯನ್[೩೮] ಮತ್ತು ಆಸ್ಟ್ರೇಲಿಯನ್[೩೯] ಮೆಡಿಕಲ್ ಅಸೋಸಿಯೇಶನ್ಸ್ ಸಹ ಬಾಕ್ಸಿಂಗ್ನ ನಿಷೇಧವನ್ನು ಘೋಷಿಸಿದವು.
ಬಾಕ್ಸಿಂಗ್ ಮತ್ತೊಬ್ಬ ಕ್ರೀಡಾಳುವಿಗೆ ನೋವುಂಟುಮಾಡುವುದನ್ನು ಗುರಿಯಾಗಿರಿಸಿಕೊಳ್ಳುವ ಏಕೈಕ ಕ್ರೀಡೆಯಾಗಿದೆ ಎಂದು ನಿಷೇಧದ ಬೆಂಬಲಿಗರು ಹೇಳಿದ್ದಾರೆ. ಬ್ರಿಟಿಷ್ ಮೆಡಿಕಲ್ ಅಸೋಸಿಯೇಶನ್ನ ಬಾಕ್ಸಿಂಗ್ ವಕ್ತಾರ ಡಾ. ಬಿಲ್ ಒನೈಲ್ ಬಾಕ್ಸಿಂಗ್ಅನ್ನು ನಿಷೇಧಿಸಿದ BMAಅನ್ನು ಬೆಂಬಲಿಸಿದನು: "ವಿರೋಧಿಗೆ ಗಂಭೀರ ಹಾನಿಯನ್ನು ಉಂಟುಮಾಡುವ ಗುರಿಯನ್ನು ಹೊಂದಿರುವ ಏಕೈಕ ಕ್ರೀಡೆಯಾಗಿದೆ, ಇದನ್ನು ಗಮನಿಸುವಾಗ ಬಾಕ್ಸಿಂಗ್ಅನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಅನಿಸುತ್ತದೆ."[೪೦] 2007ರಲ್ಲಿ ಹವ್ಯಾಸಿ ಬಾಕ್ಸರ್ಗಳ ಅಧ್ಯಯನವೊಂದು ರಕ್ಷಣಾತ್ಮಕ ತಲೆಯ-ರಕ್ಷಾಕವಚವು ಮಿದುಳಿಗೆ ಉಂಟಾಗುವ ಹಾನಿಯನ್ನು ತಡೆಯುವುದಿಲ್ಲ[೪೧] ಎಂದು ತೋರಿಸಿದೆ. ಮತ್ತೊಂದು ಅಧ್ಯಯನವು ಹವ್ಯಾಸಿ ಬಾಕ್ಸರ್ಗಳು ಮಿದುಳಿನ ಘಾಸಿಗೆ ಒಳಗಾಗುವ ಅತಿ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಎಂದು ಹೇಳಿದೆ.[೪೨]
1997ರಲ್ಲಿ ಸಂಶೋಧನೆ ಮತ್ತು ಶಿಕ್ಷಣದ ಮೂಲಕ ಬಾಕ್ಸಿಂಗ್ನಲ್ಲಿ ಉಂಟಾಗುವ ಹಾನಿಗಳನ್ನು ತಡೆಯಲು ವೈದ್ಯಕೀಯ ನಿಯಮಾವಳಿಗಳನ್ನು ರಚಿಸಲು ಅಮೆರಿಕನ್ ಅಸೋಸಿಯೇಶನ್ ಆಫ್ ಪ್ರೊಫೆಶನಲ್ ರಿಂಗ್ಸೈಡ್ ಫಿಶೀಸಿಯನ್ಸ್ ಸ್ಥಾಪನೆಯಾಯಿತು.[೪೩][೪೪]
ವೃತ್ತಿಪರ ಬಾಕ್ಸಿಂಗ್ ನಾರ್ವೆ, ಐಸ್ಲ್ಯಾಂಡ್, ಕ್ಯೂಬಾ, ಇರಾನ್ ಮತ್ತು ಉತ್ತರ ಕೊರಿಯಾದಲ್ಲಿ ನಿಷೇಧಿಸಲ್ಪಟ್ಟಿದೆ. ಇದನ್ನು ಸ್ವೀಡನ್ನಲ್ಲಿ ಇತ್ತೀಚಿನವರೆಗೆ [when?] ನಿಷೇಧಿಸಲಾಗಿತ್ತು. ನಂತರ ನಿಷೇಧವನ್ನು ರದ್ದುಗೊಳಿಸಲಾಯಿತು, ಆದರೆ ಕಾದಾಟಕ್ಕೆ ನಾಲ್ಕು ಮೂರು-ನಿಮಿಷದ ಸುತ್ತುಗಳನ್ನು ಕಡ್ಡಾಯಗೊಳಿಸುವಂತಹ ಕೆಲವು ಕಟ್ಟುನಿಟ್ಟಾದ ನಿರ್ಬಂಧಗಳನ್ನು ವಿಧಿಸಲಾಯಿತು.[ಸಾಕ್ಷ್ಯಾಧಾರ ಬೇಕಾಗಿದೆ]
ಬಾಕ್ಸಿಂಗ್ ಹಾಲ್ ಆಫ್ ಫೇಮ್
[ಬದಲಾಯಿಸಿ]ಬಾಕ್ಸಿಂಗ್ ಕ್ರೀಡೆಯು ಅಂತಾರಾಷ್ಟ್ರೀಯವಾಗಿ ಅಂಗೀಕೃತವಾದ ಪ್ರಸಿದ್ಧ ಎರಡು ಬಾಕ್ಸಿಂಗ್ ಹಾಲ್ಗಳನ್ನು ಹೊಂದಿದೆ; ಇಂಟರ್ನ್ಯಾಷನಲ್ ಬಾಕ್ಸಿಂಗ್ ಹಾಲ್ ಆಫ್ ಫೇಮ್ (IBHOF) ಮತ್ತು ವರ್ಲ್ಡ್ ಬಾಕ್ಸಿಂಗ್ ಹಾಲ್ ಆಫ್ ಫೇಮ್ (WBHF). ಅವುಗಳಲ್ಲಿ IBHOF ಹೆಚ್ಚು ವ್ಯಾಪಕವಾಗಿ ಅಂಗೀಕೃತವಾದ ಪ್ರಸಿದ್ಧ ಬಾಕ್ಸಿಂಗ್ ಹಾಲ್ ಆಗಿದೆ.
WBHF ಅನ್ನು 1980ರಲ್ಲಿ ಎವೆರೆಟ್ L. ಸ್ಯಾಂಡರ್ಸ್ ಸ್ಥಾಪಿಸಿದನು. WBHOF ಪ್ರಾರಂಭವಾದಾಗಿನಿಂದ ಒಂದು ಶಾಶ್ವತ ಸ್ಥಾನ ಅಥವಾ ಮ್ಯೂಸಿಯಂಅನ್ನು ಹೊಂದಿರಲಿಲ್ಲ. ಇದರಿಂದಾಗಿ ಇತ್ತೀಚಿನ IBHOF ಹೆಚ್ಚು ಜನಪ್ರಿಯತೆ ಮತ್ತು ಪ್ರಸಿದ್ಧಿಯನ್ನು ಗಳಿಸಿತು. WBHF ಅಲ್ಲಿನ ಗಮನಾರ್ಹ ವ್ಯಕ್ತಿಗಳೆಂದರೆ - ರಿಕಾರ್ಡೊ "ಫಿನಿಟೊ" ಲೋಪೆಜ್, ಗ್ಯಾಬ್ರಿಯಲ್ "ಫ್ಲ್ಯಾಶ್" ಎಲೋರ್ಡ್, ಮೈಕೆಲ್ ಕಾರ್ಬೇಜಲ್, ಖಾವೊಸೈ ಗ್ಯಾಲಕ್ಸಿ, ಹೆನ್ರಿ ಆರ್ಮ್ಸ್ಟ್ರಾಂಗ್, ಜ್ಯಾಕ್ ಜಾನ್ಸನ್, ರಾಬರ್ಟೊ ಡ್ಯುರಾನ್, ಜಾರ್ಜ್ ಫೋರ್ಮ್ಯಾನ್, ಸೆಫೆರಿನೊ ಗಾರ್ಶಿಯಾ ಮತ್ತು ಸ್ಯಾಲ್ವೇಡರ್ ಸ್ಯಾಂಕೆಜ್. ಅಮೆರಿಕಾದ ನಗರವೊಂದು 1982ರಲ್ಲಿ ಇಬ್ಬರು ಪ್ರಸಿದ್ಧ ಕಾದಾಳಿಗಳಿಗೆ ನೀಡಿದ ಗೌರವ ಕಾಣಿಕೆಯಿಂದ ಬಾಕ್ಸಿಂಗ್ಸ್ ಇಂಟರ್ನ್ಯಾಷನಲ್ ಹಾಲ್ ಆಫ್ ಫೇಮ್ ಪ್ರೋತ್ಸಾಹವನ್ನು ಪಡೆಯಿತು. ನ್ಯೂಯಾರ್ಕ್ನ ಕ್ಯಾನಸ್ಟೋಟ ನಗರವು (ಇದು ನ್ಯೂಯಾರ್ಕ್ ಸ್ಟೇಟ್ ಥ್ರುವೇಯ ಮೂಲಕ ಸೈರಕ್ಯೂಸ್ನ ಸುಮಾರು 15 miles (24 km) ಪೂರ್ವಕ್ಕಿದೆ) ಮಾಜಿ ಪ್ರಪಂಚ-ವೆಲ್ಟರ್ವೈಟ್/ಮಿಡ್ಲ್ವೈಟ್ ಚಾಂಪಿಯನ್ ಕಾರ್ಮೆನ್ ಬ್ಯಾಸಿಲಿಯೊಗೆ ಮತ್ತು ಅವನ ಸೋದರಳಿಯ ಮಾಜಿ ಪ್ರಪಂಚ-ವೆಲ್ಟರ್ವೈಟ್ ಚಾಂಪಿಯನ್ ಬಿಲ್ಲಿ ಬ್ಯಾಕಸ್ಗೆ ಗೌರವ ಕಾಣಿಕೆಯನ್ನು ನೀಡಿತು. ಕ್ಯಾನಸ್ಟೋಟದ ಜನರು ಗೌರವ ಕಾಣಿಕೆಯನ್ನು ನೀಡಲು ಹಣವನ್ನು ಸಂಗ್ರಹಿಸಿದರು. ಇದು ಗಮನಾರ್ಹ ಬಾಕ್ಸರ್ಗಳಿಗಾಗಿ ಅಧಿಕೃತ, ವಾರ್ಷಿಕ ಹಾಲ್ ಆಫ್ ಫೇಮ್ಅನ್ನು ರಚಿಸುವ ಯೋಚನೆಗೆ ಪ್ರೇರಣೆಯನ್ನು ನೀಡಿತು.
ಇಂಟರ್ನ್ಯಾಷನಲ್ ಬಾಕ್ಸಿಂಗ್ ಹಾಲ್ ಆಫ್ ಫೇಮ್ ಕ್ಯಾನಸ್ಟೋಟದಲ್ಲಿ 1989ರಲ್ಲಿ ಸ್ಥಾಪನೆಯಾಯಿತು. 1990ರಲ್ಲಿ ಮೊದಲು ದಾಖಲಾದವರೆಂದರೆ - ಜ್ಯಾಕ್ ಜಾನ್ಸನ್, ಬೆನ್ನಿ ಲಿಯೊನಾರ್ಡ್, ಜ್ಯಾಕ್ ಡೆಂಪ್ಸೆ, ಹೆನ್ರಿ ಆರ್ಮ್ಸ್ಟ್ರಾಂಗ್, ಸ್ಯೂಗರ್ ರೇ ರಾಬಿನ್ಸನ್, ಆರ್ಕೀ ಮೂರ್ ಮತ್ತು ಮೊಹಮ್ಮದ್ ಅಲಿ. ಇತರ ಪ್ರಪಂಚ-ಪ್ರಸಿದ್ಧ ಕಾದಾಳಿಗಳೆಂದರೆ - ರಾಬರ್ಟೊ "ಮ್ಯಾನೋಸ್ ಡಿ ಪಿಯೆಡ್ರಾ" ಡ್ಯೂರನ್, ರಿಕಾರ್ಡೊ ಲಾಪೆಜ್, ಗ್ಯಾಬ್ರಿಯಲ್ "ಫ್ಲ್ಯಾಶ್" ಎಲ್ರೋಡ್, ವಿಸೆಂಟ್ ಸಾಲ್ಡಿವರ್, ಇಸ್ಮಾಯಿಲ್ ಲುಗೂನ, ಯೂಸೆಬಿಯೊ ಪೆಡ್ರೋಜ, ಕಾರ್ಲೋಸ್ ಮಾಂಜೋನ್, ಅಜುಮಾಹ್ ನೆಲ್ಸನ್, ರಾಕಿ ಮಾರ್ಸಿಯೊನೊ, ಪಿಪಿನೊ ಕ್ಯುವಾಸ್ ಮತ್ತು ಕೆನ್ ಬುಚನಾನ್. ಹಾಲ್ ಆಫ್ ಫೇಮ್ನ ನೇಮಕ ಕಾರ್ಯವನ್ನು ಪ್ರತಿ ಜೂನ್ನಲ್ಲಿ ನಾಲ್ಕು-ದಿನದ ಕಾರ್ಯಕ್ರಮವಾಗಿ ನಡೆಸಲಾಗುತ್ತದೆ.
ಕ್ಯಾನಸ್ಟೋಟಕ್ಕೆ ಇಂಡಕ್ಷನ್ ವೀಕೆಂಡ್ಗೆ(ನೇಮಕ ಕಾರ್ಯಕ್ರಮ)ಕ್ಕೆ ಬರುವ ಅಭಿಮಾನಿಗಳಿಗೆ ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ - ಶೆಡ್ಯೂಲ್ ಮಾಡಿದ ಆಟೊಗ್ರಾಫ್ ಸಭೆಗಳು, ಬಾಕ್ಸಿಂಗ್ ಪ್ರದರ್ಶನಗಳು, ಹಿಂದಿನ ಮತ್ತು ಪ್ರಸ್ತತದ ಪ್ರಸಿದ್ಧ ಕಾದಾಳಿಗಳನ್ನೊಳಗೊಂಡ ಆಡಂಬರದ ಪ್ರದರ್ಶನ ಮತ್ತು ನೇಮಕ ಕಾರ್ಯಕ್ರಮ.
ಆಡಳಿತ ಮತ್ತು ನಿರ್ವಹಣಾ ಅಂಗಗಳು
[ಬದಲಾಯಿಸಿ]ಆಡಳಿತ ಅಂಗಗಳು | ವೆಬ್ಸೈಟ್ |
---|---|
ಬ್ರಿಟಿಷ್ ಬಾಕ್ಸಿಂಗ್ ಬೋರ್ಡ್ ಆಫ್ ಕಂಟ್ರೋಲ್ (BBBofC) | http://www.bbbofc.com/ |
ನೇವಡಾ ಸ್ಟೇಟ್ ಅಥ್ಲೆಟಿಕ್ ಕಮೀಶನ್ | http://boxing.nv.gov/ |
ಅಮೆರಿಕನ್ ಅಸೋಸಿಯೇಶನ್ ಆಫ್ ಪ್ರೊಫೆಶನಲ್ ರಿಂಗ್ಸೈಡ್ ಫಿಸೀಶಿಯನ್ಸ್ (AAPRP) | http://www.aaprp.org/ |
ಯುರೋಪಿಯನ್ ಬಾಕ್ಸಿಂಗ್ ಯೂನಿಯನ್ | http://www.boxebu.com/ |
ನಿರ್ವಹಣಾ ಅಂಗಗಳು | ವೆಬ್ಸೈಟ್ |
ವರ್ಲ್ಡ್ ಬಾಕ್ಸಿಂಗ್ ಅಸೋಸಿಯೇಶನ್ (W.B.A.) | http://www.wbaonline.com/ |
ವರ್ಲ್ಡ್ ಬಾಕ್ಸಿಂಗ್ ಕೌನ್ಸಿಲ್ (W.B.C.) | http://www.wbcboxing.com/ |
ಇಂಟರ್ನ್ಯಾಷನಲ್ ಬಾಕ್ಸಿಂಗ್ ಫೆಡರೇಶನ್ (I.B.F.) | http://www.ibf-usba-boxing.com/ |
ವರ್ಲ್ಡ್ ಬಾಕ್ಸಿಂಗ್ ಆರ್ಗನೈಸೇಶನ್ (W.B.O.) | http://www.wbo-int.com/ |
ವರ್ಲ್ಡ್ ಪ್ರೊಫೆಶನಲ್ ಬಾಕ್ಸಿಂಗ್ ಫೆಡರೇಶನ್ (W.P.B.F.) | http://www.wpbf-usbc.org/ Archived 2013-07-27 ವೇಬ್ಯಾಕ್ ಮೆಷಿನ್ ನಲ್ಲಿ. |
ಇವನ್ನೂ ಗಮನಿಸಿ
[ಬದಲಾಯಿಸಿ]- ಆಟೋಮೇಟೆಡ್ ಬಾಕ್ಸಿಂಗ್ ಸ್ಕೋರಿಂಗ್ ಸಿಸ್ಟಮ್
- ಸಮ್ಮರ್ ಒಲಿಂಪಿಕ್ಸ್ನಲ್ಲಿ ಬಾಕ್ಸಿಂಗ್
- ಬಾಕ್ಸಿಂಗ್ ತರಪೇತು
- ಬಾಕ್ಸಿಂಗ್ ತೂಕಗಳು
- ಹೆಲ್ಮೆಟ್ ಬಾಕ್ಸಿಂಗ್
- ಪ್ರಪಂಚದ ಪ್ರಸ್ತುತ ಬಾಕ್ಸಿಂಗ್ ಚಾಂಪಿಯನ್ಗಳ ಪಟ್ಟಿ
- ಮಹಿಳಾ ಬಾಕ್ಸರ್ಗಳ ಪಟ್ಟಿ
- ಬಾಕ್ಸಿಂಗ್ನ ಟ್ರಿಪಲ್ ಚಾಂಪಿಯನ್ಗಳ ಪಟ್ಟಿ
- NCAA ಬಾಕ್ಸಿಂಗ್ ಚಾಂಪಿಯನ್ಪಟ್ಟ
- ಪರ್ಸ್ ಬಿಡ್
- ವೈಟ್ ಕಾಲರ್ ಬಾಕ್ಸಿಂಗ್
- ಮಹಿಳೆಯರ ಬಾಕ್ಸಿಂಗ್
- U.S. ಅಂತರಕಾಲೇಜು ಬಾಕ್ಸಿಂಗ್ ಚಾಂಪಿಯನ್ಗಳು
ಟಿಪ್ಪಣಿಗಳು
[ಬದಲಾಯಿಸಿ]- ↑ ೧.೦ ೧.೧ ೧.೨ ಎನ್ಸೈಕ್ಲೊಪೀಡಿಯ ಬ್ರಿಟಾನಿಕ ಎಂಟ್ರಿ ಫಾರ್ ಬಾಕ್ಸಿಂಗ್
- ↑ ಬಾಕ್ಸಿಂಗ್ ಏನ್ಶಿಯೆಂಟ್ ಹಿಸ್ಟರಿ ಆಂಡ್ ಕಾರ್ಟೂನ್ ಫನ್ ಫ್ರಮ್ ಬ್ರೌವ್ನೀಲಾಕ್ಸ್
- ↑ ಹೋಮರ್, ಇಲಿಯಡ್, 23.655-696
- ↑ ವರ್ಗಿಲ್, ಏನೈಡ್, 5.421
- ↑ BBC. ದಿ ಒರಿಜಿನ್ಸ್ ಆಫ್ ಬಾಕ್ಸಿಂಗ್ , BBC ಹಿಸ್ಟರಿ
- ↑ ಜೇಮ್ಸ್ B. ರಾಬರ್ಟ್ಸ್ ಆಂಡ್ ಅಲೆಕ್ಸಾಂಡರ್ G. ಸ್ಕಟ್ (1999). Archived 2008-12-29 ವೇಬ್ಯಾಕ್ ಮೆಷಿನ್ ನಲ್ಲಿ.ಜೇಮ್ಸ್ ಫಿಗ್ , IBOHF Archived 2008-12-29 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಜಾನ್ ರೆನ್ನೀ (2006) ಈಸ್ಟ್ ಲಂಡನ್ ಪ್ರೈಜ್ ರಿಂಗ್ ರೂಲ್ಸ್ 1743
- ↑ ಅಜ್ಞಾತ ("ಎ ಸೆಲೆಬ್ರೇಟೆಡ್ ಪ್ಯುಗಿಲಿಸ್ಟ್"), ದಿ ಆರ್ಟ್ ಆಂಡ್ ಪ್ರಾಕ್ಟೀಸ್ ಆಫ್ ಬಾಕ್ಸಿಂಗ್, 1825
- ↑ ಡೇನಿಯಲ್ ಮೆಂಡೋಜ, ದಿ ಮಾಡರ್ನ್ ಆರ್ಟ್ ಆಫ್ ಬಾಕ್ಸಿಂಗ್, 1790
- ↑ ಕ್ಲೇ ಮಾಯ್ಲೆ ಆಂಡ್ ಆರ್ಲಿ ಅಲೆನ್ (2006), 1838 ಪ್ರೈಜ್ ರೂಲ್ಸ್
- ↑ ಲಿಯೊನಾರ್ಡ್-ಕಶಿಂಗ್ ಕಾಳಗ ಪಾರ್ಟ್ ಆಫ್ ದಿ ಲೈಬ್ರರಿ ಆಫ್ ಕಾಂಗ್ರೆಸ್ ಇನ್ವೆಂಟಿಂಗ್ ಎಂಟರ್ಟೈನ್ಮೆಂಟ್ ಎಜುಕೇಶನಲ್ ವೆಬ್ಸೈಟ್. ]][[ಚಿತ್ರ:Leonard Cushing Kinetograph 1894.ogv|12/14/06 ರಂದು ಪುನಃಸಂಪಾದಿಸಲಾಗಿದೆ.
- ↑ ಎನ್ಸೈಕ್ಲೊಪೀಡಿಯ ಬ್ರಿಟಾನಿಕ (2006). ಕ್ವೀನ್ಸ್ಬರಿ ರೂಲ್ಸ್ , ಬ್ರಿಟಾನಿಕ
- ↑ ಟ್ರ್ಯಾಸಿ ಕ್ಯಾಲಿಸ್ (2006). ಜೇಮ್ಸ್ ಕಾರ್ಬೆಟ್ , Cyberboxingzone.com
- ↑ ಆಂಡ್ರಿವ್ ಐಸೆಲೆ (2005). Archived 2012-02-06 ವೇಬ್ಯಾಕ್ ಮೆಷಿನ್ ನಲ್ಲಿ.ಒಲಿಂಪಿಕ್ ಬಾಕ್ಸಿಂಗ್ ರೂಲ್ಸ್ , About.com Archived 2012-02-06 ವೇಬ್ಯಾಕ್ ಮೆಷಿನ್ ನಲ್ಲಿ.
- ↑ "ಬಾಕ್ಸ್ರೆಕ್ ಬಾಕ್ಸಿಂಗ್ ರೆಕಾರ್ಡ್ಸ್". Archived from the original on 2013-09-05. Retrieved 2010-08-02.
- ↑ "ಬಾಕ್ಸ್ರೆಕ್ ಬಾಕ್ಸಿಂಗ್ ರೆಕಾರ್ಡ್ಸ್". Archived from the original on 2013-09-05. Retrieved 2010-08-02.
- ↑ ಬರ್ಟ್ ರಾಂಡೋಲ್ಫ್ ಶುಗರ್ (2001). "ಬಾಕ್ಸಿಂಗ್", ವರ್ಲ್ಡ್ ಬುಕ್ ಆನ್ಲೈನ್ ಅಮೆರಿಕಾಸ್ ಎಡಿಶನ್ Owingsmillsboxingclub.com Archived 2006-06-19 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಜೇಮ್ಸ್ ರಾಬರ್ಟ್ಸ್ ಮತ್ತು ಅಲೆಕ್ಸಾಂಡರ್ ಸ್ಕಟ್, ದಿ ಬಾಕ್ಸಿಂಗ್ ರಿಜಿಸ್ಟರ್ , 1999, ಪುಟ 162
- ↑ ಜೇಮ್ಸ್ ರಾಬರ್ಟ್ಸ್ ಮತ್ತು ಅಲೆಕ್ಸಾಂಡರ್ ಸ್ಕಟ್, ದಿ ಬಾಕ್ಸಿಂಗ್ ರಿಜಿಸ್ಟರ್ , 1999, ಪುಟ 54
- ↑ ಜೇಮ್ಸ್ ರಾಬರ್ಟ್ಸ್ ಮತ್ತು ಅಲೆಕ್ಸಾಂಡರ್ ಸ್ಕಟ್, ದಿ ಬಾಕ್ಸಿಂಗ್ ರಿಜಿಸ್ಟರ್ , 1999, ಪುಟ 384
- ↑ ಜೇಮ್ಸ್ ರಾಬರ್ಟ್ಸ್ ಮತ್ತು ಅಲೆಕ್ಸಾಂಡರ್ ಸ್ಕಟ್, ದಿ ಬಾಕ್ಸಿಂಗ್ ರಿಜಿಸ್ಟರ್ , 1999, ಪುಟ 120
- ↑ ಜೇಮ್ಸ್ ರಾಬರ್ಟ್ಸ್ ಮತ್ತು ಅಲೆಕ್ಸಾಂಡರ್ ಸ್ಕಟ್, ದಿ ಬಾಕ್ಸಿಂಗ್ ರಿಜಿಸ್ಟರ್ , 1999, ಪುಟ 204
- ↑ ಜೇಮ್ಸ್ ರಾಬರ್ಟ್ಸ್ ಮತ್ತು ಅಲೆಕ್ಸಾಂಡರ್ ಸ್ಕಟ್, ದಿ ಬಾಕ್ಸಿಂಗ್ ರಿಜಿಸ್ಟರ್ , 1999, ಪುಟ 337
- ↑ ಜೇಮ್ಸ್ ರಾಬರ್ಟ್ಸ್ ಮತ್ತು ಅಲೆಕ್ಸಾಂಡರ್ ಸ್ಕಟ್, ದಿ ಬಾಕ್ಸಿಂಗ್ ರಿಜಿಸ್ಟರ್ , 1999, ಪುಟ 403
- ↑ ಜೇಮ್ಸ್ ರಾಬರ್ಟ್ಸ್ ಮತ್ತು ಅಲೆಕ್ಸಾಂಡರ್ ಸ್ಕಟ್, ದಿ ಬಾಕ್ಸಿಂಗ್ ರಿಜಿಸ್ಟರ್ , 1999, ಪುಟ 353,
- ↑ ಜೇಮ್ಸ್ ರಾಬರ್ಟ್ಸ್ ಮತ್ತು ಅಲೆಕ್ಸಾಂಡರ್ ಸ್ಕಟ್, ದಿ ಬಾಕ್ಸಿಂಗ್ ರಿಜಿಸ್ಟರ್ , 1999, ಪುಟ 114,115
- ↑ ಜೇಮ್ಸ್ ರಾಬರ್ಟ್ಸ್ ಮತ್ತು ಅಲೆಕ್ಸಾಂಡರ್ ಸ್ಕಟ್, ದಿ ಬಾಕ್ಸಿಂಗ್ ರಿಜಿಸ್ಟರ್ , 1999, ಪುಟ 50
- ↑ ಜೇಮ್ಸ್ ರಾಬರ್ಟ್ಸ್ ಮತ್ತು ಅಲೆಕ್ಸಾಂಡರ್ ಸ್ಕಟ್, ದಿ ಬಾಕ್ಸಿಂಗ್ ರಿಜಿಸ್ಟರ್ , 1999, ಪುಟ 293
- ↑ ಜೇಮ್ಸ್ ರಾಬರ್ಟ್ಸ್ ಮತ್ತು ಅಲೆಕ್ಸಾಂಡರ್ ಸ್ಕಟ್ದಿ ಬಾಕ್ಸಿಂಗ್ ರಿಜಿಸ್ಟರ್ , 1999, "ಡೌಗ್ ಗ್ರ್ಯಾಂಟ್",2008 ಪುಟ 330
- ↑ ಜೇಮ್ಸ್ ರಾಬರ್ಟ್ಸ್, ಅಲೆಕ್ಸಾಂಡರ್ ಸ್ಕಟ್, ದಿ ಬಾಕ್ಸಿಂಗ್ ರಿಜಿಸ್ಟರ್ , 1999, ಪುಟ 98, 99
- ↑ ಜೇಮ್ಸ್ ರಾಬರ್ಟ್ಸ್ ಮತ್ತು ಅಲೆಕ್ಸಾಂಡರ್ ಸ್ಕಟ್, ದಿ ಬಾಕ್ಸಿಂಗ್ ರಿಜಿಸ್ಟರ್ , 1999, ಪುಟ75
- ↑ ಜೇಮ್ಸ್ ರಾಬರ್ಟ್ಸ್ ಮತ್ತು ಅಲೆಕ್ಸಾಂಡರ್ ಸ್ಕಟ್, ದಿ ಬಾಕ್ಸಿಂಗ್ ರಿಜಿಸ್ಟರ್ , 1999, ಪುಟ 339, 340
- ↑ Phrases.org
- ↑ ಬಾಕ್ಸಿಂಗ್ ಬ್ರೈನ್ ಡ್ಯಾಮೇಜ್ Archived 2002-09-18 ವೇಬ್ಯಾಕ್ ಮೆಷಿನ್ ನಲ್ಲಿ., BBC ನ್ಯೂಸ್
- ↑ ಸ್ವಿಂತ್, ಜಾಸೆಫ್ R. "ಡೆತ್ ಅಂಡರ್ ದಿ ಸ್ಪಾಟ್ಲೈಟ್" ಎಲೆಕ್ಟ್ರೋನಿಕ್ ಜರ್ನಲ್ಸ್ ಆಫ್ ಮಾರ್ಷಿಯಲ್ ಆರ್ಟ್ಸ್ ಆಂಡ್ ಸೈನ್ಸಸ್ , 2007ರ ನವೆಂಬರ್ 25ರಂದು ಸಂಕಲನಗೊಂಡಿದೆ
- ↑ ಲಂಡ್ಬರ್ಗ್, ಜಾರ್ಜ್ D. "ಬಾಕ್ಸಿಂಗ್ ಶುಡ್ ಬಿ ಬ್ಯಾನ್ಡ್ ಇನ್ ಸಿವಿಲೈಜ್ಡ್ ಕಂಟ್ರೀಸ್" ಜರ್ನಲ್ ಆಫ್ ದಿ ಅಮೆರಿಕನ್ ಮೆಡಿಕಲ್ ಅಸೋಸಿಯೇಶನ್ . 1983, ಪುಟಗಳು 249-250.
- ↑ "BMA.org.uk". Archived from the original on 2008-12-05. Retrieved 2010-08-02.
- ↑ "CMA.ca". Archived from the original on 2016-03-11. Retrieved 2010-08-02.
- ↑ "CMA.ca". Archived from the original on 2008-09-05. Retrieved 2010-08-02.
- ↑ ನ್ಯೂಸ್ ಆನ್ ಬಾಕ್ಸಿಂಗ್ ಬ್ಯಾನ್ BBC ಆನ್ಲೈನ್
- ↑ "Amateur boxers suffer brain damage too". New Scientist (2602): 4. 2007.
{{cite journal}}
: Unknown parameter|month=
ignored (help) - ↑ "Does Amateur Boxing Cause Brain Damage?". American Academy of Neurology. May 2, 2007.
{{cite news}}
: Cite has empty unknown parameter:|coauthors=
(help) - ↑ ಅಮೆರಿಕನ್ ಅಸೋಸಿಯೇಶನ್ ಆಫ್ ಪ್ರೊಫೆಶನಲ್ ರಿಂಗ್ಸೈಡ್ ಫಿಸಿಶಿಯನ್ಸ್
- ↑ ಹಾಸರ್, ಥೋಮಸ್. "ಮೆಡಿಕಲ್ ಇಶ್ಯೂಸ್ ಆಂಡ್ ದಿ AAPRP" Archived 2008-02-10 ವೇಬ್ಯಾಕ್ ಮೆಷಿನ್ ನಲ್ಲಿ. SecondsOut.com, 2007ರ ನವೆಂಬರ್ 25ರಂದು ಸಂಕಲನಗೊಂಡಿದೆ
ಆಕರಗಳು
[ಬದಲಾಯಿಸಿ]- ಆಕ್ಸಡೆಂಟ್ಸ್ ಟೇಕ್ ಲೈವ್ಸ್ ಆಫ್ ಯಂಗ್ ಅಲ್ಯೂಮಿನಿ (ಜುಲೈ/ಆಗಸ್ಟ್ 2005). ಇಲಿನಾಯಸ್ ಅಲ್ಯೂಮಿನಿ, 18 (1), 47.
- ಬೀಟಿಂಗ್ ದಿ ಹೆಕ್ ಒಟ್ಟಾ ದೈಯರ್ ಇನ್ಸ್ಟ್ರುಮೆಂಟ್ಸ್
- ಡೆತ್ ಅಂಡರ್ ದಿ ಸ್ಪಾಟ್ಲೈಟ್: ದಿ ಮ್ಯಾನ್ಯುವೆಲ್ ವೆಲಾಜ್ಕ್ವೆಜ್ ಬಾಕ್ಸಿಂಗ್ ಫೆಟಾಲಿಟಿ ಕಲೆಕ್ಷನ್
- ಫ್ಲೀಸ್ಚರ್, ನ್ಯಾಟ್, ಸ್ಯಾಮ್ ಆಂಡ್ರೆ, ನಿಗೆಲ್ ಕೋಲಿನ್ಸ್, ಡ್ಯಾನ್ ರಫೇಲ್ (2002). ಆನ್ ಇಲ್ಲಸ್ಟ್ರೇಟೆಡ್ ಹಿಸ್ಟರಿ ಆಫ್ ಬಾಕ್ಸಿಂಗ್ . ಸಿಟಾಡೆಲ್ ಪ್ರೆಸ್. ISBN 0-8065-2201-1
- ಫಾಕ್ಸ್, ಜೇಮ್ಸ್ A. (2001). ಬಾಕ್ಸಿಂಗ್. ಸ್ಟೆವರ್ಟ್, ಟ್ಯಾಬೊರಿ ಮತ್ತು ಚ್ಯಾಂಗ್. ISBN 1-58479-133-0
- ಗಾಡ್ಫ್ರೆ, ಜಾನ್ "ಬಾಕ್ಸಿಂಗ್" ಫ್ರಮ್ ಟ್ರೀಟೈಸ್ ಅಪಾನ್ ದಿ ಯೂಸ್ಫುಲ್ ಸೈನ್ಸ್ ಆಫ್ ಡಿಫೆನ್ಸ್ , 1747 Archived 2010-12-30 ವೇಬ್ಯಾಕ್ ಮೆಷಿನ್ ನಲ್ಲಿ.
- ಗನ್ನ್ M, ಆರ್ಮೆರಾಡ್ D. ದಿ ಲಿಗ್ಯಾಲಿಟಿ ಆಫ್ ಬಾಕ್ಸಿಂಗ್. ಲೀಗಲ್ ಸ್ಟಡೀಸ್. 1995;15:181.
- ಹ್ಯಾಲ್ಬರ್ಟ್, ಕ್ರಿಸ್ಟಿ (2003). ದಿ ಅಲ್ಟಿಮೇಟ್ ಬಾಕ್ಸರ್: ಅಂಡರ್ಸ್ಟ್ಯಾಂಡಿಂಗ್ ದಿ ಸ್ಪೋರ್ಟ್ ಆಂಡ್ ಸ್ಕಿಲ್ಸ್ ಆಫ್ ಬಾಕ್ಸಿಂಗ್ . ಇಂಪ್ಯಾಕ್ಟ್ ಸೆಮಿನಾರ್ಸ್, ಇಂಕ್. ISBN 0-9630968-5-0
- ಹ್ಯಾಟ್ಮೇಕರ್, ಮಾರ್ಕ್ (2004). ಬಾಕ್ಸಿಂಗ್ ಮಾಸ್ಟರಿ: ಅಡ್ವಾನ್ಸ್ಡ್ ಟೆಕ್ನಿಕ್, ಟ್ಯಾಕ್ಟಿಕ್ಸ್ ಆಂಡ್ ಸ್ಟ್ರಾಟೆಜೀಸ್ ಫ್ರಮ್ ಸ್ವೀಟ್ ಸೈನ್ಸ್ . ಟ್ರ್ಯಾಕ್ಸ್ ಪಬ್ಲಿಷಿಂಗ್. ISBN 1-884654-21-5
- ಮ್ಯಾಕ್ಇಲ್ವ್ಯಾನಿ, ಹಘ್ (2001). ದಿ ಹಾರ್ಡೆಸ್ಟ್ ಗೇಮ್: ಮ್ಯಾಕ್ಇಲ್ವ್ಯಾನಿ ಆನ್ ಬಾಕ್ಸಿಂಗ್ . ಮ್ಯಾಕ್ಗ್ರಾ-ಹಿಲ್. ISBN 0-658-02154-0
- ಮೈಲರ್, ಪ್ಯಾಟ್ರಿಕ್ (1997). A Century of Boxing Greats: Inside the Ring with the Hundred Best Boxers . ರಾಬ್ಸನ್ ಬುಕ್ಸ್ (UK) / ಪಾರ್ಕ್ವೆಸ್ಟ್ ಪಬ್ಲಿಕೇಶನ್ಸ್ (US). ISBN 1-86105-258-8.
- ಪ್ರೈಸ್, ಎಡ್ಮಂಡ್ ದಿ ಸೈನ್ಸ್ ಆಫ್ ಸೆಲ್ಫ್ ಡಿಫೆನ್ಸ್: ಎ ಟ್ರೀಟೈಸ್ ಆನ್ ಸ್ಪ್ಯಾರಿಂಗ್ ಆಂಡ್ ರೆಸ್ಲಿಂಗ್ , 1867[permanent dead link]
- ರಾಬರ್ಟ್ ಆನಸಿ (2003). ದಿ ಗ್ಲೌವ್ಸ್: ಎ ಬಾಕ್ಸಿಂಗ್ ಕ್ರೋನಿಕಲ್ . ನಾರ್ತ್ ಪಾಯಿಂಟ್ ಪ್ರೆಸ್. ISBN 0-86547-652-7
- ಸ್ಕಲ್ಬರ್ಗ್, ಬಡ್ಡ್ (2007). ರಿಂಗ್ಸೈಡ್: ಎ ಟ್ರೆಸರಿ ಆಫ್ ಬಾಕ್ಸಿಂಗ್ ರಿಪೋರ್ಟೇಜ್ . ಐವನ್ R. ಡೀ. ISBN 1-56663-749-X
- ಸಿಲ್ವರ್ಮ್ಯಾನ್, ಜೆಫ್ (2004). ದಿ ಗ್ರೇಟೆಸ್ಟ್ ಬಾಕ್ಸಿಂಗ್ ಸ್ಟೋರೀಸ್ ಎವರ್ ಟೋಲ್ಡ್: ಥರ್ಟಿ-ಸಿಕ್ಸ್ ಇಂಕ್ರೆಡಿಬಲ್ ಟೇಲ್ಸ್ ಫ್ರಮ್ ದಿ ರಿಂಗ್ . ದಿ ಲಿಯಾನ್ಸ್ ಪ್ರೆಸ್. ISBN 1-59228-479-5
- ಸ್ಕಲ್ಲಿ, ಜಾನ್ ಲರ್ನ್ ಟು ಬಾಕ್ಸ್ ವಿದ್ ದಿ ಐಸ್ಮ್ಯಾನ್ Archived 2010-08-01 ವೇಬ್ಯಾಕ್ ಮೆಷಿನ್ ನಲ್ಲಿ.
- U.S. ಅಮ್ಯಾಚ್ಯುವರ್ ಬಾಕ್ಸಿಂಗ್ ಇಂಕ್. (1994). ಕೋಚಿಂಗ್ ಒಲಿಂಪಿಕ್ ಸ್ಟೈಲ್ ಬಾಕ್ಸಿಂಗ್ . ಕೂಪರ್ ಪಬ್ ಗ್ರೂಪ್. 1-884-12525-5
- ಎ ಪಿಕ್ಟೋರಲ್ ಹಿಸ್ಟರಿ ಆಫ್ ಬಾಕ್ಸಿಂಗ್, ಸ್ಯಾಮ್ ಆಂಡ್ರೆ ಮತ್ತು ನ್ಯಾಟ್ ಫ್ಲೀಸ್ಚರ್, ಹ್ಯಾಮ್ಲಿನ್, 1988, ISBN 0-600-50288-0
ಹೊರಗಿನ ಕೊಂಡಿಗಳು
[ಬದಲಾಯಿಸಿ]- ಎ ಕಂಪ್ರೆಹೆಂಸಿವ್ ಕಲೆಕ್ಷನ್ ಆಫ್ ಫೈಟ್ ಹೈಲ್ಟ್ಸ್ 1894-1970 Archived 2010-03-03 ವೇಬ್ಯಾಕ್ ಮೆಷಿನ್ ನಲ್ಲಿ.
- ಕೆನ್ ಬುಚನಾನ್- ಲೈಟ್ವೈಟ್ ಚಾಂಪಿಯನ್ ಆಫ್ ದಿ ವರ್ಲ್ಡ್ Archived 2010-03-23 ವೇಬ್ಯಾಕ್ ಮೆಷಿನ್ ನಲ್ಲಿ. - ATG ಬಾಕ್ಸರ್ನ ಸಂಪೂರ್ಣ ಬಾಕ್ಸಿಂಗ್ ಕಾದಾಟಗಳಿಗಾಗಿ
- BoxingCommunity.org Archived 2010-07-22 ವೇಬ್ಯಾಕ್ ಮೆಷಿನ್ ನಲ್ಲಿ. - ಇತ್ತೀಚಿನ ಬಾಕ್ಸಿಂಗ್ ಸುದ್ದಿ, ಬಾಕ್ಸಿಂಗ್ ವೀಕ್ಷಣೆಗಳು, ಬಾಕ್ಸಿಂಗ್ ವೀಡಿಯೊಗಳು, ಕಾದಾಟದ ಷೆಡ್ಯೂಲ್
- Pages using the JsonConfig extension
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 errors: unsupported parameter
- CS1 errors: empty unknown parameters
- Articles lacking in-text citations from November 2009
- Articles with invalid date parameter in template
- All articles lacking in-text citations
- Wikipedia articles needing style editing from April 2010
- All articles needing style editing
- Articles needing cleanup from April 2010
- All pages needing cleanup
- Articles containing how-to sections
- Articles with hatnote templates targeting a nonexistent page
- Articles to be expanded from November 2009
- All articles to be expanded
- Articles with unsourced statements from July 2009
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Vague or ambiguous time
- ಉಲ್ಲೇಖಗಳ ಅಗತ್ಯ ಇರುವ ಲೇಖನಗಳು
- Commons link is on Wikidata
- All articles with dead external links
- Articles with dead external links from ಆಗಸ್ಟ್ 2021
- Articles with permanently dead external links
- ಬಾಕ್ಸಿಂಗ್
- ಕಾದಾಟ ಕ್ರೀಡೆಗಳು
- ಯುರೋಪಿಯನ್ ಕದನ ಕಲೆಗಳು
- ವೈಯಕ್ತಿಕ ಕ್ರೀಡೆಗಳು
- ಒಲಿಂಪಿಕ್ ಕ್ರೀಡೆಗಳು
- ಕ್ರೀಡೆ
- Pages using ISBN magic links