ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸಂಪರ್ಕ
ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸಂಪರ್ಕ ವನ್ನು ಅನೇಕ ಸಲ ಸಂಕ್ಷಿಪ್ತವಾಗಿ ಬ್ರಾಡ್ಬ್ಯಾಂಡ್ ಎಂದು ಕರೆಯಲಾಗುತ್ತದೆ, ಅತಿ ಹೆಚ್ಚು ಮಾಹಿತಿ ಪ್ರಸರಣ ವೇಗದ ಅಂತರಜಾಲ ಸಂಪರ್ಕ, ಇದು 56k ಮೊಡೆಮ್ ಬಳಸಿ ಡಯಲ್ ಅಪ್ ಸಂಪರ್ಕ ಪಡೆದುಕೊಳ್ಳುವುದಕ್ಕಿಂತ ಭಿನ್ನವಾದ ಸಂಪರ್ಕ ವ್ಯವಸ್ಥೆ.
ಡಯ ಅಪ್ ಮೊಡೆಮ್ಗಳು ಸೆಕೆಂಡಿಗೆ 56 kbit/s (ಒಂದು ಸೆಕೆಂಡಿಗೆ ಕಿಲೋಬಿಟ್ಗಳು) ಗಿಂತ ಕಡಿಮೆ ಬೈಟ್ರೇಟ್ ದರಕ್ಕೆ ಸೀಮಿತ ಮತ್ತು ಇದರಲ್ಲಿ ದೂರವಾಣಿ ಸಂಪರ್ಕದ ಸಂಪೂರ್ಣ ಬಳಕೆಯ ಅಗತ್ಯವ್ವಿದೆ, ಆದರೆ ಬ್ರಾಡ್ಬ್ಯಾಂಡ್ ತಂತ್ರಜ್ಞಾನಗಳು ಇದಕ್ಕಿಂತ ಎರಡರಷ್ಟು ವೇಗವನ್ನು ಒದಗಿಸುತ್ತವೆ ಮತ್ತು ಸಾಮಾನ್ಯವಾಗಿ ದೂರವಾಣಿ ಸಂಪರ್ಕಕ್ಕೆ ತಡೆ ಉಂಟುಮಾಡುವುದಿಲ್ಲ.
ಬ್ರಾಡ್ಬ್ಯಾಂಡಿನ ನಿರೂಪದಲ್ಲಿ 64 kbit/sನಿಂದ 2.0 Mbit/s[೧] ತನಕ, ಅನೇಕ ಕನಿಷ್ಟ ಬ್ಯಾಂಡ್ ವಿಸ್ತಾರಗಳನ್ನು ಬಳಸಿದರೂ 2006 ರ OECD ವರದಿ[೨] ಬ್ರಾಡ್ಬ್ಯಾಂಡನ್ನು ಡೌನ್ಲೋಡ್ ವ್ಯವಸ್ಥೆ ಮತ್ತು ಮಾಹಿತಿ ಪ್ರಸರಣ ವೇಗ 256 kbit/sಗೆ ಸಮನಾಗಿರಬೇಕು, ಅಥವಾ ಅದಕ್ಕಿಂತ ಹೆಚ್ಚಾಗಿರಬೇಕು ಎಂಬುದಾಗಿ ನಿಖರ ನಿರೂಪ ಕೊಡುತ್ತದೆ.ಅಮೇರಿಕಾ ಸಂಯುಕ್ತಸಂಸ್ಥಾನದ (US) ಫೆಡರಲ್ ಕಮ್ಯುನಿಕೇಷನ್ ಕಮಿಷನ್ (FCC) ಪ್ರಾಥಮಿಕ ಬ್ರಾಡ್ಬ್ಯಾಂಡನ್ನು ಕನಿಷ್ಟ ಪಕ್ಷ ಒಂದು ದಿಕ್ಕಿನಲ್ಲಿ (ಇಂಟರ್ನೆಟ್ ಬಳಕೆದಾರನ ಕಂಪ್ಯೂಟರಿಗೆ) ಅಥವಾ ಮೇಲು ಹಂತದಲ್ಲಿ (ಬಳಕೆದಾರನ ಕಂಪ್ಯೂಟರಿನಿಂದ ಇಂಟರ್ನೆಟ್ಗೆ), 2009ರಂತೆ ಮಾಹಿತಿ ಪ್ರಸರಣ ವೇಗ ಸೆಕೆಂಡಿಗೆ 768 ಕಿಲೋಬಿಟ್ಸ್ (Kbps), ಅಥವಾ ಸೆಕೆಂಡಿಗೆ 768,000 ಬಿಟ್ಸ್ ಇರಬೇಕೆಂದು ನಿರೂಪಿಸುತ್ತದೆ.[೩] ಇರುವ ಪರಿಸ್ಥಿತಿ ಏನೆಂದರೆ ಮಾರುಕಟ್ಟೆಗಳು ವೇಗದ ಸೇವೆಗಳನ್ನು ಒದಗಿಸುತ್ತಿರುವಾಗ ಬ್ರಾಡ್ಬ್ಯಾಂಡಿನ ನಿರೂಪದ ಮಿತಿಯನ್ನು ವಿಸ್ತರಿಸಬೇಕು.[೪]
ಮಾಹಿತಿದರಗಳನ್ನು ಗರಿಷ್ಟ ಡೌನ್ಲೋಡ್ ಎಂಬ ಅರ್ಥದಲ್ಲಿ ನಿರೂಪಿಸಲಾಗಿದೆ ಏಕೆಂದರೆADSLನಂತಹ ಅನೇಕ ಸಾಮಾನ್ಯ ಗ್ರಾಹಕ ಬ್ರಾಡ್ಬ್ಯಾಂಡ್ ತಂತ್ರಜ್ಞಾನಗಳು ಡೌನ್ಲೋಡ್ಗಿಂತ ಹೆಚ್ಚು ನಿಧಾನವಾದ ಗರಿಷ್ಟ ಮಾಹಿತಿ ಅಪ್ಲೋಡ್ ಸಾಮರ್ಥ್ಯದ "ಅಸಿಮೆಟ್ರಿಕ್"—ಸ್ವಭಾವ ಹೊಂದಿವೆ.
"ಬ್ರಾಡ್ಬ್ಯಾಂಡ್ ಪೆನೆಟ್ರೇಷನ್" ಅನ್ನು ಈಗ ನಿರ್ಣಾಯಕ ಆರ್ಥಿಕ ಸೂಚಕವಾಗಿ ಕಾಣಲಾಗುತ್ತಿದೆ.[೨][೫]
ಸ್ಥೂಲ ಅವಲೋಕನ
[ಬದಲಾಯಿಸಿ]ಭ್ರಾಡ್ಬ್ಯಾಂಡ್ ಟ್ರಾನ್ಸ್ಮಿಷನ್ ದರಗಳು | |
ಸಂಪರ್ಕ | ಟ್ರಾನ್ಸ್ಮಿಷನ್ ದತ್ತಾಂಶ ದರ |
---|---|
DS-1 (Tier 1) | 1.544 Mbit/s |
E-1 | 2.048 Mbit/s |
DS-3 (Tier 3) | 44.736 Mbit/s |
OC-3 | 155.52 Mbit/s |
OC-12 | 622.08 Mbit/s |
OC-48 | 2.488 Gbit/s |
OC-192 | 9.953 Gbit/s |
OC-768 | 39.813 Gbit/s |
OC-1536 | 79.6 Gbit/s |
OC-3072 | 159.2 Gbit/s |
ಬ್ರಾಡ್ಬ್ಯಾಂಡನ್ನು ಅನೇಕ ಸಲ "ಹೆಚ್ಚು-ವೇಗ "ದ ಇಂಟರ್ನೆಟ್ ಸಂಪರ್ಕ ಎಂದೂ ಕರೆಯಲಾಗುತ್ತದೆ ಏಕೆಂದರೆ ಸಾಮಾನ್ಯವಾಗಿ ಅದರಲ್ಲಿ ಮಾಹಿತಿ ಪ್ರಸರಣ ವೇಗದ ದರ ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ಗ್ರಾಹಕನಿಗೆ ಒದಗಿಸಲಾಗುವ ಸೆಕೆಂಡ್ಗೆ 256 kbit/s (0.256 Mbit/s) ಅಥವಾ ಅದಕ್ಕೂ ಹೆಚ್ಚಿನ ಸಾಮರ್ಥ್ಯದ ಸಂಪರ್ಕವನ್ನು ಸಂಕ್ಷಿಪ್ತವಾಗಿ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸಂಪರ್ಕ ಎಂದು ಪರಿಗಣಿಸಲಾಗುತ್ತದೆ. ಇಂಟರ್ನ್ಯಾಷನಲ್ ಟೆಲಿಕಮ್ಯುನಿಕೇಷನ್ ಯೂನಿಯನ್ ಸ್ಟ್ಯಾಂಡರ್ಡೈಸೇಷನ್ ಸೆಕ್ಟರ್ (ITU-T)ನ ಶಿಫಾರಸು I.113 ಬ್ರಾಡ್ಬ್ಯಾಂಡನ್ನು ಪ್ರಾಥಮಿಕ ವೇಗ ದರ ISDN, ಸೆಕೆಂಡಿಗೆat 1.5 ರಿಂದ 2 Mbit/s ವೇಗದ ಪ್ರಸರಣ ಸಾಮರ್ಥ್ಯದ್ದು ಎಂದು ನಿರೂಪಿಸಿದೆ. ಬ್ರಾಡ್ಬ್ಯಾಂಡ್ನ FCC ನಿರೂಪ ಎಂದರೆ ಸೆಕೆಂಡಿಗೆ 768 kbit/s (0.8 Mbit/s). ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (OECD)ಬ್ರಾಡ್ಬ್ಯಾಂಡನ್ನು ಕನಿಷ್ಟ ಒಂದು ದಿಕ್ಕಿನಲ್ಲಿ ಸೆಕೆಂಡಿಗೆ 256 kbit/s ಎಂದು ನಿರೂಪಿಸಿದೆ ಮತ್ತು ಈ ಬಿಟ್ ವೇಗದರವನ್ನು ಜಗತ್ತಿನಾದ್ಯಂತ ಬ್ರಾಡ್ಬ್ಯಾಂಡ್ ಎಂದು ಮಾರಾಟಮಾಡುತ್ತಿರುವ ಸಾಮಾನ್ಯ ಪ್ರಾಥಮಿಕ ಹಂತ. ಉದ್ದಿಮೆ ನಿರೂಪಿಸಿರುವ ಯಾವುದೇ ನಿರ್ಧಿಷ್ಟ ಬಿಟ್ರೇಟ್ ಇಲ್ಲ ಆದರೂ "ಬ್ರಾಡ್ ಬ್ಯಾಂಡ್" ಎಂದರೆ ಕಡಿಮೆ ವೇಗದರದ ಪ್ರಸರಣ ವಿಧಾನ ಎಂಬ ಅರ್ಥವಿದೆ. ಇಂಟರ್ನೆಟ್ ಸೇವೆ ಒದಗಿಸುವವ (ISPs) ಕೆಲವರು ಕಡಿಮೆ -ಬಿಟ್ರೇಟ್ ಈ ನಿರೂಪವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಮ್ಡು ಅವುಗಳನ್ನು ಬ್ರಾಡ್ಬ್ಯಾಂಡ್ ಎಂಬುದಾಗಿ ಮಾರಾಟ ಮಾಡುತ್ತಿದ್ದಾರೆ.
ವಾಸ್ತವಿಕವಾಗಿ ಜಾಹೀರಾತು ಮಾಡಿದ ಬ್ಯಾಂಡ್ವಿಡ್ತ್ ಗ್ರಾಹಕನಿಗೆ ಯಾವಾಗಲೂ ಸಿಗುತ್ತದೆ ಎಂಬ ನೆಚ್ಚಿಗೆಯಿಲ್ಲ, ISPಗಳು ಅನೇಕ ಸಲ ತಮ್ಮ ಬಹಳಷ್ಟು ಚಂದಾದಾರರಿಗೆ ಅವರ ಬ್ಯಾಕ್ಬೋನ್ ಸಂಪರ್ಕ ಅಥವಾ ನೆರೆಯ ಸಂಪರ್ಕ ಇದನ್ನು ನಿರ್ವಹಿಸುವ ಅವಕಾಶ ಕೊಟ್ಟಿರುತ್ತವೆ, ಬಳಕೆದಾರರು ಆಗಿಂದಾಗ್ಗೆ ತಮ್ಮ ನೆಟ್ವರ್ಕ್ ಸಂಪರ್ಕದ ಸಾಮರ್ಥ್ಯವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವುದಿಲ್ಲ ಎಂದು ಅವರು ಭಾವಿಸುತ್ತಾರೆ. ಈ ಒಟ್ಟಾರೆ ತಂತ್ರ ಅನೇಕ ಸಲ ಕೆಲಸಮಾಡುತ್ತದೆ, ಆದ್ದರಿಂದ ಬಳಕೆದಾರರು ಬಹಳಷ್ಟು ಸಮಯ ಪೂರ್ತಿ ಬ್ಯಾಂಡ್ವಿಡ್ತನ್ನು ಬಳಸಿಕೊಳ್ಳುತ್ತಾರೆ, ಸಹಬಳಕೆದಾರನೊಂದಿಗೆ peer-to-peer (P2P) ಫೈಲ್ ಶೇರಿಂಗ್ ವ್ಯವಸ್ಥೆಗಳನ್ನು ಅನೇಕ ಸಲ ವಿಸ್ತೃತ ಅವಧಿಯ ಹೈಬ್ಯಾಂಡ್ ವಿಡ್ತ್ ಬಳಕೆಯ ಅಗತ್ಯವಿರುತ್ತದೆ. ಈ ಕಾಲ್ಪನಿಕತೆಯ ಒತ್ತಡ ತಮ್ಮ ಸಾಮರ್ಥ್ಯವನ್ನು ವಿಪರೀತ ಉದಾಸೀನ ಮಾಡಿದ ISPಗಳಿಗೆ ದೊಡ್ಡ ಸಮಸ್ಯೆಗಳನ್ನು ಒಡ್ಡುತ್ತದೆ. ಈ ವಿಷಯದ ಬಗ್ಗೆ ಹೆಚ್ಚು ವಿವರಕ್ಕಾಗಿ, ಟ್ರ್ಯಾಫಿಕ್ ಶೇಪಿಂಗ್ ನೋಡಿ. ಈ ಪ್ರಾಥಮಿಕ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾದಾಗ ಟೆಲ್ಕೋಗಳು ಹೆಚ್ಚು ವೇಗದ ಬಿಟ್ ದರಗಳ ಸೇವೆಯನ್ನು ಪ್ರಾರಂಭಿಸುತ್ತಿವೆ. ಅಸ್ತಿತ್ವದಲ್ಲಿರುವ ಸಂಪರ್ಕಗಳಿಗೆ ಬಹುಪಾಲು ಸಮಯ ಹಾಲಿ ಇರುವ ಸಾಧನದ ಸಂಪರ್ಕಕ್ಕೆ ಅದನ್ನು ಮರು ಹೊಂದಾಣಿಕೆಯಷ್ಟೇ ಅಗತ್ಯವಿರುತ್ತದೆ.
ಬಹಳಷ್ಟು ಬ್ರಾಡ್ಬ್ಯಾಂಡ್ ಸೇವೆಗಳ ಮಾಹಿತಿದರಗಳು ಈಗಲೂ ಒಳ್ಳೆಯ ಗುಣಮಟ್ಟದ ವೀಡಿಯೋ ಒದಗಿಸುವ ಸಾಮರ್ಥ್ಯವನ್ನು ಒಳಗೊಂಡಿಲ್ಲ. ಉತ್ತಮ ಫಲಿತಾಂಶಕ್ಕಾಗಿ MPEG-2 ವೀಡಿಯೋಗಳಿಗೆ ಸೆಕೆಂಡಿಗೆ ಸುಮಾರು 6 Mbit/s ವೇಗ ದರದ ಅಗತ್ಯವಿದೆ. ಕೆಲವು ಉದ್ದೇಶಗಳಿಗೆ ಸಾಕಷ್ಟು ವಿಡಿಯೋ ಕಡಿಮೆ ಮಾಹಿತಿ ಪ್ರಸರಣ ವೇಗದಲ್ಲಿ ಸಾಧ್ಯವಾಗುತ್ತದೆ. ಕೆಲವು ವೀಡಿಯೋ ಕಾನ್ಫರೆಸಿಂಗ್ಗಳಿಗೆ ಬಳಸಲಾಗುವ ಸೆಕೆಂಡಿಗೆ 768 kbit/s ಮತ್ತು 384 kbit/s ವೇಗ ದರದ ಬಳಕೆಗಳು ಮತ್ತು ಮತ್ತು H.264/MPEG-4 AVC ಬಳಸಿಕೊಳ್ಳುವ ವೀಡಿಯೋಫೋನ್ನಲ್ಲಿ ಬಳಸಲಾಗುವ ಸೆಕೆಂಡಿಗೆ ಕನಿಷ್ಟ ಎಂದರೆ 100 kbit ಸಾಮರ್ಥ್ಯಗಳು ಇದಕ್ಕೆ ಉದಾಹರಣೆಗೆ MPEG-4 ಫಾರ್ಮ್ಯಾಟ್ ಕೇಬಲ್ ಮೋಡೆಮ್ನ ಕೆಳತುದಿ ಮತ್ತುADSL ನಿರ್ವಹಣೆಯಿಂದ ಸೆಕೆಂಡಿಗೆ 2 mbit ವೇಗದರದಲ್ಲಿ ಉತ್ತಮಗುಣಮಟ್ಟದ ವೀಡಿಯೋ ಒದಗಿಸುತ್ತದೆ.
ಬ್ಯಾಂಡ್ವಿಡ್ತ್ನ ಏರಿಕೆ ಈಗಾಗಲೇ ನ್ಯೂಸ್ಗ್ರೂಪ್ಗಳ ಮೇಲೆ ಪರಿಣಾಮ ಬೀರಿದೆ: alt.binaries* ನಂತಹ ಗ್ರೂಪ್ಗಳಿಗೆ ವಹಿಸಲಾಗಿರುವ ಇವು JPEG ಫೈಲ್ಗಳಿಂದ ಇಡೀ CD ಮತ್ತು DVD ಚಿತ್ರಣಗಳ ತನಕ ಹೆಚ್ಚಾಗಿವೆ. NTLನ ಪ್ರಕಾರ,[disambiguation needed] ಅವರ ನೆಟ್ವರ್ಕ್ನಲ್ಲಿ ಟ್ರಾಫಿಕ್ನ ಪ್ರಮಾಣ ಪ್ರತಿದಿನದ ದಿನಕ್ಕೆ 150 ಗಿಗಾಬೈಟ್ನಷ್ಟು ಸುದ್ಧಿ ಪ್ರಸಾರ 2001ರಲ್ಲಿ ದಿನಕ್ಕೆ 1 ಟೆರಾಬೈಟ್ ಇದ್ದದ್ದು 2002ರಲ್ಲಿ 500 ಗಿಗಾಬೈಟ್ ಮಾಹಿತಿ ಪ್ರಸರಣಕ್ಕೆ ಅಂದರೆ ಪ್ರತಿದಿನ 4 ಟೆರಾಬೈಟ್ಗಳಿಗೆ ಏರಿಕೆಯಾಗಿದೆ.[ಸೂಕ್ತ ಉಲ್ಲೇಖನ ಬೇಕು]
ತಂತ್ರಜ್ಞಾನ
[ಬದಲಾಯಿಸಿ]ಬಹಳಷ್ಟು ಪ್ರದೇಶಗಳ ಸ್ಟ್ಯಾಂಡರ್ಡ್ ಬ್ರಾಡ್ಬ್ಯಾಂಡ್ ತಂತ್ರಜ್ಞಾನಗಳೆಂದರೆ DSL ಮತ್ತು ಕೇಬಲ್ ಮೊಡೆಮ್ಗಳು. VDSL ಸೇರಿದಂತೆ ಬಳಕೆಯಲ್ಲಿರುವ ಹೊಸ ತಂತ್ರಜ್ಞಾನಗಳು ಟೆಲಿ ಫೋನ್ ಮತ್ತು ಕೇಬಲ್ ಪ್ಲ್ಯಾಂಟ್ಗಳಲ್ಲಿ ಆಪ್ಟಿಕಲ್ ಫೈಬರ್ ಸಂಪರ್ಕಗಳನ್ನು ಗ್ರಾಹಕರಿಗೆ ಹತ್ತಿರಕ್ಕೆ ತಂದು ಕೊಟ್ಟಿವೆ. ಫೈಬರ್ನಿಂದ ಪ್ರೆಮಿಸಸ್ಗೆ ಮತ್ತು ಫೈಬರ್ನಿಂದ ಕರ್ಬ್ ಸ್ಟ್ರೀಮ್ಗಳಿಗೆ ಇತ್ತೀಚೆಗೆ ಮಾತ್ರ ಬಳಸಲಾಗುತ್ತಿರುವ ಫೈಬರ್ ಆಪ್ಟಿಕ್ ಫೈಬರ್ ಸಂವಹನ, ಮಾಹಿತಿಯನ್ನು ತಾಮ್ರದ ತಂತಿಯ ತಂತ್ರಜ್ಞಾನಕ್ಕಿಂತ ಕಡಿಮೆ ವೆಚ್ಛದಲ್ಲಿ ಬಹುದೂರದವರೆಗೆ ಪ್ರಸರಣ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ಕೇಬಲ್ ಅಥವಾ ADSL ಸೇವೆಯಿಲ್ಲದ ಕೆಲವು ಪ್ರದೇಶಗಳಲ್ಲಿ ಸಮುದಾಯ ಸಂಘಟನೆಗಳು ವೈ-ಫೈ ನೆಟ್ವರ್ಕ್ಗಳಾನ್ನು ಸ್ಥಾಪಿಸಲು ಪ್ರಾರಂಭಿಸಿವೆ ಮತ್ತು ಕೆಲವು ನಗರಗಳು ಮತ್ತು ಪಟ್ಟಣಗಳಲ್ಲಿ ಸ್ಥಳೀಯ ಸರ್ಕಾರಗಳು ಮುನಿಸಿಪಲ್ ವೈ-ಫೈ ನೆಟ್ವರ್ಕ್ಗಳನ್ನು ಸ್ಥಾಪಿಸುತ್ತಿವೆ. 2006ರ ವೇಳೆಗೆ, ಕೆಲವು ದೇಶಗಳಲ್ಲಿ HSDPA ಮತ್ತು EV-DO ತಂತ್ರಜ್ಞಾನಗಳನ್ನು ಬಳಸಿಕೊಂಡ ಬ್ರಾಡ್ಬ್ಯಾಂಡ್ ಮೊಬೈಲ್ ಇಂಟರ್ನೆಟ್ ಸಂಪರ್ಕ ಗ್ರಾಹಕರ ಮಟ್ಟದಲ್ಲಿ ಲಭ್ಯವಾಗುತ್ತಿವೆ. ಮೊಬೈಲ್ ಮತ್ತು ಸ್ಥಿರ ಬ್ರಾಡ್ಬ್ಯಾಂಡ್ ಸಂಪರ್ಕಕ್ಕಾಗಿ ಅಭಿವೃದ್ಧಿ ಪಡಿಸಲಾಗಿರುವ ಹೊಚ್ಚ ಹೊಸ ತಂತ್ರಜ್ಞಾನವೆಂದರೆWiMAX.
DSL (ADSL/SDSL)
[ಬದಲಾಯಿಸಿ]ಬಹುಸಂಪರ್ಕ ಮೊಡೆಮ್ಗಳು
[ಬದಲಾಯಿಸಿ]ಬಹುಸಂಪರ್ಕ ತಂತ್ರಜ್ಞಾನದ ಮೂಲಕ ಡಯಲ್ ಅಪ್ ದರವನ್ನು ಹೆಚ್ಚು ಕಡಿಮೆ ಇಮ್ಮಡಿಗೊಳಿಸಬಹುದು. ಇದಕ್ಕೆ ಬೇಕಾಗಿರುವುದು ಎರಡು ಮೊಡೆಮ್ಗಳು ಎರಡು ದೂರವಾಣಿ ಸಂಪರ್ಕಗಳು, ಎರಡು ಡಯಲ್ ಅಪ್ ಅಕೌಂಟ್ಗಳು ಮತ್ತು ಬಹು ಸಂಪರ್ಕಕ್ಕಾಗಿ ISP ಬೆಂಬಲ ಅಥವಾ ಬಳಕೆದಾರನ ಬದಿಗೆ ವಿಶೇಷ ಸಾಫ್ಟ್ವೇರ್ ತಂತ್ರಜ್ಞಾನ. ISDN, DSL ಮತ್ತು ಇತರೆ ತಂತ್ರಜ್ಞಾನಗಳು ಲಭ್ಯವಾಗುವುದಲ್ಲಿ ಮೊದಲು ಕೆಲವು ಉನ್ನತ ಬಳಕೆದಾರರ ನಡುವೆ ಈ ಇನ್ವರ್ಸ್ ಮಲ್ಟಿಪ್ಲೆಕ್ಸಿಂಗ್ ಆಯ್ಕೆ ಜನಪ್ರಿಯವಾಗಿತ್ತು.
ಡೈಮಂಡ್ ಮತ್ತು ಇತರೆ ಮಾರಾಟಗಾರರು ಬೌಂಡಿಂಗ್ ಸಾಮರ್ಥ್ಯದೊಂದಿಗೆ ಡ್ಯುಯಲ್ ಫೋನ್ ಲೈನ್ ಮೊಡೆಮ್ಗಳನ್ನು ಸೃಷ್ಟಿಸಿದವು. ಡ್ಯುಯಲ್ ಫೋನ್ ಲೈನ್ ಮೊಡೆಮ್ನ ಮಾಹಿತಿ ದರ ಸೆಕೆಂಡ್ಗೆ 90 kbit/s ಗಳಿಗಿಂತ ವೇಗವಾಗಿತ್ತು. ಇಂಟರ್ನೆಟ್ ಮತ್ತು ಫೋನಿನ ಛಾರ್ಜು ಸಾಮಾನ್ಯ ಡಯಲ್ ಅಪ್ ಛಾರ್ಜ್ಗಿಮ್ತ ದುಪ್ಪಟ್ಟು ಇರುತ್ತದೆ.
ಎರಡು ಇಂಟರ್ನೆಟ್ ಸಂಪರ್ಕಗಳನ್ನು ತೆಗೆದುಕೊಳ್ಳುವ ಲೋಡ್ ಬ್ಯಾಲೆನ್ಸಿಂಗ್ ಹಾರ್ಡ್ವೇರ್ ಕಡಿಮೆ ಲೋಡ್ ಇರುವ ಅಂದರೆ ಒಂದು ಲೈನು ವಿಫಲವಾದ ಪಕ್ಷದಲ್ಲಿ ಇನ್ನೊಂದು ಲೈನಿನ ಜೊತೆಗೆ ಸ್ವಯಂ ಸಂಪರ್ಕ ಪಡೆದುಕೊಂಡು ಸಂಪರ್ಕ ಕಡಿತಗೊಳ್ಳದಂತೆ ನೋಡಿಕೊಳ್ಳುತ್ತದೆ.
ISDN
[ಬದಲಾಯಿಸಿ]ಇಂಟಿಗ್ರೇಟೆಡ್ ಸರ್ವಿಸ್ ಡಿಜಿಟಲ್ ನೆಟ್ವರ್ಕ್ನ (ISDN ) ಗ್ರಾಹಕರು ಮತ್ತು ವಾಣಿಜ್ಯ ಕೆಲಸಗಳಿಗೆ ಇಂಟರ್ನೆಟ್ ಸಂಪರ್ಕ ಪಡೆದುಕೊಳ್ಳಲು ಇರುವ ಅತಿ ಹಳೆಯ ಬ್ರಾಡ್ಬ್ಯಾಂಡ್ ಡಿಜಿಟಲ್ ಸಂಪರ್ಕ ವಿಧಾನಗಳ ಪೈಕಿ ಒಂದು. ಅದು ಟೆಲಿಫೋನ್ ಡಾಟಾ ಸರ್ವಿಸ್ ಸ್ಟ್ಯಾಂಡರ್ಡ್. DSL ಮತ್ತು ಕೇಬಲ್ ಮೋಡೆಮ್ ತಂತ್ರಜ್ಞಾನಗಳು ಲಭ್ಯವಾಗುವುದಕ್ಕೆ ಮೊದಲು 1990ರ ಕೊನೆಯ ಭಾಗದಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ಅಥವಾ ಬಳಕೆ ತಾರಕಕ್ಕೆ ಏರಿತ್ತು. ಬ್ರಾಡ್ಬ್ಯಾಂಡ್ ಸೇವೆಯನ್ನು ಸಾಮಾನ್ಯವಾಗಿ ISDN-BRIಗೆ ಹೋಲಿಸಲಾಗುತ್ತದೆ ಏಕೆಂದರೆ ಇದು ಈ ಮೊದಲಿನ ಬ್ರಾಡ್ಬ್ಯಾಂಡ್ ಪೂರಕಗಳು ಎದುರಿಸಿದ ಸವಾಲುಗಳಿಗೆ ಮೂಲಾಧಾರವನ್ನು ಕಲ್ಪಿಸಿಕೊಟ್ಟ ಸ್ಟ್ಯಾಂಡರ್ಡ್ ಬ್ರಾಡ್ಬ್ಯಾಂಡ್ ಸಂಪರ್ಕ ತಂತ್ರಜ್ಞಾನ. ಈ ಪೂರಕಗಳು ಗ್ರಾಹಕರಿಗೆ ವೇಗದ ಮತ್ತು ಅಗ್ಗದ ಸೇವೆಗಳನ್ನು ಕೊಡುವ ಮೂಲಕ ISDNನ ಎದುರು ಸ್ಪರ್ಧೆಗಿಳಿಯುವ ಬಯಕೆ ಹೊಂದಿತ್ತು.
ಪ್ರಾಥಮಿಕ ವೇಗದರ ISDN ಲೈನು( ISDN-BRI ಎಂದು ಕರೆಯಲಾಗುವ) 2 ಡಾಟಾ "ಬೇರರ್" ಛಾನಲ್ಲುಗಳನ್ನು channels (ತಲಾ DS0 - 64 kbit/s ) ಹೊಂದಿರುವ ISDN ಲೈನು.
ISDN ಟರ್ಮಿನಲ್ ಅಡಾಪ್ಟರುಗಳನ್ನು (ಅಂದಾಜಿನ ಮೇಲೆ ಮೋಡಮ್ ಎಂದು ಕರೆಯಲಾಗುವೆ), ಬಳಸಿಕೊಂಡು ಸೆಕೆಂಡಿಗೆ 256kbit/s ಅಥವಾ ಅದಕ್ಕಿಂತ ಹೆಚ್ಚು ಬ್ಯಾಂಡ್ವಿಡ್ತನ್ನು ತಲುಪಲು 2 ಅಥವಾ ಅದಕ್ಕಿಂತ ಹೆಚ್ಚು ISDN-BRI ಲೈನುಗಳನ್ನು ಒಂದು ಗೂಡಿಸಲು ಸಾಧ್ಯ. The ISDN channel bonding technology has been used for video conference applications and broadband data transmission.
ISDN-PRI ಎಂದು ಹೆಸರಿಸಲಾಗಿರುವ ಪ್ರಾಥಮಿಕ ದರದ ISDN 23 DS0 ಛಾನಲ್ಲುಗಳಿರುವ ಮತ್ತು ಒಟ್ಟು ಸೆಕೆಂಡಿಗೆ 1,544 kbit/s (US ಸ್ಟ್ಯಾಂಡರ್ಡ್)ಬ್ಯಾಂಡ್ ವಿಡ್ತ್ ಸಾಮರ್ಥ್ಯವಿರುವ ISDN ಲೈನ್ . ISDN E1 (ಯೂರೋಪಿಯನ್ ಸ್ಟ್ಯಾಂಡರ್ಡ್) ಲೈನ್ 30 DS0 ಛಾನಲ್ಲುಗಳಿರುವ ಮತ್ತು ಒಟ್ಟು ಸೆಕೆಂಡಿಗೆ 2,048 kbit/s ಬ್ಯಾಂಡ್ವಿಡ್ತ್ ಇರುವ ISDN ಲೈನ್. ISDN ಟೆಲಿಫೋನ್ ಆಧಾರಿತ ಉತ್ಪನ್ನವಾಗಿರುವುದರಿಂದ ಅದರ ಅನೇಕ ಶಬ್ಧಗಳು ಮತ್ತು ಲೈನಿನ ಭೌತಿಕ ಆಯಾನುಗಳಾನ್ನು ಧ್ವನಿ ಸೇವೆಗಾಗಿ ಬಳಸಿಕೊಳ್ಳುವ ISDN-PRIಗಳು ಹಂಚಿಕೊಳ್ಳುತ್ತವೆ. ಆದ್ದರಿಂದ ISDN ಲೈನ್ ಯಾವುದೇ ನಿರ್ಧಿಷ್ಟ ಅಳವಡಿಕೆಯಲ್ಲಿ ಬಳಸಲಾಗಿರುವ ಸಾಧನ ಮತ್ತು ಟೆಲಿಫೋನ್ ಕಂಪನಿಯ ಕೇಂದ್ರ ಕಚೇರಿಯು ಒದಗಿಸುವ ಸ್ವಿಚ್ಚಿನ ಆಧಾರದ ಮೇಲೆ ಅದನ್ನು ಧ್ವನಿ ಅಥವಾ ಮಾಹಿತಿ ಮತ್ತು ವಿಭಿನ್ನವಾದ ಅನೇಕ ಆಯ್ಕೆಗಳಿಗಾಗಿ "ಪ್ರಾವಿಷನ್ ಮಾಡಲಾಗಿದೆ". ಬಹುತೇಕ ISDN-PRIಗಳನ್ನು ಮಾಹಿತಿಯ ಬದಲು PBX ವ್ಯವಸ್ಥೆಗಳನ್ನು ಬಳಸಿಕೊಂಡು ಟೆಲಿಫೋನ್ ಧ್ವನಿ ಸಂವಹನಕ್ಕಾಗಿ ಉಪಯೋಗಿಸಲಾಗುತ್ತಿದೆ. ಇರುವ ಒಂದು ಅನಿವಾರ್ಯ ಹೊರಪಡಿಕೆ ಎಂದರೆ ISDN ಮಾಹಿತಿ ಮತ್ತು ಮೋಡೆಮ್ ಕರೆಗಳನ್ನು ನಿರ್ವಹಿಸಲು ISPಗಳಿಗೆ ಸಾಮಾನ್ಯವಾಗಿ ISDN-PRIಗಳು ಇರುತ್ತವೆ.
ಈ ಮೊದಲಿನ ISDN ಡಾಟಾಲೈನುಗಳು ಸೆಕೆಂಡಿಗೆ 64kbit ಗಳ ಮಾಹಿತಿಯ 'B ' ಛಾನಲ್ಗಳಿಗೆ ಬದಲಾಗಿ ಸೆಕೆಂಡಿಗೆ 56kbit /sಗಳನ್ನು ಬಳಸಿಕೊಂಡಿದ್ದು ಪ್ರಮುಖವಾಗಿ ಒಂದು ಚಾರಿತ್ರಿಕ ಹಿತಾಸಕ್ತಿ. ಕೇಂದ್ರೀಯ ಕಚೇರಿಯ ಸ್ಟಿಚಿಂಗ್ ಸಾಧನವನ್ನು ಅವಲಂಬಿಸಿ ಇದು ಸೆಕೆಂಡ್ಗೆ 128 kbit/s ಮತ್ತು 112 kbit/s ದರಗಳ ISDN-BRIಯನ್ನು ಒದಗಿಸಿತು.
ಪ್ರಯೋಜನಗಳು
- ಪ್ರತಿ DSO ಚಾನಲ್ಗೆ ಸೆಕೆಂಡಿಗೆ 64 kbit/sನಷ್ಟು ಸ್ಥಿರ ಮಾಹಿತಿ ದರ.
- ADSLನಲ್ಲಿ ಇಲ್ಲದಂಟೆ ದ್ವಿಮುಖೆ ಬ್ರಾಡ್ಬ್ಯಾಂಡ್ ಸಿಮೆಟ್ರಿಕ್ ಮಾಹಿತಿ ಪ್ರಸರಣ
- ಇನ್ನೊಂದು ಡಾಟಾ ಚಾನಲ್ಲಿನ ಮಾಹಿತಿ ಪ್ರಸರಣಕ್ಕೆ ಅಡ್ಡಿಯಾಗದಂತೆ ಒಂಡು ಡಾಟಾ ಚಾನಲ್ಲನ್ನು ಟೆಲಿಫೋನ್ ಸಂಭಾಷಣೆಗೆ ಬಳಸಬಹುದು. ಫೋನ್ಕರೆ ಕೊನೆಗೊಂಡಾಗ ಬೇರರ್ ಚಾನಲ್ ತಕ್ಷಣ ಡಯಲ್ ಮಾಡಿ ಮಾಹಿತಿ ಕರೆಗೆ ತನಗೆ ತಾನೇ ಮರು ಸಂಪರ್ಕ ಪಡೆದುಕೊಳ್ಳಬಲ್ಲದು.
- ವೇಗದ ಕರೆವ್ಯವಸ್ಥೆ
- ಕಡಿಮೆ ಲೇಟೆನ್ಸಿ
- ISDN ಧ್ವನಿ ಸ್ಪಷ್ಟತೆ ಇತರೆ ಫೋನ್ ಸೇವೆಗಳಲ್ಲಿ ಇಲ್ಲದಷ್ಟು ಸರಿಸಾಟಿ.
- ಹೆಚ್ಚುವರಿ ಶುಲ್ಕವಿಲ್ಲದೆ ಕಾಲರ್ ID ಹೆಚ್ಚು ಕಡಿಮೆ ಯಾವಾಗಲೂ ಲಭ್ಯ.
- ಕೇಂದ್ರ ಕಚೇರಿಯಿಂದ ಇರುವ ದೂರ DSLಗಿಂತಲೂ ಹೆಚ್ಚು.
- ISDN-BRIನ್ನು ಬಳಸುವಾಗ ಪ್ಯಾಕೆಟ್ ಡಾಟಾ ಮತ್ತು ಸದಾ ಸಾಮರ್ಥ್ಯದ ಸೆಕೆಂಡಿಗೆ 16kbit /sಗಳ ಕಡಿಮೆ ಸಾಮರ್ಥ್ಯದ "D" ಚಾನಲ್ ಬಳಕೆಯ ಸಾಧ್ಯತೆ ಇರುತ್ತದೆ.
ಅನಾನುಕೂಲಗಳು
- ವೇಗದ ಮತ್ತು ಅಗ್ಗದ ಪರ್ಯಾಯಗಳ ಬಳಕೆಯಿಂದ ಮಾರುಕಟ್ಟೆಯಲ್ಲಿ ISDN ಕೊಡುಗೆಗಳು ಒಂದಾಗುತ್ತವೆ.
- ISDN ರೂಟರ್ಸ್, ಟರ್ಮಿನಲ್ ಅಡಾಪ್ಟರ್ಗಳು ("ಮೊಡೆಮ್ಗಳು"), ಮತ್ತು ಟೆಲಿಫೋನ್ಗಳು ಡಯಲ್-ಅಪ್ ಮೊಡೆಮ್ನಂತಹ ಸಾಮಾನ್ಯ POTS ಸಲಕರಣೆಗಳಿಗಿಂತ ಹೆಚ್ಚು ದುಬಾರಿ.
- ಅನೇಕ ಆಯ್ಕೆಗಳು ಲಭ್ಯವಿರುವುದರಿಂದ ISDN ಪ್ರಾವಿಷನಿಂಗ್ ಸಂಕೀರ್ಣವಾಗಬಹುದು.
- ISDN ಬಳಕೆದಾರರು ISDN ಇಂಟರ್ನೆಟ್ ಸೇವೆ ಒದಗಿಸುವ ಪ್ರೊವೈಡರ್ಗೆ ಡಯಲ್ ಮಾಡಬೇಕು, ಅಂದರೆ ಆಗ ಟೆಲಿಫೋನ್ ಸಂಪರ್ಕ ಕಡಿತಗೊಳ್ಳುತ್ತದೆ.
- ISDNನ್ನು ಫೋನ್ ಲೈನಿನಂತೆ ಶುಲ್ಕ ವಿಧಿಸಲಾಗುತ್ತದೆ, ಇದಕ್ಕೆ ISDN ಇಂಟರ್ನೆಟ್ ಶುಲ್ಕವನ್ನು ಕೂಡ ಸೇರಿಸಲಾಗುತ್ತದೆ.
- "ಸದಾ ಸಿದ್ಧವಾದ" ಮಾಹಿತಿ ಸಂಪರ್ಕಗಳು ಎಲ್ಲಾ ಸ್ಥಳಗಳಲ್ಲೂ ಸಿಗುವುದಿಲ್ಲ.
- ಕೆಲವು ಟೆಲಿಫೋನ್ ಕಂಪನಿಗಳು ಕಾಲ್ಸೆಟ್ಅಪ್ ಶುಲ್ಕ ಪ್ರತಿ ನಿಮಿಷದ ಶುಲ್ಕ ಮತ್ತು ಇತರೆ ಸೇವೆಗಳಿಗಾಗಿ ಸಾಮಾನ್ಯಕ್ಕಿಂತ ಹೆಚ್ಚಿನ ದರಗಳು ಸೇರಿದಂತೆ ಅಸಾಮಾನ್ಯ ಶುಲ್ಕಗಳನ್ನು ವಿಧಿಸುತ್ತವೆ.
T-1/DS-1
[ಬದಲಾಯಿಸಿ]ಇವು ವ್ಯಾಪಾರಕ್ಕಾಗಿ ಸಾಂಪ್ರದಾಯಿಕವಾಗಿ ಉದ್ದೇಶಿಸಿದ ಹೆಚ್ಚು ನಿಯಂತ್ರಿತವಾದ ಸೇವೆಗಳು ಇವುಗಳಾನ್ನು ಪ್ರತಿ ರಾಜ್ಯದ ಸಾರ್ವಜನಿಕ ಸೇವಾ ಆಯೋಗಗಳ (PSCs) ಮೂಲಕ ನಿರ್ವಹಿಸಲಾಗುತ್ತದೆ. ಇವುಗಳನ್ನು PSCಯ ತಾರಿಫ್ ದಾಖಲೆಗಳಲ್ಲಿ, ಸಂಪೂರ್ಣವಾಗಿ ನಿರೂಪಿಸಿರಬೇಕು, ಟೆರಿಟೈಪ್ಗಳನ್ನು ಪ್ರಚ್ಛನ್ನ ಸಂಪರ್ಕ ಸಾಧನಗಳೆಂದು ಈಗಲೂ ಹೇಳಲಾಗುತ್ತಿರುವ, 1980ಕ್ಕೂ ಹಿಂದಿನ ನಿರ್ವಹಣಾ ಕಾನೂನುಗಳಿವೆ. ಅಂತಹ T-1 ಸೇವೆಗಳು ತುಂಬಾ ಕಠಿಣ ಮತ್ತು ಪೆಡಸಾದ ಸೇವಾ ಅವಶ್ಯಕತೆಗಳನ್ನು ಹೊಂದಿವೆ. ಇವು ಸೇವಾ ವ್ಯವಸ್ಥೆಗಳ ನಿರ್ವಹಣೆ ವೆಚ್ಚವನ್ನು ಹೆಚ್ಚಿಸುತ್ತವೆ ಮತ್ತು ದೋಷಗಳಿರುವ ಸೇವಾ ಮಾರ್ಗಗಳನ್ನು ದುರಸ್ತಿ ಪಡಿಸಲು 24 ಗಂಟೆಗಳ ಕಾಲವೂ ತಂತ್ರಜ್ಞರು ಬೇಕಾಗಬಹುದು. (ಹೋಲಿಸಿ ನೋಡಿದರೆ, ISDN ಮತ್ತು DSLಗಳ ಮೇಲೆ PSCಯ ನಿಯಂತ್ರಣವೇ ಇಲ್ಲ) T-1 ಲೈನುಗಳ ದುಬಾರಿ ಮತ್ತು ನಿಯಂತ್ರಣ ಸ್ವಭಾವದಿಂದಾಗಿ ಸಾಮಾನ್ಯವಾಗಿ ಅವುಗಳನ್ನು ಲಿಖಿತ ಒಪ್ಪಂದಗಳಡಿ ಅಳವಡಿಸಲಾಗುತ್ತವೆ, ಒಪ್ಪಂದದ ಅವಧಿ ಸಾಧಾರಣವಾಗಿ ಒಂದರಿಂದ ಮೂರುವರ್ಷಗಳು. ಆದರೂ, ಅವು T-1 ಬಳಕೆಯ ಅಂತಿಮ ಬಳಕೆದಾರರಿಗೆ ಸಾಮಾನ್ಯವಾಗಿ ಕೆಲವೇ ನಿರ್ಬಂಧಗಳಿರುತ್ತವೆ, ಅಪ್ಟೈಮ್ ಮತ್ತು ಬ್ಯಾಂಡ್ವಿಡ್ತ್ ಮಾಹಿತಿ ದರಗಳನ್ನು ಖಚಿತಪಡಿಸಲಾಗಿದೆ, ಸೇವೆಯ ಗುಣಮಟ್ಟದ ಬೆಂಬಲವಿರಬಹುದು ಮತ್ತು ಸ್ಥಿರವಾದ IP ವಿಳಾಸಗಳ ಬ್ಲಾಕ್ಗಳನ್ನು ಸಾಮಾನ್ಯವಾಗಿ ಒಳಗೊಂಡಿರುತ್ತವೆ.
ಮೂಲಕಲ್ಪ T-1ನ ಧ್ವನಿಪ್ರಸರಣಕ್ಕಾಗಿ ರೂಪಿಸಿಕೊಂಡಿದ್ದರಿಂದ T-1 ಧ್ವನಿ ಸೇವೆಗಳನ್ನು ವ್ಯಾಪಾರ ವಹಿವಾಟಿನಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತವೆ, ಪ್ರಾರಂಭಿಕ ಚಂದಾದಾರರಿಗೆ ಇದು ಗೊಂದಲ ಉಂಟುಮಾಡಬಹುದು. ಈ ಎರಡರ ನಡುವಿನ ವ್ಯತ್ಯಾಸಗಳನ್ನು ಕಾಣಲು ಸೂಕ್ತ "ಡಾಟಾ" ಅಥವಾ "ಧ್ವನಿ"ಯ ಪ್ರಿಫಿಕ್ಸ್ಗಳನ್ನು ಬಲಸಿ, ಪರಿಗಣಿಸಲ್ಪಟ್ಟಿರುವ T-1ನ್ನು ಉಲ್ಲೇಖಿಸುವುದು ಉತ್ತಮ. PSTNನೊಂದಿಗೆ ಸಂಪರ್ಕ ಹೊಂದಲು ವಾಯ್ಸ್ T-1 ಫೋನಿನ ಕೇಂದ್ರ ಕಚೇರಿ(CO)ಯಲ್ಲಿ ಅಮಾನತುಗೊಳ್ಳುತ್ತವೆ; ಡಾಟಾ T-1 ಪಾಯಿಂಟ್ ಆಫ್ ಪ್ರೆಸೆನ್ಸ್(POP)ವಿನಲ್ಲಿ ಅಥವಾ ಡಾಟಾ ಸೆಂಟರ್ನಲ್ಲಿ ಅಮಾನತುಗೊಳ್ಳುತ್ತದೆ. ಗ್ರಾಹಕನ ಸ್ಥಳ ಮತ್ತು POP ಅಥವಾ COಗಳ ನಡುವೆ ಇರುವ T-1ಲೈನನ್ನು ಸ್ಥಳೀಯ ಸಂಪರ್ಕ ಎಂದು ಕರೆಯಲಾಗುತ್ತದೆ. ಸ್ಥಳೀಯ ಸಂಪರ್ಕದ ಮಾಲೀಕ ನಿಮ್ಮ T-1 , POP ಗೆ ಸಂಪರ್ಕ ಹೊಂದುವಲ್ಲಿ ಇರುವ ನೆಟ್ವರ್ಕ್ ಮಾಲೀಕನೇ ಆಗಿರಬೇಕೆಂದಿಲ್ಲ, ಮತ್ತು T-1ನ ಚಂದಾದಾರ ಈ ಎರಡೂ ಸಂಸ್ಥೆಗಳ ಜೊತೆಗೆ ಪ್ರತ್ಯೇಕ ಕರಾರುಗಳನ್ನು ಹೊಂದಿರಬಹುದು.
T-1ನ ನಾಮಕರಣ ವ್ಯವಸ್ಥೆ ವಿಸ್ತೃತವಾಗಿ ಏರಿಳಿತಗೊಳ್ಳುತ್ತವೆ, ಕೆಲವು ವಲಯಗಳಲ್ಲಿ DS-1, a T1.5, a T1, ಅಥವಾ a DS1 ಎಂದು ಕರೆಯಲಾಗುತ್ತದೆ. ಇವುಗಳಲ್ಲಿ ಕೆಲವು a DS-1ನ ಸ್ಟ್ಯಾಂಡರ್ಡ್ ಮತ್ತು T-1 ಅಥವಾ T-1.5ನ ಭೌತಿಕ ರಚನೆಯನ್ನು ಪರಿಗಣಿಸಿ ಟ್ರಂಕ್ ಲೈನಿನ ವಿವಿಧ ಆಯಾಮಗಳನ್ನು ವಿಶಿಷ್ಟೀಕರಿಸಲು ಪ್ರಯತ್ನಿಸುತ್ತದೆ. ಇವುಗಳನ್ನು ಲೀಸ್ಡ್ ಲೈನ್ಗಳು ಎಂದು ಕೂಡಾ ಕರೆಯಲಾಗುತ್ತದೆ, ಆದರೆ ಆ ಶಬ್ಧ ಸಾಮಾನ್ಯವಾಗಿ ಸೆಕೆಂಡಿಗೆ 1.5 Mbit/s ಮಾಹಿತಿ ದರಕ್ಕೆ ಅನ್ವಯಿಸುತ್ತದೆ. ಒಂದೊಂದು ಸಲ T-1 ಅನ್ನು "ಲೀಸ್ಡ್ ಲೈನ್" ಎಂಬ sಬ್ಧಕ್ಕೆ ಸೇರಿಸಬಹುದು ಅಥವಾ ಅದರಿಂದ ಹೊರತುಪಡಿಸಬಹುದು. ಅದನ್ನು ಏನೆಂದಾದರೂ ಕರೆಯಲಿ ಅದು T-3, SONET OC-3, ಮತ್ತು ಇತರೆ T-carrier ಮತ್ತು Optical Carrierಗಳನ್ನು ಒಳಗೊಂಡ ಇತರೆ ಬ್ರಾಡ್ಬ್ಯಾಂಡ್ ಸಂಪರ್ಕ ವಿಧಾನಗಳಿಗೆ ಅಂತರ್ಗತವಾಗಿ ಸಂಬಂಧಿಸಿದ್ದಾಗಿದೆ. ಇದರ ಜೊತೆಗೆ T-1ನ್ನ , T-1ಗಿಂತ ನಿಖರವಾಗಿ 4 ಪಟ್ಟು ಹೆಚ್ಚು ಬ್ಯಾಂಡ್ ವಿಡ್ತ್ ಇರುವ nxT-1ನ ಜೊತೆಗೆ ಒಟ್ಟಾಗಿಡಬಹುದು.
T-1 ಅನ್ನು ಇನ್ಸ್ಟಾಲ್ ಮಾಡಿದಾಗ ಆಯ್ಕೆ ಮಾಡಿಕೊಂಡ ಕ್ಯಾರಿಯರ್ನಲ್ಲಿ ಕೊಳ್ಳಬೇಕಾದ ಅನೇಕ ಆಯ್ಕೆಗಳಿರುತ್ತವೆ, ಡಿಮಾರ್ಕೇಶನ್ ಪಾಯಿಂಟ್ನ ಸ್ಥಳ, ಚಾನಲ್ ಸರ್ವಿಸ್ ಘಟಕದ ಮಾದರಿ (CSU) ಅಥವಾ ಬಳಸಿದ ಡಾಟಾ ಸರ್ವಿಸ್ ಘಟಕ (DSU), ಬಳಸಿದ WAN IP ರೂಟರ್, ಆಯ್ಕೆ ಮಾಡಿಕೊಮ್ಡ ಬ್ಯಾಂಡ್ವಿಡ್ತ್ಗಳ ಮಾದರಿ ಇತ್ಯಾದಿ, ವಿಶೇಷ ಪರಿಣತಿ ಇರುವ WAN ರೂಟರ್ಗಳನ್ನು ಇಂಟರ್ನೆಟ್ ರೂಟನ್ನು ರೂಪಿಸುವ T-1 ಲೈನ್ಗಳ ಜೊತೆಗೆ ಅಥವಾ ಕಸ್ಟಮರ್ ಪ್ರಿಮೈಸಸ್ ಇಕ್ವಿಪ್ಮೆಂಟ್ (CPE) ಬಳಸಿಕೊಂಡು ಗ್ರಾಹಕರ ಪ್ಯಾಕೆಟ್ ಬೇಸ್ಡ್ (TCP/IP) ನೆಟ್ವರ್ಕ್ಗೆ VPN ಮಾಹಿತಿಯನ್ನು T-1 ಲೈನ್ಗೆ ಪ್ರಸರಿಸುತ್ತದೆ. ಸ್ಪೆ, CSU/DSUಗಳನ್ನು ಒಳಗೊಂಡಿದ್ದು, ಅದು T-1ನ DS-1 ಮಾಹಿತಿ ಪ್ರವಾಹವನ್ನು ಗ್ರಾಹಕನ ಎಥರ್ನೆಟ್ LANನ ಬಳಕೆಗಾಗಿ TCP/IP ಪ್ಯಾಕೆಟ್ ಮಾಹಿತಿ ಪ್ರವಾಹಕ್ಕೆ ಪರಿವರ್ತಿಸುತ್ತದೆ. ಅನೇಕ T-1 ಸೇವೆ ಒದಗಿಸುವವರು CPEಯನ್ನು ಸೇವಾ ಒಪ್ಪಂದದ ಭಾಗ ಎಂಬಂತೆ ಮಾರಾಟ ಮಾಡುತ್ತಾ ಬಂದಿದ್ದಾರೆ, ಇದು CSU, ಅಥವಾ DSU ರೂಟರ್ನ ಒಡೆತನ ಮತ್ತು ಡಿಮಾರ್ಕೇಷನ್ ಪಾಯಿಂಟ್ ಮೇಲೆ ಪರಿಣಾಮ ಬೀರುತ್ತದೆ.
T-1 ಸೆಕೆಂಡಿಗೆ ಗರಿಷ್ಟ 1.544 Mbit/s ಅನ್ನು ಹೊಂದಿದ್ದರೂ, ಬ್ಯಾಂಡ್ವಿಡ್ತ್ಗೆ ಸೆಕೆಂಡ್ಗೆ 128 kbit/s ಇಂಟೀಜರ್ ಮಲ್ಟಿಪಲ್ ಅನ್ನು ಮಾತ್ರ ಬಳಸಿಕೊಳ್ಳುವ ಫ್ರ್ಯಾಕ್ಷನಲ್ T-1 ಕೊಡುಗೆ ಇರಬಹುದು. ಈ ರೀತಿಯಲ್ಲಿ ಗ್ರಾಹಕ ಅನುಕ್ರಮವಾಗಿ ಸೆಕೆಂಡಿಗೆ 128 kbit/s ಮತ್ತು 512 kbit/s ಇರುವ T-1ನ 1/12th ಅಥವಾ 1/3 ಸಂಪರ್ಕವನ್ನು ಮಾತ್ರ ಖರೀದಿಸಬಹುದು.
T-1 ಮತ್ತು ಫ್ರ್ಯಾಕ್ಷನಲ್ T-1 ಡಾಟಾ ಲೈನ್ಗಳು ಸಿಮೆಟ್ರಿಕ್ ಸ್ವಭಾವ ಹೊಂದಿವೆ, ಅಂದರೆ ಅವುಗಳ ಅಪ್ಲೋಡ್ ಮತ್ತು ಡೌನ್ಲೋಡ್ ಮಾಹಿತಿ ದರ ಒಂದೇ ಆಗಿರುತ್ತದೆ.
ವೈರಿನ ಎಥರ್ನೆಟ್
[ಬದಲಾಯಿಸಿ]ಇದು ಇರುವ ಕಡೆ, ಇಂಟರ್ನೆಟ್ಗೆ ಇರುವ ಈ ಬಗೆಯ ಬ್ರಾಡ್ಬ್ಯಾಂಡ್ ಸಂಪರ್ಕ ವಿಧಾನ ಇಂಟರ್ನೆಟ್ನ ಹೆಚ್ಚು ಸಂಪರ್ಕ ವೇಗವನ್ನು ಸೂಚಿಸುತ್ತದೆ. ಆದಾಗ್ಯೂ ಎಥರ್ನೆಟ್ನ ಕೊಡುಗೆ ಇರುವುದರಿಂದ ಮಾತ್ರ, ನೇರ ಇಂಟರ್ನೆಟ್ ಸಂಪರ್ಕಕ್ಕೆ ಸೆಕೆಂಡಿಗೆ 10, 100, ಅಥವಾ 1000 Mbit/s ಸಾಮರ್ಥ್ಯವನ್ನು ಬಳಸಿಕೊಳ್ಳಲಾಗುವುದಿಲ್ಲ. ಉದಾಹರಣೆಗೆ ಕಾಲೇಜಿನ ಡಾರ್ಮೆಟರಿಯಲ್ಲಿ ಸೆಕೆಂಡಿಗೆ 100 Mbit/s ಎಥರ್ನೆಟ್ ಸಂಪರ್ಕ ಕ್ಯಾಂಪಸಿನ ನೆಟ್ವರ್ಕ್ಗೆ ಪೂರ್ಣವಾಗಿ ಸಿಗುತ್ತಿರಬಹುದು, ಆದರೆ ಇಂಟರ್ನೆಟ್ ಸಂಪರ್ಕದ ಬ್ಯಾಂಡ್ವಿಡ್ತ್ ಸೆಕೆಂಡಿಗೆ 4xT-1 ಡಾಟಾ ರೇಟಿಗೆ ಹತ್ತಿರವಾಗಿರಬಹುದು (6 Mbit/s). ನೀವು ನಿಮ್ಮ ಕಟ್ಟಡದಲ್ಲಿ ಇತರರೊಂದಿಗೆ ಬ್ರಾಡ್ಬ್ಯಾಂಡ್ ಸಂಪರ್ಕವನ್ನು ಹಂಚಿಕೊಳ್ಳುತ್ತಿದ್ದರೆ, ಕಟ್ಟಡಕ್ಕೆ ಒದಗಿಸಿರುವ ಲೀಸ್ಡ್ ಲೈನ್ನ ಬ್ಯಾಂಡ್ವಿಡ್ತ್ ಸಂಪರ್ಕ ಅಂತಿಮ ಬಳಕೆದಾರನ ಮಾಹಿತಿ ವೇಗದರವನ್ನು ನಿಯಂತ್ರಿಸುತ್ತದೆ.
ಕೆಲವು ಪ್ರದೇಶಗಳಲ್ಲಿ ನಿಜವಾದ ಎಥರ್ನೆಟ್ ಬ್ರಾಡ್ಬ್ಯಾಂಡ್ ಸಂಪರ್ಕಗಳು ಸಿಗುತ್ತಿರಬಹುದು. ತುಂಬಾ ಸಾಮಾನ್ಯವಾಗಿ ಇದು POP ಅಥವಾ ಡಾಟಾ ಸೆಂಟರ್ನ ಪ್ರಕರಣ ಮನೆ ಅಥವಾ ವಾಣಿಜ್ಯ ಮಳಿಗೆಯ ಪ್ರಕರಣವಲ್ಲ. ಎಥರ್ನೆಟ್ ಇಂಟರ್ನೆಟ್ ಸಂಪರ್ಕದ ಕೊಡುಗೆ ಇದ್ದರೆ ಅದು ಫೈಬರ್ ಆಪ್ಟಿಕ್ ಅಥವಾ ತಿರುಚಿದ ತಾಮ್ರ ತಂತಿಗಳ ಜೋಡಿ ಸಂಪರ್ಕ ಮತ್ತು ಇದರ ಬ್ಯಾಂಡ್ ವಿಡ್ತ್ ಸೆಕೆಂಡ್ಗೆ 10 Gbit/s ಮಾಹಿತಿ ದರಕ್ಕೆ ಸರಿಸಮವಾಗಿರುತ್ತದೆ. ಇರುವ ಪ್ರಾಥಮಿಕ ಅನುಕೂಲ ಎಂದರೆ ಎಥರ್ನೆಟ್ಗೆ ಯಾವುದೇ ವಿಶೇಷ ಹಾರ್ಡ್ವೇರ್ನ ಅಗತ್ಯವಿಲ್ಲ. ಎಥರ್ನೆಟ್ಗೆ ಇರುವ ಲೇಟೆನ್ಸಿ ಕೂಡಾ ತುಂಬಾ ಕಡಿಮೆ.
ಗ್ರಾಮೀಣ ಬ್ರಾಡ್ಬ್ಯಾಂಡ್
[ಬದಲಾಯಿಸಿ]ಬ್ರಾಡ್ಬ್ಯಾಂಡ್ನ ಬಹುದೊಡ್ಡ ಸವಾಲೆಂದರೆ, ರೈತರು, ರ್ಯಾಂಚರ್ಗಳು ಮತ್ತು ಪುಟ್ಟ ಪಟ್ಟಣಗಳಿಗಿಂತ ವಿರಳ ಜನಸಂಖ್ಯೆ ಇರುವ ಪ್ರದೇಶಗಳಲ್ಲಿರುವ ಸಮರ್ಥ ಗ್ರಾಹಕರಿಗೆ ಒದಗಿಸುವ ಸೇವೆ. ಜನಸಂಖೆಯ್ ದಟ್ಟವಾಗಿರುವ ನಗರಗಳಲ್ಲಿ ಸೇವೆ ಒದಗಿಸುವವರಿಗೆ ಸಲಕರಣೆಗಳ ಬೆಲೆಯನ್ನು ವಸೂಲಿ ಮಾಡಿಕೊಳ್ಳುವುದು ಸುಲಭ ಆದರೆ ಗ್ರಾಮೀಣ ಗ್ರಾಹಕರು ಸಂಪರ್ಕ ಸಾಧನಗಳಿಗೆ ದುಬಾರಿ ಬೆಲೆ ತೆರಬೇಕಾಗುವುದು.
ಅನೇಕ ಗ್ರಾಮೀಣ ಬ್ರಾಡ್ಬ್ಯಾಂಡ್ ಪರಿಹಾರಗಳು ಅಸ್ತಿತ್ವದಲ್ಲಿವೆ, ಆದರೂ ಇವುಗಳಲ್ಲಿ ಅನೇಕ ತೊಡಕು ಮತ್ತು ಮಿತಿಗಳಿವೆ[clarification needed]. ಕೆಲವು ಆಯ್ಕೆಗಳು ಉಳಿದವುಗಳಿಗಿಂತ ಉತ್ತಮ, ಆದರೆ ಇದು ಸ್ಥಳೀಯ ಫೋನ್ ಕಂಪನಿಗಳು ತಮ್ಮ ಗ್ರಾಮೀಣ ತಂತ್ರಜ್ಞಾನವನ್ನು ಹೇಗೆ ಸುಧಾರಿಸುತ್ತಾರೆ ಮತ್ತು ಕ್ರಿಯಾಶೀಲರಾಗಿರುತ್ತಾರೆ ಎಂಬುದನ್ನು ಅವಲಂಬಿಸಿರುತ್ತದೆ.
ವೈರ್ಲೆಸ್ ಇಂಟರ್ನೆಟ್ ಸರ್ವಿಸ್ ಪ್ರೊವೈಡರ್ (WISPs)ಗಳು ಗ್ರಾಮೀಣ ಪ್ರದೇಶದ ಜನಪ್ರಿಯ ಬ್ರಾಡ್ಬ್ಯಾಂಡ್ ಆಯ್ಕೆಗಳಾಗಿವೆ[ಸೂಕ್ತ ಉಲ್ಲೇಖನ ಬೇಕು]. ಈ ತಂತ್ರಜ್ಞಾನದ ಲೈ ಆಫ್ ಸೈಟ್ನ ಅಗತ್ಯಗಳು ಬೆಟ್ಟಗುಡ್ಡ ಪ್ರದೇಶಗಳು ಮತ್ತು ಅಗಾಧವಾದ ವೃಕ್ಷ ಪ್ರದೇಶಗಳಲ್ಲಿ ಸಂಪರ್ಕಕ್ಕೆ ಅಡೆತಡೆ ಉಂಟುಮಾಡಬಹುದು. ಆದರೂ ಸ್ಕಾಟ್ಲ್ಯಾಂಡಿನ ಗ್ರಾಮೀಣ ಪ್ರದೇಶದಲ್ಲಿ ಯಶಸ್ವಿಯಾಗಿರುವ ಪ್ರಾಯೋಗಿಕ ತೆಗೋಲಾ ಪ್ರಾಜೆಕ್ಟ್ ವೈರ್ಲೆಸ್ ಸಂಪರ್ಕ ಪರಿಣಾಮಕಾರಿ ಆಯ್ಕೆ ಎಂಬುದನ್ನು ತೋರಿಸುತ್ತದೆ[೬]. ಇದರ ಜೊತೆಗೆ ಕಠಿಣ ತಂತಿಯ ಸಂಪರ್ಕಕ್ಕೆ ಹೋಲಿಸಿದರೆ ಇದರೆಲ್ಲಿ ಭದ್ರತಾ ಸವಾಲು(ದೃಢವಾದ ಭದ್ರತಾ ಒಪ್ಪಂದಗಳನ್ನು ಮಾಡಿಕೊಳ್ಳದಿದ್ದರೆ)ಗಳಿವೆ, ವೇಗ ಗಣನೀಯವಾಗಿ ಕಡಿಮೆ(2 ರಿಂದ 50ರಷ್ಟು ಕಡಿಮೆ) ಮತ್ತು ಹವಾಮಾನ ಮತ್ತು ಲೈನ್ ಆಫ್ ಸೈಟ್ ಸಮಸ್ಯೆಗಳಿಂದಾಗಿ, ಇತರೆ ವೈರ್ಲೆಸ್ ಸಾಧನಗಳಿಂದಾಗಿ ನೆಟ್ವರ್ಕ್ನ ಸದೃಢತೆ ಹೆಚ್ಚು ದೃಢವಾಗಿರುವುದಿಲ್ಲ.Al[೭]
ಸ್ಯಾಟಲೈಟ್ ಇಂಟರ್ನೆಟ್
[ಬದಲಾಯಿಸಿ]ಜಿಯೋಸ್ಟೇಷನರಿ ಕಕ್ಷೆಯಲ್ಲಿರುವ ಸ್ಯಾಟಲೈಟ್ಗಳು ಸ್ಯಾಟಲೈಟ್ ಕಂಪನಿಯಿಂದ ಪ್ರತಿ ಗ್ರಾಹಕನಿಗೆ ಬ್ರಾಡ್ಬ್ಯಾಂಡ್ ಮಾಹಿತಿ ಪ್ರಸಾರ ಮಾಡುವ ಸಾಮರ್ಥ್ಯ ಹೊಂದಿವೆ. ಸಾಮಾನ್ಯವಾಗಿ ಸಾಟಲೈಟ್ ಇಂಟರ್ನೆಟ್ ಬ್ರಾಂಡ್ಬ್ಯಾಂಡ್ ಸಂಪರ್ಕ ಪಡೆದುಕೊಳ್ಳುವ ತುಂಬಾ ದುಬಾರಿ ವಿಧಾನ, ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಸೆಲ್ಯುಲರ್ ಬ್ರಾಡ್ಬ್ಯಾಂಡ್ ಬಿಟ್ಟರೆ ಇದೊಂದೇ ದಾರಿಯಾಗಬಹುದು. ಆದರೂ ಇತ್ತೀಚಿನ ವರ್ಷಗಳಲ್ಲಿ ಇದರ ಬೆಲೆ ಎಷ್ಟು ಪ್ರಮಾಣದಲ್ಲಿ ಇಳಿಮುಖವಾಗುತ್ತಿದೆ ಎಂದರೆ ಅದು ಇತರೆ ಬ್ರಾಡ್ಬ್ಯಾಂಡ್ ಆಯ್ಕೆಗಳ ಜೊತೆಗೆ ಸ್ಪರ್ಧೆಗಿಳಿಸಿದೆ.
ತರಂಗಾಂತರಗಳು ಸಮುದ್ರ ಮಟ್ಟದಿಂದ 35,786 km (22,236 mi) ಎತ್ತರಕ್ಕೆ (ಈಕ್ವೇಟರ್ನಿಂದ), ಜಿಯೋಸ್ಟೇಷನರಿ ಕಕ್ಷೆಯಲ್ಲಿರುವ ಸ್ಯಾಟಲೈಟಿಗೆ ಮತ್ತೆ ಮರಳಿ ಭೂಮಿಗೆ ಅಗಾಧ ದೂರ ಪ್ರಯಾಣ ಮಾಡಬೇಕಿರುವುದರಿಂದ ಬ್ರಾಡ್ಬ್ಯಾಂಡ್ ಸ್ಯಾಟಲೈಟ್ನ ಲೇಟೆನ್ಸಿ ಕೂಡಾ ಹೆಚ್ಚು. ತಡವಾಗುವ ಸಿಗ್ನಲ್ನ ಪ್ರಮಾಣ 500 ಮಿಲಿಸೆಕೆಂಡ್ನಿಂದ 900ಮಿಲಿಸೆಕೆಂಡ್ನಷ್ಟಿರುತ್ತದೆ. ಇಂಟರ್ನೆಟ್ ಸಂಪರ್ಕಗಳಲ್ಲಿ ಫರ್ಸ್ಟ್ ಪರ್ಸನ್ ಶೂಟರ್ಸ್ ಆಡಲು ಮತ್ತು ಕೆಲವು ಮಲ್ಟಿಪ್ಲೇಯರ್ನಂತಹ ರಿಯಲ್ ಟೈಮ್ಸ್ ಯೂಸರ್ ಇನ್ಪುಟ್ ಅಗತ್ಯ ಉಂಟಾಗಿ ಈ ಸೇವೆಯನ್ನು ಬಳಸಿಕೊಳ್ಳಲು ಅಸಮರ್ಪಕತೆ ಉಂಟಾಗುತ್ತದೆ. ಇದು ಆದಾಗ್ಯೂ ಕೂಡ ಇದರಲ್ಲಿ ಅನೇಕ ಆಟಗಳನ್ನು ಆಡಬಹುದು, ಆದರೆ ಇದರವ್ಯಾಪ್ತಿ ರಿಯಲ್-ಟೈಮ್ ಸ್ಟ್ರ್ಯಾಟೆಜಿ ಅಥವಾ ಟರ್ನ್-ಬೇಸ್ಡ್ ಆಟಗಳಿಗೆ ಮಾತ್ರ ಸೀಮಿತ. ದೂರದ ಕಂಪ್ಯೂಟರ್ಗಲಿಗೆ ಬೇಕಾದ ಲೈವ್ ಇಂಟರ್ಯಾಕ್ಟಿವ್ ಸಂಪರ್ಕ ಕಾರ್ಯಶೀಲತೆ ಕೂಡಾ ಹೆಚ್ಚಿನ ಲೇಟೆನ್ಸಿಯಿಂದ ಸಮಸ್ಯೆಗಳನ್ನು ಎದುರಿಸುತ್ತದೆ. ಕೇವಲ ಈಮೇಲ್ ಸಂಪರ್ಕ ಮತ್ತು ವೆಬ್ ಬ್ರೌಸಿಂಗ್ನಲ್ಲಿ ಈ ಸಮಸ್ಯೆಗಳಾನ್ನು ಸಹಿಸಿಕೊಳ್ಳಬಹುದು ಅಷ್ಟೇ ಮತ್ತು ಅನೇಕ ಪ್ರಕರಣಗಳಾಲ್ಲಿ ಇವು ಎದ್ದು ಕಾಣಿಸುತ್ತವೆ.
ಈ ಸಮಸ್ಯೆಗಳನ್ನು ನಿರ್ಮೂಲನ ಮಾಡಲು ಜಿಯೋಸ್ಟೇಷನ್ ಸ್ಯಾಟಲೈಟ್ಗಲಿಗೆ ದಾರಿಯೇ ಇಲ್ಲ. ಈ ರೀತಿ ತಡವಾಗುವುದು, ತರಂಗಾಂತರಗಳ ಪ್ರಮಾಣದ ಅಗಾಧತೆಯಿಂದ ಬೆಳಕಿನ ವೇಗದಲ್ಲಿ (ಸುಮಾರು 300,000 km/ಸೆಕೆಂಡ್ ಅಥವಾ 186,000 ಮೈಲಿ/ಸೆಕೆಂಡ್) ಕೂಡ ಇದು ಗಣನೀಯ. ಉಳಿದ ಎಲ್ಲಾ ಸಿಗ್ನಲಿಂಗ್ ತಡೆಗಳನ್ನು ನಿರ್ಮೂಲನ ಮಾಡಿದರೂ ಕೂಡಾ ಎಲೆಕ್ಟ್ರೋ ಮ್ಯಾಗ್ನೆಟಿಕ್ ರೇಡಿಯೋ ತರಂಗಾಂತರಂಗಗಳಿಗೆ ಭೂಮಿಯಿಂದ ಸ್ಯಾಟಲೈಟ್ಗೆ ಪ್ರಮಾಣ ಮಾಡಿ ಮತ್ತೆ ಭೂಮಿಗೆ ಹಿಂತಿರುಗಲು 500 ಮಿಲಿಸೆಕೆಂಡ್ಗಳು ಅಥವಾ ಅರ್ಧ ಸೆಕೆಂಡ್ ಸಮಯ ಬೇಕಾಗುತ್ತದೆ, ಮೂಲದಿಂದ ಡೆಸ್ಟಿನೇಷನ್ಗೆ ಒಟ್ಟು 71,400 km (44,366 mi)ಗಿಂತ ಹೆಚ್ಚು ದೂರ ಮತ್ತು ವರ್ತುಲ ಪ್ರಯಾಣಕ್ಕೆ (ಶೂನ್ಯ ಪ್ರಮಾಣದ ನೆಟ್ವರ್ಕ್ ತಡೆಯೊಂದಿಗೆ ಬಳಕೆದಾರನಿಂದ ISPಗೆ ಮತ್ತೆ ಬಳಕೆದಾರನಿಗೆ) 143,000 km (88,856 mi) ನೆಟ್ವರ್ಕ್ ಮೂಲಗಳ ಇತರೆ ಸಹಜ ತಡೆಗಳಾನ್ನು ಅಂಶವನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಅದು ಬಳಕೆದಾರನಿಂದ ISPಗೆ 500–700 ಮಿಲಿಸೆಕೆಂಡ್ನಷ್ಟು ಒನ್ವೇ ಸಂಪರ್ಕದ ಸಾಧಾರಣ ಲೇಟೆನ್ಸಿ ಉಂಟಾಗುತ್ತದೆ, ಅಥವಾ ಮತ್ತೆ ಬಳಕೆದಾರನಿಗೆ ಒಟ್ಟು ರೌಂಡ್ ಟ್ರಿಪ್ ಟೈಮ್ನಲ್ಲಿ (RTT) 1,000–1,400 ಮಿಲಿಸೆಕೆಂಡುಗಳಷ್ಟು ಲೇಟೆನ್ಸಿ ಉಂಟಾಗುತ್ತದೆ. ಇದು ಸಾಧಾರಣವಾಗಿ 150–200 ms ಲೇಟೆನ್ಸಿ ಇರುವ ಬಹುತೇಕ ಡಯಲ್ ಅಪ್ ಸಾಧನಗಳಿಗಿಂತ ಕಳಪೆ.
ಆದರೂ ಮೀಡಿಯಮ್ ಅರ್ಥ್ ಆರ್ಬಿಟ್ (MEO) ಮತ್ತು ಲೋ ಅರ್ಥ್ ಆರ್ಬಿಟ್ (LEO) ಸ್ಯಾಟ್ಲೈಟ್ಗಳಲ್ಲಿ ಅಂತ ದೊಡ್ಡ ತಡೆ ಇರುವುದಿಲ್ಲ. ಗ್ಲೋಬ್ಸ್ಟಾರ್ ಮತ್ತು ಇರಿಡಿಯಂ ಸಾಟಲೈಟ್ಗಳಲ್ಲಿ ಈಗಿರುವ LEO ಕಾನ್ಸ್ಟಲೇಷನ್ಗಳಲ್ಲಿ 40 msಗಿಂತಲೂ ಕಡಿಮೆ ರೌಂಡ್ ಟ್ರಿಪ್ ತಡೆಯಿದೆ, ಆದರೆ ಅವುಗಳ ಒಟ್ಟು ವೇಗ ಪ್ರತಿಛಾನಲ್ಲಿನ 64 kbpsಗಿಂತಲೂ ಕಡಿಮೆ. ಗ್ಲೋಬ್ಸ್ಟಾರ್ ಕಾನ್ಸ್ಟೆಲೇಷನ್ ಭೂಮಿಯಿಂದ 1,420 km ಎತ್ತರದ ಕಕ್ಷೆಯಲ್ಲಿದೆ ಮತ್ತು ಇರಿಡಿಯಮ್ 670 km ಎತ್ತರದಲ್ಲಿದೆ. 2010ರಲ್ಲಿ ಉಡಾವಣೆ ಮಾಡಲು ನಿಗಧಿಯಾಗಿರುವ O3b ನೆಟ್ವರ್ಕ್ನ MEO ಕಾನ್ಸ್ಟಲೇಷನ್ ಭೂಮಿಯಿಂದ 8,062 km ಎತ್ತರದ ಕಕ್ಷೆಯಲ್ಲಿದ್ದು ಇದರಲ್ಲಿ ಸುಮಾರು 125ms ಗಳಷ್ಟು RTT ಲೇಟೆನ್ಸಿ ಇರುತ್ತದೆ. ಈ ಉದ್ದೇಶಿತ ಹೊಸ ನೆಟ್ವರ್ಕ್ ಸೆಕೆಂಡ್ಗೆ 1 Gbpsನಷ್ಟು (ಪ್ರತಿಸೆಕೆಂಡಿಗೆ ಗಿಗಾಬೈಟ್ಗಳು) ಅಧಿಕವೇಗದ ಸಂಪರ್ಕ ಕಲ್ಪಿಸುವಂತೆ ಕೂಡಾ ವಿನ್ಯಾಸ ಮಾಡಲಾಗಿದೆ.
ಬಹುತೇಕ ಸ್ಯಾಟಲೈಟ್ ಇಂಟರ್ನೆಟ್ ಒದಗಿಸುವವರಿಗೆ ಫೇರ್ ಅಕ್ಸೆಸ್ ಪಾಲಿಸಿ FAP ಕೂಡಾ ಇದೆ. ಪ್ರಾಯಶಃ ಸ್ಯಾಟಲೈಟ್ ಇಂಟರ್ನೆಟ್ನ ಬಹುದೊಡ್ಡ ಅನಾನುಕೂಲ ಎಂದರೆ ಈ FAP ಸಾಮಾನ್ಯವಾಗಿ ಬಳಕೆದಾರನ ಡಯಲ್ ಅಪ್ ಡಾಟಾ ರೇಟನ್ನು ನಿರ್ಧಿಷ್ಟ ಅಗೋಚರ ಮಿತಿ ದಾಟಿದ ನಂತರ (ಸಾಮಾನ್ಯವಾಗಿ ದಿನಕ್ಕೆ 200 MB ) ಕಡಿಮೆ ಮಾಡುತ್ತದೆ. ಈ FAP ಸಾಮಾನ್ಯವಾಗಿ ಈ ಮಿತಿಯನ್ನು ಮುಟ್ಟಿದ ನಂತರ 24 ಗಂಟೆಗಳ ಕಾಲ ಉಳಿದಿರುತ್ತವೆ ಮತ್ತು ಬಳಕೆದಾರನ ವೇಗ ಆತ ಯಾವ ಹಂತಕ್ಕೆ ಪಾವತಿ ಮಾಡಿರುತ್ತಾನೋ ಆ ಹಂತಕ್ಕೆ ಮರು ಸ್ಥಾಪಿತಗೊಳ್ಳುತ್ತವೆ. ಇದು ಸಾಧ್ಯವಾದಷ್ಟು ಕಡಿಮೆ ವೇಳೆಯಲ್ಲಿ ಬ್ಯಾಂಡ್ವಿಡ್ತ್ನ ವಿಸ್ತೃತ ಚಟುವಟಿಕೆಗಳಾನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲದಂತೆ ಮಾಡುತ್ತದೆ (ಉದಾಹರಣೆಗೆ ಇದು P2P ಮತ್ತು ನ್ಯೂಸ್ಗ್ರೂಪ್ ಬೈನರಿ ಡೌನ್ಲೋಡಿಂಗ್).
ಯೂರೋಪಿನ ASTRA2ಕನೆಕ್ಟ್ ವ್ಯವಸ್ಥೆ ಮಾಸಿಕ 2Gbyte ಡಾಟಾ ಡೌನ್ಲೋಡಿನ ಮಿತಿ ಆಧಾರದ FAPಯನ್ನು ಹೊಂದಿದೆ, ಈ ವ್ಯವಸ್ಥೆಯಲ್ಲಿ ಒಂದುಪಕ್ಷ ಮಿತಿಯನ್ನು ದಾಟಿದರೆ, ತಿಂಗಳಿನ ಉಳಿದ ದಿನಗಳಾಲ್ಲಿ ಮಾಹಿತಿಯ ಡೌನ್ಲೋಡ್ ಮಾಹಿತಿ ವೇಗವನ್ನು ತಗ್ಗಿಸಲಾಗುತ್ತದೆ. ಇತರೆ ಸ್ಯಾಟಲೈಟ್ ಇಂಟರ್ನೆಟ್ ಕೊಡುಗೆಗಳಲ್ಲಿ ಸ್ಲೈಡಿಂಗ್ ಟೈಮ್ ಆಧಾರಿತ ಆಧುನಿಕ FAP ತಾಂತ್ರಿಕತೆಗಳಿವೆ. ಉದಾಹರಣೆಗೆ ಇದು ಎಂತಹುದೆಂದರೆ ಕೊನೆಯ ಗಂಟೆ, ದಿನ ಮತ್ತು ವಾರಗಳಲ್ಲಿ ಡೌನ್ಲೋಡ್ ಡಾಟಾಗಳನ್ನು ಟೂವೇ ಸೇವೆಗಳಿಗಾಗಿ ಪರಿಶೀಲಿಸಲಾಗುತ್ತದೆ. ಇದರ ಉದ್ದೇಶ ಏನೆಂದರೆ ಅವಶ್ಯಕತೆ ಇರುವಾಗ ತಾತ್ಕಾಲಿಕವಾಗಿ ಅಧಿಕ ಡೌನ್ಲೋಡ್ಗೆ ಅವಕಾಶ ಕಲ್ಪಿಸುವುದು ಮತ್ತು ಇದರ ಜೊತೆಗೆ ತಿಂಗಳ ಕೊನೆಗೆ ಕೊಂಚ ಪ್ರಮಾಣವನ್ನು ಉಳಿಸಿಕೊಳ್ಳುವುದು.[೮].
ಪ್ರಯೋಜನಗಳು
- ನೈಜವಾದ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸಂಪರ್ಕ ದೊರೆಯುವಿಕೆ
- ಇಂಟರ್ನೆಟ್ಗೆ ಮೊಬೈಲ್ ಸಂಪರ್ಕ (ಕೆಲವು ಸೇವಾಕರ್ತರಿಂದ)
ಅನಾನುಕೂಲಗಳು
- ಇತರೆ ಬ್ರಾಡ್ಬ್ಯಾಂಡ್ ಸೇವೆಗಳು, ವಿಶೇಷವಾಗಿ 2 -ವೇ ಸ್ಯಾಟಲೈಟ್ ಸೇವೆಗಳಿಗೆ ಹೋಲಿಸಿದರೆ ಇದರಲ್ಲಿ ಅಧಿಕ ಲೇಟೆನ್ಸಿ ಕಂಡುಬಂದಿದೆ.
- ನಂಬಲು ಸಾಧ್ಯವಿಲ್ಲದ್ದು: ಪ್ರಯಾಣ ಶೀತ ಹವಾಮಾನ ಮತ್ತು ಬಿರುಬಿಸಿಲಿನ ಸಮಯದಲ್ಲಿ ಡ್ರಾಪ್ ಔಟ್ ಸರ್ವೇ ಸಾಮಾನ್ಯ
- ನ್ಯಾರೋ ಬೀಮ್ನ ಹೈಲಿ ಡೈರೆಕ್ಷನಲ್ ಆಂಟೆನಾ ಸ್ಯಾಟಲೈಟ್ನ ಕಕ್ಷೆಯ ಓವರ್ಹೆಡ್ಗೆ ನಿಖರವಾಗಿ ಮುಖಾಮುಖಿಯಾಗಿರಬೇಕು.
- ಫೇರ್ ಅಕ್ಸೆಸ್ ಪಾಲಿಸಿ ಅಧಿಕ ಬಳಕೆಯನ್ನು ಮಿತಿಗೊಳಿಸುತ್ತದೆ.
- ಸರ್ವೀಸ್ ಪ್ರವೈಡರ್ ಇದನ್ನು ಅಳವಡಿಸಿದರೆ VPN ಬಳಕೆ ಅನುತ್ತೇಜಿತಗೊಳ್ಳುತ್ತದೆ, ಬೆಲೆಗೆ ಸಿಗುತ್ತದಾದರೂ ಇದು ಸಮಸ್ಯಾತ್ಮಕ ಮತ್ತು ಸ್ಯಾಟಲೈಟ್ ಬ್ರಾಡ್ಬ್ಯಾಂಡ್ನೊಂದಿಗೆ ನಿರ್ಬಂಧ ಹಾಕಿಕೊಳ್ಳುತ್ತದೆ.
- ಒನ್-ವೇ ಸ್ಯಾಟಲೈಟ್ ಸೇವೆಗೆ ಮೋಡೆಮ್ ಅಥವಾ ಡಾಟಾ ಅಪ್ಲಿಂಕ್ ಸಂಪರ್ಕದ ಅಗತ್ಯ ಉಂಟಾಗುತ್ತದೆ.
- ಸ್ಯಾಟಲೈಟ್ ಡಿಷಸ್ ತುಂಬಾ ದೊಡ್ಡವು. ಇವುಗಳ ತೂಕವನ್ನು ತಗ್ಗಿಸಲು ಪ್ಲಾಸ್ಟಿಕ್ ಬಳಸಿದರೂ ಅವು ಸಾಧಾರಣವಾಗಿ 80 ಮತ್ತು 120 cm (30 ರಿಂದ 48 ಇಂಚುಗಳು) ವ್ಯಾಸದಲ್ಲಿರುತ್ತವೆ.
ಸೆಲ್ಯೂಲರ್ ಬ್ರಾಡ್ಬ್ಯಾಂಡ್
[ಬದಲಾಯಿಸಿ]ಸೆಲ್ಯೂಲರ್ ಫೋನ್ ಟವರ್ಗಲು ವ್ಯಾಪಕವಾಗಿವೆ, ಸೆಲ್ಯುಲರ್ ನೆಟ್ವರ್ಕ್ಗಳು ಮೂರನೇ ತಲೆಮಾರಿನ (3G) ನೆಟ್ವರ್ಕ್ಗಳಿಗೆ ಮುಂದುವರೆದಂಟೆ ಅವು EVDO, HSDPA ಮತ್ತು UMTSನಂತಹ ತಂತ್ರಜ್ಞಾನಗಳನ್ನು ಬಳಸಿಕೊಂಡು ಮಾಹಿತಿ ಪ್ರಸರಣ ವೇಗವನ್ನು ಹೆಚ್ಚಿಸಬಲ್ಲವು.
ಸೆಲ್ಫೋನ್, ಕಾರ್ಡ್ಬಸ್, ಎಕ್ಸ್ಪ್ರೆಸ್ ಕಾರ್ಡ್, ಅಥವಾ USB ಸೆಲ್ಯುಲರ್ ಮೋಡೆಮ್ಗಳು ಅಥವಾ ಸೆಲ್ಯುಲರ್ ಬ್ರಾಡ್ ಬ್ಯಾಂಡ್ ರೂಟರ್ಗಳ ಮೂಲಕ ಇವು ಇಂಟರ್ನೆಟ್ಗೆ ಬ್ರಾಡ್ಬ್ಯಾಂಡ್ ಸಂಪರ್ಕ ಕಲ್ಪಿಸಬಲ್ಲವು, ಇದರಿಂದ ಒಂದು ಸೆಲ್ಯುಲರ್ ಸಂಪರ್ಕದ ಮೂಲಕ ಹಲವು ಕಂಪ್ಯೂಟರ್ಗಳಿಗೆ ಬ್ರಾಡ್ಬ್ಯಾಂಡ್ ಸಂಪರ್ಕ ಕಲ್ಪಿಸಲು ಸಾಧ್ಯವಾಗುತ್ತದೆ.
ಪವರ್-ಲೈನ್ ಇಂಟರ್ನೆಟ್
[ಬದಲಾಯಿಸಿ]ಇದು ಇನ್ನೂ ಬೆಳವಣಿಗೆ ಹಂತದಲ್ಲಿರುವ ಹೊಸ ಸೇವೆಯಾಗಿದ್ದು ಬ್ರಾಡ್ಬ್ಯಾಂಡ್ ಇಂಟರ್ನೆಟ್ ಡಾಟಾವನ್ನು ಸ್ಟ್ಯಾಂಡರ್ಡ್ ಹೈ ವೋಲ್ಟೇಜ್ ಪವರ್ ಲೈನುಗಳ ಮೂಲಕ ಪ್ರಸರಣ ಮಾಡಲು ಸಾಧ್ಯವಾಗುತ್ತದೆ. ಆದರೂ ಈ ವ್ಯವಸ್ಥೆಯಲ್ಲಿ ಅನೇಕ ಸಂಕೀರ್ಣತೆಗಳಿವೆ, ಪ್ರಾಥಮಿಕ ಸಮಸ್ಯೆ ಎಂದರೆ ಈ ಪವರ್ ಲೈನ್ಗಳು ತುಂಬಾ ಗದ್ದಲದ ಪರಿಸರ ಹೊಂದಿರುತ್ತವೆ. ಸಾಧನ ಪ್ರತಿಸಲ ಆನ್ ಅಥವಾ ಆಫ್ ಆದಾಗ ಅದು ಲೈನಿಗೆ ಪಾಪ್ ಅಥವಾ ಕ್ಲಿಕ್ ಉಂಟುಮಾಡುತ್ತದೆ. ಶಕ್ತಿ ಉಳಿತಾಯ ಸಾಧನಗಳು ಅನೇಕ ಸಲ ಲೈನಿನಲ್ಲಿ ಸದ್ದುಳ್ಳ ಹಾರ್ಮೋನಿಕ್ಸ್ ಉಂಟುಮಾಡುತ್ತವೆ. ಈ ನೈಸರ್ಗಿಕ ಸಿಗ್ನಲಿಂಗ್ ಅಡೆತಡೆಗಳನ್ನು ನಿರ್ವಹಿಸುವಂತೆ ವ್ಯವಸ್ಥೆಯನ್ನು ವಿನ್ಯಾಸ ಮಾಡಬೇಕು ಮತ್ತು ಅವುಗಳ ಸೂಕ್ತ ಕೆಲಸ ಮಾಡಬೇಕು.
ಪವರ್ಲೈನ್ ಕಮ್ಯುನಿಕೇಷನ್ ಎಂದು ಕೂಡಾ ಕರೆಯಲಾಗುವ ಬ್ರಾಡ್ಬ್ಯಾಂಡ್ ಓವರ್ ಪವರ್ ಲೈನ್ (BPL)ಗಳು, ಪವರ್ ಸಿಸ್ಟಂ ಡಿಸೈನ್ ತಾಂತ್ರಿಕತೆಗಳ ಚಾರಿತ್ರಿಕ ವ್ಯತ್ಯಾಸಗಳಿಂದ ಅಮೇರಿಕಾಕ್ಕಿಂತ ಹೆಚ್ಚಾಗಿ ಯೂರೋಪಿನಲ್ಲಿ ಬೇಗ ಬೆಳವಣಿಗೆಯಾದವು. ಬಹುತೇಕ ಎಲ್ಲ ಪವರ್ಗ್ರಿಡ್ಗಳು ಪ್ರಸರಣ ಸೋರಿಕೆಯನ್ನು ತಡೆಯಲು ವಿದ್ಯುತ್ತನ್ನು ಅಧಿಕ ವೋಲ್ಟೇಜಿನಲ್ಲಿ ಪ್ರಸರಿಸುತ್ತಾರೆ, ಬಳಕೆದಾರನ ಹಂತದಲ್ಲಿ ವೋಲ್ಟೇಜನ್ನು ತಗ್ಗಿಸಲು ಸ್ಟೆಪ್ಡೌನ್ ಟ್ರಾನ್ಸ್ಫಾರ್ಮರ್ಗಳನ್ನು ಬಳಸಲಾಗುತ್ತದೆ. BPL ಸಿಗ್ನಲ್ಗಳು ಟ್ರಾನ್ಸ್ಫಾರ್ಮರ್ಗಲ ಮೂಲಕ ಸಿದ್ಧರೂಪದಲ್ಲಿ ಹರಿಯುವುದಿಲ್ಲವಾದ್ದರಿಂದ ಟ್ರಾನ್ಸ್ಫಾರ್ಮರ್ಗಳಿಗೆ ರಿಪೀಟರ್ಗಳನ್ನು ಅಳವಡಿಸಬೇಕಾಗುತ್ತದೆ. USನಲ್ಲಿ ಒಂಟಿ ಮನೆಗೆ ಸರ್ವಿಸ್ ಒದಗಿಸಲು ಸಣ್ಣ ಟ್ರಾನ್ಸ್ಫಾರ್ಮರ್ ಬಳಕೆಯ ಕಂಬದಿಂದ ನೇತಾಡುವುದು ಸಾಮಾನ್ಯ. ಯೂರೋಪ್ನಲ್ಲಿ 10 ಅಥವಾ 100 ಮನೆಗಳಿಗೆ ಸರ್ವಿಸ್ ಒದಗಿಸಲು ಸ್ವಲ್ಪ ದೊಡ್ಡ ಟ್ರಾನ್ಸ್ಫಾರ್ಮರ್ ಬಳಕೆ ಮತ್ತಷ್ಟು ಸಾಮಾನ್ಯ. ಗ್ರಾಹಕರಿಗೆ ವಿದ್ಯುತ್ ಒದಗಿಸಲು ವಿನ್ಯಾಸದಲ್ಲಿನ ಈ ವ್ಯತ್ಯಾಸದ ಪರಿಣಾಮ ಕಡಿಮೆ, ಆದರೆ ಅಮೇರಿಕಾದ ಸಾಧಾರಣಾ ನಗರಕ್ಕೆ ಪವರ್ಗ್ರಿಡ್ನ ಮೂಲಕ BPL ಪ್ರಸರಣ ಮಾಡಲು ಯೂರೋಪಿನ ಅದರಷ್ಟೇ ಗಾತ್ರದ ನಗರಕ್ಕೆ ಬೇಕಾಗುವ ಪ್ರಮಾಣಕ್ಕಿಂತ ಹೆಚ್ಚು ರಿಸೀವರ್ಗಳು ಬೇಕಾಗುತ್ತವೆ.
ಎರಡನೆಯ ದೊಡ್ಡ ವಿಚಾರ ಎಂದರೆ ಸಿಗ್ನಲ್ ಶಕ್ತಿ ಮತ್ತು ಕಾರ್ಯಶೀಲ ಫ್ರೀಕ್ವೆನ್ಸಿ. ಲೈಸೆನ್ಸ್ ಹೊಂದಿರುವ 0}ಅಮೆಚೂರ್ ರೇಡಿಯೊ ಆಪರೇಟರ್ಗಳು, ಇಂಟರ್ನ್ಯಾಷನಲ್ ಷಾರ್ಟ್ವೇವ್ ಬ್ರಾಡ್ಕ್ಯಾಸ್ಟರ್ಸ್ ಮತ್ತು ಅನೇಕ ರೀತಿಯ ಸಂವಹನ ವ್ಯವಸ್ಥೆಗೆ (ಮಿಲಿಟರಿ, ಏರೋನಾಟಿಕಲ್ ಇತ್ಯಾದಿಗಳಂತೆ) ಅನೇಕ ದಶಕಗಳಿಂದ ಬಳಸಲಾಗಿರುವ 10 ರಿಂದ 30 MHz ರೇಂಜಿನ ತರಂಗಾಂತರಗಳನ್ನು ಈ ವ್ಯವಸ್ಥೆ ಬಳಸಿಕೊಳ್ಳುವ ನಿರೀಕ್ಷೆ ಇದೆ. ಕವಚವಿಲ್ಲದ ಪವರ್ಲೈನ್ಗಳು ತಾವು ಹರಿಸುವ ಸಿಗ್ನಲ್ಗಳಿಗೆ ಟ್ರಾನ್ಸ್ಮೀಟರ್ಗಳಾಗಿ ವರ್ತಿಸುತ್ತವೆ, ಶಾರ್ಟ್ವೇವ್ ಸಂವಹನ ಉದ್ದೇಶದ 10 ರಿಂದ 30 MHz ರೇಂಜಿನ ಬಳಕೆಯನ್ನು ಇವು ಸಂಪೂರ್ಣ ಸ್ಥಗಿತಗೊಳಿಸುವ ಸಾಮರ್ಥ್ಯ ಹೊಂದಿವೆ, ಜೊತೆಗೆ ಇದರ ಬಳಕೆದಾರನಿಗೆ ಭದ್ರತೆಯ ಗ್ಯಾರಂಟಿ ಇರುವುದಿಲ್ಲ.
ವೈರ್ಲೆಸ್ ISP
[ಬದಲಾಯಿಸಿ]ಇದು ದೂರಪ್ರದೇಶಗಳು ಮತ್ತು ಒಳನಾಡಿನ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲು ಸಾಧಾರಣವಾಗಿ ಕಡಿಮೆ ವೆಚ್ಚದ 802.11 Wi-Fi ರೇಡಿಯೋ ಸಿಸ್ಟಂ ಅನ್ನು ಅಳವಡಿಸಿಕೊಳ್ಳುತ್ತದೆ.
ಸಾಂಪ್ರದಾಯಿಕವಾದ 100-150 ಮೀಟರ್ಗಳ (300–500 ft)ವ್ಯಾಪ್ತಿಯ ಓಮ್ನಿಡೈರೆಕ್ಷನಲ್ ಸರ್ವೀಸ್ಗೆ 802.11b ಲೈಸೆನ್ಸ್ ಹೊಂದಿದೆ. ಯಾಗಿ ಆಂಟೆನಾದಿಂದ ಸಿಗ್ನಲನ್ನು ನ್ಯಾರೋಬೀಮ್ ಆಗಿ ಕೇಂದ್ರೀಕರಿಸುವ ಇದು ಅನೇಕ ಮೈಲಿಗಳ ತನಕ ವಿಶ್ವಾಸಾರ್ಹವಾಗಿ ಕಾರ್ಯನಿರ್ವಹಿಸಬಲ್ಲುದು. ಆದರೂ ಈ ತಂತ್ರಜ್ಞಾನದ ಲೈನ್ ಆಫ್ ಸೈಟ್ ಅಗತ್ಯಗಳು ಗುಡ್ಡಗಾಡು ಮತ್ತು ದಟ್ಟ ಅರಣ್ಯ ಪ್ರದೇಶಗಳಲ್ಲಿ ಸಂಪರ್ಕಕ್ಕೆ ತೊಡಕು ಉಂಟು ಮಾಡುತ್ತವೆ. ಜೊತೆಗೆ ಹಾರ್ಡ್ವೇರ್ ಸಂಪರ್ಕಕ್ಕೆ ಹೋಲಿಸಿದರೆ ಇದರಲ್ಲಿ ಭದ್ರತೆಯ ಅಪಾಯಗಳಿವೆ (ಸೂಕ್ತವಾದ ಭದ್ರತಾ ಒಪ್ಪಂದಗಳು ಇರದಿದ್ದರೆ); ವೇಗ ಗಣನೀಯವಾಗಿ ಕಡಿಮೆ (2 – 50 ಪಟ್ಟು ನಿಧಾನ) ಇತರೆ ವೈರ್ಲೆಸ್ ಸಾಧನಗಳು, ನೆಟ್ವರ್ಕ್ಗಳು, ಹವಾಮಾನ ಮತ್ತು ಲೈನ್ ಆಫ್ ಸೈಟ್ ಸಮಸ್ಯೆಗಳಿಂದಾಗಿ ನೆಟ್ವರ್ಕ್ ಅಷ್ಟು ಸದೃಢವಲ್ಲ.[6]
ಗ್ರಾಮೀಣ ವೈರ್ಲೆಸ್ ಇನ್ಸ್ಟಾಲೇಷನ್ಗಳಿಗೆ ಸಾಧಾರಣವಾಗಿ ವಾಣಿಜ್ಯ ಸ್ವಭಾವವಿಲ್ಲ, ಬದಲಾಗಿ ಇದು ರೇಡಿಯೋ ಮಾಸ್ಟ್ಗಳು ಮತ್ತು ಟವರ್ಗಳ ಮೇಲೆ ಹಾಬಿಯಿಸ್ಟ್ಗಳು ಮೌಂಟಿಂಗ್ ಆಂಟೆನಾಗಳಿಂದ ಕಟ್ಟಿದ ಒಂದು ಪ್ಯಾಚ್ವರ್ಕ್ ವ್ಯವಸ್ಥೆ, ಅಗ್ರಿಕಲ್ಚರಲ್ ಸ್ಟೋರೇಜ್ ಸಿಲೊಗಳು ಎತ್ತರದ ಮರಗಳು ಇತರೆ ಎತ್ತರದ ಪದಾರ್ಥಗಳು ಸಿಗುತ್ತವೆ. ಪ್ರಸಕ್ತ ಅನೇಕ ಕಂಪನಿಗಳು ಈ ಸೇವೆ ಒದಗಿಸುತ್ತಿವೆ. USAಯ wireless Internet access provider Archived 2010-03-09 ವೇಬ್ಯಾಕ್ ಮೆಷಿನ್ ನಲ್ಲಿ. ಮ್ಯಾಪ್ WISPSಗೆ ಸಾರ್ವಜನಿಕವಾಗಿ ಸಿಗುತ್ತಿವೆ.
ವರ್ಲ್ಡ್ಸ್ಪೇಸ್
[ಬದಲಾಯಿಸಿ]ವರ್ಲ್ಡ್ಸ್ಪೇಸ್ ವಾಷಿಂಗ್ಟನ್ DC. ಮೂಲದ ಡಿಜಿಟಲ್ ಸ್ಯಾಟಲೈಟ್ ರೇಡಿಯೋ ನೆಟ್ವರ್ಕ್. ಅದು ಏಷಿಯಾದ ಬಹುಪಾಲು, ಯೂರೋಪ್ ಜೊತೆಗೆ ಸಮಸ್ತ ಆಫ್ರಿಕಾವನ್ನು ಸ್ಯಾಟಲೈಟ್ ಮೂಲಕ ಸಂಪರ್ಕಿಸುತ್ತದೆ. ಡಿಜಿಟಲ್ ಆಡಿಯೋ ಜೊತೆಗೆ ಬಳಕೆದಾರರು ಸ್ಯಾಟಲೈಟ್ನಿಂದ ಬ್ರಾಡ್ಬ್ಯಾಂಡ್ ಡಾಟಾ ಪ್ರಸರಣ (150 Kilobit/second) ಸ್ವೀಕರಿಸಬಹುದು.
ಪ್ರಯೋಜನಗಳು
- Low cost (US$ 100) receiver that combines a digital radio receiver and a data receiver. This technology can be used for transmitting websites / files from Internet.
- Access from remote places in Asia and Africa.
ಅನಾನುಕೂಲಗಳು
- One way data transmission.
- Privacy/security.
ಸಂಯುಕ್ತ ಸಂಸ್ಥಾನದಲ್ಲಿ ಬೆಲೆ
[ಬದಲಾಯಿಸಿ]The examples and perspective in this article may not represent a worldwide view of the subject. |
ಸಾಂಪ್ರದಾಯಿಕವಾಗಿ ಅಮೇರಿಕಾ ಸಂಯುಕ್ತ ಸಂಸ್ಥಾನದ ಇಂಟರ್ನೆಟ್ ಸೇವೆ ಒದಗಿಸುವವರು ಪ್ರತಿ ಗಂಟೆ ಛಾರ್ಜಿನ ಬದಲು ಗ್ರಾಹಕರು ಆಯ್ಕೆ ಮಾಡಿಕೊಳ್ಳುವ ಗರಿಷ್ಟ ಬಿಟ್ ರೇಟಿನ ಆಧಾರದ ಮೇಲೆ "ಅನ್ಲಿಮಿಟೆಡ್ ಟೈಮ್" ಅಥವಾ ಫ್ಲ್ಯಾಟ್ ರೇಟ್ ಮಾಡೆಲ್ ಅನ್ನು ಬಳಸುತ್ತಾರೆ. ವೀಡಿಯೋ ಆನ್ ಡಿಮ್ಯಾಂಡ್ ಮತ್ತು ಪೀರ್-ಟು-ಪೀರ್ ಫೈಲ್ ಶೇರಿಂಗ್ನಂಟಹ ಪ್ರಸರಣಾಂಶಕ್ಕಾತಿ ಹೆಚ್ಚಿದ ಗ್ರಾಹಕರ ಬೇಡಿಕೆಗಾಗಿ ಹೆಚ್ಚು ಬ್ಯಾಂಡ್ವಿಡ್ತ್ ಬಳಕೆಯ ಪ್ರಮಾಣ ಅಗಾಧವಾಗಿ ಹೆಚ್ಚಳಗೊಳ್ಳುತ್ತಿದೆ.
ಬ್ಯಾಂಡ್ವಿಡ್ತ್ ಮಿತಿಯಿರುವ ISPಗಳಲ್ಲಿ ಬ್ಯಾಂಡ್ವಿಡ್ತ್ ಬೇಡಿಕೆ ಹೆಚ್ಚಾದಾಗ ಫ್ಲ್ಯಾಟ್ರೇಟ್ ಪ್ರೈಸಿಂಗ್ ವಿಧಾನ ಸುಸ್ಥಿರವಾಗದಿರಬಹುದು. ಬ್ರಾಡ್ಬ್ಯಾಂಡ್ ಸೇವೆ ಒದಗಿಸುವ ನಿಗದಿತ ದರಗಳು 80-90% ಪ್ರಮಾಣವನ್ನು ಪ್ರತಿನಿಧಿಸುತ್ತವೆ, ಮತ್ತು ಬಹಳಷ್ಟು ISPಗಳು ತಮ್ಮ ದರವನ್ನು ಗುಟ್ಟಾಗಿಟ್ಟರೂ ಒಟ್ಟು ಬೆಲೆ (ಜನವರಿ 2008) ಅಂದಾಜಿನ ಪ್ರಕಾರ ಗಿಗಾಬೈಟ್ಗೆ ಸುಮಾರು $0.10 ಇದೆ. ಪ್ರಸಕ್ತ ಕೆಲವು ISPಗಳು ಅಂದಾಜು ಮಾಡಿರುವ ಪ್ರಕಾರ ಸುಮಾರು 5%ರಷ್ಟು ಬಳಕೆದಾರರು ಒಟ್ಟು ಬ್ಯಾಂಡ್ವಿಡ್ತ್ನ 50%ರಷ್ಟು ಬಳಕೆ ಮಾಡುತ್ತಿದ್ದಾರೆ.[೯] ಈ ಅಧಿಕ ಬ್ಯಾಂಡ್ವಿಡ್ತ್ ಬಳಕೆದಾರರು ನೆಟ್ವರ್ಕ್ ಅನ್ನು ನಿಧಾನಗೊಳಿಸದಂತೆ ಖಚಿತ ಪಡಿಸಿಕೊಳ್ಳಲು ISPಗಳು ಬಳಕೆದಾರರ ಬ್ಯಾಂಡ್ವಿಡ್ತನ್ನು 'ಪೀಕ್' ಮತ್ತು 'ಆಫ್ ಪೀಕ್' ಎಂಬುದಾಗಿ ವಿಂಗಡಿಸಿದ್ದಾರೆ, ಇದರಿಂದ ಬಳಕೆದಾರರು ದೊಡ್ಡ ಫೈಲುಗಳನ್ನು ತಡರಾತ್ರಿಯಲ್ಲಿ ಡೌನ್ಲೋಡ್ ಮಾಡಿಕೊಳ್ಳಲು ಉತ್ತೇಜಿಸಿದಂತಾಗಿದೆ.[೧೦]
ಹಾಲಿ ಇರುವ ಬ್ರಾಡ್ ಬ್ಯಾಂಡ್ ವ್ಯವಸ್ಥೆಯನ್ನು ವಿಸ್ತರಿಸಲು ಹೆಚ್ಚುವರಿ ಬೆಲೆ ತೆರದೆ ಹೆಚ್ಚುವರಿ ಬ್ಯಾಂಡ್ವಿಡ್ತ್ ಪೇ ಸರ್ವಿಸಸ್[೧೧] ಅನ್ನು ಒದಗಿಸಲು ಇಂಟರ್ನೆಟ್ ಸೇವೆ ಒದಗಿಸುವವರು ಗ್ರಾಹಕರು ಇರುವ ಬ್ಯಾಂಡ್ವಿಡ್ತ್ ಸೌಕರ್ಯವನ್ನು ವಿಸ್ತರಿಸಿಕೊಳ್ಳುವ ಬಗ್ಗೆ ಅವಿಷ್ಕಾರ ನಡೆಸುತ್ತಿದ್ದಾರೆ.[೧೨] ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ಬ್ರಾಡ್ಬ್ಯಾಂಡ್ ಸೌಕರ್ಯ ಹಿಂದೆ ಬಿದ್ದಿದ್ದರೂ ಇಂತಹ ಪ್ರಯತ್ನಗಳು ನಡೆಯುತ್ತಿವೆ, ಎಕನಾಮಿಕ್ ಪಾಲಿಸಿ ಇನ್ಸ್ಟಿಟ್ಯೂಟ್ ಪ್ರಕಾರ: "ಹೊಸ ಬ್ರಾಡ್ಬ್ಯಾಂಡ್ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಲ್ಲಿ ಅಮೇರಿಕಾ ಇತರೆ ದೇಶಗಳಿಗಿಂತ ಹಿಂದೆ ಬಿದ್ದಿದೆ."[೧೩]
ಕೆಲವು ISPಗಳು ಬಳಕೆ ಆಧಾರಿತ ಬೆಲೆ ಪಾವತಿಯನ್ನು ಪ್ರಯೋಗಿಸುತ್ತಿದೆ, ಅವುಗಳ ಪೈಕಿ ಟೆಕ್ಸಾಸ್ನ ಬ್ಯೂಮೌಂಟ್ನಲ್ಲಿ ನಡೆದ ಟೈಮ್ ವಾರ್ನರ್ ಪರೀಕ್ಷೆ ಮುಖ್ಯವಾದುದು.[೧೪] ನ್ಯೂಯಾರ್ಕ್ನ ರೊಚೆಸ್ಟರ್ ಪ್ರದೇಶದಲ್ಲಿ ಬಳಕೆ ಆಧಾರಿತ ಬೆಲೆ ಪಾವತಿ ಪ್ರಯತ್ನಗಳು ಸಾರ್ವಜನಿಕ ಪ್ರತಿರೋಧವನ್ನು ಎದುರಿಸಿತು ನಂತರ ಇದನ್ನು ಕೈಬಿಡಲಾಯಿತು.[೧೫] ಬೆಲ್ ಕೆನಡಾ ಗ್ರಾಹಕರ ಮೇಲೆ ಬ್ಯಾಂಡ್ವಿಡ್ತ್ ಕ್ಯಾಪ್ ವಿಧಿಸಿದೆ.
ಇಂಟರ್ನೆಟ್ ಪ್ರವೈಡರನ್ನು ಆಯ್ಕೆ ಮಾಡಿಕೊಳ್ಳುವಾಗ ವಿಭಿನ್ನ DSL ಮತ್ತು ಕೇಬಲ್ ಇಂಟರ್ನೆಟ್ ಸೇವೆಗಳನ್ನು ಯೋಜನೆ ಮಟ್ಟದಲ್ಲಿ ಹೋಲಿಸಿ ವಿಶ್ಲೇಷಿಸುವುದನ್ನು ಅನೇಕ ಸಲ ಉದಾಸೀನ ಮಾಡಲಾಗಿದೆ. ಹೀಗೆ ವಿಶ್ಲೇಷಣೆ ಮಾಡುವುದರಿಂದ ಗ್ರಾಹಕರು ತಮ್ಮ ಉಪಯೋಗಿಸದ ಬ್ಯಾಂಡ್ವಿಡ್ತ್ಗೆ ಹೆಚ್ಚು ಪಾವತಿ ಮಾಡದಿರುವುದನ್ನು ಖಚಿತಪಡಿಸಿಕೊಳ್ಳಬಹುದು.
ವಿಶ್ವವ್ಯಾಪಿ ಬ್ರಾಡ್ಬ್ಯಾಂಡ್
[ಬದಲಾಯಿಸಿ]ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸಲು ಮತ್ತು ಈಗಿರುವ ದತ್ತಾಂಶ ಇಬ್ಭಾಗೀಕರಣವನ್ನು ತಗ್ಗಿಸಲು ನ್ಯಾಷನಲ್ ಬ್ರಾಂಡ್ಬ್ಯಾಂಡ್ ಯೋಜನೆಗಳು ಜಾಗತಿಕ ಮಟ್ಟದಲ್ಲಿ ಕೈಗೆಟುಕುವ ಬೆಲೆಯ ಬ್ರಾಡ್ಬ್ಯಾಂಡ್ ಸಂಪರ್ಕ ಸಿಗುವಂತೆ ಉತ್ತೇಜಿಸುತ್ತವೆ.
ಇವನ್ನೂ ಗಮನಿಸಿ
[ಬದಲಾಯಿಸಿ]ಬ್ರಾಡ್ಬ್ಯಾಂಡ್ ತಂತ್ರಜ್ಞಾನಗಳು
[ಬದಲಾಯಿಸಿ]- Back-channel, a low bandwidth, or less-than-optimal, transmission channel in the opposite direction to the main channel
- Baseband
- Fiber-optic communication
- [[ಸಾಧನದ ಬ್ಯಾಂಡ್ವಿಡ್ತ್ಗಳ
ಪಟ್ಟಿ]]
ಬ್ರಾಡ್ಬ್ಯಾಂಡ್ ಇಂಪ್ಲಿಮೆಂಟೇಷನ್ ಮತ್ತು ಸ್ಟ್ಯಾಂಡರ್ಡ್ಸ್
[ಬದಲಾಯಿಸಿ]- ಡಿಜಿಟಲ್ ಸಬ್ಸ್ಕ್ರೈಬರ್ ಲೈನ್ (DSL), ಟೆಲಿಫೋನ್ ನೆಟ್ವರ್ಕ್ನ ಸ್ಥಳೀಯ ಲೂಪ್ನಲ್ಲಿ ಬಳಸಿದ ವೈರ್ಗಳಲ್ಲಿ ಡಿಜಿಟಲ್ ಡಾಟಾ ಪ್ರಸರಣ
- ಲೋಕಲ್ ಮಲ್ಟಿಪಾಯಿಂಟ್ ಡಿಸ್ಟ್ರಿಬ್ಯೂಷನ್ ಸರ್ವೀಸ್, 26 GHz and 29 GHz ಬ್ಯಾಂಡ್ಗಳ ನಡುವೆ ಮೈಕ್ರೋವೇವ್ ಸಿಗ್ನಲ್ಗಳನ್ನು ಬಳಸುವ ಬ್ರಾಡ್ಬ್ಯಾಂಡ್ ವೈರ್ಲೆಸ್ ಅಕ್ಸೆಸ್ ಟೆಕ್ನಾಲಜಿ
- WiMAX, ಅತಿ ಹೆಚ್ಚು ದೂರದ ತನಕ ಉನ್ನತ ಬ್ರಾಡ್ಬ್ಯಾಂಡ್ ಸಂಪರ್ಕ ಒದಗಿಸುವ ಸ್ಟ್ಯಾಂಡರ್ಡ್ಸ್ ಆಧಾರಿತ ವೈರ್ಲೆಸ್ ತಂತ್ರಜ್ಞಾನ
- IEEE ಸ್ಟ್ಯಾಂಡರ್ಡ್ಸ್ (802.11b, 802.11g, ಮತ್ತು 802.11a) ಇತರೆ ವೈರ್ಲೆಸ್ ತಂತ್ರಜ್ಞಾನಗಳು ಮತ್ತು ಒಡೆತನ ಒಪ್ಪಂದಗಳು 2008ರಲ್ಲಿ, ಬೆಲೆಯ ವಿಷಯದಲ್ಲಿ WiMAX ಕಲಿಕೆಯ ಉನ್ನತ ತಿರುವಿನಲ್ಲಿದ್ದವು ಈ ತಂತ್ರಜ್ಞಾನಗಳು ನಿಗಧಿತ ವೈರ್ಲೆಸ್ ಬ್ರಾಡ್ಬ್ಯಾಂಡ್ಗಾಗಿ ಮಾರುಕಟ್ಟೆ ಪ್ರಾಬಲ್ಯ ಹೊಂದಿವೆ.
- ಪವರ್ ಲೈನ್ ಕಮ್ಯುನಿಕೇಷನ್, ಹಾಲಿ ಇರುವ ವಿದ್ಯುತ್ ಸಂಪರ್ಕ ಜಾಲ ಬಳಸಿಕೊಳ್ಳುವ ವೈರ್ಲೈನ್ ತಂತ್ರಜ್ಞಾನ
- ಸ್ಯಾಟಲೈಟ್ ಇಂಟರ್ನೆಟ್ ಅಕ್ಸೆಸ್
- ಕೇಬಲ್ ಮೋಡೆಮ್, ಕೇಬಲ್ ಟೆಲಿವಿಷನ್ ಸೌಕರ್ಯಗಳಲ್ಲಿ ಡಾಟಾ ಸಿಗ್ನಲ್ಗಳ ನಿರ್ವಹಣೆ ಮಾಡಲು ವಿನ್ಯಾಸಗೊಳಿಸಲಾಗಿದೆ.
- ಫೈಬರ್ ಟು ದಿ ಪ್ರೆಮೈಸಸ್, ಫೈಬರ್ ಆಪ್ಟಿಕ್ ಕೇಬಲ್ಗಳು ಮತ್ತು ಅದರ ಜೊತೆಗೆ ಆಪ್ಟಿಕಲ್ ಎಲೆಕ್ಟ್ರಾನಿಕ್ಸ್ ಆಧಾರಿತವಾಗಿವೆ.
- ಹೈ-ಸ್ಪೀಡ್ ಪ್ಯಾಕೆಟ್ ಅಕ್ಸೆಸ್ (HSPA), ಹೊಸ ಮೊಬೈಲ್ ಟೆಲಿಫೋನ್ ಒಪ್ಪಂದ ಕೆಲವು ಸಲ ಇದನ್ನ 3.5G (ಅಥವಾ "3½G") ತಂತ್ರಜ್ಞಾನ ಎಂದು ಕರೆಯಲಾಗುತ್ತದೆ
- ಎವಲ್ಯೂಷನ್ ಡಾಟಾ ಆಪ್ಟಿಮೈಸ್ಡ್ (EVDO), ಅನೇಕ CDMA ಮೊಬೈಲ್ ಫೋನ್ ಸೇವೆ ಪ್ರವೈಡರ್ಗಳು ಅಳವಡಿಸಿಕೊಂಡಿರುವ ವೈರ್ಲೆಸ್ ರೇಡಿಯೋ ಬ್ರಾಡ್ ಬ್ಯಾಂಡ್ ಡಾಟಾ ಸ್ಟ್ಯಾಂಡರ್ಡ್
- 802.20 MBWA (ಮೊಬೈಲ್ ಬ್ರಾಡ್ಬ್ಯಾಂಡ್ ವೈರ್ ಲೆಸ್ ಅಕ್ಸೆಸ್)
ಭವಿಷ್ಯದ ಬ್ರಾಡ್ಬ್ಯಾಂಡ್ ಇಂಪ್ಲಿಮೆಂಟೇಷನ್ಗಳು
[ಬದಲಾಯಿಸಿ]- ವೈಟ್ ಸ್ಪೇಸಸ್ ಕೋಲಿಷನ್ ಇದು ಬಳಕೆಯಲ್ಲಿರದ ಅನಲಾಗ್ ಟೆಲಿವಿಷನ್ ಪ್ರೀಕ್ವೆನ್ಸಿಗಳ ಮೂಲಕ ಬ್ರಾಂಡ್ಬ್ಯಾಂಡ್ ಇಂಟರ್ನೆಟ್ ಸಂಪರ್ಕ ಪಡೆಯುವ ಗುರಿ ಹೊಂದಿರುವ ತಂತ್ರಜ್ಞಾನ ಕಂಪನಿಗಳ ಒಂದು ಗುಂಪು
- ಹೈ-ಸ್ಪೀಡ್ ಡೌನ್ಲೋಡ್ ಲಿಂಕ್ ಪ್ಯಾಕೆಟ್ ಸಂಪರ್ಕ
ಬ್ರಾಡ್ಬ್ಯಾಂಡ್ ಅಪ್ಲಿಕೇಷನ್ಗಲು
[ಬದಲಾಯಿಸಿ]ಇತರೆ
[ಬದಲಾಯಿಸಿ]ಆಕರಗಳು
[ಬದಲಾಯಿಸಿ]- ↑ "Birth of Broadband". ITU. Archived from the original on ಜುಲೈ 1, 2011. Retrieved July 21, 2009.
- ↑ ೨.೦ ೨.೧ "2006 OECD Broadband Statistics to December 2006". OECD. Retrieved June 6, 2009.
- ↑ "Statement of Chairman Kevin J.Martin". Archived from the original on ಅಕ್ಟೋಬರ್ 17, 2011. Retrieved June 6, 2009.
- ↑ Patel, Nilay (March 19, 2008). "FCC redefines "broadband" to mean 768 kbit/s, "fast" to mean "kinda slow"". Engadget. Retrieved June 6, 2009.
- ↑ "OECD Broadband Report Questioned". Website Optimization. Retrieved June 6, 2009.
- ↑ "Tegola project linking Skye, Knoydart and Loch Hourne". Retrieved 2010-03-16.
- ↑ http://whirlpool.net.au/wiki/?tag=wlanh_20
- ↑ Satellite Signals (16 October 2008). "Calculating FAP restrictions". Satellite Signals. Retrieved 29 May 2009.
{{cite web}}
: Check|authorlink=
value (help); Cite has empty unknown parameters:|month=
and|coauthors=
(help); External link in
(help)|authorlink=
- ↑ Hansell, Saul (January 17, 2008). "Time Warner: Download Too Much and You Might Pay $30 a Movie". The New York Times. Retrieved June 6, 2009.
- ↑ http://www.comparebroadband.com.au/article_64_On--and-Off-Peak-Quotas.htm
- ↑ Charny, Ben (January 10, 2005). "Comcast pushes VoIP to prime time". CNET News. Retrieved June 6, 2009.
- ↑ Cauley, Leslie (April 20, 2008). "Comcast opens up about how it manages traffic". ABC News. Retrieved June 6, 2009.
- ↑ Irons, John (April 23, 2008). "U.S. lags behind in broadband infrastructure". Economic Policy Institute. Archived from the original on ಡಿಸೆಂಬರ್ 20, 2008. Retrieved June 6, 2009.
{{cite web}}
: Unknown parameter|coauthors=
ignored (|author=
suggested) (help) - ↑ Lowry, Tom (March 31, 2009). "Time Warner Cable Expands Internet Usage Pricing". BusinessWeek. Retrieved June 6, 2009.
- ↑ Axelbank, Evan (April 16, 2009). "Time Warner Drops Internet Plan". Rochester Homepage. Archived from the original on ಡಿಸೆಂಬರ್ 7, 2009. Retrieved June 6, 2009.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Broadband World Forum Archived 2010-01-17 ವೇಬ್ಯಾಕ್ ಮೆಷಿನ್ ನಲ್ಲಿ. (International Engineering Consortium)
- Broadband gap
- European broadband portal Archived 2012-06-23 ವೇಬ್ಯಾಕ್ ಮೆಷಿನ್ ನಲ್ಲಿ.
- Corporate vs. Community Internet Archived 2011-05-09 ವೇಬ್ಯಾಕ್ ಮೆಷಿನ್ ನಲ್ಲಿ., ಆಲ್ಟರ್ನೆಟ್, ಜೂನ್ 14, 2005, - on the clash between US cities' attempts to expand municipal broadband and corporate attempts to defend their markets
- Pages using the JsonConfig extension
- CS1 errors: empty unknown parameters
- CS1 errors: external links
- CS1 errors: parameter link
- CS1 errors: unsupported parameter
- Articles with links needing disambiguation
- Articles with unsourced statements from February 2007
- Articles with hatnote templates targeting a nonexistent page
- Wikipedia articles needing clarification from July 2009
- Articles with unsourced statements from January 2009
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Articles with limited geographic scope
- ಬ್ರಾಡ್ಬ್ಯಾಂಡ್