ವಿಷಯಕ್ಕೆ ಹೋಗು

ಬಾಗಲಕೋಟೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಾಗಲಕೋಟ

ಬಾಗಲಕೋಟ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಬಾಗಲಕೋಟ ಜಿಲ್ಲೆ
ನಿರ್ದೇಶಾಂಕಗಳು 16.1833° N 75.7000° E
ವಿಸ್ತಾರ
 - ಎತ್ತರ
6593 km²
 - 747 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (2011)
 - ಸಾಂದ್ರತೆ
18,90,826
 - 288/ಚದರ ಕಿ.ಮಿ.
kgf 3 villain manikant meti

ಬಾಗಲಕೋಟೆ ಕರ್ನಾಟಕದ ಒಂದು ಜಿಲ್ಲಾ ಕೇಂದ್ರ. ಈ ಜಿಲ್ಲೆ ಉತ್ತರ ಕರ್ನಾಟಕದಲ್ಲಿ ಸ್ಥಾಪಿತವಾಗಿದೆ. ಮತ್ತು ಬೆಳಗಾವಿ, ಗದಗ, ಕೊಪ್ಪಳ, ರಾಯಚೂರು ಹಾಗೂ ಬಿಜಾಪುರಗಳೊಂದಿಗೆ ತನ್ನ ಗಡಿಯನ್ನು ಹೊಂದಿದೆ. ೧೯೯೭ರಲ್ಲಿ ಭಾರತದ ೫೦ನೆಯ ಸ್ವಾತಂತ್ರ್ಯೋತ್ಸವದ ಸ್ಮರಣೀಯ ಘಟ್ಟದಲ್ಲಿ ಕರ್ನಾಟಕ ಸರ್ಕಾರಪ್ರಕಟಣೆ ಆರ್‌ಡಿ ೪೨ ಎಲ್ಆರ್‌ಡಿ ೮೭ ಭಾಗ ೩ ನಿರ್ದೇಶದ ದ್ವಾರಾ ಹೊಸ ಜಿಲ್ಲೆಯಾಗಿ ಅಂದಿನ ಮುಖ್ಯಮಂತ್ರಿ ಜೆ. ಎಚ್. ಪಟೇಲರಿಂದ ಉದ್ಘಾಟಿಸಲ್ಪಟ್ಟಿತು. ಐತಿಹಾಸಿಕವಾಗಿ ಬಾಗಲಕೋಟೆ ಜಿಲ್ಲೆಯು ಚಾಲುಕ್ಯರಾಳಿದ ನಾಡು. ಬಾದಾಮಿ, ಐಹೊಳೆ, ಪಟ್ಟದಕಲ್ಲು, ಕೂಡಲಸಂಗಮ ಮತ್ತು ಮಹಾಕೂಟ ಇಲ್ಲಿಯ ಅತ್ಯಂತ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾಗಿವೆ.

ಭೌಗೋಳಿಕ

[ಬದಲಾಯಿಸಿ]

ಬಾಗಲಕೋಟೆ ನಗರವು ಭಾರತದ ಕರ್ನಾಟಕ ರಾಜ್ಯದ ಉತ್ತರ ಭಾಗದಲ್ಲಿ ಸ್ಥಿತವಾಗಿದೆ. ಭೌಗೋಳಿಕವಾಗಿ ಉತ್ತರದ ಕಡೆ 16-18* & 75-7* ಪೂರ್ವದಲ್ಲಿ ಘಟಪ್ರಭಾ ನದಿಯ ದಡದಲ್ಲಿ ಸ್ಥಿತವಾಗಿರುವ ಇದು ಸಮುದ್ರ ಮಟ್ಟದಿಂದ ೫೩೩ ಮೀಟರ್ ಎತ್ತರದಲ್ಲಿದ್ದು ಜಿಲ್ಲೆಯ ಕೇಂದ್ರ ಸ್ಥಾನವಾಗಿದೆ. ಈ ಮೊದಲು ಬಿಜಾಪುರ (ಈಗಿನ ವಿಜಯಪುರ) ಜಿಲ್ಲೆಯಲ್ಲಿದ್ದ ಬಾಗಲಕೋಟೆ ಭಾರತದ ೫೦ನೇಯ ಸ್ವಾತಂತ್ರ್ಯ ವರ್ಷಾಚರಣೆಯ ಸಂದರ್ಭದಲ್ಲಿ ಅಂದರೆ ೧೯೯೭ ರಲ್ಲಿ ಹೊಸ ಜಿಲ್ಲೆಯಾಗಿ ಅಸ್ಥಿತ್ವಕ್ಕೆ ಬಂದಿತು. ವಿಜಾಪುರ ಜಿಲ್ಲೆಯಿಂದ ಹೋಳಾದ ಬಾಗಲಕೋಟ ಜಿಲ್ಲೆಯು ಬಾದಾಮಿ, ಬಾಗಲಕೋಟ, ಬೀಳಗಿ, ಹುನಗುಂದ, ಜಮಖಂಡಿ & ಮೂಧೋಳ ಈ ೬ ತಾಲ್ಲೂಕುಗಳನ್ನು ಹೊಂದಿದೆ. ೨೦೧೮ ರಲ್ಲಿ ಗುಳೇದಗುಡ್ಡ, ಇಳಕಲ್ಲ & ರಬಕವಿ-ಬನಹಟ್ಟಿ ಇವು ೩ ಹೊಸ ತಾಲ್ಲೂಕು ಕೇಂದ್ರಗಳಾಗಿ ಸೃಷ್ಠಿಯಾಗಿದೆ.

ಒಂದು ಕಾಲದಲ್ಲಿ ಕನ್ನಡದ ವೈಭವಯುತ ರಾಜಮನೆತನವಾದ ಚಾಲುಕ್ಯರು ಬಾಗಲಕೋಟ ಜಿಲ್ಲೆಯನ್ನು ಆಳಿದರು. ಕರ್ನಾಟಕದ ಉತ್ತರ ಭಾಗದಲ್ಲಿರುವ ಈ ಜಿಲ್ಲೆಯ ೬೫೯೩ ಚದರ ಮೀಟರ ವ್ಯಾಪ್ತಿಯನ್ನು ಹೊಂದಿದೆ. ಬಾಗಲಕೋಟ ಜಿಲ್ಲೆಯ ಉತ್ತರಕ್ಕೆ ವಿಜಾಪುರ ಜಿಲ್ಲೆ (ಈಗಿನ ವಿಜಯಪುರ), ದಕ್ಷಿಣಕ್ಕೆ ಗದಗ ಜಿಲ್ಲೆ, ಪೂರ್ವಕ್ಕೆ ರಾಯಚೂರು ಜಿಲ್ಲೆ & ಆಗ್ನೆಯ ಬಾಗದಲ್ಲಿ ಕೊಪ್ಪಳ ಜಿಲ್ಲೆ, ಪಶ್ಶಿಮ ಗಡಿಯಲ್ಲಿ ಬೆಳಗಾವಿ ಜಿಲ್ಲೆಗಳಿಂದ ಸುತ್ತುವರಿಯಲ್ಪಟ್ಟಿದೆ.

ಇತಿಹಾಸ

[ಬದಲಾಯಿಸಿ]

ಇಲ್ಲಿ ದೊರೆತ ಶಿಲಾಶಾಸನಗಳ ಪ್ರಕಾರ ಮೂಲ ಹೆಸರು ಬಾಗಡಿಗೆ ಎಂದು ಆಗಿತ್ತು. ಪುರಾಣಗಳ ಪ್ರಕಾರ ಲಂಕಾಧಿಪತಿಯಾದ ರಾವಣ ಈ ಪ್ರದೇಶವನ್ನು ಆಳುತ್ತಿದ್ದ, ಅವನು ಈ ನಗರವನ್ನು ಬಜಂತ್ರಿ (ಸಂಗೀತಗಾರರು) ಗೆ ಕೊಡುಗೆಯಾಗಿ ನೀಡಿದ್ದನು. ಬಿಜಾಪುರ ರಾಜರು ತನ್ನ ಮಗಳಿಗೆ ಕಂಕಣ ಕಾಣಿಕೆ (ಮಗಳ ಮದುವೆ ನಂತರ ಬಳೆ, ಸೀರೆ, ಆಭರಣಗಳ ಖರೀದಿಸಲು ತಂದೆ-ತಾಯಿ ಹಣ ಕೋಡುವ ಸಂಪ್ರದಾಯದಂತೆ) ಯಾಗಿ ಈ ಪಟ್ಟಣವನ್ನು ಕೊಡುಗೆಯಾಗಿ ನೀಡಿದನು ಎಂದು ಹೇಳಲಾಗುತ್ತದೆ. ಪರಿಣಾಮವಾಗಿ ಪಟ್ಟಣದ ಹೆಸರು "ಬಾಗಡಿಕೋಟೆ"ಯಾಗಿ ನಂತರ ಬಾಗಲಕೋಟೆಯಾಗಿ ಮಾರ್ಪಟ್ಟಿತು. ನಂತರದ ದಿನಗಳಲ್ಲಿ ಬಾಗಲಕೋಟೆ ವಿಜಯನಗರ ದೊರೆಗಳ, ಪೇಶ್ವೆಗಳ, ಮೈಸೂರಿನ ಹೈದರಾಲಿ, ಮರಾಠ ಆಡಳಿತಗಾರರು ಮತ್ತು ಅಂತಿಮವಾಗಿ ೧೮೧೮ ರಲ್ಲಿ ಬ್ರಿಟಿಷ್ ಆಳ್ವೆಕೆಗೆ ಒಳಗಾಯಿತು. ೧೮೬೫ ರಲ್ಲಿ ಪುರಸಭೆಯಾಗಿ ಅಸ್ಥಿತ್ವಕ್ಕೆ ಬಂದಿತು. ಬಾಗಲಕೋಟೆಯು "ಸ್ವಾತಂತ್ರ್ಯ ಚಳುವಳಿ" ಮತ್ತು "ಕರ್ನಾಟಕ ಏಕೀಕರಣ ಚಳುವಳಿ"ಗಳಿಗೆ ಕೇಂದ್ರವಾಗಿತ್ತು.

ಇಂದು, ಬಾಗಲಕೋಟೆ ಪಟ್ಟಣ ಎರಡು ಭಾಗಗಳಲ್ಲಿ ಹಂಚಿ ಹೋಗಿದೆ, ಹೊಸ ಬಾಗಲಕೋಟೆ ಅಥವಾ ನವನಗರ ಮತ್ತು ಹಳೆಯ ಬಾಗಲಕೋಟೆ ಪಟ್ಟಣ. ಆಲಮಟ್ಟಿ ಅಣೆಕಟ್ಟಿನ ನಿರ್ಮಾಣದಿಂದಾಗಿ ಹಳೆಯ ಪಟ್ಟಣದ ಬಹುತೇಕ ಭಾಗಗಳು ಮುಳುಗಡೆ ಹೋದಿದೆ. ಆ ಕಾರಣದಿಂದ ಹೊಸ ನವನಗರ ನಿರ್ಮಾಣ ಅನಿವಾರ್ಯವಾಯಿತು. ನವನಗರವು ವಿಶಾಲ ರಸ್ತೆಗಳು, ಉದ್ಯಾನಗಳು, ಮತ್ತು ಇತರ ಆಧಿನಿಕ ಸೌಲಭ್ಯಗಳನ್ನು ಹೊಂದಿ ಮಾದರಿ ವಿನ್ಯಾಸದಿಂದ ಯೋಜಿತ ರೀತಿಯಲ್ಲಿ ಕಟ್ಟಿದ ಪಟ್ಟಣವಾಗಿದೆ. ಬಾಗಲಕೋಟ್ ನವನಗರದ ಪ್ರಧಾನ ವಾಸ್ತುಶಿಲ್ಪಿ ಛಾರ್ಲ್ಸ್ ಕೋರಿಯಾ.

ನದಿಗಳು

[ಬದಲಾಯಿಸಿ]

ಇಲ್ಲಿ ಘಟಪ್ರಭಾ, ಮಲಪ್ರಭಾ, ಮತ್ತು ಕೃಷ್ಣಾ ನದಿಗಳು ಹರಿಯುತ್ತವೆ.

ಶಿಕ್ಷಣ

[ಬದಲಾಯಿಸಿ]

ತಾಲೂಕುಗಳು

[ಬದಲಾಯಿಸಿ]

ಇದನ್ನೂ ನೋಡಿ

[ಬದಲಾಯಿಸಿ]

ಹೊರಗಿನ ಸಂಪರ್ಕ

[ಬದಲಾಯಿಸಿ]