ಸ್ಟೆಫೆನಿ ಮೆಯೆರ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Stephenie Meyer
Meyer in April 2009.
ಜನನStephenie Morgan
(1973-12-24) ಡಿಸೆಂಬರ್ ೨೪, ೧೯೭೩ (ವಯಸ್ಸು ೫೦)
Hartford, Connecticut,
United States
ವೃತ್ತಿNovelist
ರಾಷ್ಟ್ರೀಯತೆAmerican
ಪ್ರಕಾರ/ಶೈಲಿVampire romance, young-adult fiction, science fiction


ಸಹಿ

www.stepheniemeyer.com

ಸ್ಟೆಫೆನಿ ಮೆಯೆರ್‌ (ಹುಟ್ಟಿದ್ದು 1973ರ ಡಿಸೆಂಬರ್‌ 24ರಂದು) (ವಿವಾಹಪೂರ್ವ ಕನ್ಯಾನಾಮ ಮೋರ್ಗಾನ್‌ ) ಅಮೆರಿಕಾದ ಓರ್ವ ಲೇಖಕಿಯಾಗಿದ್ದು, ತಾನು ಬರೆದ ಟ್ವಿಲೈಟ್‌ ಎಂಬ ರಕ್ತಪಿಶಾಚಿ ಪ್ರಣಯ ಸರಣಿಯಿಂದ ಚಿರಪರಿಚಿತಳಾಗಿದ್ದಾಳೆ.[೧][೨][೩] ಟ್ವಿಲೈಟ್‌ ಕಾದಂಬರಿಗಳು ವಿಶ್ವವ್ಯಾಪಿ ಮನ್ನಣೆಯನ್ನು ಗಳಿಸಿದ್ದು, ಅನೇಕ ಸಾಹಿತ್ಯಿಕ ಪ್ರಶಸ್ತಿಗಳನ್ನು ಗೆಲ್ಲುವುದರ ಜೊತೆಗೆ ವಿಶ್ವಾದ್ಯಂತ[೧][೪] 100 ದಶಲಕ್ಷ ಪ್ರತಿಗಳಿಗೂ ಹೆಚ್ಚು ಮಾರಾಟಗೊಂಡಿವೆ ಹಾಗೂ ಸುಮಾರು 37 ವಿವಿಧ ಭಾಷೆಗಳಿಗೆ ಭಾಷಾಂತರಗೊಂಡಿವೆ.[೨][೩] ದಿ ಹೋಸ್ಟ್‌ ಎಂಬ ವಯಸ್ಕರ ವೈಜ್ಞಾನಿಕ ಕಾದಂಬರಿಯನ್ನೂ ಸಹ ಮೆಯೆರ್‌ ಬರೆದಿದ್ದಾಳೆ.

USA ಟುಡೆ 'ಯ "ವರ್ಷದ ಲೇಖಕಿ" ಎಂದು ಮೆಯೆರ್‌‌ 2008ರಲ್ಲಿ ಹೆಸರಿಸಲ್ಪಟ್ಟಳು.[೫] 2008ರ ವರ್ಷವೊಂದರಲ್ಲೇ[೬][೭] 29 ದಶಲಕ್ಷ ಪುಸ್ತಕಗಳು ಮಾರಾಟವಾಗುವುದರೊಂದಿಗೆ ಆಕೆ ಆ ವರ್ಷದ ಜನಪ್ರಿಯ, ಅಧಿಕ ಮಾರಾಟದ ಪುಸ್ತಕದ ಲೇಖಕಿ ಎನಿಸಿಕೊಂಡಳು. ಟ್ವಿಲೈಟ್‌ ಕಾದಂಬರಿಯು ಆ ವರ್ಷದ ಅತ್ಯಧಿಕ-ಮಾರಾಟದ ಪುಸ್ತಕದ ಸ್ಥಾನಮಾನವನ್ನು ಪಡೆಯಿತು.[೮] ಟೈಮ್‌ ನಿಯತಕಾಲಿಕದ "2008ರಲ್ಲಿ 100 ಅತ್ಯಂತ ಪ್ರಭಾವಶಾಲಿ ಜನರ"[೯] ಪಟ್ಟಿಯಲ್ಲಿ ಮೆಯೆರ್‌ಗೆ #49ನೇ ಶ್ರೇಯಾಕ ದೊರಕಿತು ಮತ್ತು 2009ರಲ್ಲಿನ ವಿಶ್ವದ ಅತ್ಯಂತ ಪ್ರಭಾವೀ ಪ್ರಸಿದ್ಧ ವ್ಯಕ್ತಿಗಳಿಗೆ ಸಂಬಂಧಿಸಿದ ಫೋರ್ಬ್ಸ್‌ 100 ಪ್ರಸಿದ್ಧ ವ್ಯಕ್ತಿಗಳ ಪಟ್ಟಿಯಲ್ಲೂ ಅವಳ ಹೆಸರು ಸೇರ್ಪಡೆಗೊಂಡಿತ್ತು. ಅವಳ ವಾರ್ಷಿಕ ಗಳಿಕೆಗಳು 50 ದಶಲಕ್ಷ $ನಷ್ಟು ಮೊತ್ತವನ್ನು ಮೀರುವುದರೊಂದಿಗೆ ಅವಳಿಗೆ ಈ ಪಟ್ಟಿಯಲ್ಲಿ #26ನೇ ಶ್ರೇಯಾಂಕ ದೊರಕಿತ್ತು.[೧೦]

ವೈಯಕ್ತಿಕ ಜೀವನ[ಬದಲಾಯಿಸಿ]

ಕನೆಕ್ಟಿಕಟ್‌ನ ಹಾರ್ಟ್‌ಫೋರ್ಡ್‌ನಲ್ಲಿ ಸ್ಟೀಫನ್‌ ಹಾಗೂ ಕ್ಯಾಂಡಿ ಮೋರ್ಗಾನ್‌ ದಂಪತಿಗಳ ಮಗಳಾಗಿ ಸ್ಟೆಫೆನಿ ಮೆಯೆರ್‌ ಜನಿಸಿದಳು. ಅರಿಝೋನಾದ ಫೀನಿಕ್ಸ್‌‌‌ನಲ್ಲಿ, ಸೇತ್‌, ಎಮಿಲಿ, ಜಾಕೋಬ್‌‌, ಪಾಲ್‌, ಮತ್ತು ಹೈಡಿ ಎಂಬ ಐವರು ಒಡಹುಟ್ಟಿದವರೊಂದಿಗೆ ಅವಳು ಬೆಳೆದಳು. ಅರಿಝೋನಾದ ಸ್ಕಾಟ್ಸ್‌ಡೇಲ್‌‌ನಲ್ಲಿರುವ ಚಪಾರ್ರಲ್‌ ಹೈಸ್ಕೂಲ್‌‌‌ನಲ್ಲಿ ತನ್ನ ಶಿಕ್ಷಣವನ್ನು ಆಕೆ ಪಡೆದಳು. ನಂತರ ಆಕೆ ಅಟಾಹ್‌ನ ಪ್ರೊವೊದಲ್ಲಿರುವ ಬ್ರಿಗ್‌ಹ್ಯಾಂ ಯಂಗ್‌ ವಿಶ್ವವಿದ್ಯಾಲಯಕ್ಕೆ ಸೇರಿಕೊಂಡು, 1997ರಲ್ಲಿ ಇಂಗ್ಲಿಷ್‌ನಲ್ಲಿ B.A. ಪದವಿಯನ್ನು ಪಡೆದಳು.[೧೧] ತಾನು ಅರಿಝೋನಾದಲ್ಲಿ ಬೆಳೆಯುತ್ತಿದ್ದಾಗ, "ಪಾಂಚೊ" ಎಂಬ ಅಡ್ಡಹೆಸರಿನಿಂದ ಕರೆಯಲ್ಪಡುತ್ತಿದ್ದ ತನ್ನ ಗಂಡ ಕ್ರಿಶ್ಚಿಯನ್‌ನನ್ನು ಮೆಯೆರ್‌ ಭೇಟಿಮಾಡಿದಳು, ಮತ್ತು ಅವನನ್ನು 1994ರಲ್ಲಿ ಅವಳು ಮದುವೆಯಾದಾಗ ಅವರಿಬ್ಬರಿಗೂ 21 ವರ್ಷ ವಯಸ್ಸಾಗಿತ್ತು. ಅವರು ಗೇಬ್‌, ಸೇತ್‌, ಮತ್ತು ಎಲಿ ಎಂಬ ಮೂವರು ಮಕ್ಕಳನ್ನು ಪಡೆದರು. ಇದಕ್ಕೂ ಮುಂಚೆ ಓರ್ವ ಲೆಕ್ಕಪರಿಶೋಧಕನಾಗಿದ್ದ ಕ್ರಿಶ್ಚಿಯನ್‌ ಮೆಯೆರ್‌‌, ಈಗ ನಿವೃತ್ತಿಗೊಂಡು ತನ್ನ ಮಕ್ಕಳ ಲಾಲನೆ-ಪಾಲನೆಯಲ್ಲಿ ತೊಡಗಿಸಿಕೊಂಡ.[೧೨]

ಮೆಯೆರ್‌‌ಳು ಮಾರ್ವನ್‌ ಪಂಥದವರ ಜೀಸಸ್‌ ಕ್ರೈಸ್ಟ್‌ನ ಚರ್ಚಿನ ಓರ್ವ ಸದಸ್ಯೆಯಾಗಿದ್ದಾಳೆ ಮತ್ತು ತನ್ನ ನಂಬಿಕೆಗಳನ್ನು ಕುರಿತು ತಾನು "ಅತಿಕಟ್ಟುನಿಟ್ಟಿನ" ವ್ಯಕ್ತಿಯಾಗಿದ್ದು, ಮದ್ಯಪಾನ ಮಾಡುವ ಅಥವಾ ಧೂಮಪಾನ ಮಾಡುವ ಅಭ್ಯಾಸಗಳನ್ನು ಹೊಂದಿಲ್ಲ ಎಂದು ಹೇಳಿಕೊಂಡಿದ್ದಾಳೆ.[೧೩] ಟ್ವಿಲೈಟ್‌‌ ಗೂ ಮುಂಚಿತವಾಗಿ ಮೆಯೆರ್‌ ಒಂದು ಸಣ್ಣ ಕಥೆಯನ್ನೂ ಸಹ ಬರೆದಿರಲಿಲ್ಲ, ಮತ್ತು ಕಾನೂನು ಶಾಲೆಗೆ ಸೇರುವುದರ ಕುರಿತು ಚಿಂತನೆಯನ್ನು ನಡೆಸಿದ್ದಳು. ಏಕೆಂದರೆ ತಾನೋರ್ವ ಬರಹಗಾರ್ತಿಯಾಗುವ ಸಾಧ್ಯತೆಗಳಿಲ್ಲ ಎಂಬುದು ಅವಳ ಭಾವನೆಯಾಗಿತ್ತು; ತನ್ನ ಹಿರಿಯ ಮಗನಾದ ಗೇಬ್‌ನ ಜನನವು ತನ್ನ ಮನಸ್ಸನ್ನು ಬದಲಾಯಿಸಿತು ಎಂಬುದನ್ನು ಆಕೆ ನಂತರದಲ್ಲಿ ಕಂಡುಕೊಂಡಳು; "ಗೇಬ್‌ ಹುಟ್ಟಿದ್ದೇ ತಡ, ನನಗೆ ಅವನ ತಾಯಿಯ ಕರ್ತವ್ಯವನ್ನು ವಹಿಸಬೇಕೆಂಬ ಬಯಕೆಯಾಯಿತು" ಎಂದೂ ಈ ಸಂದರ್ಭದಲ್ಲಿ ಅವಳು ಹೇಳಿಕೊಂಡಿದ್ದಾಳೆ.[೧೩] ಓರ್ವ ಲೇಖಕಿಯಾಗುವುದಕ್ಕೆ ಮುಂಚಿತವಾಗಿ, ಸ್ವತ್ತಿನ ಕಂಪನಿಯೊಂದರಲ್ಲಿ ಓರ್ವ ಸ್ವಾಗತಕಾರಿಣಿಯಾಗಿದ್ದುದೇ ಮೆಯೆರ್‌ಳ ಏಕೈಕ ವೃತ್ತಿಪರ ಕೆಲಸವಾಗಿತ್ತು.[೧೨]

ಮೆಯೆರ್‌‌ ಪ್ರಸ್ತುತ ಅರಿಝೋನಾದ ಕೇವ್‌ ಕ್ರೀಕ್‌ನಲ್ಲಿ[೧೪] ವಾಸವಾಗಿದ್ದಾಳೆ ಮತ್ತು ವಾಷಿಂಗ್ಟನ್‌ನ ಮ್ಯಾರೋಸ್ಟೋನ್‌ ದ್ವೀಪದಲ್ಲಿ ಒಂದು ಮನೆಯನ್ನೂ ಹೊಂದಿದ್ದಾಳೆ.[೧೫]

ಟ್ವಿಲೈಟ್‌ ಸರಣಿ[ಬದಲಾಯಿಸಿ]

ಟ್ವಿಲೈಟ್‌[ಬದಲಾಯಿಸಿ]

ಟ್ವಿಲೈಟ್‌‌‌ ಗೆ ಸಂಬಂಧಿಸಿದ ಪರಿಕಲ್ಪನೆಯು ತನಗೆ 2003ರ ಜೂನ್‌ 2ರಂದು ಒಂದು ಕನಸಿನಲ್ಲಿ ಬಂದಿತೆಂದು ಮೆಯೆರ್‌‌ ಹೇಳುತ್ತಾಳೆ.[೧೬] ಈ ಕನಸು ಒಂದು ಹುಡುಗಿ, ಮತ್ತು ಅವಳಲ್ಲಿ ಅನುರಕ್ತವಾಗಿರುವ ಒಂದು ರಕ್ತಪಿಶಾಚಿಯ ಕುರಿತಾಗಿತ್ತು. ಆದರಿ ಸದರಿ ರಕ್ತಪಿಶಾಚಿಯು ಅವಳ ರಕ್ತಕ್ಕಾಗಿ ಹಪಹಪಿಸುತ್ತಿರುತ್ತದೆ.[೧೬] ಈ ಕನಸನ್ನು ಆಧರಿಸಿ, ಮೆಯೆರ್‌‌ ಬರೆದ ಕರಡು ಪ್ರತಿಯೇ ಈಗ ಸದರಿ ಪುಸ್ತಕದ 13ನೇ ಅಧ್ಯಾಯವಾಗಿದೆ.[೧೭] ಟ್ವಿಲೈಟ್‌‌‌ ನ್ನು ಪ್ರಕಟಿಸುವ ತನಗಾವ ಇರಾದೆ ಇರಲಿಲ್ಲವೆಂದೂ ಮತ್ತು ಕೇವಲ ತನ್ನ ಸಂತೋಷಕ್ಕಾಗಿ ತಾನು ಬರೆಯುತ್ತಿದ್ದುದಾಗಿಯೂ ಅವಳು ಸಮರ್ಥಿಸಿಕೊಳ್ಳುತ್ತಾಳಾದರೂ, ಕೇವಲ ಮೂರೇ ತಿಂಗಳಲ್ಲಿ ಅವಳು ತನ್ನ ಕನಸನ್ನು ಒಂದು ಸಂಪೂರ್ಣಗೊಳಿಸಲಾದ ಕಾದಂಬರಿಯಾಗಿ[೧] ರೂಪಾಂತರಿಸಿದಳು.[೧೮] ಈ ಪುಸ್ತಕಕ್ಕೆ ಸಂಬಂಧಿಸಿದಂತೆ ಆಕೆಯ ಸೋದರಿಯು ನೀಡಿದ ಪ್ರತಿಕ್ರಿಯೆಯು ಉತ್ಸಾಹಭರಿತವಾಗಿತ್ತು ಮತ್ತು ಸಾಹಿತ್ಯಿಕ ಮಧ್ಯವರ್ತಿ ಸಂಸ್ಥೆಗಳಿಗೆ ಅದರ ಹಸ್ತಪ್ರತಿಯನ್ನು ಕಳಿಸುವಂತೆ ಅವಳು ಮೆಯೆರ್‌ಳ ಮನವೊಲಿಸಿದಳು.[೧೨] ಆಕೆ ಬರೆದ 15 ಪತ್ರಗಳ ಪೈಕಿ, ಐದು ಪತ್ರಗಳಿಗೆ ಉತ್ತರ ಬದಲಿಲ್ಲ, ಒಂಬತ್ತು ಪತ್ರಗಳು ನಿರಾಕರಣೆಗಳನ್ನು ಹೊತ್ತುತಂದವು. ಆದರೆ ರೈಟರ್ಸ್‌ ಹೌಸ್‌ನ ಜೋಡಿ ರೀಮರ್‌ನಿಂದ ಬಂದ ಪತ್ರವು ಒಂದು ಪ್ರಶಂಸನೀಯ ಉತ್ತರವನ್ನು ಹೊತ್ತುತಂದಿತು.[೧೯] 2003ರಲ್ಲಿ ನಡೆದ ಹರಾಜೊಂದರಲ್ಲಿ ಟ್ವಿಲೈಟ್‌ ನ್ನು ಪ್ರಕಟಿಸುವುದಕ್ಕೆ ಸಂಬಂಧಿಸಿದ ಹಕ್ಕುಗಳಿಗಾಗಿ ಎಂಟು ಮಂದಿ ಪ್ರಕಾಶಕರು ಪೈಪೋಟಿ ನಡೆಸಿದರು.[೧೯] ನವೆಂಬರ್ ವೇಳೆಗೆ‌, ಲಿಟ್ಲ್‌, ಬ್ರೌನ್‌ ಅಂಡ್‌ ಕಂಪನಿಯೊಂದಿಗೆ 750,000 $ನಷ್ಟು ಮೊತ್ತದ ಮೂರು-ಪುಸ್ತಕಗಳ ವ್ಯವಹಾರವೊಂದಕ್ಕೆ ಮೆಯೆರ್‌ ಸಹಿಹಾಕಿದ್ದಳು.[೨೦]

2005ರಲ್ಲಿ ಟ್ವಿಲೈಟ್‌ ಪ್ರಕಟಗೊಂಡಿತು ಮತ್ತು ಆ ಮುದ್ರಣದ ಅವಧಿಯಲ್ಲೇ 75,000 ಪ್ರತಿಗಳು ಹೊರಬಂದವು.[೧೯] ಬಿಡುಗಡೆಯಾದ ಒಂದು ತಿಂಗಳೊಳಗಾಗಿ,[೨೧] ಮಕ್ಕಳ ಅಧ್ಯಾಯದ ಕಥಾಪುಸ್ತಕಗಳಿಗಾಗಿರುವ ನ್ಯೂಯಾರ್ಕ್‌ ಟೈಮ್ಸ್‌‌ ನ ಅತ್ಯುತ್ತಮ ಮಾರಾಟದ ಪುಸ್ತಕಗಳ ಪಟ್ಟಿಯಲ್ಲಿ ಇದು #5ನೇ ಶ್ರೇಯಾಂಕವನ್ನು ತಲುಪಿತು, ಮತ್ತು ನಂತರದಲ್ಲಿ #1ನೇ ಸ್ಥಾನಕ್ಕೇರಿತು.[೨೨] ಕಾದಂಬರಿಗೆ ಸಂಬಂಧಿಸಿದ ವಿದೇಶೀ ಹಕ್ಕುಗಳು 26ಕ್ಕೂ ಹೆಚ್ಚಿನ ದೇಶಗಳಿಗೆ ಮಾರಲ್ಪಟ್ಟವು.[೨೩] ಈ ಕಾದಂಬರಿಯು ಪಬ್ಲಿಷರ್ಸ್‌ ವೀಕ್ಲಿ ಯ ವರ್ಷದ ಅತ್ಯುತ್ತಮ ಪುಸ್ತಕವಾಗಿ ಹಾಗೂ ನ್ಯೂಯಾರ್ಕ್‌ ಟೈಮ್ಸ್‌‌‌ ನ ಸಂಪಾದಕರ ಒಂದು ಆಯ್ಕೆಯಾಗಿ ಹೆಸರಿಸಲ್ಪಟ್ಟಿತು.[೨೪]

ನಂತರದ ಕಾದಂಬರಿಗಳು[ಬದಲಾಯಿಸಿ]

ಮೆಯೆರ್‌‌, ನವೆಂಬರ್‌ 2008

ಟ್ವಿಲೈಟ್‌‌ ನ (2005) ಯಶಸ್ಸನ್ನು ಅನುಸರಿಸಿ, ಇನ್ನೂ ಮೂರು ಪುಸ್ತಕಗಳೊಂದಿಗಿನ ಒಂದು ಸರಣಿಯಾಗಿ ಕಥೆಯನ್ನು ಮೆಯೆರ್‌ ವಿಸ್ತರಿಸಿದಳು. ಅವುಗಳೆಂದರೆ, ನ್ಯೂ ಮೂನ್‌ (2006), ಎಕ್ಲಿಪ್ಸ್‌‌ (2007), ಮತ್ತು ಬ್ರೇಕಿಂಗ್‌ ಡಾನ್‌ (2008). ಅದರ ಪ್ರಕಟಣೆಯ ನಂತರದ ಮೊದಲ ವಾರದಲ್ಲೇ, ಮಕ್ಕಳ ಅಧ್ಯಾಯದ ಕಥಾಪುಸ್ತಕಗಳಿಗಾಗಿರುವ ನ್ಯೂಯಾರ್ಕ್‌ ಟೈಮ್ಸ್‌‌ ನ ಅತ್ಯುತ್ತಮ ಮಾರಾಟದ ಪುಸ್ತಕಗಳ ಪಟ್ಟಿಯಲ್ಲಿ ನ್ಯೂ ಮೂನ್‌ #5ನೇ ಸ್ಥಾನವನ್ನು ಗಳಿಸಿತು ಮತ್ತು ತನ್ನ ಎರಡನೇ ವಾರದಲ್ಲಿ #1ನೇ ಸ್ಥಾನಕ್ಕೇರಿ, ನಂತರದ ಹನ್ನೊಂದು ವಾರಗಳವರೆಗೆ ಅದೇ ಸ್ಥಾನವನ್ನು ಕಾಯ್ದುಕೊಂಡಿತ್ತು. ಒಟ್ಟಾರೆಯಾಗಿ, ಪಟ್ಟಿಯಲ್ಲಿ ಇದು 50 ವಾರಗಳಿಗೂ ಹೆಚ್ಚಿನ ಅವಧಿಯನ್ನು ಕಳೆಯಿತು.[೨೫] ಎಕ್ಲಿಪ್ಸ್‌‌‌‌ ನ ಬಿಡುಗಡೆಯ ನಂತರ, ಮೊದಲ ಮೂರು "ಟ್ವಿಲೈಟ್‌" ಪುಸ್ತಕಗಳು

ನ್ಯೂಯಾರ್ಕ್‌ ಟೈಮ್ಸ್‌‌ ನ ಅತ್ಯುತ್ತಮ ಮಾರಾಟದ ಪುಸ್ತಕಗಳ ಪಟ್ಟಿಯಲ್ಲಿ ಒಂದು ಸಂಯೋಜಿತ 143 ವಾರಗಳನ್ನು ಕಳೆದವು.[೧] ಟ್ವಿಲೈಟ್‌  ಸರಣಿಯ ನಾಲ್ಕನೇ ಕಂತಾದ ಬ್ರೇಕಿಂಗ್‌ ಡಾನ್‌ , ಆರಂಭಿಕ ಮುದ್ರಣದ ಅವಧಿಯಲ್ಲಿ 3.7 ದಶಲಕ್ಷ ಪ್ರತಿಗಳೊಂದಿಗೆ ಬಿಡುಗಡೆಯಾಯಿತು.[೨೬] ಮೊದಲನೆಯ ದಿನದಂದೇ 1.3 ದಶಲಕ್ಷಕ್ಕೂ ಮೀರಿದ ಪ್ರತಿಗಳು ಮಾರಾಟವಾದವು.[೨೭] J. K. ರೌಲಿಂಗ್‌‌‌ದಿ ಟೇಲ್ಸ್‌ ಆಫ್‌ ಬೀಡ್ಲ್‌ ದಿ ಬಾರ್ಡ್‌  ಪುಸ್ತಕದ ಜೊತೆಗಿನ ತೀವ್ರ ಪೈಪೋಟಿಯ ನಡುವೆಯೂ, ಈ ಕಾದಂಬರಿಯು ಮೆಯೆರ್‌‌ಗೆ ಅವಳ ಮೊದಲ ಬ್ರಿಟಿಷ್‌ ಬುಕ್‌ ಪ್ರಶಸ್ತಿಯನ್ನು ದಕ್ಕಿಸಿಕೊಟ್ಟಿತು.[೨೮] ಈ ಸರಣಿಯು ವಿಶ್ವಾದ್ಯಂತ[೪] 37 ಭಾಷೆಗಳಲ್ಲಿ 100 ದಶಲಕ್ಷ ಪ್ರತಿಗಳಿಗಿಂತಲೂ ಹೆಚ್ಚು ಸಂಖ್ಯೆಯಲ್ಲಿ ಮಾರಾಟವಾಗಿದೆ.[೨೯] 2008ರಲ್ಲಿ, ಸರಣಿಯ ನಾಲ್ಕು ಪುಸ್ತಕಗಳು USA ಟುಡೆ 'ಯ ವರ್ಷಾಂತ್ಯದ ಅತ್ಯುತ್ತಮ ಮಾರಾಟದ ಪುಸ್ತಕದ ಪಟ್ಟಿಯಲ್ಲಿ ಮೊದಲ ನಾಲ್ಕು ಸ್ಥಾನಗಳನ್ನು ಸಾಧಿಸುವುದರ ಮೂಲಕ, ಈ ಗಮನಾರ್ಹವಾದ ಸಾಹಸವನ್ನು ಸಾಧಿಸಿದ ಮೊದಲ ಲೇಖಕಿ ಹಾಗೂ ಆ ವರ್ಷದ ಅತ್ಯಧಿಕ ಮಾರಾಟದ ಜನಪ್ರಿಯ ಪುಸ್ತಕದ ಲೇಖಕಿ ಎಂಬ ಕೀರ್ತಿಯನ್ನು ಮೆಯೆರ್‌‌ಗೆ ತಂದುಕೊಟ್ಟವು.[೬] ಟ್ವಿಲೈಟ್‌  ಕಾದಂಬರಿಗಳು USA ಟುಡೆಯ ವರ್ಷಾಂತ್ಯದ ಪಟ್ಟಿಯಲ್ಲಿ ಮತ್ತೆ 2009ರಲ್ಲಿ[೩೦]   ಮೊದಲ ನಾಲ್ಕು ಸ್ಥಾನಗಳನ್ನು ಪಡೆದುಕೊಂಡವು.

ಆಗಸ್ಟ್‌ 2009ರಲ್ಲಿ, ತನ್ನ ಅತ್ಯಧಿಕ ಮಾರಾಟದ ಜನಪ್ರಿಯ ಲೇಖಕರ ಪಟ್ಟಿಯಲ್ಲಿನ J.K. ರೌಲಿಂಗ್‌‌‌ನ ದಾಖಲೆಯನ್ನು ಮೆಯೆರ್‌‌ ಮುರಿದಿದ್ದಾಳೆ ಎಂದು USA ಟುಡೆ ಪ್ರಕಟಿಸಿತು; ಅವಳ ನಾಲ್ಕು ಟ್ವಿಲೈಟ್‌ ಪುಸ್ತಕಗಳು 10 ಅಗ್ರಗಣ್ಯ ಪುಸ್ತಕಗಳ ಪಟ್ಟಿಯಲ್ಲಿ ಅವಿಚ್ಛಿನ್ನವಾಗಿ 52 ವಾರಗಳನ್ನು ಕಳೆದಿದ್ದುದು ಈ ದಾಖಲೆಗೆ ಕಾರಣವಾಗಿತ್ತು.[೩೧] ನ್ಯೂಯಾರ್ಕ್‌ ಟೈಮ್ಸ್‌ ಅತ್ಯುತ್ತಮ ಮಾರಾಟದ ಪುಸ್ತಕಗಳ ಪಟ್ಟಿ ಯಲ್ಲಿಯೂ ಈ ಪುಸ್ತಕಗಳು 102 ವಾರಕ್ಕಿಂತಲೂ ಹೆಚ್ಚಿನ ಅವಧಿಯನ್ನು ಕಳೆದಿವೆ.

ಸರಣಿಯಲ್ಲಿನ ನಾಲ್ಕನೇ ಪ್ರವೇಶವನ್ನು ಸಂಪೂರ್ಣಗೊಳಿಸಿದ ನಂತರ, ಬ್ರೇಕಿಂಗ್‌ ಡಾನ್‌ ಕಾದಂಬರಿಯು ಬೆಲ್ಲಾ ಸ್ವಾನ್‌‌‌ಳ ದೃಷ್ಟಿಕೋನದಿಂದ ಹೇಳಲ್ಪಡುವ ಅಂತಿಮ ಕಾದಂಬರಿಯಾಗಲಿದೆ ಎಂದು ಮೆಯೆರ್‌ ಸೂಚನೆ ನೀಡಿದಳು.[೩೨] ಮಿಡ್‌ನೈಟ್‌ ಸನ್‌ , ಈ ಸರಣಿಗೆ ಒಂದು ಸಹವರ್ತಿ ಕಾದಂಬರಿಯಾಗಬೇಕಿತ್ತು. ಇದು ಟ್ವಿಲೈಟ್‌ ಕಾದಂಬರಿಯ ಘಟನೆಗಳನ್ನು ಮತ್ತೊಮ್ಮೆ ಹೇಳುವ, ಆದರೆ ಎಡ್ವರ್ಡ್‌ ಕಲೆನ್‌ (ಬೆಲ್ಲಾ ಸ್ವಾನ್‌ಗೆ ತದ್ವಿರುದ್ಧವಾಗಿ) ದೃಷ್ಟಿಕೋನದಲ್ಲಿ ವ್ಯಕ್ತಪಡಿಸುವ ಒಂದು ಕೃತಿಯಾಗಬೇಕಿತ್ತು.[೩೩] ಬ್ರೇಕಿಂಗ್‌ ಡಾನ್‌ ಕೃತಿಯು ಬಿಡುಗಡೆಯಾದ ಕೆಲವೇ ದಿನಗಳ ನಂತರ ಮಿಡ್‌ನೈಟ್‌ ಸನ್‌ ಕೃತಿಯನ್ನು ಬಿಡುಗಡೆ ಮಾಡಬೇಕೆಂದು ಮೆಯೆರ್‌‌ ಬಯಸಿದ್ದಳು. ಆದರೆ ಇದರ ಮೊದಲ 12 ಅಧ್ಯಾಯಗಳ ಒಂದು ಕರಡು ಲೇಖನವು ಆನ್‌ಲೈನ್‌ ಮೂಲಕ ಸೋರಿಕೆಯಾದ ನಂತರ, ಅನಿರ್ದಿಷ್ಟಾವಧಿಗೆ ಸದರಿ ಯೋಜನೆಯನ್ನು ವಿಳಂಬಗೊಳಿಸಲು ಮೆಯೆರ್‌ ನಿರ್ಧರಿಸಿದಳು.[೩೩][೩೪] ಸದರಿ ಸೋರಿಕೆಯ ಪರಿಣಾಮವಾಗಿ ಟ್ವಿಲೈಟ್‌ -ಹೊರತಾದ ವಿಷಯಗಳನ್ನೊಳಗೊಂಡ ಪುಸ್ತಕಗಳನ್ನು ಮುಂದುವರಿಸಲು ಮೆಯೆರ್‌ ನಿರ್ಧರಿಸಿದಳಾದ್ದರಿಂದ, "ಮಿಡ್‌ನೈಟ್‌ ಸನ್‌"ನ ಕರಡು ಅಧ್ಯಾಯಗಳು ತನ್ನ ವೆಬ್‌ಸೈಟ್‌ನಲ್ಲಿ ಲಭ್ಯವಾಗುವಂತೆ ಅವಳು ನೋಡಿಕೊಂಡಳು.[೩೩]

ಪ್ರೇರಣೆ[ಬದಲಾಯಿಸಿ]

ಟ್ವಿಲೈಟ್‌ ಸರಣಿಗೆ ಸಂಬಂಧಿಸಿದಂತೆ ಪ್ರಭಾವ ಬೀರಿದ ಅನೇಕ ಕಾದಂಬರಿಗಳನ್ನು ಮೆಯೆರ್‌ ಉಲ್ಲೇಖಿಸಿದ್ದು, ಚಾರ್ಲೋಟ್‌ ಬ್ರಾಂಟೆ ಬರೆದಿರುವ ಜೇನ್‌ ಐರ್‌‌ ಹಾಗೂ L.M. ಮಾಂಟ್‌ಗೋಮೆರಿ ಬರೆದಿರುವ ಆನ್ನೆ ಆಫ್‌ ಗ್ರೀನ್‌ ಗ್ಯಾಬಲ್ಸ್‌ ಕೃತಿಗಳು ಈ ಪ್ರೇರಣೆಗಳಲ್ಲಿ ಸೇರಿವೆ.[೩೫] ಸರಣಿಯಲ್ಲಿನ ಪ್ರತಿಯೊಂದು ಪುಸ್ತಕವೂ ಸಹ ಒಂದು ವಿಭಿನ್ನವಾದ ಸಾಹಿತ್ಯಿಕ ಶ್ರೇಷ್ಠಕೃತಿಯಿಂದ ನಿರ್ದಿಷ್ಟವಾಗಿ ಪ್ರೇರೇಪಿಸಲ್ಪಟ್ಟಿತ್ತು: ಜೇನ್‌ ಆಸ್ಟೆನ್‌‌‌ಪ್ರೈಡ್‌ ಅಂಡ್‌ ಪ್ರಿಜುಡೀಸ್‌‌‌ ನಿಂದ ಟ್ವಿಲೈಟ್‌ ; ಷೇಕ್ಸ್‌ಪಿಯರ್‌‌ರೋಮಿಯೋ ಅಂಡ್‌ ಜೂಲಿಯೆಟ್‌‌‌ ನಿಂದ ನ್ಯೂ ಮೂನ್‌ ; ಎಮಿಲಿ ಬ್ರಾಂಟೆವುದರಿಂಗ್‌ ಹೈಟ್ಸ್‌‌‌ ನಿಂದ ಎಕ್ಲಿಪ್ಸ್‌‌ ; ಮತ್ತು ಷೇಕ್ಸ್‌ಪಿಯರ್‌ನ ದಿ ಮರ್ಚೆಂಟ್‌ ಆಫ್‌ ವೆನಿಸ್‌ [೩೬] ಮತ್ತು ಎ ಮಿಡ್‌ಸಮ್ಮರ್‌ ನೈಟ್ಸ್‌ ಡ್ರೀಮ್‌‌‌ ಗಳಿಂದ ಬ್ರೇಕಿಂಗ್‌ ಡಾನ್‌‌ ನ ವಸ್ತು-ವಿಷಯವನ್ನು ಪಡೆದಿರುವುದು ಇದಕ್ಕೆ ನಿದರ್ಶನವಾಗಿದೆ.[೩೭] ಈ ಕುರಿತಾಗಿ ಮೆಯೆರ್‌‌ ಹೀಗೆ ಹೇಳಿದಳು, "ಪ್ರೌಢರಿಗೆ ಸಂಬಂಧಿಸಿದ ಪುಸ್ತಕಗಳನ್ನು ನನ್ನ ಜೀವನಪರ್ಯಂತ ಓದುತ್ತಾ ಬಂದಿರುವೆ. ನಾನು ಪ್ರಬುದ್ಧಳಾಗುತ್ತಿದ್ದಂತೆ ನಾನೋರ್ವ ತೀವ್ರಾಪೇಕ್ಷೆಯ ಓದುಗಳಾಗಿದ್ದೆ- ಪುಸ್ತಕವು ದಪ್ಪಗಿದ್ದಷ್ಟೂ ನನಗೆ ಅದು ಉತ್ತಮವಾಗಿ ಕಂಡುಬರುತ್ತಿತ್ತು."[೩೮] ತಾನು 0}ಆರ್ಸನ್‌ ಸ್ಕಾಟ್‌ ಕಾರ್ಡ್‌‌ನ ಓರ್ವ ಮಹಾನ್‌ ಅಭಿಮಾನಿ ಎಂದೂ ಹೇಳಿಕೊಂಡಿರುವ ಅವಳು, ಜೇನ್‌ ಆಸ್ಟೆನ್‌‌‌‌ಳ ಪುಸ್ತಕಗಳನ್ನು "ಮತ್ತೊಮ್ಮೆ-ಓದದೆಯೇ ವರ್ಷವೊಂದನ್ನು ತಾನು ಕಳೆಯಲಾರೆ" ಎಂದು ಹೇಳಿದ್ದಾಳೆ.[೩೮]

ಸಂಗೀತವೂ ಸಹ ತನ್ನ ಬರಹಗಾರಿಕೆಯ ಮೇಲೆ ಪ್ರಭಾವಬೀರಿದೆ ಎಂದು ಅವಳು ಹೇಳಿಕೊಂಡಿದ್ದು, ತನ್ನ ಪುಸ್ತಕಗಳ ಮೇಲೆ ನಿರ್ದಿಷ್ಟವಾದ ರೀತಿಯಲ್ಲಿ ಪ್ರಭಾವಬೀರಿದ "ಹಾಡುಗಳ ಪಟ್ಟಿಗಳನ್ನು" (Playlist.comನಿಂದ ಬಂದದ್ದು) ತನ್ನ ಹಾಡುಗಳ ವೆಬ್‌ಸೈಟ್‌ನಲ್ಲಿ ಅವಳು ಪ್ರಕಟಿಸಿದ್ದಾಳೆ. ಅವಳ ಆಯ್ಕೆಯ ಹಾಡುಗಳ ಪಟ್ಟಿಯಲ್ಲಿ ಆಗಿಂದಾಗ್ಗೆ ಕಾಣಿಸಿಕೊಂಡ ವಾದ್ಯವೃಂದಗಳಲ್ಲಿ ಮ್ಯೂಸ್‌, ಬ್ಲೂ ಅಕ್ಟೋಬರ್‌‌, ಮೈ ಕೆಮಿಕಲ್‌ ರೊಮಾನ್ಸ್‌, ಕೋಲ್ಡ್‌ಪ್ಲೇ, ಮತ್ತು ಲಿಂಕಿನ್‌ ಪಾರ್ಕ್‌ ಮೊದಲಾದವು ಸೇರಿವೆ.[೩೯][೪೦][೪೧][೪೨].

ಓರ್ವ ಮಾರ್ಮನ್‌ ಪಂಥದವಳಾಗಿರುವ ಮೆಯೆರ್‌‌, ತನ್ನ ನಂಬಿಕೆಯು ತನ್ನ ಕೃತಿಯ ಮೇಲೆ ಪ್ರಭಾವಬೀರಿದೆ ಎಂಬುದನ್ನು ಸಮ್ಮತಿಸುತ್ತಾಳೆ. ನಿರ್ದಿಷ್ಟವಾಗಿ ಹೇಳುವುದಾದರೆ, ತನ್ನ ಸ್ವಭಾವಗಳು "ವಿಶಿಷ್ಟವಾಗಿ ಇರಬಹುದಾದುದಕ್ಕಿಂತ ಹೆಚ್ಚಾಗಿ, ಅವು ಎಲ್ಲಿಂದ ಬಂದವು ಹಾಗೂ ಅವು ಯಾವಕಡೆಗೆ ಹೋಗುತ್ತಿವೆ ಎಂಬುದರ ಕಡೆಯೇ ಹೆಚ್ಚು ಆಲೋಚಿಸುವ ಪ್ರವೃತ್ತಿಯನ್ನು ಹೊಂದಿವೆ" ಎಂದು ಅವಳು ಹೇಳುತ್ತಾಳೆ.[೪೩] ತನ್ನ ಕಾದಂಬರಿಗಳು ಪ್ರಣಯಪೂರ್ವಕ ಸ್ವರೂಪವನ್ನು ಹೊಂದಿದ್ದಾಗ್ಯೂ, ಲೈಂಗಿಕತೆಯಂಥ ವಿಷಯಗಳಿಂದ ತನ್ನ ಕೃತಿಯನ್ನು ಮೆಯೆರ್‌ ವಿಮುಖಗೊಳಿಸುತ್ತಾಳೆ. ಮಾರ್ಮನ್‌ ಪಂಥದಿಂದ-ಪ್ರಭಾವಿತವಾಗಿರುವಂತೆ, ಅಥವಾ ಲೈಂಗಿಕ ಸಂಯಮ ಮತ್ತು ಆಧ್ಯಾತ್ಮಿಕ ಪರಿಶುದ್ಧತೆಗಳನ್ನು ಪ್ರವರ್ತಿಸುವ ರೀತಿಯಲ್ಲಿರುವಂತೆ ಪ್ರಜ್ಞಾಪೂರ್ವಕವಾಗಿ ತನ್ನ ಕಾದಂಬರಿಗಳನ್ನು ರೂಪಿಸುವ ಉದ್ದೇಶವನ್ನು ತಾನು ಹೊಂದಿಲ್ಲ ಎಂದು ಮೆಯೆರ್‌ ಹೇಳುತ್ತಾಳೆ. ಆದರೆ, ತನ್ನ ಬರಹಗಾರಿಕೆಗೆ ಅದರ ಮೌಲ್ಯಗಳು ಒಂದು ಆಕಾರ ಕೊಟ್ಟಿವೆ ಎಂಬುದನ್ನು ಒಪ್ಪಿಕೊಳ್ಳುತ್ತಾ, "ನಾನು ಯಾರು ಅಥವಾ ಏನಾಗಿರುವೆ ಎಂಬ ಕಾರಣದಿಂದಾಗಿ ನನ್ನ ಪುಸ್ತಕಗಳು ನಿಜವಾಗಿಯೂ ಸಜೀವವಾಗಿ ವರ್ಣಿಸಲ್ಪಟ್ಟಿವೆ ಅಥವಾ ನಿಗೂಢವಾಗಿವೆ ಎಂದೇನೂ ನಾನು ಭಾವಿಸುವುದಿಲ್ಲ. ನನ್ನ ಕಥೆಗಳಲ್ಲಿ ಯಾವಾಗಲೂ ಅಪರಿಮಿತವಾದ ಪ್ರಮಾಣದ ಅರಿವು ಅಥವಾ ಬೆಳಕು ಹರಿಸಲ್ಪಟ್ಟ ವಿಷಯಗಳು ಇರುತ್ತವೆ" ಎಂದು ಹೇಳುತ್ತಾಳೆ.[೪೪]

ಚಲನಚಿತ್ರ ರೂಪಾಂತರಗಳು[ಬದಲಾಯಿಸಿ]

2007ರ ಏಪ್ರಿಲ್‌ನಲ್ಲಿ ಸಮಿಟ್‌ ಎಂಟರ್‌ಟೈನ್‌ಮೆಂಟ್‌ ಸಂಸ್ಥೆಯು ಚಲನಚಿತ್ರದ ರೂಪಾಂತರಕ್ಕಾಗಿ ಟ್ವಿಲೈಟ್‌‌‌ ನ್ನು ಆಯ್ಕೆಮಾಡಿಕೊಂಡಿತು. ಸದರಿ ಚಲನಚಿತ್ರವನ್ನು ಕ್ಯಾಥರೀನ್‌ ಹಾರ್ಡ್‌ವಿಕ್‌ ನಿರ್ದೇಶಿಸಿದರೆ, ಚಿತ್ರಕಥೆಯು ಮೆಲಿಸಾ ರೋಸೆನ್‌ಬರ್ಗ್‌‌ಳಿಂದ ಬರೆಯಲ್ಪಟ್ಟಿತು.[೪೫] ಈ ಚಿತ್ರದಲ್ಲಿ ಬೆಲ್ಲಾ ಸ್ವಾನ್‌ ಪಾತ್ರದಲ್ಲಿ ಕ್ರಿಸ್ಟನ್‌ ಸ್ಟೀವರ್ಟ್‌ ನಟಿಸಿದ್ದರೆ, ಎಡ್ವರ್ಡ್‌ ಕಲೆನ್‌ ಪಾತ್ರದಲ್ಲಿ ರಾಬರ್ಟ್‌ ಪ್ಯಾಟಿನ್ಸನ್‌ ನಟಿಸಿರುವುದು ವಿಶೇಷ.[೪೬] ಈ ಚಲನಚಿತ್ರವು 2008ರ ನವೆಂಬರ್‌ 21ರಂದು ಬಿಡುಗಡೆಯಾಯಿತು.[೪೭] ಭೋಜನದ ದೃಶ್ಯವೊಂದರಲ್ಲಿನ ಒಂದು ಕಿರುಪಾತ್ರದಲ್ಲಿ ಮೆಯೆರ್‌ ಕಾಣಿಸಿಕೊಳ್ಳುತ್ತಾಳೆ.[೪೮] ಟ್ವಿಲೈಟ್‌‌ ನ ಯಶಸ್ಸನ್ನು ಅನುಸರಿಸಿ, ಅದರ ಉತ್ತರಭಾಗವಾದ ...The Twilight Saga: New Moon ಎಂಬುದರ ಒಂದು ಚಲನಚಿತ್ರ ರೂಪಾಂತರಕ್ಕೆ 2008ರ ನವೆಂಬರ್‌ನಲ್ಲಿ ಸಮಿಟ್‌ ಸಂಸ್ಥೆಯು ಹಸಿರು ನಿಶಾನೆಯನ್ನು ತೋರಿಸಿತು.[೪೯] ಕ್ರಿಸ್‌ ವೈಟ್ಜ್‌ ಎಂಬಾತ ಈ ಚಲನಚಿತ್ರವನ್ನು[೫೦] ನಿರ್ದೇಶಿಸಿದ. ಈ ಚಿತ್ರವು 2009ರ ನವೆಂಬರ್‌ 20ರಂದು ಬಿಡುಗಡೆಯಾಯಿತು.[೫೧] ಸರಣಿಯಲ್ಲಿನ ಮೂರನೇ ಪುಸ್ತಕವಾದ ...The Twilight Saga: Eclipse ನ ಒಂದು ರೂಪಾಂತರಕ್ಕೆ, 2009ರ ಫೆಬ್ರುವರಿ ಯಲ್ಲಿ ಸಮಿಟ್‌ ಸಂಸ್ಥೆಯು ಹಸಿರು ನಿಶಾನೆಯನ್ನು ತೋರಿಸಿತು.[೫೨] ಈ ಚಲನಚಿತ್ರವನ್ನು ಡೇವಿಡ್‌ ಸ್ಲೇಡ್‌ ಎಂಬಾತ ನಿರ್ದೇಶಿಸುತ್ತಿದ್ದು, ಇದರ ಬಿಡುಗಡೆಯ ದಿನಾಂಕವನ್ನು 2010ರ ಜೂನ್‌ 30ರಂದು ನಿಗದಿಗೊಳಿಸಲಾಗಿದೆ. ಬ್ರೇಕಿಂಗ್‌ ಡಾನ್‌ ಗೆ ಸಂಬಂಧಿಸಿದ ಹಕ್ಕುಗಳನ್ನೂ ಸಹ 2008ರ ನವೆಂಬರ್‌ನಲ್ಲಿ ಸಮಿಟ್‌ ಸಂಸ್ಥೆಯು ಪಡೆದುಕೊಂಡಿದೆಯಾದರೂ, ಅದರ ಚಲನಚಿತ್ರ ರೂಪಾಂತರಕ್ಕೆ ಇನ್ನೂ ಅದು ಅಂಗೀಕಾರದ ಮುದ್ರೆಯನ್ನೊತ್ತಿಲ್ಲ.[೫೩] ಬ್ರೇಕಿಂಗ್‌ ಡಾನ್‌ ಕೃತಿಯನ್ನು ಒಂದು ಪ್ರತ್ಯೇಕ ಚಲನಚಿತ್ರವಾಗಿ ಚಿತ್ರಿಸಬೇಕೇ ಅಥವಾ ಎರಡು-ಭಾಗಗಳ ಒಂದು ತಯಾರಿಕೆಯಂತೆ ಚಿತ್ರಿಸಬೇಕೇ ಎಂಬುದರ ಕುರಿತಾಗಿ, ಮೆಯೆರ್‌‌ ಹಾಗೂ ಸಮಿಟ್‌ ಎಂಟರ್‌ಟೈನ್‌ಮೆಂಟ್‌ ಇಬ್ಬರೂ ಒಂದು ನಿರ್ಧಾರಕ್ಕಿನ್ನೂ ಬಂದಿಲ್ಲ.[೫೪]

ಔಪಚಾರಿಕ ಸ್ವಾಗತ ಹಾಗೂ ಮಾನ್ಯತೆ[ಬದಲಾಯಿಸಿ]

2007ರಲ್ಲಿ ಎಕ್ಲಿಪ್ಸ್‌‌ಗೆ ಸಂಬಂಧಿಸಿದಂತೆ ಕೈಗೊಂಡ ಪುಸ್ತಕ ಪ್ರವಾಸದಲ್ಲಿ ಮೆಯೆರ್‌.

ಎಂಟರ್‌ಟೈನ್‌ಮೆಂಟ್‌ ವೀಕ್ಲಿ ಪತ್ರಿಕೆಯು ಮೆಯೆರ್‌‌ಳನ್ನು "ಆನ್ನೆ ರೈಸ್‌[೫೫] ನಂತರದ, ರಕ್ತಪಿಶಾಚಿ ವಿಷಯವನ್ನೊಳಗೊಂಡ ವಿಶ್ವದ ಅತ್ಯಂತ ಜನಪ್ರಿಯ ಕಾದಂಬರಿಗಾರ್ತಿಯಾಗಿ" ಕರೆದಿದ್ದರೆ, ದಿ ಗಾರ್ಡಿಯನ್‌ ಪತ್ರಿಕೆಯು ಅವಳನ್ನು ಓರ್ವ "ಕಲ್ಪನಾಶೀಲ ಕಥೆಗಾರ್ತಿಯಾಗಿ, ಓರ್ವ ಸಮೃದ್ಧ ಲೇಖಕಿಯಾಗಿ ಮತ್ತು ಪ್ರಕಟಣಾ ಮಾರುಕಟ್ಟೆಯಲ್ಲಿನ ಒಂದು ಹೊಸತಾದ ಶಕ್ತಿಯುತ ಮಾದರಿ ಅಥವಾ ಉಪಮೆಯಾಗಿ" ವರ್ಣಿಸಿದೆ.[೫೬] ಟೊರಂಟೊ ಸನ್‌ ಪತ್ರಿಕೆಯ ವೇಯ್ನ್‌ ಜೇನ್ಸ್‌‌ ಎಂಬಾತ ಈ ಮಾತಿಗೆ ಸಮ್ಮತಿಸುತ್ತಾ, "ಹೊಸತಾದ ಪ್ರೌಢರ ಕಾದಂಬರಿಗಳು ಎಂದು ಸಾಮಾನ್ಯವಾಗಿ ವರ್ಗೀಕರಿಸಲ್ಪಡುವುದರ ಆಧಾರದ ಮೇಲಿರುವ, ಕಳೆದ ಕೆಲವು ವರ್ಷಗಳಲ್ಲಿ ಅತ್ಯುತ್ತಮ-ಮಾರಾಟಗಳ ಪಟ್ಟಿಯಲ್ಲಿನ ವಸ್ತುತಃ ಪ್ರಾಬಲ್ಯದ ಮತ್ತೊಂದು ಪ್ರವೃತ್ತಿಯನ್ನು ಮೆಯೆರ್‌ಳ ಯಶಸ್ಸು ಒತ್ತಿಹೇಳುತ್ತದೆ" ಎಂದು ಹೇಳಿದ್ದಾನೆ, ಹಾಗೂ "ಒಂದು ಹೊಸ ಹ್ಯಾರಿ ಪಾಟರ್‌ ಸಾಹಸಕಥೆಯ ಅನುಪಸ್ಥಿತಿಯಲ್ಲಿ, ಒಂದು ಕನ್ಯೋಚಿತ ಜೇಮ್ಸ್‌ ಡೀನ್‌-ಶೈಲಿಯ ರಕ್ತಪಿಶಾಚಿಯ ಒಂದು ಪರಿಕಲ್ಪನೆಯೆಡೆಗೆ ಆಸಕ್ತಿಯನ್ನು ಕ್ಷೀಣಿಸಿಕೊಂಡಿದ್ದ ಹರೆಯದವರು, ಕಲ್ಪನಾಶಕ್ತಿಯ ಉತ್ಸಾಹಿಗಳು ಅತವಾ ಭ್ರಮಾಧೀನರು ಮತ್ತು ಮಹಿಳೆಯರು (ಕೃತಿಯ ಮಾರಾಟವು ಬಹುಪಾಲು ಮಹಿಳೆಯರನ್ನು ಗುರಿಯಾಗಿಟ್ಟುಕೊಂಡಿದೆ), ಮೆಯೆರ್‌ಳನ್ನು ಪರಿಶುದ್ಧವಾದ ಪ್ರೀತಿಗಾಗಿ ಬಯಸುವ ಹುಡುಗಿಯನ್ನಾಗಿ ಮಾಡಿವೆ" ಎಂದು ಉಲ್ಲೇಖಿಸಿದ್ದಾನೆ.[೫೭] ಇದರ ಜೊತೆಗೆ, ದಿ ಟೈಮ್ಸ್‌‌ ಪತ್ರಿಕೆಯ ಟೈಮನ್‌ ಸ್ಮಿತ್‌‌ ಎಂಬಾತ ಮೆಯೆರ್‌ಳನ್ನು "ಹೊಸ ಪೀಳಿಗೆಯ ವಯಸ್ಕರ ಕಾದಂಬರಿ ಲೋಕದ ಮಹಾನ್‌ತಾರೆ" ಎಂದು ವರ್ಣಿಸಿದ್ದಾನೆ.[೫೮]

MSN ಲೈಫ್‌ಸ್ಟೈಲ್‌ನ "2008ರ ಅತ್ಯಂತ ಪ್ರಭಾವಶಾಲಿ ಮಹಿಳೆಯರ" ಪೈಕಿ ಒಬ್ಬಳಾಗಿ ಮೆಯೆರ್‌ ಹೆಸರಿಸಲ್ಪಟ್ಟಳು ಮತ್ತು ಓರ್ವ "ಸಾಹಿತ್ಯಿಕ ಪ್ರತಿಭಾಶಾಲಿಯಾಗಿ" ವರ್ಣಿಸಲ್ಪಟ್ಟಳು.[೫೯] ಟೈಮ್‌ ನಿಯತಕಾಲಿಕದ "2008ರಲ್ಲಿನ ಅತ್ಯಂತ ಪ್ರಭಾವಶಾಲೀ ಜನರ" ಪಟ್ಟಿಯಲ್ಲಿ[೯] ಅವಳು #49ನೇ ಶ್ರೇಯಾಂಕವನ್ನೂ ಪಡೆದುಕೊಂಡಳು ಮತ್ತು "ಅತ್ಯಂತ ಗಮನಾರ್ಹವೆನಿಸಿಕೊಂಡಿರುವ ಜನರ" ಪಟ್ಟಿಯಲ್ಲಿ ಅವಳು ಸೇರಿಸಲ್ಪಟ್ಟಳು. ಈ ಕುರಿತು ಲೆವ್‌ ಗ್ರಾಸ್‌ಮನ್‌ ತನ್ನ ಅಭಿಪ್ರಾಯವನ್ನು ತಿಳಿಸುತ್ತಾ, "ಓರ್ವ ಮಾರ್ಮನ್‌ ಪಂಥದ ವ್ಯಕ್ತಿಯನ್ನು ಅಧ್ಯಕ್ಷೀಯ ಪದವಿಗೆ ನಾಮಕರಣಮಾಡಲು ಅಮೆರಿಕನ್ನರು ಪ್ರಾಯಶಃ ಇನ್ನೂ ಸಿದ್ಧವಿಲ್ಲ ಎನಿಸುತ್ತದೆ. ಆದರೆ ವರ್ಷದ ಅತ್ಯುತ್ತಮವಾಗಿ ಮಾರಾಟವಾಗುವ ಜನಪ್ರಿಯ ಕಾದಂಬರಿಯ ಲೇಖರನ್ನಾಗಿ ಓರ್ವ ಮಾರ್ವನ್‌ ಪಂಥದವರಿಗೆ ಪಟ್ಟಕಟ್ಟಲು ಅವರು ಅತ್ಯಂತ ಉತ್ಸುಕರಾಗಿದ್ದಾರೆ."[೬೦] ಇವೆಲ್ಲದರ ಜೊತೆಗೆ, ದಿ ಅರಿಝೋನಾ ರಿಪಬ್ಲಿಕ್‌‌ ನ "ಕಣಿವೆಯ ಅತ್ಯಂತ ಚಿತ್ತಾಕರ್ಷಕ ಜನರ" ಪಟ್ಟಿಯಲ್ಲಿ, 2008ರ ಡಿಸೆಂಬರ್‌ನಲ್ಲಿ ಮೆಯೆರ್‌ ಸೇರಿಸಲ್ಪಟ್ಟಳು.[೬೧]

ಆರ್ಸನ್‌ ಸ್ಕಾಟ್‌ ಕಾರ್ಡ್‌ ಎಂಬ ಕಾದಂಬರಿಕಾರ ಈ ಕುರಿತು ಮಾತನಾಡುತ್ತಾ, "ಸ್ಟೆಫೆನಿ ಮೆಯೆರ್‌ ಒಂದು ವಿಷಯವನ್ನು ಸ್ಪಷ್ಟಗೊಳಿಸುವ ನಿಚ್ಚಳತೆಯೊಂದಿಗೆ ಬರೆಯುತ್ತಾಳೆ; ಈ ವಿಷಯದಲ್ಲಿ ಓದುಗರು ಹಾಗೂ ಅವರು ಹಂಚಿಕೊಳ್ಳುವ ಕನಸಿನ ಮಧ್ಯೆ ಅವಳೆಂದೂ ನಿಲ್ಲುವುದಿಲ್ಲ. ಅವಳೊಬ್ಬ ಅಪ್ಪಟ ಅಥವಾ ನಿಜವಾದ ಬರಹಗಾರ್ತಿ" ಎಂದು ಹೇಳಿದ್ದಾನೆ.[೬೨] ಸ್ಕಾಟ್‌ ತನ್ನ ಮಾತನ್ನು ಮುಂದುವರಿಸುತ್ತಾ, ಮೆಯೆರ್‌ಳನ್ನು ಓರ್ವ "ವಿಸ್ಮಯಕರ ಅಸಾಧಾರಣ ವ್ಯಕ್ತಿ" ಎಂಬುದಾಗಿ ವರ್ಣಿಸಿದ್ದಾನೆ.[೬೩] ನ್ಯೂಸ್‌ವೀಕ್‌ ಜೊತೆಗಿನ ಸಂದರ್ಶನವೊಂದರಲ್ಲಿ ಜೋಡಿ ಪಿಕೌಲ್ಟ್‌‌ ಎಂಬ ಲೇಖಕ ಮಾತನಾಡುತ್ತಾ, "ಪುಸ್ತಕಗಳಿಗೇ ಅಂಟಿಕೊಂಡಿರುವಂತೆ ಜನರನ್ನು ಸ್ಟೆಫೆನಿ ಮೆಯೆರ್‌ ಪ್ರೇರೇಪಿಸಿದ್ದು, ಇದು ನಮ್ಮಂಥ ಎಲ್ಲರಿಗೂ ಒಳ್ಳೆಯದನ್ನು ಮಾಡಿದೆ" ಎಂದು ಹೇಳಿದ.[೬೪]

ಫೋರ್ಬ್ಸ್‌‌‌ ನ "ಹಾಲಿವುಡ್‌ನ ಅತ್ಯಂತ ಹೆಚ್ಚು-ಗಳಿಕೆಯ ಮಹಿಳೆಯರ" ಪಟ್ಟಿಯಲ್ಲಿ ಮೆಯೆರ್‌ಗೆ #5ನೇ ಶ್ರೇಯಾಂಕ ದೊರಕಿತು, ಮತ್ತು ಹೊಸ ಪೀಳಿಗೆಯ-ವಯಸ್ಕರ, "ರಕ್ತಪಿಶಾಚಿ ವಿಷಯ ಸಂಬಂಧಿತ ಪುಸ್ತಕಗಳ ಪೈಕಿ ಟ್ವಿಲೈಟ್‌ ಸರಣಿಗಳು ಪ್ರಕಟಣಾ ಪ್ರಪಂಚ ಹಾಗೂ ಚಲನಚಿತ್ರ ಪ್ರಪಂಚವನ್ನು ಬಿರುಗಾಳಿಯಂತೆ ಆಕ್ರಮಿಸಿಕೊಂಡಿವೆ" ಎಂದು ಉಲ್ಲೇಖಿಸಲ್ಪಟ್ಟಿತು.[೬೫] ಆ ಪಟ್ಟಿಯಲ್ಲಿ ಮೆಯೆರ್‌ ಏಕೈಕ ಲೇಖಕಿಯಾಗಿದ್ದಳು. ವ್ಯಾನಿಟಿ ಫೇರ್‌‌‌‌ ನ 2009ರ "ಮಾಹಿತಿ ಯುಗದ 100 ಪ್ರಭಾವಿಶಕ್ತಿಗಳ" ಪಟ್ಟಿಯಲ್ಲಿಯೂ ಅವಳು #82ನೇ ಶ್ರೇಯಾಂಕವನ್ನು ಪಡೆದಳು.[೬೬] ಅದೇ ವರ್ಷದಲ್ಲಿ, ಬ್ಲೂವಾಟರ್‌ ಪ್ರೊಡಕ್ಷನ್ಸ್‌‌ನ ಒಂದು ಶೀರ್ಷಿಕೆಯಾದ ಫೀಮೇಲ್‌ ಫೋರ್ಸ್‌ ಎಂಬ ಜೀವನಚರಿತ್ರೆಯ ಸಚಿತ್ರ ಪುಸ್ತಕದ ಸಂಚಿಕೆಯೊಂದರಲ್ಲಿ ಮೆಯೆರ್‌ ಕಾಣಿಸಿಕೊಂಡಳು. ಸಮಾಜ ಮತ್ತು ಜನಪ್ರಿಯ ಸಂಸ್ಕೃತಿಗಳಲ್ಲಿನ ಪ್ರಭಾವಶಾಲೀ ಮಹಿಳೆಯರನ್ನು ಈ ಪುಸ್ತಕವು ಗೌರವಿಸುತ್ತದೆ.[೫೧] ಈ ಸಚಿತ್ರ ಪುಸ್ತಕವು ಇದಕ್ಕಿಂತಲೂ ಮುಂಚಿತವಾಗಿ ಓಪ್ರಾಹ್‌ ವಿನ್‌ಫ್ರೇ ಹಾಗೂ ರಾಜಕುಮಾರಿ ಡಯಾನಾರಂಥ ಮಹಿಳೆಯರ ಜೀವನಚರಿತ್ರೆಗಳನ್ನು ಪ್ರಕಟಿಸಿತ್ತು.[೫೧]

ಅಮೆಝಾನ್‌ನಿಂದ ಪ್ರಕಟಿಸಲ್ಪಟ್ಟ, JK ರೌಲಿಂಗ್‌‌‌ಗೆ ಮಾತ್ರವೇ ಪರಿಚಿತವಾದದ್ದು ಎಂಬಂತಿದ್ದ ಪಟ್ಟಿಯೊಂದರ ಅನುಸಾರ, ಅತ್ಯಧಿಕ ಮಾರಾಟದ ಪುಸ್ತಕಗಳಿಗೆ ಸಂಬಂಧಿಸಿದಂತೆ ದಶಕದ ಎರಡನೇ ಜನಪ್ರಿಯ ಲೇಖಕಿಯ ಸ್ಥಾನವನ್ನು ಮೆಯೆರ್‌ ಅಲಂಕರಿಸಿದಳು.[೬೭] ಅತ್ಯಧಿಕ ಮಾರಾಟದ ಪುಸ್ತಕಗಳ ಜನಪ್ರಿಯ ಲೇಖಕರ ಪಟ್ಟಿಯಲ್ಲಿ ಮೆಯೆರ್‌ ಬಾಲ್ಕು ಪುಸ್ತಕಗಳನ್ನು ಹೊಂದಿದ್ದರೆ, ಅವಳೊಂದಿಗೆ ಹೋಲಿಕೆಗೆ ಒಳಗಾದ ರೌಲಿಂಗ್‌ ಮೂರು ಪುಸ್ತಕಗಳನ್ನು ಹೊಂದಿದ್ದ.

ಅಭಿಮಾನಿ ಬಳಗ[ಬದಲಾಯಿಸಿ]

ತನ್ನ ಟ್ವಿಲೈಟ್‌ ಕಾದಂಬರಿಗಳನ್ನು ಮೆಚ್ಚಿಕೊಂಡಿರುವ ಹೊಸ ಪೀಳಿಗೆಯ ಪ್ರೌಢ ಓದುಗರ ನಡುವಿನ ಅಭಿಮಾನೀ ಬಳಗವೊಂದನ್ನು ಮೆಯೆರ್‌ ಗಳಿಸಿದ್ದು, ವಾಷಿಂಗ್ಟನ್‌ ಸಂಸ್ಥಾನದಲ್ಲಿನ ಒಲಿಂಪಿಕ್‌ ಪೆನಿನ್ಸುಲಾದಲ್ಲಿರುವ ಫೋರ್ಕ್ಸ್‌‌ ಎಂಬ ಸಣ್ಣ ನಗರದಲ್ಲಿ ಈ ಕಾದಂಬರಿಗಳ ಸನ್ನಿವೇಶಗಳು ರೂಪತಳೆದಿವೆ. ಈ ರೀತಿಯಲ್ಲಿ ಫೋರ್ಕ್ಸ್‌‌ ಪಟ್ಟಣವು ಒಂದು ಅಸಾಮಾನ್ಯ ಪ್ರಮಾಣದ ಗಮನವನ್ನು ಪಡೆದುಕೊಂಡಿದೆ, ಮತ್ತು

ಬೆಲ್ಲಾ ಸ್ವಾನ್‌‌ಳ ಪಾತ್ರದ ಹುಟ್ಟುಹಬ್ಬದ ದಿನಾಂಕವಾದ ಸೆಪ್ಟೆಂಬರ್‌ 13ರಂದು "ಸ್ಟೆಫೆನಿ ಮೆಯೆರ್‌ ದಿನವನ್ನು" ಆಚರಿಸುತ್ತದೆ.[೬೮]

ಅಭಿಮಾನಿಗಳು ಬೇರೆಯದೇ ಆದ ರೀತಿಯಲ್ಲಿ ತಮ್ಮನ್ನು, ತಮ್ಮ ಸಂಭ್ರಮವನ್ನು ಅಭಿವ್ಯಕ್ತಗೊಳಿಸುತ್ತಾರೆ: "ಅವರು ಮೆಯೆರ್‌ ಸೃಷ್ಟಿಯ ಪಾತ್ರಗಳಂತೆ ವೇಷಭೂಷಣವನ್ನು ಧರಿಸುತ್ತಾರೆ. ಅವುಗಳ ಕುರಿತಾಗಿ ತಮ್ಮದೇ ಆದ ರೀತಿಯಲ್ಲಿ ಕಥೆ ಬರೆಯುವ ಅವರು, ಅವನ್ನು ಅಂತರ್ಜಾಲದಲ್ಲಿ ಪ್ರಕಟಿಸುತ್ತಾರೆ. ಆಕೆಯು ಯಾವುದಾದರೊಂದು ಪುಸ್ತಕದ ಅಂಗಡಿಯಲ್ಲಿ ಕಾಣಿಸಿಕೊಂಡರೆ, ಸುಮಾರು 3,000 ಮಂದಿ ಅವಳನ್ನು ಭೇಟಿ ಮಾಡಲು ಧಾವಿಸುತ್ತಾರೆ. ಅವರು ಟ್ವಿಲೈಟ್‌-ವಿಷಯವನ್ನೊಳಗೊಂಡ ರಾಕ್‌ ವಾದ್ಯಸಂಗೀತದ ತಂಡಗಳಾಗಿರುತ್ತಾರೆ."[೧]

ಟೀಕೆ[ಬದಲಾಯಿಸಿ]

ಸ್ಟೀಫನ್‌ ಕಿಂಗ್‌‌ರಂಥ ವ್ಯಕ್ತಿಗಳಿಂದ ಟ್ವಿಲೈಟ್‌ ಪುಸ್ತಕಗಳು ಟೀಕೆಗೆ ಒಳಗಾಗುತ್ತಾ ಬಂದಿವೆ. ಈ ಕುರಿತು ಸ್ಟೀಫನ್‌ ಕಿಂಗ್‌ ಮಾತನಾಡುತ್ತಾ, "J.K. ರೌಲಿಂಗ್‌ ಹಾಗೂ ಮೆಯೆರ್ ನಡುವಿನ ನಿಜವಾದ ವ್ಯತ್ಯಾಸವೇನೆಂದರೆ, ಜೋ ರೌಲಿಂಗ್‌ ಓರ್ವ ಸೊಗಸಾದ ಬರಹಗಾರ, ಮತ್ತು ಸ್ಟೆಫೆನಿ ಮೆಯೆರ್‌ ಅದರ ಒಂದು ಎಳೆಯನ್ನೂ ಬರೆಯಲಾರಳು. ಅವಳು ತುಂಬಾ ಒಳ್ಳೆಯ ಲೇಖಕಿಯೇನೂ ಅಲ್ಲ" ಎಂದು ಹೇಳಿದ.[೬೯][೭೦] ಆದರೂ, ಸದರಿ ಕಥಾಸರಣಿಯ ಆಕರ್ಷಣೆಯನ್ನು ಅಥೈಸಿಕೊಂಡ ಕಿಂಗ್‌ ತನ್ನ ಮಾತುಗಳನ್ನು ಮುಂದುವರೆಸುತ್ತಾ, "ಜನರು ಈ ಕಥೆಗಳಿಂದ, ಅದರ ವೇಗದಿಂದ ಆಕರ್ಷಿತರಾಗಿದ್ದಾರೆ. ಸ್ಟೆಫೆನಿ ಮೆಯೆರ್‌ಗೆ ಸಂಬಂಧಿಸಿ ಹೇಳುವುದಾದರೆ, ಅವಳು ಹುಡುಗಿಯರ ಒಂದು ಸಂಪೂರ್ಣ ಪೀಳಿಗೆಯನ್ನು ಗುರಿಯಾಗಿಟ್ಟುಕೊಂಡು ಬರೆಯುತ್ತಿರುವುದು ಮತ್ತು ಈ ಪುಸ್ತಕಗಳಲ್ಲಿ ಪ್ರೀತಿ ಹಾಗೂ ಲೈಂಗಿಕತೆಯ ಒಂದು ಕ್ಷೇಮಕರ ಜೋಡಣೆಯ ವಿಧಾನವೊಂದನ್ನು ಮುಕ್ತವಾಗಿರಿಸುತ್ತಿರುವುದು ಅತ್ಯಂತ ಸ್ಪಷ್ಟವಾಗಿ ಕಾಣುತ್ತದೆ. ಇದು ಪ್ರಚೋದಕವಾಗಿದೆ ಮತ್ತು ಇದು ರೋಮಾಂಚಕವಾಗಿದೆ ಹಾಗೂ ಇದು ಕಣ್ಣಿಗೆ ಕಾಣುವ ರೀತಿಯಲ್ಲಿ ಲೈಂಗಿಕತೆಯ ಸೂಚಕವಾಗಿಲ್ಲದಿರುವುದರಿಂದ, ನಿರ್ದಿಷ್ಟವಾಗಿ ಇದು ಭಯವುಂಟುಮಾಡುವುದಿಲ್ಲ" ಎಂದು ಹೇಳಿದ.[೭೦]

ಮೆಯೆರ್‌ಳನ್ನು ಓರ್ವ ಸ್ತ್ರೀಸಮಾನತಾವಾದಿ-ವಿರೋಧಿ ಲೇಖಕಿಯೆಂಬಂತೆ ಪರಿಗಣಿಸುವ ಸ್ತ್ರೀಸಮಾನತಾವಾದಿಗಳಿಂದ ಬಲವಾದ ಟೀಕೆಗಳು ಬಂದಿವೆ. ಬೆಲ್ಲಾಳ ಸಂಪೂರ್ಣ ಜೀವನವು ಎಡ್ವರ್ಡ್‌ನ ಸುತ್ತಲೇ ಸುತ್ತುತ್ತದೆ, ಮತ್ತು ಅವಳು ಯಾವತ್ತೂ ನಿಯಂತ್ರಣದಲ್ಲಿರುವುದಿಲ್ಲ; ತನ್ನ ಜೀವ, ತನ್ನ ಕನ್ಯತ್ವ, ಮತ್ತು ತನ್ನ ಮಾನವೀಯತೆಯನ್ನು ರಕ್ಷಿಸುವಲ್ಲಿನ ಎಡ್ವರ್ಡ್‌ನ ಸಾಮರ್ಥ್ಯದ ಮೇಲೆ ಅವಳು ಸಂಪೂರ್ಣವಾಗಿ ಅವಲಂಬಿತಳಾಗಿರುತ್ತಾಳೆ ಎಂಬ ಅಂಶಗಳನ್ನು ಈ ಟೀಕಾಕಾರರು ತಮ್ಮ ಟೀಕೆಗಳಿಗೆ ಆಧಾರವಾಗಿ ಎತ್ತಿಹಿಡಿಯುತ್ತಾರೆ.[೭೧][೭೨]

ಸದರಿ ಪುಸ್ತಕಗಳು ಬೆಲ್ಲಾಳ ಆಯ್ಕೆಯ ಸುತ್ತ ಸುತ್ತುತ್ತವೆ ಎಂದು ವಾದಿಸುವ ಮೂಲಕ, ಮತ್ತು ಅವಳ ತೀವ್ರಯಾತನೆಯಲ್ಲಿರುವ ಅವಿವಾಹಿತ ತರುಣಿಯ ವ್ಯಕ್ತಿತ್ವವು ಕೇವಲ ಅವಳ ಮಾನವೀಯತೆಯ ಸ್ವಭಾವದಿಂದ ಬಂದುದಾಗಿದೆ ಎಂದು ವಾದಿಸುವ ಮೂಲಕ, ಇಂಥ ಟೀಕೆಗಳನ್ನು ಮೆಯೆರ್‌ ತಳ್ಳಿಹಾಕಿದ್ದಾಳೆ.[೭೩]

ಇತರ ಕೃತಿಗಳು[ಬದಲಾಯಿಸಿ]

ಮೆಯೆರ್‌‌ಳ ಸಣ್ಣಕಥೆಗಳ ಪೈಕಿ ಒಂದು ಕಥೆಯು ಪ್ರಾಮ್‌ ನೈಟ್ಸ್‌‌ ಫ್ರಂ ಹೆಲ್‌ ನಲ್ಲಿ ಪ್ರಕಟಗೊಂಡಿತು. ಈ ಸಂಕಲನವು ಅತಿಮಾನುಷ ಪ್ರಭಾವಗಳೊಂದಿಗಿನ ಕೆಟ್ಟ ಪ್ರಾಮ್‌ ರಾತ್ರಿಗಳ ಕುರಿತಾದ ಕಥೆಗಳನ್ನು ಒಳಗೊಂಡಿತ್ತು. ಈ ಸಂಕಲನಕ್ಕೆ ತಮ್ಮ ಕೊಡುಗೆಯನ್ನು ನೀಡಿದ ಇತರ ಲೇಖಕರಲ್ಲಿ, ಮೆಗ್‌ ಕೊಬಾಟ್‌, ಕಿಮ್‌ ಹ್ಯಾರಿಸನ್‌, ಮಿಷೆಲಿ ಜಫೆ, ಮತ್ತು ಲೌರೆನ್‌ ಮೈರಕಲ್‌ ಮೊದಲಾದವರು ಸೇರಿದ್ದಾರೆ. ಪ್ರಾಮ್‌ ನೈಟ್ಸ್‌‌ ಫ್ರಂ ಹೆಲ್‌ ಸಂಕಲನವು 2007ರ ಏಪ್ರಿಲ್‌ನಲ್ಲಿ ಬಿಡುಗಡೆಯಾಯಿತು .

2008ರ ಮೇ ತಿಂಗಳಲ್ಲಿ, ಮೆಯೆರ್‌‌ಳ ದಿ ಹೋಸ್ಟ್‌ ಎಂಬ ಹೆಸರಿನ ವಯಸ್ಕ ಓದುಗರಿಗೆ ಮೀಸಲಾದ ವೈಜ್ಞಾನಿಕ ಕಾದಂಬರಿಯು, ಲಿಟ್ಲ್‌, ಬ್ರೌನ್‌ ಅಂಡ್‌ ಕಂಪನಿಯ ವಯಸ್ಕ ಕಥಾ ವಿಭಾಗದಿಂದ ಬಿಡುಗಡೆಮಾಡಲ್ಪಟ್ಟಿತು; ಒಟ್ಟಾಗಿ ಕೆಲಸಮಾಡುವಂತೆ ಒತ್ತಾಯಕ್ಕೀಡಾಗಿರುವ ಓರ್ವ ಯುವ ಹೆಂಗಸು ಹಾಗೂ ಒಂದು ಆಕ್ರಮಣಕಾರಿ ಅನ್ಯಗ್ರಹವಾಸಿ "ಆತ್ಮ"ವಾದ, ಮೆಲನೀ ಸ್ಟ್ರೈಡರ್‌ ಮತ್ತು ವಾಂಡರರ್‌ಗೆ ಸಂಬಂಧಿಸಿದ ಕಥೆಯನ್ನು ಇದು ಅನುಸರಿಸುತ್ತದೆ. ನ್ಯೂಯಾರ್ಕ್‌ ಟೈಮ್ಸ್‌‌ ನ ಅತ್ಯುತ್ತಮ ಮಾರಾಟದ ಪುಸ್ತಕದ ಪಟ್ಟಿಯಲ್ಲಿ[೭೪] ದಿ ಹೋಸ್ಟ್‌ ಕಾದಂಬರಿಯು #1ನೇ ಶ್ರೇಯಾಂಕವನ್ನು ಗಳಿಸಿಕೊಂಡಿತು, ಮತ್ತು ಆ ಪಟ್ಟಿಯಲ್ಲಿ 26 ವಾರಗಳವರೆಗೆ ಉಳಿದುಕೊಂಡಿತ್ತು.[೭೫] 2008ರ ಮಾರ್ಚ್‌ನಲ್ಲಿ, ದಿ ಸೋಲ್‌ ಎಂಬ ಶೀರ್ಷಿಕೆಯನ್ನು ಹೊಂದಿರುವ, ದಿ ಹೋಸ್ಟ್‌ ಕಾದಂಬರಿಯ ಒಂದು ಸಂಭವನೀಯ ಉತ್ತರಭಾಗದ ಬರೆಯುವಿಕೆಯನ್ನು ತಾನು "ಹೆಚ್ಚೂಕಮ್ಮಿ ಸಂಪೂರ್ಣಗೊಳಿಸಿರುವುದಾಗಿ" ಮೆಯೆರ್‌ ತಿಳಿಸಿದಳು.[೭೬] ಒಂದು ವೇಳೆ ಸರಣಿಯನ್ನು ಅವಳು ಮುಂದುವರಿಸುವುದೇ ಆದಲ್ಲಿ, ಮೂರನೆಯ ಪುಸ್ತಕವನ್ನು ದಿ ಸೀಕರ್‌ ಎಂದು ಕರೆಯಲಾಗುತ್ತದೆ.[೭೭]

ಇನ್ನೂ ಹಲವಾರು ಪುಸ್ತಕಗಳ ಕುರಿತಾದ ಪರಿಕಲ್ಪನೆಗಳನ್ನು ತಾನು ಹೊಂದಿರುವುದಾಗಿ ಮೆಯೆರ್‌ ಉಲ್ಲೇಖಿಸಿದ್ದಾಳೆ. ಸಮ್ಮರ್‌ ಹೌಸ್‌ ಎಂಬ ಶೀರ್ಷಿಕೆಯ ಒಂದು ಪ್ರೇತದ ಕಥೆ ಹಾಗೂ ಕಾಲಯಾನವನ್ನು[೭೮] ಒಳಗೊಂಡಿರುವ ಒಂದು ಕಾದಂಬರಿ ಮತ್ತು ಮತ್ಸ್ಯಕನ್ಯೆಯರ ಕುರಿತಾದ ಮತ್ತೊಂದು ಕೃತಿ ಇವೆಲ್ಲವೂ ಆ ಪರಿಕಲ್ಪನೆಗಳಲ್ಲಿ ಸೇರಿವೆ.[೭೯]

2008ರ ಆಗಸ್ಟ್‌ 28ರಂದು, ಜ್ಯಾಕ್‌ನ ಮ್ಯಾನ್ನೆಕ್ವಿನ್‌‌ನ "ದಿ ರೆಸಲ್ಯೂಷನ್‌" ಎಂಬ ಹೆಸರಿನ ಸಂಗೀತ ವಿಡಿಯೋಗೆ ಸಂಬಂಧಿಸಿದಂತೆ ಮೆಯೆರ್‌ ನಿರೂಪಣೆಯನ್ನು ಬರೆದಿದ್ದಾಳೆ ಎಂದು ಪ್ರಕಟಿಸಲ್ಪಟ್ಟಿತು. ನಂತರದ ವಾರದಲ್ಲಿ, ಈ ಸಂಗೀತ ವಿಡಿಯೋದ ಸಹನಿರ್ದೇಶನದಲ್ಲಿ ಅವಳು ತೊಡಗಿಸಿಕೊಂಡಳು.[೮೦][೮೧]

2009ರಲ್ಲಿ, ತನ್ನದೇ ಸ್ವಂತ ವಸ್ತ್ರವಿನ್ಯಾಸದ ಶ್ರೇಣಿಯನ್ನು ತಯಾರಿಸಲು, ಹೋಬೋ ಸ್ಕೇಟ್‌ ಕಂಪನಿ ಎಂಬ ಒಂದು ಸ್ಕೇಟ್‌ಬೋರ್ಡ್‌ ಹಾಗೂ ವೇಷಭೂಷಣದ ಕಂಪನಿಯೊಂದಿಗೆ ಮೆಯೆರ್‌ ಕೈಜೋಡಿಸಿದಳು. ದಿ ಹೋಸ್ಟ್‌ ಎಂಬ ತನ್ನ ವೈಜ್ಞಾನಿಕ-ಕಾದಂಬರಿಗೆ ಸಂಬಂಧಿಸಿದ T-ಷರ್ಟುಗಳು ಮತ್ತು ಸ್ಕೇಟ್‌ಬೋರ್ಡುಗಳ ಒಂದು ಶ್ರೇಣಿಯನ್ನು ಇದು ಒಳಗೊಂಡಿತ್ತು.[೮೨]

"ದಿ ಷಾರ್ಟ್‌ ಸೆಕಂಡ್‌ ಲೈಫ್‌ ಆಫ್‌ ಬ್ರೀ ಟ್ಯಾನರ್‌" ಎಂಬ ಹೆಸರಿನ 200-ಪುಟಗಳ ಒಂದು ಸಣ್ಣ ಕಾದಂಬರಿಯನ್ನು ಮೆಯೆರ್‌ ಬರೆದಿರುವುದರ ಕುರಿತು 2010ರ ಮಾರ್ಚ್‌ 30ರಂದು ಪ್ರಕಟಿಸಲಾಯಿತು. 2010ರ ಜೂನ್‌ 5ರಂದು ಈ ಪುಸ್ತಕವು ಆಟಂನಿಂದ ಬಿಡುಗಡೆಯಾಗಲಿದ್ದು, ಅಧಿಕೃತ ವೆಬ್‌ಸೈಟ್‌ನಲ್ಲಿ ಜೂನ್‌ 7 ಮತ್ತು ಜುಲೈ 5ರ ನಡುವಣ ಮುಕ್ತವೀಕ್ಷಣೆಗಾಗಿಯೂ ಇದು ಲಭ್ಯವಾಗಲಿದೆ.[೮೩][೮೪]

ಲೋಕೋಪಕಾರ[ಬದಲಾಯಿಸಿ]

2009ರ ಏಪ್ರಿಲ್‌ನಲ್ಲಿ, ಪ್ರಾಜೆಕ್ಟ್‌ ಬುಕ್‌ ಬೇಬ್‌ ಎಂಬ ಯೋಜನೆಯಲ್ಲಿ ಮೆಯೆರ್‌‌ ಪಾಲ್ಗೊಂಡಳು. ಫೇತ್‌‌ ಹೊಚಾಲ್ಟರ್‌ ಎಂಬ ತನ್ನ ಸ್ನೇಹಿತೆಗೆ ಸ್ತನ ಕ್ಯಾನ್ಸರ್‌ ತಗುಲಿಕೊಂಡಿದೆ ಎಂದು ತಿಳಿದುಬಂದ ನಂತರ, ಅವಳ ವೈದ್ಯಕೀಯ ಚಿಕಿತ್ಸೆಯ ಖರ್ಚನ್ನು ಪಾವತಿಸಲು ನೆರವಾಗುವುದಕ್ಕಾಗಿ ವಿನ್ಯಾಸಗೊಳಿಸಲಾದ ಸಹಾಯಾರ್ಥ ಯೋಜನೆ ಇದಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಹಮ್ಮಿಕೊಳ್ಳಲಾದ ಹರಾಜಿಗಾಗಿ ಅನೇಕ ಓದುಗರ ಮುಂಗಡ ಪ್ರತಿಗಳನ್ನು ಹಾಗೂ ಮೂಲ ಹಸ್ತಪ್ರತಿಗಳನ್ನು ಮೆಯೆರ್‌ ದಾನವಾಗಿ ನೀಡಿದಳು.[೮೫][೮೬] ಅದೇ ವರ್ಷದಲ್ಲಿ, ದಿ ಹೋಸ್ಟ್‌ -ವಿಷಯವನ್ನೊಳಗೊಂಡ ಸ್ಕೇಟ್‌ಬೋರ್ಡುಗಳನ್ನು ಹರಾಜು ಹಾಕಲೆಂದು ಹೋಬೋ ಸ್ಕೇಟ್‌ ಕಂಪನಿಯೊಂದಿಗೆ ಮೆಯೆರ್‌ ಕೈಜೋಡಿಸಿದಳು. ಇವುಗಳ ಮಾರಾಟದಿಂದ ಸಂಗ್ರಹವಾದ 1500 $ನಷ್ಟು ಹಣವನ್ನು ಧರ್ಮಕಾರ್ಯಗಳಿಗಾಗಿ ನೀಡಲಾಯಿತು.[೮೨]

ಪ್ರಕಟಣೆಗಳು[ಬದಲಾಯಿಸಿ]

ಟ್ವಿಲೈಟ್‌ ಸರಣಿ
  1. ಟ್ವಿಲೈಟ್‌ (2005)
  2. ನ್ಯೂ ಮೂನ್‌ (2006)
  3. ಎಕ್ಲಿಪ್ಸ್‌‌ (2007)
  4. ಬ್ರೇಕಿಂಗ್‌ ಡಾನ್‌ (2008)
ಇತರ ಪುಸ್ತಕಗಳು

ಆಕರಗಳು[ಬದಲಾಯಿಸಿ]

  1. ೧.೦ ೧.೧ ೧.೨ ೧.೩ ೧.೪ Lev Grossman (2009-11-13). "It's Twilight in America". Time. Archived from the original on 2012-01-19. Retrieved 2009-11-13.
  2. ೨.೦ ೨.೧ Claudia Parsons (2008-11-20). ""Twilight" publisher sees film boosting book sales". Yahoo!. Archived from the original on 2020-03-29. Retrieved 2008-11-21.
  3. ೩.೦ ೩.೧ Kenneth Turan (2002-11-21). "Movie Review: 'Twilight'". LA Times. Retrieved 2008-11-21.
  4. ೪.೦ ೪.೧ John A. Sellers (2010-03-30). "New Stephenie Meyer Novella Arriving in June". Publishers Weekly. Retrieved 2010-03-30.
  5. "Books year in review". USA Today. 2008-12-28. Retrieved 2009-07-23.
  6. ೬.೦ ೬.೧ "Sellers basked in Stephenie Meyer's 'Twilight' in 2008". USA Today. 2009-01-15. Retrieved 2009-01-16. {{cite news}}: Cite uses deprecated parameter |authors= (help)
  7. "The World's Most Powerful Celebrities: #26 Stephenie Meyer". Forbes. Retrieved 2009-07-23.
  8. "The top 100 titles of 2008". USA Today. 2009-01-14. Retrieved 2009-01-16.
  9. ೯.೦ ೯.೧ "The 2008 Time 100 Finalists". Archived from the original on 2011-02-03. Retrieved 2009-07-23.
  10. Gil Kaufman (2009-06-04). "Angelina Jolie, Oprah, Madonna Top Forbes Celebrity 100". MTV. Retrieved 2009-06-10.
  11. Cracroft, Richard H. (Winter 2008). "YA Novels and Mormon Memoirs". Brigham Young University Magazine. Retrieved 2008-08-01.
  12. ೧೨.೦ ೧೨.೧ ೧೨.೨ Damian Whitworth (2008-05-13). "Harry who? Meet the new J.K. Rowling". The Times. Retrieved 2009-08-15.
  13. ೧೩.೦ ೧೩.೧ Tony-Allen Mills (2008-08-10). "News Review interview: Stephenie Meyer". The Times. Retrieved 2009-08-15.
  14. "'Twilight' author, Stephenie Meyer is America's JK Rowling". The Independent. 2009-11-19. Archived from the original on 2012-03-19. Retrieved 2009-11-21.
  15. Jeff Chew (2009-09-18). "Twilight author a part-time resident of Peninsula on which her books are set". Peninsula Daily News. Retrieved 2009-09-18.
  16. ೧೬.೦ ೧೬.೧ StephenieMeyer‌‌.com | ಟ್ವಿಲೈಟ್‌ ಹಿಂದಿನ ಕಥೆ
  17. Walker, Michael R. (Winter 2007). "A Teenage Tale With Bite". Brigham Young University Magazine. Retrieved 2008-08-01.
  18. "BookStories Interview with Stephenie Meyer". BookStories. Changing Hands Bookstore. August 2006. Retrieved 2009-08-15.
  19. ೧೯.೦ ೧೯.೧ ೧೯.೨ "Stephenie Meyer By the Numbers". Publishers Weekly. 2008-12-05. Retrieved 2009-08b-15. {{cite web}}: Check date values in: |accessdate= (help)
  20. Karen Valby. "Stephenie Meyer: Inside the 'Twilight' Saga". Entertainment Weekly. Archived from the original on 2014-11-05. Retrieved 2009-08-15.
  21. "ಹರ್‌ ಲಿಟರರಿ ಕೆರೀರ್‌ - ಸ್ಟೆಫೆನಿ ಮೆಯೆರ್‌". Archived from the original on 2010-08-12. Retrieved 2010-04-14.
  22. "Children's Books - New York Times". New York Times. 2007-06-17. Archived from the original on 2012-11-23. Retrieved 2009-07-23.
  23. "Stephenie Meyer". Waterstone's. Retrieved 2009-08-15.
  24. Larry Carroll (2008-05-09). "Official 'Twilight' Synopsis Sadly Lacking In 'OME!' Exclamations". MTV. Retrieved 2009-08-15.
  25. ದಿ ನ್ಯೂಯಾರ್ಕ್‌ ಟೈಮ್ಸ್‌‌‌ , ಆಗಸ್ಟ್‌ 2007 - ಮಕ್ಕಳ ಪುಸ್ತಕಗಳು‌: ಅತ್ಯಧಿಕ ಮಾರಾಟದ ಪುಸ್ತಕಗಳು Archived 2015-10-21 ವೇಬ್ಯಾಕ್ ಮೆಷಿನ್ ನಲ್ಲಿ.
  26. Jacks, Brian (2008-08-04). "'Breaking Dawn' Sells 1.3 Million Copies in One Day". MTV.com. Retrieved 2008-08-09.
  27. Jim Milliot (2008-08-04). "'Breaking Dawn' Breaks Hachette Records". Publishers Weekly. Retrieved 2008-10-18.
  28. Hephzibah Anderson (2009-04-03). "Obama's 'Dreams,' Meyer's Vampires Capture 'Nibbie' Book Awards". Bloomberg.com. Retrieved 2009-04-11.
  29. Anita Singh (2008-08-22). "Harry Potter under threat from Bella Swan in new vampire film Twilight". The Daily Telegraph. Archived from the original on 2011-01-26. Retrieved 2008-11-01.
  30. "Stephenie Meyer's 'Twilight' series sweeps top four spots". USA Today. 2010-01-14. Retrieved 2010-01-14. {{cite web}}: Cite uses deprecated parameter |authors= (help)
  31. "Twilight series eclipses Potter records on Best-Selling list". USA Today. 2009-08-05. Retrieved 2010-01-14. {{cite web}}: Cite uses deprecated parameter |authors= (help)
  32. StephenieMeyer.com Twilight Series | Breaking Dawn
  33. ೩೩.೦ ೩೩.೧ ೩೩.೨ StephenieMeyer.com Twilight Series | Midnight Sun
  34. "Stephenie Meyer spits dummy, dumps book after spoiler post". www.meeja.com.au. 2008-09-03. Retrieved 2008-09-03.
  35. Karen Valby (2008-11-05). "Stephenie Meyer: 12 of My 'Twilight' Inspirations". Entertainment Weekly. Archived from the original on 2009-07-22. Retrieved 2008-11-05.
  36. "Frequently Asked Questions: Breaking Dawn". December 14, 2008. Retrieved 2009-06-04. "What was the other book besides Midsummer Night's Dream that you said influenced Breaking Dawn?" As noted above, it was The Merchant of Venice.
  37. Proctor, Maurine (August 8, 2008). "Stephenie Meyer's Twilight". Meridian. Archived from the original on ಡಿಸೆಂಬರ್ 1, 2008. Retrieved December 11, 2008.
  38. ೩೮.೦ ೩೮.೧ "Author Interview: Stephenie Meyer". Hachette Book Group. Archived from the original on 2009-10-09. Retrieved 2009-10-04.
  39. StephenieMeyer.com Twilight Series | Twilight | Playlist
  40. StephenieMeyer.com Twilight Series | New Moon | Playlist
  41. StephenieMeyer.com Twilight Series | Eclipse | Playlist
  42. StephenieMeyer.com Twilight Series | Breaking Dawn | Playlist
  43. Trachtenberg, Jeffrey A. (August 10, 2007). "Booksellers Find Life After Harry In a Vampire Novel". The Wall Street Journal. Retrieved 2008-12-11.
  44. Mills, Tony-Allen (August 10, 2008). "News Review interview: Stephenie Meyer". The Times. Retrieved 2008-12-12.
  45. ಫ್ಲೆಮಿಂಗ್‌, ಮೈಕೇಲ್‌ ಹಾರ್ಡ್‌ವಿಕ್‌ ಟು ಡೈರೆಕ್ಟ್‌‌ ಮೆಯೆರ್‌‌'ಸ್‌ 'ಟ್ವಿಲೈಟ್‌', ವೆರೈಟಿ (ಅಕ್ಟೋಬರ್‌‌ 2, 2007)
  46. StephenieMeyer.com Twilight Series | Twilight | Twilight the Movie
  47. ಎ ಸ್ಟ್ರಾಟಜಿಕ್‌ ಮೂವ್‌? Archived 2008-09-09 ವೇಬ್ಯಾಕ್ ಮೆಷಿನ್ ನಲ್ಲಿ.ಟ್ವಿಲೈಟ್‌ ಮೂವ್ಸ್‌ ರಿಲೀಸ್‌ ಡೇಟ್‌ ಟು ನವೆಂಬರ್‌ 21! - ದಿ ಮೂವಿ-ಫೆನಟಿಕ್‌ Archived 2008-09-09 ವೇಬ್ಯಾಕ್ ಮೆಷಿನ್ ನಲ್ಲಿ.
  48. Larry Carroll (2008-04-04). "Exclusive: 'Twilight' Author Stephenie Meyer Shoots Movie Cameo". MTV. Retrieved 2009-02-12.
  49. Carroll, Larry (2008-11-22). "'Twilight' Sequel Confirmed: 'New Moon' To Hit The Big Screen". MTV. MTV Networks. Archived from the original on 2010-03-15. Retrieved 2009-04-20.
  50. "Chris Weitz To Direct Summit Entertainment's New Moon". Summit Entertainment. 2008-12-13. Retrieved 2009-04-20.
  51. ೫೧.೦ ೫೧.೧ ೫೧.೨ Sperling, Nicole (2008-12-10). "'Twilight' sequel: New details on 'New Moon'". Entertainment Weekly. Time Inc. Archived from the original on 2008-12-12. Retrieved 2009-04-20.
  52. "Summit Entertainment Starts Production on The Twilight Saga: Eclipse" (Press release). Summit Entertainment. 2009-08-18. Retrieved 2009-08-18.
  53. Steven Zeitchik (2008-11-14). "'Twilight' film franchise looks ahead". The Hollywood Reporter. Archived from the original on 2008-12-17. Retrieved 2010-01-12.
  54. ಬ್ರೇಕಿಂಗ್‌ ಡಾನ್‌ನಲ್ಲಿನ ಇಯಾನ್‌ಲೈನ್‌ ಲೇಖನ‌
  55. Gregory Kirschling (2007-08-02). "Stephenie Meyer's 'Twilight' Zone". Entertainment Weekly. Archived from the original on 2009-04-21. Retrieved 2009=04-14. {{cite web}}: Check date values in: |accessdate= (help)
  56. "All fangs, no bite". The Guardian. 2008-08-07. Retrieved 2009-08-16.
  57. Wayne Janes (2008-12-28). "The might of bite". Toronto Sun. Archived from the original on 2012-10-28. Retrieved 2009-08-23.
  58. Tymon Smith (2009-08-07). "Stephanie Meyer vs Jordan Scott". The Times. Archived from the original on 2010-04-11. Retrieved 2009-08-23.
  59. "MSN Lifestyle's Most Influential Women of 2008". MSN. Archived from the original on 2009-02-10. Retrieved 2009-08-23.
  60. Lev Grossman. "People Who Mattered: Stephenie Meyer". Time. Archived from the original on 2009-05-25. Retrieved 2009-08-23.
  61. Jaimee Rose (2008-12-27). "Valley's most fascinating people: Stephenie Meyer". The Arizona Republic. Archived from the original on 2011-11-06. Retrieved 2009-08-23.
  62. Orson Scott Card. "The 2008 Time 100: Stephenie Meyer". Time. Archived from the original on 2009-05-24. Retrieved 2009-08-23.
  63. StephenieMeyer.com | The Host
  64. Jennie Yabroff (2009-04-11). "Why Is It A Sin To Read For Fun?". Newsweek. Retrieved 2009-09-29.
  65. Dorothy Pomerantz (2009-08-05). "Hollywood's Top-Earning Women". Forbes. Archived from the original on 2012-09-18. Retrieved 2009-08-23.
  66. "The New Establishment 2009". Vanity Fair. 2009-09-01. Retrieved 2009-09-02.
  67. http://www.telegraph.co.uk/technology/Amazon‌/6825584/Amazon-top-10-best-selling-books-of-the-decade.html[ಶಾಶ್ವತವಾಗಿ ಮಡಿದ ಕೊಂಡಿ]
  68. ಸಿಟಿ ಆಫ್‌ ಫೋರ್ಕ್ಸ್‌‌, ವಾಷಿಂಗ್ಟನ್‌: ಸ್ಟೆಫೆನಿ ಮೆಯೆರ್‌ ಡೇ[ಶಾಶ್ವತವಾಗಿ ಮಡಿದ ಕೊಂಡಿ]
  69. ಬ್ರೈನ್‌ ಟ್ಯೂಯಿಟ್‌: ಇಟ್ಸ್‌ ಗ್ರೇಟ್‌ ಟು ಬಿ ದಿ ಕಿಂಗ್‌ , ಪುಟ 7. USA ವೀಕೆಂಡ್‌ , ಮಾರ್ಚ್‌ 6–8, 2009.
  70. ೭೦.೦ ೭೦.೧ ಸ್ಟೀಫನ್‌ ಕಿಂಗ್‌ ಸೇಸ್‌ 'ಟ್ವಿಲೈಟ್‌' ಆಥರ್‌ 'ಕೆನಾಟ್‌ ರೈಟ್‌', ಫೆಬ್ರುವರಿ 3, 2009
  71. Laura Miller (2008-07-30). "Touched by a vampire". salon.com. Archived from the original on 2010-03-27. Retrieved 2009-12-03.
  72. Christine Seifert. "Bite Me! (Or Don't)". bitchmagazine.org. Archived from the original on 2010-01-07. Retrieved 2009-12-03.
  73. "New Moon: The Story". StephenieMeyer.com. Retrieved November 13, 2008.
  74. ಬುಕ್ಸ್‌‌ - ಬೆಸ್ಟ್‌-ಸೆಲ್ಲರ್‌ ಲಿಸ್ಟ್ಸ್‌ - ನ್ಯೂಯಾರ್ಕ್‌ ಟೈಮ್ಸ್‌
  75. "The 25 Entertainers of the Year". Entertainment Weekly. 2008-11-13. Archived from the original on 2014-10-22. Retrieved 2008-11-13.
  76. ಮೋರ್‌‌ ಫ್ರಂ ಬರ್ಲಿನ್‌ ಟ್ವಿಲೈಟ್‌ ಲೆಕ್ಸಿಕನ್‌
  77. "'ಟ್ವಿಲೈಟ್‌' ರೈಟರ್‌ ಸ್ಟೆಫೆನಿ ಮೆಯೆರ್‌ ವಾಂಟ್ಸ್‌‌ ಮ್ಯಾಟ್‌ ಡೆಮಾನ್‌ ಫಾರ್‌‌ 'ಹೋಸ್ಟ್‌' ಮೂವೀ - ಮೂವೀ ನ್ಯೂಸ್‌ ಸ್ಟೋರಿ MTV ಮೂವೀ ನ್ಯೂಸ್‌". Archived from the original on 2010-04-27. Retrieved 2010-04-14.
  78. "ಸ್ಟೆಫೆನಿ ಮೆಯೆರ್‌'ಸ್‌ ವ್ಯಾಂಪೈರ್‌‌ ಎಂಪೈರ್‌ ಸ್ಟೆಫೆನಿ ಮೆಯೆರ್‌ | ಕವರ್‌‌ ಸ್ಟೋರಿ | ಬುಕ್ಸ್‌ | ಎಂಟರ್‌ಟೈನ್‌ಮೆಂಟ್‌ ವೀಕ್ಲಿ | 4". Archived from the original on 2014-10-22. Retrieved 2010-04-14.
  79. ಟ್ವಿಲೈಟ್‌ ಸೀರೀಸ್‌ ಆಫರ್ಸ್‌ ಯಂಗ್‌ ಪೀಪಲ್‌ ಎ ಟ್ವಿಸ್ಟ್‌ ಆನ್‌ ವ್ಯಾಂಪೈರ್‌ ಫಿಕ್ಷನ್‌ - CBC ಆರ್ಟ್ಸ್‌ ಬುಕ್ಸ್‌
  80. James Montgomery (2008-08-28). "'Twilight' Author Stephenie Meyer To Direct Vampire-Free Jack's Mannequin Video". MTV. Retrieved 2008-10-29.
  81. Jennifer Vineyard (2008-09-05). "'Twilight' Author Stephenie Meyer Tries To Drown Jack's Mannequin In 'Resolution' Video". MTV. Retrieved 2008-10-29.
  82. ೮೨.೦ ೮೨.೧ Terri Schwartz (2009-09-02). "'Twilight' Author Stephenie Meyer Gets Her Own Clothingline!". MTV. MTV Networks. Archived from the original on 2009-09-04. Retrieved 2009-09-03.
  83. Flood, Alison (30 March 2010). "Stephenie Meyer to publish new Twilight novella". The Guardian. Retrieved 30 March 2010.
  84. Debi Moore (2010-03-30). "New Twilight Novella Coming: The Short Second Life of Bree Tanner". DC. Dread Central. Retrieved 2010-03-30.
  85. Stephenie Meyer (2009-03-27). "March 27, 2008: Save the Book Babe!". StephenieMeyer.com. Retrieved 2009-08-15.
  86. PJ Standlee (2009-04-07). "Stephenie Meyer, J.S. Lewis and More Young Adult Authors Fight Cancer With Project Book Babe". Phoenix New Times. Archived from the original on 2009-04-23. Retrieved 2009-08-15.

ಬಾಹ್ಯ ಕೊಂಡಿಗಳು[ಬದಲಾಯಿಸಿ]

Wikiquote
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
[[wikiquote:kn:{{{1}}}|ಸ್ಟೆಫೆನಿ ಮೆಯೆರ್‌]]