ಮೀರಾ ಜಾಸ್ಮಿನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೀರಾ ಜಾಸ್ಮಿನ್

ಜಾಸ್ಮಿನ್, ೨೦೧೧ರಲ್ಲಿ
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಜಾಸ್ಮಿನ್ ಮೇರಿ ಜೋಸೆಫ್
(1984-02-15) ಫೆಬ್ರವರಿ ೧೫, ೧೯೮೪ (ವಯಸ್ಸು ೪೦)
ತಿರುವಳ್ಳ, ಕೇರಳ, ಭಾರತ
ವರ್ಷಗಳು ಸಕ್ರಿಯ ೨೦೦೧-ಇಲ್ಲಿಯವರೆಗೆ


ಜಾಸ್ಮಿನ್ ಮೇರಿ ಜೋಸೆಫ್, ಮೀರಾ ಜಾಸ್ಮಿನ್ ಅವರು ವಿಬಿನ್ ಜೋಸೆಫ್ ಅವರನ್ನು ವಿವಾಹವಾಗಲಿದ್ದಾರೆ. (ಮಲಯಾಳಂ മീര ജാസ്മിന്‍) (ಜನಿಸಿದ್ದು 1984ರ ಫೆಬ್ರವರಿ 15ರಂದು), ಇವರು ತಮ್ಮ ಸ್ಟೇಜ್ ಹೆಸರಾಮೀರಾ ಜಾಸ್ಮಿನ್ ಹೆಸರಿನಿಂದ ಚಿರಪರಿಚಿತರು, ಇವರು ಭಾರತೀಯ ಚಿತ್ರನಟಿ, 0}ಮಲಯಾಳಂ, ತಮಿಳು, ತೆಲುಗು ಮತ್ತು ಕನ್ನಡ ಭಾಷೆಗಳನ್ನೊಳಗೊಂಡ ಭಾರತೀಯ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. . ಇವರು 2004ರಲ್ಲಿ ರಾಷ್ಟ್ರೀಯ ಫಿಲ್ಮ್ ಅವಾರ್ಡ್‌ನಲ್ಲಿ ಉತ್ತಮ ನಟಿ ಪ್ರಸಸ್ತಿ ಮತ್ತು ಎರಡು ಬಾರಿಗೆ ಕೇರಳ ರಾಜ್ಯದ ಫಿಲ್ಮ್ ಅವಾರ್ಡ್ ಹಾಗೂ ಒಂದು ತಮಿಳುನಾಡು ರಾಜ್ಯ ಫಿಲ್ಮ್ ಅವಾರ್ಡ್ ಗಳಿಸಿದ್ದಾರೆ ಅವರು ತಮಿಳುನಾಡು ಸರ್ಕಾರವು ನೀಡುವ ಅತ್ಯಂತ ಗೌರವಾನ್ವಿತ ಪ್ರಶಸ್ತಿ ಕಲೈಮಾಮಣಿಗೆ ಕೂಡ ಇವರು ಪಾತ್ರರಾಗಿದ್ದಾರೆ. ಇತ್ತೀಚೆಗೆ ಅವರು ತಮ್ಮ ಜೀವನ ಸಂಗಾತಿಯನ್ನು ಕಂಡುಕೊಂಡಿದ್ದಾರೆ (ಇದು ನಿಜವಾದ ಪ್ರೇಮವಿವಾಹ). MBA ಓದಿರುವ ಅವರು ಒಬ್ಬ ವ್ಯಾಪಾರಸ್ಥರಾಗಿದ್ದಾರೆ, ಮೇಡ್ ಫಾರ್ ಈಚ್ ಅದರ್. ಅವರ ಹೆಸರು ವಿಬಿನ್ ಜೋಸೆಫ್ 2011ರಲ್ಲಿ ಮದುವೆಯಾಗುವ ಯೋಜನೆ ಹೊಂದಿದ್ದಾರೆ.

ಆರಂಭದ ಜೀವನ[ಬದಲಾಯಿಸಿ]

1984ರ ಫೆಬ್ರವರಿ 15ರಂದು ಕೇರಳದ ಪಥನಮ್‌ತಿಟ್ಟ ಜಿಲ್ಲೆಯ ತಿರುವಲ್ಲದ ಕುಟ್ಟಪುಝಾದಲ್ಲಿ

ಮೀರಾ ಜಾಸ್ಮಿನ್ ಜನಿಸಿದರು, ಇವರ ಜನ್ಮನಾಮ  ಜಾಸ್ಮಿನ್ ಮೇರಿ ಜೋಸೆಫ್ .  

ಜೋಸೆಫ್ ಹಾಗೂ ಅಲೆಯಮ್ಮ ದಂಪತಿಗಳಿಗೆ ಜನಿಸಿದ ಇವರಿಗೆ ಜೆನಿ ಎಂಬ ಸಹೋದರಿ ಇದ್ದಾಳೆ. ಇವರು ಹುಟ್ಟಿದ್ದು ಕ್ರಿಶ್ಚಿಯನ್ ಸಮುದಾಯದಲ್ಲಿ (ಮರ್ ಥೋಮಾ ಚರ್ಚ್), ತೆಕ್ಕೆಮಾಲಾದ ಸೆವೆಂತ್ ಡೇ ಅಡ್ವೆಂಟಿಸ್ಟ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ (ಶಿಶುವಿಹಾರದಿಂದ ನಾಲ್ಕನೆಯ ತರಗತಿಯವರೆಗೆ) ಇವರ ಪ್ರಾಥಮಿಕ ಶಿಕ್ಷಣ ಮುಗಿಸಿ , ನಂತರ ತಿರುವಳ್ಳದ ಮರ್ ಥೋಮಾ ರೆಸಿಡೆನ್ಶಿಯಲ್ ಶಾಲೆ (ಐದನೆಯ ತರಗತಿಯಿಂದ ಪ್ರೌಢ ಶಾಲೆಯವರೆಗೆ) ಸೇರಿದರು. 2000ರಲ್ಲಿ ಆಕೆ ತಮ್ಮ ಶಾಲಾಭ್ಯಾಸವನ್ನು ಮುಗಿಸಿದರು ಅಮೇಲೆ ಆಕೆ ಪ್ರಾಣಿಶಾಸ್ತ್ರದಲ್ಲಿ BSc ಪದವಿ ಪಡೆಯಲು ಚಂಗಾನ್‌ಚೆರ್ರಿಯ ಅಸಂಪ್ಷನ್ ಕಾಲೇಜಿಗೆ ಸೇರಿದರು, ಅಲ್ಲಿ ಆಕೆ ಮೂರು ತಿಂಗಳ ಕಾಲ ಅಭ್ಯಾಸ ನಡೆಸಿದರು, ಆಗಲೇ ನಿರ್ದೇಶಕ ಬ್ಲೆಸ್ಸಿ ಅವರ ದೃಷ್ಟಿಗೆ ಬಿದ್ದರು (ನಿರ್ದೇಶಕ ಲೋಹಿತ್‌ದಾಸ್ ಅವರ ಸಹಾಯಕ ನಿರ್ದೇಶಕರಾಗಿದ್ದರು) ಮತ್ತು ಅವರು ಸೂತ್ರಧಾರನ್ ಚಿತ್ರದಲ್ಲಿ ನಟಿಸುವಂತೆ ಆಕೆಯನ್ನು ಕೇಳಿಕೊಂಡರು.

ಇತ್ತೀಚೆಗೆ ಅವರು ತಮ್ಮ ಜೀವನ ಸಂಗಾತಿಯನ್ನು ಕಂಡುಕೊಂಡಿದ್ದಾರೆ (ಇದು ನಿಜವಾದ ಪ್ರೇಮವಿವಾಹ). MBA ಓದಿರುವ ಅವರು ಒಬ್ಬ ವ್ಯಾಪಾರಸ್ಥರಾಗಿದ್ದಾರೆ, ಮೇಡ್ ಫಾರ್ ಈಚ್ ಅದರ್. ಅವರ ಹೆಸರು ವಿಬಿನ್ ಜೋಸೆಫ್ 2011ರಲ್ಲಿ ಮದುವೆಯಾಗುವ ಯೋಜನೆ ಹೊಂದಿದ್ದಾರೆ.

ಮಲಯಾಳಂ[ಬದಲಾಯಿಸಿ]

ಜಾಸ್ಮಿನ್ ಅವರು ತಮ್ಮ ವೃತ್ತಿಜೀವನವನ್ನು 2001ರಲ್ಲಿ ಲೋಹಿತ್ ದಾಸ್ ನಿರ್ದೇಶನದ ಮಲಯಾಳಂ ಚಲನಚಿತ್ರ ಸೂತ್ರಧಾರನ್‌ನಲ್ಲಿ ನಾಯಕ ನಟ ದಿಲೀಪ್ ಎದುರಿಗೆ ಅಭಿನಯಿಸುವ ಮೂಲಕ ಪ್ರಾರಂಭಿಸಿದರು. ಹಣಕಾಸಿನ ವಿಷಯದಲ್ಲಿ ಈ ಚಲನಚಿತ್ರ ಹೆಚ್ಚು ಯಶಸ್ಸುಗಳಿಸಲಿಲ್ಲವಾದರೂ, ಆಕೆಗೆ ಬೇರೆ ಭಾಷೆಯ ಚಿತ್ರಗಳಲ್ಲಿ ಅವಕಾಶಗಳು ಬಂದರು. ಅವರ ಆರು ವರ್ಷಗಳ ವೃತ್ತಿಜೀವನದಲ್ಲಿ ಒಂದು ಡಜನ್ ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತನ್ನ ಎರಡನೆಯ ಚಲನಚಿತ್ರ ನಿರ್ದೇಶಕ ಕಮಲ್ ನಿರ್ದೇಶಸಿದ ’ಗ್ರಾಮಫೋನ್’ನಲ್ಲಿ ನವ್ಯನಾಯರ್ ಜೊತೆಯಲ್ಲಿ ನಾಯಕನಟ ದಿಲೀಪ್ ಎದುರಿಗೆ ಅಭಿನಯಿಸಿದರು. ಯಹೂದಿ ಹುಡುಗಿಯಾಗಿ ನಟಿಸಿದ ಆಕೆಯ ಈ ಚಿತ್ರದ ಪಾತ್ರವನ್ನು ಮಲಯಾಳಂ ಚಿತ್ರ ಪ್ರೇಕ್ಷಕರು ಮೆಚ್ಚಿ ಹೊಗಳಿದ್ದಾರೆ. ಆಕೆಯ ಮೂರನೆಯ ಚಲನಚಿತ್ರ ಸ್ವಪ್ನಕ್ಕೂಡು, ಇದು ಒಂದು ಹಾಸ್ಯವನ್ನು ಕೂಡಿದ ಪ್ರೇಮ ಚಿತ್ರ, ಕಮಲ್ ನಿರ್ದೇಶನದ ಈ ಚಿತ್ರದಲ್ಲಿ ಪೃಥ್ವಿರಾಜ್, ಕುಂಚಕೊ ಬೊಬನ್, ಜಯಸೂರ್ಯ, ಮತ್ತು ಭಾವನ ಅವರು ಕೂಡ ತಾರಾಗಣದಲ್ಲಿದ್ದಾರೆ. ಇದರಲ್ಲಿ ಆಕೆಯ ಅಭಿನಯದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆಯಲ್ಲದೆ ಇದು ಬಾಕ್ಸ್ ಆಫೀಸ್‌ನಲ್ಲಿ ಕೂಡಾ ದೊಡ್ಡ ಯಶಸ್ಸು ಕಂಡಿದೆ. ಅವರ ಐದು ಮುಖ್ಯ ಪಾತ್ರಗಳಲ್ಲಿ, ಮೀರಾ ಪಾತ್ರವು ಹೆಚ್ಚು ದಾಖಲೆಯಾಗಿದೆ. ಆಕೆಯ ಮಾರ್ಗದರ್ಶಕ ರಾದ ಲೋಹಿತ್‌ದಾಸ್ ನಿರ್ದೇಶನದ ಕಸ್ತೂರಿಮಾನ್ ಚಿತ್ರದ ಯಶಸ್ಸಿನ ನಂತರ ಮಲಯಾಳಂ ಚಲನಚಿತ್ರರಂಗದಿಂದ ಹೆಚ್ಚು ಆಕರ್ಷಿತಳಾದಳು.

ಹಾಸ್ಯಚಿತ್ರಗಳು ಮತ್ತು ಭಾವನಾತ್ಮಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರು ಕಸ್ತೂರಿಮಾನ್ ಚಿತ್ರದ ತಮ್ಮ ಅಭಿನಯಕ್ಕಾಗಿ ಮೊದಲ ಫಿಲ್ಮ್ ಫೇರ್ ಅವಾರ್ಡ್ ಸ್ವೀಕರಿಸಿದರು.  

100ದಿನಗಳ ಪ್ರದರ್ಶನಗಳನ್ನು ನೀಡುವ ಮೂಲಕ: ಬಾಕ್ಸ್ ಆಫೀಸ್‌ನಲ್ಲಿ ಕೂಡಾ ಯಶಸ್ಸು ಗಳಿಸಿತು. ಅದೇ ವರ್ಷದಲ್ಲಿ, ಟಿ.ವಿ.ಚಂದ್ರನ್‌ ಅವರ ಉದ್ಘ್ಹೋಷಿತ ಚಿತ್ರದಲ್ಲಿ ನಟಿಸಿದರು Paadam Onnu: Oru Vilaapam. ಇದರಲ್ಲಿ ಆಕೆ 15-ವರ್ಷ ವಯಸ್ಸಿನ ಮುಸ್ಲಿಂ ಬಾಲೆಯೊಬ್ಬಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಆ ಬಾಲೆಗೆ ಮುದುಕನೊಬ್ಬನ ಜೊತೆ ಮದುವೆಯಾಗಲು ಒತ್ತಾಯಿಸುತ್ತಾರೆ ಆಕೆ ಬರೀ ರಾಜ್ಯ ಪ್ರಶಸ್ತಿಯಲ್ಲದೆ ರಾಷ್ಟ್ರೀಯ ಪ್ರಶಸ್ತಿ ಮತ್ತು ಇತರೆ ಪ್ರಶಸ್ತಿಗಳನ್ನು ಕೂಡಾ ಪಡೆದುಕೊಂಡಿದ್ದಾರೆ. ಕಾವ್ಯಾ ಮಾಧವನ್‌ ಜೊತೆಯಲ್ಲಿ ಪೆರುಮಾಝಕ್ಕಳಂ ಚಿತ್ರದಲ್ಲಿ ರಝಿಯಾ ಪಾತ್ರದಲ್ಲಿ ಅಭಿನಯಿಸಿದ್ದಾರೆ . 'ಅಚುವಿಂತೆ ಅಮ್ಮಾ'(2005) ಚಿತ್ರದಲ್ಲಿ, ಆಕೆ ಎಳೆಯ ವಯಸ್ಸಿನ ಬೆಡಗಿ ಅಚುವಿನ ಪಾತ್ರದಲ್ಲಿ ಗಮನಾರ್ಹ ನಟನೆಯನ್ನು ಮಾಡಿದ್ದಾಳೆ, ಆ ಪಾತ್ರ ಅಚ್ಚಳಿಯದೆ ಮನದಾಳದಲ್ಲಿ ಉಳಿಯುವಂತಿದೆ. ಸೂಪರ್ ಸ್ಟಾರ್ ಮೋಹನ್‌ಲಾಲ್ ಅವರ ಜೊತೆಯಲ್ಲಿ ರಾಸತಂತ್ರಂ(2006) ಚಲನಚಿತ್ರದಲ್ಲಿ ಅಭಿನಯಿಸಿದ್ದಾರೆ. ಆಕೆ ಅರ್ಧ ಚಿತ್ರದಲ್ಲಿ ಹುಡುಗನಾಗಿ ಅಭಿನಯಿಸಿದ್ದಾಳೆ ಮತ್ತು ಈ ಚಿತ್ರವು ದೊಡ್ಡ ಯಶಸ್ಸನ್ನು ಕಂಡಿತು. ಆಕೆಯ ನಂತರದ ಚಿತ್ರ ನಟ ದಿಲೀಪ್ ಜೊತೆಯಲ್ಲಿ - ವಿನೋದಯಾತ್ರ ಮತ್ತೆ ಸತ್ಯನ್ ಅಂತಿಕ್ಕಾಡ್ ಜೊತೆಯಲ್ಲಿ ಆತ ಸಾಲಾಗಿ ತನ್ನ 3ನೆಯ ಚಿತ್ರದಲ್ಲಿಯೂ ಆಕೆಯನ್ನು ತೆಗೆದು ಕೊಂಡಿದ್ದಾನೆ. ಆಕೆ ನಂತರ ಅತ್ಯಂತ ವಿಮರ್ಶಾತ್ಮಕ ಚಿತ್ರ ಓರೆ ಕಡಲ್‌ನಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರವು ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿತು ಮತ್ತು ಪ್ರಶಸ್ತಿಗಳನ್ನು ಗಳಿಸಿತು. ಅಕೆಯ ಮುಗ್ಧ ಮದ್ಯಮ ವರ್ಗದ ಹೆಂಗಸಿನ ಅಭಿನಯವು ಎಲ್ಲ ಮೂಲೆಗಳಿಂದ ಹೊಗಳಿಕೆಯನ್ನು ಪಡೆಯಿತು. "ಮೆಗಾಸ್ಟಾರ್‌ನ ಜೊತೆಯಲ್ಲಿ ಅಭಿನಯಿಸುವುದು ಈಕೆಯು ಬೆಳವಣಿಗೆ ಹಾಗೂ ಮೀರಾ ಜಾಸ್ಮಿನ್ ಎಂತಹ ಕಷ್ಟದ ಪಾತ್ರಗಳನ್ನೂ ನಿಭಾಯಿಸಬಲ್ಲವಳಾಗಿದ್ದಾಳೆ" ಎಂದು ಮಾದ್ಯಮಗಳು ವರದಿ ಮಾಡಿದವು. ಆಕೆಯ ನಂತರದ ಚಿತ್ರ ದಿಲೀಪ್ ಜೊತೆಯಲ್ಲಿ ಕಲ್ಕತ್ತಾ ನ್ಯೂಸ್. ಆಕೆಯನ್ನು ಚಲನಚಿತ್ರ ರಂಗಕ್ಕೆ ಪರಿಚಯಿಸಿದ ಬ್ಲೆಸ್ಸಿಯವರೇ ಕಲ್ಕತ್ತ ನ್ಯೂಸ್‌ ನ ನಿರ್ದೇಶಕರು.

ತಮಿಳು[ಬದಲಾಯಿಸಿ]

ಜಾಸ್ಮಿನ್ ಅವರು ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದರಿಂದ ದಕ್ಷಿಣ ಭಾರತದಲ್ಲಿ ಹೆಚ್ಚು ಜನಪ್ರಿಯವಾದರು. ಆಕೆ ನಟಿಸಿದ ತಮಿಳು ಚಲನಚಿತ್ರ ರನ್  ಮತ್ತು ಬಾಲ  (2002) ಚಿತ್ರಗಳ ಯಶಸ್ಸಿನಿಂದಾಗಿ ತಮಿಳು ಚಿತ್ರರಂಗದಲ್ಲಿ ನೆಲೆಯೂರಿದ ಉತ್ತಮ ನಟರ ಜೊತೆಯಲ್ಲಿ ನಟಿಸುವ ಅವಕಾಶಗಳು ಆಕೆಯನ್ನು ಹುಡುಕಿಕೊಂಡು ಬಂದವು. 

ರನ್ ಚಿತ್ರದ ಉತ್ತಮ ಅಭಿನಯಕ್ಕಾಗಿ ಫಿಲ್ಮ್ ಫೇರ್‌ನಲ್ಲಿ ಉತ್ತಮ ಹೊಸ ನಟಿ ಪ್ರಶಸ್ತಿಯನ್ನು ಗಳಿಸಿದಳು. ಆಕೆಯ ಯಶಸ್ಸು ತಮಿಳು ಚಿತ್ರರಂಗದ ಮಹಾನ್ ನಿರ್ದೇಶಕರುಗಳಾದ ಮಣಿರತ್ನಂ ಅವರ ಆಯುತಾ ಎಜುತು ಮತ್ತು ಎಸ್ ಎಸ್ ಸ್ಟ್ಯಾನ್ಲೆ ಯವರ ಮರ್ಕ್ಯುರಿ ಪೊಕ್ಕಲ್ ಚಿತ್ರಗಳಲ್ಲಿ ನಟಿಸುವ ಅವಕಾಶ ತಂದುಕೊಟ್ಟಿತು. ಮೀರಾ 15 ತಮಿಳು ಚಿತ್ರಗಳಲ್ಲಿ ಅಭಿನಯಿಸಿದರು.

ತೆಲುಗು ಮತ್ತು ಕನ್ನಡ[ಬದಲಾಯಿಸಿ]

ಜಾಸ್ಮಿನ್ ತೆಲುಗಿನ "ರನ್" (ತಮಿಳಿನಿಂದ ಡಬ್ ಮಾಡಿರುವುದು) ದಲ್ಲಿ ಮೊದಲಭಾರಿಗೆ ಅಭಿನಯಿಸುವ ಮೂಲಕ ತೆಲುಗು ಚಿತ್ರರಂಗದಲ್ಲಿ ಕೂಡಾ ಜನಪ್ರಿಯವಾದರು. 2004ರಿಂದ ಆಕೆ ತೆಲುಗು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ ಅಮ್ಮಾಯಿ ಬಾಗುಂದಿ ಮತ್ತು ಗುಡುಂಬ ಶಂಕರ್ ನಂತರದಲ್ಲಿ ಆಕೆ ಪುನೀತ್ ರಾಜ್‌ಕುಮಾರ್ ಅಭಿನಯದ ’ಮೌರ್ಯ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟಳು. ಆಕೆಯ ಇನ್ನೊಂದು ಕನ್ನಡ ಚಿತ್ರ ಪುನೀತ್ ರಾಜ್‌ಕುಮಾರ್ ಹಾಗೂ ರಮ್ಯ ಅಕ ದಿವ್ಯ ಸ್ಪಂದನ ಅವರ ಜೊತೆಯಲ್ಲಿ ಅಭಿನಯಿಸಿದ "ಅರಸು" ಅತ್ಯಂತ ಯಶಸ್ವಿಯಾಯಿತು. ಆಕೆಯ ಮುಂಬರುವ ಕನ್ನಡ ಚಿತ್ರಗಳು ದೇವರು ಕೊಟ್ಟ ತಂಗಿ ಮತ್ತು ಇಜ್ಜೋಡು .

ಜಾಸ್ಮಿನ್ ಅವರ ತೆಲುಗಿನ ದೊಡ್ಡ ಯಶಸ್ಸು ಎಂದರೆ ರವಿ ತೇಜ ನಾಯಕನಾಗಿರುವ ಭದ್ರ . ಆಕೆಯ ಇತರೆ ತೆಲುಗು ಚಿತ್ರಗಳೆಂದರೆ ರಾರಾಜು, ಮಹಾರಧಿ, ಯಮಗೊಳ ಮಲ್ಲಿ ಮೊದಲಾಯಿಂದಿ, ಗೋರಿಂಟಕು ಹಾಗೂ ಹೊಸ ಚಿತ್ರ ಮಾ ಅಯನಾ ಚಂತಿ ಪಿಲ್ಲಡು,ಇದರಲ್ಲಿ ಎರಡನೆಯ ಬಾರಿಗೆ ಶಿವಾಜಿ ಜೊತೆಯಲ್ಲಿ ಅಭಿನಯಿಸಿದ್ದಾರೆ.

ವಿವಾದ[ಬದಲಾಯಿಸಿ]

ಕೇರಳತಾಲಿಪರಂಬ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ವಿವಾದಕ್ಕೊಳಗಾದರು. ಅಲ್ಲಿ ಹಿಂದೂಗಳಲ್ಲದವರಿಗೆ ಪ್ರವೇಶವಿಲ್ಲ. ಹಿಂದೂ ಭಕ್ತರು ಇದನ್ನು ವಿರೋಧಿಸಿದರು ಕೊನೆಯಲ್ಲಿ ಆಕೆ ದೇವಸ್ಥಾನವನ್ನು ಶುದ್ಧಗೊಳಿಸುವುದಕ್ಕಾಗಿ Rs. 10,000 ದಂಡವನ್ನು ದೇವಸ್ಥಾನದ ಅಧಿಕಾರಿಗಳಿಗೆ ನೀಡಿದರು.[೧][೨]

ಪ್ರಶಸ್ತಿಗಳು[ಬದಲಾಯಿಸಿ]

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು

ಕೇರಳ ರಾಜ್ಯದ ಚಲನಚಿತ್ರ ಪ್ರಶಸ್ತಿಗಳು

ತಮಿಳುನಾಡು ರಾಜ್ಯದ ಚಲನಚಿತ್ರ ಪ್ರಶಸ್ತಿಗಳು

ತಮಿಳುನಾಡು ಸರ್ಕಾರ

ಫಿಲ್ಮ್‌ಫೇರ್ ಪ್ರಶಸ್ತಿಗಳು

V ಶಾಂತಾರಾಮ್‌ ಪ್ರಶಸ್ತಿ

Asianet Film Awards

ವನಿತಾ ಚಲನಚಿತ್ರ ಪ್ರಶಸ್ತಿ

ಮಾತೃಭೂಮಿ ಚಲನಚಿತ್ರ ಪ್ರಶಸ್ತಿಗಳು

ಇತರೇ ಪ್ರಶಸ್ತಿಗಳು

ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

ವರ್ಷ ಶೀರ್ಷಿಕೆ ಪಾತ್ರ ಭಾಷೆ ಟಿಪ್ಪಣಿಗಳು
2001 ಸೂತ್ರಧಾರನ್ ಶಿವಾನಿ ಮಲಯಾಳಂ
2002 ರನ್‌ ಪ್ರಿಯಾ ತಮಿಳು
ಬಾಲ ಆರತಿ ತಮಿಳು
2003 ಕಸ್ತೂರಿಮಾನ್ ಮಲಯಾಳಂ ಫಿಲ್ಮ್‌ಫೇರ್ ಅವಾರ್ಡ್‌ನ ಅತ್ಯುತ್ತಮ ಮಲಯಾಳಂ ನಟಿ ಪ್ರಶಸ್ತಿ ವಿಜೇತೆ
ಪುಧಿಯಾ ಗೀತಾಯ್ ಸುಶಿ ತಮಿಳು
ಗ್ರಾಮಫೋನ್ ಜೆನ್ನಿಫರ್ ಮಲಯಾಳಂ
ಸ್ವಪ್ನಕ್ಕೂಡು ಕಮಲ ಮಲಯಾಳಂ
ಆಂಜನೇಯ ದಿವ್ಯ ತಮಿಳು
Paadam Onnu: Oru Vilapam ಶಾಹಿನಾ ಮಲಯಾಳಂ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಅತ್ಯುತ್ತಮ ನಟಿ ವಿಜೇತೆ
ಕೇರಳ ಸರ್ಕಾರದ ಉತ್ತಮ ನಟಿ ಪ್ರಶಸ್ತಿ ವಿಜೇತೆ
ಏಷಿಯಾನೆಟ್ ಉತ್ತಮ ನಟಿ ಪ್ರಶಸ್ತಿ ,ವಿಜೇತೆ
ಜೂಟ್ ಮೀರಾ ತಮಿಳು
ಚಕ್ರಂ ಇಂದ್ರಾಣಿ ಮಲಯಾಳಂ
2004 ಅಮ್ಮಾಯಿ ಬಾಗುಂದಿ ಜನನಿ,
ಸತ್ಯ
ತೆಲುಗು
ಆಯುತ ಎಜುತು ಸಸಿ ತಮಿಳು
ಮೌರ್ಯ ಅಲಮೇಲು ಕನ್ನಡ
ಗುಡುಂಬ ಶಂಕರ್ ಗೌರಿ ತೆಲುಗು
[[

ಪೆರುಮಾಝಕ್ಕಲಮ್]]

ರಝಿಯಾ ಮಲಯಾಳಂ ಏಷಿಯಾನೆಟ್ ಉತ್ತಮ ನಟಿ ಪ್ರಶಸ್ತಿ ,ವಿಜೇತೆ
2005 ಅಚುವಿಂತೆ ಅಮ್ಮ ಅಶ್ವತಿ ಮಲಯಾಳಂ ಫಿಲ್ಮ್‌ಫೇರ್ ಅವಾರ್ಡ್‌ನ ಅತ್ಯುತ್ತಮ ಮಲಯಾಳಂ ನಟಿ ಪ್ರಶಸ್ತಿ ವಿಜೇತೆ
ಏಷಿಯಾನೆಟ್ ಉತ್ತಮ ನಟಿ ಪ್ರಶಸ್ತಿ ,ವಿಜೇತೆ
ಭದ್ರ ಅನು ತೆಲುಗು
ಕಸ್ತೂರಿ ಮಾನ್ ಉಮಾ ತಮಿಳು ತಮಿಳು ನಾಡು ರಾಜ್ಯದ ಉತ್ತಮ ನಟಿ ವಿಶೇಷ ಪ್ರಶಸ್ತಿ,ವಿಜೇತೆ
ಸಂಡಕೋಝಿ ಹೇಮಾ ತಮಿಳು
2006 ಮರ್ಕ್ಯುರಿ ಅಂಬು ಚೆಲ್ವಿ ತಮಿಳು
ರಸತಂತ್ರಂ ಕಣ್ಮಣಿ ಮಲಯಾಳಂ
ರಾರಾಜು ಜ್ಯೋತಿ ತೆಲುಗು
2007 ಅರಸು ಕನ್ನಡ
ಮಹಾರಧಿ ಕಲ್ಯಾಣಿ ತೆಲುಗು
ತಿರುಮಗನ್ ಅಯ್ಯಕ್ಕ ತಮಿಳು
ವಿನೋದಯಾತ್ರ ಆನುಪಮ ಮಲಯಾಳಂ
[[

ಪೊರಟ್ಟಾಯ್ ಎಂಗೀರ ಅಝಗು ಸುಂದರಂ]]

ಶ್ವೇತಾ ತಮಿಳು
[[

ಯಮಗೊಳ ಮಲ್ಲಿ ಮೊದಲಯಿಂಡಿ]]

ಐಶ್ವರ್ಯಾ ತೆಲುಗು
ಓರೆ ಕಡಲ್ ದೀಪ್ತಿ ಮಲಯಾಳಂ ಕೇರಳ ಸರ್ಕಾರದ ಉತ್ತಮ ನಟಿ ಪ್ರಶಸ್ತಿ ವಿಜೇತೆ
ಫಿಲ್ಮ್‌ಫೇರ್ ಅವಾರ್ಡ್‌ನ ಅತ್ಯುತ್ತಮ ಮಲಯಾಳಂ ನಟಿ ಪ್ರಶಸ್ತಿ ವಿಜೇತೆ
ಏಷಿಯಾನೆಟ್ ಉತ್ತಮ ನಟಿ ಪ್ರಶಸ್ತಿ ,ವಿಜೇತೆ
2008 ಕಲ್ಕತ್ತಾ ನ್ಯೂಸ್ ಕೃಷ್ಣ ಪ್ರಿಯ ಮಲಯಾಳಂ ಉತ್ತಮ ಮಲಯಾಳಂ ನಟಿ ಫಿಲ್ಮ್ ಫೇರ್ ಪ್ರಶಸ್ತಿಗೆ ಈಕೆಯ ಹೆಸರು ನಾಮನಿರ್ದೇಶನಗೊಂಡಿತ್ತು
ಇನ್ನತೆ ಚಿಂತಾ ವಿಷಯಂ ಕಮಲಾ ಮಲಯಾಳಂ
ನೇಪಾಳಿ ಪ್ರಿಯಾ ತಮಿಳು
ಮಿನ್ನಮಿನ್ನಿಕೂತ್ತಂ ಚಾರುಲತಾ ಮಲಯಾಳಂ
ರಾತ್ರಿ ಮಝಾ ಮೀರಾ ಮಲಯಾಳಂ
ಗೊರಿನ್ತಕು ಲಕ್ಷ್ಮಿ ತೆಲುಗು
ಮಾ ಅಯನ ಚಂತಿ ಪಿಲ್ಲಡು ರಾಜೇಶ್ವರಿ ತೆಲುಗು
2009 ಮರಿಯಧೈ ಚಂದ್ರ ತಮಿಳು
ಬಂಗಾರು ಬಾಬು ಮೀರಾ ತೆಲುಗು
ಅ ಆ ಇ ಈ ಕಲ್ಯಾಣಿ ಚಂದ್ರಂ ತೆಲುಗು
ದೇವರು ಕೊಟ್ಟ ತಂಗಿ ಲಕ್ಷ್ಮಿ ಕನ್ನಡ
ಆಕಾಶ ರಾಮಣ್ಣ ತೆಲುಗು ಚಿತ್ರೀಕರಣ
ಸಿವಪ್ಪು ಮಲೈ ತಮಿಳು ಚಿತ್ರೀಕರಣ
ಅಧಿ ನಾರಾಯಣ ತಮಿಳು ಚಿತ್ರೀಕರಣ
2010 ಪೆನ್ ಸಿಂಗಂ ತಮಿಳು ಚಿತ್ರೀಕರಣ
ಮಲೈಯೂರ್ ಮೊಂಬತ್ತಿಯಾನ್ ತಮಿಳು ಚಿತ್ರೀಕರಣ
ಪಾತ್ತಿಂತೆ ಪಲಝಿ ಮಲಯಾಳಂ ಚಿತ್ರೀಕರಣ
ಮೋಕ್ಷ ತೆಲುಗು ಚಿತ್ರೀಕರಣ
ಇಜ್ಜೋಡು ಚೀನಿ ಕನ್ನಡ ತಡವಾಗಿದೆ

ಆಕರಗಳು[ಬದಲಾಯಿಸಿ]

  1. "Jasmine sparks row by entering temple". The Times of India. Retrieved 2006-07-01.
  2. "Tryst with god costs Meera dear". DNA. Retrieved 2006-07-02.
  3. "Filmfare: Manassinakkare bags four awards". Archived from the original on 2007-10-19. Retrieved 2010-02-09.
  4. 55th annual Tiger Balm South Filmfare Awards-Chennai-Cities-The Times of India
  5. "Asianet award for Mohanlal and Meera Jasmine". Archived from the original on 2007-10-19. Retrieved 2010-02-09.
  6. ""Kazcha" bags five "Ujjala-Asianet" Film Award-2005 '". Archived from the original on 2011-07-17. Retrieved 2010-02-09.
  7. "Mathrubhumi film awards for Mohanlal and Meera Jasmine". Archived from the original on 2007-10-19. Retrieved 2010-02-09.
  8. ""Perumazhakalam" bags 11 "Mathrubhumi-Medimix" Award". Archived from the original on 2011-07-17. Retrieved 2010-02-09.
  9. "My-Kerala.com: News". Archived from the original on 2008-12-02. Retrieved 2010-02-09.
  10. "16-07-03". Archived from the original on 2008-05-26. Retrieved 2010-02-09.
  11. "The Hindu : Film critics' awards announced". Archived from the original on 2010-08-20. Retrieved 2010-02-09.
  12. Mohanlal gets Kerala Film Critics association award : Down South News : ApunKaChoice. Archived 2005-09-29 ವೇಬ್ಯಾಕ್ ಮೆಷಿನ್ ನಲ್ಲಿ.Com Archived 2005-09-29 ವೇಬ್ಯಾಕ್ ಮೆಷಿನ್ ನಲ್ಲಿ.
  13. "Thikkurushi award for Meera Jasmine and Prithviraj". Archived from the original on 2011-07-17. Retrieved 2010-02-09.
  14. Mammootty and Meera win Fokana awards, നല്ല നടന്‍ മമ്മൂട്ടി, നടി മീര[ಶಾಶ್ವತವಾಗಿ ಮಡಿದ ಕೊಂಡಿ]
  15. "The Hindu : Kerala / Kochi News : Amrita film awards announced". Archived from the original on 2008-05-25. Retrieved 2010-02-09.
  16. "ಆರ್ಕೈವ್ ನಕಲು". Archived from the original on 2008-10-17. Retrieved 2010-02-09.

ಹೊರಗಿನ ಕೊಂಡಿಗಳು[ಬದಲಾಯಿಸಿ]

Awards
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
ಪೂರ್ವಾಧಿಕಾರಿ
Konkona Sen Sharma
for Mr. and Mrs. Iyer
Best Actress
for Paadam Onnu: Oru Vilapam

2004
ಉತ್ತರಾಧಿಕಾರಿ
Tara
for Hasina

123