ಹುಲಿಗೆಮ್ಮನ ಕೊಳ್ಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹುಲಿಗೆಮ್ಮನ ಕೊಳ್ಳವು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿ ಬರುತ್ತದೆ. ಇಲ್ಲಿ ಏಕ ಶಿಲೆಯ ಬೃಹದಾಕಾರದ ಬಂಡೆಗಳು ಇದ್ದು ಮಳೆಗಾಲದಲ್ಲಿ ಹರಿದು ಬರುವ ನೀರು ಇಲ್ಲಿ ಜಲಪಾತಗಳನ್ನು ಸೃಸ್ಟಿಸುತ್ತದೆ. ಹುಲಿಗೆಮ್ಮ, ಕೋಣಮ್ಮ ಹಾಗು ಲಕ್ಷ್ಮಮ್ಮ ದೇವಿಯರ ಸಂಗಮ ಸ್ಥಳವಿದು. ೫ ನೇ ಶತಮಾನದಲ್ಲಿ ಚಾಲುಕ್ಯ ದೊರೆಗಳು ಇಲ್ಲಿ ತಂಗುತ್ತಿದ್ದರು ಹಾಗು ಋಶಿ - ಮುನಿಗಳು ತಪಸ್ಸನ್ನು ಮಾಡಿದ ಸ್ಥಳವಿದು. ಒಂದಾನೊಂದು ಕಾಲದಲ್ಲಿ ಇಲ್ಲಿ ಹುಲಿಗಳು ಹೆಚ್ಚಾಗಿ ಇದ್ದ ಕಾರಣದಿಂದ ಇದಕ್ಕೆ ಹುಲಿಗೆಮ್ಮನ ಕೊಳ್ಳ ಎಂಬ ಹೆಸರು ಬಂದಿದೆ. ಪ್ರತಿ ಶ್ರಾವಣದಲ್ಲಿ ಇಲ್ಲಿ ಮಳೆಯಿಂದಾಗಿ ಜಲಪಾತಗಳು ಸೃಸ್ಟಿಯಾಗುತ್ತವೆ. ಇದನ್ನು ನೋಡಲು ಸಾವಿರಾರು ಜನ ಇಲ್ಲಿಗೆ ಬರುತ್ತಾರೆ. ೧೯೫೮ ರಲ್ಲಿ ಇದನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಲಾಗಿದೆ. ಇಲ್ಲಿರುವ ಜಲಪಾತಗಳನ್ನು ಜಾಲಿಹಾಳದ ಜೋಗ ಎಂದೂ ಕೂಡ ಕರೆಯುತ್ತಾರೆ.

ಇದರ ಸುತ್ತ ಮುತ್ತ ಇರುವ ಪ್ರಮುಖ ಸ್ಥಳಗಳೆಂದರೆ ಬಾದಾಮಿ, ಐಹೊಳೆ, ಪಟ್ಟದಕಲ್ಲು, ಬನಶಂಕರಿ, ಮಹಾಕೂಟ, ನಂದಿಕೇಶ್ವರ ಮತ್ತು ಶಿವಯೋಗ ಮಂದಿರ.

ಬಾದಾಮಿಯಿಂದ ಪಟ್ಟದಕಲ್ಲಿಗೆ ಹೋಗುವ ದಾರಿಯಲ್ಲಿ ಕೆಂದೂರಿನ ಮೂಲಕ ಭದ್ರನಾಯಕನ ಜಾಲಿಹಾಳ (ಬಿ.ಎನ್. ಜಾಲಿಹಾಳ) ತಲುಪಿ ಅಲ್ಲಿಂದ ೨ ಕಿ.ಮೀ ದೂರದಲ್ಲಿ ಹುಲಿಗೆಮ್ಮನಕೊಳ್ಳ ತಲುಪಬಹುದು.