ಸಂತ ಫಿಲೋಮಿನಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಂತ ಫಿಲೋಮಿನಾ

ಸಂತ ಫಿಲೋಮಿನಾ ರೋಮನ್ ಕ್ಯಾಥೊಲಿಕ್ ಚರ್ಚಿನ ಒಬ್ಬ ಹುತಾತ್ಮ ಸಂತರೆನಿಸಿದ್ದಾರೆ. ಈಕೆ ಸುಮಾರು ೪ನೇ ಶತಮಾನದಲ್ಲಿ ಜೀವಿತಳಿದ್ದ ಗ್ರೀಸ್ ದೇಶದ ರಾಜಕುಮಾರಿ ಎಂದು ಊಹಿಸಲಾಗಿದೆ.

ಪ್ರಾಚೀನ ಚರ್ಚ್‌ನ ಯುವ ಹುತಾತ್ಮರೆಂದು ಪರಿಗಣಿಸಲ್ಪಟ್ಟ ಫಿಲೋಮಿನಾ, 19 ನೇ ಶತಮಾನದವರೆಗೆ ಯಾವುದೇ ಹುತಾತ್ಮ ಶಾಸ್ತ್ರದಲ್ಲಿ ನೋಂದಾಯಿಸಲ್ಪಟ್ಟಿಲ್ಲ . ಮೇ 25, 1802 ರಂದು , ರೋಮ್‌ನ ವಯಾ ಸಲಾರಿಯಾದಲ್ಲಿರುವ ಸಾಂಟಾ ಪ್ರಿಸ್ಸಿಲ್ಲಾದ ಕ್ಯಾಟಕಾಂಬ್‌ಗಳಲ್ಲಿ ಪುರಾತತ್ತ್ವ ಶಾಸ್ತ್ರದ ಉತ್ಖನನಗಳು ನಡೆಯುತ್ತಿದ್ದಾಗ , ಮೂರು ಟೆರಾಕೋಟಾ ಚಪ್ಪಡಿಗಳಿಂದ ಮುಚ್ಚಲ್ಪಟ್ಟ ಒಂದು ರಹಸ್ಯ ಪತ್ತೆಯಾಯಿತು ; ಇದು ಅಲ್ಲಿ ಸಮಾಧಿ ಮಾಡಿದ ವ್ಯಕ್ತಿಯ ಹುತಾತ್ಮತೆ ಮತ್ತು ಕನ್ಯತ್ವವನ್ನು ಸೂಚಿಸುವ ಚಿಹ್ನೆಗಳಿಂದ ಆವೃತವಾಗಿತ್ತು ; ಚಿಹ್ನೆಗಳು: ಆಧಾರ , ಮೂರು ಬಾಣಗಳು , ಒಂದು ತಾಳೆ ಮತ್ತು ಹೂವು . ಅವರು ಶಾಸನವನ್ನು ಪಡೆದರು "ಲುಮೆನಾ - ಪ್ಯಾಕ್ಸ್ ಟೆ - ಕಮ್ ಫೈ ». ಈ ಸಾಲಿನಿಂದ ಶಿಲಾಶಾಸನವನ್ನು ಪ್ರಾರಂಭಿಸುವ ಪ್ರಾಚೀನ ಸಂಪ್ರದಾಯದ ಪ್ರಕಾರ ಮಧ್ಯದ ರೇಖೆಯಿಂದ ಓದುವ ಮೂಲಕ, ಸರಿಯಾದ ಪಠ್ಯವನ್ನು ಪಡೆಯಲಾಯಿತು, ಅದು " ಪಾಕ್ಸ್ ಟೆಕಮ್ ಫಿಲುಮೆನಾ " ಎಂದು ಓದುತ್ತದೆ , ಇದರರ್ಥ ಲ್ಯಾಟಿನ್ ಭಾಷೆಯಲ್ಲಿ "ನಿಮ್ಮೊಂದಿಗೆ ಶಾಂತಿ ಇರಲಿ, ಫಿಲೋಮಿನಾ".

ಅವರು ಸಮಾಧಿಯನ್ನು ತೆರೆದಾಗ ಅವರು ಸಣ್ಣ ಮೂಳೆಗಳಿಂದ ಮಾಡಿದ ಅಸ್ಥಿಪಂಜರವನ್ನು ಕಂಡುಹಿಡಿದರು ಮತ್ತು ಅದೇ ಸಮಯದಲ್ಲಿ ದೇಹವು ಬಾಣಗಳಿಂದ ಚುಚ್ಚಲ್ಪಟ್ಟಿರುವುದನ್ನು ಗಮನಿಸಿದರು . ಅವಶೇಷಗಳನ್ನು ಪರೀಕ್ಷಿಸಿದ ನಂತರ, ಶಸ್ತ್ರಚಿಕಿತ್ಸಕರು ಸ್ವೀಕರಿಸಿದ ಗಾಯಗಳನ್ನು ದೃಢೀಕರಿಸಿದರು ಮತ್ತು ಪತ್ತೆಯಾದ ದೇಹವು 12 ಅಥವಾ 13 ವರ್ಷ ವಯಸ್ಸಿನ ಚಿಕ್ಕ ಹುಡುಗಿ ಎಂದು ತಜ್ಞರು ಒಪ್ಪಿಕೊಂಡರು. ಅವನ ತಲೆಯ ಬಳಿ ಮುರಿದ ಹೂದಾನಿ ಇತ್ತು, ಅದನ್ನು ಒಣಗಿದ ರಕ್ತ ಎಂದು ವ್ಯಾಖ್ಯಾನಿಸಲಾಗಿದೆ, ಆದಾಗ್ಯೂ ಇತರ ಮೂಲಗಳು ಇದು ಸುಗಂಧ ದ್ರವ್ಯಗಳ ಅವಶೇಷಗಳು ಎಂದು ಹೇಳುತ್ತದೆ. ರಕ್ತದ ಅವಶೇಷಗಳನ್ನು ಹೊಂದಿರುವ ಪಾತ್ರೆಯು ಹುತಾತ್ಮರನ್ನು ಸಮಾಧಿ ಮಾಡುವಾಗ ಮೊದಲ ಕ್ರಿಶ್ಚಿಯನ್ನರ ಪದ್ಧತಿಗೆ ಸಂಬಂಧಿಸಿದೆ; ಹಸ್ತದ ಚಿಹ್ನೆಯಿಂದ ಕೂಡ. ನಂತರ ಅವರ ದೇಹವನ್ನು ರೇಷ್ಮೆ ಲೇಪಿತ ಎಬೊನಿ ಬಾಕ್ಸ್‌ನಲ್ಲಿ ಇರಿಸಿ ಚರ್ಚ್‌ಗೆ ತಲುಪಿಸಲಾಯಿತುಆಗಸ್ಟ್ 10 , 1805 ಅವನ ಅವಶೇಷಗಳನ್ನು ಮುಗ್ನಾನೊದಲ್ಲಿನ ವರ್ಜಿನ್ ಆಫ್ ಗ್ರೇಸ್ ಪ್ಯಾರಿಷ್‌ಗೆ ವರ್ಗಾಯಿಸಲಾಯಿತು , ಅಲ್ಲಿ ಅವನ ಅಭಯಾರಣ್ಯವಿದೆ. [ 2 ]

ಯುವತಿಯಾಗಿ, ಪಾಲಿನ್ ಜರಿಕೋಟ್ ಹೃದ್ರೋಗದ ಸಂತ ಫಿಲೋಮಿನಾ ಅವರ ಮಧ್ಯಸ್ಥಿಕೆಯ ಮೂಲಕ ವಾಸಿಯಾದರು . ಸಂತನ ಗೌರವಾರ್ಥವಾಗಿ, ಅವರು ಮೂರು ಕ್ಯಾಥೊಲಿಕ್ ಸಂಘಗಳನ್ನು ಸ್ಥಾಪಿಸಿದರು: ಲಿವಿಂಗ್ ರೋಸರಿ ಅಸೋಸಿಯೇಷನ್ , ಸೊಸೈಟಿ ಫಾರ್ ದಿ ಪ್ರಾಪಗೇಷನ್ ಆಫ್ ದಿ ಫೇಯ್ತ್, ಮತ್ತು ಹೋಲಿ ಚೈಲ್ಡ್ಹುಡ್ ಅಸೋಸಿಯೇಷನ್ . [ 3 ]

ಸಮಾಧಿಯಿಂದ ದೇವಾಲಯಕ್ಕೆ[ಬದಲಾಯಿಸಿ]

ಜಗತ್ತಿನ ವಿವಿಧ ಭಾಗಗಳಲ್ಲಿ ಕ್ರೈಸ್ತ ಗುಡಿಗಳನ್ನು ಕಟ್ಟುವಾಗ ಅವಕ್ಕೆ ವಿವಿಧ ಕ್ರೈಸ್ತ ಸಾಧುಸಂತರನ್ನು ಪಾಲಕರನ್ನಾಗಿ ಆರೋಪಿಸುವುದು ರೂಢಿಯಲ್ಲಿದೆ. ಎಲ್ಲ ಚರ್ಚುಗಳಲ್ಲೂ ಕ್ರಿಸ್ತಾರಾಧನೆ ದೈವಪೂಜೆಗಳು ನಡೆವುದಾದರೂ ಅವನ್ನು ಸಂತ ಜೋಸೆಫರ ಚರ್ಚ್, ಸಂತ ತೆರೇಸಾ ಚರ್ಚ್, ಸಂತ ಮರಿಯಾ ಚರ್ಚ್ ಇತ್ಯಾದಿಯಾಗಿ ನಾಮಕರಣ ಮಾಡುವುದರಿಂದ ಆ ಚರ್ಚ್‌ಗಳನ್ನು ಒಂದು ಹೆಸರಿನಿಂದ ಗುರುತಿಸುವಲ್ಲಿ ಸಹಕಾರಿಯಾಗುತ್ತದೆ.

ಹೀಗೆಯೇ ೧೮೦೫ರ ಬೇಸಿಗೆಯಲ್ಲಿ ಇಟಲಿಯ ನೋಲಾ ಡಯೊಸೀಸ್‌ನ ಮಗ್ನಾನೋ ಎಂಬ ಸ್ಥಳದ ಪಾದ್ರಿಯೊಬ್ಬರು ತಮ್ಮ ಊರಿನಲ್ಲಿನ ಹೊಸ ದೇವಸ್ಥಾನಕ್ಕೆ ನಾಮಕರಣ ಮಾಡಲು ಒಬ್ಬ ಸಾತ್ವಿಕ ವ್ಯಕ್ತಿಯ ಹೆಸರು ಕೋರಿದಾಗ ಅಂದಿನ ಜಗದ್ಗುರು ಪೋಪ್ ಏಳನೇ ಪಯಸ್ ಅವರು ಮೇಲೆ ಪ್ರಸ್ತಾಪಿಸಿದ ಅವಶೇಷಗಳನ್ನು ಕೊಡುಗೆಯಾಗಿ ನೀಡಿದರು. ಅವನ್ನು ಜೂನ್ ೮ರಂದು ಆ ಹೊಸ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಯಿತು.

ನಂತರದ ಕೆಲವೇ ದಿನಗಳಲ್ಲಿ ಅಲ್ಲಿನ ಭಕ್ತಾದಿಗಳು ವಿಭಿನ್ನ ರೀತಿಯ ಆಧ್ಯಾತ್ಮಿಕ ಸಂಚಲನೆ ಅನುಭವಿಸಿದರು. ಅವರ ತಾಪತ್ರಯಗಳು ಸರಿದುಹೋದವು, ಕೋರಿಕೆಗಳು ಈಡೇರಿದವು, ಬದುಕೆಲ್ಲ ಸುಗಮವಾದವು. ಬಹುಬೇಗನೇ ಆ ಗುಡಿಯ ಪಾಲಕಸಂತರ ಕುರಿತ ಸುದ್ದಿ ಎಲ್ಲೆಡೆ ಹಬ್ಬಿತು. ಮರೀಯೆ ಲೂಯಿಸಾ ದೆ ಜೇಸುಸ್ ಎಂಬ ಸನ್ಯಾಸಿನಿಗೆ ಕನಸಿನಲ್ಲಿ ಕಂಡ ಸಾಧ್ವಿಯೊಬ್ಬಳು ತನ್ನ ಹೆಸರು ಲ್ಯಾಟಿನ್ ಮೂಲದ FILLIA LUMINIS (ಬೆಳಕಿನಪುತ್ರಿ) ಎಂದು ಸೂಚಿಸಿದಳಂತೆ.

ಮಗ್ನಾನೋ ಪುಣ್ಯಕ್ಷೇತ್ರ[ಬದಲಾಯಿಸಿ]

ಅಂದಿನಿಂದ ಮಗ್ನಾನೋ ದೇವಾಲಯವು ಒಂದು ಪ್ರಸಿದ್ಧ ಯಾತ್ರಾಸ್ಥಳವಾಯಿತು. ಫಿಲೋಮಿನಾ ಎಂಬ ಕಾಲ್ಪನಿಕ ವ್ಯಕ್ತಿಯ ಬಾಳ್ಗತೆಗಳು ಪ್ರಚಾರಕ್ಕೆ ಬಂದವು. ಮೂರು ದಶಕಗಳವರೆಗೆ ಇದು ಮುಂದುವರಿಯಿತು. ಕ್ರೈಸ್ತ ಧರ್ಮಮಂಡಲಿಯೂ ಇದರ ಕುರಿತು ಯಾವುದೇ ಅಧಿಕೃತತೆ ಘೋಷಿಸಲಿಲ್ಲ ಅಥವಾ ನಿಷೇಧವನ್ನೂ ಹೇರಲಿಲ್ಲ. ಆದರೆ ಈ ಎಲ್ಲ ದಂತಕತೆಗಳಿಗೆ ಗಟ್ಟಿರೂಪ ಕೊಡುವ ಒಂದು ಘಟನೆ ನಡೆಯಿತು.

ಪೌಲಿನ್ ಮೇರಿ ಜರಿಕೋ ಎಂಬಾಕೆ ಆರೋಗ್ಯಸ್ಥಿತಿ ತೀರಾ ಹದಗೆಟ್ಟು ಬದುಕುವ ಭರವಸೆಯನ್ನು ಕಳೆದುಕೊಂಡಿದ್ದಾಗ ಆ "ಫಿಲೋಮಿನಾ ಪುಣ್ಯಕ್ಷೇತ್ರ" ವನ್ನು ಸಂದರ್ಶಿಸಲು ನಿಶ್ಚಯಿಸಿ ಯಾತ್ರೆ ಹೊರಟಳು. ಅಂತೆಯೇ ತನ್ನ ನೆಲೆಯೂರಾದ ಲಿಯೋನ್ಸ್‌ನಿಂದ ಮಗ್ನಾನೋವರೆಗೆ ಕುದುರೆಗಾಡಿಯಲ್ಲಿ ಅಕ್ಷರಶಃ ಮಲಗಿಕೊಂಡೇ ಪಯಣಿಸಿದಳು. ರೋಮ್ ನಗರದ ಮೂಲಕ ಸಾಗುವಾಗ ಅಲ್ಲಿನ ಕನ್ಯಾಮಠದಲ್ಲಿ ತಂಗಿದ್ದಾಗ ಜಗದ್ಗುರುಗಳಾದ ಆರನೇ ಗ್ರೆಗರಿಯವರು ಆಕೆಯ ಮರಣ ಸನ್ನಿಹಿತವಾಗಿರುವುದನ್ನು ಕಂಡು ಸ್ವರ್ಗ ಸೇರಿದಾಗ ತಮಗಾಗಿ ಪ್ರಾರ್ಥಿಸುವಂತೆ ವಿನಂತಿಸಿಕೊಂಡರು.

೧೮೩೫ ಆಗಸ್ಟ್ ೮ರಂದು ಸಾವಿನ ಅಂಚಿನಲ್ಲಿದ್ದ ಜರಿಕೋ ಮಗ್ನಾನೋ ತಲುಪಿದಳು. ಮೂರು ದಿನಗಳ ನಂತರ ಅಂದರೆ ಆಗಸ್ಟ್ ೧೧ರಂದು ಅಲ್ಲಿನ ದೇವಾಲಯದಲ್ಲಿ ಪರಮಪ್ರಸಾದ ಸ್ವೀಕರಿಸುತ್ತಿರುವಾಗಲೇ ಅತ್ಯದ್ಭುತಕರವಾಗಿ ಗುಣಹೊಂದಿದಳು. ಅಸ್ವಸ್ಥ ಜರಿಕೋ ಒಮ್ಮೆಲೇ ಸುಸ್ವಸ್ಥಳಾಗಿದ್ದಳು. ಈ ಘಟನೆ ಅಲ್ಲಿ ಸೇರಿದ್ದ ಎಲ್ಲ ಜನರಲ್ಲಿ ವಿದ್ಯುತ್ ಸಂಚಾರ ಉಂಟುಮಾಡಿತು. ಅಲ್ಲಿಂದ ಊರಿಗೆ ಹಿಂದಿರುಗುವಾಗ ಜರಿಕೋ ಪೋಪರನ್ನು ಭೇಟಿಯಾಗಲು ರೋಮ್‌ನಲ್ಲಿ ಉಳಿದುಕೊಂಡಳು.

ಪೋಪ್ ಏಳನೇ ಗ್ರೆಗರಿಯವರಿಗೂ ಇದು ಅತ್ಯಂತ ಸೋಜಿಗದ ಸಂಗತಿಯಾಗಿತ್ತು. ಅಂದೇ ಪವಾಡಕರ್ತೆ ಫಿಲೋಮಿನಾ ಕುರಿತು ಅಧ್ಯಯನ ಮಾಡಲು ನಿಶ್ಚಯಿಸಿದರು. ಸಮಾಧಿಯಲ್ಲಿದ್ದ ನೆತ್ತರ ಕರಂಡಕ ಹಾಗೂ ಶಿಲಾಲೇಖದಲ್ಲಿದ್ದ ಚಿಹ್ನೆಗಳ ಆಧಾರದಿಂದ "ಪವಿತ್ರ ಆಚಾರವಿಧಿಗಳ ಪರಿಷತ್ತು" (The Congregation of Sacred Rites) ಇದು ಹುತಾತ್ಮರ ಸಮಾಧಿಯೇ ಸರಿ ಎಂದು ತೀರ್ಮಾನಿಸಿತು. ಅದರ ಪ್ರಕಾರ ಪೋಪರು ೧೮೩೭ ಜನವರಿ ೩೦ರಂದು "ಫಿಲೋಮಿನಾರವರ ಜೀವನ, ಕಾರ್ಯಪ್ರವೃತ್ತಿ ಮತ್ತು ಆತ್ಮಾಹುತಿಯ ಕಾರಣಗಳನ್ನು ತಿಳಿಯಲಾಗಿಲ್ಲ ಆದರೆ ಸತ್ಯಧರ್ಮಕ್ಕಾಗಿ ಹುತಾತ್ಮರಾದವರು ಎಂದು ಘೋಷಿಸಬಹುದಾಗಿದೆ" ಎಂಬ ನಿರ್ಣಯಕ್ಕೆ ಸಹಿ ಹಾಕಿದರು. ಹಾಗೂ ಆಕೆಯನ್ನು ಸಾರ್ವಜನಿಕವಾಗಿ ಗೌರವಿಸುವುದಕ್ಕೆ ಪ್ರಾರ್ಥಿಸುವುದಕ್ಕೆ ಅನುಮತಿಯಿತ್ತು ಆಗಸ್ಟ್ ೧೧ರಂದು ಸಂತ ಫಿಲೋಮಿನಾರವರ ಹಬ್ಬವಾಚರಿಸುವಂತೆ ವಿಧಿಸಿದರು.

ಹಲವು ವರ್ಷಗಳ ನಂತರ ಇಟಲಿಯ ಆ ಗುಪ್ತಸುರಂಗದ ಸಮಾಧಿಯ ಬಗ್ಗೆ ಆಳವಾದ ಸಂಶೋಧನೆ ನಡೆಸಿದ ಪ್ರೊಫೆಸರ್ ಮರುಷಿ ಎಂಬುವವರು "ಸಮಾಧಿಯ ಮೇಲೆ ಮುಚ್ಚಲಾದ ಕಲ್ಲುಗಳು ಆಕಸ್ಮಿಕವಾಗಿ ಪಲ್ಲಟಗೊಂಡುದಲ್ಲ! ಅದು ಮೂಲತಃ ಎರಡನೇ ಶತಮಾನದಲ್ಲಿ ಜೀವಿಸಿದ್ದ ಫಿಲೋಮಿನಾ ಎಂಬಾಕೆಯ ಸಮಾಧಿ. ಆದರೆ ಅನಂತರ ಅದೇ ಗೋರಿಯಲ್ಲಿ ಅನಾಮಧೇಯ ಹುಡುಗಿಯೊರ್ವಳ ದೇಹವನ್ನು ಹೂಳಿ ಕಲ್ಲುಹಾಸುಗಳನ್ನು ಉದ್ದೇಶಪೂರ್ವಕವಾಗಿ ಹಿಂದುಮುಂದು ಮಾಡಲಾಗಿದೆ. ಮೂಲ ಫಿಲೋಮಿನಾರವರ ಅವಶೇಷವನ್ನು ಬಹುಶಃ ೮-೯ನೇ ಶತಮಾನಗಳಲ್ಲಿ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಅದೇ ಸಮಾಧಿಯಲ್ಲಿ ದ್ವಿತೀಯ ಅಂತ್ಯಸಂಸ್ಕಾರದಲ್ಲಿ ಹೂಳಿದ ಅವಶೇಷಗಳನ್ನು ಮಗ್ನಾನೋ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದೆ" ಎಂದು ಪ್ರತಿಪಾದಿಸಿದರು.

ಈ ಅನ್ವೇಷಣೆ ಇಟಲಿ ನಾಡಿನಾದ್ಯಂತ ಪ್ರಚಂಡ ಬಿರುಗಾಳಿಯೆಬ್ಬಿಸಿತು. ತಮ್ಮ ಪಾಲಕಿಯನ್ನು ತಮ್ಮಿಂದ ದೂರೀಕರಿಸುವ ಪ್ರಯತ್ನವಿದೆಂದು ಜನ ಭಾವಿಸಿದರು. ಆದರೆ ಧರ್ಮನಿಷ್ಠೆಯ ಹೆಸರಿನಲ್ಲಿ ನಮ್ಮನ್ನು ನಾವೇ ವಂಚಿಸಿಕೊಳ್ಳುವುದು ತರವಲ್ಲ ಎನ್ನುವವರ ಸಂಖ್ಯೆ ಹೆಚ್ಚಾಗಿತ್ತು. ಇಂದಿಗೂ ಫಿಲೋಮಿನಾ ಎಂಬುವರು ನಿಜವಾಗಿ ಜೀವಿಸಿದ್ದರೇ? ಅದೇ ಹೆಸರನ್ನು ಹೊಂದಿದ್ದರೇ? ಧರ್ಮಕ್ಕಾಗಿಯೇ ಹುತಾತ್ಮರಾದರೇ? ಮಗ್ನಾನೋ ದೇವಾಲಯದಲ್ಲಿರುವ ಅವಶೇಷಗಳು ಈಕೆಯವೇ ಅಥವಾ ಬೇರೆಲ್ಲಿಯಾದರೂ ಇವೆಯೇ? ಎಂಬಿತ್ಯಾದಿ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದಿವೆ. ಈ ಕಾರಣದಿಂದ ಧಾರ್ಮಿಕರಂಗದಲ್ಲಿ ಫಿಲೋಮಿನಾರ ಹೆಸರನ್ನು ಬಳಸಲು ಕ್ರೈಸ್ತ ಧರ್ಮಮಂಡಲಿ ತಡೆಯೊಡ್ಡಿದೆ. ಆದರೆ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಫಿಲೋಮಿನಾ ಎಂಬ ಹೆಸರಿಟ್ಟುಕೊಳ್ಳಲು ನಿರ್ಬಂಧವಿಲ್ಲ. ಫಿಲೋಮಿನಾ (ಬೆಳಕಿನ ಪುತ್ರಿ) ಎಂಬ ಹೆಸರು ಚೆಂದವಾಗಿ ತೋರುತ್ತದೆ.