ಡೈಸಿ ಬೋಪಣ್ಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡೈಸಿ ಬೋಪಣ್ಣ
ಜನನ ೪ ಡಿಸೆಂಬರ್ ೧೯೮೨ (ವಯಸ್ಸು ೪೧)  
ರಾಷ್ಟ್ರೀಯತೆ ಭಾರತೀಯ
ಉದ್ಯೋಗ ನಟಿ
ಸಕ್ರಿಯ ವರ್ಷಗಳು  ೨೦೦೨–೨೦೧೨
ಸಂಗಾತಿ ಅಮಿತ್ ಜಾಜು

ಡೈಸಿ ಬೋಪಣ್ಣ ಇವರು ೧೯೮೨ ಡಿಸೆಂಬರ್ ೪ ರಂದು ಜನಿಸಿದರು. ಇವರು ಕನ್ನಡ ಚಿತ್ರರಂಗ, ಹಿಂದಿ, ತೆಲುಗು ಮತ್ತು ತಮಿಳು ಭಾಷೆಯ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಭಾರತೀಯ ನಟಿಯಾಗಿದ್ದಾರೆ.[೧]

ವೈಯಕ್ತಿಕ ಜೀವನ[ಬದಲಾಯಿಸಿ]

ಡೈಸಿ ಬೋಪಣ್ಣ ಮೂಲತಃ ಕೊಡಗಿನವರು. ಅವರು ತಮ್ಮ ಪ್ರಾಥಮಿಕ ವಿಧ್ಯಾಭ್ಯಾಸವನ್ನು ಅರಬಿಂದೋ ಶಾಲೆಯಲ್ಲಿ ಮುಗಿಸಿದರು. ಕುಮಾರನ್ಸ್ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಪಡೆದರು ಮತ್ತು ಕರ್ನಾಟಕದ ಬೆಂಗಳೂರಿನ ಚಿತ್ರಕಲಾ ಪರಿಷತ್‌ನಿಂದ ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್(ಲಲಿತ ಕಲಾ) ಪದವಿ ಪಡೆದರು.[೨] ಅವರು ೨೦೧೧ ರಲ್ಲಿ ಅಮಿತ್ ಜಾಜು ಅವರನ್ನು ವಿವಾಹವಾದರು.

ವೃತ್ತಿಜೀವನ[ಬದಲಾಯಿಸಿ]

ಬಿ. ಜಯಶ್ರೀ ಅವರ ಸ್ಪಂದನ ನಾಟಕ ಶಿಬಿರ ಮತ್ತು ಸಮಕಾಲೀನ ಇಂಗ್ಲಿಷ್ ರಂಗಭೂಮಿಯೊಂದಿಗೆ ಸ್ವಲ್ಪ ಸಮಯ ಕೆಲಸ ಮಾಡುವ ಮೂಲಕ ಡೈಸಿ ರಂಗಭೂಮಿಯೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.[೩][೪] ಅವರು ೨೦೦೨ ರಲ್ಲಿ ಬಿಂಬಾ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಿದರು. ಈ ಚಿತ್ರವನ್ನು ಬರ್ಲಿನ್ & ಫ್ರಾಂಕ್ಫರ್ಟ್ ಚಲನಚಿತ್ರೋತ್ಸವಕ್ಕೆ ಕಳುಹಿಸಲಾಯಿತು ಮತ್ತು ಇದು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿತು.[೫] ಕವಿತಾ ಲಂಕೇಶ್ ನಿರ್ದೇಶನದ ಈ ಚಿತ್ರವು ಚಲನಚಿತ್ರೋದ್ಯಮದಲ್ಲಿ ಬಾಲ ಕಲಾವಿದರ ಶೋಷಣೆಯನ್ನು ಅನ್ವೇಷಿಸಿತು.[೬] ನಂತರದಲ್ಲಿ ದರ್ಶನ್‌ರವರೊಂದಿಗೆ ಭಗವಾನ್(೨೦೦೪) ಚಿತ್ರದಲ್ಲಿ ನಟಿಸಿದ ಡೈಸಿ ಅವರಿಗೆ ಈ ಚಿತ್ರವು ಸ್ಪೈಸಿ ಡೈಸಿ ಎಂಬ ಉಪನಾಮವನ್ನು ತಂದುಕೊಟ್ಟಿತು.[೭] ನಂತರ ಇವರು ತೆಲುಗುವಿನಲ್ಲಿ ರವಿತೇಜರವರೊಂದಿಗೆ ಚಂಟಿ ಚಿತ್ರದಲ್ಲಿ ಅಭಿನಯಿಸಿದರು. ಪ್ರಿಯದರ್ಶನ್‌ರವರ ನಿರ್ದೇಶನದ ಕಿಲಾಡಿ ಅಕ್ಷಯ್ ಕುಮಾರ್ ಅಭಿನಯದ ಗರಂ ಮಸಾಲಾ ಚಿತ್ರದ ಮೂಲಕ ಇವರು ಬಾಲಿವುಡ್ ಪ್ರವೇಶಿಸಿದರು. ಕನ್ನಡದಲ್ಲಿ ಕಮಲ್ ಹಾಸನ್ ಜೊತೆ ರಾಮ ಶ್ಯಾಮ ಭಾಮ ಮತ್ತು ರಮೇಶ್ ಅರವಿಂದ್ ಜೊತೆ ಸತ್ಯವಾನ್ ಸಾವಿತ್ರಿ ಎಂಬ ಚಿತ್ರಗಳಲ್ಲಿ ನಟಿಸಿದ ನಂತರ ಕೆಲವು ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲೂ ಇವರು ಅಭಿನಯಿಸಿದರು. ಹಿಂದಿ ಭಾಷೆಯ ಗರಂ ಮಸಾಲಾ ಚಿತ್ರದ ಪ್ರಮೋಷನ್ ಸಂದರ್ಭದಲ್ಲಿ ಬೆನ್ನೆಲೆಬು ಸ್ತಾನಪಲ್ಲಟ ಸಮಸ್ಯೆಯಿಂದ ಬಳಲಿದ ಡೈಸಿಯವರು ಶಸ್ತ್ರಚಿಕಿತ್ಸೆಯ ನಂತರ ಕೆಲಕಾಲ ಚಿತ್ರರಂಗದಿಂದ ವಿರಾಮವನ್ನು ತೆಗೆದುಕೊಂಡರು. ತದನಂತರ ಚಿತ್ರರಂಗಕ್ಕೆ ಮರಳಿದರೂ ವಿಪರೀತ ನೃತ್ಯವಿರದ ಮೃದು ಪಾತ್ರಗಳಲ್ಲಿ ನಟಿಸತೊಡಗಿದರು.[೮]

೨೦೦೪ ರಲ್ಲಿ ಬಿಂಬಾ ಚಲನಚಿತ್ರವು ಬಿಡುಗಡೆಯಾಗುವ ಮೊದಲು, ಡೈಸಿಯವರು ಸುಮಾರು ಒಂದು ವರ್ಷ ಸ್ಟಾರ್ ವರ್ಲ್ಡ್‌ನಲ್ಲಿ ಪ್ರಸಾರವಾದ ಟಾಪ್ ಡ್ರೈವ್ ಎಂಬ ದೂರದರ್ಶನ ಸರಣಿಯ ನಿರೂಪಕಿಯಾಗಿ ಕೆಲಸ ಮಾಡಿದರು.[೯] ಕೇವಲ ಚಿತ್ರನಟಿ ಜೊತೆಗೆ ರೂಪದರ್ಶಿಯೂ ಆಗಿದ್ದ ಡೈಸಿಯವರು ಸುಮಾರು ೧೫೦ ಜಾಹೀರಾತುಗಳಲ್ಲಿ ನಟಿಸಿದ್ದಾರೆ.[೧೦]

ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

ವರ್ಷ. ಚಲನಚಿತ್ರ ಪಾತ್ರ ಭಾಷೆ. ಟಿಪ್ಪಣಿಗಳು
೨೦೦೩ ಇಂದ್ರು ಮುಧಲ್ ಗೀತಾ ತಮಿಳು
೨೦೦೪ ರಂಗ ಎಸ್ಎಸ್ಎಲ್ಸಿ ಸಂಜನಾ ಕನ್ನಡ ಸಂಜನಾ ಎಂದು ಮನ್ನಣೆ
೨೦೦೪ ಬಿಂಬಾ ಸರೋಜಾ ಕನ್ನಡ
೨೦೦೫ ಭಗವಾನ್ ಅಂಜಲಿ ಕನ್ನಡ ಅಂಜಲಿ ಎಂದು ಮನ್ನಣೆ
೨೦೦೪ ಚಂಟಿ ಅಂಜಲಿ ತೆಲುಗು ಅಂಜಲಿ ಎಂದು ಮನ್ನಣೆ
೨೦೦೫ ರಿಲ್ಯಾಕ್ಸ್ ಅಂಜಲಿ ತೆಲುಗು ಅಂಜಲಿ ಎಂದು ಮನ್ನಣೆ
೨೦೦೫ ಗರಂ ಮಸಾಲಾ ದೀಪ್ತಿ ಹಿಂದಿ
೨೦೦೫ ರಾಮ ಶಾಮ ಭಾಮಾ ಪ್ರಿಯಾ ಕನ್ನಡ
೨೦೦೬ ಜಾಕ್ಪಾಟ್ ಕನ್ನಡ ಕ್ಯಾಮಿಯೋ
೨೦೦೬ ಪ್ರಜಾಪಥಿ ಚಲನಚಿತ್ರ ನಟಿ ಮಲಯಾಳಂ
೨೦೦೬ ಐಶ್ವರ್ಯಾ ಅಂಜಲಿ ಕನ್ನಡ
೨೦೦೬ ತವಾರಿನ ಸಿರಿ ಪ್ರಿಯಾ ಕನ್ನಡ
೨೦೦೬ ತನನಂ ತನನಂ[೧೧] ಗೌಡ ಅವರ ಮಗಳು ಕನ್ನಡ
೨೦೦೭ ಸತ್ಯವಾನ್ ಸಾವಿತ್ರಿ ಸುಬ್ಬಲಕ್ಷ್ಮಿ ಕನ್ನಡ
೨೦೦೮ ಗಾಳಿಪಟ ಸೌಮ್ಯ ಕನ್ನಡ ನಾಮನಿರ್ದೇಶನ-ಅತ್ಯುತ್ತಮ ನಟಿಗಾಗಿ ಫಿಲ್ಮ್ಫೇರ್ ಪ್ರಶಸ್ತಿ-ಕನ್ನಡ
೨೦೦೮ ಚಕ್ಕರಾ ವಿಯುಗಮ್ ಸಂಧ್ಯಾ ತಮಿಳು
೨೦೦೯ ಸ್ವೀಟ್ ಹಾರ್ಟ್ ಸಂಧ್ಯಾ ತೆಲುಗು
೨೦೦೯ ಒಲವೆ ಜೀವನ ಲೆಕ್ಕಾಚಾರಾ ಕನ್ನಡ ಕ್ಯಾಮಿಯೋ
೨೦೧೧ ಯುನೈಟೆಡ್ ಸಿಕ್ಸ್ ಜಿಯಾ ಹಿಂದಿ
೨೦೧೨ ಕ್ರೇಜಿ ಲೋಕಾ ಸರಳಾ ಕನ್ನಡ

ಉಲ್ಲೇಖಗಳು[ಬದಲಾಯಿಸಿ]

  1. https://kannada.filmibeat.com/celebs/daisy-bopanna/biography.html
  2. https://kannada.filmibeat.com/celebs/daisy-bopanna/biography.html
  3. https://kannada.filmibeat.com/celebs/daisy-bopanna/biography.html
  4. https://web.archive.org/web/20100512031626/http://sify.com/movies/kannada/interview.php?id=13916749&cid=2404
  5. https://kannada.filmibeat.com/celebs/daisy-bopanna/biography.html
  6. https://web.archive.org/web/20121104073126/http://www.hindu.com/mp/2008/07/14/stories/2008071450500100.htm
  7. https://web.archive.org/web/20121104073126/http://www.hindu.com/mp/2008/07/14/stories/2008071450500100.htm
  8. https://kannada.filmibeat.com/celebs/daisy-bopanna/biography.html
  9. https://web.archive.org/web/20040603134240/http://www.deccanherald.com/deccanherald/may232004/enter8.asp
  10. https://kannada.filmibeat.com/celebs/daisy-bopanna/biography.html
  11. http://www.viggy.com/english/current_tananam_tananam.asp