ಸಂನ್ಯಾಸಯೋಗಃ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಗವದ್ಗೀತೆ

Aum
ಅಧ್ಯಾಯಗಳು
  1. ಅರ್ಜುನ ವಿಷಾದ ಯೋಗ
  2. ಸಾಂಖ್ಯಯೋಗಃ
  3. ಕರ್ಮಯೋಗಃ
  4. ಜ್ಞಾನಯೋಗಃ
  5. ಸಂನ್ಯಾಸಯೋಗಃ
  6. ಧ್ಯಾನಯೋಗಃ
  7. ಜ್ಞಾನವಿಜ್ಞಾನಯೋಗಃ
  8. ಅಕ್ಷರಬ್ರಹ್ಮಯೋಗಃ
  9. ರಾಜವಿದ್ಯಾರಾಜಗುಹ್ಯಯೋಗಃ
  10. ವಿಭೂತಿಯೋಗಃ
  11. ವಿಶ್ವರೂಪದರ್ಶನಯೋಗಃ
  12. ಭಕ್ತಿಯೋಗಃ
  13. ಕ್ಷೇತ್ರಕ್ಷೇತ್ರಜ್ಞಯೋಗಃ
  14. ಗುಣತ್ರಯವಿಭಾಗಯೋಗಃ
  15. ಪುರುಷೋತ್ತಮಯೋಗಃ
  16. ದೈವಾಸುರಸಂಪದ್ವಿಭಾಗಯೋಗಃ
  17. ಶ್ರದ್ಧಾತ್ರಯವಿಭಾಗಯೋಗಃ
  18. ಮೋಕ್ಷಸಂನ್ಯಾಸಯೋಗಃ

ಅರ್ಜುನ ಉವಾಚ:
ಸಂನ್ಯಾಸಂ ಕರ್ಮಣಾಂ ಕೃಷ್ಣ ಪುನರ್ಯೋಗಂ ಚ ಶಂಸಸಿ ।
ಯಚ್ಛ್ರೇಯ ಏತಯೋರೇಕಂ ತನ್ಮೇ ಬ್ರೂಹಿ ಸುನಿಶ್ಚಿತಮ್ ।।೧।।

ಅರ್ಜುನನು: ಶ್ರೀಕೃಷ್ಣ, ಕರ್ಮಸಂನ್ಯಾಸವನ್ನು ಫೊಗಳುತ್ತೀಯೆ. ಕರ್ಮಯೋಗವನ್ನೂ ಹೊಗಳುತ್ತೀಯೆ. ಇವುಗಳಲ್ಲಿ ಯಾವುದು ನನಗೆ ಪ್ರಶಸ್ತವಾದದ್ದೆಂದು ನಿಶ್ಚಿತವಾಗಿ ಹೇಳು.

Arjuna says: Shri Krishna, on the one hand you praise renunciation of karma and on the other you praise Yoga. Tell me conclusively which of the two is better.

ಶ್ರೀಭಗವಾನುವಾಚ:
ಸಂನ್ಯಾಸ ಕರ್ಮಯೋಗಶ್ಚ ನಿಃಶ್ರೇಯಸಕರಾವುಭೌ ।
ತಯೋಸ್ತು ಕರ್ಮ ಸಂನ್ಯಾಸಾತ್ಕರ್ಮಯೋಗೋ ವಿಶಿಷ್ಯತೇ ।।೨।।

ಭಗವಂತನು: ಕರ್ಮಸಂನ್ಯಾಸ, ಕರ್ಮಯೋಗ - ಇವೆರಡೂ ಮೋಕ್ಷದಾಯಕಗಳೇ ಹೌದು. ಆದರೆ ಅವುಗಳಲ್ಲಿ ಕರ್ಮಸಂನ್ಯಾಸಕ್ಕಿಂತ ಕರ್ಮಯೋಗವು ಉತ್ತಮವಾದದ್ದು.

Shri Krishna says: Renunciation and Yoga lead to the highest bliss. But of the two, Yoga through action is the more esteemed of the two.

ಜ್ಞೇಯಃ ಸ ನಿತ್ಯಸಂನ್ಯಾಸೀ ಯೋ ನ ದ್ವೇಷ್ಟಿ ನ ಕಾಂಕ್ಷತಿ ।
ನಿರ್ದ್ವಂದ್ವೋ ಹಿ ಮಹಾಬಾಹೋ ಸುಖಂ ಬಂಧಾತ್ಪ್ರಮುಚ್ಯತೇ ।।೩।।

ಯಾವನು ದ್ವೇಷಿಸಿವುದಿಲ್ಲವೋ ಆಶಿಸುವುದಿಲ್ಲವೋ ಆ ಕರ್ಮಯೋಗಿಯು ನಿತ್ಯಸಂನ್ಯಾಸಿಯೆಂದು ತಿಳಿಯಬಹುದು. ಹೇ ಮಹಾಬಾಹು, ದ್ವಂದ್ವರಹಿತನಾದವನು ಸುಖವಾಗಿ ಯಾವ ಆಯಾಸವೂ ಇಲ್ಲದೆ ಸಂಸಾರಬಂಧನದಿಂದ ಬಿಡುಗಡೆಹೊಂದುತ್ತಾನೆ.

One is known as a nityasanyasi, or one who is always a sanyasi, when one neither hates nor desires. For, free from the pair of opposites, he is set free from bondage to Samsara.

ಸಾಂಖ್ಯಯೋಗೌ ಪೃಥಗ್ಬಾಲಾಃ ಪ್ರವದಂತಿ ನ ಪಂಡಿತಃ ।
ಏಕಮಪ್ಯಾಸ್ಥಿತಃ ಸಮ್ಯಗುಭಯೋರ್ವಿಂದತೇ ಫಲಮ್ ।।೪।।

ಸಾಂಖ್ಯ ಮತ್ತು ಕರ್ಮಯೋಗಗಳು ಬೇರೆ ಬೇರೆ - ಭಿನ್ನಫಲಗಳನ್ನು ಕೊಡತಕ್ಕವೆಂದು ಬಾಲಕರು ಹೇಳಬಹುದು - ಪಂಡಿತರು ಹೇಳುವುದಿಲ್ಲ. ಇವುಗಳಲ್ಲಿ ಯಾವುದೇ ಒಂದನ್ನು ಚೆನ್ನಾಗಿ ಇಟ್ಟುಕೊಂಡವನು ಇವೆರಡರ ಫಲವನ್ನೂ ಪಡೆಯುತ್ತಾನೆ.

Children, not the wise speak of Sankhya and Yoga as different. One who is rightly devoted to even one, obtains the fruits of both.

ಯತ್ ಸಾಂಖ್ಯೈಃ ಪ್ರಾಪ್ಯತೇ ಸ್ಥಾನಂ ತದ್ಯೋಗೈರಪಿ ಗಮ್ಯತೇ ।
ಏಕಂ ಸಾಂಖ್ಯಂ ಚ ಯೋಗಂ ಚ ಯಃ ಪಶ್ಯತಿ ಸ ಪಶ್ಯತಿ ।।೫।।

ಸಾಂಖ್ಯರಿಗೆ ಎಂದರೆ ಜ್ಞಾನನಿಷ್ಠರಾದ ಸಂನ್ಯಾಸಿಗಳಿಗೆ ದೊರೆಯುವ ಮೋಕ್ಷಸ್ಥಾನವು ಕರ್ಮಯೋಗಿಗಳಿಗೂ ದೊರೆಯುತ್ತದೆ. ಅದ್ದರಿಂದ ಸಾಂಖ್ಯವೆಂಬ ಸಂನ್ಯಾಸವನ್ನೂ ಕರ್ಮಯೋಗವನ್ನೂ ಒಂದಾಗಿ ಕಾಣತಕ್ಕವನೇ ಸರಿಯಾಗಿ ಕಾಣತಕ್ಕವನು.

That state which is reached by Sankhyas, is also reached by Yogis. He sees, who sees both as one.