ದಾಶರಥಿ ದೀಕ್ಷಿತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದಾಶರಥಿ ದೀಕ್ಷಿತ ಇವರು ಕನ್ನಡದ ಹೆಸರಾಂತ ಹಾಸ್ಯ ಸಾಹಿತಿಗಳು. ಇವರು ೧೯೨೧ ಫೆಬ್ರುವರಿ ೬ರಂದು ಚಿಕ್ಕಮಗಳೂರು ಜಿಲ್ಲೆಯ ಮೂಡುಗೆರೆಯಲ್ಲಿ ಜನಿಸಿದರು. ಇವರ ತಾಯಿ ರಂಗೋಬಾಯಿ ; ತಂದೆ ಗಿರಿದೀಕ್ಷಿತ ಬಾಳಾಜಿ. ಇವರು ಮೊದಲು ಕೆಲಕಾಲ ಕರ್ನಾಟಕ ಸರಕಾರದ ವಿದ್ಯುಚ್ಛಕ್ತಿ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದರು. ಆ ಬಳಿಕ ಬೆಂಗಳೂರಿನಲ್ಲಿರುವ ಹಿಂದುಸ್ತಾನ ವಿಮಾನ ಕಾರಖಾನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದರು.

ಸಾಹಿತ್ಯ[ಬದಲಾಯಿಸಿ]

ದೀಕ್ಷಿತರು “ಕೊರವಂಜಿ”ಯ ಕಾಯಂ ಬರಹಗಾರರು.‘ಗಾಂಪರ ಗುಂಪು’,‘ಪಕೋಡಪ್ರಿಯ ದಫೇದಾರ ದೇರಣ್ಣ’ ಇವು ದೀಕ್ಷಿತರ ಜನಪ್ರಿಯ ಸೃಷ್ಟಿಗಳು.

ಕೃತಿಗಳು[ಬದಲಾಯಿಸಿ]

  • ಅಜ್ಜನ ಆವಾಂತರ
  • ಅಜ್ಜಿ ಆಸ್ತಿ
  • ಅನುರಾಗ ಸುಧಾ
  • ಅಳಿಯ ದೇವರು
  • ಉತ್ಸವ ಮೂರ್ತಿ
  • ಕನ್ನಡದ ಗಾಡಿ
  • ಗಂಡನ ಪೂಜೆ
  • ಗಂಡಾಗಿ ಕಾಡಿದ್ದ ಗುಂಡು
  • ಗಾಂಪರ ಗುಂಪು
  • ದಸರಾ ಬೊಂಬೆ
  • ಪಕೋಡಪ್ರಿಯ
  • ಪ್ರೇತ ಸಂಹಾರ
  • ಬೆಡಗಿನ ಬಲೆ
  • ಬೆದರು ಗೊಂಬೆ
  • ಮರಳಿ ಮಠಕ್ಕೆ
  • ಮಾವನ ಮನೆ
  • ಲಂಬೋದರ
  • ಸಿಡ್ಲು ಮರಿ