ವಿಮಾನ ನಿಲ್ದಾಣ
ವಿಮಾನ ನಿಲ್ದಾಣ, ವಿಮಾನಗಳು ಹಾರುವ ಮುನ್ನ ಮೇಲೇರಲು ಹಾಗು ಹಾರಾಟದ ನಂತರ ಕೆಳಗಿಳಿಯುವ ಸ್ಥಳ. ಪ್ರತೀ ವಿಮಾನನಿಲ್ದಾಣದಲ್ಲಿಯೂ, ಅತಿ ಕಡಿಮೆಯೆಂದರೂ ಒಂದು ರನ್‌ವೇ ಅಥವಾ ಹೆಲಿಪ್ಯಾಡ್ ಇರುತ್ತದೆ. ದೊಡ್ಡ ವಿಮಾನ ನಿಲ್ದಾಣಗಳಲ್ಲಿ ಒಂದಕ್ಕಿಂತ ಹೆಚ್ಚು ರನ್‌ವೇಗಳಿರಬಹುದು. ಇದಲ್ಲದೆ,ಪ್ರತಿ ವಿಮಾನ ನಿಲ್ದಾಣದಲ್ಲಿಯೂ,ಹ್ಯಾಂಗರ್, ಮುಖ್ಯ ಕಟ್ಟಡ (ಟರ್ಮಿನಲ್ ಬಿಲ್ಡಿಂಗ್), ವಿಮಾನ ಸಂಚಾರ ನಿಯಂತ್ರಣ ಕೇಂದ್ರ (ಏರ್ ಟ್ರಾಫಿಕ್ ಕಂಟ್ರೋಲ್), ಮುಂತಾದ ಮೂಲಭೂತ ಸೌಕರ್ಯಗಳಿರುತ್ತವೆ. ಇದಲ್ಲದೆ, ಪ್ರಮುಖ ಪ್ರಯಾಣಿಕ ವಿಮಾನ ನಿಲ್ದಾಣಗಳಲ್ಲಿ, ಪ್ರಯಾಣಿಕರ ಅನುಕೂಲಕ್ಕೆ, ಹೋಟೆಲ್,ಲೌಂಜ್ ಹಾಗು ತುರ್ತು ಸೇವೆ ವ್ಗಳಿರುತ್ತವೆ. ಮಿಲಿಟರಿ ವಿಮಾನ ನಿಲ್ದಾಣಗಳನ್ನು ಏರ್‌ಬೇಸ್ ಅಥವಾ ಏರ್‌ಫೀಲ್ಡ್‌ಗಳೆನ್ನುತ್ತಾರೆ.
ವ್ಯವಸ್ಥೆಗಳು
[ಬದಲಾಯಿಸಿ]ರನ್‌ವೇ ವಿಮಾನ ನಿಲ್ದಾಣಗಳ ಅತ್ಯಂತ ಪ್ರಮುಖ ಅಂಗ. ಸಾಮಾನ್ಯವಾಗಿ ರನ್‌ವೇ ೧೦೦೦ ಮೀ. ನಿಂದ ೨೦೦೦ ಮೀ.ಗಳಷ್ಟು ಉದ್ದವಿರುತ್ತದೆ. ಕಾಂಕ್ರೀಟ್ ಅಥವಾ ಅಸ್ಫಾಲ್ಟ್ (ಟಾರ್) ನಿಂದ ರನ್‌ವೇಗಳನ್ನು ಸಿದ್ದಪಡಿಸಿರುತ್ತಾರೆ. ಪ್ರಪಂಚದ ಅತ್ಯಂತ ಉದ್ದದ ರನ್‌ವೇ ರಷ್ಯಾದ ಉಲ್ಯಾನವೊಸ್ಕ್-ವೊಸ್ಟೋಚ್ನಿ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿದೆ. ಇದರ ಉದ್ದ ೫೦೦೦ ಮೀ.
೨೦೦೫ರ ಮಾಹಿತಿ ಪ್ರಕಾರ ಪ್ರಪಂಚದಾದ್ಯಂತ ಸುಮಾರು ೫೦೦೦೦ ವಿಮಾನ ನಿಲ್ದಾಣಗಳಿವೆ. ಇವುಗಳಲ್ಲಿ ಸುಮಾರು ೧೯೮೧೫ ಅಮೇರಿಕಾ ದೇಶದಲ್ಲಿದೆ.
ಒಡೆತನ ಮತ್ತು ನಿರ್ವಹಣೆ
[ಬದಲಾಯಿಸಿ]ಪ್ರಪಂಚದ ಬಹುತೇಕ ವಿಮಾನ ನಿಲ್ದಾಣಗಳು ಸರ್ಕಾರದ ಸ್ವಾಮ್ಯದಲ್ಲಿವೆ.ಬಹುತೇಕ ಕಡೆಗಳಲ್ಲಿ ಇವುಗಳ ನಿರ್ವಹಣೆ ಹಾಗು ಅಭಿವೃದ್ಧಿಯ ಹೊಣೆಯನ್ನು ಖಾಸಗಿ ಸಂಸ್ಥೆಗಳಿಗೆ ಗುತ್ತಿಗೆ ನೀಡಲಾಗುತ್ತದೆ. ಬ್ರಿಟಿಷ್ ಏರ್ಪೋರ್ಟ್ ಅಥಾರಿಟಿಯು ಯುನೈಟೆಡ್ ಕಿಂಗ್‌ಡಮ್‌ನ ಅನೇಕ ವಿಮಾನ ನಿಲ್ದಾಣಗಳ ನಿರ್ವಹಣೆ ಮಾಡುತ್ತದೆ. ಭಾರತದಲ್ಲಿ ಪ್ರಮುಖ ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಸಂಸ್ಥೆ ಮಾಡುತ್ತದೆ.
ವಿಮಾನ ನಿಲ್ದಾಣದ ರಚನೆ
[ಬದಲಾಯಿಸಿ]ವಿಮಾನ ನಿಲ್ಡಾಣಗಳನ್ನು ಎರಡು ಕ್ಷೇತ್ರಗಳನ್ನಾಗಿ ವಿಭಜಿಸಬಹುದಾಗಿದೆ. ಒಂದು ವಾಯುಯಾನ ಸಂಬಂಧಿ ಚಟುವಟಿಕೆಗಳಿರುವ ಸ್ಥಳ, ಮತ್ತೊಂದು ಇತರೆ ಸಹಾಯಕ ಚಟುವಟಿಕೆಗಳು ನಡಿಯುವ ಸ್ಥಳ. ವಿಮಾನಗಳು ನಿಲ್ಲುವ ಪಾರ್ಕಿಂಗ್ ಬೇ,ರನ್‌ವೇ ಹಾಗು ವಿಮಾನಗಳು ಹಾರಟಕ್ಕೆ ಮುನ್ನ ಹಾಗು ನಂತರ ಪಾರ್ಕಿಂಗ್ ಬೇ ಗೆ ತಲುಪಲು ಇರುವ ಟ್ಯಾಕ್ಸಿ-ವೇ ಮೊದಲನೇ ಕ್ಷೇತ್ರದಲ್ಲಿದ್ದರೆ, ಪ್ರಯಾಣಿಕರು ಟಿಕೆಟ್ ಖರೀದಿಸುವ ಸ್ಥಳ,ರಕ್ಷಣಾ ವ್ಯವಸ್ಥೆ,ಲಗ್ಗೇಜ್ ಪಡೆಯುವ ಸ್ಥಳ ಹಾಗು ವಿಮಾನ ಹತ್ತುವ-ಇಳಿಯುವ ಸ್ಥಳ ಎರಡನೇ ಕ್ಷೇತ್ರದಲ್ಲಿದೆ.
ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಆಮದು (ಕಸ್ಟಮ್ಸ್) ಹಾಗು ಪ್ರಸ್ಥಾನ (ಇಮ್ಮಿಗ್ರೇಶನ್)ಗೆ ವ್ಯವಸ್ಥೆಯಿರುತ್ತದೆ.
ಸರಕು ಸೇವೆ
[ಬದಲಾಯಿಸಿ]ಪ್ರಯಾಣಿಕರ ಸಾಗಣೆಯಲ್ಲದೆ, ವಿಮಾನ ನಿಲ್ದಾಣಗಳಲ್ಲಿ ಸರಕು ಸಾಗಣೆಗೆ ವ್ಯವಸ್ಥೆಯಿರುತ್ತದೆ.ಅನೇಕ ವಿಮಾನಯಾನ ಸಂಸ್ಥೆಗಳು ಪ್ರತ್ಯೇಕ ಸರಕು ಸಾಗಣೆ ವಿಮಾನಗಳನ್ನು ಹೊಂದಿವೆ.
ಇವನ್ನೂ ನೋಡಿ
[ಬದಲಾಯಿಸಿ]
ಹೊಸ ಬಗೆ ನಿಲ್ದಾಣ
[ಬದಲಾಯಿಸಿ]- ವಿಮಾನ ಸಂಚಾರ ದಟ್ಟಣೆ: ನೇರ ರನ್ ವೇಗೆ ಪರ್ಯಾಯವಾಗಿ ವೃತ್ತಾಕಾರದ ರನ್ ವೇ ಯೋಜನೆ!;ಪ್ರಜಾವಾಣಿ ವಾರ್ತೆ;17 Mar, 2017
ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಪ್ರಪಂಚದ ವಿಮಾನ ನಿಲ್ದಾಣಗಳ ಬಗ್ಗೆ ಮಾಹಿತಿ
- ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅಂತರ್ಜಾಲದ ಪುಟ Archived 2008-04-04 ವೇಬ್ಯಾಕ್ ಮೆಷಿನ್ ನಲ್ಲಿ.