ಕೆ.ಆರ್.ಪದ್ಮಜಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೆ.ಆರ್.ಪದ್ಮಜಾ ಇವರದು ಹೋರಾಟದ ಬದುಕು. ಮೊದಲಿಗೆ ಸ್ಥಿತಿವಂತ ಕುಟುಂಬದವರಾದರೂ ಸಹ, ತಂದೆಯ ಅಪರಿಮಿತ ಔದಾರ್ಯದಿಂದಾಗಿ ಎಲ್ಲವನ್ನೂ ಕಳೆದುಕೊಂಡು, ಶಿವಮೊಗ್ಗಾ ಜಿಲ್ಲೆಯ ಅಯನೂರು ಊರಿಗೆ ಬಂದರು. ಅಲ್ಲಿ ಪ್ರ್ರೌಢ ಶಾಲೆಯಲ್ಲಿ ಕಲಿಯುತ್ತಿರುವಾಗಲೆ, ೧೯೬೩ ನೆಯ ಇಸವಿಯಲ್ಲಿ ಆಕಾಶವಾಣಿಯವರು ಏರ್ಪಡಿಸಿದ ಅಖಿಲ ಭಾರತ ಕಥಾ ಸ್ಪರ್ಧೆಯಲ್ಲಿ ಭಾಗವಹಿಸಿ, ಪ್ರಥಮ ಬಹುಮಾನ ಪಡೆದರು. ಕತೆಯ ಹೆಸರು: ಅವಳು ಅಲ್ಲಿ ಇರಲಿಲ್ಲ.

ಶಿಕ್ಷಣ[ಬದಲಾಯಿಸಿ]

ಕೆ.ಆರ.ಪದ್ಮಜಾ ಅವರು ಪಿ.ಯು.ಸಿ; ಟಿ.ಸಿ.ಎಚ್. ಅಗಿರುವದಲ್ಲದೆ ಹಿಂದಿಯಲ್ಲಿ 'ರಾಜಭಾಷಾ ವಿದ್ವಾನ್ ಪದವಿಯನ್ನು ಪಡೆದಿರುತ್ತಾರೆ.

ಕೌಟಂಬಿಕ ಜೀವನ[ಬದಲಾಯಿಸಿ]

೧೯೬೪ ಜನೆವರಿ ೯ ರಂದು ಪದ್ಮಜಾ ರವರು, ಮತ್ತೊಬ್ಬ ಸಾಹಿತಿ ಶ್ರೀ ರಘುಸುತ ರ ಜೊತೆ ವಿವಾಹವಾದರು. ಇಬ್ಬರು ಗಂಡು ಮಕ್ಕಳನ್ನು ಹಾಗು ಒಬ್ಬ ಹೆಣ್ಣುಹುಡುಗಿಯನ್ನು ಇವರು ಪಡೆದಿದ್ದಾರೆ.

ಉದ್ಯೋಗ[ಬದಲಾಯಿಸಿ]

ಪದ್ಮಜಾ ಅವರು ಮೊದಲಿಗೆ ಕೆಲವು ಖಾಸಗಿ, ಆಬಳಿಕ ಸರಕಾರಿ ಶಾಲೆಗಳಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಶಾಂತಲಾ ಆರ್ಟ್ಸ್ ಅಕಾಡೆಮಿ ಯ ಸ್ಥಾಪಕ ಸದಸ್ಯೆ ಹಾಗು ಕೋಶಾಧ್ಯಕ್ಷಿಣಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

ಸಾಮಾಜಿಕ ಹಾಗು ಸಾಹಿತ್ಯಕ ಜೀವನ[ಬದಲಾಯಿಸಿ]

ಪದ್ಮಜಾ ಅವರು ಮೊದಲ ಕೃತಿ ಒಂದು ಪತ್ತೇದಾರಿ ಕಾದಂಬರಿ: ಚಿನ್ನದ ಕಳ್ಳರು (೧೯೬೯). ಆಬಳಿಕ ಅನೇಕ ಪತ್ತೇದಾರಿ ಹಾಗು ಸಾಮಾಜಿಕ ಕಾದಂಬರಿಗಳನ್ನು ರಚಿಸಿದ್ದಾರೆ. ಅಲ್ಲದೆ ಮಕ್ಕಳ ಸಾಹಿತ್ಯ ಸಹ ರಚಿಸಿದ್ದಾರೆ. ಪದ್ಮಜಾ ಅವರು ಕೇವಲ ಸಾಹಿತ್ಯದಲ್ಲಲ್ಲದೆ, ಸಾಮಾಜಿಕ ಚಟುವಟಿಕೆಗಳಲ್ಲೂ ಸಹ ಆಸಕ್ತಿಯಿಂದ ಕೆಲಸ ಮಾಡಿದ್ದಾರೆ. ೧೯೬೨ರಿಂದ ೧೯೬೫ರ ವರೆಗೆ ಇವರು ಅಯನೂರಿನಲ್ಲಿ, ಮೈಸೂರು ರಿಯಾಸತ್ ಹಿಂದಿ ಪ್ರಚಾರ ಸಭಾ ದ ಪರವಾಗಿ ಹಿಂದಿ ಪ್ರಚಾರದಲ್ಲಿ ತೊಡಗಿದ್ದರು.೧೯೬೪ ರಿಂದ ೧೯೮೦ ರವರೆಗೆ ಬೆಂಗಳೂರು ನಗರದ ಮಲ್ಲೇಶ್ವರಂ (ಪಶ್ಚಿಮ)ದಲ್ಲಿ ಹಿಂದಿ ಪ್ರಚಾರ ಕೈಗೊಂಡರು.೧೯೬೪ರಿಂದ ೧೯೮೪ರವರೆಗೆ ಪುಲಿಕೇಶಿ ಪ್ರಕಾಶನ ದ ವ್ಯವಸ್ಥಾಪಕ ಸಂಪಾದಕಿಯಾಗಿದ್ದರು. ಶಾಂತಲಾ ಆರ್ಟ್ಸ್ ಅಕಾಡೆಮಿ ಯ ಮೂಲಕ ನಗರ ಹಾಗು ಗ್ರಾಮಗಳಲ್ಲಿ ಶಾಂತಲಾ ನೃತ್ಯೋತ್ಸವ ಏರ್ಪಡಿಸಿದ್ದಾರೆ. ೧೯೮೭ ರಿಂದ ೧೯೯೬ ರವರೆಗೆ ' ಸುರಸಿಂಧು ಸಾಂಸ್ಕೃತಿಕ ಸಂಘದ ವ್ಯವಸ್ಥಾಪಕ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಯಶವಂತಪುರ ಕ್ರೆಡಿಟ್ ಕೊ-ಆಪರೇಟಿವ್ ಸೊಸಾಯಿಟಿ , ಕಾವೇರಿ ಗ್ರಾಹಕರ ಕೊ-ಆಪರೇಟಿವ್ ಸೊಸಾಯಿಟಿ ಹಾಗು ಹೇಮಾವತಿ ಕ್ರೆಡಿಟ್ ಕೊ-ಆಪರೇಟಿವ್ ಸೊಸಾಯಿಟಿ ಈ ಸಹಕಾರಿ ಸಂಘಗಳಲ್ಲಿ ಸದಸ್ಯೆಯಾಗಿ, ನಿರ್ದೇಶಕಿಯಾಗಿ ಸೇವೆ ಸಲ್ಲಿಸಿದ್ದಾರೆ.

ಸಾಹಿತ್ಯ ರಚನೆ[ಬದಲಾಯಿಸಿ]

ಪತ್ತೇದಾರಿ ಕಾದಂಬರಿಗಳು[ಬದಲಾಯಿಸಿ]

  • ಚಿನ್ನದ ಕಳ್ಳರು
  • ಗೋವಾದಲ್ಲಿ ಕಳ್ಳರು
  • ಬೊಂಬೆಗಾಗಿ
  • ಬೆಂಕಿಯ ಸಂಗ
  • ಯಾರು ಕೊಲೆಗಾರ
  • ಮಿಂಚಿನ ಮರಣ
  • ಚಿನ್ನದ ಗಿಣಿ
  • ಸಾವಿನ ಅಲೆ
  • ಆಟೋದಲ್ಲಿ ಕೊಲೆ
  • ವಜ್ರದ ಹಿಡಿ
  • ರಕ್ತದ ಅರಮನೆ
  • ಗಂಡಭೇರುಂಡ

ಸಾಮಾಜಿಕ ಕಾದಂಬರಿಗಳು[ಬದಲಾಯಿಸಿ]

  • ಬಾಳದೀವಿಗೆ
  • ಬದುಕಿನ ಬಣ್ನ
  • ಶುಭತೋರಣ
  • ಹೆಣ್ಣಿನ ಮಾಂಗಲ್ಯ
  • ಶಾಂತಿ ಮಂದಿರ
  • ಸುಪ್ರಭಾತ
  • ಅಂಕಿತ
  • ವಿವಾಹ ಬಂಧನ
  • ಶುಭಯೋಗ
  • ಪ್ರೇಮದ ಕೊಡುಗೆ
  • ಪದ್ಮರಾಗ
  • ವನಮಾಲ
  • ಬಾಳಗೀತೆ
  • ಆನಂದಗಾನ
  • ಮಂದಹಾಸ
  • ಪ್ರಣಯರವಿ
  • ಆರಿದ ದೀಪ
  • ಮನೋರಂಜನಿ
  • ಬಿಚ್ಚಿದ ಹೆಡೆ
  • ಒಳಸುಳಿ
  • ಪೂರ್ವಿ ಕಲ್ಯಾಣಿ
  • ಒಲವಿನ ಹೂ
  • ಕೋಗಿಲೆಯ ಹಾಡು
  • ಮಧುರ ವಸಂತ
  • ಹೂವಿನ ಸೊಬಗು
  • ಕೆಂಡಸಂಪಿಗೆ
  • ಹೊಸ ಹರುಷ
  • ಕುಸುಮ ಚಂದ್ರಿಕ
  • ಮೋಹದ ಮಲ್ಲಿಗೆ
  • ಬೆಳ್ಳಿಯ ಚಂದಿರ
  • ಗಗನ ಮಯೂರಿ
  • ಚೈತ್ರದ ಕನಸು
  • ದೇವ ಮನೋಹರಿ
  • ಜೀವನರಾಗ
  • ಅನುರಾಗ ಸಿಂಧು
  • ವಸಂತ ಕೋಕಿಲ
  • ಮೊಗ್ಗು ಅರಳಿದಾಗ
  • ಹಾಲು ಬೆಳದಿಂಗಳು
  • ಕನಕಾಂಬರ
  • ಪ್ರಿಯ ಮೋಹನ
  • ಕನಸಿನ ಕನ್ಯೆ
  • ಬೆಂಕಿ ಹೂಗಳು
  • ಪ್ರೀತಿಯ ಕಡಲು
  • ರಾಗಹಂಸ
  • ಆಕಾಶ ಮಲ್ಲಿಗೆ
  • ಮಧುವಂತಿ
  • ಅಮೃತವಾಹಿನಿ
  • ಮೇಘಮಾಲೆ
  • ಹೃದಯೇಶ್ವರಿ
  • ಕಾಂಚನಲತಾ
  • ಪಾತಾಳಗಂಗಾ
  • ಕುಸುಮಾವಳಿ
  • ಪ್ರೇಮ ಪೂಜಾರಿ
  • ಶ್ರೀರಂಜನಿ
  • ಶಂಕರಾಭರಣ
  • ಹಂಸಾನಂದಿ
  • ಸಾಹಸವೀರ

ಮಕ್ಕಳ ಸಾಹಿತ್ಯ[ಬದಲಾಯಿಸಿ]

ಕತೆಗಳು[ಬದಲಾಯಿಸಿ]

  • ನಿಜವಾದ ನ್ಯಾಯ
  • ಹಾಡುವ ಹಕ್ಕಿ
  • ಮೂರ್ಖ ಮಂಗ
  • ಲಕ್ಷ್ಮಿ ಅನುಗ್ರಹ
  • ಸುಗಂಧರಾಜ
  • ಗುಟ್ಟು

ನಾಟಕ[ಬದಲಾಯಿಸಿ]

  • ಭರತ

ಇತರ ಸಾಹಿತ್ಯ[ಬದಲಾಯಿಸಿ]

  • ರಘುಸುತ