ಚೌಖಂಡಿ ಸ್ತೂಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚೌಖಂಡಿ ಸ್ತೂಪವು ಒಂದು ಬೌದ್ಧ ಸ್ತೂಪವಾಗಿದ್ದು ಭಾರತದ ಉತ್ತರ ಪ್ರದೇಶ ರಾಜ್ಯದ ವಾರಾಣಸಿಯಿಂದ ೮ ಕಿಲೋಮೀಟರ್ ದೂರವಿರುವ ಸಾರ್‌ನಾಥ್‍ದಲ್ಲಿದೆ. ಸ್ತೂಪಗಳು ಹೂಳುವ ದಿಬ್ಬಗಳಿಂದ ವಿಕಸನಗೊಂಡಿವೆ ಮತ್ತು ಬುದ್ಧನ ಒಂದು ಅವಶೇಷಕ್ಕೆ ಪವಿತ್ರ ಸ್ಥಳವಾಗಿ ಕಾರ್ಯನಿರ್ವಹಿಸುತ್ತದೆ.[೧] ಈ ತಾಣವನ್ನು ಜೂನ್ ೨೦೧೯ರಲ್ಲಿ ಭಾರತದ ಪುರಾತತ್ವ ಸರ್ವೇಕ್ಷಣೆಯು ರಾಷ್ಟ್ರೀಯ ಮಹತ್ವದ ಸ್ಮಾರಕವೆಂದು ಘೋಷಿಸಿತು.[೨]

ಇತಿಹಾಸ[ಬದಲಾಯಿಸಿ]

ಚೌಖಂಡಿ ಸ್ತೂಪವನ್ನು ಮೂಲತಃ 4 ಮತ್ತು 6 ನೇ ಶತಮಾನಗಳ ನಡುವಿನ ಗುಪ್ತರ ಅವಧಿಯಲ್ಲಿ ಭಗವಾನ್ ಬುದ್ಧ ಮತ್ತು ಅವನ ಮೊದಲ ಶಿಷ್ಯರು ಬೋಧ್ ಗಯಾದಿಂದ ಸಾರನಾಥಕ್ಕೆ ಪ್ರಯಾಣಿಸಿದಾಗ ಭೇಟಿಯಾದ ಸ್ಥಳವನ್ನು ಗುರುತಿಸಲು ಒಂದು ಮೆಟ್ಟಿಲುಗಳ ರೂಪದ ದೇವಾಲಯವಾಗಿ ನಿರ್ಮಿಸಲಾಗಿತ್ತು ಎಂದು ಭಾವಿಸಲಾಗಿದೆ. ನಂತರ ರಾಜಾ ತೋಡರ್ ಮಲ್‍ನ ಪುತ್ರ ಗೋವರ್ಧನ್, ಪ್ರಬಲ ಮೊಘಲ್ ದೊರೆ ಹುಮಾಯೂನ್‍ನ ಭೇಟಿಯ ನೆನಪಿಗಾಗಿ ಅಷ್ಟಭುಜಾಕೃತಿಯ ಗೋಪುರವನ್ನು ನಿರ್ಮಿಸುವ ಮೂಲಕ ಸ್ತೂಪವನ್ನು ಈಗಿನ ಆಕಾರಕ್ಕೆ ಮಾರ್ಪಡಿಸಿದನು.[೩]

ಚೌಖಂಡಿ ಸ್ತೂಪದಲ್ಲಿ ವಿವಿಧ ಪಾಯಗಳು
ಚೌಖಂಡಿ ಸ್ತೂಪದ ಕಂಬದ ಪೀಠದ ಸಮೀಪ ದರ್ಶನ

ಉಲ್ಲೇಖಗಳು[ಬದಲಾಯಿಸಿ]

  1. "History of Architecture - Shrines and temples". historyworld.net. Archived from the original on 2011-06-06. Retrieved 2006-12-18.
  2. "Chaukhandi Stupa declared to be "of national importance"". The Hindu (in Indian English). Special Correspondent. 2019-06-09. ISSN 0971-751X. Retrieved 2019-06-09.{{cite news}}: CS1 maint: others (link)
  3. "Chaukhandi Stupa". Varanasicity.com. Retrieved 2006-10-16.

ಹೊರಗಿನ ಕೊಂಡಿಗಳು[ಬದಲಾಯಿಸಿ]