ಸದಸ್ಯ:Lokesh 4568/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಜಯನಗರದ ಅರಸರು ಸೈನಿಕ ಷರತ್ತಿನ ಮೇಲೆ ತಮ್ಮ ಸಾಮಂತರಿಗೆ ಮತ್ತು ಮಾಂಡಲೀಕರಿಗೆ ನೀಡಲಾಗುತ್ತಿದ್ದ ಭೂದಾನವನ್ನು ನಾಯಂಕರ ವ್ಯವಸ್ಥೆ ಎಂದು ಕರೆಯಲಾಗಿದೆ. ವಿಶಾಲ ಸಾಮ್ರಾಜ್ಯದ ನಿರ್ವಹಣೆಯ ಸುಲಭವಾಗಿಸಲು ವಿಜಯನಗರ ಸಾಮ್ರಾಟರು ಅಳವಡಿಸಿಕೊಂಡ ವ್ಯವಸ್ಥೆ ಇದಾಗಿತ್ತು. ಅಚ್ಯುತರಾಯನ ಆಳ್ವಿಕೆಯಲ್ಲಿ ವಿಜಯನಗರ ಸಾಮ್ರಾಜ್ಯಕ್ಕೆ ಭೇಟಿ ನೀಡಿದ್ದ ನ್ಯೂನಿಜ್‌ ಈ ವ್ಯವಸ್ಥೆಯ ಬಗ್ಗೆ ಉಲ್ಲೇಖಿಸಿದ್ದಾನೆ. [೧]


ನಾಯಂಕರ ಪದ್ಧತಿ
Part of ವಿಜಯನಗರ ಸಾಮ್ರಾಜ್ಯ
ನಾಯಂಕರ ಪದ್ಧತಿ
ಕಾಲಾವಧಿ1336-1565
ಘಟನಾ ಸ್ಥಳವಿಜಯನಗರ ಸಾಮ್ರಾಜ್ಯದಾದ್ಯಂತ (ಗೋವಾ, ಕಳಲೆ, ಅವನಿ ಮಾತ್ತಿತರ)
ಇತರ ಹೆಸರುಅಮರನಾಯಕ ಪದ್ಧತಿ
Patronsವಿಜಯ ಸಾಮ್ರಾಟರು

ಪ್ರಮುಖ ನಾಯಂಕರರು[ಬದಲಾಯಿಸಿ]

ಗೋವಾದ ಗೋಪನಾಯಕ[ಬದಲಾಯಿಸಿ]

ಇವನು ವಾರ್ಷಿಕ ೬೦,೦೦೦ ಪರ್ಡಾವೋ, ೨೦,೦೦೦ ಪದಾತಿ ಸೈನ್ಯ, ೨೫೦೦ ಕುದುರೆ ಮತ್ತು ೧,೫,೦೦,೦೦೦ ಪೊಗದಿಯನ್ನು ಸಲ್ಲಿಸುವ ಮೂಲಕ ಮೊದಲ ಸ್ಥಾನದ ಅತೀದೊಡ್ಡ ನಾಯಕನಾಗಿದ್ದ [೨]

ಕಳಲೆಯ ಬೆನಪ್ಪನಾಯಕ[ಬದಲಾಯಿಸಿ]

ವಾರ್ಷಿಕ ೩೦,೦೦೦ ಪರ್ಡಾವೋ, ೧೦,೦೦೦ ಪದಾತಿ, ೮೦೦ ಕುದುರೆ ಮತ್ತು ೧೦,೦೦೦ ಪೊಗದಿಯನ್ನು ಸಲ್ಲಿಸುತ್ತಿದ್ದ.

ಅವನಿಯ ಮಲ್ಲಪ್ಪನಾಯಕ[ಬದಲಾಯಿಸಿ]

ವಾರ್ಷಿಕ ೧೫,೦೦೦ ಪರ್ಡಾವೋ, ೬೦೦೦ ಪದಾತಿ, ೪೦೦ ಕುದುರೆ ಮತ್ತು ೫೦೦೦ ಪೊಗದಿಯನ್ನು ಸಲ್ಲಿಸುತ್ತಿದ್ದ. [೩]

ಅನುಕೂಲಗಳು[ಬದಲಾಯಿಸಿ]

  • ಅಧಿಕಾರ ವಿಕೇಂದ್ರೀಕರಣದಿಂದ ವಿಶಾಲ ಸಾಮ್ರಾಜ್ಯದ ನಿರ್ವಹಣೆ ಸುಲಭವಾಗಿತ್ತು.
  • ಅಗತ್ಯ ಹಣಕಾಸು ಮತ್ತು ಸೈನ್ಯವನ್ನು ಒದಗಿಸುತ್ತಿದ್ದರು.
  • ಪ್ರಾಂತೀಯ ಮಟ್ಟದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವುದು ಸುಲಭವಾಗಿತ್ತು.

ಅನಾನುಕೂಲಗಳು[ಬದಲಾಯಿಸಿ]

  • ಪ್ರಭಲ ಚಕ್ರವರ್ತಿಗಳ ಕಾಲದಲ್ಲಿ ನಿಷ್ಠೆಯಿಂದಿದ್ದ ನಾಯಕರು ದುರ್ಭಲ ಅರಸರ ಕಾಲದಲ್ಲಿ ಸ್ವತಂತ್ರವಾಗಲು ಹವಣಿಸುತ್ತಿದ್ದರು.
  • ಜನರು ಮತ್ತು ಸೈನಿಕರು ಹತ್ತಿರದ ನಾಯಕರಿಗೆ ವಿಧೇಯರಾಗಿದ್ದರೇ ಹೊರತು ದೂರದ ಚಕ್ರವರ್ತಿಗಳಿಗಲ್ಲ
  • ಇದು ಊಳಿಗಮಾನ್ಯ ವ್ಯವಸ್ಥೆಯ ಲೋಪದೋಷಗಳನ್ನು ಹೊಂದಿತ್ತು.


ಉಲ್ಲೇಖಗಳು[ಬದಲಾಯಿಸಿ]

  1. ಅರಿವು, ಶಿವಪ್ಪ. ಸಮಗ್ರ ಕರ್ನಾಟಕದ ಇತಿಹಾಸ. p. 125. ISBN 123456789. {{cite book}}: Check |isbn= value: length (help)
  2. ಕಾಮತ್, ಸೂರ್ಯನಾಥ. ಸಮಗ್ರ ಕರ್ನಾಟಕದ ಇತಿಹಾಸ. p. 110.
  3. ಅಲಿ, ಷೇಕ್. ಕರ್ನಾಟಕ ಚರಿತ್ರೆ ಸಂಪುಟ ೫. ಪ್ರಸಾರಾಂಗ. p. 301.