ಚರ್ಚೆಪುಟ:ಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦
ಗೋಚರ
ನಾಲ್ಕು ವರ್ಷದ ಬ್ಯಾಚುಲರ್ ಆಫ್ ಎಜುಕೇಶನ್
[ಬದಲಾಯಿಸಿ]- ಪ್ರಸ್ತಾವ:-ಶಿಕ್ಷಕರಾಗಲು, 4 ವರ್ಷಗಳ ಬ್ಯಾಚುಲರ್ ಆಫ್ ಎಜುಕೇಶನ್ ಪದವಿ 2030 ರ ವೇಳೆಗೆ ಕನಿಷ್ಠ ಅಗತ್ಯವಾಗಿರುತ್ತದೆ. ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಸಹ ಬಲಪಡಿಸಲಾಗುತ್ತದೆ ಮತ್ತು ಪಾರದರ್ಶಕಗೊಳಿಸಲಾಗುತ್ತದೆ. ಶಿಕ್ಷಕರ ಶಿಕ್ಷಣಕ್ಕಾಗಿ ರಾಷ್ಟ್ರೀಯ ಮಂಡಳಿ 2021 ರ ವೇಳೆಗೆ ಶಿಕ್ಷಕರ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟನ್ನು ಮತ್ತು 2022 ರ ವೇಳೆಗೆ ಶಿಕ್ಷಕರಿಗೆ ರಾಷ್ಟ್ರೀಯ ವೃತ್ತಿಪರ ಮಾನದಂಡಗಳನ್ನು ರೂಪಿಸುತ್ತದೆ. ಶಿಕ್ಷಕರ ಶಿಕ್ಷಣ ನೀತಿಯು ಈ ಉದ್ದೇಶಗಳನ್ನು ಹೊಂದಿದೆ:-
- 4 ವರ್ಷಗಳ ಬ್ಯಾಚುಲರ್ ಆಫ್ ಎಜುಕೇಶನ್- ಇದು ಶಿಕ್ಷಣ ವ್ಯವಸ್ಥೆಯಲ್ಲಿ ದೊಡ್ಡ ಸಂಕಟವನ್ನು ತರುವ ಸಂಭವ ಇದೆ. ಪದವಿಯ ನಂತರ ನಾಲ್ಕು ವರ್ಷ ಈ ಕೋರ್ಸಿಗೆ ಹೋಗುವವರು ಯಾರು? ಅದೂ ಆ ಕೋರ್ಸನ್ನು ಮಾಡಿದವರಿಗೆ ಉದ್ಯೋಗ ಖಾಯಂ ಆಗಿದ್ದರೆ ಸರಿ; ಅಲ್ಲದಿದ್ದರೆ, ಯಾರು ಆ ಕೋರ್ಸಿಗೆ ಹೋಗುತ್ತಾರೆ? ಕೊನೆಗೆ ತರಬೆತಿಯಾದ ಶಿಕ್ಷಕರು ಸಿಗದೆ ದಿನಗೂಲಿ ಗುತ್ತಿಗೆ ಆಧಾರದ ಶಿಕ್ಷಕರಿಂದ ಇಲಾಖೆ ತುಂಬಿಹೋಗಬಹುದು. ಸ್ವಲ್ಪ ಮಟ್ಟಿಗೆ ಈಗಲೇ ಆ ಸ್ಥಿತಿ ಇದೆ. ತಿಂಗಳಿಗೆ ದಿನಗೂಲಿ ರೂ.೪೦೦/-ರಂತೆ ತಿಂಗಳಿಗೆ ೧೨೦೦೦ ರೂ. ನ ಸಂಭಾವನೆ ಪಡೆಯುವವರೇ ವಿದ್ಯಾ ಇಲಾಖೆಯಲ್ಲಿ/ ಶಾಲೆಗಳಲ್ಲಿ ತುಂಬಿಹೋಗಿ - ವಿದ್ಯಾರ್ಥಿಗಳಿಗೆ ತರಬೇತಾದ ಉತ್ತಮ ಶಿಕ್ಷಕರೇ ಇಲ್ಲದಂತಾಗಬಹುದು. ಆ ಗುತ್ತಿಗೆ ಶಿಕ್ಷಕರಿಗೆ ಖಾಯಂಮಾತಿಯೂ ಇಲ್ಲ, ಪೆನ್‍ಶನ್ ಸೌಲಭ್ಯವೂ ಇಲ್ಲದ ದೀನ ಸ್ಥಿತಿ ಬರಬಹುದು. ಈಗಲೇ ವಿದ್ಯಾ ಇಲಾಖೆಯಲ್ಲಿ ಗುತ್ತಿಗೆ ನೌಕರರ ಸಮಸ್ಯೆ ದೊಡ್ಡದಿದೆ.
- ನಾಲ್ಕು ವರ್ಷದ ತರಬೇತಿಯಲ್ಲಿ ಏನನ್ನು ಕಲಿಸಬಹುದು? ಈಗ ಇರುವ ಎರಡು ವರ್ಷದ ಅವಧಿಗೇ ಸಾಕಷ್ಟು ಕಲಿಸುವ ವಿಷಯ ಇಲ್ಲ. ಒಂದು ವರ್ಷ ಇದ್ದ ಬಿ.ಎಡ್‍ನ್ನು ಎರಡು ವರ್ಷಕ್ಕೆ ಹೆಚ್ಚಿಸಿದೆ. ಮೇಲಾಗಿ ಬಿ.ಎಡ್. ತರಗತಿಯವರಿಗೆ ಕಲಿಸುವವರು ಎರಡು ವರ್ಷದ ಬಿಎಡ್ ಎರಡು ವರ್ಷದ ಎಂಎಡ್ ಆದವರು. ಅವರಿಗೆ ಮಕ್ಕಳಿಗೆ- ವಿದ್ಯಾರ್ಥಿಗಳಿಗೆ ಬೋಧನೆ ಮಾಡಿದ ಅನುಭವ ಇರುವುದಿಲ್ಲ. ಅದರ ಬಗೆಗೆ ಕೇವಲ ತಾತ್ವಿಕ- ಜ್ಞಾನ ಮಾತ್ರಾ ಇರುವುದು. ಈ ನಾಲ್ಕು ವರ್ಷದ ಬಿಎಡ್‌ನ್ನು ಯಾವ ತರಗತಿಯಿಂದ ಬೋಧನರೆಗೆ ಅಳವಡಿಸಬಹುದು? ಒಟ್ಟಿನಲ್ಲಿ ಇದು ಒಂದು ಅವಾಸ್ತವಿಕೆ ಪ್ರಸ್ತಾವ ಇದ್ದಂತೆ ತೋರುವುದು. ೨೦೩೦ ರ ನಂತರ ಈ ಯೋಜನೆ ಅವಾಸ್ವ ಎಂದು ಬದಲಾದರೂ ಆಗಬಹುದು.Bschandrasgr (ಚರ್ಚೆ) ೧೪:೩೬, ೫ ಸೆಪ್ಟೆಂಬರ್ ೨೦೨೦ (UTC)