ಪುನುಗುಲು
ಪುನುಗುಲು / ಪುನುಕ್ಕುಲು ಆಂಧ್ರ ಪ್ರದೇಶದ ಒಂದು ಲಘು ಆಹಾರ ಮತ್ತು ಸಾಮಾನ್ಯ ಬೀದಿ ಆಹಾರವಾಗಿದೆ.[೧][೨] ವಿಶೇಷವಾಗಿ ವಿಜಯವಾಡ ಮತ್ತು ಆಂಧ್ರ ಪ್ರದೇಶದ ಕೆಲವು ಕರಾವಳಿ ಜಿಲ್ಲೆಗಳಲ್ಲಿ ಜನಪ್ರಿಯವಾಗಿದೆ. ಪುನುಗುಲುವನ್ನು ಅಕ್ಕಿ, ಉದ್ದಿನ ಬೇಳೆ ಮತ್ತು ಇತರ ಸಂಬಾರ ಪದಾರ್ಥಗಳಿಂದ ತಯಾರಿಸಿ ಎಣ್ಣೆಯಲ್ಲಿ ಕರಿಯಲಾಗುತ್ತದೆ.[೩] ಇವನ್ನು ಹಲವುವೇಳೆ ಪಲ್ಲಿ ಚಟ್ನಿ ಎಂದು ಕರೆಯಲ್ಪಡುವ ಶೇಂಗಾ ಚಟ್ನಿ ಅಥವಾ ಕೊಬ್ಬರಿ ಚಟ್ನಿ ಅಥವಾ ವೆರುಸನಾಗ ಚಟ್ನಿ ಅಥವಾ ಕಾಂಧಿ ಪಚಡಿ ಎಂದು ಕರೆಯಲ್ಪಡುವ ತೊಗರಿಬೇಳೆಯ ಚಟ್ನಿಯೊಂದಿಗೆ ಬಡಿಸಲಾಗುತ್ತದೆ ಅಥವಾ ಇವನ್ನು ಕ್ಯಾಪ್ಸಿಕಂ ಶೇಂಗಾ ಚಟ್ನಿಯೊಂದಿಗೆ ಬಡಿಸಬಹುದು. ಇವು ಹೈದರಾಬಾದ್ ಮತ್ತು ಹಳೆ ಎಂಐಜಿಯಲ್ಲೂ ಬಹಳ ಜನಪ್ರಿಯವಾಗಿವೆ.
ಪುನುಗುಲುವನ್ನು ಇಡ್ಲಿ, ದೋಸೆಯನ್ನು ತಯಾರಿಸಲು ಬಳಸಲಾಗುವ ಅಕ್ಕಿ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಹಿಟ್ಟು ತಾಜಾ ಆಗಿರಬಹುದು ಅಥವಾ ಹುದುಗು ಬರಿಸಿರಬಹುದು. ಅನುಗುಣವಾಗಿ ರುಚಿಯು ಬದಲಾಗುತ್ತದೆ. ಮೊದಲು ಒಂದು ಬಾಣಲೆಯಲ್ಲಿ ಕರಿಯಲು ಎಣ್ಣೆಯನ್ನು ಬಿಸಿ ಮಾಡಲಾಗುತ್ತದೆ. ಎಣ್ಣೆಯಲ್ಲಿ ಸ್ವಲ್ಪ ಪ್ರಮಾಣದ ಹಿಟ್ಟನ್ನು ಹಾಕಿ ಕರಿಯಲಾಗುತ್ತದೆ. ಸಾಮಾನ್ಯವಾಗಿ ಪುನುಗುಲು ಹೊರಗೆ ಗರಿಗರಿಯಾಗಿದ್ದು ಒಳಗೆ ಮೃದುವಾಗಿರುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ RAMYA KRISHNA (July 10, 2010). "Let the magic unfold". The Hindu. Retrieved 9 April 2016.
- ↑ Kota Saumya (31 July 2013). "Tasty Treats". The new Indian express. Archived from the original on 21 ಏಪ್ರಿಲ್ 2016. Retrieved 9 April 2016.
- ↑ Lisha Aravind (22 July 2015). "punugulu-recipe-punugulu-with-dosa-batter-punukulu-urad-dal-bonda". Archived from the original on 8 April 2016. Retrieved 9 April 2016.