ಪಂಜಾಬ್ ಕೊರೋನಾವೈರಸ್ ಸಾಂಕ್ರಾಮಿಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಂಜಾಬ್‌ನಲ್ಲಿ ೨೦೧೯-೨೦ ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಮೊದಲ ಪ್ರಕರಣವು ಮಾರ್ಚ್ ೯, ೨೦೨೦ ರಂದು ವರದಿಯಾಗಿದೆ. ೧೧ ಏಪ್ರಿಲ್ ೨೦೨೦ರ ವರದಿಯಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು[೧] ಪಂಜಾಬ್‌ನಲ್ಲಿ ೧೨ ಸಾವುಗಳು ಮತ್ತು ೧೮ ಚೇತರಿಕೆ ಸೇರಿದಂತೆ ಒಟ್ಟು ೧೫೧ ಪ್ರಕರಣಗಳನ್ನು ದೃಢಪಡಿಸಿದೆ.[೨]

ಅಂಕಿಅಂಶಗಳು[ಬದಲಾಯಿಸಿ]

ಕೊರೋನಾವೈರಸ್ ಸಾಂಕ್ರಾಮಿಕ ಪಂಜಾಬ್
ಜಿಲ್ಲೆ ಸಕ್ರಿಯ ಪ್ರಕರಣಗಳು ಚೇತರಿಸಿಕೊಂಡವರು ಸಾವು ಒಟ್ಟು ದೃಢ ಪಡಿಸಿದ ಪ್ರಕರಣಗಳು
ಅಮೃತಸರ 9 0 2 11
ಬರ್ನಾಲಾ 1 0 1 2
ಫರೀದ್ಕೋಟ್ 2 0 0 2
ಫತೇಘಡ್ ಸಾಹೇಬ್ 2 0 0 2
ಹೋಶಿಯಾರ್ ಪುರ್ 5 5 1 7
ಜಲಂಧರ್ 8 3 1 12
ಕಪುರ್ಥಳ 1 0 0 1
ಲುಧಿಯಾನ 7 1 2 10
ಮಾನ್ಸಾ 11 0 0 11
ಮೋಗಾ 4 0 0 4
ಮೊಹಾಲಿ 41 5 2 48
ಮುಕ್ತಸರ್ 1 0 0 1
ನವಾನ್‌ಶಹರ್ 8 10 1 19
ಪಠಾಣ್‌ಕೋಟ್ 14 0 1 15
ಪಟಿಯಾಲ 1 0 0 1
ರೂಪ್ ನಗರ 2 0 1 3
ಸಂಗ್ರೂರ್ 2 0 0 2
ಒಟ್ಟು 119 20 12 151[೩]

ಟೈಮ್ ಲೈನ್[ಬದಲಾಯಿಸಿ]

ಮಾರ್ಚ್

  • ಮಾರ್ಚ್ ೯ ರಂದು, ಇಟಲಿಯಿಂದ ಪಂಜಾಬಿನ ಅಮೃತಸರಗೆ ಹಿಂದಿರುಗಿದ ವ್ಯಕ್ತಿಯಲ್ಲಿ ಮೊದಲ ಪ್ರಕರಣ ಪತ್ತೆಯಾಯಿತು.[೪]
  • ಮಾರ್ಚ್ ೧೯ ರಂದು, ಜರ್ಮನಿಯಿಂದ ಇಟಲಿಯ ಮೂಲಕ ಮರಳಿದ ೭೨ ವರ್ಷದ ಪಂಜಾಬಿನ ವ್ಯಕ್ತಿಯೊಬ್ಬರು ದೇಶದಲ್ಲಿ ನಾಲ್ಕನೇ ಕೊರೋನಾವೈರಸ್ ಸೋಂಕಿತ ವ್ಯಕ್ತಿ ಮತ್ತು ಪಂಜಾಬಿನಲ್ಲಿ ಕೊರೋನಾವೈರಸ್ ಕಾಯಿಲೆಯಿಂದಾಗಿ ಬಲಿಯಾದ ಮೊದಲ ವ್ಯಕ್ತಿ.[೫]
  • ಮಾರ್ಚ್ ೨೦ ರಂದು, ಮೂರನೇ ಪ್ರಕರಣ ಪಂಜಾಬ್‌ನ ಎಸ್.ಎ.ಎಸ್. ನಗರದಲ್ಲಿ, ಯುನೈಟೆಡ್ ಕಿಂಗ್‌ಡಂನಿಂದ ಹಿಂದಿರುಗಿದ ೬೮ ವರ್ಷದ ಮಹಿಳೆಯಲ್ಲಿ ವೈರಸ್ ಇರುವುದು ಪತ್ತೆಯಾಯಿತು.[೬]
  • ಮಾರ್ಚ್ ೨೧ ರಂದು, ಹನ್ನೊಂದು ಕೊರೋನವೈರಸ್ ಪ್ರಕರಣಗಳು ದೃಢಪಟ್ಟವು. ನವಾನ್‌ಶಹರ್‌ನಲ್ಲಿ ೬, ಮೊಹಾಲಿಯಲ್ಲಿ ೩,[೭] ಮತ್ತು ಹೋಶಿಯಾರ್‌ಪುರದಲ್ಲಿ ೨[೮] ಪ್ರಕರಣಗಳು ದಾಖಾಲಾಗಿವೆ. ನವಾನ್‌ಶಹರ್‌ನಲ್ಲಿ ೬ ಮಂದಿ ಮತ್ತು ಹೋಶಿಯಾರ್‌ಪುರದ ಒಬ್ಬರು, ಕೊರೋನವೈರಸ್‌ನಿಂದಾಗಿ ಮಾರ್ಚ್ ೧೯ ರಂದು ನವಾನ್‌ಶಹರ್‌ನಲ್ಲಿ ನಿಧನರಾದ ೭೨ ವರ್ಷದ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿ ಇದ್ದವರು.
  • ಮಾರ್ಚ್ ೨೨ ರಂದು, ನವಾನ್‌ಶಹರ್‌ನಲ್ಲಿ ಇನ್ನೂ ೭ ಕೊರೊನಾವೈರಸ್ ಪ್ರಕರಣಗಳು ದೃಢಪಟ್ಟಿತು. ಈ ಎಲ್ಲಾ ವ್ಯಕ್ತಿಗಳು ಮಾರ್ಚ್ ೧೯ ರಂದು ನಿಧನರಾದ ಅದೇ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿ ಇದ್ದವರು.[೯]
  • ಮಾರ್ಚ್ ೨೩ ರಂದು, ರಾಜ್ಯದಲ್ಲಿ ಇನ್ನೂ ಎರಡು ಪ್ರಕರಣಗಳು ದೃಢಪಟ್ಟಿತು, ನವಾನ್‌ಶಹರ್‌ನಲ್ಲಿ ಒಂದು ಮತ್ತು ಮೊಹಾಲಿಯಲ್ಲಿ ಒಂದು.[೧೦]
  • ಮಾರ್ಚ್ ೨೪ ರಂದು, ೩ ಪ್ರಕರಣಗಳು ರಾಜ್ಯದಲ್ಲಿ ದೃಢಕರಿಸಲ್ಪಟ್ಟವು ಮತ್ತು ಎಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದರು.[೧೧] ಇವರು ಕೂಡ ಮಾರ್ಚ್ ೧೯ ರಂದು ಮೊಹಾಲಿಯಲ್ಲಿ ನಿಧನರಾದ ಅದೇ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿ ಇದ್ದವರು. ಇದರ ನಂತರ ನವಾನ್‌ಶಹರ್‌ನಲ್ಲಿ ಇನ್ನೂ ೩ ಪ್ರಕರಣಗಳು ದೃಢಪಟ್ಟಿದೆ.[೧೨]
  • ಮಾರ್ಚ್ ೨೫ ರಂದು, ಪಂಜಾಬ್‌ನಲ್ಲಿ ಇನ್ನೂ ಎರಡು ಪ್ರಕರಣಗಳು ದೃಢಪಟ್ಟಿದೆ. ಲುಧಿಯಾನ ಜಿಲ್ಲೆಯ ೫೪ ವರ್ಷದ ಮಹಿಳೆ ಧನಾತ್ಮಕ ಫಲಿತಾಂಶ ನೀಡಿದರು ಮತ್ತು ಹೋಶಿಯಾರ್‌ಪುರದಲ್ಲಿ ೧ ಪ್ರಕರಣ ದೃಢಪಟ್ಟಿದೆ.[೧೩]
  • ಮಾರ್ಚ್ ೨೬ ರಂದು, ಅಮೃತಸರದ ಏಕೈಕ ಕೊರೋನಾ ಪಾಸಿಟಿವ್ ರೋಗಿಯು ಸೋಂಕಿನಿಂದ ಚೇತರಿಸಿಕೊಂಡರು.[೧೪] ಜಲಂಧರ್ ನಲ್ಲಿ ೭೦ ವರ್ಷದ ಮಹಿಳೆಯಲ್ಲಿ ಸೋಂಕು ಇರುವುದು ಪತ್ತೆಯಾಯಿತು ಹಾಗೂ ನವಾನ್‌ಶಹರ್‌ನಲ್ಲಿ ೧ ಹೊಸ ಪ್ರಕರಣ ದಾಖಾಲಾಗಿವೆ.[೧೫]
  • ಮಾರ್ಚ್ ೨೭ ರಂದು, ಹೋಶಿಯಾರ್ಪುರದಲ್ಲಿ ೩ ಪ್ರಕರಣಗಳು ಮತ್ತು ಜಲಂಧರ್ನಲ್ಲಿ ೧ ಪ್ರಕರಣ ದೃಢಪಟ್ಟಿದೆ.[೧೬] ಮೊಹಾಲಿಯಲ್ಲಿ ೩೮ ವರ್ಷದ ಮಹಿಳೆ ಧನಾತ್ಮಕ ಫಲಿತಾಂಶವನ್ನು ನೀಡಿದ್ದಾರೆ.[೧೭]
  • ಮಾರ್ಚ್ ೨೯ ರಂದು, ಕೊರೋನವೈರಸ್‌ನಿಂದಾಗಿ ಪಂಜಾಬ್ನಲ್ಲಿ ೬೨ ವರ್ಷದ ವ್ಯಕ್ತಿ ನಿಧನ ಹೊಂದಿದರು. ಇದು ಪಂಜಾಬಿನ ಎರಡನೇ ಸಾವು ಎಂದು ದಾಖಾಲಾಗಿದೆ. ಮೂಲತಃ ಹೋಶಿಯಾರ್‌ಪುರದರಾದ ಇವರು ಅಮೃತಸರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.[೧೮] ಇವರು ಮಾರ್ಚ್ ೧೯ ರಂದು ನಿಧನರಾದ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿ ಇದ್ದವರು. ಪಟಿಯಾಲ ಜಿಲ್ಲೆಯ ನೇಪಾಳದಿಂದ ಹಿಂದಿರುಗಿದ ೨೧ ವರ್ಷದ ಬಾಲಕ ಹರಿಯಾಣದ ಅಂಬಾಲಾದಲ್ಲಿ ಕರೋನಾ ಪಾಸಿಟಿವ್ ಫಲಿತಾಂಶವನ್ನು ನೀಡಿದ್ದಾರೆ.[೧೯]
  • ಮಾರ್ಚ್ ೩೦ ರಂದು, ೬೫ ವರ್ಷದ ವ್ಯಕ್ತಿಯೊಬ್ಬರು ಮೊಹಾಲಿಯಲ್ಲಿ ಧನಾತ್ಮಕ ಪರೀಕ್ಷೆ ನಡೆಸಿದರು.[೨೦] ಲುಧಿಯಾನದ ೪೨ ವರ್ಷದ ಮಹಿಳೆ ಪಟಿಯಾಲದ ಆಸ್ಪತ್ರೆಯಲ್ಲಿ ಧನಾತ್ಮಕ ಪರೀಕ್ಷೆ ನಡೆಸಿದರು ಮತ್ತು ಅದೇ ದಿನ ಸಾವನ್ನಪ್ಪಿದರು.[೨೧]ದುಬೈನಿಂದ ಹಿಂದಿರುಗಿದ ೩೫ ವರ್ಷದ ವ್ಯಕ್ತಿಯಲ್ಲಿ ಸೋಂಕು ಇರುವುದು ಪತ್ತೆಯಾಯಿತು.[೨೨]
  • ಮಾರ್ಚ್ ೩೧ ರಂದು, ಕೊರೋನಾವೈರಸ್‌ನಿಂದಾಗಿ ಮೊಹಾಲಿಯ ಈ ಹಿಂದೆ ಸೋಂಕಿಗೆ ಒಳಗಾಗಿದ್ದ ೬೫ ವರ್ಷದ ವ್ಯಕ್ತಿ ಸಾವನ್ನಪ್ಪಿದ್ದರು.[೨೩]

ಏಪ್ರಿಲ್

  • ಏಪ್ರಿಲ್ ೧ ರಂದು, ಲುಧಿಯಾನದಲ್ಲಿ ೭೨ ವರ್ಷದ ಮಹಿಳೆ ಧನಾತ್ಮಕ ಪರೀಕ್ಷೆ ನಡೆಸಿದ್ದಾರೆ. ಮಾರ್ಚ್ ೩೦ ರಂದು ನಿಧನರಾದ ೪೨ ವರ್ಷದ ಮಹಿಳೆಯೊಂದಿಗೆ ಅವರು ಸಂಪರ್ಕಕ್ಕೆ ಬಂದವರು.[೨೪] ಮೊಹಾಲಿಯಲ್ಲಿ ಇನ್ನೂ ಮೂರು ಪ್ರಕರಣಗಳನ್ನು ದೃಢಪಡಿಸಲಾಯಿತು. [೨೫]೬೮ ವರ್ಷದ ನಿರ್ಮಲ್ ಸಿಂಗ್ ಖಾಲ್ಸಾ ಅಮೃತಸರದಲ್ಲಿ ಧನಾತ್ಮಕ ಫಲಿತಾಂಶ ನೀಡಿದರು.[೨೬]
  • ಏಪ್ರಿಲ್ ೨ ರಂದು, ಕೋವಿಡ್-೧೯ ನಿಂದ ಉಂಟಾದ ತೊಡಕುಗಳಿಂದ ನಿರ್ಮಲ್ ಸಿಂಗ್ ಖಾಲ್ಸಾ ಸಾವನ್ನಪ್ಪಿದರು.[೨೭] ಇದು ಪಂಜಾಬಿನ ಐದನೇ ಸಾವು. ಹೋಶಿಯಾರ್ಪುರ್[೨೮] ಮತ್ತು ಲುಧಿಯಾನ ಜಿಲ್ಲೆಯಲ್ಲಿ[೨೯] ಎರಡು ಹೊಸ ಪ್ರಕರಣಗಳು ದೃಢಪಟ್ಟಿದೆ.
  • ಏಪ್ರಿಲ್ ೩ ರಂದು, ಪಂಜಾಬ್‌ನಲ್ಲಿ ಇನ್ನೂ ಐದು ಪ್ರಕರಣಗಳು ದೃಢಪಟ್ಟಿದ್ದು, ಅದರಲ್ಲಿ ಮೂವರು ಅಮೃತಸರದವರು ಮತ್ತು ಇವರು ನಿರ್ಮಲ್ ಸಿಂಗ್ ಖಲ್ಸಾ ಅವರೊಂದಿಗೆ ಸಂಪರ್ಕಕ್ಕೆ ಬಂದವರು.[೩೦] ಮಾರ್ಚ್‌ ೨ರಂದು ದೆಹಲಿಯ ನಿಜಾಮುದ್ದೀನ್‌ನಲ್ಲಿ ಸಭೆಗೆ ಹಾಜರಾದ ಮೊಹಾಲಿಯ ಇಬ್ಬರು ಧನಾತ್ಮಕ ಫಲಿತಾಂಶವನ್ನು ನೀಡಿದ್ದಾರೆ. ನಂತರ ಇನ್ನೂ ೪ ಪ್ರಕರಣಗಳು ದೃಢಪಟ್ಟವು, ೩ ಮಾನ್ಸಾ ಜಿಲ್ಲೆಯ ಬುಧ್ಲಾದಿಂದ ನಿಜಾಮುದ್ದೀನ್‌ನಲ್ಲಿ ಸಭೆಗೆ ಹಾಜರಾದವರು ಮತ್ತು ೧ ರುಪ್‌ನಗರದ ವ್ಯಕ್ತಿ.[೩೧]
  • ಏಪ್ರಿಲ್ ೪ ರಂದು, ಫರೀದ್ಕೋಟ್ ಜಿಲ್ಲೆಯಲ್ಲಿ ಕೊರೋನಾವೈರಸ್ನ ಮೊದಲ ಪ್ರಕರಣ ವರದಿಯಾಗಿದೆ, ೩೫ ವರ್ಷದ ವ್ಯಕ್ತಿಯಲ್ಲಿ ಕೊರೋನಾ ವೈರಸ್ ಇರುವುದು ಪತ್ತೆಯಾಗಿದೆ. [೩೨]ನಿರ್ಮಲ್ ಸಿಂಗ್ ಖಲ್ಸಾ ರವರ ೩೫ ವರ್ಷದ ಮಗಳು ತನ್ನ ತಂದೆಯ ಮರಣದ ಎರಡು ದಿನಗಳ ನಂತರ ಜಲಂಧರ್‌ನಲ್ಲಿ ಧನಾತ್ಮಕ ಫಲಿತಾಂಶವನ್ನು ನೀಡಿದ್ದಾರೆ.[೩೩] ಇನ್ನೂ ೬ ಪ್ರಕರಣಗಳು ದೃಢಪಟ್ಟಿದೆ.[೩೪]
  • ಏಪ್ರಿಲ್ ೫ ರಂದು, ಮೊಹಾಲಿಯ ಡೇರಾ ಬಾಸ್ಸಿಯಲ್ಲಿ ೪೨ ವರ್ಷದ ವ್ಯಕ್ತಿಯಲ್ಲಿ ಕೊರೋನಾವೈರಸ್ ಇರುವುದು ಪತ್ತೆಯಾಗಿದೆ ಮತ್ತು ಲುಧಿಯಾನದಲ್ಲಿ ೨೮ ವರ್ಷದ ವ್ಯಕ್ತಿ ಧನಾತ್ಮಕ ಫಲಿತಾಂಶವನ್ನು ನೀಡಿದ್ದಾರೆ.[೩೫]ಬರ್ನಾಲಾ ಜಿಲ್ಲೆಯಲ್ಲಿ ೪೨ ವರ್ಷದ ಮಹಿಳೆಗೆ ಕೊರೋನಾ ಇರುವುದು ಪತ್ತೆಯಾಯಿತು.[೩೬]ಏಪ್ರಿಲ್ ೧ ರಂದು ಕೊರೋನಾ ಪಾಸಿಟಿವ್ ಪರೀಕ್ಷಿಸಿದ ೭೨ ವರ್ಷದ ಮಹಿಳೆ ಲುಧಿಯಾನದಲ್ಲಿ ಸಾವನ್ನಪ್ಪಿದರು ಮತ್ತು ಪಠಾಣ್‌ಕೋಟಿನ ಮಹಿಳೆ ಅಮೃತಸರದ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.[೩೭]
  • ಏಪ್ರಿಲ್ ೬ ರಂದು, ಪಂಜಾಬ್‌ನ ೫ ಜಿಲ್ಲೆಗಳಿಂದ ೭ ಕೊರೋನಾವೈರಸ್ ಪ್ರಕರಣಗಳು ಪತ್ತೆಯಾಗಿವೆ.[೩೮]

ಪ್ರತಿಕ್ರಿಯೆ[ಬದಲಾಯಿಸಿ]

  • ಮಾರ್ಚ್ ೧೩ ರಂದು, ಪಂಜಾಬ್ ಸರ್ಕಾರ ಮಾರ್ಚ್ ೩೧ ರವರೆಗೆ ಎಲ್ಲಾ ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಿದೆ.[೩೯]
  • ಮಾರ್ಚ್ ೧೬ ರಂದು, ಪಂಜಾಬ್ ಸರ್ಕಾರ ಜಿಮ್, ರೆಸ್ಟೋರೆಂಟ್‌ಗಳನ್ನು ಮುಚ್ಚಲು ಸಲಹೆಯನ್ನು ನೀಡಿದೆ.[೪೦]
  • ಮಾರ್ಚ್ ೧೯ ರಂದು, ಪಂಜಾಬ್ ಶಾಲಾ ಶಿಕ್ಷಣ ಮಂಡಳಿ ೧೦ ಮತ್ತು ೧೨ನೇ ತರಗತಿಗಳ ಎಲ್ಲಾ ಬೋರ್ಡ್ ಪರೀಕ್ಷೆಗಳನ್ನು ಮುಂದೂಡಿದೆ. ಮಾರ್ಚ್ ೨೦ರ ಮಧ್ಯರಾತ್ರಿಯಿಂದ ಪಂಜಾಬ್ ಸರ್ಕಾರವು ರಾಜ್ಯದಲ್ಲಿ ಸಾರ್ವಜನಿಕ ಸಾರಿಗೆಯನ್ನು ಸ್ಥಗಿತಗೊಳಿಸಿದೆ[೪೧] ಮತ್ತು ೨೦ರಿಂದ ಹೆಚ್ಚು ಜನರು ಗುಂಪುಗೂಡುವದನ್ನು ನಿಷೇಧಿಸಿದೆ.
  • ಮಾರ್ಚ್ ೨೨ ರಂದು, ಪಂಜಾಬ್ ಸರ್ಕಾರವು ತುರ್ತು ಸೇವೆಗಳನ್ನು ಹೊರತುಪಡಿಸಿ ಮಾರ್ಚ್ ೩೧ ರವರೆಗೆ ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಿಸಿತು.[೪೨]
  • ಮಾರ್ಚ್ ೨೩ ರಂದು, ಪಂಜಾಬ್ ಸರ್ಕಾರವು ರಾಜ್ಯಾದ್ಯಂತ ಸಂಪೂರ್ಣ ಕರ್ಫ್ಯೂ ವಿಧಿಸಿತು.[೪೩] ಪಂಜಾಬ್ ಕರ್ಫ್ಯೂ ವಿಧಿಸಿದ ಮೊದಲ ರಾಜ್ಯವಾಗಿದೆ. ಪಂಜಾಬ್ ಸರ್ಕಾರ ಸಿಎಂ ರಿಲೀಫ್ ಫಂಡ್‌ನಿಂದ ಬಡವರಿಗೆ ಉಚಿತ ಆಹಾರ ಮತ್ತು ಔಷಧಿಗಾಗಿ ೨೦ ಕೋಟಿ ರೂಪಾಯಿ ಮಂಜೂರು ಮಾಡಿದೆ.[೪೪]
  • ಮಾರ್ಚ್ ೨೪ ರಂದು, ಕೊರೋನಾವೈರಸ್‌ ಸೋಂಕಿನಿಂದ ಸಂಕಷ್ಟದಲ್ಲಿರುವ ಜನರ ಕಲ್ಯಾಣಕ್ಕಾಗಿ, ಪಂಜಾಬ್ ಮುಖ್ಯಮಂತ್ರಿ 'ಕೋವಿಡ್ ಪರಿಹಾರ ನಿಧಿ'ಯನ್ನು ಸ್ಥಾಪಿಸಿದರು.[೪೫]

ಉಲ್ಲೇಖಗಳು[ಬದಲಾಯಿಸಿ]

  1. "MoHFW | Home". www.mohfw.gov.in. Retrieved 5 April 2020.
  2. Nath, Rajan (4 April 2020). "Punjab tally rises to 65 after fresh cases of coronavirus reported from Mohali, Jalandhar and Pathankot". PTC NEWS. Retrieved 5 April 2020.
  3. "COVID-19 Tracker | India". www.covid19india.org (in ಇಂಗ್ಲಿಷ್). Retrieved 5 April 2020.
  4. "Coronavirus update: Two test positive in Punjab, Karnataka; count climbs to 45". Livemint (in ಇಂಗ್ಲಿಷ್). 9 March 2020. Retrieved 5 April 2020.
  5. Ch, Press Trust of India. "Coronavirus claims 4th life in India, 72-yr-old Punjab man who died tests positive for Covid-19". India Today (in ಇಂಗ್ಲಿಷ್). Retrieved 5 April 2020.
  6. Mehrotra, Vani (20 March 2020). "Mohali woman tests positive for coronavirus; total cases in Punjab 3 | India News – India TV". www.indiatvnews.com. Retrieved 5 April 2020.
  7. Mar 22, TNN. "Mohali gets 3 more coronavirus cases | Chandigarh News - Times of India". The Times of India (in ಇಂಗ್ಲಿಷ್). Retrieved 5 April 2020. {{cite news}}: Cite has empty unknown parameter: |1= (help)CS1 maint: numeric names: authors list (link)
  8. Nath, Rajan (21 March 2020). "New cases of coronavirus reported in Amritsar, Hoshiarpur; total cases in Punjab 13". PTC NEWS. Retrieved 5 April 2020.
  9. "Seven more test positive in Punjab, total coronavirus cases now 21 in state: Official". The Economic Times. 22 March 2020. Retrieved 5 April 2020.
  10. "Two-year-old among two fresh coronavirus cases in Punjab". India Today (in ಇಂಗ್ಲಿಷ್). Retrieved 5 April 2020.
  11. Nath, Rajan (24 March 2020). "Coronavirus Punjab Confirmed Cases | Jalandhar | Phillaur | Mohali Curfew". PTC NEWS. Retrieved 5 April 2020.
  12. Nath, Rajan (24 March 2020). "Coronavirus: 3 positive cases reported in Nawanshahr; total number of cases in Punjab 29". PTC NEWS. Retrieved 5 April 2020.
  13. Service, Tribune News. "Panic in Ludhiana as first case of corona surfaces in industrial hub". Tribuneindia News Service (in ಇಂಗ್ಲಿಷ್). Retrieved 5 April 2020.
  14. Service, Tribune News. "Punjab's first coronavirus patient cured, to be discharged on Friday". Tribuneindia News Service (in ಇಂಗ್ಲಿಷ್). Retrieved 5 April 2020.
  15. Nath, Rajan (26 March 2020). "Punjab tally rises to 33 after Nawanshahr reports new case of coronavirus". PTC NEWS. Retrieved 5 April 2020.
  16. Nath, Rajan (27 March 2020). "Coronavirus cases in Punjab rise to 37 after Hoshiarpur and Jalandhar report new cases". PTC NEWS. Retrieved 5 April 2020.
  17. Nath, Rajan (27 March 2020). "Punjab tally rises to 38 after new cases of coronavirus reported from Mohali, Jalandhar and Hoshiarpur". PTC NEWS. Retrieved 5 April 2020.
  18. Service, Tribune News. "Punjab reports second death due to coronavirus". Tribuneindia News Service (in ಇಂಗ್ಲಿಷ್). Retrieved 5 April 2020.
  19. Service, Tribune News. "21-year-old man tests positive for coronavirus in Patiala; admitted to hospital in Ambala". Tribuneindia News Service (in ಇಂಗ್ಲಿಷ್). Retrieved 5 April 2020.
  20. Nath, Rajan (30 March 2020). "Punjab tally rises to 39 after Mohali reports a fresh case of coronavirus". PTC NEWS. Retrieved 5 April 2020.
  21. India, Press Trust of (30 March 2020). "Third coronavirus death in Punjab, 42-year-old dies in Patiala hospital". Business Standard India. Retrieved 5 April 2020.
  22. Service, Tribune News. "Ludhiana woman dies of coronavirus; Punjab toll 3 now". Tribuneindia News Service (in ಇಂಗ್ಲಿಷ್). Retrieved 5 April 2020.
  23. Nath, Rajan (31 March 2020). "Mohali reports first death due to coronavirus; death toll in Punjab 4". PTC NEWS. Retrieved 5 April 2020.
  24. Nath, Rajan (1 April 2020). "Punjab tally rises to 42 after Ludhiana reports new case of coronavirus". PTC NEWS. Retrieved 5 April 2020.
  25. Nath, Rajan (1 April 2020). "Fresh cases of coronavirus reported in Mohali; total number of cases in Punjab 45". PTC NEWS. Retrieved 5 April 2020.
  26. Nath, Rajan (1 April 2020). "Bhai Nirmal Singh Khalsa tests positive; total number of cases in Punjab 46". PTC NEWS. Retrieved 5 April 2020.
  27. Service, Tribune News. "Former Hazoori Ragi Nirmal Singh Khalsa dead, had tested positive for coronavirus". Tribuneindia News Service (in ಇಂಗ್ಲಿಷ್). Retrieved 5 April 2020.
  28. Nath, Rajan (2 April 2020). "Coronavirus Hoshiarpur Positive Case | Punjab Death Toll and Confirmed Cases". PTC NEWS. Retrieved 5 April 2020.
  29. Nath, Rajan (3 April 2020). "Punjab tally rises to 48 after Ludhiana reports fresh case of coronavirus". PTC NEWS. Retrieved 5 April 2020.
  30. Nath, Rajan (3 April 2020). "Coronavirus Punjab Cases | Bhai Nirmal Singh Khalsa contacts test positive | Amritsar | Mohali". PTC NEWS. Retrieved 5 April 2020.
  31. Nath, Rajan (3 April 2020). "Ropar, Mansa report new cases; total number of cases in Punjab 57". PTC NEWS. Retrieved 5 April 2020.
  32. Nath, Rajan (4 April 2020). "Faridkot reports its 1st positive case; total number of cases in Punjab 58". PTC NEWS. Retrieved 5 April 2020.
  33. "2 days after Padma Shri awardee Bhai Nirmal Singh's death, daughter tests positive for coronavirus". Hindustan Times (in ಇಂಗ್ಲಿಷ್). 4 April 2020. Retrieved 5 April 2020.
  34. Nath, Rajan (4 April 2020). "Punjab tally rises to 65 after fresh cases of coronavirus reported from Mohali, Jalandhar and Pathankot". PTC NEWS. Retrieved 5 April 2020.
  35. Nath, Rajan (5 April 2020). "Coronavirus Punjab Cases | Mohali | Derabassi| Ludhiana". PTC NEWS. Retrieved 5 April 2020.
  36. Nath, Rajan (5 April 2020). "Barnala reports its first case of coronavirus; total number of cases in Punjab 68". PTC NEWS. Retrieved 6 April 2020.
  37. Apr 5, PTI. "Two women die in Punjab, coronavirus death toll rises to 7 | Chandigarh News - Times of India". The Times of India (in ಇಂಗ್ಲಿಷ್). Retrieved 6 April 2020. {{cite news}}: Cite has empty unknown parameter: |1= (help)CS1 maint: numeric names: authors list (link)
  38. Nath, Rajan (6 April 2020). "Coronavirus: Death toll in Punjab rises to 7; confirmed cases 75". PTC NEWS. Retrieved 7 April 2020.
  39. Service, Tribune News. "Punjab schools, colleges, universities shut till March 31 to prevent coronavirus spread". Tribuneindia News Service (in ಇಂಗ್ಲಿಷ್). Retrieved 5 April 2020.
  40. "Punjab malls, gyms, restaurants deserted after advisory on coronavirus". Business Standard India. Retrieved 5 April 2020. {{cite news}}: Cite has empty unknown parameter: |1= (help)
  41. "public transport". Retrieved 5 April 2020.
  42. "Punjab announces lockdown across the state till March 31". National Herald (in ಇಂಗ್ಲಿಷ್). Retrieved 5 April 2020.
  43. Service, Tribune News. "Curfew imposed across Punjab over coronavirus; only specific exemptions". Tribuneindia News Service (in ಇಂಗ್ಲಿಷ್). Retrieved 5 April 2020.
  44. "Punjab sanctions Rs 20 crore for free food, medicines to poor from CM Relief Fund; ministers pledge month's salary for efforts to control Covid-19". Hindustan Times (in ಇಂಗ್ಲಿಷ್). 23 March 2020. Retrieved 5 April 2020.
  45. India, Press Trust of (24 March 2020). "Punjab CM sets up COVID relief fund". Business Standard India. Retrieved 5 April 2020.