ಗುಲಾಬಿ ಟಾಕೀಸು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


Gulabi Talkies
ಚಿತ್ರ:Gulabi poster DVD cover.jpeg
DVD cover
ಗುಲಾಬಿ ಟಾಕೀಸು
ನಿರ್ದೇಶನGirish Kasaravalli
ನಿರ್ಮಾಪಕAmrutha Patil
Basanth Kumar Patil
ಚಿತ್ರಕಥೆGirish Kasaravalli
ಕಥೆVaidehi
ಆಧಾರGulabi Talkies and Other Stories 
by Vaidehi
ಪಾತ್ರವರ್ಗUmashree
K. G. Krishna Murthy
M. D. Pallavi
ಸಂಗೀತIsaac Thomas Kottukapally
ಛಾಯಾಗ್ರಹಣS. Ramachandra
ಸಂಕಲನM. N. Swamy
S. Manohar
ವಿತರಕರುBasanth Productions
ಬಿಡುಗಡೆಯಾಗಿದ್ದು
  • 2 ಸೆಪ್ಟೆಂಬರ್ 2008 (2008-09-02) (India)
ಅವಧಿ123 minutes
ದೇಶIndia
ಭಾಷೆKannada

ಗುಲಾಬಿ ಟಾಕೀಸು ೨೦೦೮ರ ಭಾರತೀಯ ಕನ್ನಡ ಭಾಷೆಯ ಮೆಚ್ಚುಗೆ ಪಡೆದ ಭಾರತೀಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಚಲನಚಿತ್ರವಾಗಿದೆ. ಇದು ಕನ್ನಡ ಬರಹಗಾರ್ತಿ ವೈದೇಹಿ ಅವರ ಅದೇ ಹೆಸರಿನ ಸಣ್ಣ ಕಥೆಯನ್ನು ಆಧರಿಸಿದೆ. [೧] [೨]

ಈ ಚಿತ್ರವು ಜುಲೈ ೧೪, ೨೦೦೮ ರಂದು ನವದೆಹಲಿಯಲ್ಲಿ ನಡೆದ ಓಸಿಯಾನ್‌ನ ಸಿನೆಫಾನ್ ಫೆಸ್ಟಿವಲ್ ಆಫ್ ಏಷ್ಯನ್ ಮತ್ತು ಅರಬ್ ಸಿನೆಮಾದಲ್ಲಿ ಪ್ರಥಮ ಪ್ರದರ್ಶನಗೊಂಡಿತು, ಅಲ್ಲಿ ಇದು ಭಾರತೀಯ ಸ್ಪರ್ಧೆ ವಿಭಾಗದಲ್ಲಿ ಅತ್ಯುತ್ತಮ ಚಲನಚಿತ್ರ ಮತ್ತು ಅತ್ಯುತ್ತಮ ನಟಿ ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಈ ಚಿತ್ರದಲ್ಲಿನ ಅಭಿನಯಕ್ಕಾಗಿ ಉಮಾಶ್ರೀ ಅತ್ಯುತ್ತಮ ನಟಿಗಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದರು . [೩]

ಕಥಾವಸ್ತು[ಬದಲಾಯಿಸಿ]

ಈ ಚಿತ್ರವು ೧೯೯೦ರ ದಶಕದ ಉತ್ತರಾರ್ಧದಲ್ಲಿ ನೈಋತ್ಯ ಭಾರತದ ಕರ್ನಾಟಕದ ಕುಂದಾಪುರದ ಸುತ್ತಮುತ್ತಲಿನ ಮೀನುಗಾರಿಕೆ ಸಮುದಾಯಗಳಲ್ಲಿ ಸ್ಥಾಪಿತವಾಗಿದೆ. ಹಠಾತ್ ಪ್ರವೃತ್ತಿಯುಳ್ಳ ಸೂಲಗಿತ್ತಿ ಗುಲಾಬಿ ( ಉಮಾಶ್ರೀ ) ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಒಂದು ಉತ್ಸಾಹ ಸಿನಿಮಾ. ಅವರು ಮೀನುಗಾರರು ವಾಸಿಸುವ ದ್ವೀಪದಲ್ಲಿ ಏಕಾಂಗಿ ಜೀವನವನ್ನು ನಡೆಸಿರುತ್ತಾರೆ. ಸಣ್ಣ ಸಮಯದ ಮೀನು ಮಾರಾಟ ಮಾಡುವ ಏಜೆಂಟ್ ಪತಿ ಮೂಸಾ (ಕೆ.ಜಿ.ಕೃಷ್ಣ ಮೂರ್ತಿ) ಅವಳನ್ನು ತೊರೆದು ತನ್ನ ಎರಡನೇ ಪತ್ನಿ ಕುಂಜಿಪಾತು ಮತ್ತು ಅವರ ಮಗು ಅಡ್ಡಾದೊ೦ದಿಗೆ ಸಂತೋಷದಿಂದ ಬದುಕುತ್ತಿದ್ದಾನೆ.

ಒಂದು ಕುಟುಂಬವು ಕಷ್ಟಕರವಾದ ಪ್ರಸವಕ್ಕೆ ಹಾಜರಾದ ನಂತರ ಆಕೆಗೆ ಕೃತಜ್ಞತೆಯಿಂದ ಉಪಗ್ರಹ ಆಂಟೆನಾದೊಂದಿಗೆ ದೂರದರ್ಶನವನ್ನು ಉಡುಗೊರೆಯಾಗಿ ನೀಡುತ್ತದೆ (ಇದಕ್ಕಾಗಿ ಅವರು ಅವಳನ್ನು ಚಿತ್ರಮಂದಿರದಿಂದ ಎಳೆದು ತರಬೇಕಾಗುತ್ತದೆ). ಅವಳ ಸಣ್ಣ ದ್ವೀಪ ಗ್ರಾಮದಲ್ಲಿ ಆಗಮಿಸಿದ ಮೊದಲ ಬಣ್ಣದ ಟಿವಿಯು ನಿದ್ರಿಸುತ್ತಿರುವ ಕುಗ್ರಾಮದಲ್ಲಿ ದೊಡ್ಡ ಬದಲಾವಣೆಗಳನ್ನು ತರುತ್ತದೆ. ಪುರುಷರು ಮೀನುಗಾರಿಕೆಗೆ ತೆರಳಿದ ನಂತರ ಹಳ್ಳಿಯ ಮಹಿಳೆಯರು ಅವಳ ಮನೆಯಲ್ಲಿ ಒಟ್ಟುಗೂಡಲು ಪ್ರಾರಂಭಿಸುತ್ತಾರೆ. ಹೀಗಾದರೂ, ಅವರಲ್ಲಿ ಕೆಲವರು ದೂರವಿರುತ್ತಾರೆ, ಏಕೆಂದರೆ ಗ್ರಾಮದ ಕೆಲವೇ ಮುಸ್ಲಿಮರಲ್ಲಿ ಗುಲಾಬಿ ಕೂಡ ಒಬ್ಬಳು. ಇನ್ನೂ ಕೆಲವರು ಅವಳ ಕೋಣೆಯ ಹೊರಗಿನಿಂದ ನೋಡಲು ಬಯಸುತ್ತಾರೆ.

ತನ್ನ ಮನೆಯ ನಿಯತ ಜನರಲ್ಲಿ ಒಬ್ಬಳಾದ ನೇತ್ರು (ಗಾಯಕ-ನಟಿ ಎಂ.ಡಿ. ಪಲ್ಲವಿ), ಗೈರುಹಾಜರಾದ ಗಂಡನ ಹೆ೦ಡತಿ ಮತ್ತು ಪ್ರಾಬಲ್ಯದ ಅತ್ತೆಯ ಸೊಸೆ, ಗುಲಾಬಿಯ ಸ್ನೇಹ ಮತ್ತು ವಿಶ್ವಾಸಾರ್ಹಳಾಗುತ್ತಾಳೆ. ಆದರೆ ನೇತ್ರು ಕಣ್ಮರೆಯಾಗುತ್ತಾಳೆ ಮತ್ತು ಗುಲಾಬಿಯನ್ನು ಇದಕ್ಕೆ ದೂಷಿಸಲಾಗುತ್ತದೆ. ಅವಳನ್ನು ಹಳ್ಳಿಯಲ್ಲಿ ಏಕಾಂಗಿಯಾಗಿ ಬಿಡಲಾಗುತ್ತದೆ.

೧೯೯೯ರ ಕಾರ್ಗಿಲ್ ಯುದ್ಧ ಮತ್ತು ಕರ್ನಾಟಕದಲ್ಲಿ ಕೋಮುವಾದದ ಉದಯವು ಚಿತ್ರಕ್ಕೆ ಹಿನ್ನೆಲೆಯಾಗಿದೆ. ಕಾರ್ಗಿಲ್ ಯುದ್ಧದ ನಂತರ ಮುಸ್ಲಿಮರ ಕೋಮು ರೂಢಮಾದರಿಗೊಳಿಸುವಿಕೆಯು ಹಳ್ಳಿಯಲ್ಲಿ ಪ್ರತಿಧ್ವನಿ ಕಂಡುಕೊಳ್ಳುತ್ತದೆ. ಹಳ್ಳಿಯ ಸಣ್ಣ ಮೀನುಗಾರರು ಮತ್ತು ವಾಣಿಜ್ಯ ಮೀನುಗಾರಿಕಾ ನೌಕೆಗಳ ಹೆಚ್ಚುತ್ತಿರುವ ಸಮೂಹದ ಒಡೆಯ ಮುಸ್ಲಿಂ ಉದ್ಯಮಿಯ(ಅವರನ್ನು ಚಿತ್ರದಲ್ಲೆಲ್ಲೂ ತೋರಿಸಲಾಗಿಲ್ಲ) ನಡುವಿನ ಉದ್ವಿಗ್ನತೆ ಕೋಮು ಬಣ್ಣವನ್ನು ಪಡೆಯುತ್ತದೆ.

ನೇತ್ರುವಿನ ಕಣ್ಮರೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಇನ್ನೂ ಹೆಚ್ಚಿಸುತ್ತದೆ. ಹಳ್ಳಿಯಲ್ಲಿರುವ ಮುಸ್ಲಿಮರು ಪಲಾಯನ ಮಾಡಿ ಗುಲಾಬಿಯನ್ನು ಸಹ ಹೊರಹೋಗುವಂತೆ ಒತ್ತಾಯಿಸುತ್ತಾರೆ, ಆದರೆ ಅವಳು ನಿರಾಕರಿಸುತ್ತಾಳೆ ಮತ್ತು ಹಳ್ಳಿಯಲ್ಲಿಯೇ ಇರುತ್ತಾಳೆ. ಅವಳ ಮನೆಯನ್ನು ಧ್ವಂಸಗೊಳಿಸುತ್ತಾರೆ ಮತ್ತು ದ್ವೀಪವನ್ನು ಬಿಡಲು ಅವಳನ್ನು ಬಲವಂತವಾಗಿ ದೋಣಿಗೆ ಕರೆದೊಯ್ಯಲಾಗುತ್ತದೆ. ಗುಲಾಬಿಯ ದೂರದರ್ಶನವು ಅವಳ ಮನೆಯಲ್ಲಿ ಉಳಿಯಬೇಕು ಎಂದು ಹೊರಗಿನ ಯುವಕರು ಹಳ್ಳಿಗರಿಗೆ ಭರವಸೆ ನೀಡುತ್ತಾರೆ.

ಇಲ್ಲಿಯವರೆಗೆ ಗುಲಾಬಿಯ ಮನೆಗೆ ಪ್ರವೇಶಿಸಲು ನಿರಾಕರಿಸಿದ ಇಬ್ಬರು ಅನಕ್ಷರಸ್ಥ ವೃದ್ಧ ಮಹಿಳೆಯರು, ಟಿವಿ ವೀಕ್ಷಿಸಲು ಅಲ್ಲಿಗೆ ಹೋಗುತ್ತಾರೆ (ಅದನ್ನು ಹೇಗೆ ಶುರುಮಾಡಬೇಕೆಂದು ಅವರಿಗೆ ತಿಳಿದಿಲ್ಲ - ಅದನ್ನು ಶುರುಮಾಡಬೇಕೆ ಎ೦ಬುದು ಸಹ ಅವರಿಗೆ ತಿಳಿದಿಲ್ಲ) ಇಲ್ಲಿಗೆ ಚಿತ್ರವು ಕೊನೆಗೊಳ್ಳುತ್ತದೆ.

ಪ್ರಶಸ್ತಿಗಳು ಮತ್ತು ಮನ್ನಣೆ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "Trivia about cinema and theatres". India Today. 2 January 2009. Retrieved 8 December 2010.
  2. "Of women's lives". Thee Hindu. 1 October 2006. Archived from the original on 10 ಅಕ್ಟೋಬರ್ 2006. Retrieved 27 March 2014.
  3. "Jo misses National Award by a whisker!". Sify.com. 8 September 2009. Retrieved 3 December 2011.
  4. "Southern films score big at National Awards". The Hindu. 7 September 2009. Archived from the original on 10 September 2009. Retrieved 2009-09-07.

ಬಾಹ್ಯ ಲಿಂಕ್‌ಗಳು[ಬದಲಾಯಿಸಿ]

ವಿಮರ್ಶೆಗಳು[ಬದಲಾಯಿಸಿ]