ನಾಗಿನ್ ಕಾಕ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಾಗಿನ್ ಕಾಕ್ಸ್
ನಾಗಿನ್ ಕಾಕ್ಸ್
ಜನನ೧೯೬೫
ಕಾರ್ಯಕ್ಷೇತ್ರಗಳುಬಾಹ್ಯಾಕಾಶ
ಅಭ್ಯಸಿಸಿದ ಸಂಸ್ಥೆಕಾರ್ನೆಲ್ ವಿಶ್ವವಿದ್ಯಾಲಯ

ಜೈನಾಬ್ ನಾಗಿನ್ ಕಾಕ್ಸ್ ಜೆಟ್ ಪ್ರೊಪಲ್ಟನ್ ಲ್ಯಾಬೋರೇಟರಿಯಲ್ಲಿ ಬಾಹ್ಯಾಕಾಶ ನೌಕೆ ಕಾರ್ಯಾಚರಣೆಯ ಇಂಜಿನಿಯರ್. ಕ್ಷುದ್ರಗ್ರಹ ೧೪೦೬೧ ಕ್ಕೆ ೨೦೧೫ರಲ್ಲಿ ಅವರ ಹೆಸರನ್ನು ಇಡಲಾಯಿತು. ಅವರು ನಾಸಾ ಅಸಾಧಾರಣ ಸೇವಾ ಪದಕವನ್ನು ಎರಡು ಬಾರಿ ಪಡೆದಿದ್ದಾರೆ.

ಆರಂಭಿಕ ಜೀವನ ಮತ್ತು ಶಿಕ್ಷಣ[ಬದಲಾಯಿಸಿ]

ಕಾಕ್ಸ್ ರವರು ೧೯೬೫ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. [೧] ಕುವಾಲ ಲಂಪುರ್ ಮತ್ತು ಕನ್ಸಸ್ ಸಿಟಿಯಲ್ಲಿ ಬೆಳೆದರು. ಅವರು ಶಾವ್ನಿ ಮಿಷನ್ ಈಸ್ಟ್ ನಲ್ಲಿ ಪ್ರೌಢ ಶಿಕ್ಷಣ ಪಡೆದರು. [೨]ಶಾಲೆಯಲ್ಲಿ ಅವರು ಸ್ಟಾರ್ ಟ್ರೆಕ್ ಮತ್ತು ಕಾಸ್ಮೋಸ್: ಎ ಸ್ಪೇಸ್ ಟೈಮ್ ಒಡಿಸ್ಸಿಯಲ್ಲಿ ಆಸಕ್ತಿ ಹೊಂದಿದ್ದರು. [೩]ಅವರು ಇಂಜಿನಿಯರ್ ಮತ್ತು ಮನಃಶಾಸ್ತ್ರವನ್ನು ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ೧೯೮೬ರಲ್ಲಿ ಮುಗಿಸಿದರು. [೪]ಅವರು ಏರ್‌ಫೊರ್ಸ್‌ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಬಾಹ್ಯಾಕಾಶ ಕಾರ್ಯಾಚರಣೆ ವ್ಯವಸ್ಥೆಗಳ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು. [೫]

ವೃತ್ತಿ[ಬದಲಾಯಿಸಿ]

ಪದವಿ ಪಡೆದ ನಂತರ ಅವರು ಯುನೈಟೆಡ್ ಸ್ಟೇಟ್ಸ್ ಏರ್‌ಫೋರ್ಸ್‌ನಲ್ಲಿ ಬಾಹ್ಯಾಕಾಶ ಕಾರ್ಯಾಚರಣೆಯ ಅಧಿಕಾರಿಯಾಗಿ ಕೆಲಸ ಮಾಡಿದರು. ಅವರು ಏರ್ಕ್ರ್ಯೂ ಎಫ್-೧೬ ತರಬೆತಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಉತ್ತರ ಅಮೇರಿಕಾದ ಏರೋಸ್ಪೇಸ್ ಡಿಫೆನ್ಸ್ ಕಮಾಂಡ್ನಲ್ಲಿ ಕಕ್ಷೀಯ ವಿಶ್ಲೇಷಕರಾಗಿ ಕೆಲಸ ಮಾಡಿದರು. ಕಾಕ್ಸ್ ಜೆಟ್ ಪ್ರೊಪಲ್ಷನ್ ಲ್ಯಾಬೋರೇಟರಿಯಲ್ಲಿ ಬಾಹ್ಯಾಕಾಶ ನೌಕೆ ಕಾರ್ಯಾಚರಣೆ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸಿದ್ದಾರೆ.

  • ಗೆಲಿಲಿಯೋ
  • ಇನ್‌ಸೈಟ್
  • ಕೆಪ್ಲರ್
  • ಮಾರ್ಸ್ ಕ್ಯೂರಿಯಾಸಿಟಿ

ಸೇರಿದಂತೆ ಹಲವಾರು ಅಂತರ್‌ಗ್ರಹ ರೊಬೊಟಿಕ್ ಕಾರ್ಯಾಚರಣೆಗಳೊಂದಿಗೆ ಅವರು ತೊಡಗಿಸಿಕೊಂಡಿದ್ದಾರೆ. [೬]ಅವರು ಯುದ್ದತಂತ್ರದ ಮಿಷನ್ ಲೀಡ್,ಅಪ್‌ಲಿಂಕ್,ಡೌನ್‌ಲಿಂಕ್ ಮತ್ತು ಮುಂಗಡ ಯೋಜನೆ ತಂಡಗಳ ಉಸ್ತುವಾರಿ ವಹಿಸಿದ್ದರು. [೭]ಅವರು ನಾಸಾ ಅಸಾಧಾರಣ ಸೇವಾ ಪದಕವನ್ನು ೨೦೧೪ರಲ್ಲಿ ಮತ್ತು ಬ್ರೂಸ್ ಮುರ್ರೆ ಪ್ರಶಸ್ತಿಯನ್ನು ಪಡೆದಿದ್ದಾರೆ. [೮][೯]

ವೈವಿಧ್ಯತೆ[ಬದಲಾಯಿಸಿ]

ವಿಜ್ಞಾನ,ಇಂಜಿನಿಯರ್ ಮತ್ತು ನಾಸಾದಲ್ಲಿ ವೈವಿಧ್ಯತೆಯನ್ನು ಹೆಚ್ಛಿಸುವ ಬಗ್ಗೆ ಕಾಕ್ಸ್ ಉತ್ಸಾಹಿಯಾಗಿದ್ದರು. [೧೦]ಅವರು ಗ್ರಿಫಿತ್ ಅಬ್ಸರ್ವೇಟರಿಯಲ್ಲಿ ನಿರ್ದೆಶಕರರ ಮಂಡಳಿಯಲ್ಲಿ ಸೇವೆ ಸಲ್ಲಿಸಿದರು. ಅಲ್ಲದೆ ಕಾರ್ನೆಲ್ ಮಹಿಳಾ ಹಳೆ ವಿದ್ಯಾರ್ಥಿಗಳ ಅಧ್ಯಕ್ಷರ ಪರಿಷತ್ತಿನಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರು ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮ್ಂಟ್ ಆಫ್ ಸ್ಟೇಟ್ಸ್‌ಗೆ ಆಹ್ವಾನಿತ ಸ್ಪೀಕರ್ ಆಗಿದ್ದರು. ಅವರು ವೃತ್ತಿಜೀವನ ಮತ್ತು ನಾಸಾದ ರೋಬೊಟ್ ಬಾಹ್ಯಾಕಾಶ ಪರಿಶೋಧನಾ ಕಾರ್ಯಕ್ರಮದ ಬಗ್ಗೆ ಮಾತನಾಡುತ್ತಾ ವಿಶ್ವದಾದ್ಯಂತ ಪ್ರಯಾಣಿಸುತ್ತಿದ್ದಾರೆ. ೨೦೧೪ರಲ್ಲಿ ಅವರು ಪಾಕಿಸ್ತಾನ,ರಿಯಾ ಡಿಜನೈರೊ ಮತ್ತು ಬಹಿಯಾವನ್ನು ಅಪ್ರಬುದ್ದ ಸಮುದಾಯಗಳ ಯುವತಿಯರಿಗೆ ವಿಜ್ಞಾನ ಮತ್ತು ಇಂಜಿನಿಯರಿಂಗ್ ಅಧ್ಯಯನಕ್ಕೆ ಪ್ರೇರೇಪಿಸಿದರು. ಅವರು ಸಿಗ್‌ಗ್ರಾಫ್‌ನಲ್ಲಿ ೨೦೧೬ರಲ್ಲಿ ಮುಖ್ಯ ಭಾಷಣಕಾರರಾಗಿದ್ದರು. [೧೧]ಅವರು ೨೦೧೬ರಲ್ಲಿ ಬೋಸ್ನಿಯಾ ಮತ್ತು ಹರ್ಜೆಗೋವಿನಾರನ್ನು ಆಹ್ವಾನಿಸಿದರು. ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಸ್ಟೇಟ್ ಜೊತೆ ದೇಶ ಪ್ರವಾಸ ಮಾಡಿದರು. ಅವರು ೨೦೧೭ರಲ್ಲಿ ಬೀಕನ್ ಸ್ಟ್ರೀಟ್‌ನಲ್ಲಿ ಬಿ‌ಇಡಿ‍‍‍ಎಕ್ಸ್‌ನ ಬಗ್ಗೆ ಮಾತುಕತೆ ನೀಡಿದರು. [೧೨] ಅದು ವಿಜ್ಞಾನದ ಬಗೆಗಿನ ಉತ್ತಮ ಮಾತು ಎಂದು ಪರಿಗಣಿಸಿದರು. ಮಂಗಳ ಗ್ರಹದಲ್ಲಿ ಯಾವ ಸಮಯ? ಸುಮಾರು ಎರಡು ಮಿಲಿಯನ್ ಬಾರಿ ವೀಕ್ಷಿಸಲಾಗಿದೆ. ಅವರು ತಮ್ಮ ೨೦೨೧ ಮಾರ್ಸ್ ಮಿಷನ್ ಬಗ್ಗೆ ಚರ್ಚಿಸಲು ಕುವೈತ್‌ಗೆ ಆಹ್ವಾನ ನೀಡಿದರು.

ಉಲ್ಲೇಖಗಳು[ಬದಲಾಯಿಸಿ]

  1. https://www.ted.com/speakers/nagin_cox
  2. https://mars.nasa.gov/people/profile/?id=270
  3. https://blog.siggraph.org/2016/07/meet-siggraph-er-z-nagin-cox.html/
  4. https://mars.nasa.gov/people/profile/?id=22833
  5. https://www.afit.edu/alumni/page.cfm?page=1213&tabname=Tab1A
  6. "ಆರ್ಕೈವ್ ನಕಲು". Archived from the original on 2019-10-13. Retrieved 2019-10-13.
  7. https://medium.com/ideas-in-action/the-martians-are-here-f2b29049801a
  8. https://ssd.jpl.nasa.gov/sbdb.cgi?sstr=14061
  9. https://www.nagincox.org/outreach
  10. "ಆರ್ಕೈವ್ ನಕಲು". Archived from the original on 2020-08-11. Retrieved 2019-10-13.
  11. https://www.cemetech.net/news/2016/8/821/_/stem-and-exploring-mars-a-chat-with-z-nagin-cox-of-nasa
  12. https://journalistsforspace.com/2017/01/09/living-on-two-planets-a-tedx-talk-by-nagin-cox/ Archived 2019-10-13 ವೇಬ್ಯಾಕ್ ಮೆಷಿನ್ ನಲ್ಲಿ.