ಬಿ. ಶ್ರೀರಾಮುಲು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಿ ಶ್ರೀರಾಮುಲು (ಜನನ: 8 ಆಗಸ್ಟ್ 1971) ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಸಚಿವರು ಹಾಗೂ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕರು.

ಬಳ್ಳಾರಿ ನಗರಸಭೆಯ 34ನೇ ವಾರ್ಡಿನ ಸದಸ್ಯ ಸ್ಥಾನದಿಂದ, ರಾಜ್ಯ ಸರ್ಕಾರದಲ್ಲಿ ಮೂರನೇ ಬಾರಿಗೆ ಸಚಿವರಾಗುವವರೆಗೆ, ಅವರು ರಾಜಕೀಯದಲ್ಲಿ ಬೆಳೆದಿದ್ದಾರೆ.

ಹಿನ್ನೆಲೆ[ಬದಲಾಯಿಸಿ]

ಬಿ. ಶ್ರೀರಾಮುಲು ಅವರು ಆಗಸ್ಟ್ 8, 1971 ರಂದು ಕರ್ನಾಟಕದ ಬಳ್ಳಾರಿಯಲ್ಲಿ ರೈಲ್ವೆ ಉದ್ಯೋಗಿ ಬಿ. ತಿಮ್ಮಪ್ಪ ಮತ್ತು ಗೃಹಿಣಿ ಬಿ. ಹೊನ್ನೂರಮ್ಮ ದಂಪತಿಗೆ ಜನಿಸಿದರು. ಅವರು ನಾಲ್ಕು ಸಹೋದರರು ಮತ್ತು ನಾಲ್ಕು ಸಹೋದರಿಯರಲ್ಲಿ ಏಳನೇ ಮಗು. ಇವರ ಪತ್ನಿ, ಲಕ್ಷ್ಮೀ.

ರಾಜಕೀಯ ರಂಗ[ಬದಲಾಯಿಸಿ]

1999 ರ ಲೋಕಸಭಾ ಚುನಾವಣೆಯಲ್ಲಿ ಬಿ ಶ್ರೀರಾಮುಲು ಅವರು ಸುಷ್ಮಾ ಸ್ವರಾಜ್ ಅವರ ಸ್ಥಳೀಯ ಸಹಾಯಕರಾಗಿ ಹೊರಹೊಮ್ಮಿದರು. ಬಳ್ಳಾರಿ ನಗರದಿಂದ 1999 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಸ್ವರಾಜ್ ಮತ್ತು ಶ್ರೀರಾಮುಲು ಅವರು ಚುನಾವಣೆಯಲ್ಲಿ ಸೋತರೂ, ಅವರಿಗೆ, ಆ ವರ್ಷ ನಡೆದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳು ನಿರ್ಣಾಯಕ ಮೈಲಿಗಲ್ಲುಗಳಾಗಿವೆ.

ಸೆಪ್ಟೆಂಬರ್ 2011 ರಲ್ಲಿ, ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು ಮತ್ತು ನಂತರ ಭಾರತೀಯ ಜನತಾ ಪಕ್ಷವನ್ನು ತೊರೆದರು, ಪಕ್ಷದಲ್ಲಿನ ಅವರ ಮಾರ್ಗದರ್ಶಕರಿಗೆ ಅವಮಾನವಾಯಿತು. ಮಾಜಿ ಸಚಿವ ಗಾಲಿ ಜನಾರ್ದನ್ ರೆಡ್ಡಿ ಅವರನ್ನು ಬಿಜೆಪಿ ಸರ್ಕಾರ ಜೈಲಿಗೆ ಹಾಕಿತು.[೧] ತರುವಾಯ, ಅವರು ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಮತ್ತೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದರು.[೨] ನಂತರ ಅವರು ಪ್ರಾದೇಶಿಕ ಪಕ್ಷವಾದ "ಬಡವರ ಶ್ರಮಿಕರ ರೈತರ ಕಾಂಗ್ರೆಸ್" ಅಥವಾ ಬಿಎಸ್ಆರ್ ಕಾಂಗ್ರೆಸ್ ಅನ್ನು ಸೇರಿದರು .[೩] ಆದರೆ, ಮಾರ್ಚ್ 2014 ರಲ್ಲಿ ಅವರು ಮತ್ತೆ ಭಾರತೀಯ ಜನತಾ ಪಕ್ಷಕ್ಕೆ ಸೇರಿ ಮತ್ತು ಬಳ್ಳಾರಿಯಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಗೆದ್ದರು.[೪]

2018 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಶ್ರೀರಾಮುಲು ಅವರು ಮೊಳಕಾಲ್ಮೂರು ಮತ್ತು ಬಾದಾಮಿಯಿಂದ ಸ್ಪರ್ಧಿಸಿದ್ದರು. ಮೊಳಕಾಲ್ಮೂರಿನಲ್ಲಿ ಗೆದ್ದರು. ಬಾದಾಮಿಯಲ್ಲಿ, ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಉಲ್ಲೇಖ ದೋಷ: Invalid <ref> tag; refs with no name must have content ವಿರುದ್ಧ, 3000 ಮತಗಳ ಅಂತರದಿಂದ ಪರಾಜಯಗೊಂಡರು.

27 ಜುಲೈ 2018 ರಂದು ಶ್ರೀರಾಮುಲು ಅವರು ಉತ್ತರ ಕರ್ನಾಟಕಕ್ಕೆ ಆಗಿರುವ ಅನ್ಯಾಯಕ್ಕಾಗಿ, ಪ್ರತ್ಯೇಕ ರಾಜ್ಯಕ್ಕೆ ಕರೆಕೊಟ್ಟರು. [೫]

ಸಚಿವ ಪದವಿಗಳು
ಸರ್ಕಾರ ಮುಖ್ಯಮಂತ್ರಿ ಸ್ಥಾನ
೨೦೦೬ ಬಿಜೆಪಿ–ಜೆಡಿಎಸ್‌ ಮೈತ್ರಿ ಸರ್ಕಾರ ಎಚ್‌.ಡಿ.ಕುಮಾರಸ್ವಾಮಿ ಪ್ರವಾಸೋದ್ಯಮ ಸಚಿವ
೨೦೦೮ ಬಿಜೆಪಿ ಬಿ.ಎಸ್‌.ಯಡಿಯೂರಪ್ಪ ಆರೋಗ್ಯ ಸಚಿವ
೨೦೧೯ ಬಿಜೆಪಿ ಬಿ.ಎಸ್‌.ಯಡಿಯೂರಪ್ಪ

ಬಳ್ಳಾರಿ ಜಿಲ್ಲೆ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಲಿಂಕ್‌ಗಳು[ಬದಲಾಯಿಸಿ]