ಇಲಿಕಿವಿ ಸೊಪ್ಪು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇಲಿಕಿವಿ ಹೂ
ಇಲಿಕಿವಿ ಸೊಪ್ಪು

ಐಪೋಮಿಯಾ ರೆನಿಫೊರ್ಮಿಸ್ (Ipomea reniformis)ಎಂಬ ವೈಜ್ಞಾನಿಕ ಹೆಸರನ್ನು ಹೊಂದಿರುವ ಇಲಿಕಿವಿಯು 'ಕನ್ವೋಲ್ವುಲೇಸಿ' ಎಂಬ ಕುಟುಂಬಕ್ಕೆ ಸೇರಿದ ಸಸ್ಯಮೂಲಿಕೆ.

ಇತರ ಭಾಷೆಗಳಲ್ಲಿ ಇರುವ ಹೆಸರು[ಬದಲಾಯಿಸಿ]

  • ಕನ್ನಡ : ಇಲಿ ಕಿವಿ ಸೊಪ್ಪು
  • ಹಿಂದಿ : ಚುಹಕಾನ್
  • ತಮಿಳು : ಎಲಿಕಟು ಕೀರಯಿ
  • ತುಳು: ಎಲಿ ಕೆಬಿ
  • ಕೊಂಕಣಿ : ವಿಂದ್ರ ಕಾನು
  • ಸಂಸ್ಕ್ರತ : ಮೂಷಕಪರ್ಣಿ

ಲಕ್ಷಣ[ಬದಲಾಯಿಸಿ]

ಈ ಗಿಡ ಅರ್ಧ ಅಡಿ ಎತ್ತರ ಬೆಳೆಯುತ್ತದೆ. ಎಲೆ ದಪ್ಪವಾಗಿದ್ದು ಇಲಿಯ ಕಿವಿ ಆಕಾರವನ್ನು ಹೊಂದಿದೆ. ಇದು ಸಾಮಾನ್ಯವಾಗಿ ಎಲ್ಲಾ ಪ್ರದೇಶಗಳಲ್ಲಿ ಬೆಳೆಯುತ್ತದೆ. ಗದ್ದೆ ಬದಿ ತೋಟ ಹಾಗೂ ಬಯಲು ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಹೂ ನೇರಳೆ ಬಣ್ಣವನ್ನು ಹೊಂದಿರುತ್ತದೆ. ಈ ಸಸ್ಯ ಮುಂಗಾರು ಮಳೆ ಪ್ರಾರಂಭದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ತೇವಾಂಶವಿರುವ ಪ್ರದೇಶಗಳಲ್ಲಿ ಯಾವಾಗಲೂ ಇರುತ್ತದೆ.[೧]

ಔಷಧೀಯ ಉಪಯೋಗಗಳು[ಬದಲಾಯಿಸಿ]

  1. ಕಿವಿನೋವು : ಎಲೆಯನ್ನು ಹಿಚುಕಿ, ಅದರ ರಸವನ್ನು ಕಿವಿಗೆ ಹಾಕುವುದು.
  2. ಸ್ವರ ಭಂಗ : ಎಲೆಯ ರಸಕ್ಕೆ ಎರಡು ಮೂರು ಚಿಟಿಕೆ ಬಜೆಯ ಹುಡಿ ಮತ್ತು ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸುವುದು.
  3. ಪಿತ್ತ ಜ್ವರ : ಇಲಿಕಿವಿಯ ಕಷಾಯದ ಸೇವನೆ.
  4. ಕಣ್ಣುರಿ,ನಿದ್ರಾಹೀನತೆ : ಉಷ್ಣತೆಯಿಂದ ಕಣ್ಣುರಿ ಲಕ್ಷಣವಿದ್ದರೆ, ನಿದ್ರೆ ಬಾರದಿದ್ದರೆ ಇದರ ರಸಕ್ಕೆ ಸಕ್ಕರೆ ಸೇವಿಸಿ ಕುಡಿಯಬೇಕು.
  5. ಹಾವು ಕಡಿತ : ಹಾವು ಕಡಿತದ ಸಂದರ್ಭದಲ್ಲಿ ಎಲೆಯ ರಸವನ್ನು ಕುಡಿಯಲು ನೀಡಬಹುದು. ಮತ್ತು ಜಜ್ಜಿದ ಎಲೆಯನ್ನು ಕಡಿತದ ಭಾಗಕ್ಕೆ ಹಚ್ಚಲು ಬಳಸಬಹುದು.[೨]

ಇಲಿಕಿವಿ ಸೊಪ್ಪಿನ ಚಟ್ನಿಯನ್ನು ಸೇವಿಸುವುದರಿಂದ ಮಕ್ಕಳ ಹೊಟ್ಟೆಹುಳು ನಿವಾರಣೆಯಾಗುತ್ತದೆ. ತಲೆಗೆ ಎಣ್ಣೆ ಬಿಸಿಮಾಡುವಾಗಲೂ ಇದರ ರಸವನ್ನು ಹಾಕಬಹುದು.

ಉಲ್ಲೇಖಗಳು[ಬದಲಾಯಿಸಿ]

  1. ಜೀವ ಸಂಜೀವಿನಿ(ಕರಾವಳಿ ತೀರದ ಔಷಧೀಯ ಸಸ್ಯಗಳು),ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಮುಂಡ್ಕೂರು ಘಟಕ ವಿದ್ಯಾವರ್ಧಕ ಪದವಿಪೂರ್ವ ಕಾಲೇಜು ಮುಂಡ್ಕೂರು,ಲಯನ್ಸ್ ಕ್ಲಬ್ ಮುಂಡ್ಕೂರು,ಮೂರನೆ ಮುದ್ರಣ-೨೦೦೦,ಪುಟ-೮
  2. https://easyayurveda.com