ವಿಷಯಕ್ಕೆ ಹೋಗು

ಕೋನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಒಂದು ಶೃಂಗದಿಂದ ಹೊರಹೊಮ್ಮಿದ ಎರಡು ರೇಖೆಗಳಿಂದ ರೂಪಗೊಂಡ ಒಂದು ಕೋನ.

ಸಮತಲ ಜ್ಯಾಮಿತಿಯಲ್ಲಿ, ಕೋನವೆಂದರೆ ಶೃಂಗ ಎಂದು ಕರೆಯಲ್ಪಡುವ ಒಂದು ಸಾಮಾನ್ಯ ಅಂತ್ಯಬಿಂದುವನ್ನು ಹಂಚಿಕೊಂಡ, ಪಾರ್ಶ್ವಗಳು ಎಂದು ಕರೆಯಲ್ಪಡುವ ಎರಡು ರೇಖೆಗಳಿಂದ ರೂಪಗೊಂಡ ಆಕೃತಿ. ಎರಡು ರೇಖೆಗಳಿಂದ ರೂಪಗೊಂಡ ಕೋನಗಳು ಒಂದು ಸಮತಲದಲ್ಲಿ ನೆಲೆಸಿರುತ್ತವೆ, ಆದರೆ ಈ ಸಮತಲವು ಯೂಕ್ಲೀಡಿಯನ್ ಸಮತಲವಾಗಿರಬೇಕು ಎಂದೇನಿಲ್ಲ. ಯೂಕ್ಲೀಡಿಯನ್ ಮತ್ತು ಇತರ ವಿಸ್ತಾರಗಳಲ್ಲಿನ ಎರಡು ಸಮತಲಗಳ ಛೇದನದಿಂದಲೂ ಕೋನಗಳು ರೂಪಗೊಳ್ಳುತ್ತವೆ. ಇವನ್ನು ದ್ವಿತಲಕೋನಗಳು ಎಂದು ಕರೆಯಲಾಗುತ್ತದೆ. ಒಂದು ಸಮತಲದಲ್ಲಿನ ಎರಡು ವಕ್ರರೇಖೆಗಳಿಂದ ರೂಪಗೊಂಡ ಕೋನಗಳನ್ನು ಛೇಧನ ಬಿಂದುವಿನ ಸ್ಥಳದಲ್ಲಿನ ಸ್ಪರ್ಶರೇಖೆಗಳಿಂದ ಲೆಕ್ಕಹಾಕಲಾದ ಕೋನ ಎಂದು ವ್ಯಾಖ್ಯಾನಿಸಲಾಗುತ್ತದೆ. ಅಂತರಿಕ್ಷದಲ್ಲಿ ಇದೇ ರೀತಿಯ ವಾಕ್ಯಗಳು ಅನ್ವಯಿಸುತ್ತವೆ, ಉದಾಹರಣೆಗೆ, ಒಂದು ಗೋಳದ ಮೇಲಿನ ಎರಡು ಬೃಹತ್ ವೃತ್ತಗಳಿಂದ ರೂಪಗೊಂಡ ಗೋಳೀಯ ಕೋನವೆಂದರೆ ಬೃಹತ್ ವೃತ್ತಗಳಿಂದ ಲೆಕ್ಕಹಾಕಲಾದ ಸಮತಲಗಳ ನಡುವಿನ ದ್ವಿತಲಕೋನವಾಗಿರುತ್ತದೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
"https://kn.wikipedia.org/w/index.php?title=ಕೋನ&oldid=1054628" ಇಂದ ಪಡೆಯಲ್ಪಟ್ಟಿದೆ