ಸದಸ್ಯ:2405:204:7401:9548:10A8:B36A:F238:D1B7/WEP 2019-20

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೇವಾಗ್ರಮ

ಮಹಾರಾಷ್ಟ್ರದ ವಾರ್ದದಿಂದ ಎಂಟು ಕಿಲೋಮೀಟರ್ ದೂರದಲ್ಲಿರುವ ಒಂದು ಪುಟ್ಟ ಗ್ರಾಮ ‘ಸೇವಾಗ್ರಮ’. ಗಾಂಧೀ[೧]ಜಿ ಅವರು 1936 ರಿಂದ ತಮ್ಮ ಕೊನೆಯ ದಿನದವರೆಗೂ (1948) ಇಲ್ಲಿ ವಾಸಿಸಿದ್ದರು. ಊರಿನ ಹೊರವಲಯದಲ್ಲಿ ಆಶ್ರಮವನ್ನು ಸ್ಥಾಪಿಸಿದರು. ವಾರ್ದದ ಜಮ್ನಾಲಾಲ್ ಬಜಾಜ್ ಅವರು ಆಶ್ರಮಕ್ಕೆ ಬೇಕಾದ ಮುನ್ನೂರು ಎಕರೆ ಜಮೀನು ಒದಗಿಸಿ ಆಶ್ರಮ ಸ್ಥಾಪನೆಗೆ ಸಹಾಯಕರಾದರು.

ಇತಿಹಾಸ

1930 ರಲ್ಲಿ ಸಬರಮತಿ ಆಶ್ರ[೨]ದಿಂದ ಅಹ್ಮದಾಬಾದ್ಗೆ ಉಪ್ಪು ಸತ್ಯಾಗ್ರಹ ಕೈಗೊಳ್ಳಲು ಪಾದ ಯಾತ್ರೆ ಮಾಡಿದರು. ಆಗ ಅವರು ಭಾರತಕ್ಕೆ ಸ್ವಾತಂತ್ರ್ಯ ಬರುವ ತನಕ ಸಬರಿಮತಿಗೆ ಹಿಂದಿರುಗಬಾರದು ಎಂದು ದೃಡ ನಿರ್ಣಯದೊಂದಿಗೆ ತೆರಳಿದರು.

ಎರಡು ವರ್ಷ ಗಾಂಧೀಜಿ ಅವರನ್ನು ಆಂಗ್ಲರು ಸೆರೆಯಲ್ಲಿ ಇಟ್ಟಿದ್ದರು. ಬಿಡುಗಡೆಯ ನಂತರ ಭಾರತದ ಹಲವಾರು ಕಡೆ ಸುತ್ತಿ ಬಂದು ದೇಶದ ಮದ್ಯ ಭಾಗದಲ್ಲಿ ತಂಗಬೇಕು ಎಂಬ ನಿರ್ಧಾರಕ್ಕೆ ಬಂದರು. 1934 ರಲ್ಲಿ ಕೈಗಾರಿಕೊದ್ಯಮಿ ಹಾಗೂ ಗಾಂಧೀಜಿ ಅವರ ಅನುಯಾಯಿಗಳಾದ ಜಮ್ನಾ[೩]ಲಾಲ್ ಬಜಾಜ್ ಅವರ ಆಮಂತ್ರಣದ ಮೇರೆಗೆ ವಾರ್ದಗೆ ಭೇಟಿ ನೀಡಿದರು. ಆಶ್ರಮ ನಿರ್ಮಾಣವಾಗುವ ತನಕ ಬಜಾಜ್ ಅವರ ಭವನದಲ್ಲಿ ಹಾಗೂ ಮಹಿಳಾ ಆಶ್ರಮದ ಪ್ರಾರ್ಥನ ಮಂದಿರದಲ್ಲಿ ಕೆಲ ಕಾಲ ತಂಗಿದರು. ಎಪ್ರಿಲ್ 1936 ರಲ್ಲಿ ವಾರ್ದದ ಸೀಗಾಂವ್ ಎಂಬಲ್ಲಿ ಆಶ್ರಮ ಸ್ಥಾಪಿಸಿದರು ನಂತರ ಸೇವಾಗ್ರಮ ಎಂದು ನಾಮಕರಣ ಮಾಡಿದರು. ತಮ್ಮ ಕುಟುಂಬದೊಂದಿಗೆ ನಿವಸಿಸಲು ಬಂದಾಗ ಗಾಂಧೀಜಿ ಅವರಿಗೆ ಅರವತ್ತೇಳು ವರ್ಷಗಳು.

ಮೊದಲಿಗೆ ಯಾವುದೆ ಮೂಲ ಸೌಕರ್ಯಗಳಿಲ್ಲದ ಗ್ರಾಮಕ್ಕೆ ತಮ್ಮ ಅನುಯಾಯಿಗಳನ್ನು ಕರೆಸಿಕೊಳ್ಳುವ ಉದ್ದೇಶವಿರಲ್ಲಿಲ. ಆದ್ದರಿಂದ ತಮ್ಮ ಪತ್ನಿ ಕಸ್ತೂ[೪]ರಿಬಾ ಅವರನ್ನು ಮಾತ್ರ ಜೊತೆಯಲ್ಲಿ ಕರೆತಂದರು. ಆದರೆ ಗಾಂಧೀಜಿ ಅವರ ಸಂದರ್ಶನಕ್ಕಾಗಿ ಅನುಯಾಯಿಗಳು ಕ್ರಮೇಣ ಆಶ್ರಮಕ್ಕೆ ಭೇಟಿ ಕೊಡುತ್ತಿದ್ದರು. ಸಂಚಾರ ಸೌಲಭ್ಯದ ಕೊರತೆಯಿಂದಾಗಿ ಪ್ರಯಾಣ ಕಷ್ಟಕರವಾಯಿತು. ಆದ್ದರಿಂದ ಅನುಯಾಯಿಗಳು ಅದೇ ಗ್ರಾಮದಲ್ಲಿ ಸ್ಥಿರಗೊಂಡರು. ಜನಸಂದಣಿ ಹೆಚ್ಚಾದಂತೆ ಸೇವಾಗ್ರಮದಲ್ಲಿ ಮೂಲಭೂತ ಸೌಕರ್ಯ ವ್ಯವಸ್ಥೆ ಸುಧಾರಣೆಗೊಂಡಿತು. ತದನಂತರ ಸೇವಾಗ್ರಮ ಒಂದು ಒಳ್ಳೆಯ ಸುವ್ಯವಸ್ಥಿತ ಗ್ರಾಮವಾಗಿ ರೂಪುಗೊಂಡಿತು.

ಮೊದಲಿಗೆ ಸೇವಾಗ್ರಮಕ್ಕೆ ಅಂಚೆ ವ್ಯವಸ್ಥೆ ಸಹ ಇರಲಿಲ್ಲ. ಬಂದ ಉತ್ತರಗಳನ್ನು ವಾರ್ದದಿಂದ ತರಬೇಕಾಗಿತ್ತು. ಅದೇ ಸಮಯದಲ್ಲಿ ಆ ಪ್ರಾಂತ್ಯದ ಸೀಗಾಂವ್ ಎಂಬಲ್ಲಿ ಸಂತ ಗಜಾನನ ಮಹಾರಾಜರು ಪ್ರಸಿದ್ಧರಾಗಿದ್ದರು. ಹಾಗಾಗಿ ಆಶ್ರಮಕ್ಕೆ ಬರುವ ಉತ್ತರಗಳು ಸರಿಯಾದ ವಿಳಾಸವಿಲ್ಲದೆ ದಿಕ್ಕು ತಪ್ಪುತ್ತಿದ್ದವು. ಇದರಿಂದಾಗಿ ಗಾಂಧೀಜಿ ಅವರು ಆಶ್ರಮದ ಹೆಸರನ್ನು ಸೇವಾಗ್ರಮ ಎಂದು ಬದಲಿಸಿದರು.

ಜಾತಿ ಪದ್ಧತಿ ನಮ್ಮ ದೇಶದಲ್ಲಿ ಬಹು ದೊಡ್ಡ ಸಮಸ್ಯೆಯಾಗಿತ್ತು. ಅದನ್ನು ಬೇರು ಸಮೇತ ಕಿತ್ತೊಗೆಯಬೇಕು ಎನ್ನುವುದೇ ಗಾಂಧೀಜಿ ಅವರ ಆಕಾಂಕ್ಷೆಯಾಗಿತ್ತು. ಅದರ ಫಲವಾಗಿಯೇ ಸೇವಾಗ್ರಮದ ಆಶ್ರಯದಲ್ಲಿ ಅಡುಗೆ ಮನೆಯ ಕೆಲಸಗಳಿಗೆ ಹರಿಜನರನ್ನು ನೇಮಿಸಿದರು.

ಆಶ್ರಮದ ಸಮೀಪದಲ್ಲಿ ಆಚಾರ್ಯ ವಿನೋ[೫]ಬ ಭಾವೆ ಅವರ ಪರಂಧಾಮ ಆಶ್ರಮ ಸಹ ಇತ್ತು. ನಮ್ಮ ದೇಶದ ಸ್ವಾತಂತ್ಯ್ಯಕ್ಕಾಗಿ ಅನೇಕ ಮಹತ್ವದ ನಿರ್ಣಯಗಳನ್ನು ಇದೇ ಸೇವಾಗ್ರಮದಲ್ಲಿ ನಮ್ಮ ನಾಯಕರು ಗಾಂಧೀಜಿ ಅವರ ನೇತೃತ್ವದಲ್ಲಿ ತೆಗೆದುಕೊಳ್ಳುತ್ತಿದ್ದರು. ನಮ್ಮ ದೇಶವನ್ನು ಬಲವಾಗಿ, ಧೃಡವಾಗಿ ರೂಪಿಸಲು ಬೇಕಾದ ಬಹು ಮುಖ್ಯವಾದ ಅಂಶಗಳನ್ನು ಚರ್ಚಿಸುವ ಕೇಂದ್ರ ಬಿಂದು ವಾಯಿತು ಈ ಸೇವಾಗ್ರಮ ಆಶ್ರಮ.

ಸಂಚಾರ

ಸೇವಾಗ್ರಮಕ್ಕೆ ಹೋಗಲು ರೈಲು ಹಾಗೂ ಬಸ್ ಅನುಕೂಲವಿದೆ. ಸೇವಾಗ್ರಮ ರೈಲು ನಿಲ್ದಾಣ ಸೀಗಾಂವ್ ನಿಂದ ಆರು ಕಿಲೋಮೀಟರ್ ದೂರದಲ್ಲಿದೆ. ನಮ್ಮ ದೇಶದ ಎಲ್ಲಾ ದಿಕ್ಕುಗಳಿಂದಲೂ ರೈಲು ಸೌಕರ್ಯವಿದೆ. ಹತ್ತಿರದ 55 ಕಿಲೋಮೀಟರ್ ದೂರದಲ್ಲಿ ನಾಗಪುರದಲ್ಲಿ ವಿಮಾನ ನಿಲ್ದಾಣವಿದೆ.

ವಿದ್ಯಾ ಸಂಸ್ಥೆಗಳು

ಸೇವಾಗ್ರಮದಲ್ಲಿ ಪ್ರಪ್ರಥಮವಾಗಿ ಗ್ರಾಮಾಂತರ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಿದರು. ಮಹಾತ್ಮ ಗಾಂಧಿ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬಾಪುರಾವ್ ದೇಶಮುಖ್ ತಾಂತ್ರಿಕ ಕಾಲೇಜುಗಳನ್ನು ಇಲ್ಲಿ ನಡೆಸುತ್ತಿದ್ದಾರೆ.

  1. https://kn.m.wikipedia.org/wiki/%E0%B2%AE%E0%B2%B9%E0%B2%BE%E0%B2%A4%E0%B3%8D%E0%B2%AE_%E0%B2%97%E0%B2%BE%E0%B2%82%E0%B2%A7%E0%B2%BF
  2. https://kn.m.wikipedia.org/wiki/%E0%B2%B8%E0%B2%AC%E0%B2%B0%E0%B2%AE%E0%B2%A4%E0%B2%BF_%E0%B2%86%E0%B2%B6%E0%B3%8D%E0%B2%B0%E0%B2%AE
  3. https://en.m.wikipedia.org/wiki/Jamnalal_Bajaj
  4. https://en.m.wikipedia.org/wiki/Kasturba_Gandhi
  5. https://en.m.wikipedia.org/wiki/Vinoba_Bhave