ಮೋಜಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
A woman holding a notebook crouches next to a theodolite on a tripod. The instrument is set up on a bank in a forest.
ಸಮಗ್ರ ಸ್ಥಾನವನ್ನು (ಟೋಟಲ್ ಸ್ಟೇಷನ್) ಬಳಸುತ್ತಿರುವ ಒಬ್ಬ ಮೋಜಣಿದಾರ

ಮೋಜಣಿಯು (ಸರ್ವೇ) ಭೂಮಿಯ ಅಥವಾ ಮೂರು ಆಯಾಮದ ಬಿಂದುಗಳ ಸ್ಥಾನಗಳನ್ನು ಮತ್ತು ಅವುಗಳ ನಡುವಿನ ದೂರಗಳ ಹಾಗೂ ಕೋನಗಳನ್ನು ನಿರ್ಧರಿಸುವ ತಂತ್ರ, ವೃತ್ತಿ ಮತ್ತು ವಿಜ್ಞಾನ. ಭೂ ಮೋಜಣಿಯ ವೃತ್ತಿಗನನ್ನು ಭೂ ಮೋಜಣಿದಾರ ಎಂದು ಕರೆಯಲಾಗುತ್ತದೆ. ಈ ಬಿಂದುಗಳು ಸಾಮಾನ್ಯವಾಗಿ ಭೂಮಿಯ ಮೇಲ್ಮೈ ಮೇಲೆ ಇರುತ್ತವೆ. ಇವನ್ನು ಹಲವುವೇಳೆ ಒಡೆತನಕ್ಕಾಗಿ ನಕ್ಷೆಗಳು ಹಾಗೂ ಗಡಿರೇಖೆಗಳನ್ನು, ಕಟ್ಟಡದ ಮೂಲೆಗಳು ಅಥವಾ ಮೇಲ್ಮೈ ಕೆಳಗಿನ ವೈಶಿಷ್ಟ್ಯಗಳ ಮೇಲ್ಮೈ ಸ್ಥಳಗಳಂತಹ ಸ್ಥಳಗಳನ್ನು ಸ್ಥಾಪಿಸಲು, ಅಥವಾ ಆಸ್ತಿ ಮಾರಟದಂತಹ ಸರ್ಕಾರಿ ಅಥವಾ ಸಿವಿಲ್ ಕಾನೂನಿಗೆ ಅಗತ್ಯವಿರುವ ಇತರ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ಮೋಜಣಿ&oldid=1059481" ಇಂದ ಪಡೆಯಲ್ಪಟ್ಟಿದೆ