ಬ್ರಹ್ಮರಾಕ್ಷಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿಂದೂ ಪುರಾಣದಲ್ಲಿ ಬ್ರಹ್ಮರಾಕ್ಷಸರು[೧][೨] ಉಗ್ರ ರಾಕ್ಷಸ ಆತ್ಮಗಳಾಗಿವೆ.

ವಿವರಣೆ[ಬದಲಾಯಿಸಿ]

ಬ್ರಹ್ಮರಾಕ್ಷಸನು ವಾಸ್ತವವಾಗಿ ಒಬ್ಬ ಬ್ರಾಹ್ಮಣನ ಆತ್ಮ, ಅಂದರೆ ಉಚ್ಚ ಜನ್ಮದ ಒಬ್ಬ ಮೃತ ವಿದ್ವಾಂಸನ ಆತ್ಮ. ತನ್ನ ಜೀವನದಲ್ಲಿ ಕೆಟ್ಟ ಕರ್ಮಗಳನ್ನು ಮಾಡಿರುವುದರಿಂದ ಅಥವಾ ತನ್ನ ಜ್ಞಾನವನ್ನು ದುರ್ಬಳಕೆ ಮಾಡಿರುವುದರಿಂದ, ತನ್ನ ಮರಣದ ನಂತರ ಬ್ರಹ್ಮ ರಾಕ್ಷಸನಾಗಿ ನರಳಬೇಕಾಗುತ್ತದೆ. ಒಳ್ಳೆ ವಿದ್ಯಾರ್ಥಿಗಳಿಗೆ ಜ್ಞಾನವನ್ನು ಹಂಚುವುದು ಅಥವಾ ಪ್ರಸಾರ ಮಾಡುವುದು ಅಂತಹ ವಿದ್ವಾಂಸನ ಭೂಬದ್ಧ ಕರ್ತವ್ಯಗಳಾಗಿರುತ್ತವೆ. ಅವನು ಹಾಗೆ ಮಾಡದಿದ್ದರೆ, ಅವನು ಮರಣದ ನಂತರ ಬಹಳ ಘೋರ ರಾಕ್ಷಸ ಆತ್ಮವಾದ ಬ್ರಹ್ಮ ರಾಕ್ಷಸನಾಗಿ ಬದಲಾಗುತ್ತಾನೆ. ಬ್ರಹ್ಮ ಶಬ್ದದ ಅರ್ಥ ಬ್ರಾಹ್ಮಣ ಮತ್ತು ರಾಕ್ಷಸನೆಂದರೆ ಪಿಶಾಚಿ. ಪ್ರಾಚೀನ ಹಿಂದೂ ಪಠ್ಯಗಳ ಪ್ರಕಾರ ಇವರು ಅನೇಕ ಶಕ್ತಿಗಳನ್ನು ಹೊಂದಿರುವ ಪ್ರಬಲ ರಾಕ್ಷಸ ಆತ್ಮಗಳಾಗಿರುತ್ತಾರೆ. ಈ ಜಗತ್ತಿನಲ್ಲಿ ಬರೀ ಕೆಲವರು ಮಾತ್ರ ಇವರೊಂದಿಗೆ ಸೆಣಸಾಡಿ ಜಯಿಸಬಹುದು ಅಥವಾ ಈ ಜೀವರೂಪದಿಂದ ಅವರಿಗೆ ಮೋಕ್ಷವನ್ನು ನೀಡಬಹುದು.

ಉಲ್ಲೇಖಗಳು[ಬದಲಾಯಿಸಿ]

  1. Brahma-rākshas A dictionary, Hindustani and English By Duncan Forbes
  2. [೧] The journal of the Anthropological Society of Bombay, 1946.