ಮದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮದ ಬಂದಿರುವ ಆನೆ

ಮದ (ಮಸ್ತಿ) ಎಂದರೆ ಗಂಡು ಆನೆಗಳಲ್ಲಿ ಕಂಡುಬರುವ ಒಂದು ಆವರ್ತಕ ಸ್ಥಿತಿ. ಇದರ ಲಕ್ಷಣಗಳೆಂದರೆ ವಿಪರೀತ ಆಕ್ರಮಣಕಾರಿ ವರ್ತನೆ, ಜೊತೆಗೆ ಸಂತಾನೋತ್ಪತ್ತಿ ಹಾರ್ಮೋನುಗಳಲ್ಲಿ ಭಾರಿ ಏರಿಕೆ. ಆದರೆ, ಹಾರ್ಮೋನು ಏರಿಕೆಯು ಮದದ ಏಕೈಕ ಕಾರಣವೇ, ಅಥವಾ ಕೇವಲ ಒಂದು ಸಹಾಯಕ ಅಂಶವೇ ಎಂಬುದು ತಿಳಿದಿಲ್ಲ. ಮದ ಸ್ಥಿತಿಯ ವೈಜ್ಞಾನಿಕ ತನಿಖೆಯು ಸಮಸ್ಯಾತ್ಮಕವಾಗಿದೆ ಏಕೆಂದರೆ ಮದದ ಅವಧಿಯಲ್ಲಿ ಅತ್ಯಂತ ಸೌಮ್ಯ ಆನೆಗಳು ಕೂಡ ಮನುಷ್ಯರು ಮತ್ತು ಇತರ ಆನೆಗಳ ವಿಷಯದಲ್ಲಿ ಬಹಳ ಹಿಂಸಾತ್ಮಕವಾಗುತ್ತವೆ.

ಹಲವುವೇಳೆ, ಮದ ಬಂದಿರುವ ಆನೆಗಳು ಟೆಂಪೋರಿನ್ ಎಂದು ಕರೆಯಲ್ಪಡುವ ಗಟ್ಟಿ ಡಾಂಬರು ರೀತಿಯ ಸ್ರಾವವನ್ನು (ಮದಜಲ, ಮದೋದಕ, ದಾನ) ತಲೆಯ ಪಾರ್ಶ್ವಗಳಲ್ಲಿನ ಗಂಡಸ್ಥಳದ ನಾಳಗಳಿಂದ ವಿಸರ್ಜಿಸುತ್ತವೆ. ಈ ಸ್ರಾವವು ಪ್ರೋಟೀನುಗಳು, ಲಿಪಿಡ್‍ಗಳು, ಇತ್ಯಾದಿಗಳನ್ನು ಒಳಗೊಂಡಿರುತ್ತದೆ.[೧] ಇದು ಸಹಜವಾಗಿ ಆನೆಯ ಬಾಯಿಯೊಳಗೆ ತೊಟ್ಟಿಕ್ಕಿ ಬೀಳುತ್ತದೆ. ಆನೆಯ ಆಕ್ರಮಣಕಾರಿ ವರ್ತನೆಗೆ ಇದು ಭಾಗಶಃ ಕಾರಣವಿರಬಹುದು. ಜೊತೆಗೆ ಗಂಡಸ್ಥಳದ ನಾಳಗಳು ಊದಿಕೊಳ್ಳುತ್ತವೆ. ಇದು ಆನೆಯ ಕಣ್ಣುಗಳಿಗೆ ಒತ್ತಿ ತೀವ್ರ ನೋವನ್ನು ಉಂಟುಮಾಡುತ್ತದೆ. ಕೆಲವೊಮ್ಮೆ ಆನೆಗಳು ಈ ನೋವನ್ನು ತಟಸ್ಥಗೊಳಿಸಲು ತಮ್ಮ ದಂತಗಳನ್ನು ನೆಲದೊಳಗೆ ಬಗೆಯುತ್ತವೆ.

ಉಲ್ಲೇಖಗಳು[ಬದಲಾಯಿಸಿ]

  1. Sukumar, R (2003). The living elephants: evolutionary ecology, behavior, and conservation. USA: Oxford University Press. p. 155. ISBN 9780195107784. Retrieved 2010-12-25. {{cite book}}: Cite has empty unknown parameter: |coauthors= (help)
"https://kn.wikipedia.org/w/index.php?title=ಮದ&oldid=904039" ಇಂದ ಪಡೆಯಲ್ಪಟ್ಟಿದೆ