ಸುಲ್ತಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸುಲ್ತಾನ್ ಹಲವು ಐತಿಹಾಸಿಕ ಅರ್ಥಗಳಿರುವ ಒಂದು ಸ್ಥಾನ. ಮೂಲತಃ, ಇದು "ಶಕ್ತಿ", "ಅಧಿಕಾರ", "ಆಳ್ವಿಕೆ" ಎಂಬ ಅರ್ಥದ ಒಂದು ಅರಬ್ಬೀ ಅಮೂರ್ತ ನಾಮಪದವಾಗಿತ್ತು. ನಂತರ, ಇದನ್ನು ವ್ಯಾವಹಾರಿಕ ಅರ್ಥದಲ್ಲಿ ಬಹುತೇಕ ಪೂರ್ಣ ಸಾರ್ವಭೌಮತ್ವವನ್ನು (ಅಂದರೆ ಯಾವ ಉನ್ನತ ಅರಸನ ಮೇಲೆ ಅವಲಂಬನೆ ಇಲ್ಲದಿರುವುದು) ಘೋಷಿಸಿಕೊಂಡ, ಆದರೆ ಸಂಪೂರ್ಣ ಖಲೀಫ಼ಗಿರಿಯನ್ನು ಘೋಷಿಸಿಕೊಳ್ಳದ ಕೆಲವು ದೊರೆಗಳ ಅಧಿಕಾರಸೂಚಕ ನಾಮವಾಗಿ, ಅಥವಾ ಖಲೀಫನ ಅಧಿಕಾರ ವ್ಯಾಪ್ತಿಯೊಳಗಿನ ಪ್ರಾಂತ್ಯದ ಒಬ್ಬ ಪ್ರಬಲ ಅಧಿಪತಿಯನ್ನು ಸೂಚಿಸಲು ಬಳಸಲಾಯಿತು. ಒಬ್ಬ ಸುಲ್ತಾನನ ವಂಶ ಮತ್ತು ಅವನು ಆಳುವ ನಾಡನ್ನು ಸಲ್ತನತ್ ಎಂದು ಸೂಚಿಸಲಾಗುತ್ತದೆ.

ಈ ಪದವು ಅರಸ ಪದದಿಂದ ಭಿನ್ನವಾಗಿದೆ, ಆದರೆ ಎರಡೂ ಪದಗಳು ಒಬ್ಬ ಸಾರ್ವಭೌಮ ಆಡಳಿತಗಾರನನ್ನು ಸೂಚಿಸುತ್ತವೆ. "ಸುಲ್ತಾನ್" ಪದದ ಬಳಕೆಯು ಮುಸ್ಲಿಮ್ ದೇಶಗಳಿಗೆ ಸೀಮಿತವಾಗಿದೆ, ಮತ್ತು ಈ ದೇಶಗಳಲ್ಲಿ ಈ ಹೆಸರು ಧಾರ್ಮಿಕ ಮಹತ್ವವನ್ನು ಹೊಂದಿದೆ.[೧] ಇದಕ್ಕೆ ತದ್ವಿರುದ್ಧವಾಗಿ ಅರಸ/ರಾಜ ಪದವು ಹೆಚ್ಚು ಜಾತ್ಯತೀತವಾಗಿದ್ದು, ಮುಸ್ಲಿಮ್ ಮತ್ತು ಮುಸ್ಲಿಮೇತರ ದೇಶಗಳು ಎರಡೂ ಕಡೆ ಬಳಸಲ್ಪಡುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. Riad Aziz Kassis (1999). The Book of Proverbs and Arabic Proverbial Works. BRILL. p. 65. ISBN 90-04-11305-3.