ಎನ್.ಎಸ್ ಮಾಧವನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎನ್.ಎಸ್ ಮಾಧವನ್
ಜನನ೯ ಸೆಪ್ಟೆಂಬರ್ ೧೯೪೮
ಎರ್ನಾಕುಳಂ, ಕೇರಳ
ವೃತ್ತಿಕಾದಂಬರಿ ಬರಹಗಾರ, ಅಂಕಣಗಾರ
ಭಾಷೆಮಲೆಯಾಳಂ
ರಾಷ್ಟ್ರೀಯತೆಭಾರತೀಯ
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆಮಹಾರಾಜ ಕಾಲೇಜು, ಎರ್ನಾಕುಳಂ
ಪ್ರಕಾರ/ಶೈಲಿಕಾದಂಬರಿ, ಸಣ್ಣಕಥೆ, ಪ್ರಬಂಧ
ವಿಷಯಸಾಮಾಜಿಕ ವಿಷಯ
ಪ್ರಮುಖ ಕೆಲಸ(ಗಳು)ಲ್ಯಾಂಥನ್ ಬಥೆರೆಯೈಲ್ ಲುಧಿನಿಯಲ್, ಹಿಗ್ವಾದಾ, ಕರಾಲ್ಮನ್ ಹಾಗೂ ಚವಿತ್ತು ನಾಡಕಮ್
ಪ್ರಮುಖ ಪ್ರಶಸ್ತಿ(ಗಳು)ಪದ್ಮರಾಜ ಪ್ರಶಸ್ತಿ, ಒಗ್ಗುಕುಳಲ್ ಪ್ರಶಸ್ತಿ, ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಾತೃಭೂಮಿ ಸಾಹಿತ್ಯ ಪ್ರಶಸ್ತಿ
ಬಾಳ ಸಂಗಾತಿಶೀಲಾ ರೆಡ್ಡಿ
ಮಕ್ಕಳುಮೀನಾಕ್ಷಿ ರೆಡ್ಡಿ ಮಾಧವನ್

ಎನ್.ಎಸ್ ಮಾಧವನ್ ಅವರು ಮಲಯಾಳಂ ಸಾಹಿತ್ಯದ ಭಾರತೀಯ ಬರಹಗಾರ. ಮಾಧವನ್ ಅವರು ಫುಟ್ಬಾಲ್ ಅಂಕಣ ಹಾಗೂ ಪ್ರವಾಸ ಲೇಖನಗಳನ್ನು ಬರೆಯುತ್ತಾರೆ.

ಆರಂಭಿಕ ಜೀವನ[ಬದಲಾಯಿಸಿ]

ಎನ್.ಎಸ್. ಮಾಧವನ್ ಅವರು ೧೯೪೮ರ ಸೆಪ್ಟೆಂಬರ್ ೯ ರಂದು ಕೇರಳದ ಕೊಚಿನ್ ಬಂದರು ನಗರದಲ್ಲಿ ಜನಿಸಿದರು. ಶ್ರೀ ರಾಮವರ್ಮಾ ಹೈಸ್ಕೂಲ್ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆದರು. ಎರ್ನಾಕುಳಂನ ಮಹಾರಾಜ ಕಾಲೇಜಿನ ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು. ಅವರು ಕೇರಳ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ಇಲಾಖೆಯಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡಿದರು.[೧] ಅವರು ೧೯೭೫ ರಲ್ಲಿ ಭಾರತೀಯ ಸೇವಾ ಪ್ರಾಧಿಕಾರಕ್ಕೆ ಸೇರಿದರು. ಬಿಹಾರದ ಕೇಡರ್ ಸದಸ್ಯರಾಗಿ ತಮ್ಮ ಆಡಳಿತಾತ್ಮಕ ವೃತ್ತಿಜೀವನವನ್ನು ಪ್ರಾರಂಭಿಸಿದರು.[೨]

ವೃತ್ತಿ ಜೀವನ[ಬದಲಾಯಿಸಿ]

೧೯೯೦ರಲ್ಲಿ ಮಾಧವನ್ ಅವರ ದಶಕದ ದೀರ್ಘಕಾಲೀನ ಬರಹ 'ಹಿಗ್ವಾದಾ' ಬಿಡುಗಡೆಯಾಯಿತು. ಮೂವತ್ಮೂರು ವರ್ಷಗಳ ನಂತರ ಬರಹಗಾರನಾಗಿ ಮಾಧವನ್ ಅವರ ಮೊದಲ ಕಾದಂಬರಿಯನ್ನು `ಲ್ಯಾಂಥನ್ ಬಥೆರೆಯಿಲ್ ಲುಧಿನಿಯಲ್' ೨೦೦೩ರಲ್ಲಿ ಬಿಡುಗಡೆಗೊಂಡಿತು. [೩]೨೦೦೬ರಲ್ಲಿ ಮಾಧವನ್ ಪ್ರಕಟಿಸಿದ ಎರಡು ನಾಟಕಗಳು ರೇಯುಮ್ ಮಾಯಮ್ ಮತ್ತು ಅರ್ಬುಧವೈಯ್ಯನ್ ಪುಸ್ತಕವಾಗಿ ಪ್ರಕಟಗೊಂಡಿವೆ. ಅವರ ಕಾದಂಬರಿ ಲ್ಯಾಂಥನ್ಬಥೆರೀಯಲ್ ಲುಧಿನಿಯಲ್ ಅನ್ನು ರಾಜೇಶ್ ರಾಜಮೋಹನ್ ಅವರು ಲಿಟನೀಸ್ ಆಫ್ ಡಚ್ ಬ್ಯಾಟರಿ ಎಂಬ ಶೀರ್ಷಿಕೆಯಡಿಯಲ್ಲಿ ಆಂಗ್ಲ ಭಾಷೆಗೆ ಭಾಷಾಂತರಿಸಿದ್ದಾರೆ. ಅಕ್ಟೋಬರ್ ೨೦೧೦ರಲ್ಲಿ ರಲ್ಲಿ ಪೆಂಗ್ವಿನ್ ಬುಕ್ಸ್ರವರು ಈ ಪುಸ್ತಕವನ್ನು ಪ್ರಕಟಿಸಿದ್ದಾರೆ.[೪]ಕರಾಲ್ಮನ್ ಹಾಗೂ ಚವಿತ್ತು ನಾಡಕಮ್ ಇವರ ಇನ್ನಿತರ ಕೃತಿಗಳು.

ಪ್ರಶಸ್ತಿ ಪುರಸ್ಕಾರಗಳು[ಬದಲಾಯಿಸಿ]

  1. ಸಣ್ಣ ಕಥೆಗಾಗಿ ೧೯೯೩ ರಲ್ಲಿ ಪದ್ಮರಾಜನ್ ಪ್ರಶಸ್ತಿಯನ್ನು ಪಡೆದರು.
  2. ೧೯೯೪ರಲ್ಲಿ ಒಗ್ಗುಕುಳಲ್ ಪ್ರಶಸ್ತಿ
  3. ಮಾತೃಭೂಮಿ ಸಾಹಿತ್ಯ ಪ್ರಶಸ್ತಿ[೫][೬]
  4. ಕಥೆ ಹಾಗೂ ಕಾಧಂಬರಿಗಾಗಿ ೩ ಬಾರಿ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.

ಉಲ್ಲೇಖಗಳು[ಬದಲಾಯಿಸಿ]

  1. http://www.bookandborrow.com/AuthorDetails.asp?autID=2667
  2. "ಆರ್ಕೈವ್ ನಕಲು". Archived from the original on 2016-06-06. Retrieved 2019-02-02.
  3. https://timesofindia.indiatimes.com/city/kochi/higuita-judge-stages-sit-in-corporation-clears-market-garbage/articleshow/64565744.cms
  4. https://www.britannica.com/art/Crossword-Book-Awards
  5. "ಆರ್ಕೈವ್ ನಕಲು". Archived from the original on 2019-02-01. Retrieved 2019-02-02.
  6. "ಆರ್ಕೈವ್ ನಕಲು". Archived from the original on 2019-02-02. Retrieved 2019-02-02.