ಖಜಾಂಚಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಖಜಾಂಚಿಯು ಒಂದು ಸಂಸ್ಥೆಯ ಖಜಾನೆಯನ್ನು ನಿರ್ವಹಿಸಲು ಜವಾಬ್ದಾರನಾದ ವ್ಯಕ್ತಿ. ಒಂದು ಕಂಪನಿಯ ಖಜಾಂಚಿಯ ಮಹತ್ವದ ಮುಖ್ಯ ಕಾರ್ಯಗಳಲ್ಲಿ ನಗದು ಹಾಗೂ ದ್ರವ ನಿರ್ವಹಣೆ, ಅಪಾಯ ನಿರ್ವಹಣೆ ಮತ್ತು ಕಂಪನಿಯ ಹಣಕಾಸು ಸೇರಿವೆ.[೧]

ಖಜಾಂಚಿಯು ಹಣವನ್ನು ಹೇಗೆ ವ್ಯಯಮಾಡಲಾಗುತ್ತದೆ ಎಂದು ಮೇಲ್ವಿಚಾರಿಸುವ ಗುಂಪಿನ ಭಾಗವೂ ಆಗಿರುತ್ತಾನೆ. ಅವನು ನೇರವಾಗಿ ಖರ್ಚುವೆಚ್ಚಗಳನ್ನು ನಿರ್ದೇಶಿಸಬಹುದು ಅಥವಾ ಅಗತ್ಯವಿದ್ದಾಗ ಅದನ್ನು ಮಂಜೂರು ಮಾಡಬಹುದು. ಸಂಸ್ಥೆಯ ಬಳಿ ತನ್ನ ಘೋಷಿತ ಗುರಿಗಳು ಮತ್ತು ಉದ್ದೇಶಗಳನ್ನು ನೆರವೇರಿಸಲು ಸಾಕಾಗುವಷ್ಟು ಹಣವಿದೆ ಎಂದು, ಮತ್ತು ಅದು ಮೀರಿ ವ್ಯಯ ಮಾಡುವುದಿಲ್ಲ, ಅಥವಾ ಕಡಿಮೆ ಖರ್ಚು ಮಾಡುವುದಿಲ್ಲ ಎಂದು ಖಾತರಿಪಡಿಸುವುದು, ಈ ಗುಂಪಿನ ಹೊಣೆಯಾಗಿರುತ್ತದೆ. ನಿಯಂತ್ರಣಗಳು ಮತ್ತು ಸಮತೋಲನವನ್ನು ಖಾತರಿಪಡಿಸಲು, ಈ ಗುಂಪು ಮಂಡಳಿ ಸಭೆಗಳು ಮತ್ತು/ಅಥವಾ ಸರ್ವಸದಸ್ಯರಿಗೆ ಸಂಸ್ಥೆಯ ಹಣಕಾಸು ಸ್ಥಿತಿಯ ವರದಿಯನ್ನೂ ಒಪ್ಪಿಸುತ್ತದೆ. ನಿಖರ ದಾಖಲೆಗಳು ಮತ್ತು ಆಧಾರದ ದಸ್ತಾವೇಜನ್ನು ಸಮಂಜಸವಾದ ವಿವರದ ಮಟ್ಟದಲ್ಲಿ ಇಡಬೇಕಾಗುತ್ತದೆ ಮತ್ತು ಇದು ಎಲ್ಲ ವಹಿವಾಟುಗಳಿಗೆ ಸ್ಪಷ್ಟ ಲೆಕ್ಕಪರಿಶೋಧನಾ ಜಾಡನ್ನು ಒದಗಿಸಬೇಕು.

ಉಲ್ಲೇಖಗಳು[ಬದಲಾಯಿಸಿ]

  1. Degenhart, Dr. Heinrich. "The Functions of a Corporate Treasury". www.treasury-management.com. Retrieved 2018-04-05. {{cite web}}: Cite has empty unknown parameter: |dead-url= (help)
"https://kn.wikipedia.org/w/index.php?title=ಖಜಾಂಚಿ&oldid=892908" ಇಂದ ಪಡೆಯಲ್ಪಟ್ಟಿದೆ