ದೀಪ್ತಿ ಶರ್ಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದೀಪ್ತಿ ಶರ್ಮ

ದೀಪ್ತಿ ಭಗವಾನ್ ಶರ್ಮ, ಓರ್ವ ಭಾರತೀಯ ಕ್ರಿಕೆಟ್ ಆಟಗಾರ್ತಿ. ಇವರು ಎಡಗೈ ಬ್ಯಾಟ್ಸಮಾನ್ ಹಾಗು ಬಲಗೈ ಆಫ್ ಬ್ರೇಕ್ ಬೌಲರ್.

ಆರಂಭಿಕ ಜೀವನ[ಬದಲಾಯಿಸಿ]

ದೀಪ್ತಿ ರವರು ಅಗಸ್ಟ್ ೨೪, ೧೯೯೭ರಂದು ಆಗ್ರಾ, ಉತ್ತರ ಪ್ರದೇಶದಲ್ಲಿ ಜನಿಸಿದರು. ದೀಪ್ತಿ ಶರ್ಮಾ, ಸುಶಿಲಾ ಮತ್ತು ಭಗವಾನ್ ಶರ್ಮಾ ದಂಪತಿಗೆ ಜನಿಸಿದರು. ಏಳು ಮಂದಿ ಒಡಹುಟ್ಟಿದವರಲ್ಲಿ ಇವರು ಕಿರಿಯರಾಗಿದ್ದಾರೆ. ಇವರ ತಂದೆ ಭಾರತೀಯ ರೈಲ್ವೆಯ ನಿವೃತ್ತ ಮುಖ್ಯ ಮೇಲ್ವಿಚಾರಕರು. ಇವರು ತಮ್ಮ ೦೯ನೇ ವಯಸ್ಸಿನಲ್ಲಿ ಕ್ರಿಕೆಟ್ ಆಟದ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು.[೧]

ವೃತ್ತಿ ಜೀವನ[ಬದಲಾಯಿಸಿ]

ಪ್ರಥಮ ದರ್ಜೆ ಕ್ರಿಕೆಟ್[ಬದಲಾಯಿಸಿ]

ದೀಪ್ತಿ ೨೦೧೭-೧೮ರಲ್ಲಿ ಹಿರಿಯ ಮಹಿಳಾ ಆಟಗಾರ್ತಿಯರಲ್ಲಿ ಜುಲಾನ್ ಗೋಸ್ವಾಮಿ ಅವರೊಂದಿಗೆ ಬಂಗಾಳಕ್ಕಾಗಿ ಆಡಿದರು. ಈ ಋತುವಿನಲ್ಲಿ ಅವರು ೦೬ ಪಂದ್ಯಗಳಲ್ಲಿ ೧೦೪ ಸರಾಸರಿಯೊಂದಿಗೆ ೩೧೨ ರನ್ನ್‌ಗಳನ್ನು ಗಳಿಸಿದರು, ಇವರು ೬೫.೧೩ರ ಆಕರ್ಷಕ ಸ್ಟ್ರೈಕ್ ರೇಟ್‍ ಹೊಂದಿದ್ದರು. ಇವರ ಅತ್ಯುನ್ನತ ಸ್ಕೋರ್ ೭೭ರ ಜೊತೆಗೆ ಐದು ಅರ್ಧಶತಕಗಳನ್ನು ಗಳಿಸಿದ್ದರು. ದೀಪ್ತಿ ಒಟ್ಟಾರೆಯಾಗಿ ೦೯ ವಿಕೇಟ್‍ಗಳನ್ನು ಗಳಿಸಿದ್ದರು. ಇವರು ಕೋಲ್ಕತ್ತಾದಲ್ಲಿ ವಿದರ್ಭ ವಿರುದ್ಧ ನಡೆದ ಪಂದ್ಯದಲ್ಲಿ ೨೬ ರನ್ನುಗಳಿಗೆ ೦೩ ವಿಕೆಟ್ ಗಳಿಸಿದ್ದು ಇವರ ಅತ್ಯುನ್ನತ ಬಾಲಿಂಗ್.[೨][೩]

ಹಿರಿಯ ಮಹಿಳಾ ದೇಶೀಯ ಕ್ರೀಡಾಋತು ೨೦೧೮-೧೯ರಲ್ಲಿ, ಬಂಗಾಳವೂ ಈಗ ಸ್ಟ್ಯಾಂಡಿಂಗ್ಗಳಲ್ಲಿ ೦೨ನೇ ಸ್ಥಾನದಲ್ಲಿದೆ. ಇವರು ಮೊದಲ ೦೬ ಪಂದ್ಯಗಳಿಂದ ೩೧೩ ರನ್ಗಳನ್ನು ಗಳಿಸಿದ್ದಾರೆ ಮತ್ತು ಪ್ರಸ್ತುತ ಋತುವಿನ ಅಗ್ರ ಸ್ಕೋರರ್‌‌ರಾಗಿದ್ದಾರೆ. ದೀಪ್ತಿ ಈಗಾಗಲೇ ೦೬ ಪಂದ್ಯಗಳಲ್ಲಿ ತಮ್ಮ ಹೆಸರಿಗೆ ೦೨ ಶತಕಗಳನ್ನು ಮತ್ತು ಒಂದು ಅರ್ಧಶತಕವನ್ನು ಗಳಿಸಿದ್ದು, ಬೆಂಗಳೂರಿನಲ್ಲಿ ಬರೋಡಾ ವಿರುದ್ಧ ೧೦೬ ರನ್ ಗಳಿಸಿದ್ದಾರೆ. ಇವರು ೧೭ ವಿಕೆಟ್ಗಳನ್ನು ಗಳಿಸಿದ್ದು, ಬೆಂಗಳೂರಿನಲ್ಲಿ ಕೇರಳ ವಿರುದ್ಧದ ನಡೆದ ಪಂದ್ಯದಲ್ಲಿ ಕೇವಲ ೧೨ ರನ್ನ್‌ಗಳಿಗೆ ೦೪ ವಿಕೇಟ್ ಗಳಿಸಿದ್ದು ಇವರ ಅತ್ಯುನ್ನತ ಬಾಲಿಂಗ್.[೪][೫]

ಅಂತರರಾಷ್ಟ್ರೀಯ ಕ್ರಿಕೆಟ್[ಬದಲಾಯಿಸಿ]

ನವಂಬರ್ ೨೪, ೨೦೧೪ರಲ್ಲಿ ಬೆಂಗಳೂರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ನಡೆದ ಮೂರನೇ ಏಕದಿನ ಪಂದ್ಯದ ಮೂಲಕ ದೀಪ್ತಿ ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ನಂತರ ಜನವರಿ ೩೧, ೨೦೧೬ರಲ್ಲಿ ಸಿಡ್ನಿಯಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವಿರುದ್ಧ ನಡೆದ ಮೂರನೇ ಟಿ-೨೦ ಕ್ರಿಕೆಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟಿ-೨೦ ಕ್ರಿಕೆಟ್ಗೆ ಪಾದಾರ್ಪನೆ ಮಾಡಿದರು.[೬][೭]

ಪಂದ್ಯಗಳು[ಬದಲಾಯಿಸಿ]

  • ಏಕದಿನ ಕ್ರಿಕೆಟ್ : ೪೨ ಪಂದ್ಯಗಳು[೮]
  • ಟಿ-೨೦ ಕ್ರಿಕೆಟ್ : ೨೪ ಪಂದ್ಯಗಳು

ಅರ್ಧ ಶತಕಗಳು[ಬದಲಾಯಿಸಿ]

  1. ಏಕದಿನ ಪಂದ್ಯಗಳಲ್ಲಿ : ೦೯

ಶತಕಗಳು[ಬದಲಾಯಿಸಿ]

  1. ಏಕದಿನ ಪಂದ್ಯಗಳಲ್ಲಿ : ೦೧

ವಿಕೇಟ್‍ಗಳು[ಬದಲಾಯಿಸಿ]

  1. ಏಕದಿನ ಪಂದ್ಯಗಳಲ್ಲಿ : ೪೯
  2. ಟಿ-೨೦ ಪಂದ್ಯಗಳಲ್ಲಿ : ೨೩

ಉಲ್ಲೇಖಗಳು[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2021-09-26. Retrieved 2018-12-26.
  2. https://www.espn.in/cricket/story/_/id/21352445/jhulan-presence-reason-bengal-signing-deepti-sharma
  3. "ಆರ್ಕೈವ್ ನಕಲು". Archived from the original on 2018-10-11. Retrieved 2018-12-26.
  4. "ಆರ್ಕೈವ್ ನಕಲು". Archived from the original on 2018-12-06. Retrieved 2018-12-26.
  5. "ಆರ್ಕೈವ್ ನಕಲು". Archived from the original on 2018-12-15. Retrieved 2018-12-26.
  6. http://www.espncricinfo.com/series/8674/scorecard/797905/india-women-vs-south-africa-women-3rd-odi-icc-womens-championship-2014-2016-17
  7. http://www.espncricinfo.com/series/11172/scorecard/895791/australia-women-vs-india-women-3rd-t20i-india-women-tour-of-australia-2015-16
  8. http://www.espncricinfo.com/india/content/player/597811.html