ಮೀ ಟೂ ಅಭಿಯಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಮೀ ಟೂ ಇಂದ ಪುನರ್ನಿರ್ದೇಶಿತ)

ಮೀ ಟೂ ಅಥವಾ ‘ನಾನು ಕೂಡ’ ಎಂಬ ಅಭಿಯಾನ ಎರಡು ಅರ್ಥಗಳನ್ನು ಒಳಗೊಂಡಿವೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರಲ್ಲಿ ‘ನಾನು ಕೂಡ’ ಎಂಬುದೊಂದು; ಲೈಂಗಿಕ ಶೋಷಣೆಗೆ ಗುರಿಯಾದ ಹೆಣ್ಣಿಗೆ ‘ನಾನು ಕೂಡ ಬೆಂಬಲಿಗರಾಗಿರುತ್ತೇವೆ’ ಎನ್ನುವುದು ಮತ್ತೊಂದು.

ಪರಿಚಯ[ಬದಲಾಯಿಸಿ]

  • ಪುರಾಣೇತಿಹಾಸದ ಕಾಲದಿಂದಲೂ ಮಹಿಳೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ತನ್ನೊಳಗೆ ಹೆಪ್ಪುಗಟ್ಟಿರುವ ಆಕ್ರೋಶ, ಮಡುಗಟ್ಟಿರುವ ವೇದನೆಗಳನ್ನು ಈ ದಿನಗಳಲ್ಲಿ ಹೊರಹಾಕುವ ದಿಟ್ಟತನ ತೋರುತ್ತಿದ್ದಾಳೆ. ಇಂದಿನ ಆಧುನಿಕ ದುಶ್ಯಾಸನ-ಕೀಚಕರಿಂದ ತಪ್ಪಿಸಿಕೊಳ್ಳಲು ಹೆಣಗುತ್ತಿದ್ದಾಳೆ.
  • # ಮೀ ಟೂ ಎಂಬ ಅಭಿಯಾನ[೧][೨]ದ ಮೂಲಕ ತನ್ನನ್ನು ಕಾಡುತ್ತಿರುವ ಮಾನಸಿಕ ಒತ್ತಡಗಳಿಂದ ಹೊರಬರಲು ಹವಣಿಸುತ್ತಿದ್ದಾಳೆ. ಲೈಂಗಿಕ ಶೋಷಣೆಗೆ ಗುರಿಯಾಗಿ ತನ್ನತನವನ್ನು ಕಳೆದುಕೊಳ್ಳುತ್ತಿರುವ ಹೆಣ್ಣಿಗೆ ಇದು ಆತ್ಮವಿಶ್ವಾಸ, ಧೈರ್ಯ, ಭರವಸೆಗಳನ್ನು ತುಂಬುತ್ತಿದೆ. ಇದರಿಂದ ಸಮಾಜದೊಳಗೆ ಒಂದು ಬಗೆಯ ಹೊಸ ಸಂಚಲನ ಶುರುವಾಗಿದೆ.

ಇತಿವೃತ್ತ[ಬದಲಾಯಿಸಿ]

  • ಈ ಐತಿಹಾಸಿಕ ಚಳುವಳಿ [೩]ಸುಮಾರು 12 ವರ್ಷಗಳ ಹಿಂದೆಯೇ ಆರಂಭಗೊಂಡರೂ ಅದು ಆಮೆ ವೇಗದಲ್ಲಿತ್ತು. 2006ರಲ್ಲಿ ಆಫ್ರಿಕನ್ ಮೂಲದ ‘ತರಾನ್ ಬರ್ಕ್’ ಎಂಬ ಮಹಿಳೆ ನ್ಯೂಯಾರ್ಕ್‍ನಲ್ಲಿದ್ದು ನಾಗರಿಕ ಹಕ್ಕುಗಳ ಹೋರಾಟಗಾರ್ತಿಯಾಗಿ ಗುರ್ತಿಸಿಕೊಂಡು, ತನ್ನ ಸುತ್ತಲೂ ನಡೆಯುತ್ತಿದ್ದ ಲೈಂಗಿಕ ದೌರ್ಜನ್ಯವನ್ನು ನಿಯಂತ್ರಿಸಲು, ಮೊಟ್ಟ ಮೊದಲಿಗೆ # ಮೀ ಟೂ ಹ್ಯಾಶ್‍ಟ್ಯಾಗ್ ಪ್ರಾರಂಭಿಸಿದಳು. ಅಂದು ‘ಸಹಾನುಭೂತಿಯ ಮೂಲಕ ಮಹಿಳಾ ಸಬಲೀಕರಣ’ ಎಂಬ ಆಶಯದೊಂದಿಗೆ ಶುರುವಾದ ಈ ಅಭಿಯಾನ ಇಂದು ತೀವ್ರಗತಿಯನ್ನು ಪಡೆದುಕೊಂಡಿದೆ.
  • ಳೆದ ವರ್ಷ ಅಕ್ಟೋಬರ್ 5ರಂದು ಹಾಲಿವುಡ್ ನಿರ್ದೇಶಕರೊಬ್ಬರ ಮೇಲೆ ‘ಅಲಿಯಾಸ್ ಮಿಲಾನೊ’ ಎಂಬ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಹ್ಯಾಶ್‍ಟ್ಯಾಗ್ ಬಳಸಿ #ಮೀ ಟೂ ಅಭಿಯಾನವನ್ನು ಚುರುಕುಗೊಳಿಸಿದಳು. ಈ ಅಭಿಯಾನ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಅನುಭವಿಸುತ್ತಿರುವ ಮಾನಸಿಕ, ದೈಹಿಕ ದೌರ್ಜನ್ಯವನ್ನು ಬಯಲು ಮಾಡಿ, ಉದ್ಯೋಗಸ್ಥ ಮಹಿಳೆಯರು ಅನುಭವಿಸುತ್ತಿರುವ ಮೂಕ ವೇದನೆಯನ್ನು ಜಗಜ್ಜಾಹೀರು ಪಡಿಸುವುದಾಗಿದೆ.

ವಾಸ್ತವ ಸಮಾಜದಲ್ಲಿ[ಬದಲಾಯಿಸಿ]

  • ಭಾರತ ದೇಶದ ಗ್ರಾಮೀಣ ಪ್ರದೇಶದಲ್ಲಿ ‘ಸೋಷಿಯಲ್ ಮಿಡಿಯಾ’ ಎಂದರೆ ಏನೆಂದು ಗೊತ್ತಿರದ ಮುಗ್ದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರ ಮೇಲಾಗುತ್ತಿರುವ ಲೈಂಗಿಕ ಶೋಷಣೆ, ಮಾನಸಿಕ ಕಿರುಕುಳ, ಮಾನಭಂಗದಂತಹ ವಿಚಾರಗಳು ಬೆಳಕಿಗೆ ಬರುವುದೇ ಇಲ್ಲ.
  • ಎಷ್ಟೋ ಮಹಿಳೆಯರಿಗೆ ಅವನ್ನು ಹೇಳಿಕೊಳ್ಳಲು ಸಾಧ್ಯವಾಗದೇ, ಆತ್ಮಹತ್ಯೆಯ ಮೊರೆ ಹೋಗಿದ್ದಾರೆ. ಬದುಕಿರುವಾಗ ಬೆಳಕಿಗೆ ಬರದ ಎಷ್ಟೋ ಘಟನೆಗಳು ಅವರು ಸತ್ತ ನಂತರ ಬೆಳಕಿಗೆ ಬಂದ ಉದಾಹರಣೆಗಳು ಸಾಕಷ್ಟಿವೆ.
  • ಅಸಂಘಟಿತ ಕ್ಷೇತ್ರದಲ್ಲಿ ದುಡಿಯುತ್ತಿರುವ, ಸೇವಾ ಭದ್ರತೆಯೇ ಇಲ್ಲದ ಬಹುಸಂಖ್ಯಾತ ಮಹಿಳೆಯರಿಗೆ # ಮೀ ಟೂ ಭರವಸೆಯ ಬೆಳಕಾಗಬೇಕಿದೆ. ಭಾರತೀಯ ಸಮಾಜದಲ್ಲಿ ಮಹಿಳೆ ಎಲ್ಲಾ ಕ್ಷೇತ್ರಗಳಲ್ಲೂ, ಎಲ್ಲಾ ವರ್ಗಗಳಲ್ಲೂ, ಎಲ್ಲಾ ಸ್ತರಗಳಲ್ಲೂ ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗುತ್ತಿದ್ದಾಳೆ. ಕಾಯ್ದೆ, ಕಾನೂನು-ಕಟ್ಟಳೆಗಳೆಲ್ಲ ಉಳ್ಳವರ ಪಾಲಾಗುತ್ತಿವೆ. ಹೆಣ್ಣನ್ನು ಲೈಂಗಿಕವಾಗಿ ಶೋಷಿಸುವರಲ್ಲಿ ಬಹುತೇಕರು ವಿದ್ಯಾವಂತ ಪುರುಷರೇ ಆಗಿದ್ದಾ

ಉಲ್ಲೇಖಗಳು[ಬದಲಾಯಿಸಿ]

  1. www.varthabharati.in/article/national/143072
  2. www.hindusthansamachar.in/news/270409.html
  3. https://kannada.boldsky.com/insync/pulse/2017/indian-women-who-stunned-the-world-with-their-bold-avatars-01[ಶಾಶ್ವತವಾಗಿ ಮಡಿದ ಕೊಂಡಿ]