ಮಿಸಳ್ ಪಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಿಸಳ್ ಪಾವ್
ಮಿಸಳ್ ಪಾವ್
ಮೂಲ
ಪರ್ಯಾಯ ಹೆಸರು(ಗಳು)ಮಿಸಳ್
ಮೂಲ ಸ್ಥಳಭಾರತ
ಪ್ರಾಂತ್ಯ ಅಥವಾ ರಾಜ್ಯಮಹಾರಾಷ್ಟ್ರ, ಗೋವಾ
ವಿವರಗಳು
ನಮೂನೆಕರಿ ಮತ್ತು ಬ್ರೆಡ್
ಬಡಿಸುವಾಗ ಬೇಕಾದ ಉಷ್ಣತೆಮುಖ್ಯ ಭಕ್ಷ್ಯ, ಬೆಳಿಗ್ಗೆ ತಿಂಡಿ, ಮಧ್ಯಾಹ್ನದ ಊಟ, ರಾತ್ರಿ ಊಟ
ಮುಖ್ಯ ಘಟಕಾಂಶ(ಗಳು)ಮೊಳಕೆ ಕಾಳುಗಳು, ಬಟಾಣಿ, ಕಡಲೆ ಮತ್ತು ಖಾರದ ಪುಡಿಯ ರಸ
ಪ್ರಭೇದಗಳುಮಿಸಳ್ ವಡಾ
ಪೋಷಕಾಂಶಗಳು550 ಕ್ಯಾಲೊರಿ

ಮಿಸಳ್ ಪಾವ್ ಮಹಾರಾಷ್ಟ್ರದ ಒಂದು ಜನಪ್ರಿಯ ಖಾದ್ಯ.[೧] ಇದು ಮಿಸಳ್ (ಸಾಮಾನ್ಯವಾಗಿ ಮೊಳಕೆ ಎಬ್ಬಿಸಿದ ಮಡಿಕೆ ಕಾಳಿನಿಂದ ತಯಾರಿಸಲಾದ ಖಾರದ ಕರಿ) ಮತ್ತು ಪಾವ್ ಅನ್ನು (ಒಂದು ಬಗೆಯ ಭಾರತೀಯ ಬ್ರೆಡ್) ಹೊಂದಿರುತ್ತದೆ.[೨][೩] ಅಂತಿಮ ಭಕ್ಷ್ಯದ ಮೇಲೆ ಆಲೂಗಡ್ಡೆ-ಚಿವ್ಡಾ ಮಿಶ್ರಣ, ಫ಼ರ್ಸಾಣ್ ಅಥವಾ ಸೇವ್, ಈರುಳ್ಳಿ, ನಿಂಬೆ ಮತ್ತು ಕೊತ್ತಂಬರಿಯನ್ನು ಉದುರಿಸಲಾಗುತ್ತದೆ.[೪] ಇದನ್ನು ಸಾಮಾನ್ಯವಾಗಿ ಬ್ರೆಡ್ ಅಥವಾ ರೋಲ್ಸ್,[೫] ಜೊತೆಗೆ ಬೆಣ್ಣೆ ಹಾಗೂ ಮಜ್ಜಿಗೆ ಅಥವಾ ಮೊಸರು ಹಾಗೂ ಹಪ್ಪಳವನ್ನು ಹಾಕಿ ಬಡಿಸಲಾಗುತ್ತದೆ. ಇದನ್ನು ಬೆಳಿಗ್ಗೆ ತಿಂಡಿಯಾಗಿ, ಲಘು ಆಹಾರವಾಗಿ ಮತ್ತು ಪೂರ್ಣ ಊಟವಾಗಿಯೂ ಬಡಿಸಲಾಗುತ್ತದೆ.[೫]

ತಯಾರಿಕೆ[ಬದಲಾಯಿಸಿ]

ಮಿಸಳ್ ಅನ್ನು ಭಾಗಶಃ ಮೊಳಕೆ ಎಬ್ಬಿಸಿದ ಕಾಳುಗಳಿಂದ ತಯಾರಿಸಲಾಗುತ್ತದೆ,[೬] ಇದು ಕಡಿಮೆ ಪ್ರಮಾಣದ ನೀರಿನಾಂಶವನ್ನು ಹೊಂದಿರುತ್ತದೆ, ಜೊತೆಗೆ ನೀರುನೀರಾಗಿರುವ, ಖಾರದ ಕಟ್ ಅಥವಾ ರಸ್ಸಾದಿಂದ ತಯಾರಿಸಲಾಗುತ್ತದೆ. ಇದು ಎರಡು ಭಾಗಗಳನ್ನು ಹೊಂದಿರುತ್ತದೆ, ಉಸಳಿ ಎಂದು ಕರೆಯಲಾಗುವ ಮಡಿಕೆ ಕಾಳಿನ ಗಟ್ಟಿ ಕರಿ. ನೀರುನೀರಾಗಿರುವ ರಸವನ್ನು[೪] ರಸ್ಸಾ ಎಂದೂ ಕರೆಯಲಾಗುತ್ತದೆ.[೭] ಸಾಮಾನ್ಯವಾಗಿ ಜನರು ತಮ್ಮ ರುಚಿ ಹಾಗೂ ಅಗತ್ಯದ ಪ್ರಕಾರ ಇವೆರಡನ್ನೂ ಮಿಶ್ರಣ ಮಾಡುತ್ತಾರೆ. ಮಡಿಕೆ ಕಾಳು ಲಭ್ಯವಿಲ್ಲದಿದ್ದರೆ, ಕೆಲವೊಮ್ಮೆ ಇದನ್ನು ಹೆಸರು ಕಾಳು ಬಳಸಿ ತಯಾರಿಸಲಾಗುತ್ತದೆ.[೫] ಇದನ್ನು ಭಾರತೀಯ ದೊಡ್ಡ ಸೇವ್‍ನಿಂದ ಅಲಂಕರಿಸಬಹುದು.[೫] ಉಸಳಿಯನ್ನು ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಮತ್ತು ಇತರ ಸಂಬಾರ ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತದೆ.[೪][೮]

ಉಲ್ಲೇಖಗಳು[ಬದಲಾಯಿಸಿ]

  1. "Top 6 Misal Pav joints in Mumbai". Free Press Journal. August 14, 2015. Retrieved May 24, 2016.
  2. "Mumbai's Misal Pav Beats Dishes From Across The World. Crowned World's Tastiest Veg Snack!". indiatimes.com. June 5, 2015. Retrieved May 24, 2016.
  3. Doctor, Vikram (June 17, 2015). "The healthy snack that needs more attention: misal pav". Times Of India Blogs. Retrieved May 24, 2016.
  4. ೪.೦ ೪.೧ ೪.೨ "Misal Pav". NDTV Food. November 30, 2011. Retrieved May 24, 2016.
  5. ೫.೦ ೫.೧ ೫.೨ ೫.೩ Hingle, R. (2015). Vegan Richa's Indian Kitchen: Traditional and Creative Recipes for the Home Cook. Vegan Heritage Press, LLC. p. pt237. ISBN 978-1-941252-10-9. Retrieved May 25, 2016.
  6. Goela, S. (2015). India on my Platter:. OM Books International. p. 107. ISBN 978-93-83202-04-1. Retrieved May 25, 2016.
  7. Gowardhan, M. (2015). Indian Kitchen: Secrets of Indian home cooking: Secrets of Indian home cooking. Hodder & Stoughton. p. pt91. ISBN 978-1-4447-9456-4. Retrieved May 25, 2016.
  8. "A preparation method for Misal Pav". TV Show. 2010-01-11. Retrieved 1 May 2015.

ಚಿತ್ರಗಳು[ಬದಲಾಯಿಸಿ]