ಆತ್ರೇಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಚಿತ್ರ:Atreyamuni.jpg
Rishi Atreya


ಆತ್ರೇಯ ಅತ್ರಿ ಋಷಿಯ ಮಗ. ವಾಮದೇವ ಋಷಿಯ ಶಿಷ್ಯನಾಗಿ ಬ್ರಹ್ಮಜ್ಞಾನವನ್ನು ಪಡೆದ. ಜನಮೇಜಯ ಸರ್ಪಕುಲವನ್ನು ನಾಶಮಾಡಲು ಸರ್ಪಯಾಗವನ್ನು ಮಾಡುವ ಸಮಯದಲ್ಲಿ ಪುರೋಹಿತ ಸೋಮಶ್ರವನಿಗೆ ನೆರವಾದ ಯಜ್ಞ ಸದಸ್ಯರಲ್ಲಿ ಒಬ್ಬ. ವಿದುರನಿಗೆ ಜ್ಞಾನೋಪದೇಶ ಮಾಡಿದ ವೃತ್ತಾಂತ ಭಾಗವತದಲ್ಲಿ ಬರುತ್ತದೆ. ಇವನು ತಕ್ಷಶಿಲೆಯ ನಿವಾಸಿ ಎಂದು ಹೇಳಲಾಗುತ್ತದೆ.ಆಯುರ್ವೇದದ ವಿದ್ವಾಂಸ.ಗಾಂಧಾರದ ರಾಜ ನಗ್ನಜಿತನಿಗೆ ವೈದ್ಯನಾಗಿದ್ದ ಎಂದು ನಂಬಲಾಗಿದೆ.[೧] ಚರಕ ಸಂಹಿತೆಯ ಮೂಲ ಅಂಶಗಳು ಆತ್ರೇಯನದೇ ಅದನ್ನು ಮತ್ತೆ ಅಗ್ನಿವೇಶ ಮತ್ತು ಚರಕರು ಕ್ರೋಢೀಕರಣಗೊಳಿಸಿದರು ಎಂದೂ ಹೇಳಲಾಗುತ್ತಿದೆ.[೨]


ಉಲ್ಲೇಖಗಳು[ಬದಲಾಯಿಸಿ]

  1. Mohammad Ali Jazayery, Werner Winter (1988). Languages and Cultures: Studies in Honor of Edgar C. Polomé. Walter de Gruyter. p. 116.
  2. Surendranath Dasgupta (1922). A History of Indian philosophy. Vol. 1. p. 284.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಆತ್ರೇಯ&oldid=831564" ಇಂದ ಪಡೆಯಲ್ಪಟ್ಟಿದೆ