ಸದಸ್ಯ:ಕೋಣನಕುಂಟೆ ಜಿ ವೆಂಕಟೇಶ/ನನ್ನ ಪ್ರಯೋಗಪುಟ
ಗೋಚರ
ಬಾರಿಸು ಸಂಜೀವಿನಿ ಡಿಂಡಿಮವ
ಬಾರಿಸು ಸಂಜೀವಿನಿ ಡಿಂಡಿಮವ
ಓ ಪಂಚಾಯ್ತಿ ಎಂಸಿಆರ್ ಪಿಯವ್ವ //ಪ//
ಸಾಲುಮರದ ತಿಮ್ಮಕ್ಕನಂತೆ ಮಾದರಿಯಾಗವ್ವ
ಸೇವಾ ಮನೋಭಾವದಿಂದ ಸೇವೆ ಮಾಡವ್ವ //ಬಾರಿಸು//
ಪಂಚಾಯ್ತಿ ಹಳ್ಳಿ ಹಳ್ಳಿಗೂ ನೀನು ತಿರುಗವ್ವ
ಮಾಹಿತಿ ಕಣಜವಾಗಬೇಕು ನೀನು ಕಣವ್ವ //ಬಾರಿಸು//
ಸತ್ತಂತಿರುವ ಸಂಘಗಳ ನೀ ಬಡಿದೆಚ್ಚರಿಸವ್ವ
ಕಚ್ಚಾಡುವ ಸಂಘಗಳ ಕೂಡಿಸಿ ಒಲಿಸವ್ವ //ಬಾರಿಸು//
ಹೊಟ್ಟೆ ಕಿಚ್ಚಿಗೆ ತಣ್ಣೀರು ಸುರಿಸವ್ವ
ಒಟ್ಟಾಗಿ ಲೆಕ್ಕಾಚಾರದಿ ಸಂಘ ಸೇರಂಗೆ ಮಾಡವ್ವ//ಬಾರಿಸು//
ಸಂಘದ ಪಂಚಸೂತ್ರದ ಮಂತ್ರ ನೀ ಸಾರವ್ವ
ಪಂಚಾಯ್ತಿ ಪಂಚತಂತ್ರಕ್ಕೆ ಸಂಘ ಸೇರಂಗೆ ಮಾಡವ್ವ //ಬಾರಿಸು//
ಸರಕಾರಕ್ಕೂ ಸಂಘಗಳಿಗೂ ಸರಪಳಿ ನೀನವ್ವ
ಸಂಘಗಳ ಸಂಜೀವಿನಿ ಸೂತ್ರದಾರ ನೀನವ್ವ //ಬಾರಿಸು//
ರಚನೆ: ಪಂಚಾಯ್ತಿ ಕವಿ ಜಿ.ವೆಂಕಟೇಶ ಬಿ.ಕಾಂ, ಎಂ.ಎ (ಕನ್ನಡ)
ಮನಗಳ ಗೆಲ್ಲೋ ಮಾತುಗಾರ
ಕ್ಲರ್ಕ್ ಕಮ್ ಡೇಟಾ ಎಂಟ್ರಿ ಆಪರೇಟರ್
ಅಗರ ಗ್ರಾಮ ಪಂಚಾಯಿತಿ
ಕೆಂಗೇರಿ ಹೋಬಳಿ, ಬೆಂ.ದ.ತಾ.
ಬೆಂಗಳೂರು – 560082.