ಚಿಕ್ಕಣ್ಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿಕ್ಕಣ್ಣ 
ಇಷ್ಟಕಾಮ್ಯ ಚಿತ್ರೀಕರಣ ವೇಳೆಯಲ್ಲಿ  ಚಿಕ್ಕಣ್ಣ 
ಜನನ (1986-10-08) ೮ ಅಕ್ಟೋಬರ್ ೧೯೮೬ (ವಯಸ್ಸು ೩೭)
ಬಲ್ಲಹಳ್ಳಿ, ಮೈಸೂರು 
ರಾಷ್ಟ್ರೀಯತೆಭಾರತೀಯ
ಉದ್ಯೋಗನಟ
ಸಕ್ರಿಯ ವರ್ಷಗಳು2011–ಪ್ರಸ್ತುತ
ಇದಕ್ಕೆ ಖ್ಯಾತರುಹಾಸ್ಯ ಪಾತ್ರಗಳು

ಚಿಕ್ಕಣ್ಣ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ನಟ . ಇವರು ಮುಖ್ಯವಾಗಿ ಹಾಸ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಯಶ್ ನಾಯಕತ್ವದ ಕಿರಾತಕ ಇವರ ಮೊದಲ ಚಿತ್ರ. ರಾಜಹುಲಿ ಮತ್ತು ಅದ್ಯಕ್ಷ ಚಿತ್ರ ಗಳಲ್ಲಿನ ಇವರ ಹಾಸ್ಯಮಯ ನಟನೆಯಿ೦ದ ಕನ್ನಡದ ಒಬ್ಬ ಅತ್ತ್ಯುತ್ತಮ ಹಾಸ್ಯನಟ ಎನಿಸಿಕೊ೦ಡಿದ್ದಾರೆ. ಹೀಗೆ ಹಲವು ಕನ್ನಡ ಚಿತ್ರಗಳಲ್ಲಿ ನಟಿಸಿರುವ ಇವರು ಕಾಮಿಡಿ ಪಾತ್ರಗಳಲ್ಲಿ ಸೇರಿಂದಂತೆ ಕೆಲ ನಾಯಕ ಪಾತ್ರದಲ್ಲೂ ಚಿಕ್ಕಣ್ಣ ಕಾಣಿಸಿಕೊಂಡಿದ್ದಾರೆ

ವೃತ್ತಿಜೀವನ[ಬದಲಾಯಿಸಿ]

ಚಿಕ್ಕಣ್ಣ ಅವರು ನಟನಾ ವೃತ್ತಿಜೀವನವನ್ನು ಮೈಸೂರು ದೃಶ್ಯ ಕಲಾವಿದೆ ಹಾಸ್ಯ ಕಾರ್ಯಕ್ರಮಗಳಲ್ಲಿ ಪ್ರಾರಂಭಿಸಿದರು. ನಂತರ ಅವರು ಉದಯ ಟಿವಿಯಲ್ಲಿ  ಕಾಣಿಸಿಕೊಂಡರು. ನಟ ಯಶ್ ಅವರು ಕನ್ನಡ ಚಲನಚಿತ್ರದ ವಜ್ರ ಮಹೋತ್ಸವದಲ್ಲಿ ಇವರ ಅಭಿನಯವನ್ನು ನೋಡಿ ಕಿರಾತಕ ಚಿತ್ರದಲ್ಲಿ ಅವಕಾಶ ಕೊಟ್ಟರು. ನಂತರ ಇವರು ರಾಜಾಹುಲಿ(2013) ಮತ್ತು ಅದ್ಯಕ್ಷ(೨೦೧೪)   ಚಿತ್ರಗಳಲ್ಲಿ ವಿಭಿನ್ನ ರೀತಿಯಲ್ಲಿ ಕಾಣಿಸಿಕೊಂಡು ಜನಮನ್ನಣೆ ಗಳಿಸಿಕೊಂಡಿದ್ದಾರೆ .