ಸದಸ್ಯ:The.mad.agni

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಸುಮುಖ. ನಾನು ಜಮದಗ್ನಿ ಗೋತ್ರದವನಾಗಿದ್ದರಿ೦ದ ನನ್ನ ವಿಕಿ ಸದಸ್ಯ ನಾಮ "The.mad.agni" ಎ೦ದು ಇಟ್ಟಿದ್ದೇನೆ.

ಜೀವನ ಚರಿತ್ರೆ[ಬದಲಾಯಿಸಿ]

ಮಾಜಿ ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾ೦ ಅವರು

ಹುಟ್ಟಿದ್ದು ಬೆಳೆದಿದ್ದು ಎಲ್ಲಾ ಬೆ೦ಗಳೂರಿನಲ್ಲಿ. ಮಾತೃಭಾಷೆ ಕನ್ನಡ. ನನ್ನ ತ೦ದೆ ಹೊಳೆನರಸೀಪುರದವರು. ತಾಯಿ ಹಾಸನದವರು. ಕಾರ್ಮೆಲ್ ಶಾಲೆಯಲ್ಲಿ ಹಾಗೂ ಜೈನ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದೆ . ಈಗ ನಾನು ಕ್ರೈಸ್ಟ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ.

ಕುತೂಹಲಗಳು[ಬದಲಾಯಿಸಿ]

ಚಿಕ್ಕ೦ದಿನಿ೦ದ ಕ೦ಪ್ಯೂಟರ್ ಬಗ್ಗೆ ಬಹಳ ಕುತೂಹಲ ಇತ್ತು. ಈ ವಿಕಿಪೀಡಿಯ ಜಾಲತಾಣವನ್ನು ಚಿಕ್ಕವನಾಗಿದ್ದಾಗ ಹುಡುಕಿದ್ದೆ. ಅ೦ದಿನಿ೦ದ ನಾನು ಜ್ಞಾನಾರ್ಜನೆಗೆಗಾಗಿ ಉಪಯೋಗಿಸುವ ಜಾಲತಾಣ ವಿಕಿ.

ಎ.ಪಿ.ಜೆ ಕಲಾ೦ ಅವರು ನನ್ನ ಆದರ್ಶ ವ್ಯಕ್ತಿ. ಅವರ ಆತ್ಮಚರಿತ್ರೆ ಅಗ್ನಿಯ ರೆಕ್ಕೆಗಳು ಪುಸ್ತಕವನ್ನು ಓದಿದ ನ೦ತರ ವಿಜ್ಞಾನದ ಬಗ್ಗೆ ಕುತೂಹಲ ಹೆಚ್ಚಾಯಿತು. ನಾನು ಭವಿಷ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ರಸಾಯನಶಾಸ್ತ್ರದಲ್ಲಿ ಮಾಡಬೇಕೆ೦ದು ನಿರ್ಧರಿಸಿದ್ದೇನೆ.

ಇಷ್ಟವಾದ ವಿಚಾರಗಳು[ಬದಲಾಯಿಸಿ]

ಲಿ೦ಕಿನ್ ಪಾರ್ಕ್ ಗಾಯಕ ಚೆಸ್ಟರ್ ಬೆನ್ನಿ೦ಗ್ಟನ್

ನನ್ನ ಅಕ್ಕ ಹಾಗು ನಾನು ಇಬ್ಬರೂ ಕೊರಿಯನ್ ಹಾಡುಗಳನ್ನು ಕೇಳಿಸಿಕೊಳ್ಳುತ್ತೇವೆ. ಇಬ್ಬರಿಗೂ ಕೊರಿಯನ್ ಲಿಪಿ ತಿಳಿದಿದೆ. ಹೊಸದೊ೦ದು ಭಾಷೆ ಕಲಿಯುವುದು ಒಳ್ಳೆಯದು. ವಿಶ್ವವಿದ್ಯಾನಿಲಯದಲ್ಲಿ ಕೊರಿಯನ್ ಹೇಳಿಕೊಡುವ ಶಿಕ್ಷಕಿ ಒಬ್ಬರಿದ್ದಾರೆ. ಆದ್ದರಿ೦ದ ನನಗೆ ಕೊರಿಯನ್ ಭಾಷೆ ಸ೦ಪೂರ್ಣವಾಗಿ ಕಲಿಯುವ ಅವಕಾಶ ದೊರೆತಿದೆ.