ಮುರಳಿ ವಿಜಯ
ಮುರಳಿ ವಿಜಯ ೧ ಏಪ್ರಿಲ್ ೧೯೮೪ರಲ್ಲಿ ಭಾರತದ ತಮಿಳುನಾಡಿನ ಚೆನ್ನೈನ್ನಲ್ಲಿ ಹುಟ್ಟಿದರು.ಭಾರತ ಕ್ರಿಕೆಟ್ ತಂಡದ ಆಟಗಾರ.ಇವರು ಆರಂಭಿಕ ಕ್ರಮಾಂಕದ ಬಲಗೈ ಬ್ಯಾಟ್ಸ್ ಮ್ಯಾನ್. ಇವರು ಮಧ್ಯಮ ವೇಗದ ಬೌಲಿಂಗ್ ಕೂಡ ಮಾಡಬಲ್ಲರು. ಇವರು ಐ.ಪಿ.ಎಲ್ ನ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕರಾಗಿದ್ದರೆ.ಇವರು ತಮಿಳುನಾಡು ತಂಡಕ್ಕೆ ಅಯ್ಕೆಯಾಗುವ ಮುನ್ನ ಕ್ಲಬ್ ಕ್ರಿಕೆಟ ಆಡುತ್ತಿದ್ದರು.೨೦೦೬-೨೦೦೭ರಲ್ಲಿ ನೆಡೆದ ರನಜಿ ಟ್ರೋಫಿಯಲ್ಲಿ ಅತ್ತೀ ಹೆಚ್ಚು ರನ್ ಗಳಿಸಿದವರಲ್ಲಿ ಒಬ್ಬರಾಗಿದ್ದರು.ಇವರು ೨೦೦೮ರಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಕ್ರಿಕೆಟಗೆ ಆರಂಭಿಕ ಬ್ಯಾಟ್ಸ್ ಮ್ಯಾನಾಗಿ ಅಯ್ಕೆಯಾದರು.
ರಣಜಿ ಟ್ರೋಫಿ ಪಂದ್ಯಾವಳಿ
[ಬದಲಾಯಿಸಿ]ಅವರು ತಮ್ಮ ಸರಾಸರಿ ಆಟಕ್ಕಿಂತ ಅವರ ಪ್ರದರ್ಶನ ಕಡಿಮೆಯಾದರೂ ಅವರನ್ನು ರಣಜ ಏಕ ದಿನ ಟ್ರೋಫಿಗೆ ಅವರನ್ನು ಆಯ್ಕೆಯಾದರು. ಅವರನ್ನು ಬೆಂಗಳೂರು ವಿರುದ್ದ ಫೆಭ್ರವರಿ ೧೬ರಂದು ಅವರು ಆಟವಾಡಿ ಅದರಲ್ಲಿ ೧೭ರನ್ ಗಳನ್ನುಗಳಿಸಿದರು.ಅವರು ಆ ಸರಣಿಯ ಕ್ವಾರ್ಟರ ಫೈನಲ್ನಲ್ಲಿ ೩೮ ರನ್ ಗಳನ್ನು ರೈಲ್ವೆಸ್ ವಿರುದ್ದ ಗಳಿಸಿ ಅ ಪಂದ್ಯವನ್ನು ಅವರು ೧ ರನ್ ಗಳಿಂದ ಸೋತರು.ವಿಜಯ ಅವರು ೨೦೦೬-೨೦೦೭ರಲ್ಲಿ ನೆಡೆದ ರಣಜಿ ಟ್ರೋಫಿಯಲ್ಲಿ ಒಬ್ಬ ಪ್ರಸಿದ್ಧ ಬ್ಯಟ್ಸ್ ಮ್ಯಾನಾಗಿ ಹೊರ ಬಂದರು. ಆಸರಣಿಯಲ್ಲಿ ಅವರು ಮೂರನೆ ಅತ್ಯಧಿಕ ರನ್ ಗಳಿಸಿದರು.ಅ ಸರಣಿಯಲ್ಲಿ ಮೂದಲನೆ ಸ್ಥನವನ್ನು ರಾಬಿನ್ ಉತ್ತಪ್ಪ ಪಡೆದರು, ಎರಡನೆಯದಾಗಿ ಮನೋಜ ತಿವಾರಿಯವರು ಪಡೆದರು. ಇವರು ತಮ್ಮ ಪ್ರಥಮ ಪಂದ್ಯವನ್ನು ಡೆಲ್ಲಿ ವಿರುದ್ದವಅಡಿ ಅದರಲ್ಲಿ ಅವರು ಅರ್ಧಶತಕ ಸಿಡಿಸಿದರು. ಇವರು ತನ್ನತ್ತ ೨ ಶತಕ ಮತ್ತು ೧ ಅರ್ಧಶತಕವನ್ನು ಅವರ ಖ್ಯಾತೆಯಲ್ಲಿತ್ತು.ಅವರು ೨೦೦೬-೨೦೦೭ ರಲ್ಲಿ ನೆಡೆದ ರಣಜಿ ಏಕದಿನದಲ್ಲಿ ಒಳ್ಳೆಯ ಆಟವಾಡಿ ಒಟ್ಟು ೭ ಪಂದ್ಯಗಳಲ್ಲಿ ೨೭೭ರನ್ ಗಳನ್ನು ಹೊಡೆದರು. ಅವರು ಅ ಸರಣಿಯಲ್ಲಿ ೧೧೨ ಅವರ ಹೆಚ್ಚಿನ ರನ್ ಹೊಡೆದ ಪಂದ್ಯ.೨೦೦೭-೨೦೦೮ರಲ್ಲಿ ನೆಡೆದ ಪಂದ್ಯದಲ್ಲಿ ಒಟ್ಟು ೭ ಪಂದ್ಯ ಆಟವಾಡಿ ಅದರಲ್ಲಿ ೫೮೨ ರನ್ನಗಳಿಸಿದರು. ಅ ಸರಣಿಯಲ್ಲಿ ೨ ಶತಕ ಮತ್ತು ೨೩೦ ರ ಹಿಚ್ಚಿನ ರನ್ ಸೌರಾಷ್ಟ್ರದ ವಿರುದ್ದ ಹೊಡೆದರು. ರಣಜಿಯ ನಂತರ ಅವರು ೨೦೦೭-೨೦೦೮ ದಕ್ಷಿಣವಲಯದ ದುಲೀಪ ಟ್ರೋಫಿಯನ್ನು ಉತ್ತರವಲಯದ ವಿರುದ್ದ ಪಂದ್ಯವಾಡಿ ಅವರು ಶೊಣ್ಯ ರನ್ ಗಳಿಸಿದರು ಹಾಗೊ ೨ನೇ ಪಂದ್ಯ ಪೊರ್ವವಲಯದಲ್ಲಿ ಆಡಿ ೩೯ರನ್ ಗಳಿಸಿದರು.
ಟೆಸ್ಟ್ ಪಂದ್ಯಾವಳಿ
[ಬದಲಾಯಿಸಿ]೨೦೦೮ ಸೆಪ್ಟೆಂಬರ್ ನಲ್ಲಿ ವಿಜಯರವರನ್ನು ಭಾರತ ತಂಡಕ್ಕೆ ಆಯ್ಕೆಮಾಡಿ ಅವರನ್ನು ನ್ಯೂಜಲ್ಯಾಂಡ ವಿರುದ್ದ ೪ ದಿನದ ಟೆಸ್ಟ್ ಪಂದ್ಯವಾಡಲು ಅವಕಾಶ ಮಾಡಿಕೊಡಲಾಗಿತ್ತು.ಅವರು ಅ ಪಂದ್ಯದಲ್ಲಿ ೪೫ ಮತ್ತು ೫೯ರನ್ಗಳಿಸಿ ಭಾರತ ೧೨೯ರನ್ ಗಳ ಅಂತರದಿಂದ ಸಹಾಯವಾಯಿತು.ಅವರು ಆರಂಭಿಕ ಬ್ಯಾಟ್ಸ್ ಮ್ಯಾನಾಗಿ ಆಡಿದ ಪಂದ್ಯದಲ್ಲಿ ಅವರು ೯೮ ಮತ್ತು ಶೊಣ್ಯ ರನ್ ಗಳಿಸಿದ ಪಂದ್ಯದಲ್ಲಿ ಭಾರತ ತಂಡವು ನ್ಯುಜಿಲ್ಯಾಂಡ ವಿರುದ್ದ ಸೋಲು ಕಂಡಿತ್ತು.೨೦೦೮ ಅಕ್ಟೋಬರ್ ನಲ್ಲಿ ವಿಜಯ ಅವರ ಹೆಸರನ್ನು ಚಾಲೆಂಜರ್ ಟ್ರೋಫಿಗೆ ಆಯ್ಕೆ ಮಾಡಿ ಅದರಲ್ಲಿ ಅವರ ಅತಿ ಹೆಚ್ಚು ರನ್ ಗಳಿಸಿದವರ ಪೈಕಿ ಎರಡನೇಯವರಾಗಿದರು ಅದರಲ್ಲಿ ಅವರು ೧೬೪ ರನ್ನ್ ಗಳಿಸಿದರು. ವಿಜಯ ಅವರು ಆಸ್ಟ್ರೇಲಿಯಾ ವಿರುದ್ದ ಬಾರಡರ್ ಗವಾಸ್ಕರ ಟ್ರೋಫಿ ನಾಗಪುರದಲ್ಲಿ ಆಡಿದರು ವಿಜಯ ಅವರು ವಿರ್ರೇಂದ್ರ ಸೆಹ್ವಾಗ್ ಜೊತೆ ಆಟ ಆರಂಭಿಸಿದರು ಹಾಗೂ ಇವರು ಒಂದು ಒಳ್ಳೆಯ ಆರಂಭವನ್ನು ನಿಡಿದರು ಇವರು ೩೩, ೪೧, ೯೮ ಮತ್ತು ೧೧೬ ರನ್ ಗಳನ್ನುಗಳಸಿದರು. ವಿಜಯ ಅವರು ಮ್ಯಾಥಿವ್ ಹೆಡ್ಡನ್ ಮತ್ತು ಮೈಕ್ ಹಸ್ಸಿಯವರನ್ನು ಔಟ್ ಮಾಡಿದರು.ಅವರು ಇಲ್ಲಿಯವರೆಗೂ ೩೭ ಟೆಸ್ಟ್ ಪಂದ್ಯವಾಡಿ ಅದರಲ್ಲಿ ೨೩೬೦ ರನ್ ಗಳನ್ನು ಗಳಿಸಿದಾರೆ.
ಅಂತರಾಷ್ಟ್ರೀಯ ಏಕದಿನ ಪಂದ್ಯಾವಳಿ
[ಬದಲಾಯಿಸಿ]ವಿಜಯ ಅವರನ್ನು ಅಂತರಾಷ್ಟ್ರೀಯ ಏಕದಿನದ ಪಂದ್ಯವಳಿಗೆ ಅವರನ್ನು ಅಯ್ಕೆಮಾಡಿದರು.ಅದರೆ ಅವರಿಗೆ ಇಂಗಲ್ಯಾಂಡ ವಿರುದ್ದ ಆಡಲು ಅಚಕಾಶ ಸಿಗಲ್ಲಿಲ.೨೦೦೯ ಡಿಸ್ಂಬರ್ ನಲ್ಲಿ ವಿಜಯವರಿಗೆ ಶ್ರೀಲಂಕಾದ ವಿರುದ್ದ ಆಡಲು ಅವಕಾಶ ನೀಡಲಾಯಿತ್ತು. ಅ ಪಂದ್ಯದಲ್ಲಿ ಅವರು ೮೭ ರನ್ ಗಳಿಸಿದರು ಹಾಗು ಭಾರತ ತಂಡವು ಅ ಪಂದ್ಯವನ್ನು ಗೆದ್ದು ಪ್ರಥಮ ಟೆಸ್ಟ್ ಕ್ರಿಕೆಟ ಸ್ಥಾನಕ್ಕೆ ತಲುಪಿತ್ತು. ವಿಜಯ ಅಂತರಾಷ್ಟ್ರೀಯ ಏಕದಿನ ಪಂದ್ಯವನ್ನು ದಕ್ಷಿಣ ಆಫ್ರಿಕಾದ ವಿರುದ್ದವಾಡಿ ಕೊನೆಯ ದಿನದಂದು ೨೭ ಫೆಭ್ರವರಿ ೨೦೧೦ರಲ್ಲಿ ಆಡಿ ೨೫ ರನ್ ಗಳಿಸಿದರು. ೧೪ ಏಕ ದಿನ ಪಂದ್ಯಗಳಲ್ಲಿ ಅವರು ೩೨೫ ರನ್ ಗಳಿಸಿದಾರೆ.
ಐ.ಪಿ.ಎಲ್
[ಬದಲಾಯಿಸಿ]ಐ.ಪಿ.ಎಲ್ ನಲ್ಲಿ ವಿಜಯ ತನ್ನ ತವರೂರು ಚೆನೈ ಸೂಪರ್ ಕಿಂಗ್ಸ್ ಪರ ಆಡಿದರು. ಅವರು ೬ನೇ ಐ.ಪಿ.ಎಲ್ ನವರೆಗೂ ಅವರು ಚನೈ ಪರ ಆಡಿದರು. ಅದರಲ್ಲಿ ಅವರೋಬ್ಬ ಪ್ರಸಿದ್ದ ಆಟಗರಾಗಿದರು ಚನೈ ಪ್ರಥಮ ಬಾರಿಗೆ ವಿಜಯದ ಪಟ್ಟ ಏರುವುದಕ್ಕೆ ಇವರ ಕೊಡುಗೆ ಇತ್ತು.ಅವರು ಪ್ರಥಮ ಐ.ಪಿ.ಎಲ್ ನ ಶತಕ ೧೨೭ ರನ್ ೫೬ ಎಸೆತಗಳಲ್ಲಿ ರಜಾಸ್ಥಾನದ ವಿರುದ್ದ ಗಳಿಸಿ ಅವರು ಪಂದ್ಯ ಶ್ರೇಷ್ಠ ಆಟಗರಾಗಿದರು ಮತ್ತು ಅವರು ಅ ಸರಣಿಯ ಶ್ರೇಷ್ಠ ಆಟಗರ ಸಹ ಹಾಗಿದರು.೬ನೇ ಐ.ಪಿ.ಎಲ್ ನಲ್ಲಿ ಅವರು ೯೫ ರನ್ ಕೇವಲ ೫೨ ಎಸೆತಗಳಲ್ಲಿ ಗಳಿಸಿ ಅ ಪಂದ್ಯವನ್ನು ಚನೈ ಪರ ಮಾಡಿಕೊಟ್ಟರು. ೨೦೧೨ನೇ ಐ.ಪಿ.ಎಲ್ ಅವರು ಮೊದಲು ಒಳ್ಲೆಯ ಆಟ ಪ್ರದರ್ಶಸಿಲ್ಲಿಲ, ಅದರೆ ೪ನೇಯ ಆಟದ ನಂತರ ಅವರು ತಮ್ಮ ಆಟದ ಕಡೆ ಗಮನ ವಹಿಸಿ ಮರಳಿ ಅವರು ೧೧೩ ರನ್ ಗಳನ್ನು ಕೇವಲ ೫೯ ಎಸೆತಗಳಲ್ಲಿ ಗಳಿಸಿದರು.ಈಗ ಅವರು ಪ್ರಸ್ತುತ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕರಾಗಿದಾರೆ. ಬೌಲಿಂಗ ನಲ್ಲಿಯು ಅವರು ಅತ್ಯತ್ತಮ ಪ್ರದರ್ಶನ ಕೊಟ್ಟಿದಾರೆ.ಅವರು ಆನೇಕ ಎದುರಾಳಿ ಆಟಗಾರರ ವಿಕೆಟನ್ನು ಪತನ ಮಾಡಿದಾರೆ. ಅವರು ಬ್ಯಾಟಿಂಗ ಮತ್ತು ಬೌಲಿಂಗ ಅಲ್ಲದೆ ಕ್ಷೇತ್ರ ರಕ್ಙಣೆಯ ಕಾರ್ಯವನ್ನು ಸಹ ಅವರು ನಿರ್ವಹಿಸುತಿದ್ದರು.
ಪ್ರಶಸ್ತಿಗಳು
[ಬದಲಾಯಿಸಿ] ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಅವರಿಗೆ ಒಟ್ಟು ೭ ಅಂತರಾಷ್ಟ್ರೀಯ ಪ್ರಶಸ್ತಿ, ಏಕ ದಿನ ಅಂತರಾಷ್ಟ್ರೀಯ ಪ್ರಶಸ್ತಿ ಮತ್ತು ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ಇನ್ನು ಹಲವಾರು ಪ್ರಶಸ್ತಿ ದೊರಕಿವೆ.
ಉಲೇಖನಗಳು
[ಬದಲಾಯಿಸಿ]https://en.wikipedia.org/wiki/Murali_Vijayhttps://en.wikipedia.org/wiki/Murali_Vijay