ಜೊಹಾನ್ ಕಾರ್ಲ್ ಫ್ರೆಡ್ರಿಚ್ ಗಾಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೊಹಾನ್ ಕಾರ್ಲ್ ಫ್ರೆಡ್ರಿಚ್ ಗಾಸ್

ಜೊಹಾನ್ ಕಾರ್ಲ್ ಫ್ರೆಡ್ರಿಚ್ ಗಾಸ್ ರವರು (ಏಪ್ರಿಲ್ ೩೦ ೧೭೭೭ ಬ್ರಾನ್ಷ್ವೀಗ್ -೨೩ ಫೆಬ್ರವರಿ ೧೮೫೫ ಗಾಟ್ಟಿಂಗನ್) ಒಬ್ಬ ಜರ್ಮನ್[೧] ಗಣಿತತಜ್ಞ.ಅವರು ಗಣಿತ ಹಾಗು ಭೌತಶಾಸ್ತ್ರಕ್ಕೆ ಅನೇಕ ಗಮನಾರ್ಹ ಕೊಡುಗೆ ನೀಡಿದ್ದಾರೆ.ಇವರು ಸಂಖ್ಯಾ ಸಿದ್ಧಾಂತ, ಬೀಜಗಣಿತ, ಅಂಕಿಅಂಶ, ವಿಶ್ಲೇಷಣೆ, ವಿಕಲನ ರೇಖಾಗಣಿತ, ಭೂಗಣಿತ, ಜಿಯೋಫಿಸಿಕ್ಸ್, ಯಂತ್ರಶಾಸ್ತ್ರ, ಸ್ಥಾಯೀ ವಿದ್ಯುಶಾಸ್ತ್ರ, ಖಗೋಳ ವಿಜ್ಞಾನ, ಮ್ಯಾಟ್ರಿಕ್ಸ್ ಸಿದ್ಧಾಂತ ಮತ್ತು ದೃಗ್ವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ತಮ್ಮ ಕೊಡುಗೆ ನೀಡಿದ್ದಾರೆ.ಇವರನ್ನು 'ಇತಿಹಾಸದ ಅತ್ಯಂತ ಪ್ರಭಾವಶಾಲಿ ಗಣಿತಜ್ಞರು'ಎಂದು ಕರೆಯುತ್ತಾರೆ.ಇವರು ಗಣಿತಶಾಸ್ತ್ರ ಮತ್ತು ವಿಜ್ಞಾನದ ಅನೇಕ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆಗಳನ್ನು ಮಾಡಿದ್ದಾರೆ.ಇವರಿಗೆ ಕೊಪ್ಲೇ ಮೆಡಲ್‌ನಿಂದ ಗೌರವಿಸಲಾಗಿದೆ.

ಆರಂಭಿಕ ಜೀವನ[ಬದಲಾಯಿಸಿ]

ಇವರು ಕಳಪೆ ಕಾರ್ಮಿಕ ವರ್ಗದ ಕುಟುಂಬದಲ್ಲಿ ಜನಿಸಿದ್ದರು.ಅವರ ತಾಯಿ ಅನಕ್ಷರಸ್ಥರಾಗಿದ್ದರು.ಅವನು ಎಂಟು ವರ್ಷದವನಾಗಿದ್ದಾಗ ೧ ರಿಂದ ೧೦೦ ರವರೆಗಿನ ಎಲ್ಲಾ ಸಂಖ್ಯೆಗಳು ಸೇರಿಸುವ ಸಾಮರ್ತ್ಯವನ್ನು ಹೊಂದಿದ್ದನು.ಇವರು ತಮ್ಮ ಮೇರು ಕೃತಿಯಾದ ಅಂಕಗಣಿತದ ತನಿಖೆಯನ್ನು ತಮ್ಮ ೨೧ನೇ ವಯಸಿನಲ್ಲಿ (೧೭೯೮)ಬರೆದು ಮುಗಿಸಿದರೂ,ಅದು ೧೮೦೧ ವರೆಗೆ ಪ್ರಕಟವಾಗಲಿಲ್ಲ.ಈ ಕೆಲಸ ಸಂಖ್ಯಾ ಸಿದ್ಧಾಂತ ಕ್ರೋಢೀಕರಿಸುವ ಒಂದು ಮೂಲಭೂತ ವಿಭಾಗವಾಗಿ ಇಂದಿನವರೆಗೂ ಗಣಿತ ಕ್ಷೇತ್ರದಲ್ಲಿ ಉಪಯೋಗಕ್ಕೆ ಬರುವಂತಹ ಕೃತಿಯಾಗಿದೆ.[೨]

ಶಿಕ್ಷಣ[ಬದಲಾಯಿಸಿ]

ಗಾಸ್`ಸ್‍ನ ಬೌದ್ಧಿಕ ಸಾಮರ್ಥ್ಯವನ್ನು ಬ್ರನ್ಸ್ವಿಕ್ ಡ್ಯೂಕ್‍ರವರು ಅರಿತು ಅವರನ್ನು ಬ್ರಾನ್ಷ್ವೀಗ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿಗೆ ಬರುವಂತೆ ಆಹ್ವಾನಿಸಿದರು.ಅವರು ಅಲ್ಲಿಗೆ ೧೭೯೨-೧೭೯೫ರವರೆಗೆ ಹೋಗುತ್ತಿದ್ದರು.ನಂತರ ಅವರು ೧೭೯೫ ರಿಂದ ೧೭೯೮ರವರೆಗೆ ಗಾಟ್ಟಿಂಗನ್ ವಿಶ್ವವಿದ್ಯಾಲಯಕ್ಕೆ ಹೋಗತ್ತಿದ್ದರು.ಅವರು ಅಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಸ್ವತಂತ್ರವಾಗಿ ಅನೇಕ ಮುಖ್ಯ ಸಿದ್ಧಾಂತಗಳನ್ನು ಮರುಸಾಬೀತು ಪಡಿಸಿದರು.೧೭೯೬ರಲ್ಲಿ ಸಾಮಾನ್ಯ ಬಹುಭುಜಾಕೃತಿಯನ್ನು ಕೈವಾರ ಹಾಗೂ ಸ್ಟ್ರೈಟ್ಎಡ್ಜ್‍ನ ಮುಕಾಂತರ ನಿರ್ಮಿಸಬಹುದೆಂದು ತಿಳಿಸಿದರು.೧೭೯೬ನೇ ಇಸವಿಯಲ್ಲಿ ಗಾಸ್ ಸಂಖ್ಯಾ ಸಿದ್ಧಾಂತದಲ್ಲಿ ಉನ್ನತ ಸಾಧನೆಯನ್ನು ಮಾಡಿದರು.ಅವರು ಮಾರ್ಚ್ ೩೦ರಂದು ಹೆಪ್ಟಾಡೆಕಾಗೊನ್‌ನನ್ನು ಛಿತ್ರಿಸುವ ವಿಧಾನವನ್ನು ಕಂಡುಹಿಡಿದರು.

ವೈಯಕ್ತಿಕ ಜೀವನ[ಬದಲಾಯಿಸಿ]

೧೮೦೯ರಲ್ಲಿ ಗಾಸ್‌ನ ಮೊದಲನೇ ಹೆಂಡತಿಯಾದ ಜೊಹಾನ ಆಷ್ಟಾಫ್‌ರವರು ತೀರಿಕೊಂಡ ನಂತರ ಅವರ ಮಗನಾದ ಲೂಯಿಸ್‌ ಸಹಾ ತೀರಿಕೊಂಡರು.ಈ ಕಾರಣದಿಂದಾಗಿ ಅವರು ಮಾನಸಿಕವಾಗಿ ಕುಗ್ಗಿದರು.ನಂತರ ಅವರು ತಮ್ಮ ಸ್ನೇಹಿತೆಯಾದ ಪ್ರೈಡೆರಿಕವ ವಿಲ್‌ಹೆಲ್ಮೈನ್‌ ವಾಲ್ದೆಕ್‌ರವರನ್ನು ಮರುವಿವಾಹವಾದರು.[೩]೧೮೩೧ರಲ್ಲಿ ತಮ್ಮ ಎರಡನೇ ಪತ್ನಿಯನ್ನು ಕಳೆದುಕೊಂಡ ಮೇಲೆ ಅವರ ಮಗಳು ಅವರನ್ನು ನೋಡಿಕೊಳ್ಳುತ್ತಿದ್ದಳು.ಅವರ ತಾಯಿಯು ೧೮೩೯ರಲ್ಲಿ ತೀರಿಕ್ಕೊಂಡರು.ಗಾಸ್‌ಗೆ ಜೊಹಾನ ,ಯೂಜೀನ್, ವಿಲ್ಹೆಲ್ಮ್, ಥೆರೇಸ, ವಿಲ್ಹೆಲ್ಮ್ ಹಾಗು ಲೂಯಿಸ್ ಸೇರಿದಂತೆ ಆರು ಮಕ್ಕಳಿದ್ದರು.ಗಾಸ್‌ನ ಶಿಫಾರಸ್ಸಿನಿಂದ ಫ್ರೆಡ್ರಿಚ್ ಬೆಸ್ಸೆಲ್‌ರವರಿಗೆ ಮಾರ್ಚ್ ೧೮೧೧ರಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು ಗಾಟ್ಟಿಂಗನ್‌ನಲ್ಲಿ ನೀಡಲಾಯಿತು.ಗಾಸ್ ಸೋಫೀ ಜರ್ಮನ್‌ರವರಿಗೂ ಗೌರವ ಡಾಕ್ಟರೇಟ್ ಪದವಿಯು ಸಿಗಬೇಕೆಂದು ಶಿಫಾರಸ್ಸು ಮಾಡಿದ್ದಾರು.ಆದರೆ ಅವರು ಪದವಿಯನ್ನು ಸ್ವೀಕರಿಸಲ್ಲಿಲ್ಲ.ಗಾಸ್ ರಾಜಪ್ರಭುತ್ವವನ್ನು ಬೆಂಬಲಿಸಿದರು ಹಾಗು ನೆಪೋಲಿಯನ್‌ಗೆ ವಿರುದ್ಧವಾಗಿದ್ದರು. ಗಾಸ್ ಬಾಲ್ಯದಿಂದಲೂ ತುಂಬಾ ಬುದ್ಧಿವಂತ ಬಾಲಕರಾಗಿದ್ದರು.ಅವರು ಮೂರು ವರ್ಷ‌ವಿರುವಾಗಲೇ ತಮ್ಮ ತಂದೆ ಹಣಕಾಸಿನ ಎಣಿಕೆಯಲ್ಲಿ ಮಾಡಿದ ತಪ್ಪನ್ನು ಕಂಡುಹಿಡಿದಿದ್ದಾರೆ.ಅವರು ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ತರಗತಿಯಲ್ಲಿ ಅನುಚಿತವಾಗಿ ವರ್ತಿಸಿದ್ದಕ್ಕೆ ಅವರ ಶಿಕ್ಷಕ ಜೆ.ಜಿ. ಬಟ್ಟ್ನರ್ ಅವರಿಗೆ ಪೂರ್ಣಾಂಕಗಳ ಪಟ್ಟಿಯನ್ನು ಅಂಕಗಣಿತದ ಪ್ರಗತಿಯಲ್ಲಿ ಜೋಡಿಸುವ ಕಾರ್ಯವನ್ನು ನೀಡಿದ್ದರು.ಅವರು ಈ ಕಾರ್ಯವನ್ನು ಕೆಲವು ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದರು.

ಖಗೋಳಶಾಸ್ತ್ರ ಹಾಗು ಭೌತಶಾಸ್ತ್ರದಲ್ಲಿ ಸಾಧನೆ[ಬದಲಾಯಿಸಿ]

ಗಾಸ್ ಜುಲೈ ೧೦ರಂದು ಪ್ರತಿ ಪೂರ್ಣಸಂಖ್ಯೆಯು ಮೂರು ತ್ರಿಕೋಣ ಸಂಖ್ಯೆಯ ಮೊತ್ತವಾಗಿ ಪ್ರತಿನಿಧಿಸಬಹುದೆಂದು ತೋರಿಸಿಕೊಟ್ಟರು.ಡಿಸೆಂಬರ್ ೧೮೦೧ರಲ್ಲಿ ಸೆರೆಸ್ ಗ್ರಹದ ಸ್ಥಾನವನ್ನು ಊಹಿಸಿದರು.೧೮೦೨ರ ೩೧ ಡಿಸೆಂಬರ್‌ರಂದು ಗೊತದಲ್ಲಿ ಫ್ರಾನ್ಜ್ ‍‍ಕ್ಸೇವಿಯರ್ ವಾನ್ ಝಾಕ್‌ರವರು ಗಾಸ್ ಊಹಿಸಿದ್ದು ಸರಿಯೆಂದು ದೃಢಪಡಿಸಿದರು.ಗಾಸ್‌ನ ವಿಧಾನವನ್ನು ಬಳಸಿ ಶಂಕುವಿನ ಅಳತೆಯನ್ನು ಕಂಡುಹಿಡಿಯಬಹುದು,ಇದರಿಂದ ಕೆಪ್ಲರ್ ಎರಡನೇ ನಿಯಮವನ್ನು ಪರಿಶೀಲಿಸಬಹುದು.ಸೆರೆಸ್‌ನ ಆವಿಷ್ಕಾರ ಕ್ಷುದ್ರಗ್ರಹಗಳಂತಹ ಚಿಕ್ಕ-ಚಿಕ್ಕ ಗ್ರಹಗಳ ಚಲನೆಗೆ ತೊಂದರೆಯಾಗುವಂತಹ ದೊಡ್ಡ ಗ್ರಹಗಳ ಅಧ್ಯಯನದಲ್ಲಿ ತೊಡಗಿಕೊಂಡರು.

೧೮೩೧ರಲ್ಲಿ ಗಾಸ್ ಭೌತಶಾಸ್ತ್ರ ಪ್ರಾಧ್ಯಾಪಕ ವಿಲ್ಹೆಲ್ಮ್ ವೆಬರ್‌ರವರ ಸಹಭಾಗಿತ್ವದಲ್ಲಿ ಕಾಂತೀಯತೆಯ ಹೊಸ ಜ್ಞಾನವನ್ನು ಪಡೆದುಕೊಂಡರು ಹಾಗು ವಿದ್ಯುತ್‌ನಲ್ಲಿ ಕಿರ್ಚಾಫ್ ಸರ್ಕ್ಯೂಟ್ ಕಾನೂನುಗಳ ಆವಿಷ್ಕಾರವನ್ನು ೧೮೩೩ರಲ್ಲಿ ಮಾಡಿದರು.ಅದೇ ವರ್ಷದಲ್ಲಿ ಅವರು ಮೊದಲ ವಿದ್ಯುತ್ ಟೆಲಿಗ್ರಾಫ್‌ನ ರಚನೆಯಲ್ಲಿ ತೊಡಗಿ ಭೌತಶಾಸ್ತ್ರ ಇನ್ಸ್ಟಿಟ್ಯೂಟ್ ಮತ್ತು ವೀಕ್ಷಣಾಲಯದ ಮದ್ಯ ಸಂಪರ್ಕವನ್ನು ಕಲುಪಿಸಿಕೊಟ್ಟಿತು. ೧೮೪೫ರಲ್ಲಿ ಅವರು ರಾಯಲ್ ಇನ್ಸ್ಟಿಟ್ಯೂಟ್ ಆಫ್ ನೆದರ್ಲೆಂಡ್ಸ್ನ‌ನ ಸದಸ್ಯರಾದರು.ಅವರು ಒಂದು ಲುಥೆರನ್ ಪ್ರೊಟೆಸ್ಟೆಂಟ್ ಹಾಗು ಗಾಟ್ಟಿಂಗನ್‌ನ ಸೇಂಟ್ ಆಲ್ಬನ್ಸ್ ಇವ್ಯಾಂಜೆಲಿಕಲ್ ಲುಥೆರನ್ ಚರ್ಚ್‌ನ ಸದಸ್ಯರಾಗಿದ್ದರು.ಗಾಸ್‌ನ ಒಂದು ಪ್ರಯೋಗವು ಮೊದಲನೇ ಬಾರಿಗೆ ಅಸಫಲವಾಯಿತು.ನಂತರ ಎರಡನೇ ಬಾರಿಗೆ ಪ್ರಯತ್ನಿಸಿದಾಗ ಸಫಲವಾಗಿದ್ದು,ನಂತರ ಅವರು ದೇವರನ್ನು ನಂಬಿದರು. ಗಾಸ್ ದೃಢವಾಗಿ ಮರಣೋತರದ ಬದುಕನ್ನು ನಂಬಿದ್ದರು.

ಗಣಿತ[ಬದಲಾಯಿಸಿ]

ಗಾಸ್ ಎರಡು ವಿರುದ್ಧ ತುದಿಗಳಿಂದ ಬರುವ ಸಂಖ್ಯೆಗಳನ್ನು ಜೋಡಿಸಿದರೆ ಅದರಿಂದ ಬರುವ ಉತ್ತರವು ಒಂದೇ ಎಂಬುದನ್ನು ಮೊದಲ ಬಾರಿಗೆ ತಿಳಿಸಿದರು.ಉದಾಹರಣೆಗೆ ೧+೧೦೦=೧೦೧,೨+೯೯=೧೦೧,೩+೯೮=೧೦೧ ಮುಂತಾದವು. ಐಸಾಕ್ ಅಸಿಮೋವ್‌ರವರ ಪ್ರಕಾರ ಗಾಸ್ ಗಣಿತದ ಒಂದು ವಿಷಯವನ್ನು ಪ್ರಯತ್ನಿಸುತ್ತಿರುವಾಗ ತನ್ನ ಪತ್ನಿಯು ಸಾಯುವ ಸುದ್ದಿಯನ್ನು ಕೇಳಿದರು.ಆದರೆ ಅವರು ತಾವು ಪ್ರಯತ್ನಿಸುತ್ತಿರುವುದನ್ನು ಬಿಡದೆ,ಅದನ್ನು ಪೂರ್ಣಗೊಳಿಸಿದ ನಂತರವೇ ಮನೆಗೆ ತೆರಳಿದರು.ಅವರು ಗಣಿತವನ್ನು ವಿಜ್ಞಾನಗಳ ರಾಣಿಯೆಂದು ಕರೆಯುತ್ತಿದ್ದರು.ಅವರು ಪ್ರಥಮ ದರ್ಜೆ ಗಣಿತಜ್ಞರಾಗಬೇಕೆಂದರೆ ತಕ್ಷಣವೇ ಯೂಲರ್‌ರವರ ಗಣಿತ ಶಾಸ್ತ್ರಗಳನ್ನು ತಿಳಿಯಬೇಕೆಂದು ಹೇಳುತ್ತಿದ್ದರು. 1845 ರಲ್ಲಿ ಅವರು ರಾಯಲ್ ಇನ್ಸ್ಟಿಟ್ಯೂಟ್ ನೆದರ್ಲೆಂಡ್ಸ್ನ ಸಂಬಂಧಿತ ಸದಸ್ಯನಾದರಾದರು ಹಾಗು ೧೮೫೧ರಲ್ಲಿ 'ರಾಯಲ್ ನೆದರ್ಲೆಂಡ್ಸ್ ಅಕಾಡೆಮಿ ಕಲೆ ಮತ್ತು ವಿಜ್ಞಾನ'ದಲ್ಲಿ ವಿದೇಶಿ ಸದಸ್ಯರಾದರು. ೧೮೫೪ರಲ್ಲಿ ಗಾಸ್ ಬರ್ನಾರ್ಡ್ ರೀಮನ್ನ ಹ್ಯಾಬಿಲಿಟೇಶನ್‌ವೊರ್ಟಾಗ್ ವಿಷಯವನ್ನು ಆಯ್ಕೆ ಮಾಡಿದರು.

ಗಾಸ್ ಗಾಟ್ಟಿಂಗನ್‌ನಲ್ಲಿ ನಿಧನರಾದರು ಮತ್ತು ಅಲ್ಬಾನಿ ಸ್ಮಶಾನದಲ್ಲಿ ಅವರ ಸಮಾಧಿ ಇದೆ.ಅವರ ಮೆದುಳನ್ನು ಸಂರಕ್ಷಿಸಿಡಲಾಗಿದೆ.ರುಡಾಲ್ಫ್ ವ್ಯಾಗ್ನರ್‌ರವರು ಅದನ್ನು ಅಧ್ಯಯನ ಮಾಡಿ ಅವರ ಮೆದುಳಿನ ಗಾತ್ರವು ೧,೪೯೨ ಗ್ರಾಂ ಸಾಮಾನ್ಯ ಮೆದುಳುಗಳಿಗಿಂತ ಸ್ವಲ್ಪ ಭಾರವಾಗಿತ್ತೆಂದು ಹೇಳಿದರು ಮತ್ತು ಜಟಿಲತೆಯು ೨೧೯.೫೮೮ ಚದರ ಮಿಲಿಮೀಟರ್ ಎಂದು ಹೇಳಿದರು. ೧೯೮೯ರಿಂದ ೨೦೦೧ ತನಕ ಗಾಸ್‌ರವರ ಭಾವಚಿತ್ರ, ಸಾಮಾನ್ಯ ಹಂಚಿಕೆ ತಿರುವು ಮತ್ತು ಕೆಲವು ಪ್ರಮುಖ ಗಾಟ್ಟಿಂಗನ್ ಕಟ್ಟಡಗಳ ಚಿತ್ರಗಳನ್ನು ಜರ್ಮನ್ ಹತ್ತು ಮಾರ್ಕ್ ಬ್ಯಾಂಕ್ ನೋಟುಗಳಲ್ಲಿ ಚಿತ್ರಿಸಲಾಯಿತು.ಜರ್ಮನಿಯು ಗಾಸ್‌ರವರನ್ನು ಗೌರವಿಸುವ ಸಲುವಾಗಿ ಮೂರು ಅಂಚೆ ಗಳು(ಸ್ಟ್ಯಾಂಪ್ಗಳನ್ನು) ಜಾರಿ ಮಾಡಿದರು.

ಅಂಚೆಯ ಚೀಟಿ

ಒಂದು (ನಂಬರ್.೭೨೫) ೧೯೫೫ರಲ್ಲಿ ,ಅವರ ಸಾವಿನ ನೂರನೇ ವಾರ್ಷಿಕೋತ್ಸವದ ಕಾಣಿಸಿಕೊಂಡಿತು; ಮತ್ತೆರಡುಸಂಖ್ಯೆಗಳು( ೧೨೪೬ ಮತ್ತು ೧೮೧೧) ೧೯೭೭ರಲ್ಲಿ ತಮ್ಮ ೨೦೦ನೇ ಜನ್ಮವಾರ್ಷಿಕೋತ್ಸವದಲ್ಲಿ ಬಿಡುಗಡೆ ಮಾಡಿದರು. ಗಾಸ್‌ರವರ ಅಸಾಮಾನ್ಯ ಸಾಧನೆಗಳಿಗೆ ಗೌರವಿಸಲು ಹಲವಾರು ಕ್ಷೇತ್ರಗಳಿಗೆ ಅವರ ಹೆಸರನ್ನೇ ಇಡಲಾಗಿದೆ.

• ಸಾಧಾರಣ ವಿತರಣೆ, ಗಾಸಿಯನ್ ಅಂಕಿಅಂಶಗಳು (ಬೆಲ್ ರೇಖೆಯ).

• ಗಾಸ್`ಸ್ ಪ್ರಮೇಯ, ಚೆದರುವಿಕೆ ಪ್ರಮೇಯ.

• ಗಾಸ್ ಪ್ರಶಸ್ತಿ ,ಗಣಿತಶಾಸ್ತ್ರದಲ್ಲಿ ಉನ್ನತ ಗೌರವ ಪ್ರಶಸ್ತಿಗಳಲ್ಲಿ ಒಂದು.

• ಗಾಸ್ ಪ್ರಮೇಯ ಮತ್ತು ಗಾಸ್`ಸ್ ಕಾಂತೀಯತೆಯ ನಿಯಮವನ್ನು ಮ್ಯಾಕ್ಸ್ ವೆಲ್ ರ ನಾಲ್ಕು ಸಮೀಕರಣಗಳಲ್ಲಿ ಒಳಗೊಂಡಿವೆ.

• ಕಾಂತ ಕ್ಷೇತ್ರದ ನಿರ್ಮೂಲನ ಪ್ರಕ್ರಿಯೆಯನ್ನು 'ಡಿಗಾಸ್ಸಿಂಗ್' ಎಂದು ಹೆಸರಿಡಲಾಗಿದೆ.

• ಕಾಂತೀಯ ಕ್ಷೇತ್ರಕ್ಕೆ ಸಿ.ಜಿ.ಎಸ್ (CGS) ಘಟಕ ಅವರ ಗೌರವಾರ್ಥವಾಗಿ 'ಗಾಸ್' ಎಂದು ಹೆಸರಿಸಲಾಗಿದೆ.

• ಚಂದ್ರನ ಮೇಲಿರುವ ಒಂದು ಕುಳಿಗೆ 'ಗಾಸ್[೫೯]' ಎಂದು ಹೆಸರಿಡಲಾಗಿದೆ.[೪]

• ಕ್ಷುದ್ರಗ್ರಹ(೧೦೦೧)ಗೆ 'ಗಾಸ್ಸಿಯಾ' ಎಂದು ಹೆಸರಿಡಲಾಗಿದೆ.

• ಗಾಸ್ ಜರ್ಮನಿಯ ಡ್ರಾನ್‌ಫೆಲ್ಡ್‌ನಲ್ಲಿರುವ ಒಂದು ವೀಕ್ಷಣಾ ಗೋಪುರಕ್ಕೆ 'ಗಾಸ್ ಟವರ್' ಎಂದು ಹೆಸರಿಡಲಾಗಿದೆ.

• ಕೆನಡಿಯನ್ ಕಿರಿಯ ಪ್ರೌಢಶಾಲೆಯಲ್ಲಿ ವಾರ್ಷಿಕ ರಾಷ್ಟ್ರೀಯ ಗಣಿತ ಸ್ಪರ್ಧೆಗೆ ಗಾಸ್ ಗಣಿತ ಸ್ಪರ್ಧೆಯೆಂದು ಹೆಸರಿಡಲಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. http://gausschildren.org/genwiki/index.php?title=The_Sesquicentennial_of_the_Birth_of_Gauss
  2. http://www.storyofmathematics.com/19th_gauss.html
  3. http://www-history.mcs.st-andrews.ac.uk/Biographies/Gauss.html
  4. http://www.math.wichita.edu/history/men/gauss.html